ಐಪ್ಯಾಡ್ ಪಾಂಡಿತ್ಯಕ್ಕೆ ಕರಗಿಹೋದ ಮೂಢ ಭಕ್ತರು

ಐಪ್ಯಾಡ್ ಪಾಂಡಿತ್ಯಕ್ಕೆ ಕರಗಿಹೋದ ಮೂಢ ಭಕ್ತರು

ಆರಂಭದಿಂದ ತುಮರಿ ತೊನೆಯಪ್ಪ ಸ್ವಾಮಿಗಳಿಗೆ ಒಂದು ಸವಾಲ್ ಹಾಕಿದ್ದಾನೆ-ವೈದ್ಯ ಪರೀಕ್ಷೆಯಿಂದ ಬ್ರಹ್ಮಚರ್ಯ ಕೆಡುತ್ತದೆ ಹಾಗಾಗುತ್ತದೆ, ಹೀಗಾಗುತ್ತದೆ ಎಂದೆಲ್ಲ ಬೊಗಳೆ ಬಿಡುವ ಆ ’ಮಹಾನುಭಾವ’ ಒಂದೇ ಒಂದು ಸಲ ಬ್ರೇನ್ ಮ್ಯಾಪಿಂಗ್, ನಾರ್ಕೋ ಅನಲಿಸಿಸ್ ಅಥವಾ ಮಂಪರು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಹೊರಬರಲಿ. ಹಾಗೆ ಬಂದರೆ ಯು.ಎಸ್.ನ ಹತ್ತು ಸ್ನೇಹಿತರನ್ನೊಡಗೂಡಿ ಬಂದು ತೊನೆಯಪ್ಪನವರಿಗೆ 5000ಕೋಟಿ ಹಣವನ್ನು ಮಠಕ್ಕೆ ದಾನ ನೀಡುವ ವ್ಯವಸ್ಥೆ ಮಾಡುತ್ತೇನೆ; ಒಂದೊಮ್ಮೆ ಅವ ಅದರಲ್ಲಿ ಅನುತ್ತೀರ್ಣನಾದರೆ ತಕ್ಕಶಿಕ್ಷೆ ಅನುಭವಿಸುವುದರ ಜೊತೆಗೆ ಕೈಯಲ್ಲಿ ಪೊರಕೆ-ಚಪ್ಪಲಿ ಹಿಡಿದಿದ್ದ ಹಳದೀ ಭಕ್ತರೆಲ್ಲ ಅವನ ಜೊತೆಗೆ ಕನಿಷ್ಠ ಒಂದು ವರ್ಷ ಶಿಕ್ಷೆ ಅನುಭವಿಸಬೇಕು. ತಯಾರಾಗುವರೇ ಎಂದು ಕೇಳಿ ತಿಳಿಸಿ.

ತೊನೆಯಪ್ಪ ಬಳಗ ನಡೆಸಿದ್ ಹಲವು ನಾಟಕಗಳನ್ನು ನಾವೆಲ್ಲ ನೋಡುತ್ತಲೇ ಇದ್ದೇವೆ. ಜಗತ್ತೇ ಒಂದು ನಾಟಕ ಎಂಬುದೊಂದನ್ನು ಮರೆತು ಉಳಿದೆಲ್ಲದರಲ್ಲೂ ತೊನೆಯಪ್ಪ ಬಳಗ ಸಕ್ರಿಯವಾಗಿದೆ! ಐಪ್ಯಾಡ್ ಪಂಡಿತರು ಒಮ್ಮೆ ಎಲ್ಲಾದರೂ ದರ್ಶನಗಳ ಕುರಿತು ಚರ್ಚೆಗೆ ಬರಲಿ, ಆಗ ಅವರ ಪಾಂಡಿತ್ಯ ಗೊತ್ತಾಗುತ್ತದೆ. ಅದ್ಯಾರೋ ಭಟ್ಟರು ಹೇಳಿದರಲ್ಲ-ಪ್ರಶ್ನೆ ಕೇಳಿದರೆ 24ಗಂಟೆ ಸಮಯ ಕೇಳಿ ನುಣುಚಿಕೊಳ್ತಾರೆ ಅಂತ. ಶೃಂಗೇರಿಯಲ್ಲಿ ಗಣಪತಿ ವಾಕ್ಯಾರ್ಥ ಸಭೆ ಅಂತ ನಡೆಯುತ್ತದಂತೆ, ಅದೀಗ ಅಲ್ಲಿ ನಡೆಯುತ್ತಿರಬೇಕು. ಅಲ್ಲಿಗೆ ಬಂದ ಒಬ್ಬರನ್ನಾದರೂ ಈ ’ಕಾವಿಧಾರಿ’ ಶೋಭರಾಜಾಚಾರ್ಯರು ಸಮಾಧಾನ ಪಡಿಸಲಿ, ಆಗ ನಾವು ಅಷ್ಟಾದರೂ ವಿದ್ಯೆ ಇದೆಯಲ್ಲ ಅಂದುಕೊಳ್ಳಬಹುದು.

