ಒಂದು ಚಿಂತನೆ:

ಒಂದು ಚಿಂತನೆ:

ಹವ್ಯಕ ಸಮಾಜದ ಅತ್ಯಂತ ಶ್ರೇಷ್ಠ ಗುರುಪೀಠವೊಂದರಲ್ಲಿ ನಡೆಯುತ್ತಿರುವ ಅಪಸವ್ಯಗಳಿಂದಾಗಿ ಮತ್ತು ಅಲ್ಲಿ ಪೀಠಸ್ಥನಾದ ವ್ಯಕ್ತಿಯಿಂದ ನಡೆದಿದೆಯೆನ್ನಲಾದ ಅನಾಚಾರಗಳಿಂದಾಗಿ ಇಡೀ ಸಮಾಝ ತಲೆ ತಗ್ಗಿಸುವಂತಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅದರಂತೇ ಪ್ರಕರಣವು ನ್ಯಾಯಾಲಯದ ಕಟ್ಟೆಯಲ್ಲಿರುವುದರಿಂದ ಅದು ಅಲ್ಲಿ ಬಗೆಹರಿಯುವವರೆಗೆ ಯಾರೂ ಏನೂ ಮಾಡುವುದಕ್ಕಾಗುವುದಿಲ್ಲ. ಇದರ ನಡುವೆ ಈ ಗುರು ಪೀಠದ ಮೇಲೆ ಮಠದ ಮೇಲೆ ಶ್ರದ್ಧೆಯನ್ನಿಟ್ಟ ಅದೆಷ್ಟೋ ಜನರು ಈ ಕಳೆಯ ಕೊಳೆಯನ್ನು ತೊಳೆದುಕೊಳ್ಳುವ ಮಾರ್ಗೋಪಾಯವಾಗಿ ಈ ಮಠದಲ್ಲಿ ನಡೆಯುತ್ತಿರುವ ಅನಾಚಾರಗಳನ್ನು ಕೊನೆಗಾಣಿಸುವುದಕ್ಕಾಗಿ ಆ ಪೀಠಸ್ಥನಾದ ವ್ಯಕ್ತಿಯನ್ನು ಪೀಠದಿಂದ ಕೆಳಗಿಳಿಸಬೇಕು ಎಂಬ ನಿರ್ಧಾರಕ್ಕೆ ಬಂದು ಆ ದಿಸೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ.

