ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ

ಅಂತರ್ಬಹಿಶ್ಚ ತತ್ಸರ್ವಂ ವ್ಯಾಪ್ಯ ನಾರಾಯಣ ಸ್ಥಿತಃ

ವರಾಹ ಅವತಾರದ ಕತೆಯನ್ನು ನೀವೆಲ್ಲ ಕೇಳಿದ್ದೀರಿ. ಅದರಲ್ಲಿ ವರಾಹ ಅವತಾರಿ ಎನ್ನಲಾದ ಮಹಾವಿಷ್ಣು ಗುಂಡಗಿನ ಭೂಮಿಯನ್ನು ತನ್ನ ಕೋರೆದಾಡೆಗಳ ಸಹಾಯದಿಂದ ನೀರಿನ ಆಳದಿಂದ ಮೇಲೆತ್ತಿ ತಂದು ಸ್ಥಾಪಿಸುತ್ತಾನೆ. ಆ ಕತೆಯಲ್ಲಿನ ನೀರು ಇದೇ ನಮ್ಮ ಸಮುದ್ರವಾಗಿರಲಿಕ್ಕಿಲ್ಲ-ಯಾಕೆಂದರೆ ಸಮುದ್ರ ಭೂಮಿಯ ಮೇಲೇ ಇದೆಯೆಂಬುದು ನಮಗೀಗ ಗೊತ್ತಿದೆ.

ಕತೆಗೆ ಬೇರೆಯದೇ ಆಯಾಮ ಇರಬಹುದು;ಅದಿಲ್ಲಿ ಪ್ರಸ್ತುತವಲ್ಲ. ಭೂಮಿ ಸಪಾಟಾಗಿಲ್ಲ ಗುಂಡಗಿದೆ ಎನ್ನುವುದನ್ನು ನಮ್ಮ ಪ್ರಾಚೀನರು ಅರಿತಿದ್ದರು ಎಂಬುದಷ್ಟೇ ನಮಗೆ ಪ್ರಾಕೃತ. ಭೂಮಿ ಗೋಳಾಕಾರವಾಗಿದೆ ಎಂಬುದರಿಂದಲೇ ಭೂಗೋಳ ಎಂದು ಕರೆದರು! ಭೂಚೌಕ, ಭೂ ಆಯತ ಎನ್ನಲಿಲ್ಲ.

ಪ್ರಾಚೀನ ಕಾಲದಿಂದಲೂ ನಮ್ಮಲ್ಲಿನ ಅಂದಂದಿನ ವಿಜ್ಞಾನಿಗಳು ಆಕಾಶ ಕಾಯಗಳ ಬಗ್ಗೆ ನಿಖರವಾದ ಮಾಹಿತಿ ಹೊಂದಿದ್ದರು. ಹಾಗಾಗಿಯೇ ಅವುಗಳ ಚಲನವಲನಗಳನ್ನು ನಿರ್ಧರಿಸಿ ಪಂಚಾಂಗದ ಗಣಿತವನ್ನು ಬರೆದರು. ಹಿಂದೂ ಧರ್ಮದ ಮದುವೆಗಳನ್ನು ಸರಿಯಾಗಿ ಕ್ರಮಬದ್ಧವಾಗಿ ನಡೆಸಿದರೆ, ಮದುವೆಯ ನಂತರ ಅಥವಾ ಆ ರಾತ್ರಿ ನಭೋಮಂಡಲದ ತಾರಾಗಣಗಳ ನಡುವೆ ಕಾಣುವ ಅರುಂಧತಿ ನಕ್ಷತ್ರವನ್ನು ತೋರಿಸುವ ಪರಿಪಾಟವಿದೆ. ನಮ್ಮ ಯಾವುದೇ ಪೂಜಾಕ್ರಮಗಳಲ್ಲೂ ಸಂಕಲ್ಪದ ಸಮಯದಲ್ಲಿ “ಅರುಂಧತಿ-ವಶಿಷ್ಠಾಭ್ಯಾಂ” ಎಂದು ಅವರನ್ನು ಸ್ಮರಿಸಲಾಗುತ್ತದೆ.

ಅನ್ಯೋನ್ಯ ದಾಂಪತ್ಯಕ್ಕೆ ಅರುಂಧತಿ-ವಶಿಷ್ಠರು ಆದರ್ಶವಾಗಿದ್ದಾರೆ. ಸಾಮಾನ್ಯವಾಗಿ ಅಧುನಿಕ ವಿಜ್ಞಾನದಲ್ಲಿ ನಕ್ಷತ್ರಗಳು ಚಲಿಸುವುದಿಲ್ಲ ಎನ್ನುತ್ತಾರೆ ಕೆಲವರು. ಆದರೆ ಆಕಾಶ ಕಾಯಗಳಲ್ಲಿ ಪ್ರತಿಯೊಂದಕ್ಕೂ ಅದರದ್ದೇ ಆದ ಚಲನೆಯಿದೆ, ಕಕ್ಷೆಯಿದೆ. ನಮಗೆ ಕಾಣಿಸುವ ಕ್ಷೀರಪಥದಲ್ಲಿ ಸುಮಾರು ನೂರು ಬಿಲಿಯಲ್ ನಕ್ಷತ್ರಗಳಿವೆ ಎಂದು ಹೇಳ್ತಾರೆ, ಒಟ್ಟಾರೆಯಾಗಿ ಅವುಗಳ ಸಂಖ್ಯೆ ನಾಲ್ಕುನೂರು ಬಿಲಿಯನ್ ವರೆಗೂ ಹೋಗಬಹುದು ಅಂತಾರೆ. ನಿಖರವಾಗಿ ಹೇಳೋದು ಸಾಧ್ಯವಾಗಿಲ್ಲ-ಇಂದಿನ ವಿಜ್ಞಾನಿಗಳಿಗೆ.

ಒಂದು ನಕ್ಷತ್ರ ಇನ್ನೊಂದು ನಕ್ಷತ್ರವನ್ನು ಸುತ್ತೋದು ಅಲ್ಲಲ್ಲಿ ಕಾಣುವುದಂತೆ. ಆದರೆ ಎರಡು ನಕ್ಷಕ್ತಗಳು ಜೊತೆಜೊತೆಗೇ ಇರುತ್ತ ಪರಸ್ಪರ ಸುತ್ತುವುದು ಅರುಂಧತಿ-ವಶಿಷ್ಠ ನಕ್ಷತ್ರಗಳಲ್ಲಿ ಮಾತ್ರ ಕಾಣುತ್ತದಂತೆ. ದೂರದಿಂದ ಒಂದೇ ನಕ್ಷತ್ರದಂತೆ ಗೋಚರಿಸುವ ಅರುಂಧತಿಯೊಡನೆ ವಶಿಷ್ಠ ನಕ್ಷತ್ರವೂ ಜೊತೆಯಾಗಿಯೇ ಇದೆ ಎಂದು ಬರಿಗಣ್ಣಿನಿಂದ ನೋಡಿ ಹೇಳೋದು ಕಷ್ಟ. ಐದೋ ಹತ್ತೋ ಸಾವಿರ ವರ್ಷಗಳ ಹಿಂದೆ ಪ್ರಾಯಶಃ ಟೆಲಿಸ್ಕೋಪ್ ರೀತಿಯ ಉಪಕರಣಗಳೂ ಸಹ ಇರಲಿಲ್ಲ! ಹಾಗಾದರೆ ನಮ್ಮವರಿಗೆ ಆ ಜೋಡಿ ನಕ್ಷತ್ರಗಳ ಪರಿಚಯವಾದದ್ದು ಹೇಗೆ?