ಗಾಂಧಾರ ದೇಶದ ಪುಷ್ಕಳಾವತಿ (ಈಗಿನ ಪಾಕಿಸ್ತಾನ) ಎಂಬ ಸ್ಥಳದಲ್ಲಿ ನಾಲ್ಕನೇ ಶತಮಾನದಲ್ಲಿ ಒಬ್ಬ ಹುಡುಗ ಜನಿಸಿದ್ದ. ಅವನು ದೊಡ್ಡವನಾದ ಬಳಿಕ ಬರೆದಿದ್ದನೆನ್ನಲಾದ ’ಜಾಂಬವತಿ ವಿಜಯ’ ಮತ್ತು ’ಪಾತಾಳ ವಿಜಯ’ ಗ್ರಂಥಗಳು ಸಿಕ್ಕಿಲ್ಲ. ಆದರೆ ಅವನ ಬಾಲ್ಯದ ಘಟನೆಯೊಂದು ಎಲ್ಲರ ಕಣ್ಣಲ್ಲಿ ಹನಿಗಳನ್ನು ಹೊರಹೊಮ್ಮಿಸಿದರೆ ಅವನ ನೆನಪು ಸಾರ್ಥಕ.

ಆ ಕಾಲದಲ್ಲೆಲ್ಲ ಗುರುಕುಲ ಪದ್ಧತಿ ಇತ್ತು. ಶಿಷ್ಯನಾಗುವವ ಗುರುವಿನ ಆಶ್ರಮಕ್ಕೆ ಹೋಗಬೇಕು. ಅಲ್ಲಿ ಗುರುವು ಹಾಕಿದ ನಿಯಮಗಳಲ್ಲಿ ಉತ್ತೀರ್ಣನಾದರೆ ಮಾತ್ರ ಗುರುವು ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸುವುದು ವಾಡಿಕೆ. ಅಂತಹ ಗುರುಕುಲಕ್ಕೆ ಅಮ್ಮನ ಜೊತೆಗೆ ಈ ಹುಡುಗ ತೆರಳಿದ. ಹೋಗಿ ಗುರುಗಳನ್ನು ಕಂಡ. ಮೂಗಿನ ತುದಿಯಲ್ಲೇ ಕೋಪವೋ ಎಂಬಂತಹ ವ್ಯಕ್ತಿತ್ವ ಗುರುವಿನದ್ದು. ವಂದಿಸಿ ತಾನು ಬಂದ ಕಾರಣವನ್ನು ತಿಳಿಸಿ, ಗುರುವಿನ ಆದೇಶಕ್ಕಾಗಿ ಕಾದ.

ಹುಡುಗನ ಬಲಹಸ್ತವನ್ನು ಹಿಡಿದು ನೋಡಿದ ಗುರುಗಳು “ವಿದ್ಯಾರೇಖೆಯೇ ಇಲ್ಲ, ಶಿಷ್ಯನಾಗಿ ಸ್ವೀಕರಿಸುವುದು ಸಾಧ್ಯವಿಲ್ಲ” ಎಂದುಬಿಟ್ಟರು. ಹುಡುಗನಿಗೆ ತೀವ್ರ ಬೇಸರವಾಯಿತು. ಮೇಲಾಗಿ ಹಸ್ತರೇಖೆಗಳ ಪರಿಚಯವೂ ಇರಲಿಲ್ಲ. ಅದೇತಾನೆ ಪರಿಚಯಿಸಿಕೊಳ್ಳಲು ಹೋದಾಗಲೇ ಗುರುವನ್ನು ನೋಡಿದ್ದು, ಹೀಗಾಗಿ ಮರುಮಾತನಾಡುವ ಸಲುಗೆಯಾಗಲೀ ಧೈರ್ಯವಾಗಲೀ ಇರಲಿಲ್ಲ. ಹುಡುಗನ ಕಣ್ಣಿಂದ ಧಾರೆಧಾರೆ ಕಣ್ಣೀರು ಹರಿಯಿತು. ಅಮ್ಮನೊಡನೆ ಹೊರನಡೆದ ಮಗು ಮನೆಯ ಹಾದಿ ಹಿಡಿಯಿತು.