ಆದರೆ ಈಗಿನ ಪರಿಸ್ಥಿತಿಯಲ್ಲಿ ಗುರು ಪೀಠದಲ್ಲಿ ಕುಳಿತ ವ್ಯಕ್ತಿಯನ್ನು ಕೆಳಗಿಳಿಸುವುದು ತಿಳಿದಷ್ಟು ಸುಲಭಕಾರ್ಯವಲ್ಲ ಎಂಬುದನ್ನು ಈ ಸಮಯದಲ್ಲಿ ಎಚ್ಚರಿಸಬಯಸುತ್ತೇನೆ. ಏಕೆಂದರೆ ಕೆಲವೇ ಕೆಲವು ಮಂದಿ ಅವನನ್ನು ಓಲೈಸುವ ಜನರಿರುವ ವರೆಗೂ ಕೂಡಾ ಅವನಾಗಿ ಗುರು ಪೀಠವನ್ನು ತ್ಯಜಿಸುವ ಸಂಭವ ಇಲ್ಲವೇ ಇಲ್ಲ ಎಂಬುದು ಇದುವರೆಗಿನ ನಡೆಯಿಂದ ತಿಳಿದು ಬಂದಿದೆ. ಆದರೆ ನಮ್ಮ ಗುರು ಪೀಠ ಮತ್ತು ಮಠವನ್ನು ಉಚ್ಛ್ರಾಯವಾಗಿರಿಸಿಕೊಳ್ಳಬೇಕಾದ ಅನಿವಾರ್ಯತೆ ನಮ್ಮೆಲ್ಲರಿಗೂ ಇದೆ. ಹಾಗಾಗಿ ನಾವು ಗುರು ಪೀಠದ ಮೇಲಿನ ಭಕ್ತಿಯಲ್ಲಿ ಎಳ್ಳಿನಿತೂ ಹಿಂದೆ ಸರಿದು ನಿಲ್ಲುವ ಪ್ರಶ್ನೆಯೇ ಇಲ್ಲ. ಅಥವಾ ನಾವು ಬೇರೆ ಗುರುಗಳನ್ನೋ ಗುರು ಪೀಠವನ್ನೋ ನೆಚ್ಚಿಕೊಳ್ಳಬೇಕಾದ ಅನಿವಾರ್ಯತೆಯೂ ಇಲ್ಲ. ಹಾಗೊಂದು ವೇಳೆ ನಾವು ಬೇರೆ ಗುರು ಪೀಠಕ್ಕೆ ಎಡತಾಕಲು ತೊಡಗಿದರೆ ಅಲ್ಲಿ ಆ ಪೀಠದ ಸದ್ಭಕ್ತರ ಮಧ್ಯದಲ್ಲಿ ನಮಗೆ ಯಾವ ಸ್ಥಾನ ಸಿಗಬಹುದು ಎಂಬುದನ್ನು ಒಮ್ಮೆ ವಿಚಾರಿಸುವುದೊಳಿತು. ಏನೇ ಇರಲಿ ನಮ್ಮ ಪೀಠಕ್ಕಂಟಿದ ಕೊಳೆಯನ್ನು ನಿವಾರಿಸಿಕೊಳ್ಳಲೇ ಬೇಕು ಅದರಲ್ಲಿ ಎರಡು ಮಾತಿಲ್ಲ. ಹಾಗೆಂದು ಅದು ದಿಢೀರೆಂದು ಜರುಗುವ ಪ್ರಕ್ರಿಯೆ ಖಂಡಿತಾ ಅಲ್ಲ. ಆದರೆ ಕೆಲವು ಮಹನೀಯರುಗಳು ತಮ್ಮ ಮೂಗಿನ ನೇರಕ್ಕೇ ವಿಚಾರಿಸುತ್ತ ನಾಳೆ ಬೆಳಗಾದರೆ ಗುರುವನ್ನು ಪೀಠದಿಂದಿಳಿಸಿಬಿಡೋಣ ಎಂಬ ಆತುರದ ಮಾತುಗಳನ್ನು ಆಡುತ್ತಿದ್ದಾರೆ.. ಅಂತಹ ಆತುರಗಾರರಿಗೆ ಒಂದು ವಿಚಾರವನ್ನು ಅರುಹಲೇ ಬೇಕಾಗಿದೆ. ಅದೆಂದರೆ. … ಲಾಗಾಯತ್ತಿನಿಂದ ಅನೂಚಾನವಾಗಿ ವೃದ್ಧಿಸಿಕೊಂಡು ಬಂದ ನಮ್ಮ ಗುರು ಪೀಠದ ಅಡಿಯಲ್ಲಿ ಈಗಾಗಲೇ ಅನೇಕ ಶಾಶ್ವತ ಸಂಘಟನೆಗಳು ಅನೇಕ ಕಡೆಗಳಲ್ಲಿ ಕೆಲಸ ಮಾಡುತ್ತಿವೆ, ಉದಾಹರಣೆಗೆ ಶಾಲಾ ಕಾಲೇಜುಗಳು, ದೇವಸ್ಥಾನಗಳು, ಗೋಶಾಲೆಗಳು ಮುಂತಾದವು. ಇಲ್ಲಿ ನಡೆಸಿಕೊಂಡು ಬರಲಾಗುತ್ತಿರುವ ದೈನಂದಿನ ಕಾರ್ಯಕಲಾಪ ಮತ್ತು ಆಡಳಿತೆಯ ಜವಾಬ್ದಾರಿ ಈ ಪೀಠಸ್ಥನದೇ ಆಗಿರುತ್ತಿದ್ದು ಅವನ ಆಣತಿಯಂತೇ ನಡೆಯುತ್ತಿದೆ.. ಒಂದು ವೇಳೆ ರಾತ್ರಿ ಬೆಳಗಾಗುವುದರೊಳಗೆ ಇವನನ್ನು ಪೀಠದಿಂದ ಇಳಿಸಿಯೇ ಬಿಟ್ಟೆವೆಂದರೆ ಆ ಎಲ್ಲಾ ಆಡಳಿತಾತ್ಮಕ ವ್ಯವಸ್ಥೆಗಳನ್ನು ಸಮರ್ಥ ರೀತಿಯಲ್ಲಿ ನಿಭಾಯಿಸಬಲ್ಲ ಸಾಮರ್ಥ್ಯ ಈ ಗುರು ವಿರೋಧಿಗಳೆಂದು ಗುರುತಿಸಿಕೊಂಡ ಮಹನೀಯರುಗಳಲ್ಲಿ ಇದೆಯೇ ಎಂಬುದು ಪ್ರಶ್ನೆಯಾಗೇ ಉಳಿಯುತ್ತದೆ..ಇಂತಹ ಸಂಘಟನೆಗಳಲ್ಲಿ ಈಗಾಗಲೇ ದುಡಿಯುತ್ತಿರುವ ಜನರಲ್ಲಿ ಭಕ್ತರೂ ವಿರೋಧಿಗಳೂ ಇರಬಹುದು ಮುಂದೆ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸಕ್ಕೆ ತೆಗೆದುಕೊಳ್ಲಬೇಕಿದೆ. ಇಲ್ಲದಿದ್ದರೆ ಅದುವೇ ಒಂದು ಪ್ರಕರಣವಾಗಿ ಪರಿಣಮಿಸುತ್ತದೆ..

