ಈ ದುರಾಡಳಿತೆಯ ವಿರುದ್ಧ ನಿಂತ ಶ್ರೀ ಎದುರ್ಕಳ ಈಶ್ವರಭಟ್ಟರನ್ನೂ ಅಭಿನಂದಿಸಬೇಕಿದೆ

ಈ ದುರಾಡಳಿತೆಯ ವಿರುದ್ಧ ನಿಂತ ಶ್ರೀ ಎದುರ್ಕಳ ಈಶ್ವರಭಟ್ಟರನ್ನೂ ಅಭಿನಂದಿಸಬೇಕಿದೆ

ಇಂದು ನಮ್ಮ ಮಠದ ಆಡಳಿತೆಯನ್ನು ಸರಕಾರದ ಸುಪರ್ದಿಗೆ ಕೊಡುವುದರ ಕುರಿತು ಬಹಳಷ್ಟು ಮಾತುಗಳು ಕೇಳಿಬರುತ್ತಿದೆ. ಇದರೊಂದಿಗೆ ಶ್ರೀ ಕ್ಷೇತ್ರ ಗೋಕರ್ಣದ ಆಡಳಿತೆಯನ್ನು ಮಠದ ಸುಪರ್ದಿಯಿಂದ ಹಿಂಪಡೆಯುವ ಮಾತೂ ಕೇಳಿ ಬರುತ್ತಿದೆ. ಈ ಎರಡೂ ಪ್ರಕರಣಗಳಲ್ಲಿ ಮಠದ ವಿರುದ್ಧವಾಗಿ ಕಾಣುತ್ತಿರುವವರು ಗೋಕರ್ಣದ ಹಿಂದೂ ಬಂಧುಗಳೇ ಮತ್ತು ಮಠದ ಅನಾಚಾರದಿಮ್ದ ಬೆಸತ್ತ ಹಿಂದೂ ಬಂಧುಗಳೇ ಆಗಿದ್ದಾರೆ. ಹಾಗಾಗಿ ಇಲ್ಲಿ ಹಿಂದೂ ಸಂಸ್ಕೃತಿಯನ್ನು ನಾಶಮಾಡುವ ಹುನ್ನಾರ ಎಂಬ ವದಂತಿಗಳನ್ನೂ ಹಬ್ಬಿಸಲಾಗುತ್ತಿದೆ. ಆದರೆ ಈ ವಿಷಯದಲ್ಲಿ ಇದುವರೆಗಿನ ಪ್ರಕರಣದ ಹಿಂದಿರುವ ವ್ಯಕ್ತಿಗಳನ್ನು ನೋಡಿದಾಗ ಅಲ್ಲಿ ಯಾರೂ ಕೂಡಾ ಈ ಸಂಸ್ಥೆಯಿಂದ ದೂರ ವುಳಿದು ವಿರೋಧ ವ್ಯಕ್ತಪಡಿಸುವವರಲ್ಲ. ಮತ್ತು ಬೇರೆ ಯಾವುದೇ ಧಾರ್ಮಿಕ ಸಂಘಟನೆಗಳ ಪ್ರಲೋಬನೆಗೂ ಒಳಪಟ್ತವರಲ್ಲ. ಹೀಗಿರುವಾಗ ಇದನ್ನು ಹಿಂದೂ ಧರ್ಮದ ಮೇಲೆ ಆಗುತ್ತಿರುವ ಹೊರಗಿನವರ ಸಂಚು ಎಂದು ಬಿಂಬಿಸಿ ಕೆಲವು ಹಿಂದೂ ಪರ ವ್ಯಕ್ತಿ/ ಸಂಘಟನೆಗಳ ಅನುಕಂಪ ಗಿಟ್ಟಿಸಲು ಹೆಣಗುತ್ತಿರುವುದು ಹಾಸ್ಯಾಸ್ಪದವಾಗಿದೆ.

….
ಈ ವಿಚಾರದಲ್ಲಿ ನಾವು ಅತ್ಯಾಚಾರವಾಗಿದೆ ಎಂದು ಆರೋಪಿಸಿದ ಸಂತ್ರಸ್ಥೆಯನ್ನೂ ಅವರ ಬೆನ್ನಿಗೆ ನಿಂತು ನ್ಯಾಯ ಕೊಡಿಸುವಲ್ಲಿ ದುಡಿಯುತ್ತಿರುವ ವ್ಯಕ್ತಿಗಳನ್ನು ಪ್ರಶಂಸಿಸಬೇಕಾಗಿದೆ. ಅಷ್ಟೇ ಅಲ್ಲ. ಬಹು ಹಿಂದೆಯೇ ಆಗಬೇಕಿದ್ದ ಒಮ್ದು ದೊಡ್ಡ ಕೆಲಸ ಅದೆಂದರೆ, ಯಾವಾಗ ಘನ ನ್ಯಾಯಾಲಯವು ಸದರೀ ಆರೋಪಿತನ ಮೊಕದ್ದಮೆಯನ್ನಾಲಿಸಿ ದಂಡವನ್ನು ಹಾಕಬೇಕಿತ್ತು, ಆದರೆ ಒಂದು ಸಾರ್ವಜನಿಕ ಸಂಸ್ಥೆಯ ವ್ಯಕ್ತಿಯೂ ಧಾರ್ಮಿಕ ಮುಖಂಡನೂ ಆಗಿ ಭಕ್ತರು, ಸಾರ್ವಜಿಕರು ಕೊಟ್ತ ಹಣದಿಂದಲೇ ನಿರ್ವಹಣೆ ಮಾಡುತ್ತಿರುವ ವ್ಯಕ್ತಿಾಗಿದ್ದರಿಂದ ದಂಡ ಹಾಕುವುದಿಲ್ಲ ಎಂಬ ಅನುಕಂಪೆಯನ್ನು ತೋರಿದಾಗಲೇ ಸಲ್ಲಿಸ ಬೇಕಿದ್ದ PILನ್ನು ತಡವಾಗಿಯಾದರೂ ಹಾಕಿ ಈ ದುರಾಡಳಿತೆಯ ವಿರುದ್ಧ ನಿಂತ ಶ್ರೀ ಎದುರ್ಕಳ ಈಶ್ವರಭಟ್ಟರನ್ನೂ ಅಭಿನಂದಿಸಬೇಕಿದೆ, ಅಷ್ಟೇ ಸಾಲದು ಅವರುಗಳಿಗೆ ಬೇಕಾದ ಎಲ್ಲ ಬಗೆಯ ಸ್ಥೈರ್ಯ ಹಾಗೂ ಬಲವನ್ನು ನೀಡಬೇಕಿದೆ. ಆಗ ಮಾತ್ರ ಈ ದುರಾಚಾರದ ಕೊನೆಯಾಗುತ್ತದೆ.

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/groups/161894837550032/permalink/175500246189491/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s