ಚಾಷ್ಟೇ ಚಾಟು 22-“ಮೋದಿ ಭಾಷಣ ಸ್ವಾಮಿಗೆ ಇಕ್ಕಟ್ಟು”

ಚಾಷ್ಟೇ ಚಾಟು 22-“ಮೋದಿ ಭಾಷಣ ಸ್ವಾಮಿಗೆ ಇಕ್ಕಟ್ಟು”
**************************
ಅಲ್ಲಾ ಈ ಮೋದಿ ಸಾಹೇಬ್ರಿಗೆ ಯಾರ್ ಹೇಳಿದ್ರು ನಿಮ್ ಸುದ್ದಿ ಅಂಥ..ಅದೇನೋ ಭಾಷಣದಾಗೇ… ಈ ಗೋರಕ್ಷಣೆ ಮಾಡೋರಲ್ಲಿ ಹೆಚ್ಚಿನವರು ಕಳ್ರು..ಅಪರಾಧಿಗಳು…ರಾತ್ರೆ ಕ್ರಿಮಿನಲ್ ಚಟುವಟಿಕೆ ಮಾಡೋದು.. ಬೆಳಿಗ್ಗೆ ಗೋರಕ್ಷಣೆಯ ಮುಖವಾಡ ಹಾಕೋದು ಅಂದ್ರಂತೆ ಹೌದಾ ಸ್ವಾಮಿ…ನೀವು ಮಂತ್ರಾಕ್ಷತೆ ಕೊಟ್ಟು ಏಕಾಂತ ಮಾಡಾದು ಅವರಿಗೂ ಗೊತ್ತಾತಲ್ಲ ಹ್ಯಾಂಗೆ ಅಂತ.. ನೀವು ನಿಮ್ ಸಗಣಿ ವಾಸನೆ ಮುಚ್‍ಕಳಾಕೆ ಈ ವರ್ಷ ಗೋವುಗಳನ್ನೇ ಮುಂದಿಟ್ಕಂಡು ಚತುರ್ಮೋಸ ಮಾಡ್ತಿದೀರಿ…ಈ ಬಿಜೇಪಿ ನವ್ರು,ಹಿಂದೂ ಧರ್ಮ ಉಳ್ಸೋರು ಎಲ್ಲಾ ನಿಮ್ ಪರ ಬ್ಯಾಟಿಂಗ್ ಮಾಡೋದು ಬಿಟ್ಟು ಅದೇನ್ ಸಾಮಿ ಹಿಂಗ್ ಬೌನ್ಸರ್ ಹಾಕಾದಾ ??!! ದೇಶ್ ದಾಗೆ ಎಷ್ಟೆಲ್ಲಾ ಸಮಸ್ಯೆ ಐತೆ ..ಅದನ್ನೆಲ್ಲಾ ಬಿಟ್ ಬುಟ್ಟು ಈ ಸುದ್ದಿನೇ ಯಾಕ್ ಹೇಳಿದ್ರು..ಇದೇನೋ ಷಡ್ಯಂತ್ರ ಸಾಮಿ… ರಾಜ್ಯದಾಗಂತು ನಿಮ್ ಪರ ನಿಮ್ ಕುರಿಗ್ಳು ಬುಟ್ರೆ, ದುಡ್ ತಿನ್ಕೊಂಡ್ ಕೇಸು ಮುಂದೆ ಹಾಕ್ತಾ ಇರಾ ಜನ ಒಂದಿಷ್ಟು ಅವ್ರೆ…ಅವ್ರು ಇವತ್ತಲ್ಲ ನಾಳೆ ಕೈ ಎತ್ತೋದು ಗ್ಯಾರೆಂಟಿ ಬುಡಿ… ಈ ಸೆಂಟ್ರಲ್ ನಾಗೂ ಕಾಲೆತ್ತಿದ್ರು ಅಂದರೆ ಅದೂ ಆ ಅಯ್ಯಂದೇ ಕೆಲಸ ಇರಬೇಕು ಸಾಮಿ..ಅದೇ ಸಂತ್ರಸ್ಥೆ ಯಾರೋ 5 ಜನರ ಹತ್ತಿರ ನೀವು ಮಾಡಿದ ಅತ್ಯಾಚಾರ ಬಗ್ಗೆ ಹೇಳಿ, ಆಮೇಲೆ ನಿಮಗೆ ಹೊಸಬಾಳು ಕೊಡಾಂವ ಅಂಥ “ಹೊಸಬಾಳೆ ಅಣ್ಣ” ಯಾರೋ ಬಂದಿದ್ರಂತಲ ಸಾಮಿ …ಅದೇ ನೀವು ಗೋಯಾತ್ರೆ ಮಾಡಕ್ಕೆ ದುಡ್ಡೀಲ್ಲ ಹೇಳಿ ಕೈಕಾಲು ಹಿಡ್ಕೊಂಡಾಗ ಏಳು ಕೋಟಿ ಮಾಡ್ಕೊಟಿದ್ರಂತಲ…ಅವರೇ ಮಾಡೀದ ಕಿತಾಪತಿ ಇರ್ಬೇಕು ಸಾಮಿ ಇದು…ಆರ್.