ಒಂದಷ್ಟು ದೂರ ಹೋಗುವಷ್ಟರಲ್ಲಿ ಹುಡುಗನಲ್ಲಿ ಯೋಚನೆಗಳು ಎದ್ದವು. ದುಃಖವನ್ನು ಹತ್ತಿಕ್ಕಿ, ಅಮ್ಮ ಬೇಡವೆಂದರೂ ಕೇಳದೆ ಮರಳಿ ಗುರುಗಳಲ್ಲಿಗೆ ಹೋದ. ಅಷ್ಟುದೂರ ನಿಂತು ಕಣ್ಣೀರು ಸುರಿಸುತ್ತ ಕೈಮುಗಿದು ಗುರುಗಳೆಡೆಗೆ ದೀನದೃಷ್ಟಿಯಂದ ನೋಡುತ್ತಿದ್ದ. “ಹಸ್ತದಲ್ಲಿ ವಿದ್ಯಾರೇಖೆಯೇ ಇಲ್ಲ ಅಂದ ಹೇಳಿಲ್ಲವೇನಯ್ಯ? ಮತ್ತೆ ಯಾಕೆ ಬಂದೆ, ಹೇಳಿದ್ದು ಅರ್ಥವಾಗೋದಿಲ್ಲವೇ?” ಎಂದು ಗದರಿದರು ಗುರುಗಳು.

“ಸ್ವಾಮಿ, ಹಸ್ತದಲ್ಲಿ ವಿದ್ಯಾರೇಖೆ ಎಂದರೆ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಆಸೆಯಾಯಿತು. ಅದಕ್ಕಾಗಿ ತಮ್ಮಲ್ಲಿ ಮರಳಿ ಬಂದೆ. ದಯಮಾಡಿ ಅದನ್ನೊಮ್ಮೆ ಹೇಳಿದರೆ ಹೊರಟುಹೋಗುವೆ” ಎಂದು ಬಿಕ್ಕಳಿಸುತ್ತಲೇ ಹೇಳಿದ. ಹುಡುಗನ ಮನಸ್ಸು “ಹೇಗಾದರೂ ಮಾಡಿ ನಾನು ಓದಲೇಬೇಕು” ಎಂಬ ದೃಢ ಸಂಕಲ್ಪವನ್ನು ಕೈಗೊಂಡಿತ್ತು. ಗುರುಗಳು ದಯೆ ತೋರಿದರು. ವಿದ್ಯಾರೇಖೆ ಹೇಗಿರುತ್ತದೆ ಎಂದು ಅಲ್ಲಿರುವ ಶಿಷ್ಯನೊಬ್ಬನ ಹಸ್ತದಲ್ಲಿ ಅದನ್ನು ತೋರಿಸಿದರು. ಹುಡುಗ ಕೈಮುಗಿದು ಹೊರಟುಹೋದ.

ಅರ್ಧಗಂಟೆ ಕಳೆದಿರಬಹುದು, ಯಾವುದೋ ಕಾರ್ಯದ ನಿಮಿತ್ತ ತಲೆಯೆತ್ತಿ ಆಶ್ರಮದ ಹೊರಭಾಗದತ್ತ ನೋಡಿದ ಗುರುಗಳಿಗೆ ಅದೇ ಬಾಲಕ ಅಳುತ್ತ ನಿಂತಿರುವುದು ಕಾಣಿಸಿತು. “ನಾನು ಓದಲೇಬೇಕು ಗುರುಗಳೇ, ದಯಮಾಡಿ ನನ್ನಮೇಲೆ ದಯೆತೋರಿಸಿ” ಎಂದು ಜೋರಾಗಿ ಅತ್ತುಬಿಟ್ಟ ಆ ಬಾಲಕ. ಬಲಹಸ್ತದಿಂದ ರಕ್ತದ ಹನಿಗಳು ತೊಟ್ಟಿಕ್ಕುತ್ತಿದ್ದವು.

ಆಶ್ಚರ್ಯಚಕಿತರಾದ ಗುರುಗಳು ಅಂಗಳಕ್ಕೆ ಓಡಿ ಅವನ ಹಸ್ತವನ್ನು ಹಿಡಿದು ನೋಡಿದರು. ವಿದ್ಯಾರೇಖೆ ಹೇಗಿರುತ್ತದೆಂದು ಗುರುಗಳು ತೋರಿಸಿದ್ದರೋ ಹಾಗೇ ಮೊನಚಾದ ಬೆಣಚು ಕಲ್ಲಿನಿಂದ ಹಸ್ತದಲ್ಲಿ ವಿದ್ಯಾರೇಖೆಯನ್ನು ಕೊರೆದುಬಿಟ್ಟಿದ್ದ ಆ ಬಾಲಕ! ಈಗ ಮಾತ್ರ ಆ ಗುರುವಿನ ಹೃದಯ ಕರಗಿಹೋಯಿತು. ಹುಡುಗನ ಹಸ್ತದಲ್ಲಿ ವಿದ್ಯಾರೇಖೆ ಇಲ್ಲದಿರಬಹುದು; ಆದರೆ ಮನದಲ್ಲಿ ವಿದ್ಯಾರೇಖೆಯಿದೆ; ವಿದ್ಯೆಯನ್ನು ಕಲಿಯಬೇಕೆಂಬ ಉತ್ಕಟ ಮನೋಭಿಲಾಷೆಯಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಆ ಮಗುವನ್ನು ಮರಳಿ ಕಳಿಸಿಬಾರದು; ವಿದ್ಯೆ ಕಲಿಸಿಯೇ ನಂತರ ಕಳುಹಿಸುವುದೆಂದು ತೀರ್ಮಾನಿಸಿ ಅವನ ಮೈದಡವಿ. ಹಸ್ತಕ್ಕೆ ಬಟ್ಟೆಕಟ್ಟಿ ಉಪಚರಿಸಿ ಆಶ್ರಮದೊಳಗೆ ಕರೆದೊಯ್ದರು.

