ಕಚ್ಚೆ ಕತೆ ಮುಚ್ಚೋದಕ್ಕೆ ಮೆಚ್ಚಿಸುವ ಸಾವಿರಾರು ಛದ್ಮವೇಷಗಳು

ಕಚ್ಚೆ ಕತೆ ಮುಚ್ಚೋದಕ್ಕೆ ಮೆಚ್ಚಿಸುವ ಸಾವಿರಾರು ಛದ್ಮವೇಷಗಳು

ಕಾರಂತರ ಪುಸ್ತಕದ ಬಗ್ಗೆ ಯಾರೋ ಹೇಳಿದ್ದರಲ್ಲ? ಪ್ರಾಯಶಃ ತೊನೆಯಪ್ಪನಂತಹ ಶೋಭರಾಜರುಗಳನ್ನು ಕಾರಂತರಷ್ಟು ಸರಿಯಾಗಿ ಯಾರೂ ಬಣ್ಣಿಸಿರಲಿಕ್ಕಿಲ್ಲ. ಮಠ ಎಂಬ ವ್ಯವಸ್ಥೆಯಲ್ಲಿ ಪೀಠಸ್ಥನಾಗಿ ಕುಳಿತ ಕಾವಿವೇಷಧಾರಿಗೆ ಹಲವಾರು ಲೌಕಿಕ ಅನುಕೂಲತೆಗಳು ಒದಗುತ್ತವೆ. ಜೈಕಾರ ಹಾಕಲಿಕ್ಕೆ ಸದಾ ಹಲವು ಚೇಲಾಗಳು ಸಿಗುತ್ತಾರೆ.

ಸ್ವಾಮಿ ಮಾಡಿದ್ದೆಲ್ಲವೂ ಧರ್ಮದ ಕೆಲಸ ಎಂಬ ಮೂರ್ಖರು ಸಿಗುತ್ತಾರೆ. ಪಟ್ಟಕ್ಕೇರಿದಾಗ ಒಂದು ರೀತಿಯ ಅಹಂಕಾರ ಬರುತ್ತದೆ. ಪಟ್ಟದಲ್ಲಿ ಪೀಠವೆಂಬ ಅಟ್ಟವೇರಿ ಕುಳಿತಾಗ ಇನ್ನಷ್ಟು ಅಹಂಕಾರ ಬರುತ್ತದೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ಪಾದಕ್ಕೆ ಹಣ, ಕಾಣಿಕೆ, ಬಂಗಾರ, ಬೆಳ್ಳಿ ಎಲ್ಲ ಬಂದು ಬಂದು ಬೀಳುತ್ತವೆ. ಬಂದದ್ದರಲ್ಲಿ ಅಲ್ಪ ಸ್ವಲ್ಪ ಖರ್ಚುಮಾಡಿ ಚೇಲಾಗಳನ್ನು ಬೆಳೆಸಿಕೊಳ್ಳಬಹುದು.

ಮಿಕ್ಕಿದ್ದನ್ನೆಲ್ಲ ಏನು ಮಾಡಿದಿರಿ ಎಂದು ಯಾರೂ ಕೇಳೋ ಹಾಗಿರೊಲ್ಲ. ಚೇಲಾಗಳು ಸ್ವಾಮಿಯ ರಕ್ಷಣೆಗೆ ನಿಲ್ಲುತ್ತಾರೆ. ಬರೆಯಬಲ್ಲ ಪಾಂಡಿತ್ಯವುಳ್ಳ ಕೆಲವರನ್ನು ಬಳಸಿಕೊಂಡು ಸ್ವಾಮಿಯಾದವ ದಂತಕಥೆಗಳನ್ನು ಸೃಷ್ಟಿಸುತ್ತಾನೆ. ಸ್ವಾಮಿ ಪೂಜೆ ಮಾಡುವ ದೇವರಿಗೆ ಬಂಗಾರದ ಹರಕೆ ಹೊತ್ತರೆ ಬಯಸಿದ ಫಲವನ್ನು ಪಡೆಯಬಹುದು ಎಂಬ ಕಥೆ ಹಬ್ಬುತ್ತದೆ. ಶಾಪದ ಕುರಿತು ನೂರಾರು ಕತೆಗಳನ್ನು ಬರೆಸುತ್ತಾನೆ.

