ಚಾಷ್ಟೇ ಚಾಟು 26-ತ್ಯಾಗ ಮಾಡಿ ತ್ಯಾಗಿ ಆಗೋ ಬಗ್ಗೆ ಆಲೋಚಿಸಿ ಸಾಮಿ

ಚಾಷ್ಟೇ ಚಾಟು 26-ತ್ಯಾಗ ಮಾಡಿ ತ್ಯಾಗಿ ಆಗೋ ಬಗ್ಗೆ ಆಲೋಚಿಸಿ ಸಾಮಿ
**********************

ಯಾಕೋ ಸ್ವಾಮಿ ನಾ ಎಲ್ಲಿ ನೋಡಿದ್ರು ನಿಮ್ ವಿರೋಧಿಗಳೇ ಕಾಣ್ತಾ ಇದಾರೆ…ಪೊರಕೆ ಚಪ್ಪಲಿ ತೋರ್ಸಿದವರು ಕೇಸು ಖುಲಾಸಾಗಿ ಕೈ ತೊಕ್ಕಂಡ್ರೆ ಸಾಕು ಅಂತ, ನಿಮಗೇ ‘ಹಿಡಿ’ ಶಾಪ ಹಾಕೋ ಕಾಲ ಜಾಸ್ತಿ ದೂರ ಇಲ್ಲ ಅನ್ನುಸ್ತಾ ಐತೆ ಸ್ವಾಮಿ.
ಬೆಂಕಿ ಇಲ್ಲದೇ ಹೊಗೆ ಬರಾಕಿಲ್ಲ ಅನ್ನೋ ಗಾದೆ ಮಾತು ಸುಳ್ಳಾ ಸ್ವಾಮಿ..ಅದು ಅವರಿಗೂ ಅರ್ಥ ಆಗಿದೆ ಬುಡಿ. ಈಗ ಹೊಗೆ ಸಿಕ್ಕಾಪಟ್ಟೆ ಜಾಸ್ತಿ ಆಗಿ ,ಉಸಿರು ಕಟ್ಟಿ ಕೆಮ್ಮು ಜೋರಾಗಿದೆ ನಿಮ್ ಕಡೆಯವರಿಗೆ ಅಂತ ಸುದ್ದಿ ..ಹೌದಾ ಸ್ವಾಮಿ?!…ನಿಮ್ ‘ವಿಶ್ವಶೋಕ’ದ ಹುದ್ದೆ ಭಾವಯ್ಯಂದು ಎಲ್ಲೂ ಸುದ್ದಿ ಇಲ್ಲ…ಮೊನ್ನೆ ನಿಮ್ ಪರ ಇದ್ದೋನೆ ಒಬ್ಬ ಸಿಕ್ದ ಸ್ವಾಮಿ…ಅದು ಇದು ಮಾತಾಡ್ತ, ಬಾ “ಬಾವಯ್ಯನ್ನ ತಿಂದು ಬರಾಂವ” ಅಂದ ..ನನಗೆ ತಲೆ ಬುಡ ಅರ್ಥ ಆಗ್ಲಿಲ್ಲ ಸ್ವಾಮಿ …ಏನು ಹಾಗಂದ್ರೆ ಅಂದೆ….ಪಾನೀಪೂರಿ! ಅಂದ..ಪಟಾಲಂಗಳು ಪಾನಿಪೂರಿಗೆ ‘ಭಾವಯ್ಯ’ ಅಂತನೇ ಅಡ್ ಹೆಸರು ಇಟ್ಟಿದಾರಂತೆ ಹೌದಾ ಸ್ವಾಮಿ….ಆದ್ರು ಮಠದಲ್ಲಿ ಮೊದಲು ಕಾಮದ ವಾಸನೆ ಹೊರಟಿದ್ದೇ ನಿಮ್ ಭಾವಯ್ಯಂದು ಬುಡಿ…ಅದನ್ನು ಹ್ಯಾಗೋ ತಟ್ಟಿ ಹಾರ್ಸಿ ಬುಟ್ರಿ ….ನಿಮ್ದು ತಟ್ಟಿ ಹಾರ್ಸಿದಂಗು ಇನ್ನೂ ಮೇಲ್ ಮೇಲೆ ಹೋಗಿ ಕೂರ್ತಾ ಇದೆ….