ಕನ್ಯಾ ಸಂಸ್ಕಾರ – ಈ ಕಾರ್ಯಕ್ರಮಕ್ಕೆ ಇರುವ ಅತ್ಯಂತ ನಿಖರ ಶಾಸ್ತ್ರಾಧಾರ ಏನು ಯಾವುದು?

ಕನ್ಯಾ ಸಂಸ್ಕಾರ – ಈ ಕಾರ್ಯಕ್ರಮಕ್ಕೆ ಇರುವ ಅತ್ಯಂತ ನಿಖರ ಶಾಸ್ತ್ರಾಧಾರ ಏನು ಯಾವುದು?

ನ್ಯಾಯ ನಿಷ್ಠೆ ಮತ್ತು ಸತ್ಯ ಬದ್ಧತೆ ಯ ಮೂಲ ಧ್ಯೇಯವನ್ನು ಆಧರಿಸಿ ಮಾಡಲ್ಪಡುವ ಕರ್ಮವು “ನಿಷ್ಕಾಮ ಕರ್ಮ ” ವೆನಿಸುವುದು || ಯಾಕೆಂದರೆ ಅಲ್ಲಿ ಸ್ವಾರ್ಥ ಪರ ಕಾರ್ಯಗಳಿಗೆ ಎಡೆ ಇರದು || ಇಂತಹಾ ಕರ್ಮಗಳಲ್ಲಿ _ “ಸುಖ ದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಾಜಯಔ” ಎಂಬ ಮನೋಸ್ತಿತಿಯನ್ನು ಹೊಂದುವುದೂ – ಸುಲಭವೇ || –
ಒಂದು ಸಮಾಜದ ನಾಶಕ್ಕೆ ಕಾರಣವಾಗಬಲ್ಲ ” ಅಧರ್ಮ ಕಾರ್ಯವು” – ನಡೆಯುತ್ತಿದ್ದರೆ ಅದರ ವಿರುದ್ಧ ನ್ಯಾಯ ಬದ್ಧವಾಗಿ ಕಾನೂನು ಚೌಕಟ್ಟಿನ ಪರಿಧಿ ಯ ಒಳಗೆ ನಡೆಸುವ ಸಕಲ ಕಾರ್ಯಗಳೂ – ಧರ್ಮ ಪ್ರದವೇ ಹಾಗೂ ಅತ್ಯಂತ ಪುಣ್ಯಕರ – ಮಾತ್ರವಲ್ಲ ಅದಕ್ಕೆ ಸಮ್ಮಂದ ಪಟ್ಟ ಎಲ್ಲರ ಕರ್ತವ್ಯವೂ ಹೌದು || – ಇಲ್ಲಿ – ಧರ್ಮಾದ್ಧಿ ಯುದ್ಧಾತ್ ಶ್ರೇಯೋsನ್ಯತ್ ಕ್ಷತ್ರಿಯಸ್ಯ ನ ವಿದ್ಯತೇ ಎಂಬುದು ಶಾಸ್ತ್ರಾಧಾರ || — ಧರ್ಮ ಯುದ್ಧಕ್ಕಿಂತ ಹೆಚ್ಚಿನ ಶ್ರೇಯಸ್ಕರ ವಾದ ಇನ್ನೊಂದು ಕರ್ಮವು ಕ್ಷತ್ರಿಯನಿಗೆ ಇಲ್ಲ — ಎಂಬ ಅರ್ಥ || ಇಲ್ಲಿ ಕ್ಷತ್ರಿಯನಿಗೆ ಹೇಳಿದುದಾದರೂ – ಇದು ಜನ್ಮತಃ ಬ್ರಾಹ್ಮಣ ನಿಗೂ ಇತರರಿಗೂ ಅನ್ವಯ ವಾಗುತ್ತದೆ – ಯಾಕೆಂದರೆ ಈ ಕ್ಷತ್ರಿಯರಿಗೆ – ಪೂರ್ಣ ವಿದ್ಯೆಗಳನ್ನು ಪ್ರಧಾನ ಮಾಡುವವನು ಬ್ರಾಹ್ಮಣನೇ — ಆದುದರಿಂದಲೇ – ಕ್ಷತ್ರಿಯರು