ಕಾಮೀ ಕೂದಲ ಉಂಗುರ

ಕಾಮೀ ಕೂದಲ ಉಂಗುರ

[ಚಿತ್ರವನ್ನು ಭಾರತೀಯ ಕಲಾವಿದರೊಬ್ಬರು ಬಹಳ ಪರಿಶ್ರಮದಿಂದ ತಯಾರಿಸಿಕೊಟ್ಟಿದ್ದಾರೆ. ಡೌನ್ ಲೋಡ್ ಮಾಡಿಕೊಂಡು ಹಿಗ್ಗಿಸಿ ನೋಡಿ-ಆನಂದ ಪಡೆಯಿರಿ]

ನಮ್ಮ ಜನಗೋಳಿಗೆ ಬುದ್ಧಿ ಇಲ್ಲ ಸ್ವಾಮ್ಯಾರೆ ಅವು ಆನೆ ಕೂದಲ ಉಂಗುರ, ಕರಡಿ ಕೂದಲ ಉಂಗುರ ಇಂತವನೆಲ್ಲ ಮಾಡಸ್ಕತಾವೆ. ಇಮ್ಮಡಿ ವಿಶ್ವೇಶ್ವರಯ್ಯನೋರ್ನ ಕೇಳಿದ್ರೆ ಕಾಮಿ ಕೂದಲು ಎಲ್ಲಾದಕ್ಕಿಂತ ಉತ್ತಮ ಅಂತಾರೆ.

ನೀವೂ ಓದಿರಬೇಕಲ್ಲ? ಅದ್ಯಾರದೋ ಪ್ಯಾಂಟೀಲಿ ಏಕಕಾಲಕ್ಕೆ ಎರಡೆರಡು ವೀರ್ಯಾಣುಗಳು ಸಿಕ್ಕವೆ ಅಂತ ಬಾಂಬ್ ಹಾಕಿದ್ರು ವಿಶ್ವೇಶ್ವರಯ್ಯನೋರು. ಕೂದಲೂ ಸಿಕ್ಕದ್ಯಂತೆ ಅಂತ ಸುದ್ದಿ ಬರುದ್ರು. ಸಿಕ್ಕಿದ್ದೆಲ್ಲ ನಮ್ ಸ್ವಾನ್ಯೋರ್ದೇಯ ಆ ಪ್ರಶ್ನೆ ಬ್ಯಾರೆ.

ಎಡವಟ್ಟಾಗೋಗಿದ್ದೆ ಅಲ್ಲಿ. ಪಾಪ ಕೂದಲು ಸಿಕ್ಕದ ಮ್ಯಾಕೆ ನಮ್ ಸ್ವಾಮ್ಯೋರ್ಗೆ ಮತ್ತೂ ತಾಪತ್ರಯ ಜಾಸ್ತಿ ಆಯ್ತು. ತಪ್ಪಿಸ್ಕೋಬೇಕಲ? ಅಲ್ಲವ್ರಾ? ಅದ್ಕೇಯ ಸ್ವಾಮ್ಯೋರು ಅದ್ಯಾರ್ದೋ ತಿಥಿ ಮಾಡುಸ್ತೀವಿ ಅಂತ ಮಂಗನಕಟ್ಟೆ ಊರ್ಗೆ ಬಿಜಯಂಗೈದರು.

ಅಲ್ಲಿ ಕಿಚನ್ ಕ್ಯಾಬಿನೆಟ್ ಮಡೀಕಂಡು ಎಲ್ಲ ವಿಷಯ ಹೇಳುದ್ರಂತೆ. ಒಂದಂತೂ ಸತ್ಯ ಅದೆ. ನಮ್ ಕಚ್ಚೆ ಸ್ವಾಮ್ಯೋರ್ ಐನಾತಿ ಹಕೀಕತ್ತು ಅವರ ಸುತ್ತ ಇರೋ ಕಿಚನ್ ಕ್ಯಾಬಿನೆಟ್ ಜನಿಕ್ಕೆ ಪೂರ್ತಿ ಗೊತ್ತದೆ. ಹಂಗಾಗೇಯ ಸ್ವಾಮ್ಯೋರು ಬದೀಕಬೇಕು, ಅವರು ಬದ್ಕದಿದ್ರೆ ತಮ್ಮ ಪುಗಸಟ್ಟೆ ಅನ್ನಕ್ಕೆ ಕಲ್ಲಾಕ್ಕಂಡಂಗೇಯ ಅಂತೇಳಿ ಸ್ವಾಮ್ಯೋರ್ನ ಬದೂಕ್ಸಕೆ ಶತಾಯ ಗತಾಯ ಪ್ರಯತ್ನ ಮಾಡ್ತವ್ರೆ.

ಮಂಗನಕಟ್ಟೇಲಿ ಕ್ಯಾಂಪ್ ಹಾಕ್ಸಿ ಒಬ್ಬ ಕ್ಷೌರಿಕನ್ನ ಹಿಡ್ಕಂಡ್ ಬಂದ್ರು. ಬರೂತ್ಲೆ ನಿಂಗೆ ಬೇಕಷ್ಟು ಹಣ ಕೊಡ್ತೇವಿ ನಾವ್ ಹೇಳ್ದಂಗೆ ಹೇಳ್ಬೇಕು ಅಂತ ಒಂದು ಕತೆ ಕಟ್ಟುದ್ರು. “ಈ ಸ್ವಾಮ್ಯೋರ್ ಮ್ಯಾಲ್ಗಡೆದು ಕೆಳಗಡೆದು ಎಲ್ಲಾ ಕೂದಲೂ ತೆಗೆಯದು ನಾನೇಯ. ಅದ್ಯಾರೋ ದೂರಿಂದ ಬಂದವ್ರು ದುಡ್ಡು ಕೊಡ್ತೀವಿ ಸ್ವಾಮ್ಯೋರ್ದು ಕೆಳಗಡೆ ಕೂದಲು ಸ್ವಲ್ಪ ಕೊಡು ಅಂದ್ರು. ದುಡ್ಡು ಸಿಗುತ್ತಲ್ಲ ಅಂತ ನಾನು ಕೊಟ್ಬುಟ್ಟೆ” ಅಂತ ಹೇಳೋಕೆ ಕಂಠಪಾಠ ಮಾಡ್ಸಿದ್ರು. ಕಿಚನ್ ಕ್ಯಾಬಿನೆಟ್ ಜನರು ಯಾವಾಗ “ಪೋಲೀಸರ ಎದುರು ಹೀಂಗೇ ಹೇಳ್ಬೇಕು” ಅಂತಂದ್ರೋ ಸತ್ನೋ ಬಿದ್ನೋ ಅಂತ ಆ ಕ್ಷೌರಿಕ ಓಡೋದ. ಮತ್ತೆ ಆ ಕಡೆ ಮಕ ಹಾಕ್ಲಿಲ್ಲ.