ಇನ್ನು ತಟ್ಟಿ ಹಾರ್ಸೋದು ಕಷ್ಟ ಅಂತ ನಿಮ್ ಕಡೆಯವರಿಗೆ ಗೊತ್ತಾಗಿ ಬುಟ್ಟಿದೆ ಅಂತ ಸುದ್ದಿ…ಇನ್ನೂ ಟ್ರಯಲ್ಲೇ ನಡೆದಿಲ್ಲ.. ಆಗಲೇ ನೀವು ಅದೇನೋ ನಾಡಿ ಉಜ್ಜಿದ್ರಿಂದ ಹಿಡಿದು, ಹೊಡೆದು ಬಡಿದೂ ರಕ್ತಸ್ರಾವ ಬಂದಿತ್ತು ಅನ್ನೋ ರೀಯಲ್ ವಿಚಾರನೂ ಜನರಿಗೆ ಗೊತ್ತಾಗಿ ಬುಟ್ಟಿದೆ…ಅಭ್ಯಾಸ ಬಲದ ಮೇಲೆ ಹರಿ ಶಿವ ಗುರು ಅಂಥ ಹೇಳ್ತಿದ್ದವರು ಅದನ್ನು ಹೇಳೋದು ಬಿಡೋಕಾಗ್ದೆ ಆಮೇಲೆ ಶಾಂತಂ ಪಾಪಂ ಅಂತ ಹೇಳ್ತಿದಾರಂತೆ…ನಿಮ್ ಬಗ್ಗೆ ಒಳ್ಳೆ ಮಾತಾಡೋರು ಊರಿಗೊಬ್ರು ಸಿಗೋದು ಕಷ್ಟ ಆಗಿ ಬುಟ್ಟಿದೆ… ಮಂತ್ರಕ್ಕಿಂತ ಉಗಳೇ ಜಾಸ್ತಿ ಅನ್ನೋ ಗಾದೆ ತರ ಪುರೋಹಿತ ಭಟ್ರುಗಳ ಬಾಯಲ್ಲೂ ನಿಮ್ ಬಗ್ಗೆ ಸಂಸ್ಕೃತ ಪದಗಳೇ ಉದರೋದಕ್ಕೆ ಹಿಡಿದ ಮೇಲೆ, ಇನ್ನೂ ನಿಮಗೆ ಆ ಪೀಠದ ಮೇಲೆ ವ್ಯಾಮೋಹ ಹೋಗಿಲ್ವಲ್ಲ ಅನ್ನೋದೆ -ಕಡೆಯಲ್ಲಿ ಎಲ್ಲರನ್ನೂ ಕಾಡುವ ಪ್ರಶ್ನೆ.. “ಹೀಗೂ ಉಂಟೆ” ಅನ್ನೋ ಕಾರ್ಯಕ್ರಮದ ತರ ಆಗ್ಬುಟ್ಟಿದೆ ಸ್ವಾಮಿ. . . ಹಾಡು ಹೇಳ್ತಿದ್ದ ಸ್ವಾಮಿ ಒಬ್ರು ಭಕ್ತೆಯ ಮೇಲೆ ಮನಸ್ಸಾಯಿತು ಅಂತ ಸನ್ಯಾಸ ತ್ಯಜಿಸಿ ಗೃಹಸ್ಥಾಶ್ರಮ ಸೇರಿ ಈಗಲೂ ಜನ ಕಾಲಿಗೆ ಬೀಳೋತರ ಬದುಕ್ತಿಲ್ವ ಸ್ವಾಮಿ….ಅವರಿಗೆ ಹಾಡುವ ಸರಸ್ವತಿ ಒಲಿದಿದ್ಳು……ಅದ್ಯಾವುದೋ ಕಥೆ ಮಾಡಿ ಹೆಂಗಸರ ಮದ್ಯೆ ನಾನೇ ರಾಮ ಹೇಳಿ ಕಾಲೆತ್ತಿಸಿ ಕುಣಿದಿದ್ದು ಬುಟ್ರೆ..ನಿಮಗೆ ಯಾವ ಮಣ್ಣಂಗಟ್ಟಿ ವಿದ್ಯೆಯೂ ಗೊತ್ತಿಲ್ಲ ಅಂತ ಜನ ಮಾತಾಡ್ತ ಅವ್ರೆ ಸ್ವಾಮಿ….ನಾವಿದ್ದೇವೆ ಹೇಳಿ ಕೂಗಿದವ್ರಲ್ಲಿ ಹೆಚ್ಚಿನ ಜನ ಅಡಗಿ ಕುಂತವ್ರೆ…ಜಾತ್ಯಾತೀತ ಚತುರ್ಮೋಸ ಮಾಡಿದ್ರು ಜನ ಸೇರಿಸೋದು ಕಷ್ಟ ಆಗ್ತಾ ಐತೆ…ಕೇಸು ದಿನಾದಿನಾ ಬಿಗಿಯಾಗ್ತಿರೋ ಸುದ್ದಿ ನಿಮ್ಮವರೇ ಟೀವಿನಾಗೆ ಬಂದ್ ಹೇಳವ್ರೆ…ಎರಡನೇ ಕೇಸಿನ ಒಡ್ಡೋಲಗಕ್ಕೆ ತಯಾರಿ ನಡೆದಿದೆ ಅಂಥ…. ಮಾನಾ ಪೂರ್ತಿ ಮೊದಲನೇ ಕೇಸಲ್ಲಿ ಕಳೆದುಕಂಡ್ ಬಿಟ್ಟಿದಿರಿ,ಎರಡನೇ ಕೇಸು ಏನಾದ್ರು ತೊಂದ್ರೆ ಇಲ್ಲ ಅಂತ ನಿಮ್ಮವರೇ ಹೇಳ್ತಾ ಅವ್ರಂತೆ..