ಸ್ವಾಮಿಯ ವ್ಯವಹಾರವನ್ನು ಪ್ರಶ್ನಿಸಿದ ಯಾವನೋ ಹೈವೇಯಲ್ಲಿ ಅಪಘಾತದಲ್ಲಿ ಮಡಿದರೆ ಅದು ಸ್ವಾಮಿಯ ಶಾಪ ಎಂದು ಕತೆ ಬರೆಯುತ್ತಾರೆ. ಹಲವಾರು ಒತ್ತಡದಿಂದ ಹಾರ್ಟ್ ಅಟ್ಯಾಕ್ ಅದರೆ ಅದೂ ಸ್ವಾಮಿಯದೇ ಶಾಪವೆನಿಸುತ್ತದೆ. ಸ್ವಾಮಿಗೆ ಕಾಣಿಕೆ ಹಾಕಿ ಹೋದ ವ್ಯಕ್ತಿ ಮೋಸದ ವ್ಯವಹಾರದಿಂದ ಗಳಿಸಿ ಬಂಗಲೆ ಕಟ್ಟಿಸಿದರೆ ಸ್ವಾಮಿಯ ಆಶೀರ್ವಾದದ ಫಲ ಎಂದು ಬರೆಯುತ್ತಾರೆ. ಸ್ವಾಮಿಗೋ ಅಥವಾ ಅವನಿಗೆ ಬೇಕಾದವರಿಗೋ ಮೈಯೊಡ್ಡದ ಸಾಧ್ವಿಯ ಮೇಲೆ ಕೋಪ ತೀರಿಸಿಕೊಳ್ಳುವುದಕ್ಕಾಗಿ ಅವಳ ಬದುಕನ್ನೇ ನುಂಗಿಹಾಕುವ ಹಲವು ಪ್ರಯತ್ನಗಳನ್ನು ಸ್ವಾಮಿಯೆನಿಸಿದವನ ಬಳಗ ನಡೆಸುತ್ತದೆ.

ಇಂತಹ ಹಲವಾರು ಲೌಕಿಕ ವ್ಯವಹಾರಾಸಕ್ತರಾದ ಕಾವಿ ವೇಷದವರಿಗೆ ಪರಮಾರ್ಥ ಚಿಂತನೆಗೆ ಮನಸ್ಸು ಬರುವುದಾದರೂ ಹೇಗೆ? ಸಮಯ ಸಿಗೋದಾದರೂ ಹೇಗೆ? ಕಾಟಾಚಾರಕ್ಕೆ ಒಂದಷ್ಟು ಪೂಜೆ-ಪುನಸ್ಕಾರಗಳು ನಡೆಯುತ್ತವಷ್ಟೆ.

ಮುಂಬೈ ಟ್ರೇನಿನ ಬಾಗಿಲಲ್ಲಿ ನಿಂತುಕೊಂಡರೆ ಬೋಗಿಯೊಳಗೆ ಹೋಗೋದು ಬೇಕಾಗಿಲ್ಲ, ಸುತ್ತ ಇರುವವರೇ ತಳ್ಳಿಕೊಂಡುಹೋಗಿ ಬೋಗಿಯೊಳಗೆ ಸೇರಿಸುತ್ತಾರೆ ಎಂದು ಮಿತ್ರರೊಬ್ಬರು ಹೇಳುತ್ತಿದ್ದರು. ಪತ್ರಿಕೆಯೊಂದರ ಸಂಪಾದಕನಾಗಿ ಕುಳಿತುಕೊಂಡ ಮಾತ್ರಕ್ಕೆ ಎಲ್ಲವನ್ನೂ ಅವನೇ ನಿರ್ವಹಿಸಬೇಕಿಲ್ಲ; ಅಲ್ಲಿನ ಉಳಿದ ಟೀಮ್ ಅದನ್ನು ನಿರ್ವಹಿಸುತ್ತದೆ. ಮಠದೊಳಗೆ ಸ್ವಾಮಿಯಾಗಿ ಸೇರಿಕೊಂಡ ಬಳಿಕ ಸಾಮಾಜಿಕ ಕೆಲಸಕಾರ್ಯಗಳನ್ನು ಸ್ವಾಮಿಯೇ ಮಾಡಬೇಕಿಲ್ಲ; ಸುತ್ತ ಇರುವ ಜನ ಮಾಡ್ತಾರೆ.

ನಮ್ಮ ಶ್ರಾದ್ಧ ಭಟ್ಟನ ಪಿಂಡದ ಕತೆಯಲ್ಲೂ ವ್ಯತ್ಯಾಸವೇನಿಲ್ಲ. ಡೊಂಬರಾಟ ಆಡಿ ಜನರನ್ನು ಸೆಳೆಯೋದು ಮತ್ತು ಹಾಗೆ ಬಂದವರಲ್ಲಿ ಹೆಂಗಳೆಯರನ್ನು ಬಳಸಿಕೊಳ್ಳೋದು ಅವನ ಉದ್ದೇಶವಾಗಿತ್ತು. ಮಹಾಸ್ವಾಮಿಗಳು ಬಹಳ ಯೋಜನೆಗಳನ್ನು ಹಾಕಿಕೊಂಡಿದ್ದಾರೆ ಅಂತ ಸಮಾಜದ ಅತಿಬುದ್ಧಿವಂತರೂ ನಂಬಿದರು. ಕ್ರಿಮಿನಲ್ ಗಳಿಗೆ ಒಂದು ಚಾಣಾಕ್ಷತನವಿರುತ್ತದೆ-ಅತಿಬುದ್ಧಿವಂತರನ್ನೂ ನಯವಾಗಿ ವಂಚಿಸಿ ಉಂಡೆನಾಮ ತೀಡಬಲ್ಲ ಕೌಶಲ ಅವರಲ್ಲಿರುತ್ತದೆ.