ಇದಲ್ಲದೇ ಇಂದು ಈ ವ್ಯಕ್ತಿಯನ್ನು ವಿರೋಧಿಸುವ ಅನೇಕ ಸಜ್ಜನರು ನಮ್ಮ ಸಮಾಜದಲ್ಲಿ ಕಂಡು ಬರಿತ್ತಿದ್ದಾರೆ ಆದರೆ ಅವರಲ್ಲಿ ಕೆಲವರು ಮಾತ್ರ ಎದುರಿಗೆ ಬಂದು ನಿಲ್ಲಬಲ್ಲವರಾದರೆ ಬಹಳಷ್ಟು ಜನ ಎದುರಿಗೆ ಬಂದು ನಿಲ್ಲುವುದಕ್ಕೆ ಮನಸ್ಸು ಮಾಡುವುದಿಲ್ಲ. ಇಲ್ಲಿ ಒಂದು ವಿಚಾರವನ್ನು ಎಲ್ಲರೂ ಗಮನಿಸಬೇಕು. ಅದೆಂದರೆ. ಗುರುವನ್ನು ವಿರೋಧಿಸುವ ಈ ದೊಡ್ಡ ಗಣ ಸಾರ್ವಜನಿಕವಾಗಿ ತಮ್ಮ ವಿರೋಧವನ್ನು ಏಕೆ ವ್ಯಕ್ತ ಪಡಿಸಲಾಗದೇ ಇದ್ದಾರೆ ಎಂಬುದರಲ್ಲಿ ಒಂದು ಚೋದ್ಯವಿದೆ.. ಈಗಾಗಲೇ ವಿರೋಧಿಸುತ್ತಿರುವ ಗುಂಪಿನ ನೇತಾರರೆಂದು ಶಾಲು ಹೊದೆದುಕೊಳ್ಲಲು ಮುಂದಾದ ಎಷ್ಟೋ ವ್ಯಕ್ತಿಗಳ ಹಿನ್ನೆಲೆ ನಮ್ಮ ಸಮಾಝದ ಅನೇಕರಿಗಿದೆ. ಹಾಗಾಗಿ ಈ ಗುಂಪಿನ ಗಣನಾಯಕರುಗಳನ್ನೇ ಬಹುಜನ ಸಮಾಜ ನಂಬುವ ಸ್ಥಿತಿಯಲ್ಲಿ ಇಲ್ಲ.. ಏಕೆಂದರೆ ಈ ಹಿಂದೆ ಇವರು ಅಂಥ ನಂಬಿಕಾರ್ಹ ಕಾರ್ಯಗಳನ್ನು ಮಾಡಿದ ದಾಖಲೆಗಳೇ ಇಲ್ಲ… ಇನ್ನೊಂದು ವಿಚಾರವೆಂದರೆ ನಮ್ಮ ಮನೆಗಳಲ್ಲಿಯೇ ಇರುವ ಇತರೆ ವ್ಯಕ್ತಿಗಳ ಎಷ್ಟು ಜನರ ಮನದಲ್ಲಿ ಇನ್ನೂ ಗುರು ಭಕ್ತ ಗಡಣ ಇದೆಯೋ ಅದರ ಅರಿವೂ ಇಲ್ಲ. ತಾನೊಬ್ಬ ವಿರೋಧಿಯೆನಿಸಿದ್ದರೂ ಮನೆಯ ಇತರ ಜನಗಳು ಇನ್ನೂ ಆ ವ್ಯಕ್ತಿಯನ್ನೇ ಓಲೈಸುತ್ತಿರುವ ಅದೆಷ್ಟೋ ಕುಟುಂಬಗಳ ಪರಿಚಯವೂ ಲಭ್ಯವಾಗಿದೆ. ಹೀಗಿರುವಾಗ ಇಂತಹ ಜನರನ್ನು ಒಗ್ಗೂಡಿಸುವ ಅವರಿಗೆ ತಿಳುವಳಿಕೆ ನೀಡುವ ಕೆಲಸ ಆಗಲೇ ಇಲ್ಲ. ಕೇವಲ ಗುರುವನ್ನು ಪೀಠದಿಂದ ಇಳಿಸಬೇಕು ಎಂಬ ಬೊಬ್ಬೆಯೊಂದೇ ಇವರಲ್ಲಿರುವಂತಿದೆ ಇವೆಲ್ಲವುಗಳ ಕಲ್ಪನೆಯೇ ಇಲ್ಲದೇ ತಾವು ಕಂಡ ಮೊಲಕ್ಕೆ ಮೂರೇ ಕಾಲು ಎಂದು ತಿಳಿದು ಇತರರೂ ಹಾಗೇ ತಿಳಿಯಬೇಕೆಂದು ಹೋರಾಡುವವರ ಮತಿಗೆ ಏನೆನ್ನಬೇಕೋ ತಿಳಿಯುತ್ತಿಲ್ಲ.