ನಮ್ಮ ನಕ್ಷತ್ರಯಾದಿಯಲ್ಲಿ ಹದಿನೆಂಟನೇದು ಜ್ಯೇಷ್ಠಾ. ಪ್ರಖರ ಬೆಳಕುಳ್ಳ ನಕ್ಷತ್ರಗಳ ಪೈಕಿ ಇದೇ ದೊಡ್ಡದೆಂದು ಹೇಳಿದರು. ಹಾಗಾದರೆ ಇಡೀ ಆಕಾಶದಲ್ಲಿ ಜ್ಯೇಷ್ಠಾ ನಕ್ಷತ್ರವನ್ನು ಬಿಟ್ಟು ಬೇರೆ ಯಾವ ನಕ್ಷತ್ರವೂ ಅಷ್ಟು ದೊಡ್ಡದಿಲ್ಲವೇ? ಇಲ್ಲ. ಅವರು ಹೇಳಿದ್ದು ನಿಜವೆಂಬುದು ಬೆಳಕಿಗೆ ಬಂದಿದೆ. ಜ್ಯೇಷ್ಠಾ ನಕ್ಷತ್ರ ಸೂರ್ಯನಿಗಿಂತಲೂ ನಲ್ವತ್ತು ಸಾವಿರ ಪಟ್ಟು ದೊಡ್ಡದಾಗಿದೆ! ಅದನ್ನು ಹೇಗೆ ಗುರುತಿಸಿದರು?

ಬ್ರಹ್ಮಾಂಡಕ್ಕೆ ’ಜಗತ್’ ಅಥವಾ ಜಗತ್ತು ಎಂಬ ಪದವನ್ನು ಅಂದೇ ಬಳಸಿದ್ದಾರೆ ನಮ್ಮವರು. ಯಾವುದು ಜನಿತವೋ,ಯಾವುದು ವಿವಿಧ ಗತಿಯುಳ್ಳದ್ದೋ, ಯಾವುದು ಹಲವು ಸಂಗತಿಗಳನ್ನು ತನ್ನೊಳಗೆ ಧರಿಸಿರುವುದೋ ಅದು ಜಗತ್ತು. That means which is movable, locomotive & living. ಬ್ರಹ್ಮಾಂಡಕ್ಕೆ ಬೇರೆ ಬೇರೆ ಗತಿಯಿದೆ ಅನ್ನೋದನ್ನು ಕೂಡ ನಮ್ಮವರು ಅರಿತಿದ್ದರು, ಹಾಗಾಗಿಯೇ ಜಗತ್ತು ಎಂಬ ಪದವನ್ನು ಬಳಸಿದರು.

ಪ್ರಾಚೀನಕಾಲದಲ್ಲಿ ಇಡೀ ಜಗತ್ತಿನಲ್ಲಿ ಸತುವನ್ನು ತಯಾರಿಸುವ ಕಲೆ ಭಾರತೀಯರಿಗೆ ಮಾತ್ರ ಗೊತ್ತಿತ್ತು! ಸತುವಿನ ಅದಿರನ್ನು ಕುಲುಮೆಯಲ್ಲಿ ಕಾಯಿಸಬೇಕು. 997 ಡಿಗ್ರಿ ಸೆಲ್ಶಿಯಸ್ ನಲ್ಲಿ ಸತುವು ಕರಗಿ ನೀರಾಗಿ ಹರಿಯುತ್ತದೆ. ಶಾಖ ಹೆಚ್ಚಾಗಿ 1000ಡಿಗ್ರಿ ಸೆಲ್ಶಿಯಸ್ ಆಗಿಬಿಟ್ಟರೆ ಅದು ಆವಿಯಾಗಿ ಗಾಳಿಯೊಳಗೆ ಸೇರಿಹೋಗುತ್ತದೆ. ಸತು ತಯಾರಿಸುವವರ ಆಟವೇನಿದ್ದರೂ ಕೇವಲ ಮೂರು ಡಿಗ್ರಿಯಲ್ಲಿ ನಡೆಯಬೇಕು.

ಸಾಧಾರಣವಾಗಿ ಕುಲುಮೆಗಳಲ್ಲಿ ಕೆಳಭಾಗದಲ್ಲಿ ಬೆಂಕಿ ಅಥವಾ ಶಾಖ ಇರುತ್ತದೆ. ಮೇಲ್ಭಾಗದಲ್ಲಿ ಲೋಹ ಅಥವಾ ಲೋಹದ ಅದಿರು ಇರುತ್ತದೆ. ಸತುವನ್ನು ತಯಾರಿಸುವಾಗ ಆ ಪದ್ಧತಿಯಲ್ಲಿ ತಯಾರಿಸಿದರೆ ಸತುವನ್ನು ಪಡೆಯಲು ಸಾಧ್ಯವೇ ಇರಲಿಲ್ಲ. ಹೀಗಾಗಿ ಕೆಳಭಾಗದಲ್ಲಿ ಸತುವಿನ ಅದಿರನ್ನಿಟ್ಟು ಮೇಲಿಂದ ಶಾಖ ಹಾಯಿಸಿ ಕೆಳಗೆ ಹರಿಯುವ ದ್ರವರೂಪದ ಸತುವನ್ನು ತಣ್ಣಗಿನ ಪಾತ್ರೆಯಲ್ಲಿ ಶೇಖರಿಸುತ್ತಿದ್ದರು!

ಅಧಿಕೃತ ಇತಿಹಾಸದಲ್ಲಿ ಹೇಳಿರುವಂತೆ ನಾಲ್ಕು ಸಾವಿರ ವರ್ಷಗಳವರೆಗೆ ಇಡೀ ಜಗತ್ತಿಗೆ ಭಾರತವೇ ಸತುವನ್ನು ತಯಾರಿಸಿಕೊಡಬೇಕಾಗಿತ್ತು. ಹದಿಮೂರನೇ ಶತಮಾನದವರೆಗೂ ಅದು ಹಾಗೇ ಇತ್ತು. ನಂತರ ಚೀನೀಯನೊಬ್ಬ ಸತುವನ್ನು ತಯಾರಿಸುವ ಸೂತ್ರವನ್ನು ಕದ್ದು ತಿಳಿದುಕೊಂಡ! ನಂತರದ ತಮಾಷೆ ಕೇಳಿ-ವಿಲಿಯಂ ಚಾಂಪಿಯನ್ ಎಂಬ ಬ್ರಿಟಿಷ್ ವ್ಯಕ್ತಿ ಚೀನೀಯನಿಂದ ಆ ಮಾಹಿತಿಯನ್ನು ಕದ್ದು 1543ರಲ್ಲಿ ತಾನೇ ಕಂಡುಹಿಡಿದೆ ಎಂದು ಬ್ರಿಟನ್ ನಲ್ಲಿ ಘೋಷಿಸಿದ.

ಲೋಹದ ವಿಷಯಕ್ಕೆ ಬಂದಾಗ ತುಕ್ಕು ಹಿಡಿಯದೆ, ವಾತಾವರಣದ ಏರಿಳಿತಗಳಲ್ಲಿ ತನ್ನತನವನ್ನು ಒಂದಷ್ಟೂ ಕಳೆದುಕೊಳ್ಳದೆ ನಿಂತ ಕಂಬಗಳ ನೆನಪಾಗುತ್ತದೆ. ಒಂದು ದೆಹಲಿಯ ಕುತುಬ್ ಮಿನಾರ್ ಪಕ್ಕದಲ್ಲಿ ಸುಮಾರು ಸಾವಿರ ವರ್ಷಗಳಿಂದ ನಿಂತಿದೆ. ಇನ್ನೊಂದು ಸಾವಿರದಿನ್ನೂರು ವರ್ಷಗಳಿಗೂ ಹಿಂದೆ ಶಂಕರರು ಕೊಲ್ಲೂರಿಗೆ ಬಂದಾಗ ಅಲ್ಲಿ ನೆಡಲ್ಪಟ್ಟಿದೆ. ಆಶ್ಚರ್ಯಕರ ಸಂಗತಿಯೆಂದರೆ ಇದನ್ನೆಲ್ಲ ವಿಜ್ಞಾನಿಗಳೋ ಅಥವಾ ಬ್ರಾಹ್ಮಣರೋ ತಯಾರಿಸಲಿಲ್ಲ; ಸ್ಥಳೀಯ ಬುಡಕಟ್ಟು ಜನಾಂಗದವರು ಇದನ್ನೆಲ್ಲ ತಯಾರಿಸಬಲ್ಲವರಾಗಿದ್ದರು; ಭಾರತದಲ್ಲಿ ತಾಂತ್ರಿಕತೆ ಅಷ್ಟೊಂದು ಮುಂದುವರಿದಿತ್ತು ಮತ್ತು ಅದು ಎಲ್ಲರಿಗೂ ತಲುಪಿತ್ತು.