ಅದ್ಸರಿ ಬುಡಿ, ಚಡ್ಡಿಲಿ ಸಿಕ್ಕಿದ ವೀರ್ಯಾಣುಗಳೂ ಕೂದಲುಗಳೂ ನಮ್ ಕಚ್ಚೆ ಸ್ವಾಮ್ಯೋರ್ದೇಯ ಅನ್ನೋದ್ರಲ್ಲಿ ಡೌಟೇ ಇಲ್ಲ. ಹಂಗಂತ ಲ್ಯಾಬ್ನೋರೆ ಒಪ್ಗಂಡವ್ರೆ. ಆದ್ರೆ ಇಮ್ಮಡಿ ವಿಶ್ವೇಶ್ವರಯ್ಯನೋರು “ಯಾರದೋ ಸಿಕ್ಕಿದ್ಯಂತೆ”, “ಯಾರದೋ ಸಿಕ್ಕಿದ್ಯಂತೆ” ಬುಡಬುಡಿಕೆ ಬಾರ್ಸಿದ್ದೇ ಬಂತು. ಅಂದಂಗೆ ಬುಡಬುಡಿಕೆ ಬಾರ್ಸೋರು ಸುದ್ದಿ ಮಾಡೋ ಜನರನ್ನೆಲ್ಲ ನಿಭಾಯ್ಸಕೆ ಎಷ್ಟು ಕೋಟಿ ಸುವರ್ಣ ಮಂತ್ರಾಕ್ಷತೆ ತಗಂಡಿರ್ಬೋದು ಅಂತೀರಿ? ಸಿವನೇ ಸಂಭುಲಿಂಗ.

ಹೆಚ್ಚುಕಮ್ಮಿ ಒಂದೂವರೆ ವರ್ಸದಿಂದ ನಮ್ ಸ್ವಾಮ್ಯೋರು ನಿದ್ದೆ ಸರುಯಾಗಿ ಮಾಡಿಲ್ಲ ಅನ್ಬೋದೇನೋ. ಆದ್ರೆ ಮೂರೂ ಹೊತ್ತೂ ನೀತಾ ಗುಂಜಪ್ಪ, ಅಶ್ವಿನಿ ದೇವತೆ ಮೊದಲಾದವರ್ನೆಲ್ಲ ಮಡೀಕಂಡು ಏಕಾಂತ ನಡಸವ್ರೆ ಅಂತಾರೆ ನಮ್ಮ ಹೈಕ್ಳು. ಹಳ್ಳಿಕಡಿಕೆ ಆ ವಯ್ಯ ಒಳ್ಳೆ ರೌಡೀ ತರಾ ಹವಾ ಮಡಗವನಂತೆ. ಅವರ ಜನಿಗೆ ಜೀವ ಐಲ್ಲ ಪಾಪ. ನಮ್ ಜನ್ಗೋಳ ಕೈಲೇನಾರಾ ಸಿಕ್ಕುದ್ರೆ ಇಸ್ಟೊತ್ಗೆ ಪರಪ್ಪನ ಜಾಗ ಸೇರ್ಸ್ ಬುಡೋರು.

ಪಾಪ ಆ ಮಂದಿ ಮರ್ಯಾದೆಗೆ ಅಂಜ್ಕಂಡು ತಮ್ಮತಮ್ಮೊಳಗೆ ಕ್ಯಾತೆ ತೆಕ್ಕಂಬುಟ್ಟು ಚಪ್ಪಲಿ-ಪೊರಕೆಲೆಲ್ಲ ಬಡಕೋತವ್ರೆ. ಸಂದಾಕಿದ್ದ ಆ ಸಮಾಜದ ಹೈಕ್ಳನ ನೋಡಿ ನಮ್ ಮಾದ ಯಾವಾಗ್ಲೂ ಹೇಳೋನು-“ಅಣಾ, ಆ ಜನ ನೋಡು ನೋಡಕೆ ಒಂದೇ ತಾಯಿ ಮಕ್ಳಂಗೆ ಕಾಣ್ತವ್ರಲ್ಲ. ಬೆಳ್ ಬೆಳ್ ಗೆ ಕೆಂಪ್ ಕೆಂಪಗೆ ಕಾಶ್ಮೀರಿ ಆಪಲ್ ತರ ಅವ್ರೆ. ಬಾಳ ಸಂದಾಕಿದ್ರು. ಒಗ್ಗಟ್ನಾಗ್ ಇದ್ರು. ಈ ದರ್ವೇಸಿ ಬಂದಂದೆ ನೋಡು ಅವರ ಹೆಂಗುಸ್ರನೆಲ್ಲ ಕೆಡ್ಸಿ, ಮನೆ ಮನೆಯೊಳಗು ಜಗಳ ಹಚ್ಚಿ ಸಮಾಜ ಒಡ್ದಾಕ್ಬುಟ್ಟವ್ನೆ.”

