ಯಾತಕ್ಕಾಗಿ ಈ ಗೋ ಯಾತ್ರೆ?

ಯಾತಕ್ಕಾಗಿ ಈ ಗೋ ಯಾತ್ರೆ?

ಹವ್ಯಕರು, ನಾವು ಹ್ಯಾಗಿದ್ರು ಗೋವನ್ನು ಪೂಜಿಸುತ್ತೇವೆ.ಮುಟ್ಟಿ ಮುಟ್ಟಿ ನಮಸ್ಕಾರ ಮಾಡುತ್ತಲೆ ಇರುತ್ತೇವೆ.ಹಬ್ಬ ಹುಣ್ಣಿಮೆ ವೈದಿಕಗಳಲ್ಲಿ ಗೋಗ್ರಾಸ ಕೊಡುತ್ತಲೆ ಇದ್ದೇವೆ.ದೊಡ್ಡಬ್ಬ ಅಂತ ಗೋವಿಗೆ ಸಂಬಂಧ ಪಟ್ಟ ಹಬ್ಬವನ್ನು ಯಥಾನುಶಕ್ತಿ ವಿಜೃಂಭಣೆಯಿಂದಲೇ ಆಚರಿಸುತ್ತಿದ್ದೇವೆ.ಗೋವಿನೊಂದಿಗೆ ಹೊಸ ಮನೆ ಪ್ರವೇಶ ಮಾಡುತ್ತೇವೆ.ಅವಕಾಶವಾದಗೆಲ್ಲ ಗೋದಾನ ಮಾಡಿ ಪುಣ್ಯ ಸಂಪಾದಿಸಿ ಕೊಳ್ಳುತ್ತಲೇ ಇದ್ದೇವೆ.ಶ್ರೀಧರಾಶ್ರಮ,ಐಗಳಕೊಪ್ಪ ಇಂತಹಕಡೆ ನಿಶ್ಯಬ್ಧವಾಗಿ ಗೋವಿನ ಪಾಲನೆ ಪೋಷಣೆ ಧಾರ್ಮಿಕ ಭಾವನೆಯೇ ಪ್ರೇರಣೆಯಾಗಿ ನಡೆಯುತ್ತಲೇ ಇದೆ.

ಈ ಗೋವಿನ ಪ್ರಚಾರ ಮಾಡಿದ್ದರಿಂದ ಇದೇಲ್ಲಾ ಆರಡಿ ಹೆಚ್ಚಾಗುವುದಿಲ್ಲ.ಪ್ರಚಾರ ಮಾಡದೇ ಹೋದ್ದರಿಂದ ಮೂರಡಿ ಕಡಿಮೆಯಾಗುವುದು ಇಲ್ಲ.ಇವರು ಇಷ್ಟೇಲ್ಲಾ ಬೊಂಬ್ಡ ಬಾರಿಸಿಕೊಂಡು ಅಬ್ಬರದ ಪ್ರಚಾರದೊಡನೆ ತಿರಗಲು ಹೊರಟಿದ್ದರಿಂದ ಅವರ ಸಂಪ್ರದಾಯಿಕ ಶಿಷ್ಯರಾದ ಹವ್ಯಕರ ಮೇಲೆ ಯಾವ ಹೋಸ ಪರಿಣಾಮ ಆಗುತ್ತದೆ ಹೇಳಿ ನೋಡೋಣ? ಹವ್ಯಕರು ಯಾರು ಗೋವನ್ನು ಕಡಿಯುವುದಿಲ್ಲ.ಇನ್ನೇಂತೋ ಮಾಡುವುದಿಲ್ಲ.ತೋಟಕ್ಕೆ ಗದ್ದೆಗೆ ನುಗ್ಗಿದ ತುಡು ಜಾನುವಾರುಗಳಿಗೆ ಬಡಿಗೆ ಕೊಡುವುದನ್ನು ನಿಲ್ಲಿಸುವುದಿಲ್ಲ..ಈ ಮಠದಿಂದ ಹವ್ಯಕರಿಗೆ ಕಲಿಸಬೇಕಾದ ವಿಷಯ ಯಾವುದು ಇದಕ್ಕಿಂತ ಬೇರೆಯಾದದ್ದು, ಮಹತ್ವಪೂರ್ಣವಾದದ್ದು,ಇಲ್ಲವೆ? ಗೋವಿನಬಗ್ಗೆ ಹೊಸದಾಗಿ ಪ್ರೇರೇಪಣೆ ಕೊಡುವಂತಹದು ಯಾವುದಿದ್ದಿತು?