ಈ ಧರ್ಮ ದಿಂದ ವಿಮುಖರಾದಾಗ — ಪರಶುರಾಮ ನೇ ಸ್ವಯಂ ಶಸ್ತ್ರದಾರಿ ಯಾಗಿ ಯದ್ಧ ಮಾಡಬೇಕಾಯಿತು || — ಮತ್ತು ಶಾಸ್ತ್ರತಃ ಚಾತುರ್ವರ್ಣ್ಯ ವೆಂಬುದು – ಸ್ವಭಾವದ ಗಣನೆಯಿಂದ ಹೇಳಲ್ಪಟ್ಟಿದೆ – ಆದುದರಿಂದ ಧರ್ಮ ಪ್ರಜ್ಞೆಯ ವಿಷಯ ಬಂದಾಗ ಜನ್ಮತಃ ವಿಭಾಗಿಸಲ್ಪಟ್ಟ ಎಲ್ಲ . ವರ್ಣದವರಿಗೂ – ಈ ಧರ್ಮವು ಅನ್ವೈಸುತ್ತದೆ ||
ಹೀಗಿರುವಲ್ಲಿ ಈಗಿನ ವಿದ್ಯಮಾನದಲ್ಲಿ – ಧರ್ಮ ವನ್ನು ಬೋಧಿಸತಕ್ಕವರು ಆದರ್ಮ ದ ದಾರಿಯಲ್ಲಿ ಸಾಗಿತ್ತಿದ್ದಾರೆ ಎಂದು ಹೇಳಲಾಗುತ್ತಿರುವಾಗ ಅದರ ವಿರುದ್ಧ – ಶಾಂತಿಯುತ ಹೋರಾಟವು – ಸಂವಿಧಾನ ವು ಒದಗಿಸಿದ ಕಾನೂನು ಚೌಕಟ್ಟಿನ ಮಿತಿ ಯೊಳಗೆ ಬದ್ಧವಾಗಿದ್ದಲ್ಲಿ ಈ ಹೋರಾಟವು ಒಂದು ಧರ್ಮ ಯುದ್ಧವೇ ಹೌದು || ಇದೊಂದು ಪುಣ್ಯಕರ ವಾದ ಕಾರ್ಯ ವೆಂದೆನಿಸುವುದರಿಂದ – ಇಲ್ಲಿ ಯಾವ ರೀತಿಯ ಶಾಪವೂ ಕೆಲಸ ಮಾಡಲಾರದು – ಈ ಕಾರ್ಯದ ಪ್ರಚೋದಕ ಶಕ್ತಿಯು – ಸೋಲು ಗೆಲವುಗಳನ್ನೂ ಮೀರಿ – “ಸತ್ಯ ಪ್ರಜ್ಞೆ” ಯೊಂದೇ ಆದಲ್ಲಿ ಉತ್ತಮ || ಪುನಃ ಇಲ್ಲಿ ತಮ್ಮ ತಮ್ಮ ವಯಕ್ತಿಕ ಲಾಭಗಳ ನೆಲೆಯಲ್ಲಿ (ಕಾಮೈಃ ತೈಃ ತೈಃ ಹೃತ ಜ್ಞಾನಾ – ಎಂಬಂತೆ) – ಅಧರ್ಮ ಕಾರ್ಯದಲ್ಲಿ ತೊಡಗಿದರೆ ಅಲ್ಲಿ ಪಾಪ ಸಂಚಯವೇ ಹೆಚ್ಚಾಗುವುದಲ್ಲದೇ – ಅವರವರು ಭ್ರಮಿಸಿದ – ನಿಷ್ಟಾ ಪುಣ್ಯವು ಎಂದೂ ಒದಗಿ ಬಾರದು ||
ಅತಿ ಮುಖ್ಯವಾಗಿ – .