ವಿದ್ಯೆ ಕಲಿತು ಪಂಡಿತನಾದ ಆ ಹುಡುಗನೇ ಪಾಣಿನಿ! ಬಾಲ್ಯದಲ್ಲಿ ನಡೆದ ಈ ಘಟನೆ ಪಾಣಿನಿಯ ಸ್ಥೈರ್ಯ ಮತ್ತು ಜ್ಞಾನದಾಹ ಹೇಗಿತ್ತು ಎಂಬುದನ್ನು ಸೂಚಿಸುತ್ತದೆ. ಪಾಣಿನಿಯ ಅಷ್ಟಾಧ್ಯಾಯದ ಬಗ್ಗೆ ಯಾರು ಕೇಳಿಲ್ಲ? ವ್ಯಾಘ್ರ ಎನ್ನುವ ಪದದ ಹುಟ್ಟಿನ ಬಗ್ಗೆ ತರ್ಕಿಸುತ್ತ ಹುಲಿಯ ಬಾಯಿಗೆ ತುತ್ತಾಗಿ ಸತ್ತುಹೋದರು ಎಂಬ ಇನ್ನೊಂದು ಕತೆ ನಂತರ ಬರುತ್ತದೆ. ಅದು ಹಾಗಿರಲಿ, ಆದರೆ ಪಾಣಿನಿಗೆ ಹಸ್ತಸಾಮುದ್ರಿಕೆ ಯಾವ ಅಡೆತಡೆಯನ್ನೂ ಮಾಡಲಿಲ್ಲ!

ಹಿಂದಿನ ಲೇಖನವೊಂದರಲ್ಲಿ ಹೇಳಿದ್ದೆನಲ್ಲ?-“ಮನ ಏವ ಮನುಷ್ಯಾಣಾಂ …” ಆ ವಿಷಯದ ಬಗ್ಗೆ ಅದ್ಭುತವಾಗಿ ಮಾತೆ ವಿಮಲಾನಂದರು ಮಾತನಾಡಿದ್ದಾರೆ. ತೊನೆಯಪ್ಪ ಸ್ವಾಮಿಗಳಿಗೆ ಸ್ವಾಮಿನಿ ವಿಮಲಾನಂದರು ಒಂದು ವಾರಕಾಲ ತರಬೇತಿ ನೀಡಬಹುದಿತ್ತು. ಈರುಳ್ಳಿ ಉಪ್ಪಿಟ್ಟು ತಿಂದರೆ ಏನಾಗುತ್ತದೆ; ಈರುಳ್ಳಿಯನ್ನು ಸನ್ಯಾಸಿಗಳೇಕೆ ತಿನ್ನೋದಿಲ್ಲ ಎಂಬೆಲ್ಲ ವಿಷಯಗಳನ್ನು “ಜಗದ್ಗುರು ಶೋಭರಾಜಾಚಾರ್ಯ”ರು ತಿಳಿದುಕೊಳ್ಳಲು ಅನುಕೂಲವಾಗುತ್ತಿತ್ತು.

ಸಂಸ್ಕಾರದ ನೆಪದಲ್ಲಿ ಉಪದೇಶ ಕೊಡುತ್ತೇನೆನ್ನುತ್ತ ಕನ್ಯಾಮಣಿಗಳನ್ನು ಏಕಾಂತದಲ್ಲಿ ಅಪ್ಪಿಕೊಂಡು ’ಉಮ್ಮ’ಕೊಡುವುದು ಸರಿಯೋ ತಪ್ಪೋ ಎಂಬುದು ಗೊತ್ತಾಗುತ್ತಿತ್ತು. ಯಾವ್ಯಾವುದೋ ಸಮಾನಶೀಲ ಕಚ್ಚೆಹರುಕು ಕಾವಿಧಾರಿಗಳನ್ನು ಕರೆಸಿ ಹಾದರದ ಪ್ರಕರಣಗಳನ್ನು ಮುಚ್ಚುವ ಪ್ರಯತ್ನ ಮಾಡೋ ಬದಲು ಸಗಣಿಸ್ವಾಮಿಗಳು ಇಂತಹ ಸನ್ಯಾಸಿಗಳನ್ನು ಕರೆಸಬಹುದಿತ್ತು. ಹಾಗಾದರೂ ಆಗಿದ್ದರೆ ಶಾಖದ ಸ್ಪರ್ಶಕ್ಕೆ ಒಳಗಾದ ಬೆಣ್ಣೆ ಕರಗುವಂತೆ ಕಾಮಾವತಾರಿಯ ಕಾಮೋತ್ಕಟತೆ ಕರಗಬಹುದಿತ್ತು ಎಂಬುದು ಕೆಲವರ ಅನಿಸಿಕೆ.