ಅವರವರ ಅನುಕೂಲಕ್ಕೆ ತಕ್ಕಂತೆ ಗೋವನ್ನು ಸಾಕಿಕೊಳ್ಳುತ್ತಾ ಇದ್ದಾರೆ.ಹಾಲನ್ನೂ ಸೊಸೈಟಿಗೊ ಇನ್ನೇಲ್ಲೊ ಮಾರುವವನಾದರೆ ಮಲೆನಾಡು ಗಿಡ್ಡ ಕಟ್ಟಿಕೊಂಡರೆ ಆಗುವುದಿಲ್ಲ ಎಂಬುದು ಸರ್ವವಿದಿತ.ಅವರು ಬೇರೆದನ್ನೇ ಕಟ್ಟ ಬೇಕಾಗುತ್ತದೆ.ಇನ್ಸುಮೇಷನ್ ಮಾಡಿಸಲೇ ಬೇಕಾಗುತ್ತದೆ.ಈ ಆಂದೊಲನದಿಂದ ಅದನ್ನು ಬದಲಾಯಿಸಲು ಸಾದ್ಯವಾ? ಬದಲಾಯಸುತ್ತೀರಾ? .ಈ ಆಂದೊಲನದಿಂದ ನಿಮ್ಮ ಖಾಸ ಖಾಸ ಶಿಷ್ಯರ ಮನೆಯಲ್ಲಿ ಸ್ವದೇಶಿ ತಳಿ ಮಾತ್ರ ಇರುವಂತೆ ಮಾಡಬಲ್ಲಿರಾ? ಇನ್ಸುಮೆಷನ್ ಮಾಡುವ ಪಶುವೈದ್ಯರನ್ನೇಲ್ಲಾ ಗಡಿಪಾರು ಮಾಡುತ್ತೀರಾ?

ದುಡ್ಡುಕೊಟ್ಟು ಪಡೆದುಕೊಂಡ ಬ್ರಾಂಡೆಡ್ ಸೀರೆ ಮತ್ತು ಹಳದಿ ವಸ್ತ್ರಗಳನ್ನು ಆಗಾಗ ತೊಡಲು ಅವಕಾಶ ಮಾಡಿಕೊಡದಿದ್ದರೆ ಬೇಜಾರು ಮಾಡಿಕೊಳ್ಳುತ್ತಾರೆಂದು ಇಂತಹ ಕಾರ್ಯಕ್ರಮವನ್ನು ಮಠದವರು ಅಯೋಜಿಸಬೇಕಾಗಿದೆ.ವಿನಃ ಹವ್ಯಕರ ದೃಷ್ಟಿಯಿಂದ ಮತ್ಯಾವ ಪ್ರಯೋಜನವು ಕಾಣುತ್ತಿಲ್ಲ.

