ಚಾಷ್ಟೇ ಚಾಟು 21-ಇನ್ನೂ ” z” ವರೆಗೆ ಟೈಮ್ ಐತೆ ಬುಡಿ ಸಾಮಿ

ಚಾಷ್ಟೇ ಚಾಟು 21-ಇನ್ನೂ ” z” ವರೆಗೆ ಟೈಮ್ ಐತೆ ಬುಡಿ ಸಾಮಿ
************************

ಇವತ್ತು ಯಾವುದೋ ಟೀವಿನಾಗೆ ತಾರತಮ್ಯ ತಾರತಮ್ಯ ಅಂಥ ಬಡ್ಕೋತಿದ್ರು….ಹಂಗಾರೆ ಬೆದರಿಕೆ ಕರೆ ಮಾಡಿದ್ರು ಅಂತ ಕಂಪ್ಲೆಂಟ್ ಕೊಟ್ಟಿದ್ದಕ್ಕೆ 23 ದಿನ ಜೈಲಲ್ಲಿ ಇಟ್ಟಿದ್ರು…ನಿಮ್ ಮ್ಯಾಲೆ ಎರಡೆರೆಡು ಕಂಪ್ಲೆಂಟ್ ಬಿದ್ರು ಒಳಗೆ ಹಾಕಿಲ್ಲ ಅಂತ, ಈ ಸಮಾನ ಮನಸ್ಕರು ಯಾರೋ ಬೊಬ್ಬೆ ಹಾಕಕ್ಕೆ ಟೀವಿ ಮುಂದೆ ಬರ್ತಾರೆ ಅನ್ಕಂಡಿದ್ದೆ..ಆದ್ರೆ ಇದು ಪೂರ್ತಿ ಉಲ್ಟಾ ಕೇಸು ….
ಇದು ನಿಮ್ ಕಡೆಯವರೇ ಮೊದಲೇ ತಯಾರಿ ಮಾಡ್ಕಂಡ್ ಹಾಕಿಸ್ಕಂಡ ಕಾರ್ಯಕ್ರಮ ಅಂತ ನೋಡ್ತಿದ್ದಂಗೆ ಗೊತ್ತಾತು ಬುಡಿ..ಹಿಂದೆ ಗವಾಸ್ಕರನ ಟೈಮಾಗೆ ವೆಸ್ಟ್ ಇಂಡೀಸ್ ವಿರುದ್ದ, ಇಂಡಿಯಾ ಟೀಮಿನ ಸ್ಪಿನ್ನರಿಗೆ ಹೆಲ್ಪ್ ಆಗಲಿ ಅಂತ ಪಿಚ್ ರೆಡಿ ಮಾಡಿದ್ರೆ, ಕೊನೆಗೆ ವಿಕೆಟ್ ಬೀಳ್ತಾ ಇದ್ದಿದ್ದು ವೆಸ್ಟ್ ಇಂಡೀಸಿನ ಪಾಸ್ಟ್ ಬೌಲರ್ ಗೆ …ಹಂಗಾಗೋತಲ್ಲ ಸಾಮಿ ನಿಮ್ ಕತೆ….ಆ ಟೀವಿನವ್ರು ಇಂಡಿಯಾದ ವಿರುದ್ದ ಪಾಕಿಸ್ತಾನದ ಹಂಪೇರ್ ಮಾಡ್ತಾನಲ್ಲ ಹಂಗೆ …ಏನಾದ್ರು ನಿಮ್ ಕಡೆಯವರು ಔಟಾಗದ ಹಾಗೆ ನೋಡ್ಕಳಾಕೆ ಬಾಳಾ ಪ್ರಯತ್ನ ಪಟ್ರು ಬುಡ್ರಿ..ಸುವರ್ಣ ಮಂತ್ರಾಕ್ಷತೆ ಬಾಳಾ ಕೆಲಸ ಮಾಡಿರಬೇಕು …ಆದ್ರು ನಿಮ್ ಕಡೆಯವರು ಹಿಟ್ ವಿಕೆಟ್ ಆಗ್ಬುಟ್ರು ಬುಡ್ರಿ….ಇವರು ಹೇಳಿದ್ದಕ್ಕೆಲ್ಲ, ಅದು ಯಾವುದೋ ಅಯ್ಯ ಸಮಜಾಯಿಸಿ ಕೊಟ್ಟು ಬಾಯಿ ಮುಚ್ಚ್ಚಿಸಿ ಬುಡಾದ ಸಾಮಿ…..ನಿಮ್ ಕಡೆಯವರು ಯಾರೋ ಫೋನಾಗೆ ಮಾತಾಡಿದ್ರು ಸಾಮಿ..