ಹಳದೀ ತಾಲಿಬಾನಿಗಳು ವಿಮಲಾನಂದರಂಥವರ ಮಾತುಗಳನ್ನು ಕೇಳಿ ಅರಗಿಸಿಕೊಳ್ಳಬೇಕು.

ನಿರೀಕ್ಷಿಸಿದ್ದಂತೆ ಸಗಣಿ ಸ್ವಾಮಿಯ ಚತುರ್ಮೋಸದ ಮುಕ್ತಾಯಕ್ಕೆ ರಾಜಕಾರಣಿಗಳೆಲ್ಲ ಬಂದು ಬಣ್ಣದ ಅಕ್ಕಿ, ಶಾಲು ಪಡೆದು ಹೋದರು. ಗುಮ್ಮಣ್ಣ ಹೆಗಡೇರಿಗೆ ಕಾರವಾರದ ಕಡೆಗೆ ಓಡಾಡುವಾಗ ಬಸ್ಸಿನಲ್ಲಿ ಯಾರೋ ಸಿಕ್ಕಿದ್ದರಂತೆ. ವಿದೇಶದಲ್ಲಿ ವ್ಯಭಿಚಾರ ನಡೆಸುತ್ತ ಮಜಾ ಉಡಾಯಿಸಲು ಹೋಗಿ
ಸತ್ತವನ ಅಂತ್ಯಕ್ರಿಯೆಗೆ ಸಹಸ್ರ ಸಂಖ್ಯೆಯಲ್ಲಿ ಜನ ಸೇರಿದ್ದನ್ನು ನೆನಪಿಸುತ್ತ ಹೇಳಿದರಂತೆ-“ಈಗ ಎಲ್ಹೋದ್ರೂ ಹಾಗೇ ಆಗ್ಬುಟ್ಟದೆ ಹೆಗಡೆರೆ, ಇಡೀ ಜಿಲ್ಲೇಲಿ ಯಾವುದೋ ಮೂಲೇಲಿ ಜುಗಾರ್ ಆಡುವವ ಒಬ್ಬ ಸತ್ತ ಅಂದ್ರೆ ಇಡೀ ಜಿಲ್ಲೆಯ ಜುಗಾರಿ ಮಂದಿ ಅಲ್ಲಿಗೆ ಜಮಾಯಿಸ್ತಾರೆ.”

ಗುಮ್ಮಣ್ಣ ಹೆಗಡೇರಿಗೆ ಹಾಗೆ ಹೇಳಿದವರು ಸಮಾಜದಲ್ಲಿ ಕೆಳವರ್ಗದಿಂದ ಬಂದ ತಿಳಿವಳಿಕೆಯುಳ್ಳ ಜನರಂತೆ. ಯಾರೋ ಹೆಂಗಸು ಭಾಷಣ ಮಾಡಿದ್ದರಲ್ಲ? “ಮೇಲ್ವರ್ಗದವರನ್ನು ನೋಡಿ ಕೆಳವರ್ಗದವರೂ ಅನುಸರಿಸುತ್ತಾರೆ” ಅಂತ. ಪ್ರಾಯಶಃ ಗುಮ್ಮಣ್ಣ ಹೆಗಡೇರಿಗೆ ಅಂದು ಸಿಕ್ಕಿದವರು ಹಾಗೆ ಲೋಕಜ್ಞಾನವನ್ನು ಪಡೆದವರಾಗಿರಬೇಕು.

