ವೈಚಾರಿಕ ಚಿಂತನೆ-೮

ವೈಚಾರಿಕ ಚಿಂತನೆ-೮
…………………………
ವಿಶ್ವಾಮಿತ್ರರು ಶಾಪವಿತ್ತ ಪ್ರಸಂಗ.;

ಸೂಚನೆ: ಇದೊಂದು ಮಹಾಭಾರತದ ಎಳೆಯನ್ನು ಹಿಡಿದ ಕಥಾವಸ್ತು,..ಇಲ್ಲಿ ಬರುವ ಪಾತ್ರಗಳು ಯಾರಿಗಾದರೂ ಪ್ರಸಕ್ತ ಸನ್ನಿವೇಶದಲ್ಲಿ ಹೋಲಿಕೆಯಾದರೆ ಅದು ಕೇವಲ ಕಾಕತಾಳೀಯ :

ಹಗಲು ಹೊತ್ತಿನಲ್ಲಿಯೇ ಮುನಿಯೊಬ್ಬ ತನ್ನ ಸತಿಯೊಂದಿಗೇ..ಒತ್ತಿ ಹೇಳುತ್ತೇನೆ..ತನ್ನ..ಸತಿಯೊಂದಿಗೇ…ಮಿಲನೋತ್ಸವ ಮಾಡಿ ಹೇಗೆ ಶಾಪಗ್ರಸ್ತನಾದ ನೋಡಿ..

ಸಹಸ್ರಾರು ವಸಂತಗಳ ಹಿಂದೆ ಕೃತಯುಗದಲ್ಲಿ ಕಪಿಲಾ ನದಿಯ ತೀರದಲ್ಲಿ ಬೃಹದಾರಣ್ಯ ಪ್ರದೇಶದಲ್ಲಿ ಮಹಾಮುನಿಗಳಾದ ಜ್ಣಾನವ್ರತ ಮತ್ತು ಅವನ ಪತ್ನಿ ತಪಸ್ವಿಯಾದ ವಿಧ್ಯಾದರೆ, ಪರ್ಣಕುಟೀರವನ್ನು ರಚಿಸಿಕೊಂಡು ಬ್ರಾಹ್ಮಣ ಮತ್ತು ಕ್ಷತ್ರಿಯ ಕುಮಾರರಿಗೆ ವಿದ್ಯಾದಾನವನ್ನು ನೀಡುತ್ತಿದ್ದರು.ಲೋಕಕಲ್ಯಾಣಾರ್ಥವಾಗಿ ಯಜ್ಞ ಯಾಗಾದಿಗಳನ್ನು ನಡೆಸುತ್ತಿದ್ದರು.

ಒಂದು ವಸಂತ ಋತುವಿನ ಮುಂಜಾವು ಅತ್ಯಂತ ಸುಮನೋಹರವಾದ ಚೆಲುವಿನಿಂದ ಕಂಗೊಳಿಸುತ್ತಿದ್ದ ಪ್ರಕೃತಿಯನ್ನು ನೋಡಿ ಆನಂದೋದ್ರೇಕಕ್ಕೊಳಗಾದ ಅವರು ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು ಮನ್ಮಥನ ಶರಾಘಾತಕ್ಕೆ ಒಳಗಾಗಿಬಿಟ್ಟರು.
ಪ್ರಾತಃಕಾಲದಲ್ಲಿ ಆಶ್ರಮದಲ್ಲಿ ಪ್ರಣಯ ನಿಶಿದ್ಧವಾದುದರಿಂದಲೂ ಮತ್ತು ಯಾರಾದರೂ ಗಮನಿಸಬಹುದೆಂಬ ಅಂಜಿಕೆಯಿಂದಲೂ ತಮ್ಮ ತಪಃಶಕ್ತಿಯಿಂದ ಮಾನವ ರೂಪವನ್ನು ತ್ಯಜಿಸಿ ಹಂಸ ಪಕ್ಷಿಗಳ ರೂಪವನ್ನು ಧರಿಸಿ ಮಿಲನಕ್ರೀಯೆಯಲ್ಲಿ ತೊಡಗಿಕೊಂಡರು..ವಿಧಿನಿಯಮವೇನೋ ಎಂಬಂತೆ ಅದೇ ಸಮಯದಲ್ಲಿ ಬ್ರಹ್ಮರ್ಷಿ ವಿಶ್ವಾಮಿತ್ರರು ಆಶ್ರಮಕ್ಕೆ ಆಗಮಿಸಿದರು.
ಮಿಲನಮಹೋತ್ಸವದ ತುತ್ತತುದಿಯಲ್ಲಿದ್ದ ಅವರಿಗೆ ವಿಶ್ವಾಮಿತ್ರರ ಆಗಮನ ಗೊತ್ತಾಗಲೇ ಇಲ್ಲ.
ವಿಶ್ವಾಮಿತ್ರರು ದಿವ್ಯದೃಷ್ಟಿಯಿಂದ ನೋಡಿದಾಗ ಹಂಸಪಕ್ಷಿಗಳ ರೂಪದಲ್ಲಿ ಅವರು ಸುಖಿಸುತ್ತಿರುವುದು ಗೊತ್ತಾಯಿತು…ಉಗ್ರಕೋಪಿಗಳಾದ ವಿಶ್ವಾಮಿತ್ರರು ಕ್ರೋಧದಿಂದ..”ನನ್ನ ಇರುವನ್ನು ಉಪೇಕ್ಷಿಸಿ ಅವಮಾನಕ್ಕೆ ಈಡುಮಾಡಿದ್ದೀರಿ .ತಪಸ್ವಿಗಳಾಗಿ ನಿಮ್ಮ ಕರ್ತವ್ಯವನ್ನು ಆಚರಿಸುವ ಬದಲು ಪ್ರಾಣಿಗಳ ರೂಪದಲ್ಲಿ ಅಸಹ್ಯಕರವಾದ,ಅನೀತಿಕರವಾದ ಪಾಶವೀ ಕಾಮದಲ್ಲಿ ತೊಡಗಿ ಈ ಸ್ಥಳದ ಪಾವಿತ್ರ್ಯವನ್ನು ಹಾಳುಗೆಡವಿದಗದ್ದೀರಿ,ರಾಜಸ ಗುಣಗಳಿಂದ ಮದೋನ್ಮತ್ತರಾದ ನೀವು ಚಂದ್ರವಂಶದ ರಾಜರ ಸಿಂಹಾಸನದಲ್ಲಿ ನೀವು ಧರಿಸಿದ ಹಂಸ ಪಕ್ಷಿಗಳ ರೂಪದಲ್ಲಿಯೇ ಜಡವಾಗಿ ನೆಲೆಸಿ.’ಎಂದು ಶಾಪವಿತ್ತರು.!

Kiran Mannaje

source: https://www.facebook.com/groups/1499395003680065/permalink/1804500423169520/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s