ವಿಠ್ಠಲನ ಕತ್ತೆ ಎಂಬ ಒಂದು ಕತೆ ಸರ್ವಸಾಧರಣ ಎಲ್ಲರಿಗೂ ಗೊತ್ತಿದೆ.ಕತ್ತೆಯೊಂದರ ಮೇಲೆ ವಿಠ್ಠಲನ ಮೂರ್ತಿಯೊಂದನ್ನು ಮೆರವಣಿಗೆ ಮಾಡಿಕೊಂಡು ಹೋಗಲಾಗುತ್ತಿತ್ತು.ಎಲ್ಲರೂ ನಮಸ್ಕಾರ ಮಾಡುತ್ತಿದ್ದರು.ಕತ್ತೆ ತನಗೆ ನಮಸ್ಕಾರ ಮಾಡುತ್ತಿದ್ದಾರೆ ಎಂದುಕೊಳ್ಳುತ್ತಿತ್ತು.ಇಲ್ಲೂ ಅಷ್ಟೆ .ದನ ತೋರಿಸ್ತಾರೆ.ನಮಸ್ಕಾರ ಮಾಡಿದ ಕೂಡಲೆ ತಮಗೆ ನಮಸ್ಕಾರ ಮಾಡಿದರು ಅಂದ್ಕೊತ್ತಾರೆ .

ಮೊನ್ನೆ ಸ್ವರ್ಣವಲ್ಲಿಗೆ,ಉಡುಪಿಗೆ, ವ್ಯಾನು ಕಳಿಸಿದರು.ಬೇಡ ಎಂದರೆ ಗೋವನ್ನು ಅವಹೇಳನ ಮಾಡಿದರು ಎನ್ನುತ್ತಿದ್ದರು.ಬನ್ನಿ ಎಂದಿದ್ದರಿಂದ ನಮಗೆ ಸ್ವರ್ಣವಲ್ಲಿಯವರಿಂದ, ಉಡುಪಿಯವರಿಂದ ಬೆಂಬಲ ಇದೆ ಎಂದು ಪ್ರಚಾರ ಮಾಡಿಕೊಳ್ಳಲು ಅನವು ಮಾಡಿಕೊಂಡರು

ಹೀಗೆ ಇಕ್ಕಟ್ಟಿಗೆ ಸಿಕ್ಕಿಸಲಾಗಿಯೇ ಈ ಯಾತ್ರೆ.ರಾಜಕಾರಣಿಗಳನ್ನ,ಇತರ ಸನ್ಯಾಸಿಗಳನ್ನ,ತಟಸ್ಥ ಸಂಘ ಪರಿವಾರದವರನ್ನ,ಒಟ್ಟಿನಲ್ಲಿ ಧಾರ್ಮಿಕ ಭಾವನೆಯುಳ್ಳವರನ್ನ,ಸಿಕ್ಕಿಸಲು ಈ ಯೋಜನೆ.ಗೋವಿಗೆ ಬೆಂಬಲ ಕೇಳಿ ಅದನ್ನು ತಮಗೆ ಸಿಕ್ಕ ಬೆಂಬಲ ಎಂದು ತೋರಿಸಿ ಶೀಲಗೆಟ್ಟವನು ಎಂಬ ಕೋರ್ಟಿನ ಮಾತನ್ನು ಮುಚ್ಚಿಹಾಕುವ ಹುನ್ನಾರ.ಮತ್ತೆ 43 ಕೇಸ್ ಗಳನ್ನು ನಿಬಾಯಿಸಲು ಬೇಕಾದ ಸಂಪನ್ಮೂಲಗಳನ್ನು ಸಂಗ್ರಹಿಸಿಕೊಳ್ಳಲು ಮೂರ್ಖ ಶಿಖಾಮಣಿಗಳಾದವರನ್ನು ಬೆಪ್ಪು ಬೀಳಿಸುವುದು

ಇದೇಲ್ಲಾ ರಾಜಕೀಯಸ್ಥರಿಗೆ ಹೇಳಿಸಿದ್ದು.ಧಾರ್ಮಿಕ ಕ್ಷೇತ್ರದಲ್ಲಿ ಇಂತಹದನ್ನೆಲ್ಲಾ ಬಹಳ ದಿನ ನಡೆಸಲು ಗುರುಪರಂಪರೆ ಬಿಡಲಾರದು.

Ganapathi Bhatta

source: https://www.facebook.com/groups/1499395003680065/permalink/1829006397385589/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s