ನಮ್ಮ ಕ್ರಿಮಿನಲ್ಲಾಚಾರ್ಯರು ಮಾಡಿದ್ದು ಅದನ್ನೇ. ಈಗಲೂ ಅಂಥದ್ದನ್ನೇ ಮುಂದುವರಿಸಿದ್ದಾರೆ. ಯಾತ್ರೆಗಳು ಮತ್ತು ಸಮ್ಮೇಳನಗಳು ಅವರ ಬಿಲ್ಡಪ್ ತೋರಿಸಲು ನಡೆಯುತ್ತವೆ. ವಾಸ್ತವವಾಗಿ ಸನ್ಯಾಸಿಗಳು ಜನರಿಗೆ ವಿಷಯವನ್ನು ತಿಳಿಸೋದಕ್ಕೆ ಆಡಂಬರದ ಯಾತ್ರೆಗಳು ಬೇಕಾಗಿಲ್ಲ. ಸನ್ಯಾಸಿ ತನ್ನ ವೈಯಕ್ತಿಕ ಆಚರಣೆಗಳಲ್ಲಿ ಒಳಗೂ ಹೊರಗೂ ಪಾರದರ್ಶಕವಾಗಿದ್ದು, ಭಗವಂತನಲ್ಲಿ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿ ವ್ಯವಹರಿಸಿದರೆ ಜನ ತಂತಾನೇ ಅವನಲ್ಲಿಗೆ ಬರ್ತಾರೆ. ಕಾಗೆ ಹಾರಿಸುವವರೆಡೆಗೂ ಕೆಲಸಮಯ ಬರ್ತಾರೆ; ಆದರೆ ನಿಜದ ಅರಿವಾದಾಗ ಬೇಗ ವಾಪಸ್ ಹೋಗಿಬಿಡ್ತಾರೆ.

ದೇಶದಲ್ಲಿ ಇಂದು ಇಷ್ಟೊಂದು ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗ್ತಾ ಇರೋದಕ್ಕೆ ವ್ಯವಸ್ಥೆಯೊಳಗಿನ ಕಳ್ಳರೇ ಕಾರಣರು ಎಂಬುದು ನಿಮಗಂತೂ ಗೊತ್ತಿರಬಹುದು. ವ್ಯವಸ್ಥೆಯೊಳಗೆ ಕಳ್ಳರು ಹುಟ್ಟಿಕೊಳ್ಳೋದಕ್ಕೆ ಇಂತಹ ಕಪಟ ಸನ್ಯಾಸಿಗಳೇ ಪ್ರೇರಕ ಶಕ್ತಿಗಳಾಗ್ತಾರೆ. “ನಿಮ್ಮ ಸ್ವಾಮಿಯೇ ಹಾದರದ ಮುಂಡೆಗಂಡ” ಅಂತ ಯಾರೋ ಹೇಳಿದರಂತೆ, ಕೇಳಿಸಿಕೊಂಡವರು ಮುಖ ತಗ್ಗಿಸಿಕೊಂಡು ಮನೆ ಸೇರಿಕೊಂಡರು ಎಂದು ಕೇಳಿದ್ದೇನೆ.

ಕವಳದ ಗೋಪಣ್ಣ ಮತ್ತೆ ಮಾತನಾಡಿ ಕಳೆದ ಲೇಖನದ ಬಗ್ಗೆ ಪ್ರಸ್ತಾಪ ಮಾಡುತ್ತ ನಕ್ಕ-“ಅಲ್ಲಯ್ಯ ರಾಮು, ಕೃಷ್ಣ ಕಿರುಬೆರಳಲ್ಲಿ ಗಿರಿಯನ್ನೆತ್ತಿದ ಹಾಗೆ ನಮ್ಮ ಮಾಸ್ವಾಮಿಗಳು ಏಕಾಂತದಲ್ಲಿ ಕಿರುಬೆರಳ ತುದಿಯಿಂದ ನೊರಾರು ಲಂಗಗಳನ್ನೆತ್ತಿಲ್ಲವೇ? ತಮ್ಮ ಶೀಕರಗಳಿಂದ ನೂರಾರು ಲಲನೆಯರನ್ನು ಎತ್ತಿಲ್ಲವೇ? ಅಂತಹ ಪವಾಡ ಇರುವಾಗ ನೀನು ಕಮಲದ ಮೇಲೆ ಹತ್ತಿ ಕುಳಿತಿಲ್ಲವೇ ಅಂದೆಯಲ್ಲ, ’ಮಹಾಸ್ವಾಮಿಗಳು’ ಏಕಾಂತದಲ್ಲಿ ಎಷ್ಟೋ ಸಾವಿರ ಸಲ ಹತ್ತಿಳಿಯಲಿಲ್ಲವೇ? ಗಿನ್ನೆಸ್ ದಾಖಲೆಗೆ ಅರ್ಹವಾದ ಪವಾಡಗಳನ್ನು ಹೇಳು” ಎನ್ನತೊಡಗಿದ್ದ.