ನಮ್ ಅಳ್ಳಿ ಕಡೀಗೆ ಕರಡೀ ಕುಣ್ಸೋರು ಬರ್ತಾ ಇದ್ರು. ಪಾಪ ಹೊಟ್ಟೆಗಿರಾಕಿಲ್ಲ ಮುಂಡೇವ್ಕೆ. “ಕರಡೀ ಕೂದಲ್ನಾಗೆ ಭೀಮ ಬಲ ಇರ್ತೈತೆ. ಅದನ್ನ ತಾಯ್ತದೊಳಿಕ್ಕೋ ಉಂಗರದೊಳಿಕ್ಕೋ ಹಾಕಿಸ್ಕೊಂಬುಟ್ಟು ಕಟ್ಕಂಬುಟ್ರೆ ಶಾನೆ ಬಲ ಬತ್ತದೆ. ಮಕ್ಳು ಮರಿಗೋಳ್ಗೆಲ್ಲ ಬಾಳ ಒಳ್ಳೇದು. ಬುದ್ಧಿ ಬೆಳೀತದೆ. ಧೈರ್ಯ ಬತ್ತದೆ. ಆರೋಗ್ಯ ಚೆನಾಗಿರ್ತದೆ” ಅಂತೆಲ್ಲ ಹೇಳ್ಬುಟ್ಟು ಚೀಲ್ದಾಗಿಂದ ಒಂದೊಂದೇ ಕೂದಲು ತೆಗೆದು ಬೇಕೆಂದೋರ್ಗೆ ಮಾರೋನು.

ನಮ್ಮಳ್ಳಿಲಿ ಚಿಕ್ಕಪುಟ್ಟಾಚಾರಿ ಅಂತವ್ರಲ, ಅಕ್ಕಸಾಲಿಗ್ರು, ಅವರು,”ಆನೆ ಕೂದಲ ಉಂಗರ ಮಾಡಿಸ್ಕಳಿ ಚೆನ್ನಾಗಿರ್ತೈತೆ” ಅಂತಿದ್ರು. ಆನೆ ಕೂದಲು ಎಲ್ಲರ್ಗೂ ಅದೆಲಿಂದ ಸಿಕ್ಕಾತು? ಊರೊಳಿಕ್ಕೆ ಆನೆ ಅದೆಲ್ಲಿಂದ್ಲೋ ಬರ್ಬೇಕು. ಸಾಕಾನೆ ಬಂದ್ರೆ ಪರವಾಯಿಲ್ಲ. ಒಂದೊಮ್ಮೆ ಕಾಡಾನೆ ಬಂತೋ ಕಂಡ್ರಲ್ಲ ಆಚೆವರ್ಸ ಮೈಸೂರಾಗೆ ಅಂಗೆ ಸಿಕ್ ಸಿಕ್ದೋರ್ನೆಲ್ಲ ಇರ್ದು ಕೊಂದಾಕ್ಬುಡ್ತೈತೆ.

ಸಾಕಾನೆ ಬಂದ್ರೆ ಮಾವುತಂಗೆ ದುಂಬಾಲ್ ಬಿದ್ದು ಕೇಳ್ಬೇಕು. ಆ ವಯ್ಯ ಅಸ್ಟ್ ಕೊಡಿ ಇಸ್ಟ್ ಕೊಡಿ ಅಂತಾನೆ. ಸಲ್ಪ ಚೌಕಾಸಿ ಮಾಡಿ ಹೊಂದಿಸ್ಕಂಡು ಒಸ್ಗಬೇಕು. ಅದನ್ನ ತಗಂಡೋಗಿ ಆಚಾರಿಗೆ ಕೊಟ್ರೆ ಉಂಗ್ರ ಮಾಡ್ಕೊಟ್ಟಾರು. ಅದ್ಕೆಲ್ಲ ಅದೆಸ್ಟ್ ವರ್ಸ ಬೇಕೋ! ಬದ್ಲಿಗೆ ಆಚಾರ್ರೆ ನೀವೆ ಎಲ್ಲಾನಾ ಹೋಗಿ ಸಂಪಾದಸ್ಕೊಂಬುಟ್ಟು ಉಂಗರ ಮಾಡ್ಕೊಡಿ ಅಂದ್ರೆ ಆಯ್ತಪ್ಪ. ಆಚಾರ್ರು ಸಲ್ಪ ದುಬಾರಿ ಬೆಲೆಗೆ ಉಂಗರ ಮಾಡ್ಕೊಡ್ತಾರೆ. ಆನೆ ಕೂದ್ಲನಾಗೆ ಅದೆಂತದೋ ಕರಾಮತ್ತೈತಿ ಅಂತಾರಪ್ಪ, ನನಗಂತೂ ಅದೆಲ್ಲ ನಿಜ ಅನ್ನಿಸ್ಲಿಲ್ಲ ತಗಳಿ.

ಅದೆಲ್ಲ ಮಾಡೋ ಬದಲು ನಮ್ ಸ್ವಾಮ್ಯೋರ್ ತಾವ ಹೇಳುದ್ರೆ ಏಕಾಂತದಾಗೆ ಚಡ್ಡಿಲಿ ಉದುರೋ ಕೂದ್ಲನ್ನೆಲ್ಲ ಎತ್ತಿಟ್ಗಂಡು ಬೇಕಾದೋರ್ಗೆ “ಅನುಗ್ರಹ ಪ್ರಸಾದ” ಅಂತ ಕೊಡಬೋದಪ್ಪ. ನಮ್ ಸ್ವಾಮ್ಯೋರ್ಗೆ ಶಕ್ತಿ ಇದ್ದಿದ್ದು ಸುಳ್ಳು ಅಂತೀಯ? ಕಮ್ಮಿ ಕಮ್ಮಿ ಅಂದ್ತೂ ಐನೂರು ಹೆಂಗಸ್ರಗೆ ಹಾರವರಂತೆ ಗೊತ್ತಾ? ನಾವೂ ಅದೀವಿ ನೋದು. ಅಬ್ಬಬ್ಬ ಅಂದ್ರೆ ಐದ್ ನಿಮಿಸ್ದಾಗೆ ಅಡ್ಡಡ್ಡ ಮಲಗ್ಬುಡ್ತೀಮಿ. ಸ್ವಾಮ್ಯೋರ್ ಏಕಾಂತದಾಗೆ ಗಂಟೆಗಟ್ಲೆ ಹಾರಾಟ ಮಾಡ್ತಾವ್ರಂತೆ ಗೊತ್ತಾ?