ಯಾವ ಕಾರಣಕ್ಕೂ ಬಿಡಲಾಗದು ಎಂದು ಹೇಳಲ್ಪಡುವ – ಕನ್ಯಾ ಸಂಸ್ಕಾರ – ಅದರಲ್ಲೂ ಕೊನೆಯದಾಗಿ ನಡೆಸಲಾಗುತ್ತಿದೆ ಎಂದು ಹೇಳಲ್ಪಡುವ – ಏಕಾಂತ ಮಂತ್ರೋಪದೇಶ – ಈ ಗುಪ್ತ ಕಾರ್ಯದಲ್ಲಿ ಮಾತಾ ಪಿತೃ ಗಳನ್ನೂ ಸೇರಿ ಯಾರೋಬ್ಬರಿಗೂ ಪ್ರವೇಶವಿಲ್ಲದ ಏಕಾಂತ ಉಪದೇಶ ಎಂದು ಹೇಳಲಾಗುತ್ತದೆ – ಈ ಕಾರ್ಯ ನಡೆಸುವ ಮೊದಲು ಕೆಲವು ಪ್ರಶ್ನೆಗಳಿಗೆ ಉತ್ತರಿಸುವ ಆದ್ಯ ಕರ್ತವ್ಯವು ಇದನ್ನು ನಡೆಸುವವರ ಮತ್ತು ಅನುಮೋದಿಸುವವರ ಮೇಲೆ ನಿಂತಿದೆ – ಈ ಪ್ರಶ್ನೆಗಳಿಗೆ ಎಲ್ಲ ಸಮಾಜಗಳನ್ನೂ ಒಳಗೊಂಡ ಅನೇಕ ಜನರು ಉತ್ತರ ಬಯಸುತ್ತಾರೆ – ೧. ಈ ಕಾರ್ಯಕ್ರಮಕ್ಕೆ ಇರುವ ಅತ್ಯಂತ ನಿಖರ ಶಾಸ್ತ್ರಾಧಾರ ಏನು ಯಾವುದು ? ೨. ಮಠ ಗಳಿಗಾಗಿಯೇ ನಿರ್ಮಿಸಲ್ಪಟ್ಟ – ಶ್ರೀಮಾದಾಚಾರ್ಯರ -“ಮಹಾನುಶಾಸನದಲ್ಲಿ” ಈ ಕಾರ್ಯಕ್ರಮದ ಉಲ್ಲೇಖವಿದೆಯೇ ಅಥವಾ ಅನುಮತಿ ಇದೆಯೇ – ಒಂದು ವೇಳೆ ಇದೆ ಎಂದು ವಾದವಾದರೆ ಇದರ ಪರಿಪೂರ್ಣ ನಿರೂಪಣೆ ಏನು ಎಂಬುದು ಅವಶ್ಯಕ ? ೩. ಪರಂಪರಾಗತವಾದ ಇತರ ಮಠ ಗಳ ಅನುಮೋದನಾಮುದ್ರೆ ಈ ಕಾರ್ಯಕ್ಕೆ ಇದೆಯೇ–? ೪. ಕೊನೆಯದಾಗಿ ಆಧ್ಯಾತ್ಮ ಹಾಗೂ ಇತರ ವಿಧಿಗಳಿಗಾಗಿ ಮಠ ವನ್ನೇ ಅವಲಂಬಿಸಿರುವ ಸಮಸ್ತ ಶಿಷ್ಯ ವರ್ಗಕ್ಕೂ ಇದು ಒಪ್ಪಿಗೆಯೆ ?. ೫. ಇದಕ್ಕೆ ಒಪ್ಪದವರು ಬಹಿಷ್ಕೃತರೆ ? — ೬. ಇದಕ್ಕೆ ಉತ್ತರಿಸುವ ಅವಶ್ಯಕತೆ ಇಲ್ಲವೆಂದು ತಿಳಿಯುವುದಾದರೆ — ಶ್ರೀಮಾದಾಚಾರ್ಯರ ದಿವ್ಯ ನಾಮದ ಪ್ರಭಾ ವಲಯವನ್ನು ದುರುಪಯೋಗ ಪಡಿಸಿಕೊಂಡು ಇದನ್ನು ನಡೆಸುವ ಔಚಿತ್ಯವಾದರೂ ಏನು ?

Edurkala Ishwar Bhat

Source: https://www.facebook.com/groups/1499395003680065/permalink/1824819844470911/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s