ತಮಿಳುನಾಡಿನ ಚಿದಂಬರಮ್‍ನ ತಿಲ್ಲೈ ನಟರಾಜ ದೇವಸ್ಥಾನದಲ್ಲಿ ವಿಶಿಷ್ಟ ಬೃಹತ್ ಶಿಲಾ ಕಂಬವೊಂದನ್ನು ನೆಲಕ್ಕೆ ತಾಗಿಸದೇ ನಿಲ್ಲಿಸಲಾಗಿದೆ. ಕಂಬದ ಕೆಳಗೆ ಸೀರೆ, ಪಂಚೆ ಇತ್ಯಾದಿಗಳನ್ನು ಹರಡಿ ಪರಿಶೀಲಿಸಿದ್ದಾರೆ ಜನಗಳು. ಹಾಗಾದರೆ ಸಾವಿರಾರು ವರ್ಷಗಳಿಂದ ಇಡೀ ಕಂಬದ ಭಾರವನ್ನು ಛಾವಣಿಯೇ ಹೊತ್ತಿದೆಯೇ?

“ಕಟಾಪಾಯಾದಿ ಸಂಖ್ಯಾ” ಎಂಬ ಗಣಿತ ಸೂತ್ರಗಳಲ್ಲಿ ಒಂದರ ಇಂಗ್ಲೀಷ್ ವಿವರಣೆ ನೋಡಿ-

Amazing Wisdom!!!!
The sanskrit verse for the value of ‘pi’

http://www.gosai.com/chaitan…/saranagati/…/vedic-age_fs.html under ‘vedic mathematics’

“In order to help the pupil to memorize the material studied and assimilated, they made it a general rule of practice to write even the most technical and abstruse textbooks in sutras or in verse (which is so much easier-even for the children-to memorize). And this is why we find not only theological, philosophical, medical, astronomical, and other such treatises, but even huge dictionaries in Sanskrit verse!

So from this standpoint, they used verse, sutras and codes for lightening the burden and facilitating the work (by versifying scientific and even mathematical material in a readily assimilable form)!” [8]

The code used is as follows:

The Sanskrit consonants

ka, ta, pa, and ya all denote 1;
kha, tha, pha, and ra all represent 2;
ga, da, ba, and la all stand for 3;
Gha, dha, bha, and va all represent 4;
gna, na, ma, and sa all represent 5;
ca, ta, and sa all stand for 6;
cha, tha, and sa all denote 7;
ja, da, and ha all represent 8;
jha and dha stand for 9; and
ka means zero.

Vowels make no difference and it is left to the author to select a particular consonant or vowel at each step.

This great latitude allows one to bring about additional meanings of his own choice. For example kapa, tapa, papa, and yapa all mean 11. By a particular choice of consonants and vowels one can compose a poetic hymn with double or triple meanings.

Here is an actual sutra of spiritual content, as well as secular mathematical significance.

gopi bhagya madhuvrata
srngiso dadhi sandhiga
khala jivita khatava
gala hala rasandara

While this verse is a type of petition to Krishna, when learning it one can also learn the value of pi/10 (i.e. the ratio of the circumference of a circle to its diameter divided by 10) to 32 decimal places. It has a self-contained master-key for extending the evaluation to any number of decimal places.

The translation is as follows:

O Lord anointed with the yogurt of the milkmaids’ worship (Krishna), O savior of the fallen, O master of Shiva, please protect me.

At the same time, by application of the consonant code given above, this verse directly yields the decimal equivalent of pi divided by 10: pi/10 = 0.31415926535897932384626433832792. Thus, while offering mantric praise to Godhead in devotion, by this method one can also add to memory significant secular truths.

(explanation: go/ga =3, pi/pa =1, bhag =4, ya =1, ma =5, dha =9, ra =2, ta =6 and so on.)

ಅಂದರೆ ನಮ್ಮ ಜನರಿಗೆ ಪೈ ವ್ಯಾಲ್ಯೂ 3.1415926535897932384626433832792 or 3.1416 ಎಂಬುದು ಮೊದಲೇ ಗೊತ್ತಿತ್ತು ಎಂದರ್ಥವಲ್ಲವೇ? ಅದನ್ನು ಇನ್ನಷ್ಟು ಖಚಿತವಾಗಿ ಹೇಳಿದ್ದು ಆರನೇ ಶತಮಾನದ ಆರ್ಯಭಟ ಎಂದು ಇತಿಹಾಸ ಹೇಳುತ್ತದೆ.

ಗೋವಾದಲ್ಲಿ ವಾಸ್ಕೋಡ ಗಾಮ ಎಂಬ ಸ್ಥಳವಿದೆ. ಇಂಡಿಯವನ್ನರಸುತ್ತ ಹೊರಟವರು ಇಬ್ಬರು ಯುರೋಪಿಯನ್ನರು. ಒಬ್ಬ ಕ್ರಿಸ್ಟೊಫರ್ ಕೋಲಂಬಸ್, ಅವ ಯುರೋಪ್ ನಿಂದ ಸೀದಾ ಮೇಲಕ್ಕೆ ಹುಡುಕುತ್ತ ಹೋಗಿ ಅಮೆರಿಕ ತಲುಪಿ ಅಲ್ಲಿನವರನ್ನು ಇಂಡಿಯನ್ನರು ಎಂದ. ಆದರೆ ಅವರು ಇಂಡಿಯನ್ನರಾಗಿರಲಿಲ್ಲ; ಬಣ್ಣ ಕೆಂಬಣ್ಣವಾಗಿದ್ದರಿಂದ ರೆಡ್ ಇಂಡಿಯನ್ಸ್ ಎನಿಸಿದರು.

ಇನ್ನೊಬ್ಬಾತ ಪುಕ್ಕಲು ವಾಸ್ಕೋಡಗಾಮ, ಸಮುದ್ರ ತೀರದಗುಂಟ ತೀರವನ್ನೇ ಗಮನಿಸುತ್ತ ಸಾಗುತ್ತ ಕೆಳಮುಖದಲ್ಲಿ ಹೊರಟಿದ್ದ. ಆಳದ ಸಮುದ್ರದೆಡೆಗೆ ತೆರಳಿ ಅದನ್ನು ದಾಟುವ ಸಾಹಸ ಮಾಡಿರಲಿಲ್ಲ. ಯುರೋಪ್ ನಲ್ಲಿ ಅಂದಿದ್ದ ಅತ್ಯಂತ ದೊಡ್ಡ ಹಡಗು ಎಂದರೆ ಅದು ವಾಸ್ಕೋಡ ಗಾಮ ಪ್ರಯಾಣಿಸಿದ್ದು.

ಭಾರತವನ್ನು ಕಾಣಬೇಕೆಂದರೆ ಸಮುದ್ರವನ್ನು ದಾಟಲೇಬೇಕಾಗಿತ್ತು. ಸಾಗರ ಕಿನಾರೆಗುಂಟ ಕೆಳಭಾಗಕ್ಕೆ ಸಾಗಿಬಂದವನಿಗೆ ಅಲ್ಲೊಬ್ಬ ಕಾನ್ಹಾ ಎಂಬ ಗುಜರಾತಿ ವ್ಯಾಪಾರಿ ಸಿಕ್ಕಿಬಿಟ್ಟ! ಆ ವ್ಯಾಪಾರಿಯಲ್ಲಿ ಹಲವು ಹಡಗುಗಳಿದ್ದವು. ಆ ಹಡಗುಗಳು ವಾಸ್ಕೋಡಗಾಮ ಪ್ರಯಾಣಿಸಿದ ಯುರೋಪಿನ ಅತಿದೊಡ್ಡ ಹಡಗುಗಳಿಗಿಂತ 12ಪಟ್ಟು ದೊಡ್ಡದಾಗಿದ್ದವು!!