ಮೊನ್ನೆ ಆ ಮಠದ ಸಿಸ್ಯ ಒಬ್ಬ ಸಿಕ್ಕ. ಹೆಸರು ಗುಮ್ಮಣ್ಣ ಹೆಗಡೆ ಅಂತ. ಒಳ್ಳೆ ಮನ್ಸ. ಮಂಡ್ಯದಾಗಿಂದ ಬೆಂಗಳೂರ್ಗೆ ನಾವು ರೈಲ್ನಾಗೆ ಅಕ್ಕಪಕ್ಕಾನೆ ಕೂತಿದ್ವಿ. ಆ ಗುಮ್ಮಣ್ಣ ಹೆಗಡಿ ನಮ್ ಸ್ವಾಮ್ಯೋರ್ದ್ ಎಲ್ಲಾ ಸುದ್ದಿನೂ ಹೇಳ್ತಾ ಇದ್ದ. ಗುಮ್ಮಣ್ಣ ಹೆಗಡಿಗೆ ಇಪ್ಪತ್ ವೈಸನ ಮೊಮ್ಮಗಳು ಅವಳಂತೆ. ಅದೆಂದೋ ಮಟಕ್ಕೋದಂಗೆ ಈ ಸ್ವಾಮಿ ಅವಳ ಕೆನ್ನೆ ಸವರಿದ್ನಂತೆ. ಊಟಾದ ನಂತರ ಅದ್ಯಾರೋ “ಸ್ವಾಮಿಗಳು ಕರೀತವ್ರೆ” ಅಂದದ್ಕೆ ಹುಡ್ಗಿ ಕೋಣೆ ಒಳಕ್ಕೋಯ್ತಂತೆ. ಆ ವಯ್ಯ ಕಿಡ್ಕೀಕಿ ಬಾಕ್ಲೆಲ್ಲ ಮುಚ್ಚಿ ತೊಡೆ ಮೇಲೆ ಎಳೆದು ಕೂರಿಸ್ಕಂಡು ಅದೇನೇನೋ ಆಟ ಸುರು ಹಚ್ಕಂಡನಂತೆ. ಹುಡ್ಗಿಗೆ ಅದೆಲ್ಲ ಹೊಸ್ತು. ಹೆಂಗೋ ಕೊಸರಾಡ್ಕೊಂಡು ತಪ್ಪಿಸ್ಕೊಂಡು ಆಚೆ ಬಂತಂತೆ.

ಅಲ್ಲಿಂದೀಚ್ಗೆ ಗುಮ್ಮಣ್ಣ ಹೆಗಡಿ ಮನೆಯೋರು ಮಟಕ್ಕೆ ಹೋಗುದ್ನ ಬಂದ್ ಮಾಡ್ಯವರೆ. ಪ್ರಾಬ್ಲಮ್ಮು ಏನು ಗೊತ್ತ? ಅವರ ಹಳ್ಳೀನಾಗೆ ಸುತ್ತಮುತ್ತ ಜನ ಎಲ್ಲ ಈಗ ಗುಮ್ಮಣ್ಣ ಹೆಗಡಿ ಮನೀಗೆ ಬರಾಕಿಲ್ಲ. ಅವರ್ನೂ ತಮ್ಮ ಮನೆಗೋಳ್ಗೆ ಸೇರ್ಸಾಂಗಿಲ್ಲ. ಹಳ್ಳಿಯೆಲ್ಲ ಒಂದು ಗುಮ್ಮಣ್ಣ ಹೆಗಡಿ ಮನೆ ಮಾತ್ರ ಒಂದು ಆಗ್ಬುಟ್ಟಿತ್ತಂತೆ. ಅದ್ಯಾವ್ದೋ ಕೇಸು ಕೋರ್‍ಟ್ ಗೆ ಹೋಗಿ ಅಸ್ಟೆಲ್ಲ ಗಲಾಟೆ ಗುಲ್ಲು ಆದ್ಮ್ಯಾಕೆ ಈಗೀಗ ಆ ಹಳ್ಳೀಲಿ ಜನ ಬದಲಾಗವ್ರಂತೆ. ಆದ್ರೂ ಸ್ವಾಮಿಗಂಜಿ ಹೊರ್ಗಡಿಗೆ ತೋರಿಸ್ಕೊಳಾಕಿಲ್ವಂತೆ.

ಸ್ವಾಮಿ ಆಗೋದೇ ಪ್ರಾಬ್ಲಮ್ಮು ಅಂತವ್ರೆ ನಮ್ ಸ್ವಾಮ್ಯೋರು. ಅದ್ರಲ್ಲೂ ಶಾರ್ಟ್ ಟೈಮ್ನಾಗೆ ಬೆಳೆದ ಮಟ ಅಂದ್ರೆ ಎಲ್ಲರ್ಗೂ ಅದರ ಮೇಲೆ ಕಣ್ಣಂತೆ. ಸುತ್ತ ಇರೋ ಕೆಲವು ಮಟಗಳೋರು ಸಡ್ಯಂತ್ರ್ಯ ಮಾಡಿ ಈ ವಯ್ಯನ್ನ ಸಿಕ್ಕಾಕ್ಸಕೆ ಅಂತ ಮಾಡ್ಯವರೆ ಅಂತಾತು.

ಇಸ್ಟೆಲ್ಲ ನಡ್ದದೆ ಅಂದ್ ಮ್ಯಾಕೆ ನಮ್ ಸ್ವಾಮ್ಯೋರೇನು ಬಳೆ ತೊಟ್ಟವರ? ಇಲ್ಲ. ಬಳೆತೊಟ್ಟೋರ್ ಸಂಗ ಮಾಡ್ತಾರೆ ಬಿಟ್ರೆ ತಾವೇ ಬಳೆತೊಟ್ಟಿಲ್ಲ. ಮಟದಾಗಿನ ಯಾವ್ದೋ ಹುಡ್ಗೀನ ಅವರ ಬಾವಯ್ಯ ಬಸುರಿ ಮಾಡ್ದಾವಾಗೆ ಇಡೀ ಸಮಾಜಕ್ಕೂ ಅದೆಲ್ಲ ಸುಳ್ಳು ಅಂತ ಹೇಳಿಕೆ ಕೊಟ್ಟು, ಮಟದ ವ್ಯವಹಾರದ ಕೆಲಸಕ್ಕೆ ಇರೋ ಜನೀನೆಲ್ಲ ಬದಲಾಯಿಸಿದ್ರಂತೆ. ಕೋರ್ಟು ಬುಡಿ ಅಲ್ಲೆಲ್ಲ ನಮ್ ಸ್ವಾಮ್ಯೋರು ಸಕ್ಕತ್ ಫೇಮಸ್ಸು. ಅವರೆಲ್ಲ ನಮ್ ಸ್ವಾಮ್ಯೋರ್ಗೆ ಹೆದುರ್ತರೆ.