ನಾನೇನೋ ಸರಿಯಾದ ಬೌನ್ಸರ್ ಹಾಕ್ತಾರೆ ಅಂದ್ಕಂಡ್ರೆ…. ಸೆಕೆಂಡ್ ಪಿಚ್ ಬೌಲ್ ಮಾಡಾದ ಸ್ವಾಮಿ…..ಇವರು ಅದು ಯಾವುದೋ ಶಾಸ್ತ್ರಿ ಮನೆಗೆ ಹೋದ್ರಂತೆ..ಅವರು ನಾ ಮಠಕ್ಕೆ ಬಾಳಾ ಕೆಲಸ ಮಾಡಿದೇನೆ ..ಈಗ ಹಣಕಾಸಿನ ತೊಂದರೆಲಿ ಇದೇನೆ…3 ಕೋಟಿ ಕೇಳ್ತೇನೆ..ಕೊಡದೇ ಹೋದ್ರೆ ನನ್ನ ಹೆಂಡ್ತಿಗೆ ಅತ್ಯಾಚಾರ ಮಾಡಿದಾರೆ ಅಂತ ಕೇಸು ಹಾಕ್ತೇನೆ ಅಂದ್ರು…ಇದು ಬಾಳಾ ದೊಡ್ಡ ಸಾಕ್ಷಿನಾ ಸಾಮಿ…ಬೇರೆ ಯಾರಿಗಾದ್ರು ಅರೇಂಜ್ ಮಾಡಕ್ಕಾಗಿಲ್ವ ಸಾಮಿ ನೀವು..ಇದಕ್ಕಿಂತ ನೂರು ಪಟ್ಟು ಸಾಕ್ಷಿ ಪೇಪರ್ನಾಗೆ ಬಂದಿತ್ತಲ್ಲ ಸಾಮಿ…ಅದೇ ಸತ್ಯ ಸಂಗತಿ ಅನ್ನೋ ಪುಸ್ತಕ ಎರಡು ವರ್ಷದ ಹಿಂದೆ ಸಮಾನ ಮನಸ್ಕರು ಲೋಕಾರ್ಪಣೆ ಮಾಡಿದ್ರಲ್ಲ ಸಾಮಿ.. 5 ಜನ ಕುಂತು ಮಾತಾಡಿದ್ರಂತೆ..ಆಮೇಲೆ ನಿಮ್ಮತ್ರ ಬಂದು ಹೇಳಿದ್ರಂತೆ..ನೀವು ಗುಟಾಗಿರ್ಲಿ ವಿಚಾರ… ನನ್ನಿಂದ ತಪ್ಪಾಗಿದೆ..ನಾ ಹಿಮಾಲಯಕ್ಕೆ ಏಕಾಂತ ಹೋಗ್ತೇನೆ ಅಂತ ಸಂದರ್ಷನ ಕೊಟ್ಟಿರ್ಲಿಲ್ವ ಸಾಮಿ…ಅವಾಗ್ಲೆ ಹೋಗಿದ್ರೆ ನೀವು ಇಷ್ಟೊತ್ತಿಗೆ ಉದ್ದುದ್ದ ಗಡ್ಡ ಬಿಟ್ಕಂಡ್ ಮಹಾ ಸಂನ್ಯಾಸಿ ಆಗಿ, ಮತ್ತೆ ಪೀಠದ ಮೇಲೆ ವಕ್ರಸ ಬೋದಿತ್ತು ಸ್ವಾಮಿ…ನಿಮ್ಮಂತ “ಅವಾಂತರ” ಪುರುಷನ್ನೇ “ಅವತಾರ” ಪುರುಷ ಅಂತ ಹೇಳ್ತವ್ರೆ ನಿಮ್ ಜಾತಿ ಜನ…ಇನ್ ಹಿಮಾಲಯಕ್ಕೆ ಹೋಗಿ ಬಂದಿದ್ರೆ! ಪಾದಪೂಜೆ ಮಾಡಿಸ್ಕಳಾಕೆ ಎರಡ್ ಕಾಲು ಸಾಕಾಗ್ತಿರ್ಲಿಲ್ಲ ಸಾಮಿ..ಆಮೇಲೆ ನಿಮ್ ಭಾವನ್ನೋ, ಪಟಾಲಂನ್ನೋ ಡೆಪುಟೇಷನ್ ತಗಬೇಕಾಗ್ತಿತ್ತು ಸ್ವಾಮಿ!!….