ಅತ್ಯಂತ ಯೋಚಿಸಬೇಕಾದ ಇನ್ನೊಂದು ವಿಚಾರವೆಂದರೆ ಲಾಗಾಯತ್ತಿನಿಂದ ಈ ಮಠದಲ್ಲಿ ಈ ವ್ಯಕ್ತಿಯ ಅನಾಚಾರಗಳನ್ನು ಕಂಡೂ ಕೂಡಾ ಇದ್ದ ಗಂಡಸರ್ಯಾರೂ ಏನೂ ಮಾಡಲಾಗದೇ ಕೈ ಚೆಲ್ಲಿ ಕುಳಿತಂತಹ ಸಂದರ್ಭದಲ್ಲಿ ಹೆಂಣ್ಣುಮಗಳೋಬ್ಬಳು ತನ್ನ ಮೇಳೆ ಅತ್ಯಾಚಾರವಾಗಿದೆ ಎಂದು ಸಾಕ್ಷಿ ಸಹಿತನ್ಯಾಯಾಲಯದ ಕಟ್ಟೆ ಏರಿದಳು. ಅದಕ್ಕೂ ಮೊದಲು ಸಮಾಜದ ನ್ಯಾಯಸ್ಥಾನದಲ್ಲಿ ಈ ವಿಚಾರವನ್ನು ಹೇಳಿದರೂ ಗಂಡಸರಾದ ಮಹನೀಯರುಗಳು ಏನೂ ಮಾಡಲಾಗದೇ ಕುಳಿತಿದ್ದು ಎಲ್ಲರಿಗೂ ತಿಳಿದ ವಿಚಾರವೇ ಅಲ್ಲವೇ..? ಹಾಗಿದ್ದಾಗ ಅವಳೊಬ್ಬಳು ಸಲ್ಲಿಸಿದ ಪ್ರಕ್ರಣಕ್ಕೆ ನ್ಯಾಯಾಧೀಶರೊಬ್ಬರು ಏನೋ ಇದು “ಒಪ್ಪಿತ ಸಂಬಂಧ” ಎಂಬ ಹೇಳಿಕೆಯನ್ನು ವಜಾ ಮಾಡುವ ಕಾಲದಲ್ಲಿ ಕೊಟ್ಟರೆನ್ನುವ ಒಂದೇ ಎಳೆಯನ್ನು ಹಿಡಿದು ಆ ಹೆಣ್ಮಗಳಿಗೂ ನೋವಾಗುವ ತೆರದಲ್ಲಿ ಈ ವಿರೋಧಿಸುತ್ತೇವೆಂಬ ಗಡಣದ ಮುಂದಾಳುಗಳನೇಕರು ಓಪನ್ ಫೋರಂ ನಲ್ಲಿ ಅದು ಅತ್ಯಾಚಾರ ಅಲ್ಲ.. ಒಪ್ಪಿತ ಸಂಬಂಧವೇ ಹೌದು ಎನ್ನುವಂತಹ ಹೇಳಿಕೆಗಳನ್ನು ಕೊಡುವುದರ ಮೂಲಕ ಆ ಹೆಣ್ಮಗಳು ತನ್ನ ಮೇಳೆ ಅತ್ಯಾಚಾರವಾಗಿದೆ ಎಂದು ನ್ಯಾಯಾಲಯದಲ್ಲಿ ಖಟ್ಳೆ ಹಾಕಿದ್ದಕ್ಕೆ ಅವಳಿಗೂ ನೋವಾಗುವ ರೀತಿಯಲ್ಲಿ ವರ್ತಿಸಿ ಕೆಟ್ಟದೆನಿಸಿಕೊಂಡರು. ಈ ರೀತಿಯ ಹೇಳಿಕೆ ಇಡೀ ಹೋರಾಟದ ತಳಪಾಯಕ್ಕೇ ಕೊಡಲಿಪೆಟ್ಟು ಎಂಬ ಅರಿವಿರಲಿಲ್ಲವೇ…?
ಇದೆಲ್ಲವನ್ನೂ ನಾವು ಯಾವುದೋ ಸಭೆ ನಡೆಸಿಯೋ… ಮೀಟಿಂಗ್ ಮಾಡಿಯೋ… ಬಗೆಹರಿಸಲಾಗದ್ದು.. ಕಾಲವೇ ಇದಕ್ಕೆ ಉತ್ತರಿಸಬೇಕು… ಒಳ್ಳೆಯದೇ ಆಗುತ್ತದೆ..

source: https://www.facebook.com/kadatokerambhatta/posts/948616185260885

ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

Advertisements

One thought on “ಒಂದು ಚಿಂತನೆ:

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s