ಅರೆ ಸುಳ್ಳಲ್ಲ ಮಾರಾಯ, ಐದಾರು ಜನ ಬದಲಾಗ್ಬುಟ್ರು ಯಾಕೆ ಗೊತ್ತ? ಗುರು ಶಾಪ ತಕಬಾರ್ದು, ಅದು ತಲೆತಲಾಂತರಕ್ಕೂ ಬತ್ತದೆ ಅಂತವ ತಿಳ್ಕಂಬುಟ್ಟು ನಮ್ ಸ್ವಾಮ್ಯೋರ್ನ ಕಟಕಟೆ ಹತ್ತಸ್ಬೇಕಲ್ಲ ಅಂತ ತಾವೇ ರಾರ್ಕಂಬುಟ್ರು. ನಮ್ ಸ್ವಾಮ್ಯೋರಿ ಬಾಳಾ ಛತ್ರಿ ಅವರೆ. ಮೊದಲೇ ಹೇಳ್ ಕಳ್ಸಿದ್ರಂತೆ “ಇದು ಗುರುಪೀಠ ನಾವೆಂದೂ ತಪ್ಪು ಮಾಡಿಲ್ಲ. ತಪ್ಪು ಮಾಡೋದೂ ಇಲ್ಲ. ನಾವೇ ಗೆಲ್ತೇವೆ ಅನ್ನೋದು ನಮಗ್ಗೊತ್ತು. ಹೀಗಾಗಿ ನಿಮಗೆ ನಾವು ವಿಶೇಷ ಅನುಗ್ರಹ ಮಾಡ್ತೇವೆ”ಅಂತ ಅವರಿಗೆಲ್ಲ ತಿಳ್ಸಿದ್ರು.

ನಮ್ ಸ್ವಾಮ್ಯೀರ್ನ ಎದುರು ಹಾಕ್ಕಳಕೆ ಯಾವೊಬ್ನೂ ಬರಲಿಲ್ಲ ಬುಡಿ. ಅಂದಂಗೆ ನಮ್ ಸ್ವಾಮ್ಯೋರ್ಗೆ ಹಳದೀ ಪಟಾಲಮ್ಮು ಅಂತ ಒಂದು ಛತ್ರಿ ಹಿಡಿಯೋರ ಸಂಘ ಐತಿ. ಅವರಿಗೆ ಆ ವಯ್ಯ ಒಳ್ಳೇ ಟ್ರೇನಿಂಗ್ ಕೊಟ್ಟವ್ನೆ. ಜನ ದಕ್ಷಿಣದ ರಾಂಪಾಲ ಅಂತವ್ರೆ ಹಂಗದೆ ಟ್ರೇನಿಂಗು. ಅವರು ಗಂಟಲು ಹರ್ಕೊಂಡು ಪರಾಕು ಕೋಗೋದ್ ನೋಡ್ಬೇಕು. ಒಳ್ಳೆ ಸೀಳು ನಾಯಿಗಳ ಗುಂಪಿದ್ದಂಗೈತೆ. ಸ್ವಾಮಿ ಎಲ್ಲಿಗೇ ಹೋದ್ರೂ ಅವು ಜೊತಿಗೇ ಹೋತವೆ. ಸ್ವಾಮಿ ರಕ್ಸಣೆ ಮಾಡ್ತವೆ.

ಪ್ರಕರಣ ಅಸ್ಟೆಲ್ಲ ಎಳದ್ರೂ ಮೊನ್ ಮೊನ್ನೆ ನಮ್ ಸ್ವಾಮ್ಯೋರೆ ಗೆದ್ರು. ಚಡ್ಡೀಲಿ ವೀರ್ಯಾಣು- ಕೂದಲು ಸಿಕ್ಕಂದೆಲ್ಲ ಇವರ್ದೇಯ ಅಂತ ರಿಪೋರ್ಟು ಬಂದ್ರೂ ಅದೆಂಗೆ ಗೆದ್ರು ಅಂತ ನೀವು ಕೇಳ್ಬೋದು. ಅದ್ಕೇ ಹೇಳಂದು ನಮ್ ಸ್ವಾಮ್ಯೋರ್ ಪವಾಡ ಅಸ್ಟೈತಿ. ಇಂದು ಇದ್ದದ್ದು ನಾಳೆ ಇರಲ್ಲ ಅನ್ನುಸ್ಬುಡ್ತಾರೆ. ಅದ್ಯಾವನೋ ಒಬ್ಬ ಗುಂಡಾಕ್ಕಂಬುಟ್ಟು ಸತ್ತೋದ್ನಲ್ಲ- ಅದೂ ಸಹ ನಮ್ ಸ್ವಾಮ್ಯೋರ ಶಾಪ-ಪವಾಡವೇಯ.