ನಮ್ಮ ಇನ್ನೊಬ್ಬ ಭಾತ್ಮೀದಾರರಾದ ಗುಮ್ಮಣ್ಣ ಹೆಗಡೇರಲ್ಲಿ ಯಾರೋ ಕೇಳಿದ್ದರಂತೆ-“ಅಲ್ಲ ಹೆಗಡೆರೆ ನೀವು ಸ್ವಾಮಿಗಳ ಮೇಲೆ ಆರೋಪ ಮಾಡೋದಕ್ಕೆ ನಡೆದದ್ದನ್ನು ನೀವೇನು ಖುದ್ದಾಗಿ ಕಂಡಿದ್ರಾ? ಇಲ್ಲ, ಇಲ್ಲ ಅಂದ್ಮೇಲೆ ಹಾಗೆ ನಡೆದಿದೆ ಅಂತ ಹೇಗೆ ಹೇಳ್ತೀರಿ? ಸುಮ್ನೇ ಇಲ್ದಿದ್ದು ಹೇಳಿ ಪೀಠದ ಶಾಪ ತೆಗೆದುಕೊಳ್ಳಬೇಡಿ.”

ಗುಮ್ಮಣ್ಣಹೇಗಡೇರು ಜಾಸ್ತಿ ಮಾತನಾಡಲಿಲ್ಲವಂತೆ. ಹಿಮಾಲಯದ ಆಯಳತೆ ಎತ್ತರವನ್ನು ದೂರದಿಂದ ನೋಡಬಹುದು, ಅಂದಾಜಿಸಬಹುದು. ಆದರೆ ಸಮುದ್ರದ ಆಳವನ್ನು ಇಳಿದೇ ನೋಡಬೇಕೇ ಹೊರತು ಮೇಲ್ನೋಟಕ್ಕೆ ಅದು ಕಾಣೋದಿಲ್ಲ ಅಂತ ಡಿವಿಜಿ ಹೇಳುತ್ತಿದ್ದರು. ನಮ್ಮ ಮಾಸ್ವಾಮಿ ತೊನೆಯಪ್ಪನೋರ ಸಭೆ ಸಮ್ಮೇಳನ ಯಾತ್ರೆಗಳ ಡೊಂಬರಾಟವನ್ನು ಹೊರಗಿನಿಂದ ನೋಡಬಹುದು; ಏಕಾಂತದ ರಂಗಿನಾಟಗಳನ್ನು ಮಾತ್ರ ಬಹಳ ಆಳವಾಗಿ ಇಳಿಯದ ಹೊರತು ಅರಿಯಲು ಸಾಧ್ಯವಾಗದು; ಹಾಗಾಗಿಯೇ ಇನ್ನೂ ಕೆಲವು ಪೆದ್ದ ಪಂಡಿತರುಗಳೆಲ್ಲ ಕ್ರಿಮಿನಲ್ಲಾಚಾರ್ಯರಿಗೆ ಸಲಾಮು ಹೊಡೆಯುತ್ತಲೇ ಇದ್ದಾರೆ!

ಊರುಮನೆಗಳ ಕಡೆಗೆ ಭೇಟಿ ನೀಡುತ್ತ ಪಾದಯಾತ್ರೆ ನಡೆಸುವ ಗುಮ್ಮಣ್ಣ ಹೆಗಡೇರು ಯಾರಲ್ಲೋ “ದನ ಸಾಕಿ” ಅಂತ ಸಲಹೆ ಮಾಡಿದರಂತೆ. ಅವ ತಿರುಗಿ ಭಾಷಣ ಬಿಗಿದದ್ದನ್ನು ಬೆಕ್ಕಸ ಬೆರಗಾಗಿ ನೋಡಿದೆ ಅಂತ ಹೇಳಿದರು. “ಊರಿನಲ್ಲಿ ಗೋಮಾಳಗಳೇ ಇಲ್ಲವಾಗುತ್ತಿವೆ, ಹಸಿ ಹುಲ್ಲು ಹಾಗಿರಲಿ ಒಣಹುಲ್ಲು ಸಿಗೋದು ಕಷ್ಟ. ಬೆಳೆದ ಫಸಲಿಗೆ ಧಾರಣೆ ಅಷ್ಟಕ್ಕಷ್ಟೆ. ಹಿಂಡಿ, ಭೂಸ, ಹತ್ತಿಕಾಳು ಇತ್ಯಾದಿ ಪಶು ಆಹಾರದ ರೇಟು ತಲೆಗೆ ಹತ್ತಿದೆ. ಇಂಥಾ ತುಟ್ಟಾಗ್ರತೆಯಲ್ಲಿ ದನ ಸಾಕೋದು ಅಂದ್ರೆಂತ ಹುಡಗಾಟಿಕೆ ಅಂದ್ಕಂಡ್ರಾ ಹೆಗಡೇರೆ? ಮನೇಲಿ ಇರೋ ಜನರಿಗೇ ಆನ್ನ ಆಸೆ ಮಾಡೋರಿಲ್ಲ, ಇನ್ನು ದನಗಳಿಗೆ ಹೊತ್ತಿಗೆ ಸರಿಯಾಗಿ ಕಲಗಚ್ಚು ಹುಲ್ಲು ಕೊಡೋರಿದ್ದಾರೆ ಅಂತಲಾ?”