ಸ್ವಾಮಿ ವಿಮಲಾನಂದರ ಮಾತುಗಳಲ್ಲಿ ಒಂದೆರಡು ಕಥೆಗಳಿವೆ; ಕಥೆಗಳಲ್ಲ ಜೀವನದ ಘಟನೆಗಳು. ಎರಡು ಹೋರಿಗಳ ಕಥೆಯನ್ನೊಂದೆಡೆ ಹೇಳ್ತಾರೆ. ಹೋರಿಗೆ ಕಟ್ಟಿಹಾಕಿದ ಸೂಚನೆಯನ್ನು ಕೊಟ್ಟಿದ್ದರಿಂದ ತಾನು ಬಂಧನಕ್ಕೆ ಒಳಗಾದೆನೆಂಬ ಭಾವನೆಯಲ್ಲಿದ್ದ ಹೋರಿ ಎದ್ದು ಹೋಗೆಂದರೂ ಹೋಗಲಿಲ್ಲ. ಕಟ್ಟನ್ನು ಬಿಚ್ಚಿದ್ದೇನೆ ಎಂದು ಸೂಚಿಸಿದ ನಂತರ ಅದು ಎದ್ದುಹೋಗುತ್ತದೆ.

ಅದೇ ವಿಧವಾಗಿ ಆನೆಯ ಕಾಲಿಗೆ ಸರಪಳಿ ಕಟ್ಟಿದ ಉದಾಹರಣೆಯನ್ನು ತುಮರಿ ನೀಡಿದ್ದು ನೆನಪಿರಬಹುದಷ್ಟೆ? ವಾಸ್ತವದಲ್ಲಿ ಆನೆಯ ಶಕ್ತಿಗೆ ಅದೆಲ್ಲ ಯಾವ ಮಟ್ಟದ ಬಂಧನ? ಸರಪಳಿ ಹರಿದುಕೊಂಡು ಹೋದರೆ ಶಿಕ್ಷೆಗೆ ಒಳಗಾಗುತ್ತೀಯ ಎಂದು ಕಲಿಸಿ ಮನಸ್ಸಿನಲ್ಲಿ ಕೂರಿಸಿದ ಭಯವೇ ಆನೆ ಹಾಗೆ ನಿಲ್ಲಲು ಕಾರಣ. ಶಾಪ ತಟ್ಟುತ್ತದೆ ಎಂದು ಶತಮಾನಗಳಿಂದ ಕೂರಿಸಿದ ಭಯವೇ ಕಚ್ಚೆಹರುಕು ಪಾಪಿ ಪೀಠಸ್ಥನಾಗಿದ್ದರೂ ಸುಮ್ಮನಿರೋದಕ್ಕೆ ಕಾರಣ.

ಅಂದಹಾಗೆ, ನೀರಿನ ಮೇಲೆ ನಡೆಯೋದು, ಗಾಳಿಯಲ್ಲಿ ತೇಲೋದು, ಬಹುದೂರವನ್ನು ಕ್ಷಣಾರ್ಧದಲ್ಲಿ ತಲುಪೋದು ಎಲ್ಲವೂ ತಪಸ್ಸುಳ್ಳ ಮನಸ್ಸಿಗೆ ಸಾಧ್ಯ ಎಂದು ವಿಮಲಾನಂದರು ಹೇಳ್ತಾರೆ. ಬರ್ಕ್‍ಲಿಯಲ್ಲಿ ಅಪ್ಪ-ಮಗ ಅಸಾಧ್ಯವೆನಿಸಿದ ಸೇತುವೆಯೊಂದನ್ನು ಕಟ್ಟಲು ತೊಡಗುತ್ತಾರಂತೆ. ಅದೆಲ್ಲ ಆಗೋದಲ್ಲ ಹೋಗೋದಲ್ಲ ಅಂತ ಜನ ಮಾತಾಡಿಕೊಂಡರಂತೆ. ಕಟ್ಟುತ್ತಿರುವಾಗ ಪ್ರಕೃತಿಯ ಹಲವು ವಿಕೋಪಗಳನ್ನು ಅವರು ಎದುರಿಸಿದರಂತೆ. ಅಂತಹ ಒಂದು ಸನ್ನಿವೇಶದಲ್ಲಿ ಅಪ್ಪ ಸತ್ತುಹೋದ. ಮಗ ಪಾರ್ಶ್ವವಾಯು ಪೀಡಿತನಾಗಿ ಜೀವ ಹಿಡಿದು ಉಳಿದ.

ಜೀವದಿಂದಿದ್ದ ಮಗನಲ್ಲಿ ಒಂದು ಹಸ್ತದ ಬೆರಳುಗಳಿಗೆ ಮಾತ್ರ ಚಲಿಸುವ ಚೈತನ್ಯವಿತ್ತಂತೆ. ಅಪ್ಪ ಮಡಿದ, ತನಗೆ ಹೀಗಾಗಿದೆ, ಆದರೆ ಸೇತುವೆ ನಿರ್ಮಾಣ ನಡೆಯಲೇಬೇಕೆಂಬುದು ತಮ್ಮ ಕನಸು ಮತ್ತು ತಂದೆಯ ಕೊನೆಯ ಆಸೆ ಎಂದು ಮಗ ಮಡದಿಗೆ ವಿವರಿಸಿದ. ಮಡದಿಯ ಮೊಳಕೈಮೇಲೆ ಬೆರಳನ್ನು ಆಡಿಸುತ್ತ ತನ್ನ ಸಂಜ್ಞೆಗಳ ಮೂಲಕ ಸೇತುವೆ ಕಟ್ಟುವ ತಂತ್ರಜ್ಞಾನದ ಮಾಹಿತಿಗಳನ್ನು ಹೇಳುತ್ತಿದ್ದನಂತೆ-ಅದು ಮುಂದಿನ ಹತ್ತುವರ್ಷಗಳ ಕಾಲ!!

