ರಾಘವಶ್ರೀ ವೈದ್ಯಪರೀಕ್ಷೆ ವಿಚಾರಣೆ ಬೇಕಿಲ್ಲ : ಕೋರ್ಟ್

ರಾಘವಶ್ರೀ ವೈದ್ಯಪರೀಕ್ಷೆ ವಿಚಾರಣೆ ಬೇಕಿಲ್ಲ : ಕೋರ್ಟ್

ಉದಯವಾಣಿ, Aug 11, 2016, 3:45 AM IST

ಬೆಂಗಳೂರು: ಗಾಯಕಿ ಪ್ರೇಮಲತಾ ಶಾಸಿŒ ಮೇಲಿನ ಅತ್ಯಾಚಾರ ಪ್ರಕರಣದ ಸಂಬಂಧ ವೈದ್ಯಕೀಯ ಪರೀಕ್ಷೆಗೆ ಹಾಜರಾಗುವಂತೆ ಸಿಐಡಿ ಪೊಲೀಸರು ನೀಡಿದ್ದ ನೋಟಿಸ್‌ ರದ್ದು ಕೋರಿ ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್‌ ವಿಭಾಗೀಯ ಪೀಠ ತಿರಸ್ಕರಿಸಿದೆ.

ಅತ್ಯಾಚಾರ ಆರೋಪದ ಬಗ್ಗೆ ಸೆಷನ್ಸ್‌ ನ್ಯಾಯಾಲಯ ಸ್ವಾಮೀಜಿ ಅವರನ್ನು ಆರೋಪ ಮುಕ್ತಗೊಳಿಸಿದೆ. ಹೀಗಾಗಿ ವೈದ್ಯಕೀಯ ಪರೀಕ್ಷೆಗೆ ಹಾಜರಾಗಲು ನಿರ್ದೇಶಿಸಿ ಸಿಐಡಿ ಪೊಲೀಸರು ನೀಡಿದ್ದ ನೋಟಿಸ್‌ ರದ್ದು ಕೋರಿದ್ದ ಈ ಮೇಲ್ಮನವಿ ವಿಚಾರಣಾ ಮಾನ್ಯತೆ ಕಳೆದುಕೊಳ್ಳಲಿದ್ದು, ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿಗಳ ವಿಭಾಗೀಯ ಪೀಠ ಮೇಲ್ಮನವಿ ತಿರಸ್ಕರಿಸಿದೆ.

ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾರಣಕ್ಕೆ 2014ರ ಸೆ.21ರಂದು ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಹಾಜರಾಗುವಂತೆ ರಾಘವೇಶ್ವರ ಸ್ವಾಮೀಜಿಗೆ ಸಿಐಡಿ ಪೊಲೀಸರು ಆ ವರ್ಷ ನೋಟಿಸ್‌ ನೀಡಿದ್ದರು. ಈ ನೋಟಿಸ್‌ ರದ್ದು ಕೋರಿ ಸ್ವಾಮೀಜಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಏಕ ಸದಸ್ಯ ಪೀಠ 2014ರ ಡಿ.3ರಂದು ಸ್ವಾಮೀಜಿ ಅವರ ತಕರಾರು ಅರ್ಜಿ ವಜಾಗೊಳಿಸಿ ವೈದ್ಯಕೀಯ ಪರೀಕ್ಷೆ ನಡೆಸುವ ವಿಚಾರದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂದು ಹೇಳಿತ್ತು. ಈ ಆದೇಶ ಪ್ರಶ್ನಿಸಿ ಸ್ವಾಮೀಜಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿ ವಿಚಾರಣೆ ಹಂತದಲ್ಲಿರುವಾಗಲೇ 2016ರಂದು ಮಾ.31ರಂದು ನಗರದ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಲಯ ಶ್ರೀಗಳನ್ನು ಖುಲಾಸೆಗೊಳಿಸಿತ್ತು. ಹೀಗಾಗಿ, ಸಿಐಡಿ ನೋಟಿಸ್‌ ಪ್ರಶ್ನಿಸಿದ ಮೇಲ್ಮನವಿ ವಿಚಾರಣೆ ಅನವಶ್ಯಕ ಎಂದು ಬುಧವಾರ ಅಭಿಪ್ರಾಯಪಟ್ಟ ಹೈಕೋರ್ಟ್‌ ವಿಭಾಗೀಯ ಪೀಠ ಸ್ವಾಮೀಜಿ ಅವರ ಮೇಲ್ಮನವಿ ಅರ್ಜಿ
ತಿರಸ್ಕರಿಸಿದೆ.

source: http://www.udayavani.com/kannada/news/state-news/163251/vaidyaparikse-raghavasri-do-not-want-the-trial-court

 

vk20170811

source: Vijaya Karnataka

http://vijaykarnataka.indiatimes.com/state/raghaveshwar-swamiji/articleshow/53639959.cms

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s