ವೈಚಾರಿಕ ಚಿಂತನೆ – ೭

ವೈಚಾರಿಕ ಚಿಂತನೆ – ೭
………………………..

ಈಗ ಹೇಗಿದೆಯೆಂದರೆ …

ಕೌರವರ ಬಳಿ ಹನ್ನೊಂದು ಅಕ್ಷೋಹಿಣಿ ಸೈನ್ಯವಿದೆ, . ಪಾಂಡವರ ಬಳಿಯಾದರೋ ಬರೇ ಏಳು ಅಕ್ಷೋಹಿಣಿ ಸೈನ್ಯ.! ಅದೂ ಅಲ್ಲದೆ ಕುರು ಸೇನೆಯಲ್ಲಿ ಅಜೇಯರಾದ ಭೀಷ್ಮ ಪಿತಾಮಹ, ಮಹಾ ಧನುರ್ಧರರಾದ ದ್ರೋಣಾಚಾರ್ಯ,ಮಹಾರಥಿ ಕರ್ಣ,ಮಹಾಬಲ ಶಲ್ಯ,ಪರಾಕ್ರಮಿಗಳಾದ ಶತಕೌರವರು,ಅಶ್ವತ್ಥಾಮ, ಸಂಶಪ್ತಕರಿದ್ದಾರೆ.

ಭೀಷ್ಮ ಪಿತಾಮಹ ಇಚ್ಛಾಮರಣಿ,ವಸುಷೇಣನು ಎದೆಯಲ್ಲಿಯೇ ಅಮೃತ ಕಲಶವುಳ್ಳವನು,ಅಶ್ವತ್ಥಾಮನಾದರೋ ಚಿರಂಜೀವಿ. ಯುದ್ಧದ ಕುರಿತಾದ ಕನಿಷ್ಠ ಜ್ಞಾನವುಳ್ಳವರನ್ನು ಕೇಳಿದರೂ ಕೌರವರ ಜಯ ನಿಶ್ಚಿತ ಎಂದೇ ಹೇಳುತ್ತಾರೆ.

ಅದಕ್ಕಾಗಿಯೇ ಹೆಚ್ಚಿನವರು ಕೌರವರನ್ನು ಬೆಂಬಲಿಸಿದರು,ಧುರ್ಯೋಧನನ ದುಷ್ಟತನ,ಅನ್ಯಾಯ,ಅನಾಚಾರ ಗೊತ್ತಿದ್ದರೂ ಕಣ್ಮುಚ್ಚಿ ಕುರುಡರಂತೆ ವರ್ತಿಸಿದರು.!

ಆದರೆ ಕೊನೆಗೆ ಯುದ್ಧದಲ್ಲಿ ಎಲ್ಲರನ್ನೂ ಕಳೆದುಕೊಂಡ ದುರ್ಯೋಧನ ಕಾಲವಂಚನೆಗಾಗಿ ವೈಶಂಪಾಯನ ಸರೋವರದಲ್ಲಿ ಅಡಗಬೇಕಾಯಿತು.
ಕಿರಾತಕರಿಂದ ಸುಳಿವು ಸಿಕ್ಕ ಪಾಂಡವರು ಆ ಸರೋವರವನ್ನು ಸುತ್ತುಗಟ್ಟಿ ಬೇಟೆಯ ಮೃಗವನ್ನು ಹೊರಗೆಳೆದಂತೆ ಅವನನ್ನು ಕೊಳದಿಂದ ಹೊರಹೊರಡಿಸುತ್ತಾರೆ
ಆ ಸಮಯದಲ್ಲಿ ದುರ್ಯೋಧನ ತಾನು ಈ. ಮೊದಲು ಪಾಂಡವರಿಗೆ ಬೈದ ಬೈಗುಳಗಳು ತನ್ನವರೊಂದಿಗೆ ಮಾಡಿದ ಅವಮಾನಗಳು ಎಲ್ಲವನ್ನೂ ಭೀಮನ ಬಾಯಿಂದ ಪುನಃ ಕೇಳುವಂತಾಯ್ತು ಅದಲ್ಲವೇ ವಿಧಿಯ ವಿಪರ್ಯಾಸ..?

Kiran Mannaje

source: https://www.facebook.com/groups/1499395003680065/permalink/1803524236600472/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s