ಇದು ಬೇಕಾ ಸ್ವಾಮಿ ನಿಮ್ಗೆ…ಯಾಕೋ ಸ್ವಾಮಿ ನೀವು ಈಗಲೇ ಪೀಠ ತ್ಯಾಗ ಅಂಥ ಮಾಡಿದ್ರೆ..ಹಂಗು ಹಿಂಗು ಜನರಿಗೆ ಕನಿಕರ ಬಂದು..ನಮ್ ಪೀಟದ ಮೇಲೆ ಕುಂತ್ ಹೋದ ಸ್ವಾಮಿ…ತಪ್ಪು ನಿಮ್ದೊಂದೇ ಅಲ್ಲ..ಸುತ್ತ ಇರೋ ಪಟಾಲಂ, ನಿಮ್ ಪರಮ ಭಕ್ತೆಯರು ಎಲ್ಲರದ್ದು ಐತೆ…ಒಂದೇ ಕೈಯಲ್ಲಿ ಚಪ್ಪಾಳೆ ಆಗೋಲ್ಲ ಅಂಥ ನಿಮ್ ಮರ್ವಾದೆ ಉಳಿಸೋ ಪ್ರಯತ್ನ ಮಾಡಿದರೂ ಮಾಡ್ ಬೋದು…. ನಿಮ್ ಅಪ್ಪ ಅಲ್ಲೆಲ್ಲೋ ಆಶ್ರಮ ಮಾಡಕ್ಕೆ ತಯಾರಿ ನಡೆಸವ್ನೆ ಅಂಥ ಸುದ್ದಿ ಇದೆ..ಹ್ಯಾಗಿದ್ರು ಸರ್ಕಾರದವ್ರು ಲೆಕ್ಕ ಕೇಳಕ್ಕೆ ಯಾರುನ್ನೋ ನೇಮಿಸೋ ಅಪಾಯ ಬೇರೆ ಐತೆ…ಮಠದ ಲೆಕ್ಕ ಎಲ್ಲ ಸರಿಯಾಗಿ ಕೊಟ್ಟು ನಿಮ್ದೇ ಒಂದ್ ಮಠ ಕಟ್ಟಿಕೊಳಾದ್ರಲ್ಲೂ ಸುಖ ಐತೆ ಅಂತ ಕಾಣುತ್ತೆ ಸ್ವಾಮಿ….ಚೀ ತೂ ಅಂಥ ಪೀಠದ ಮ್ಯಾಗೆ ಕುಂತು ಉಗಿಸಿಕೊಳ್ಳೋದಕ್ಕಿಂತ ಪೀಠತ್ಯಾಗ ಮಾಡಿ ತ್ಯಾಗಿಯಾಗೋದು ಒಳ್ಳೇದು ಸ್ವಾಮಿ…ಇಲ್ಲ ಅಲ್ಲೇ ಕುಳಿತು ಇನ್ನೂ ಯಾರ್ ಯಾರಿಗೋ ಫಿನಿಶಿಂಗ್ ಟಚ್ ಕೊಡೊ ಕನಸು ಕಂಡ್ರೆ, ಕೋರ್ಟೇ ಫಿನಿಶಿಂಗ್ ಟಚ್ ಕೊಡ್ಬೋದು ಸ್ವಾಮಿ..ನಂಗ್ಯಾಕೆ ಸ್ವಾಮಿ ದೊಡ್ಡೋರ ವಿಚಾರ.. ಇನ್ನು ನೀವುಂಟು ನಿಮ್ ಪಟಾಲಂ ಉಂಟು ಸ್ವಾಮಿ…ನಂಗೆ ಟೈಮಾತು..ಇಲ್ಲೇ ಹೋಗಿ ಒಂದ್ ಪ್ಲೇಟ್ ಭಾವಯ್ಯನ್ನ ತಿನ್ಕಂಡ್ ಬರಾಂವ ಅಂಥ.. .ನಾ ಬರ್ಲಾ

Prakash Kakal

source: https://www.facebook.com/groups/1499395003680065/permalink/1807290099557219/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s