ಹೆಗಡೇರು ಸುಮ್ಮನೆ ಎದ್ದು ಬಂದರಂತೆ. ಅವರು ಹೇಳ್ತಾ ಇದ್ರು, ಈ ಹೋರಿಸ್ವಾಮಿಗೆ ಕಾಗೆ ಹಾರಿಸೋದಕ್ಕೆ ಬೇರೆ ಯಾವ ವಿಷಯವೂ ಇಲ್ಲದ ಕಾರಣ ಈಗ ಅದನ್ನೇ ಹಿಡ್ಕಂಡಿದ್ದಾನೆ ಅಂತ. ಹೌದಲ್ಲವೇ? ಒಂದಷ್ಟು ಜನರನ್ನು ಸೇರಿಸಬೇಕು, ಅಲ್ಲೆಲ್ಲ ಪರೋಕ್ಷವಾಗಿ ಹಿಂದೂ ಸನ್ಯಾಸಿಗಳ ಮೇಲೆ ದಾಳಿ, ಧರ್ಮದ ಮೇಲೆ ದಾಳಿ ಅಂತ ಬೊಬ್ಬೆಹಾಕಬೇಕು. ಜನರ ಮನಸ್ಸಿನಲ್ಲಿ ತನ್ನ ಬಗ್ಗೆ ಉಂಟಾದ ಅಸಹ್ಯಕರ ಭಾವನೆ ಹೋಗಲಾಡಿಸಿ ಬಹಳ ಸಮಾಜಮುಖಿ ಸ್ವಾಮಿ ಎನಿಸಿಕೊಳ್ಳಬೇಕು. ಅದರ ಶಾಖದಲ್ಲಿ ಕಚ್ಚೆಕತೆಗಳನ್ನು ಕರಗಿಸಿಹಾಕಬೇಕು ಎಂಬ ಹುನ್ನಾರ ಅವನದ್ದು.

ಮಠಕ್ಕೆ ಹಲವಾರು ಸನ್ಯಾಸಿ ವೇಷಗಳನ್ನು ಕರೆಸಿದನಲ್ಲ; ಬಂದವರಲ್ಲಿ ಬಹಳ ಜನ ಅವನಂತೆ ಕಚ್ಚೆಹರುಕರೇ. ಕೆಲವರದ್ದು ಬೆಳಕಿಗೆ ಬಂದಿದೆ; ಕೆಲವರದ್ದು ಬರಲಿಲ್ಲ ಅಷ್ಟೆ. ಅವರೆಲ್ಲ ಸೇರಿ ಕಚ್ಚೆಹರುಕು ಕಾವಿವೇಷದವರ ಸಂಘ ಅಂತ ಅಧಿಕೃತವಾಗಿ ಮಾಡಿಕೊಂಡು ಅಖಿಲ ಭಾರತ ಪ್ರಸಾದ ವಿತರಕ ಹಾವಾಡಿಗರ ಒಕ್ಕೂಟ ಮಹಾನಿಗಮದ ಅಂಗಸಂಸ್ಥೆಯನ್ನಾಗಿ ಅದನ್ನು ಸ್ಥಾಯಿಗೊಳಿಸಬೇಕು. ದಕ್ಷಿಣದ ರಾಂಪಾಲ ಈಗ ಅದೇ ಹಾದಿಯಲ್ಲಿದ್ದಾನೆ!

SELF-SURRENDER IS THE HIGHEST AND EASIEST method for enlightenment. One who has surrendered
himself is always protected by the divine power. One who possesses nothing and has no one to protect him
belongs to God and is constantly under the protection of the Divine.

ನಮ್ಮ ಕ್ರಿಮಿನಲ್ಲಾಚಾರ್ಯರನ್ನು ದೇವರೆಂಬ ಶಕ್ತಿ ಕೈಬಿಟ್ಟಿದೆ. ಅದೀಗ ಧನಬಲ, ಜನಬಲ, ತೋಳ್ಬಲದ ಮೇಲೆ ಮಾತ್ರ ನಿಂತಿದೆ! ಯಾವ ಹೊತ್ತಿನಲ್ಲಿ ಎಲ್ಲಿ ಯಾವುದು ಕಡಿಮೆ ಬೀಳುತ್ತೋ ಗೊತ್ತಾಗೋದಿಲ್ಲ; ಹೀಗಾಗಿ ಆಗಾಗ ಮಾಸ್ವಾಮಿಗಳ ಬಿಪಿ ರೈಸ್ ಆಗುತ್ತದೆ. ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದಿನ ತೊನೆಯಪ್ಪನೋರನ್ನ ಇಬ್ಬರು ಹೆಗಲು ಕೊಟ್ಟು ಸುಧಾರಿಸಬೇಕಾಯ್ತು.

ರಕ್ಷಣೆಗಾಗಿ ಬಿಲ್ಡಪ್ ಪ್ರದರ್ಶಿಸಲಿಕ್ಕೆ ಚತುರ್ಮೋಸದಲ್ಲಿ ಇಲ್ಲದ ಸರ್ಕಸ್ಸುಗಳನ್ನು ನಡೆಸುತ್ತಿದ್ದಾನೆ. ಯಾವುದೂ ಶಾಸ್ತ್ರ ಸಮ್ಮತವಲ್ಲ. ಜಪಾನುಷ್ಠಾನದಲ್ಲಿ ಹೆಚ್ಚಿನ ಸಮಯ ವ್ಯಯಿಸಬೇಕಾದ ಸನ್ಯಾಸಿ ಬೂಟಾಟಿಕೆಯಲ್ಲಿ ದಿನದ ಬಹುಪಾಲು ಸಮಯವನ್ನು ಕಳೆಯುತ್ತಿದ್ದಾನೆ. ಇದನ್ನೆಲ್ಲ ನಮ್ಮ ’ಪಂಡಿತರುಗಳಿ’ಗೆ ತಿಳಿಸೋದಾದರೂ ಯಾರು?