ಸ್ವಾಮ್ಯೋರ್ ಶಾಪ ಬಿತ್ತು ಅಂದ್ರೆ ಸತ್ಯ ನಾಸ ಆಗೋಯ್ತರೆ. ಪೀಠವೂ ಅಂತದ್ದೇಯ. ಅದ್ಕೆ ಬೇಕಾದ ಇತಿಹಾಸ ಎಲ್ಲ ಸುವರ್ಣ ಮಂತ್ರಾಕ್ಷತಿ ಕೊಟ್ಟು ಪುಸ್ತಕ ಮಾಡ್ಸವರೆ. ತಾಮ್ರದ ತಗಡೂ ಒಂದೆರಡು ಮಾಡ್ಸಿಟ್ಗಂಡವ್ರೆ ಅಂತ ಕೇಳ್ದೆ. ಅಂದಂಗೆ ಆರೇಳು ಶತಮಾನಗಳ ಹಿಂದೇನೆ ಅದ್ಯಾರೋ ಒಂದಿಬ್ರು ಸ್ವಾಮ್ಗೋಳು ಜಗಳ ಆಡ್ಕಂಬುಟ್ಟು ಹಸುವಿನಕಿವಿಯೂರಿನ ಮೂಲ ಮಟ ಬಿಟ್ಟು ಬೇರೆ ಊರಾಗೆ ಮಟ ಕಟ್ಟಿದ್ರಂತೆ. ನಂತ್ರ ಬಂದೋರು ಮತ್ತೆ ಅದೆಲ್ಲ ತಮ್ಗೆ ಸೇರದ್ದು ಅಂತ ದಾಖಲೆ ಬರ್ಸವ್ರೆ ಅಂದಂಗಾತು.

ಅದೇನಾರಾ ಇರ್ಲಿ ನಮ್ ಸ್ವಾಮ್ಯೋರು ಮಾತ್ರ ಎಂದೂ ತಪ್ಪು ಮಾಡಾಕಿಲ್ಲ. ಅವರು ಅವತಾರಿ ಗೊತ್ತ? ಅವರ ಬಾಯಲ್ಲಿ ಬಂತು ಅಂತಂದ್ರೆ ಕೆಲಸ ಆಯ್ತು ಅಂತ್ಲೇ ಅರ್ಥ ಅಂತವ್ರೆ ನೀತಾ ಗುಂಜಪ್ಪಕ್ಕ. ವಿಶೇಷವಾಗಿ ಯಾವ್ದಾದ್ರೂ ಹುಡುಗಿಯೋ ಹೆಂಗಸೋ ಬೇಕು ಅಂತಂದ್ರೆ ಬೆನ್ನಿಗೆ ಬಿದ್ದು ಕಣ್ಣು ಹಾಕಿದ್ರೆ ಮುಗೀತು. ಎಂತೆಂತ ಬುದ್ದಿವಂತ ಗಂಡುಸ್ರಿಗೆಲ್ಲ ಉಂಡೆನಾಮ ಹಚ್ಚವರೆ ನಮ್ ಸ್ವಾಮ್ಗೋಳು ಗೊತ್ತ? ಪಾಪ ಆ ಹೈಕ್ಳು ರಾಮ್ ಭಜನೆ ಮಾಡ್ಕೋತ ಹೊರ್ಗಡಿಗೆ ಕೂತಿರ್ಬೇಕು, ಈ ವಯ್ಯ ಕೋಣೆಯೊಳಿಕ್ಕೆ ಅವರ ಹೆಂಡರ ಜೊತೆಗೆ ಮಲಿಕಂಡು ಗಂಟೆಗಟ್ಲೆ ಕಳ್ದು ನಂತರ ದರ್ಶನ ಮುಗೀತು ಅಂತಾನೆ. ಅಸ್ಟೆಲ್ಲ ಆಗ್ತಿದ್ರೂ ಆ ಹೆಂಗುಸ್ರಿಗಾಗ್ಲೀ ಅವರ ಗಂಡಂದ್ರಗಾಗಲೀ ಮೈಮೇಲೆ ಪ್ರಜ್ಞೆ ಇಲ್ದಂಗೆ ಇರ್ತಾರೆ ಅಂದ್ರೆ ನಮ್ ಸ್ವಾಮ್ಯೋರಲ್ಲಿ ಪವಾಡ ಇಲ್ಲಾ ಅಂತೀಯ?

ಸ್ವಾಮ್ಗೋಳ್ಗೆ ಆಗ್ದೋರು ಕೆಲವರು ಅದೇನೋ ಹೇಳ್ತರೆ ಬುಡ್ಲ. ಸ್ವಾಮ್ಗೋಳು ವಾಮಾಚಾರ ಮಾಡುಸ್ತರೆ, ರಕ್ತಾಕ್ಷಿ, ಕಾಳರಾತ್ರಿ, ಬಗಳಾಮುಖಿ, ಪ್ರತ್ಯಂಗಿರ ಅಂತೆಲ್ಲ ಎಲ್ಲ ದೇವಾನುದೇವತೆಗಳನ್ನು ಹಿಡ್ದು ಕೆಲಸ ಮಾಡ್ಸಗತವ್ರಂತೆ. ಪ್ರಕರಣ ದಾಖಲಾದ ಮೇಲೆ ಅವರಪ್ಪ ಅದ್ಯಾವ್ದೋ ಕಾಡ್ನಗೆ ಪಾರ್ಟಿ ವಿರುದ್ಧ ದೊಡ್ಡ ದೊಡ್ಡ ಹೋಮ ಮಾಡ್ಸಿದ್ನಂತೆ-ಊರಾಗ್ ಮಾಡ್ಸುದ್ರೆ ಜನೀಕೆಲ್ಲ ಗೊತ್ತಾಗಿ ಗುಲ್ಲೆಬ್ಬರಿಸ್ಬುಡ್ತಾರಲ್ಲ ಅದ್ಕೇಯ.

ಅದೇನೇ ಇರ್ಲಿ, ನಮ್ ಸ್ವಾಮ್ಗೋಳು ಗೆದ್ರು. ಆದ್ರೂ ಅರ್ಧ ಶರೀರ ಆಚೆ ಬರೋ ಹಿತ್ಗೆ ಸಲ್ಪ ಸಿಕ್ಕಾಕಂಬುಡ್ತು ಅನ್ನೋದು ಬೇರೆ ಪ್ರಶ್ನೆ. ಆದ್ರೂ ಹೆದರ್ಲಿಲ್ಲ ನಮ್ ಸ್ವಾಮ್ಯೋರು. ಹಳದೀ ಪಟಾಲಮ್ ಮುಂದಿಟ್ಗಂಡು ಶಾನೆ ಹೋರಾಟ ಮಾಡ್ತಾರೆ. ದಿನಕ್ಕೊಂದು ಬಿಲ್ಡಪ್ ಕೊಡ್ತವ್ರೆ.