ಮಡದಿ ಸಹನೆಯಿಂದ ಎಲ್ಲವನ್ನೂ ತಿಳಿದುಕೊಂಡು ಕೆಲಸಗಾರರಿಗೆ ತಿಳಿಸಿಹೇಳಿ ಕೆಲಸ ನಡೆಸುತ್ತ, ಸೇತುವೆ ನಿರ್ಮಾಣ ಯಶಸ್ವಿಯಾಯಿತು!! ಆಗೋದಲ್ಲ ಹೋಗೋದಲ್ಲ ಎನ್ನುತ್ತಿದ್ದ ಜನ ಮೂಗಿನಮೇಲೆ ಬೆರಳಿಟ್ಟುಕೊಂಡರು. ಈಗ ಅವರೆಲ್ಲ ಅದೇ ಸೇತುವೆಯ ಮೇಲೆ ಓಡಾಡುತ್ತಾರೆ. ಸೂತ್ರಧಾರ ಅಪ್ಪ ಸತ್ತು ತನಗೆ ಪಾರ್ಶ್ವವಾಯು ಬಡಿದರೂ ಆ ವ್ಯಕ್ತಿಯ ಸಂಕಲ್ಪ ಮಾತ್ರ ಸಡಿಲಗೊಳ್ಳಲಿಲ್ಲ. ಅದು ಅ ಉನ್ನತ ಮನಸ್ಸಿನ ಶಕ್ತಿ.

ಕಚ್ಚೆಹರಿದು ಊರ ಬಾಗಿಲಿಗೆ ತೋರಣ ಕಟ್ಟಿದರೂ ಏಕಾಂತ ಮತ್ತು ಕನ್ಯಾಸಂಸ್ಕಾರ ನಿಲ್ಲಿಸೋದಿಲ್ಲ-ಅದು ’ಮಹಾತಪಸ್ವಿ ತೊನೆಯಪ್ಪ’ನವರ ಮನಸ್ಸಿನ ಶಕ್ತಿ. 🙂 🙂

ಮನಸ್ಸಿನ ಶಕ್ತಿಯ ಬಗ್ಗೆ ಮಾತಾಡೋದಾದರೆ ಅದು ಇಲ್ಲಿಗೆ ಅಥವಾ ಇಂದಿಗೆ ಮುಗಿಯೋದಲ್ಲ. ನಮ್ಮ ಹಿಂದೂ ಉನ್ನತ ಸಂಸ್ಕಾರಗಳಲ್ಲೆಲ್ಲ ವಿಜ್ಞಾನವೇ ಅಡಗಿದೆ ಎಂಬುದು ಬಹಳ ಆಳವಾಗಿ ಅಧ್ಯಯನ ಮಾಡಿದರೆ ಮಾತ್ರ ಗೊತ್ತಾಗುತ್ತದೆ. ಸಂಧ್ಯಾವಂದನೆಗೇನು ಮಹತ್ವ? ಭಸ್ಮಧಾರಣೆಗೇನು ಕಾರಣ? ಸಂಕಲ್ಪ ಮಾಡುವಾಗ ಎಡಗೈಲಿ ಅಕ್ಷತೆ ಹಿಡಿದು ಬಲಗೈಯನ್ನು ಸಂಕಲ್ಪ ಮುದ್ರೆಯಿಂದ ಮುಚ್ಚಿ ಬಲತೊಡೆಯ ಮೇಲೆ ಇರಿಸಿಕೊಳ್ಳಬೇಕೇಕೆ? ಎಂಬಂತಹ ಎಲ್ಲ ಕರ್ಮಾಚರಣೆಗಳಿಗೆ ಮನೋವೈಜ್ಞಾನಿಕ ಕಾರಣಗಳಿವೆ. ಯಾವುದನ್ನೂ ಅರಿತುಕೊಳ್ಳ ಬಯಸದವರು ಮಾತ್ರ ನಾಟಕಗಳನ್ನು ಮಾಡುತ್ತ ಜೈಕಾರ ಅರಚುತ್ತ ಮಠಾಂಧರಾಗುತ್ತಾರೆ.