ಸ್ವಾಮಿ ರಾಮ ಮನಗೇಕೆ ಇಷ್ಟವಾಗುತ್ತಾರೆ ಅಂದರೆ ಸಾವಿನ ಸನಿಹದಲ್ಲೂ ಸಹ ಭಗವಂತನಲ್ಲಿ ಅವರು ಅಪಾರ ವಿಶ್ವಾಸವನ್ನು ಹೊಂದಿದ್ದರು. ಯಾವ ಶಕ್ತಿ ಯಾವ ಉದ್ದೇಶಕ್ಕಾಗಿ ತಮ್ಮನ್ನು ಹುಟ್ಟಿಸಿದೆಯೋ ಅದೇ ಶಕ್ತಿ ತಮ್ಮನ್ನೆಲ್ಲ ಮುನ್ನಡೆಸುವ ಮತ್ತು ತನ್ನೆಡೆಗೆ ಸೆಳೆದುಕೊಳ್ಳುವ ಸಂಕಲ್ಪವನ್ನು ಮಾಡಿರುತ್ತದೆಂಬುದು ಅವರಿಗೆ ಗೊತ್ತಿತ್ತು.

ಹಿಮಾಲಯದ ರಮಣೀಯ ತಪೋವನಗಳನ್ನೆಲ್ಲ ಖುದ್ದಾಗಿ ಕಣ್ಣಾರೆ ಕಂಡವರು ಮತ್ತು ಕಂಡಿದ್ದನ್ನೆ ಕಣ್ಣಿಗೆ ಕಟ್ಟುವ ಹಾಗೆ ಸರಳವಾಗಿ ಹಿತವಾಗಿ ಕತೆಗಳಂತೆ ಹೇಳಿದವರು ಅವರೊಬ್ಬರೇ. ಅನನ್ಯ ಶರಣಾಗತಿಗೆ ಅವರ ಜೀವನದ ಕತೆಯೊಂದನ್ನು ಅವರ ಮಾತುಗಳಲ್ಲೇ ಕೇಳಿ-

I had heard and read so much about a village called Jñanganj that my desire for visiting this place became
intense. Many pilgrims have heard about that place, but it is rare that someone perseveres enough to reach
there. This small community of spiritual people is situated deep within the lap of the Himalayas, surrounded
by snowy peaks. For eight months of the year one cannot enter or come out of that place. A small
community of yogis lives there all the time. These yogis observe silence and spend most of their time in
meditation. Small log houses provide shelter, and their main food is potatoes and barley, which they store
for the whole year. This particular community is made up of Indian, Tibetan, and Nepalese sadhus. This
small group of adepts resides on the Himalayan border between Tibet and Pithora Garh. There is no other
place but this which can be called Jñanganj.

I decided to go to Mount Kailas along with another four renunciates in order to visit this village. We
went from Almora to Dorhchola to Garbiank, and after several days when we reached Rakshastal we lost
our way. It was in the month of July when the snow melts in the Himalayan mountains. During this season
of the year the glaciers move and sometimes an entire glacier crashes down and blocks the path. For several
days there may be no way to go.

As we were walking we found glaciers collapsing, blocking the way behind and in front of us. I was
accustomed to such sudden calamities, but the other swamis were new to these adventures. The swamis
were very much frightened. They held me responsible for this and started putting the blame on me because I
was from the Himalayas. They said, “You should have known better. You are from the mountains. You
misguided us. We have no food, the path is blocked, it is very cold. We are dying here.”
We were stranded there by the side of an enormous lake, called Rakshastal, which means “Lake of the
Devil.” Because of the melting snow and avalanches, the water started rising. By the second day everyone
was in panic. I said, “We are not ordinary worldly people. We are renunciates. We should die happily.
Remember God. Panic is not going to help us.”

Everyone started remembering his mantra and praying, but nothing seemed to help. Here their faith was
tested—but none of them had any. They were afraid of being buried in the snow. I started joking and said,
“Suppose you all die: what will be the fate of your institutions, wealth, and followers?” They said, “We may
be dying, but first we will see that you die.” My jokes and my taking this situation lightly made them more
angry.

Very few people know how to enjoy humor. Most people become very serious in such adverse
situations. Humor is an important quality that makes one cheerful in all walks of life. To cultivate this
quality is very important. When the poison was given to Socrates, he was very humorous and made a few
jokes. When the cup of hemlock was given to him he said, “Can I share a bit of it with the gods?” Then he
smiled and said, “Poison has no power to kill a sage, for a sage lives in reality, and reality is eternal.” He
smiled and took the poison.

I said to these renunciates, “If we have to live and if we are on the right path, the Lord will protect us.
Why should we worry?” It started becoming dark and again snow started falling. Suddenly a man with a
long beard wearing a white robe and carrying a lantern appeared before us. He asked, “Have you lost your
way?”