ಈಗ ನೋಡಿ ನಿಮ್ ಕಣಿಕೆ ಎಲ್ಲಾ ಉದುರಿ ಒಂದೊಂದೇ ಹೂರಣ ಹೊರಗೆ ಬರಾಕೆ ಹತ್ತಿದೆ ಸ್ವಾಮಿ.. ಈಗ ಅದೇನೋ ರಿಪೋರ್ಟ್ ಹಾಕಕ್ಕೆ ರೆಡೀ ಆಗಿದೆಯಂತೆ…ಆ ಎಳೆ ಹುಡುಗಿಗೆ ನೀವು ಕೆನ್ನೆ ಸಂಸ್ಕಾರ ಮಾಡಿ ಅದೇನೋ ಅನುಷ್ಠಾನ ಮಾದಿದ್ರಂತಲ್ಲ, ಆ ಅನಿಷ್ಠ ಕರ್ಮಕ್ಕೂ ಚಾರ್ಜ್ ಶೀಟ್ ರೆಡೀ ಮಾಡವ್ರಂತೆ ಹೌದಾ ಸ್ವಾಮಿ…ಅದಲ್ದೆ ನೀವು ಚತುರ್ಮೋಸಕ್ಕೆ ನಿಮ್ ಭಕ್ತೆಯರು ಕೂರಕ್ಕೆ ಅಂತ ಬಾಲ್ಕನಿ ಮಾಡ್ಸಿದ್ರೆ ಅದನ್ನು ಕೀಳಕ್ಕೆ ಬಿ.ಬಿ.ಎಂ.ಪಿ ನವರು ದಿನಾ ಹಾರೆಕೋಲು ಗುದ್ಲಿ ಹಿಡ್ಕಂಡ್ ಬತ್ತಾ ಇದಾರಂತೆ ..ನೀವು ಸುವರ್ಣ ಮಂತ್ರಾಕ್ಷತೆ ಕೊಟ್ಟು ಕಳಿಸೋದಂತೆ ಹೌದಾ ಸಾಮಿ…ಒಂದರ ಹಿಂದೆ ಒಂದ್ ರಿಪೋರ್ಟ್ ಬರ್ತಾ ಇರೋದು ನೋಡಿದ್ರೆ ನೀವು ಗಿನ್ನೆಸ್ ರೆಕಾರ್ಡ್ ಮಾಡೋ ತರ ಕಾಣ್ತೀರಿ ಸ್ವಾಮಿ….ಅಲ್ಲಾ ಮಾನ ಮರ್ವಾದೆಗೆ ಅಂಜದೆ ಕೆನ್ನೆ ಸಂಸ್ಕಾರ ಮಾಡಿಸ್ಕಂಡವ್ರು ಕೇಸು ಹಾಕಿದ್ರೆ ಇಷ್ಟೊತ್ತಿಗೆ ಡಬಲ್ ಗಿನ್ನೆಸ್ ರೆಕಾರ್ಡ್ ಆಗ್ತಿತ್ತು ಬುಡಿ….ಈ ಟೀವಿನಾಗೆ ಕಾರ್ಯಕ್ರಮ ಹಾಕ್ಸಿ ಅದೇನೋ ರಿಪೋರ್ಟ್ ಬೀಳೋದು ಗ್ಯಾರೆಂಟಿ ಅಂಥ ನಿಮ್ ಭಕ್ತರಿಗೆ ನೀವೇ ಟಾಂ ಟಾಂ ಹೊಡಕಂಡಂಗೆ ಆತು ಬುಡಿ..ಅಗಣಿ ತೆಗೆಯೋಕೆ ಹೋಗಿ ಮಂಗ ಅದೇನೋ ಸಿಕಾ ಹಾಕ್ಕಂಡಿತ್ತಲ್ಲ ಹಾಗೆ ಆಯ್ತು ಬುಡಿ ನಿಮ್ ಪರಿಸ್ತಿತಿ…ಈಗ ಚತುರ್ಮೋಸಕ್ಕೆ ದುಡ್ ಕೊಡೋರು ಕೊಡೋದು ಕಷ್ಟ ಸಾಮಿ…ಆದ್ರು ಜನ ಸೇರೋಕೆ ಏನೂ ತೊಂದ್ರೆ ಇಲ್ಲ ಬುಡಿ ..ಕಡೆಕಾಲದಾಗೆ ನಿಮ್ ಮುಸುಡಿ ನೋಡಾಂವ ಅಂತ.ಕೇಸನ್ನು ನಡೆಸೋದಕ್ಕೆ ಹ್ಯಾಂಗಿದ್ರು ಬಡಪಾಯಿ ಭಕ್ತ ಬಕರಾಗಳು ಕೊಡೋ ದುಡ್ಡು ಇದೆಯಲ್ಲ ಸಾಮಿ…ಇನ್ನೂ ‘ಜೆಡ್’ ವರೆಗೆ ಟೈಮಿದೆ ಸಾಮಿ…ಈಗ ಬರ್ತಾ ಇರೋದು ‘ಬಿ’ ರಿಪೋರ್ಟ್ …ನಾ ಬರ್ಲ

ಹಿಂದಿನ ಅಂಕಣಗಳನ್ನು ಇಲ್ಲಿ ಓದಿ

ಪ್ರಕಾಶ್ ಕಾಕಲ್

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s