ಎಸ್.ಎಸ್. ನವರು ನಿಮ್ಮನ್ನು ಕೈಬಿಟ್ಟು ಬಾಳಾ ದಿನ ಆಗೈತೆ…ದಕ್ಷಿಣ ಕನ್ನಡದ ಮಣ್ಣಡ್ಕ ಅಂಥ ಯಾರೋ ನಿಮ್ ಪರ ಬಂದು ತಮ್ಮ ತಲೆ ಮೇಲೆ ತಾವೇ ಚಪ್ಪಡಿ ಹಾಕ್ಕಂಡ್ರು ಅಂತ ನಿಮ್ ಪರಮ ಭಕ್ತರೇ ಮಾತಾಡ್ತ ಅವ್ರೆ…ಆದ್ರು ಒಂದಿಷ್ಟು ಬೆಂಬಲ ಇರೋದು ಆ ಬದಿ ಜನಗಳದ್ದೆ ಅಲ್ವ ತಮಗೆ ..ಅದಕ್ಕೆ ಅಲ್ವ ಪುತ್ತೂರಾಗೆ “ಗೋ- ಸಂತ- ಸಗಣಿ” ಘಮ್ ಘಮ ಅಂತ ಕಾರ್ಯಕ್ರಮ ಮಾಡಿ ಪುಂಗಿ ಊದಿದ್ದು…ಪುತ್ತೂರಿನಾಗೂ ಎಲ್ಲರ ಕೈಗೂ ದೀಪ ಕೊಟ್ಟು “ಕೋಟಿ ಕೋಟಿ ಆಹುತಿ, ಕೋರ್ಟು ಖರ್ಚಿಗಾಹುತಿ” ಅಂತ ಎಲ್ಲರ ಕೈನಾಗೂ ಆರತಿ ಬೆಳಗಿಸಿದ್ದು..ಅದೊಂತರಾ ವಶೀಕರಣ ಮಾಡೋಕೆ ಹಂಗೆಲ್ಲ ಸರ್ಕಸ್ ಮಾಡ್ಬೇಕು ಬುಡಿ…ಈಗ್ಲು ನಿಮ್ ಚತುರ್ಮೋಸದಾಗೂ ದಿನಾ ಕೈ ಮುಂದಿಟ್ಕಂಡ್ ಅದೇನೋ ಪ್ರತಿಜ್ಞೆ ಮಾಡ್ಸಿ ಒಂತರಾ ವಶೀಕರಣ ಮಾಡುಸ್ತಿದೀರಿ ಬುಡೀ..ಅದೇನ್ ಪ್ರತಿಜ್ಞೆ ಸಾಮಿ..”ನಾವಿದ್ದೇವೆ ..ಏಕಾಂತಕ್ಕೆ ಖಾಯಂ ಸಪೋರ್ಟ್ ಮಾಡ್ತೇವೆ ಅಂತಾನಾ ಸಾಮಿ…ಏನೋ ಬುಡೀ ಸಾಮಿ ಈ ಜಾತಿ ಜನಾ ಯಾ ರೀತಿ ಬದಲಾದ್ರು ನೋಡಿ…ಯಾವುದಾದ್ರು ಹೆಂಗಸರನ್ನ ಮಾತಾಡಿಸಿದ್ರೆ ಹಂಡ್ ಪಿರ್ಕಿ ಅಂಥ ಹೇಳ್ತಿದ್ದ ಜಾತಿ..ಸಣ್ಣ ಸಣ್ಣ ಕಾರಣಕ್ಕೂ ಕಾಗದಾ ಬರೆದು ಮದುವೆ ತಪ್ಪಿಸಿದ್ದ ಹುಳುಕು ಜಾತಿ ಜನಾ, ನಿಮ್ಮಂಥ ಗೋಮುಖ ಸಂನ್ಯಾಸಿಗೆ ಮಾನ ಮರ್ವಾದೆ ಬಿಟ್ಟು ಬೆಂಬಲ ಕೊಡ್ತಾ ಅವ್ರೆ ..ಇದು ಹೆಚ್ಚು ದಿನಾ ನಡೆಯಾಕಿಲ್ಲ ಬುಡಿ… ಬಿ.ಬಿ.ಎಂ.