“For almost two days we have had nothing to eat, and we do not know how to get out of this place,” we
replied. He told us to follow him. There had seemed to be no way through that avalanche—but when we
followed him we eventually found ourselves on the other side. He showed us the way to a village which was
a few miles away and instructed us to pass the night there. He then suddenly disappeared. We all wondered
who he was. The villagers say that such experiences are not uncommon in this land of devas. These bright
beings guide innocent travelers when they lose their way. We stayed in this village that night. The next day
the other four renunciates refused to travel with me. They all turned back. They did not want to go further
into the mountains because they feared more dangers. After being given directions by the villagers I went all
alone toward Jñanganj. One of the sadhus there was kind enough to give me shelter, and I stayed for one
and a half months. This place is surrounded by high snowy peaks and is one of the most beautiful places that
I have ever seen.

ಕಥೆಯಲ್ಲಿರುವ ಜೊತೆಗಾರ ಸಾಧುಗಳಿಗೆ ಅವರು ಹಾಕಿದ ಪ್ರಶ್ಹೆಗಳನ್ನು ಗಮನಿಸಿ. ಸನ್ಯಾಸಿಗಳು ಪರಿತ್ಯಜ್ಯರಾಗಿರಬೇಕು. ಅವರಿಗೆ ಯಾವುದೇ ಆಸೆಯೂ ಇರಬಾರದು. ಪೀಠ ಅವರದ್ದಲ್ಲ, ಮಠ ಅವರದ್ದಲ್ಲ, ಸುತ್ತ ಇರುವ ಜನ ಅವರ ಜನವಲ್ಲ. ಅಲ್ಲೆಲ್ಲ ಅವರು ನಿಮಿತ್ತಮಾತ್ರ. ನಿಮಿತ್ತ ಮಾತ್ರಕ್ಕೆ ಇರುವವರು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ಡಿವಿಜಿ ಹೀಗೆ ಹೇಳ್ತಾರೆ-

ಒಡೆಯನೆಂದೋ ಬಂದು ಕೇಳ್ವನದಕುತ್ತರವ |
ಕೊಡಬೇಕು ತಾನೆನುವವೊಲು ಋಜುತೆಯಿಂದ |
ಒಡಲ ಜಾಣಿನ ಜೀವಶಕ್ತಿಗಳನೆಲ್ಲವನು |
ಮುಡುಪುಕೊಟ್ಟನು ಭರತ – ಮಂಕುತಿಮ್ಮ ||

ಮಠ ನನ್ನದಲ್ಲ, ಮಠಕ್ಕೆ ಸಂಬಂಧಿಸಿದ ಆಸ್ತಿ-ಪಾಸ್ತಿ ತನ್ನದಲ್ಲ, ಯಾವ ಪೀಠವೂ ತನ್ನದಲ್ಲ, ಯಾವ ಜನರೂ ತನಗೆ ನಿಜವಾಗಿ ಸಂಬಂಧಿಸಿದವರಲ್ಲ ಎಂಬ ಭಾವನೆ ಮಠದ ಸನ್ಯಾಸಿಯಲ್ಲಿರಬೇಕು. ಹಾಗಾದರೆ ಮಠಕ್ಕೆ ಅವನಾರು? ಅವನೊಬ್ಬ ಕಸ್ಟಡಿಯನ್ ಅಷ್ಟೆ. ರಾಮ ಬರುವವರೆಗೆ ರಾಜ್ಯವನ್ನು ಭರತ ನಿಅರ್ವಹಿಸಿದ್ದನಲ್ಲವೇ? ಹಾಗೆ. ಹಿಂದೆ ಯಾರೋ ಇದ್ದರು, ಮುಂದೆ ಯಾರೋ ಬರುತ್ತಾರೆ, ಇರುವವರೆಗೆ ತನ್ನದಲ್ಲದ್ದರ ಉಸ್ತುವಾರಿಯನ್ನು ಅತ್ಯಂತ ಜಾಗರೂಕನಾಗಿ ನಿರ್ವಹಿಸಬೇಕು.

ಈ ಕಾರಣದಿಂದಲೇ ಸನ್ಯಾಸಿಗೆ ವಂದಿಸುವಾಗ ವೈದಿಕರು ಹೇಳ್ತಾರೆ-

ನ ಕರ್ಮಣಾ ನ ಪ್ರಜಯಾ ಧನೇನ
ತ್ಯಾಗೇನೈಕೇ ಅಮೃತತ್ವಮಾನಶುಃ |
ಪರೇಣ ನಾಕಂ ನಿಹಿತಂ ಗುಹಾಯಾಂ
ವಿಭ್ರಾಜದೇತದ್ಯತಯೋ ವಿಶಂತಿ |
ವೇದಾಂತ ವಿಜ್ಞಾನ ಸುನಿಶ್ಚಿತಾರ್ಥಾಃ
ಸನ್ಯಾಸ ಯೋಗಾದ್ಯತಯಃ ಶುದ್ಧ ಸತ್ತ್ವಾಃ |
ತೇ ಬ್ರಹ್ಮ ಲೋಕೇ ತು ಪರಾಂತ ಕಾಲೇ
ಪರಾಮೃತಾತ್ಪರಿಮುಚ್ಯಂತಿ ಸರ್ವೇ ||