ಅಲ್ಯಾವ್ದೋ ವೈದಿಕ ಬ್ರಾಹ್ಮರ್ನ ಹಿಡಿದು ಅವರ ಸಂಘ ಕಟ್ಗಳಿ ಅಂತ ಚೂರು ಪಾರು ಕಾಸುಕೊಟ್ಟಂಗೆ ಮಾಡಿ. ಅವರಿಂದ ಬೆಂಬಲ ಕೊಡ್ತೀಮಿ ಅಂತ ಹೇಳಿಸ್ಗ್ಯಂಡವ್ರೆ. ಸುದ್ದಿ ಮಾಡೋ ಜನರ್ನೆಲ್ಲ ಭಕ್ಷೀಸು ಕೊಟ್ಟು ಕಾಪಾಡ್ಕಂಡವ್ರೆ. ಎಲ್ಲೆಲ್ಲಿ ಕಾವಿ ಬಣ್ಣ ಕಣ್ಣಿಗ್ ಬೀಳ್ತೈತೋ ಅದನ್ನೆಲ್ಲ ಹಿಡಿಸಿ, ಕರೆತರ್ಸಿ ನಮ್ ಪಕ್ಷಕ್ಕೆ ಬನ್ನಿ, ನಿಮಗೆ ಒಂದಸ್ಟ್ ಲಾಭ ಆಗುತ್ತೆ ಅಂತಾರೆ. ಹಣಕ್ಕೆ ಬಾಯ್ಬಿಡೋ ಹೆಸರೇ ಇಲ್ಲದ ಮಟಗಳ ಕಾವಿ ಜನರನ್ನೆಲ್ಲ ಸಂಘ ಕಟ್ರಾರೆ.

ಪಾಪ ನಮ್ ಸ್ವಾಮ್ಗೋಳು ಸದಾ ಎಲ್ಲರ್ಗಿಂತ ಎತ್ತರಕ್ಕೆ ಪೀಠ ಹಾಕಿಸ್ಕೆಂಡು ಕೂತ್ಗೊತಿದ್ರು, ಈಗ ಉಳಿದ ಕಾವಿ ಜನ ಅದನ್ನೆಲ್ಲ ಸಹಿಸಾಕಿಲ್ಲ ಅಂಬೋದು ಗೊತ್ತಾಗೈತಿ. ಹಂಗಾಗಿ ಅವರೊಟ್ಟಿಗೆ ಚಾಪೆ ಆದ್ರೂ ಸರಿ, ನೆಲ ಆದ್ರೂ ಸರಿ ಕೂತ್ಗತರೆ. ಅವರ್ನೆಲ್ಲ ಕರ್ಸಿ ಫಲಸಮರ್ಪಣೆ ತಾವೇ ಖುದ್ದಾಗಿ ಮಾಡ್ಯವರೆ. ಶಾಲು ಕೊಚ್ಬುಟ್ಟು ಸನ್ಮಾನ ಮಾಡ್ಯವ್ರೆ. ಇಸ್ಟೆಲ್ಲ ಮಾಡಂದು ತಮಗೆ ಬೆಂಬಲ ಕೊಡಿ ಅನ್ನೋಕೆ ಅಂತ ಯಾರಿಗೂ ಗೊತ್ತಿಲ್ಲ ಅಂದ್ಕಬುಟ್ಟವ್ರೆ!

ಈಗೊಂದೆರಡು ತಿಂಗಳಿಂದ ಊರೂರ್ ಸುತ್ತಿ ಯಾರ್ಯಾರು ಬೆಂಬಲ ಕೊಡ್ತವರೆ ಅಂತ ಲೆಕ್ಕ ಹಾಕವ್ರಂತೆ. ಅಂದಂಗೆ ಜನಾನೂ ಎಸ್ಟು ದಿನ ಅಂತ ಸಹಿಸ್ಗತರೆ? ಎಲ್ಲಾರ ಮನೆನಲ್ಲೂ ಹೆಂಗಸ್ರು-ಹೆಣ್ಮಕ್ಳು ಇರ್ತಾರಲ್ವ? ನಾಳೆ ಈ ಸ್ವಾಮಿ ಕಂಡೋರ್ನೆಲ್ಲ ಉಂಡು ಮುಗ್ಸಿದ್ರೆ ಸಮಾಜ ಹೆಂಗ್ ನಡೀತೈತೆ? ಅದಕ್ಕೆ ಒಂದಸ್ಟ್ ಜನ ಈ ವಯ್ಯಂಗೆ ತಿರುಗಿ ಬಿದ್ದವ್ರೆ.

ತೊರುಗಿ ಬಿದ್ದವ್ರ ಸಂಘ ಬೆಳೀತಾನೇ ಐತೆ. ಅದನ್ನೋಡಿ ನಮ್ ಸ್ವಾಮ್ಯೋರ್ಗೆ ಒಳಗೊಳಗೇ ಪುಕು ಪುಕು ಹತ್ತೈತಂತೆ! ಅಂದಂಗೆ ಅಡಿಗೆ ಬಿದ್ರೂ ಮೀಸೆ ಮೇಲೇ ಅದೆ ಅನ್ನೋ ನಮ್ ಸ್ವಾಮ್ಯೋರ್ ಕೂದ್ಲಿಗೆ ಈಗ ಬಾಳ ಡಿಮಾಂಡು! ಏಕಾಂತ ಮುಗೀತಿದ್ದಂಗೆ ಗಿಂಡಿಗಳು ಆ ಕೋಣೆಗೆ ಹೋಗಿ ಕೂದಲು ಹುಡುಕ್ತಾವಂತೆ. ಅಲ್ಲಿ ಬಿದ್ದಿರೋ ಒಂದೊಂದು ಕೊದಲಿಗೂ ಲಕ್ಷಾಂತರ ರೂಪಾಯಿ ಕಿಮ್ಮತ್ತು! ಗೊತ್ತಾ?