ವಾಸ್ಕೋಡಗಾಮನ ವಿನಂತಿಯ ಮೇರೆಗೆ ಕಾನ್ಹಾ ಭಾಯಿ ಮುಂದೆ ದಾರಿತೋರಿಸಲೊಂದು ಮತ್ತು ರಕ್ಷಣೆಗೆ ಆಚೀಚೆ ಒಂದೊಂದು ಹಡಗನ್ನಿಟ್ಟುಕೊಂಡು ವಾಸ್ಕೋಡಗಾಮನ ಹಡಗನ್ನು ಗೋವಾಕ್ಕೆ ತಂದು ತಲುಪಿಸಿದ! ನಿಜವಾಗಿ ವಾಸ್ಕೋಡಗಾಮ ಎಂಬ ಸ್ಥಳಕ್ಕೆ ಆ ಹೆಸರು ಇಡೋದಕ್ಕಿಂತ ಭಾರತೀಯರು ಕಾನ್ಹಾನ ಹೆಸರನ್ನಿಟ್ಟು ಗೌರವಿಸಬೇಕಾಗಿತ್ತು. ಯಾಕೆ ಹಾಗಾಗಲಿಲ್ಲ ಎಂದು ಮುಂದೆ ತಿಳಿಯುತ್ತೀರಿ.

ಮಹರ್ಷಿ ಭಾರಧ್ವಾಜರ ವಿಮಾನಶಾಸ್ತ್ರ, ಗರ್ಗಮುನಿಯ ನಕ್ಷತ್ರಶಾಸ್ತ್ರ, ವಿಶ್ವಾಮಿತ್ರರ ಕ್ಷಿಪಣಿ-ಶಸ್ತ್ರಾಸ್ತ್ರ ಶಾಸ್ತ್ರ, ಸುಶ್ರುತರ ಶಲ್ಯ[ಶಸ್ತ್ರ]ಚಿಕಿತ್ಸಾಶಾಸ್ತ್ರ, ಚರಕರ ಚರ್ಮರೋಗ ನಿವಾರಣಾ ಶಾಸ್ತ್ರ, ಕಣಾದರ ಅಟಾಮಿಕ್ ಥಿಯರಿ, ಕಪಿಲರ ಕಾಸ್ಮಾಲಜಿ, ಚಾಣಕ್ಯರ ರಾಜನೀತಿ ಶಾಸ್ತ್ರ, ಭಾಸ್ಕರರ ಲೀಲಾವತಿ ಗಣಿತ ಮತ್ತು ಗುರುತ್ವಾಕರ್ಷಣ ಶಾಸ್ತ್ರ, ಆರ್ಯಭಟದ ಗಣಿತ ಸಿದ್ಧಾಂತ, ನಾಗಾರ್ಜುನರ ರಸಾಯನ ಶಾಸ್ತ್ರ ಇವೆಲ್ಲವುಗಳ ಹುಟ್ಟಿನ ಹಿಂದೆ ಯೋಗ-ಧ್ಯಾನಗಳ ಪರಿಣಾಮವಿದೆ, ಬ್ರಹ್ಮಚರ್ಯದ ಜೀವನಭಾಗವಿದೆ. ಕಾಲಾನಂತರ ಇವರ ಶೋಧನೆಗಳನ್ನೆಲ್ಲ ಪರಕೀಯರು ತಮ್ಮದೆಂದು ಹೇಳಿಕೊಂಡಿದ್ದು ಬಹುದೊಡ್ಡ ವಿಪರ್ಯಾಸ.

ಜಗತ್ತಿನ ಉಳಿದ ಭೂಭಾಗಗಳ ಜನಾಂಗ ಇಂದು ಅಪರೂಪಕ್ಕೆ ಕಾಣುವ ಬುಡಕಟ್ಟು ಜನಾಂಗಗಳಂತೆ ವಿಷಪೂರಿತ ಬಾಣಗಳನ್ನು ಬಿಟ್ಟು ಬೇಟೆಯಾಡಿ ಬದುಕುತ್ತಿದ್ದ ಕಾಲದಲ್ಲೇ ಭಾರತದಲ್ಲಿ ನಮ್ಮ ಜನ ಸತುವನ್ನು ತಯಾರಿಸುತ್ತಿದ್ದರು! ಕಾಲಗಣನೆ, ಖಗೋಲಕಾಯಗಣನೆ ಎಲ್ಲವನ್ನೂ ನಡೆಸಿದ್ದರು!

ಹಾಗಾದರೆ ಭಾರತ ಹೇಗೆ ಮತ್ತು ಯಾಕೆ ಅಷ್ಟೆಲ್ಲ ಮುಂದುವರಿದಿತ್ತು? ಹೇಗೆಂದರೆ ಅಂದಿನ ನಮ್ಮ ವಿಜ್ಞಾನಿಗಳೆಲ್ಲ ಋಷಿಮುನಿಗಳಾಗಿದ್ದರು. ಯೋಗ-ಧ್ಯಾನಗಳಲ್ಲಿ ಉತ್ತುಂಗವನ್ನೇರಿ ಶರೀರವಿಲ್ಲದೆಯೇ ಎಲ್ಲೆಲ್ಲಿಗೋ ಪ್ರಯಾಣಿಸಬಲ್ಲ ವಿಶಿಷ್ಟ ತಾಕತ್ತನ್ನು ಪಡೆದಿದ್ದರು. ಧ್ಯಾನಕ್ಕೆ ಕುಳಿತು ಕ್ಷೀರಪಥವನ್ನೇ ಸುತ್ತಬಲ್ಲವರಾಗಿದ್ದರು! ಮಂಗಳ ಗ್ರಹವನ್ನು ಭಾರತೀಯರು ಇಂದು ತಲುಪಿದ್ದಲ್ಲ-ಅಂದೇ ತಲುಪಿದ್ದಾರೆ, ಆದರೆ ಅದು ಬೇರೆ ರೂಪದಲ್ಲಷ್ಟೆ!

ಮಂಗಳವೊಂದೇ ಏಕೆ ಸೂರ್ಯನೊಳಗೇನಿದೆ ಎಂಬುದನ್ನೂ ಅವರು ಬಲ್ಲರು! ಆದರೆ ಕಂಡಿದ್ದೆಲ್ಲವನ್ನೂ ಹೇಳುವುದಕ್ಕೆ ಸೃಷ್ಟಿಕರ್ತನ ಷರತ್ತುಗಳಿದ್ದವು.ಹಾಗಾಗಿ ಎಲ್ಲವನ್ನೂ ಅವರು ಹೇಳಲು ಸಾಧ್ಯವಾಗಲಿಲ್ಲ. ಹೇಳಿದ ಸೂತ್ರಗಳನ್ನೂ ನಮ್ಮ ಪ್ರಾಚೀನ ಭಾರತದ ಮೂಲ ಇತಿಹಾಸವನ್ನೂ ಬ್ರಿಟಿಷರು ತಿರುಚಿಹಾಕಿಬಿಟ್ಟರು!

1835ರಲ್ಲಿ ಮೆಕಾಲೆ ತನ್ನ ವರದಿಯಲ್ಲಿ ಭಾರತದ ಬಗ್ಗೆ ಹೇಳಿದ್ದನ್ನೇ ನೋಡಿ-“ತನ್ನದೇ ಆದ ಉನ್ನತ ಸಂಸ್ಕೃತಿ ಸಂಪ್ರದಾಯಗಳನ್ನು ಹೊಂದಿರುವ ಭಾರತದಲ್ಲಿ ಒಬ್ಬನೇ ಒಬ್ಬ ಬಡವನನ್ನೂ ಕಾಣಲಿಲ್ಲ. ಆ ದೇಶವನ್ನು ಹಾಳುಮಾಡಬೇಕೆಂದರೆ ಅಲ್ಲಿನ ಭಾಷೆಯನ್ನು ಬುಡಮೇಲು ಮಾಡಬೇಕು. ಅಲ್ಲಿನ ಸಂಸ್ಕೃತಿಯನ್ನು ಪದಚ್ಯುತಗೊಳಿಸಬೇಕು.”