ಇದನ್ನೆಲ್ಲ ಬಿಟ್ಟು ಮನಸ್ಸಿಗೆ ಬಂದಂತೆ ದುರಾಚಾರಗಳನ್ನು ನಡೆಸುತ್ತ, ಪ್ರಶ್ನಿಸಿದ ಸಾಧು ಜನರ ಮೇಲೆ ಗೂಂಡಾ ಚೇಲಾಗಳನ್ನು ಛೂ ಬಿಟ್ಟು ಥಳಿಸುತ್ತ, ಮಹಿಳೆಯೊಂದಿಗೆ ಏಕಾಂತ ನಡೆಸುತ್ತಿದ್ದರೆ ಭಗವಂತ ಕಾಪಾಡುವನೇ? ಎಂತಹ ವಜ್ರದೇಹವಾದರೂ ಸೃಷ್ಟಿಸಿದಾತನಿಗೆ ಅದನ್ನು ಒಡೆಯುವುದು ಕಠಿಣವೇ?

ಶಂಕರರ ಹೆಸರಿನಲ್ಲಿ ಇಂದು ಅನೇಕರು ಬದುಕಿಕೊಂಡಿದ್ದಾರೆ! ಅವರ ಹೆಸರನ್ನು ತೆಗೆದುನೋಡಿ-ಕಿಲುಬು ಕಾಸಿನ ಗೌರವವೂ ಇರೋದಿಲ್ಲ. ತನ್ನ ಮೂವತ್ತೆರಡು ವರ್ಷಗಳ ಭೌತಿಕ ಬದುಕಿನಲ್ಲಿ ಶಂಕರರು ಯಾವ ಆಡಂಬರಗಳನ್ನೂ ನಡೆಸಲಿಲ್ಲ; ಹಾರ-ತುರಾಯಿ,ಪಲ್ಲಕ್ಕಿ, ಛತ್ರ, ಚಾಮರ, ದೀವಟಿಗೆ ಸಾಕಾಗೋದಿಲ್ಲ ಅಂತ ಪಂಚದೀವಟಿಗೆ ಊಹೂಂ ಇವುಗಳನ್ನೆಲ್ಲ ಅವರು ದೂರ ಇರಿಸಿದರು. ಎಲ್ಲಾದರೂ ಶಂಕರರು ಅವುಗಳ ಸಮೇತ ಕಾಣಿಸಿಕೊಂಡ ಉಲ್ಲೇಖ ಸಿಕ್ಕರೆ, ಚಿತ್ರ ಸಿಕ್ಕರೇ ತೋರಿಸಿ. ಅವರೇ ಬಳಸದ ಉಪಚಾರಗಳನ್ನು ಇವರೇಕೆ ಬಳಸಬೇಕು?

“ನಾವು ಮನಸ್ಸು ಮಾಡಿದರೆ ನಿನಗೆ ಬೇಕಾದ್ದನ್ನು ಕೊಡಬಲ್ಲೆವು. ನಮಗೆ ಬೇಕಾದ್ದನ್ನು ನೀನು ಕೊಟ್ಟರೆ ನಿನ್ನ ಗಂಡನಿಗೆ, ಮಕ್ಕಳಿಗೆ ಎಲ್ಲರಿಗೂ ಅನುಕೂಲ ಆಗೋ ಹಾಗೆ ಮಠದಿಂದ ಸಹಾಯ ಮಾಡ್ತೇವೆ. ನಿನ್ನ ಗಂಡ ಸಾಫ್ಟ್ ವೇರ್ ಎಂಜಿನೀಯರಿಗಿಂತ ಹೆಚ್ಚಿಗೆ ಆದಾಯ ಪಡೆಯೋ ಹಾಗೆ ಮಾಡ್ತೇವೆ” ಎನ್ನುವ ಮೊದಲು ಮೆರವಣಿಗೆಯಲ್ಲಿ ಕುಳಿತು ಹೆಂಗಸರಿಗೆ ಕಣ್ಣಲ್ಲೇ ಪೋಸು ಕೊಡಲಿಕ್ಕೇನು?

ಕ್ರಿಮಿನಲ್ಲಾಚಾರ್ಯರ ಅನೇಕ ಭಾವಚಿತ್ರಗಳಲ್ಲಿ ಆವರ ಕಣ್ಣುಗಳನ್ನು ಗಮನಿಸಿ, ಮುಖಭಾವವನ್ನು ಗಮನಿಸಿ,[Body Language Itself says he is womaniser / lecher]ಆತನೊಬ್ಬ ವಿಕೃತ ಕಾಮಿ ಅನ್ನೋದನ್ನು ಅಲ್ಲೇ ಗುರುತಿಸಬಹುದು. ಅದು ಹೋಗಲಿ ವೈಜ್ಞಾನಿಕೆವಾಗಿಯೇ ರುಜುವಾತಾದರೂ ಅದನ್ನೊಪ್ಪದ ಪೆದ್ದ ಮುಂಡೆಗಂಡರನ್ನು ಯಾವ ದೇವರು ಮೆಚ್ಚಿಯಾನು? ಯಾವ ಭಗವಂತ ಅವರ ಕೈ ಹಿಡಿದಾನು?

Thumari Ramachandra

source: https://www.facebook.com/groups/1499395003680065/permalink/1816043845348511/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s