ಅಂದಂಗೆ ಏಕಾಂತದ ಮಹಿಳೇರು ತಮ್ಮ ಚಡ್ಡಿ ಒಳಿಕ್ಕೆ ಬಿದ್ದಿರೋ ಸ್ವಾಮಿ ಕೂದಲ್ನೆಲ್ಲ ಎತ್ತಿಟ್ಗಂಬುಟ್ಟು ದುಬಾರಿ ಬೆಲೆಗೆ ಮಾರ್ತವ್ರಂತೆ! ಸಿವನೇ ಸಂಭುಲಿಂಗ. ನಮ್ ಸ್ವಾಮ್ಯೋರ್ಗೆ ಕೆಲವ್ರೆಲ್ಲ ಒಳಗಡೆಯಿಂದ ಕಾಮಿ ಅಂತ ಕರೀತಾರೆ. ಅವರ ಸೊಂಟದ ಕೆಳಗಿನ ಕೂದಲಿಗೆ ಬಾಳಾ ಕಿಮ್ಮತ್ತು. ಅದನ್ನು ಉಂಗುರ ಮಾಡಿಸಿ ಹಾಕ್ಕೊಂಡ್ರೆ ನಿಮಿರು ದೌರ್ಬಲ್ಯ ಎಲ್ಲ ಗೋಗತ್ತಂತೆ.

ಯಾರಿಗೆ ಸಂತಾನ ಇಲ್ವೋ ಅಂತೋರು ಕಾಮೀ ಕೂದಲ ಉಂಗುರ ಮಾಡ್ಸಿ ಧಾರಣೆ ಮಾಡ್ಕೊಂಡ್ರೆ ವರ್ಸದಾಗೆ ಮಕ್ಳಾಯ್ತವೆ ಅಂತ ಪವಾಡ ಅನುಭವಿಸಿದೋರು ಹೇಳ್ಯವರೆ. ಹೀಂಗಾಗಿ. ಈ ಸಲ ಚತುರ್ಮೋಸದಾಗೆ ಏಕಾಂತ ನಡದಾಗೆಲ್ಲ ಜಾಸ್ತಿ ಜನ ಯಾಕೆ ಬತ್ತವ್ರೆ ಅಂದ್ರೆ ಕಾಮೀ ಕೂದಲ ಅನುಗ್ರಹ ಪ್ರಸಾದ ಪಡ್ಕಂಡೋಗಕ್ಕೆ.

ಮಟಕ್ಕೆ ಯಾರು ಬತ್ತವ್ರೆ ಅಂದ್ರೆ ಬಂದವ್ರೇ ಬತ್ತವ್ರೆ. ಬರಬಾರದು ಅಂತ ತೀರ್ಮಾನಿಸಿದೋರು ಬರೋದನ್ನೇ ಬಿಟ್ಟವ್ರಂತೆ. ಈ ವಯ್ಯ ಎಂತೆಂತ ಓದ್ಕಂಡೋರ್ಗೆಲ್ಲ ಸರಿಯಾಗಿ ಉಂಡೆನಾಮ ತೀಡಿದ್ರಿಂದ ಅವರಿಗೆಲ್ಲ ನಿಜವಾದ ಹಕೀಕತ್ತು ಗೊತ್ತಿಲ್ದೆ ಅವರೆಲ್ಲ ಇನ್ನೂ ಜೈಕಾರ ಕೂಗ್ತವ್ರಂತೆ. ಪರವಾಯಿಲ್ಲ ಬುಡಿ. ಅರ್ಧಕ್ಕಿಂತ ಹೆಚ್ಚಿಗೆ ಜನಿಕ್ಕೆ ಈಗ ಗೊತ್ತಾಗೋಗದೆ ನಮ್ ಸ್ವಾಮ್ಯೋರ್ ಯಾರು ಅಂತಾವ.

ಅದ್ಯಾರೋ ಮಸಾಜಣ್ಣೋರು ಅದಾರಂತಲ್ಲ? ಸ್ವಾಮ್ಯೋರ್ ಚಿತ್ರ ಕಾಕ್ಬುಟ್ಟು ’ಸ್ಟೇ ಆನ್’,303ರೀತಿ ಕ್ಯಾಪ್ಸೂಲ್ ಅಥವಾ ಜಪಾನಿ ತೈಲದ ನಮೂನಿ ತೈಲ ತಯಾರಿಸ್ಬಹುದಿತ್ತಲ್ಲ ಅಂತ ಕೆಲವರು ಹೇಳ್ತವ್ರೆ. ಈ ಸಲ ಚತುರ್ಮೋಸದಾಗೆ ಮಸಾಜಣ್ಣೋರು ಸಗಣಿ ಟಾನಿಕ್ ಕೊಡ್ತಾರಂತೆ. ಸ್ತ್ರೀ ಡಮಾರ್ ಬಸ್ಸಣ್ಣ ಜನಿನೆಲ್ಲ ಪುಗಸಟ್ಟೆ ಕರ್ಕೊಂಬರೋ ಸೇವೆ ನಡಿಸ್ತಾನಂತೆ. ಇಂತ ಕೆಲವರು ಫಲಾನುಭವಿಗಳು “ಗುರುಗಳೇ ನೀವು ಜಪ್ಪಯ್ಯ ಅಂದ್ರೂ ಪೀಠ ಬಿಡಬೇಡಿ” ಅಂತ ಸ್ವಾಮ್ಗೋಳ್ಗೆ ಸಲಹೆ ಕೊಟ್ಟವ್ರಂತಪ್ಪೋ.!

ಭಕ್ತರೆಲ್ಲ ಸೇರಿ ಸ್ವಾಮಿನ ಹಿಡ್ಕಂಡು ಕೌಪೀನ ಬಿಡಿಸಿ ಕೊದಲು ಕಿತ್ಗೊಂಡು ಉಂಗುರ ಮಾಡಿಸ್ಕಳೋ ದಿನ ದೂರ ಇಲ್ಲ ಅಂತಾರೆ ಗುಮ್ಮಣ್ಣ ಹೆಗಡಿ.

thumari1

Thumari Ramachandra

source: https://www.facebook.com/groups/1499395003680065/permalink/1794297064189856/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s