ಬ್ರಿಟಿಷರು ಹೊಕ್ಕ ಭಾರತ ಮಂಗಗಳು ಹೊಕ್ಕ ಬಾಳೆಯ ತೋಟಕ್ಕಿಂತ ಅಸಹ್ಯವಾಗಿಬಿಟ್ಟಿತು. ನಮ್ಮ ಜನರಲ್ಲಿ ಆರ್ಯರು-ದ್ರಾವಿಡರು ಎಂಬ ಭೇದಭಾವಗಳನ್ನು ಹುಟ್ಟುಹಾಕಿದರು. ಜಾತೀಯತೆಯನ್ನು ಸೃಷ್ಟಿಸಿದರು. ಜಮೀನ್ದಾರಿ ಪದ್ದತಿಯನ್ನು ಜಾರಿಗೆ ತಂದರು. ಜನಾಂಗಗಳ ನಡುವೆ ಅಂತರವನ್ನು ಹೆಚ್ಚಿಸಿದರು. ಗುಣಕರ್ಮಗಳಿಂದ ವರ್ಣಾಶ್ರಮಗಳೆನಿಸಿದ್ದ ಜನಾಂಗಗಳ ನಡುವೆ ಸಾಮರಸ್ಯ ಹಾಳಾಗುವಂತೆ ಮಾಡಿದರು. ಸಂಬಂಧಗಳು ಹಳಸುವಂತೆ ನೋಡಿಕೊಂಡರು.

ಭಾರತದ ಎಷ್ಟೋ ಸ್ಥಳಗಳಿಗೆ ಬ್ರಿಟಿಷ್ ಹೆಸರುಗಳನ್ನು ಇಟ್ಟರು. ಮಿಶನರಿಗಳನ್ನು ಬಿಟ್ಟು ಮತಾಂತರ ಮಾಡಿದರು. ಒಂದೇ ಮತಧರ್ಮವನ್ನು ಹೊಂದಿದ್ದ ರಾಷ್ಟ್ರದಲ್ಲಿ ಭಿನ್ನ ಮತಗಳು ಭುಗಿಲೇಳುವಂತೆ ಮಾಡಿದರು; ಪರಸ್ಪರ ಕಚ್ಚಾಡುವಂತೆ ಮಾಡಿದರು.

ಮಧ್ಯೆ ತಕ್ಕಡಿ ಹಿಡಿದು ನಿಂತ ಮಂಗ ಬೆಣ್ಣೆ ತೂಗುವ ನೆಪದಲ್ಲಿ ಬೆಕ್ಕುಗಳಿಗೆ ನಾಮವಿಕ್ಕಿದಂತೆ ಇಲ್ಲಿನ ಸಂಪತ್ತನ್ನೆಲ್ಲ ಸೂರೆಗೈದರು. ಉತ್ತಮೋತ್ತಮ ಐತಿಹಾಸಿಕ, ಚಾರಿತ್ರಿಕ ಗ್ರಂಥಗಳಲ್ಲಿ ಬಹಳಷ್ಟನ್ನು ಹೊತ್ತೊಯ್ದರು. ಹಲವನ್ನು ಸುಟ್ಟುಹಾಕಿದರು. ತಮ್ಮ ಆಡಳಿತವನ್ನು ಬಿಟ್ಟುಕೊಟ್ಟು ದೇಶದಿಂದ ಹೊರಹೋಗುವಾಗ ದೇಶವನ್ನು ವಿಭಜನೆ ಮಾಡಿಸಿಯೇ ಹೋದರು!

ಅವರ ಅಧಿಕಾರಾವಧಿಯಲ್ಲಿ ನಮ್ಮ ಜನ ಇಲ್ಲಿನ ಮೂಲ ದೇಶಭಾಷೆಯಾದ ಸಂಸ್ಕೃತವನ್ನು ಬಳಸುವ ಹಾಗಿರಲಿಲ್ಲ. ಸಂಸ್ಕೃತ ಓದದ ಜನರಿಗೆ ನಮ್ಮ ನೈಜ ಇತಿಹಾಸ ತಿಳಿಯಲಿಲ್ಲ; ನಮ್ಮ ಸಂಸ್ಕೃತಿಯ ಬಗ್ಗೇ ಸಂದೇಹ ಬೆಳೆಯುತ್ತ ಹೋಯಿತು. ಅಪ್ಪ-ಅಮ್ಮ ಹರುಕು ಬಟ್ಟೆಯನ್ನು ತೊಟ್ಟರೆ ಅಪ್ಪ-ಅಮ್ಮನೆನ್ನಲು ಅಸಹ್ಯಪಡಬೇಕೇ? ಅಸಹ್ಯಪಡುವಂತೆ ಮಾಡಿದವರು ಬ್ರಿಟಿಷರು. ಹಾಗಂತ ಅಪ್ಪ-ಅಮ್ಮ ಹರುಕು ಬಟ್ಟೆ ತೊಡುವ ಸ್ಥಿತಿ ಅಂದಿಗಿರಲಿಲ್ಲ; ಅಂತಹ ಸ್ಥಿತಿಯನ್ನು ತಂದಿಟ್ಟವರೂ ಅವರೇ.

ಯೋಗ-ಧ್ಯಾನ ಇವುಗಳ ಬಗೆಗೆ ಅಸಹ್ಯಪಡುವಂತೆ ಮಾಡಿದ ಆ ಜನ ನಮ್ಮ ಶಾಲೆಗಳಲ್ಲಿ ಫಿಸಿಕಲ್ ಟ್ರೇನಿಂಗ್ [ದೈಹಿಕ ವ್ಯಾಯಾಮ] ತುರುಕಿದರು. ಬ್ರಿಟಿಷ್ ಪ್ರೇರೇಪಿತ ಭಾರತದಲ್ಲಿ ಅವರು ಹೇಳಿದ ವಿಷಯಗಳನ್ನು ಓದಿಕೊಂಡ ನಮ್ಮಜನ, ನಮ್ಮಲ್ಲಿನ ಎಲ್ಲವನ್ನೂ ಕಂಡು ಅಸಹ್ಯಪಟ್ಟುಕೊಳ್ಳುವಂತೆ ಮಾಡಿದರು. ನಮ್ಮ ಜನ ಸಂಸ್ಕೃತವನ್ನು ಕಲಿಯಲಿಲ್ಲ, ಯೋಗ-ಧ್ಯಾನಗಳನ್ನು ಕೈಬಿಟ್ಟರು. ನಮ್ಮಲ್ಲಿನ ಸಂಸ್ಕೃತಿಗೆ ಅಪಾರ ಹೊಡೆತ ಬಿತ್ತು. ನಮ್ಮಜನರಲ್ಲಿದ್ದ ಪ್ರೌಢಿಮೆ ಮತ್ತು ವಿಶಿಷ್ಟ ಶಕ್ತಿಗಳು ಕಳೆಗುಂದಿದವು;ಕಳೆದುಹೋದವು.

ಇಲ್ಲಿರುವಾಗ ಅವರಲ್ಲಿನ ಪಂಡಿತರು, ಸಂಶೋಧಕರು ಸಂಸ್ಕೃತವನ್ನು ಕಲಿತರು. ಹೊತ್ತೊಯ್ದ ಹಣ್ಣು-ಕಾಯಿಗಳನ್ನು ಮರದಮೇಲೆ ಕುಳಿತು ನಿಧಾನವಾಗಿ ಭಕ್ಷಿಸುವ ಮಂಗನಗಳಂತೆ, ನಮ್ಮಲ್ಲಿಂದ ಕದ್ದೊಯ್ದ ಮೂಲಗ್ರಂಥಗಳನ್ನೆಲ್ಲ ಬಳಸಿಕೊಂಡು, ತಾವೇ ಕಂಡು ಹಿಡಿದದ್ದೆಂದರು. ತೀರಾ ಇತ್ತೀಚಿನವರೆಗೂ ಯೋಗವೂ ತಮ್ಮದೇ ಆಯುರ್ವೇದವೂ ತಮ್ಮದೇ ಎನ್ನುತ್ತಿದ್ದರು!