“ಒಬ್ಬಳನ್ನು ಹೆಂಡತಿ ಮಾಡಿಕೊಂಡರೆ ಸ್ವರ್ಗದಲ್ಲಿ ಅವಳು ಎಪ್ಪತ್ತು ಜನ ಕನ್ಯಾಪೊರೆಹರಿಯದ ಕಪ್ಪುಕಣ್ಣಿನ ಹುಡುಗಿಯರು ಸಂಭೋಗಕ್ಕೆ ಸಿಗುತ್ತಾರೆ; ಅವರ ಜೊತೆಗೆ ಸೇವಕಿಯರಾಗಿ ಬರುವ ಇನ್ನೂ ಎಪ್ಪತ್ತು ಜನ ಹುಡುಗಿಯರೂ ಸಂಭೋಗಕ್ಕೆ ಸಿಗುತ್ತಾರೆ. ಹಾಗಾಗಿ ಈ ಜನ್ಮದಲ್ಲಿ ಒಬ್ಬಳನ್ನೇ ಮದುವೆಯಾಗುವ ಬದಲು ನಾಲ್ಕು ಮಾಡಿಕೊಳ್ಳಿ. 1+70+70=141X4=564. ಈ ಭಾಗ್ಯ ಯಾರಿಗುಂಟು ಯಾರಿಗಿಲ್ಲ!” ಎಂಬಂತಹ ಹೇಳಿಕೆಗಳನ್ನು ಅನುಮೋದಿಸುವ ಮತ್ತು ಆಚರಿಸುವ ಜನರನ್ನು ನೋಡಿದ್ದೀರಿ.

ಅದೇರೀತಿ ಕಚ್ಚೆಹರುಕನಾದರೂ ನಮಗೆ ಒಳ್ಳೇದಾಗ್ತದೆ, ನಮ್ಮ ಕುಲಕ್ಕೆ ಒಳ್ಳೇದಾಗ್ತದೆ ಎಂಬ ಮೂಢರು ತೊನೆಯಪ್ಪನನ್ನು ಗುರುವೆಂದು ಆರಾಧಿಸುತ್ತಾರೆ. ಹರೆಯದಿಂದ ಮುಪ್ಪಿನವರೆಗೆ ಪಕ್ಷಕಟ್ಟುವ ನೆಪದಲ್ಲಿ ವರಾಡ ಎತ್ತಿ ಗುಳುಂ ಸ್ವಾಹಾ ಮಾಡಿದ ಪಿರ್ಕಿ ವೈದ್ಯನಂತವರು ತಮಗೆ ಸಿಗುವ ಶಾಲು, ಹಾರ ತುರಾಯಿಗಳಿಗಾಗಿ ಹೋರೀಶನನ್ನು ಬೆಂಬಲಿಸುತ್ತಾರೆ. ಮಠದಲ್ಲಿ ಮೂರೂ ಹೊತ್ತು ಬಿಟ್ಟಿ ಕೂಳು ತಿಂದು ತೇಗಿ, ಚೀಲತುಂಬ ನೋಟುಗಳ ಕಂತೆಯನ್ನು ಮನೆಗೆ ಸಾಗಿಸುವ ಒಂದಷ್ಟು ಜನ ಕಾಮಾವತಾರಿಯ ಪಾದಸೇವೆ ಮಾಡ್ತಾರೆ.

ಆದರೆ ಸಮಾಜದ ಮುಕ್ಕಾಲುಪಾಲು ಜನ ಸುಮ್ಮನಿದ್ದರೂ ಅವರಿಗೆಲ್ಲ ಬೀಜದ ಜಗದ್ಗುರುವಿನ ಪರಿಚಯವಾಗಿಬಿಟ್ಟಿದೆ! ಗುರಿಕಾರರಿಗೆ, ಬಹಿಷ್ಕಾರಕ್ಕೆ ಹೆದರಿ ಹೊರತೋರಿಕೆಗೆ ಹರಾಮಿಯ ಜೊತೆಗಿರುವಂತೆ ತೋರಿಸಿಕೊಂಡರೂ ಮನಸ್ಸಿನಲ್ಲಿ ನೋವು ಮಡುಗಟ್ಟಿದೆ; ಅವರೆಲ್ಲರ ಮನಸ್ಸು ಒಂದಲ್ಲ ಒಂದು ದಿನ ಕೆರೆಕೋಡಿ ಒಡೆದಂತೆ ಒಡೆಯುತ್ತದೆ. ಆ ದಿನಗಳಲ್ಲೆ ಹೋರಿಸ್ವಾಮಿಗಳು ಪರಪ್ಪವನಕ್ಕೆ ಬಿಜಯಂಗೈಯುತ್ತಾರೆ.

Thumari Ramachandra

source: https://www.facebook.com/groups/1499395003680065/permalink/1825572881062274/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s