ಪಿ ನವ್ರು ಕೀಳಾಕೆ ಮೊದ್ಲೇ ನಿಮ್ ಚಪ್ಪರ ನೀವೇ ಕೀಳಾಕೆ ರೆಡಿ ಮಾಡ್ಕಂಡಿದೀರಿ ಅಂತ ಸುದ್ದಿ…ಗೋರಕ್ಷಣೆ ಹೆಸರಲ್ಲಿ ಜಾಗಾ ಒಳಗೆ ಹಾಕಕ್ಕೆ ಮಾಡಿದ್ರಿ ಅಂತ ರಿಪೋರ್ಟ್ ಬರೆಯೋ ಚಾನ್ಸ್ ಇರುತ್ತೆ ಸಾಮಿ… ಎಲ್ಲಾ ರಾಜ್ಯ ಸರ್ಕಾರಗಳಿಗೂ, ಗೋರಕ್ಷಕರು ಅಂಥ ಹೇಳೋ ನಿಮ್ಮಂತವರ ಜಾತಕ ಕಳಿಸಿ ಅಂತ ಮೋದಿ ಸಾಹೇಬ್ರು ಹೇಳವ್ರಂತೆ… ಎಲ್ಲಾ ಪೇಪರ್ನಾಗೂ ನಿಮ್ ಜಾತಕಾ ಪ್ರಿಂಟ್ ಆಗಿ ಜಾತಕಾ ತಿದ್ದೋದು ಕಷ್ಟ ಸ್ವಾಮಿ…ನಿಮ್ ಸಗಣಿ ವಾಸನೆ ದೆಹಲಿವರೆಗೂ ತಲುಪಿದೆ ಅಂದ್ ಮೇಲೆ ನಿಮ್ ಪವಾಡ ಇನ್ನು ನಡೆಯೋದು ಕಷ್ಟ ಅಂತ ಮಾತಾ ಜುಂಜಕ್ಕ,ಅಶ್ವಿನಕ್ಕ, ಶಾಂತಕ್ಕ ಎಲ್ಲಾರು ಬರೋದು ನಿಲ್ಲಿಸಿಬುಟ್ರೆ ಅಂತವರ ಪರಿಮಳಕ್ಕೆ ಇರೋ ನಿಮ್ ಪಟಾಲಂಗಳೂ ಕಡಿಮೆ ಆಗ್ಬೋದು..ಒಂದ್ಸಾರಿ ನಿಮ್ ಅಡ್ಡದಿಂದ ಹೊರಟ್ರು ಅಂದ್ರೆ, ನೀವು ಗೋರಕ್ಷಣೆ ಅಂತ ಜನ ಸೇರ್ಸಿ ಏಕಾಂತದಾಗೆ ನೀವು ಮಾಡ್ತಿದ್ದ ಪವಾಡನ ಅವರೇ ಬಾಯಿತುಂಬಾ ಕವಳಾ ಹಾಕಿ ಎಲ್ಲರ ಹತ್ರಾನು ರಸವತ್ತಾಗಿ ಹೇಳ್ತಾರೆ…ಯಾವುದಕ್ಕೂ ನಿಮ್ ಗೋವುಗಳನ್ನು ಹುಸಾರಾಗಿ ರಕ್ಷಣೆ ಮಾಡ್ಕಳಿ ಸಾಮಿ…ಜೊತೆಗೆ ಜುಂಜಕ್ಕ,ಅಶ್ವಿನಕ್ಕ,ಶಾಂತಕ್ಕನ್ನೂ… ಮೋದಿ ಭಾಷಣ ಕೇಳಿ ನೀವು ಬಾಳಾ ಇಕ್ಕಟ್ಟಿಗೆ ಸಿಕ್ಕೊಂಡ್ರಿ ಅಂಥ ಅನ್ನುಸ್ತಾ ಐತೆ..ನಂಗೆ ಟೇಮ್ ಆತು.. “ಗೋದಿ ಬಣ್ಣ ಸಾದಾರಣ ಮೈಕಟ್ಟು” ಸಿನಿಮಾ ನೋಡಕ್ಕೆ ಹೋಗ್ಬೇಕು..ನಾ ಬರ್ಲಾ

Prakash Kakal

source: https://www.facebook.com/groups/1499395003680065/permalink/1803069636645932/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s