ಇಲ್ಲಿ ಡಾ. ಪಿ. ವಿ. ವರ್ತಕ್ ಎಂಬವರ ರಾಮಾಯಣದ ಸಂಶೋಧನೆಗಳನ್ನು ಮರೆಯುವ ಹಾಗಿಲ್ಲ. ವಿಮಾನಗಳೇ ಇಲ್ಲದ ಆ ಕಾಲದಲ್ಲಿ ಮಹರ್ಷಿ ವಾಲ್ಮೀಕಿಗೆ ಭಾರತದ ವಿವಿಧ ಭೂಭಾಗಗಳ ಪಕ್ಷಿನೋಟ [ಡ್ರೋನ್ ವೀವ್] ಸಿಕ್ಕಿದ್ದು ಹೇಗೆ? ಮತ್ತು ಅಲ್ಲಿ ಪ್ರಸ್ತಾಪಿಸಿದಂತೆ ತೇಲುವ ಕಲ್ಲುಗಳು, ರಾಮ ಸೇತು ಇಂದಿಗೂ ಕಾಣುತ್ತಿವೆಯಲ್ಲ!

ಇತಿಹಾಸ ಸಂಶೋಧಕ ದಿ. ಎಸ್. ಆರ್. ರಾವ್ ಅವರು ಸಮುದ್ರದಲ್ಲಿ ಮುಳುಗಿರುವ ಶ್ರೀಕೃಷ್ಣನ ದ್ವಾರಕೆಯನ್ನು ಚಿತ್ರೀಕರಿಸಿ ತೋರಿಸಿದ್ದಾರೆ. ಮುಳುಗುವ ಅರ್ಧಘಳಿಗೆಯ ಮುನ್ನ ಶ್ರೀಕೃಷ್ಣ ಅದನ್ನು ತಿಳಿಸಿ ಅಲ್ಲಿರುವವರಿಗೆ ಬೇರೆಡೆಗೆ ತೆರಳುವಂತೆ ಹೇಳಿದ್ದ! ರಾಮಾಯಣ ಮಹಾಭಾರತಗಳು ಕೇವಲ ಕಾಲಕ್ಷೇಪಕ್ಕಾಗಿ, ರಂಜನೆಗಾಗಿ ಇರುವ ಕತೆಗಳಲ್ಲ; ಅವು ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿದ ಐತಿಹಾಸಿಕ ಘಟನೆಗಳು.

ಗೀತೆಯಲ್ಲಿ ಜಗತ್ತಿನ ಕುರಿತು ಕೃಷ್ಣ ಹೇಳಿದ್ದೂ ಇದನ್ನೇ-ಇದು ಹೀಗೇ ಇರುವುದಿಲ್ಲ; ಇದು ಬದಲಾಗುತ್ತಿರುತ್ತದೆ. ನಿನ್ನೆ ಯಾರದ್ದೋ ಆಗಿದ್ದು ಇಂದು ನಿನ್ನದಾಗಿದೆ, ನಾಳೆ ಇನ್ನಾರದ್ದೋ ಆಗಲಿದೆ; ಹಾಗಾಗಿ ಇದು ನಿನ್ನದೇ ಎಂಬ ವ್ಯಾಮೋಹ ಬೇಡ. ಮಾಯಾ ಜಗತ್ತಿನ ಕುರಿತು ಡಿವಿಜಿ ಹೀಗೆ ಹೇಳ್ತಾರೆ:

ಚಲನೆ ವಿಶ್ವಾಸ್ತರಣೆಯದುವೆ ಮಾಯಾಭ್ರಮಣೆ |
ಸಲೆ ಬಗೆಯಲದು ಪರಬ್ರಹ್ಮ ವಿಸ್ಫುರಣೆ |
ಥಳಥಳಿಕೆ ವಜ್ರದಲಿ ನೈಜವಿರುವಂತೆಯು |
ಜ್ಜ್ವಲತೆ ಬೊಮ್ಮಗೆ ನೈಜ – ಮಂಕುತಿಮ್ಮ ||

ಹಿಂದಿನಿಂದ ಇಂದಿನವರೆಗಿನ ಈ ದೇಶದ ಸುಸಂಸ್ಕೃತರನ್ನು, ಕರ್ಮಠರನ್ನು, ಶ್ರಮಿಕರನ್ನು ಕಂಡಾಗ ತುಮರಿಗೆ ಎಲ್ಲೆಲ್ಲೂ ಭಗವಂತನೇ ಕಾಣುತ್ತಾನೆ. ಅಂದಿನ ಋಷಿಮುನಿಗಳಿರಬಹುದು, ಇಂದಿನ ಭಾರತೀಯ ದಾರ್ಶನಿಕರಿರಬಹುದು, ದುಡಿಮೆಯಲ್ಲಿ ದೇಶಕಟ್ಟುವ ಪ್ರಾಮಾಣಿಕ ರೈತರು, ಸೈನಿಕರು, ಕೆಲಸಗಾರರೇ ಇರಬಹುದು, ಎಲ್ಲರೊಳಗೂ ಹೊರಗೂ, ಎಲ್ಲದರ ಒಳಗೂ ಹೊರಗೂ ಪರಮಾತ್ಮನಿದ್ದಾನೆ.

ಜೊತೆಗೆ ಇತಿಹಾಸ ಭಂಜಕರು, ಭಾರತ ಭಂಜಕರು, ವಿದೇಶೀಯರು ಎಲ್ಲರಲ್ಲೂ ಸಹ ಅವನೇ ನಿಂತು ಆಟವಾಡಿಸುತ್ತಿದ್ದಾನೆ. ಜಗತ್ತೇ ಅವನ ನಾಟಕವೆನ್ನುವಾಗ ಆಡುವುದನ್ನು ಪ್ರಶ್ನಿಸುವ ಪ್ರಮೇಯ ಬರೋದಿಲ್ಲ. ಇದನ್ನರಿತೇ ಹಿಂದಿನಜನ ವಸುಧೇಯೇ ಕುಟುಂಬ “ವಸುಧೈವ ಕುಟುಂಬಕಮ್” ಎಂದಿದ್ದಾರೆ. ಪ್ರಾಯಶಃ ಇದನ್ನೆಲ್ಲ ಅನ್ಯದೇಶಿಗರೂ ಅರಿಯುವ ಬುದ್ಧಿಮಟ್ಟಕ್ಕೆ ತಲುಪಿದ್ದರೆ ಯುದ್ಧಗಳು, ಗಡಿತಂಟೆಗಳು, ಮತಾಂಧರ ಭಯೋತ್ಪಾದನೆಗಳು ಇರುತ್ತಿರಲಿಲ್ಲ. “ಅರಿತುಕೊಳ್ಳಿ” ಎಂದು ಸ್ವಾಮಿ ವಿವೇಕಾನಂದರು ಕರೆಕೊಟ್ಟರೂ ಪ್ರಯೋಜನವಾಗಲಿಲ್ಲ.

ವಿವೇಕಾನಂದರಂತಹ ಪುಣ್ಯಾತ್ಮರನ್ನೇ ಟೀಕಿಸಿ, ಅವರ ವೈಯಕ್ತಿಕತೆಗಳನ್ನು ಹೇಳಿ ನಿಂದಿಸುವ ಗಂಜಿಪಡಿಯವರು ನಮ್ಮಲ್ಲಿ ಹುಟ್ಟಿಕೊಂಡದ್ದು ಬ್ರಿಟಿಷ್ ಸಂಸ್ಕೃತಿಯ ಪಳೆಯುಳಿಕೆಗಳಿಂದ. ಅದೇ ಗಂಜಿಪಡಿಯ ಗುಂಪು ವಿದೇಶೀಯರಂತೆ ವರ್ತಿಸುತ್ತ, ದೇಶದ ಮೂಲ ಇತಿಹಾಸವನ್ನು ಅರಿಯದೆ, ತಿರುಚಿದ್ದನ್ನೇ ಸರಿಯೆಂದು ಸಮರ್ಥಿಸಿಕೊಳ್ಳುತ್ತ, ದೇಶದ್ರೋಹಿಗಳಿಗೆ ಬೆಂಬಲ ನೀಡುವವರೆಗೂ ಹೋಗಿ, ತಮ್ಮ ಗಂಜಿಯನ್ನು ಹುಟ್ಟಿಸಿಕೊಳ್ಳುತ್ತಿರೋದು ಗೊತ್ತಿರದ ವಿಷಯವೇನಲ್ಲ.

ಲಕ್ಷಾಧಿಕ ವರ್ಷಗಳ ಹಿಂದೆ ಕಾಶಿಯನ್ನು ಕೇಂದ್ರವಾಗಿಸಿಕೊಂಡು ಗಂಗಾನದಿಯ ದಡದಲ್ಲಿ ಬೆಳೆದುಬಂದ ಭಾರತೀಯ ಸಂಸ್ಕೃತಿಯ ಮೇಲೆ, ವಿದೇಶೀ ಮತಧರ್ಮಗಳ ಆಕ್ರಮಣ ನಡೆದರೂ, ಸಹ್ಯ ಶಕ್ತಿಯನ್ನು ಒಗ್ಗೂಡಿಸಿಕೊಂಡ ಧರ್ಮ ತನ್ನತನವನ್ನು ಕಳೆದುಕೊಳ್ಳಲಿಲ್ಲ.

ಇತಿಹಾಸದುದ್ದಕ್ಕೂ, ಜಗತ್ತಿನಾದ್ಯಂತ ಯಾವ್ಯಾವುದೋ ದೊಣ್ಣೆನಾಯಕರು ಹಲವಾರು ಮತಧರ್ಮಗಳನ್ನು ಸ್ಥಾಪಿಸಿ, ಹಾಕಿದ ಗೆರೆಗೆ ತಕ್ಕಂತೆ ನಡೆದುಕೊಳ್ಳುವಂತೆ ಜನರಿಗೆ ತಾಕೀತು ಮಾಡುತ್ತಲೇ ಬಂದಿದ್ದಾರೆ. ಅಂತಹ ಹಲವಾರು ಮತಧರ್ಮಗಳು ಇಂದಿಗಿಲ್ಲ. ಯಾವುದೇ ಒಬ್ಬನಿಂದ ಸ್ಥಾಪಿತವಾಗಿರದ ಹಿಂದೂ ಸನಾತನ ಧರ್ಮ, ಅನ್ಯ ಮತಗಳ ದಬ್ಬಾಳಿಕೆಯನ್ನು ಸಹಿಸಿಯೂ ಇನ್ನಷ್ಟು ಉಚ್ಛ್ರಾಯ ಸ್ಥಿತಿಗೆ ತಂತಾನೇ ಏರುವುದರಲ್ಲಿ ಸಂಶಯವಿಲ್ಲ.

ಯಾವ ನೆಲದಲ್ಲಿ ಚರಕ, ಸುಶ್ರುತಾದಿ ಮುನಿಗಳು 3,000 ವರ್ಷಗಳ ಹಿಂದೆಯೇ ಶಸ್ತ್ರಚಿಕಿತ್ಸೆ ನಡೆಸಿದರೋ, ಅದೇ ನೆಲದಲ್ಲಿ ಇಂದು ಬುದ್ಧಿವಂತರೆನಿಸಿದ ಜನಾಂಗದ ಅಂಡೆಪಿರ್ಕಿಗಳು ಅತ್ಯಾಚಾರಿಯನ್ನು ಸ್ವಾಮಿ ಎಂದು ಪೀಠದಲ್ಲಿಟ್ಟು ಆರಾಧಿಸುತ್ತಿದ್ದರೆ, ಉಳಿದವರು ಅದನ್ನು ನೋಡುತ್ತ ಕೈಕಟ್ಟಿಕೂರುವ ಹೇಡಿಗಳಾಗಿಬಿಟ್ಟರು, ದಡ್ಡಶಿಖಾಮಣಿಗಳಾಗಿಬಿಟ್ಟರು.

ಶಿಷ್ಯವರ್ಗಕ್ಕೆ ನಮ್ಮ ಸಂಸ್ಕೃತಿ-ಸಲ್ಲಾಪಗಳ ಬಗ್ಗೆ, ನಮ್ಮ ಧರ್ಮದ ಬಗ್ಗೆ ಪರಿಪೂರ್ಣ ಮಾಹಿತಿಯನ್ನು ಆಚರಣೆಗಳ ಮೂಲಕ ತೋರಿಸಬೇಕಾದ ಆಚಾರ್ಯ, ಕಚ್ಚೆಬಿಚ್ಚುವ ಕೀಳು ಕಸುಬಿಗಿಳಿದುಬಿಟ್ಟ; ಯಾರೋ ಕೆಲವರು “ಅದು ಧರ್ಮಮಾರ್ಗವಲ್ಲ, ನೀನು ಸನ್ಯಾಸಿಯಾಗಿ ಉಳಿದಿಲ್ಲ” ಎಂದರೆ ಅವರ ವಿರುದ್ಧ ಚೇಲಾಗಳನ್ನು ಛೂ ಬಿಟ್ಟು ಹೊಡೆಸುವ ಕ್ರಿಮಿನಲ್ಲಾಚಾರ್ಯನಾಗಿಬಿಟ್ಟ.

ಮಠದೊಳಗಿನ ಮತ್ತು ತತ್ಸಂಬಧಿತ ಸಮಾಜದೊಳಗಿನ ತನ್ನ ಅಧೋಗತಿಯನ್ನು ನೆನೆದು ಧರ್ಮವೇ ಕಣ್ಣೀರಿಡುತ್ತಿರುವಾಗ, ವ್ಯಕ್ತಿ ಪೂಜಕರಾದ ಕೆಲವು ವಿದ್ವಾಂಸರು ಕ್ರಿಮಿನಲ್ಲಾಚಾರ್ಯನ ಪರವಾಗಿ ನಿಂತರು, ಇನ್ನೂ ಕೆಲವರು ಬೆದರಿಕೆಗಳಿಂದ, ಇನ್ನಷ್ಟು ಜನ ಆಮಿಷಗಳಿಂದ ಅವನ ಪರವಾಗಿ ನಿಂತರು. ಸಾಮಾಜಿಕ ತಾಣಗಳಲ್ಲಿ ಆ ’ಮಹಾಮುನಿ’ಯ ಜಾಲತಾಣಿಗರ ವಲಯ ಬಳಸುವ ಶಬ್ದಗಳು, ಬರೆಯುವ ವಾಕ್ಯಗಳು ಕಚ್ಚೆಹರುಕನ ಸರ್ವಲಕ್ಷಣಗಳನ್ನೂ ನಿತ್ಯ ಸಾದರಪಡಿಸುತ್ತವೆ. ಯಾವ ಸಭೆ, ಗೋಷ್ಠಿ, ಯಾತ್ರೆಯೂ ತೊನೆಯಪ್ಪನ ’ಸುಭಗತನ’ವನ್ನು ಮುಚ್ಚಿಹಾಕಲು ಸಾಧ್ಯವಿಲ್ಲ.

ಮೊದಲನೆಯ ದೂರು ದಾಖಲಾಗಿ ಹೋರಿಸ್ವಾಮಿಯನ್ನು ಮಾವಂದಿರು ಎತ್ತಾಕ್ಕೊಂಡ್ಹೋಗಿ ಒಳಗೆ ಹಾಕದಂತೆ ಗಡಿಗೆ ಭಟ್ಟರು ನಿದ್ದಣ್ಣನ ಜೊತೆಗೆ 50 ಕೋಟಿ ಡೀಲ್ ಕುದುರಿಸಿಕೊಟ್ಟುಬಿಟ್ಟರು! ಅದಿಲ್ಲದಿದ್ದರೆ ಅವ ಒಳಗೆ ಚತುರ್ಮೋಸ ನಡೆಸುತ್ತ ಬುಲ್ ಪೀನದಲ್ಲಿ ಕಾಳಿಂಗನನ್ನು ಆಡಿಸಬೇಕಾಗಿತ್ತು. ಕಪಟ ಸನ್ಯಾಸಿಗಳೆಲ್ಲ ಬೆಚ್ಚಿಬೀಳುತ್ತಿದ್ದರು. ಸಮಾಜಕ್ಕೆ ಒಳಿತಾಗುತ್ತಿತ್ತು.

ಮಠದ ಕಟ್ಟಡಕ್ಕೆ ಹಾಕಿದ ಹಣ ಮರಳಿ ಸಿಗುತ್ತದೆಂದ ವಿಶ್ವಾಸದಿಂದ ಸದ್ಗುಣಿ ಭಟ್ಟರು ಕೈಕಟ್ಟಿ ಕೂತುಬಿಟ್ಟರು! ಅವರು ಮೊದಲೇ ಮಠದಿಂದ ಹೊರಗೆ ಬಂದು, ಹರಾಮಿಯ ಅನೈತಿಕ ಚಟುವಟಿಕೆಗಳನ್ನು ಬಹಿರಂಗವಾಗಿ ಹೇಳಿದ್ದರೆ ಸಮಾಜದ ಹಲವು ಮಂದಿ ಅವರನ್ನು ನೋಡಿ ತಿದ್ದಿಕೊಳ್ಳುತ್ತಿದ್ದರು.

ಮನೆತನಕ್ಕೆ ಮಠದ ಸ್ವಾಮಿಯನ್ನು ಬಂಧಿಸಿದ ಕೆಟ್ಟಹೆಸರು ಬರುತ್ತದೆಂದು banana ಕುಟುಂಬದವರು ಸುಮ್ಮನಿದ್ದುಬಿಟ್ಟರು; ಅದಿಲ್ಲದಿದ್ದರೆ ಇಡೀ ದೇಶದ ಕಳ್ಳಕಾವಿಧಾರಿಗಳು ಕಾವಿ ತೆಗೆದಿಟ್ಟು ದುಡಿದು ಜೀವಿಸೋದನ್ನು ಕಲಿಯುತ್ತಿದ್ದರು; ಜೊಳ್ಳುಗಳೆಲ್ಲ ಹೋಗಿ ನಿಜವಾದ ಸನ್ಯಾಸಿಗಳು ಮಾತ್ರ ಮುಂದುವರಿಯುತ್ತಿದ್ದರು.

ಹೀಗೇ ಕಾರಣಾಂತರಗಳಿಂದ ತೊನೆಯಪ್ಪ ಒಬ್ಬೊಬ್ಬ ಮುಖಂಡರಿಂದಲೂ ಉಪಕಾರ ಪಡೆದುಕೊಂಡು, ತನ್ನ ನಡತೆಯನ್ನು ಅವರೆಲ್ಲ ವಿರೋಧಿಸಿದಾಗ ಅವರನ್ನೇ ಹೀನಾಯವಾಗಿ ಜರಿಯತೊಡಗಿದ; ಅವನ ಜಾಲತಾಣಿಗ ವಲಯ ಅವಾಚ್ಯ ಪದಗಳಿಂದ ಧಮಕಿ ಹಾಕುತ್ತ ಈಗಲೂ ಅವರನ್ನೆಲ್ಲ ಬೈಯುತ್ತಿದೆ.

ಭಕ್ತರು ಕೊಟ್ಟ ಕಾಣಿಕೆ, ದೇಣಿಗೆ, ಬಂಗಾರ ಎಲ್ಲವೂ ಒಟ್ಟಾಗಿ ಸುಮಾರು 200 ಕೋಟಿಗೂ ಮೀರಿದ ಹಣ ತೊನೆಯಪ್ಪನ ವ್ಯಭಿಚಾರದ ಕೇಸು ಮುಚ್ಚಿಹಾಕುವ ಸಲುವಾಗಿ ಬಳಕೆಯಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ತೊನೆಯಪ್ಪನ ಕಚ್ಚೆಹರುಕಿನ ಚೊಚ್ಚಲು ಹಾರಾಟ ದಶಕದ ಹಿಂದೆಯೇ ನಡೆದಿದೆ. ವಿಧಿಯಿಚ್ಛೆಯಂತೆ ಸರಿಯಾದವರ ಕೈಯಲ್ಲೇ ಸಿಕ್ಕಾಕಿಕೊಂಡು ಮೊದಲ ಕೇಸು ದಾಖಲಾಗಿದೆ. ಸುಮಾರಿನ ಬಡ-ಬತ್ತುಗಳಾಗಿದ್ದರೆ ಅವರ ವಂಶವನ್ನೇ ನಿರ್ವಂಶಮಾಡಬಲ್ಲ ಗೂಂಡಾಸ್ವಾಮಿಗೆ ತಕ್ಕ ಶಾಸ್ತಿ ಆಯಿತು.

ಗಂಜಿಗೆ ಗತಿಯಿಲ್ಲದ ಅಡ್ಡಗೇಟುಗಳೆಲ್ಲ ಸಖತ್ತಾಗಿ ಕಾಸು ಮಾಡಿಕೊಂಡು ಬೆಂಗಳೂರಿನಲ್ಲೂ ಸೈಟುಗಳನ್ನೂ ಮನೆಗಳನ್ನೂ ಮಾಡಿಕೊಂಡರು ಎಂದು ಅದನ್ನೆಲ್ಲ ತಿಳಿದವರೊಬ್ಬರು ಹೇಳಿದ್ದಾರೆ. ಸೇಫ್ಟಿಗಾಗಿ ತೊನೆಯಪ್ಪನಲ್ಲಿಟ್ಟ ತಮ್ಮ ಕಪ್ಪುಹಣದ ರಕ್ಷಣೆಗಾಗಿ ಟೊಂಕಕಟ್ಟಿನಿಂತ ರಾಜಕಾರಣಿಗಳು ತೊನೆಯಪ್ಪ ಜೈಲುಪಾಲಾದರೆ ತಮ್ಮ ಹಣದಗತಿ ಏನಾಗಬಹುದೆಂಬ ಆತಂಕದಿಂದ ಕೆಲವು ಹಂತಗಳಲ್ಲಿ ರಕ್ಷಿಸೋದಕ್ಕೆ ಮುಂದಾಗಿದ್ದಾರೆ.

ಅತ್ಯದ್ಭುತ ಇತಿಹಾಸವನ್ನು ಹೊಂದಿದ ದೇಶದ ಉನ್ನತ ಸಂಸ್ಕೃತಿ ಹಿನ್ನೆಲೆಯ ಬುದ್ಧಿವಂತ ಮತ್ತು ಉತ್ಕೃಷ್ಟ ಸಮಾಜವಾಗಿ ಯೋಚಿಸಬೇಕಾದ ಜನ, ತಮ್ಮ ಯೋಚನಾ ಶಕ್ತಿಯನ್ನೇ ಕಳೆದುಕೊಂಡು ತೊನೆಯಪ್ಪನನ್ನೇ ಪೀಠದಲ್ಲಿ ಜಗದ್ಗುರುವೆನ್ನುತ್ತ ಜೈಕಾರ ಹಾಕೋದು ಬಹುದೊಡ್ಡ ಅನಾಹುತ; ಈ ಅನಾಹುತ ಮುಂದೆ ಹಲವು ಅನಾಹುತಗಳಿಗೆ ಕಾರಣವಾಗುವ ಮೊದಲು ಸಂಬಂಧಪಟ್ಟವರು ಕ್ರಿಮಿನಲ್ಲಾಚಾರ್ಯರನ್ನು ಎಳೆದುಹಾಕಬೇಕು, ಯಾಕೆಂದರೆ ಅದು ಲೌಕಿಕ ಕಾನೂನಿಗೆ ಅರ್ಥವಾಗದ ಗಹನವಾದ ಧಾರ್ಮಿಕ ವಿಷಯ; ಆಧ್ಯಾತ್ಮದ ವಿಷಯ.

Thumari Ramachandra

source: https://www.facebook.com/groups/1499395003680065/permalink/1816940731925489/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s