ನ್ಯಾಯಾಲಯದ ತೀರ್ಪಿಗೆ ಕಾಯೋಣ ಎನ್ನುವುದು ತಾಟಸ್ಥ್ಯ ಧೋರಣೆಯೇ?

ನ್ಯಾಯಾಲಯದ ತೀರ್ಪಿಗೆ ಕಾಯೋಣ ಎನ್ನುವುದು ತಾಟಸ್ಥ್ಯ ಧೋರಣೆಯೇ?

ಸರಣಿ ಅತ್ಯಾಚಾರಗಳ ಆರೋಪ ಹೊತ್ತ ಹೋರೀಶನ ವಿರುದ್ಧ ಬರಹಗಳು ಬಂದಾಗ ಕೆಲವರು ತಾವು ತಾಟಸ್ಥ್ಯ ಧೋರಣೆಯವರು ಎಂದು ಹೇಳಿಕೊಳ್ಳುತ್ತಲೇ ಈ ಬರಹಗಳನ್ನು ವಿರೋಧಿಸುತ್ತಾರೆ. ಮತ್ತೆ ಕೆಲವರು ‘ನ್ಯಾಯಾಲಯದ ತೀರ್ಪು ಬರುವವರೆಗೂ ಕಾಯೋಣ, ಅಲ್ಲಿಯತನಕ ಸುಮ್ಮನಿರಿ’ ಎಂದು ಉಪದೇಶಿಸತೊಡಗುತ್ತಾರೆ. ಈ ಎರಡೂ ನಿಲುವುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇವೆರಡೂ ಹೋರೀಶನ ಪರವಾದ ನಿಲುವುಗಳು ಎನ್ನುವುದು ಸ್ಪಷ್ಟವಾಗುತ್ತದೆ.

ಮೊದಲಿಗೆ ಈ ತಾಟಸ್ಥ್ಯ ಧೋರಣೆಯನ್ನು ಪರೀಕ್ಷೆಯ ಒರೆಗಲ್ಲಿಗೆ ತಿಕ್ಕುವಾ. ಈ ಧೋರಣೆಯನ್ನು ತಾವು ಅನುಸರಿಸುತ್ತೇವೆಂದು ಹೇಳಿಕೊಂಡ ಅನೇಕರ ಬರಹಗಳನ್ನು, ಹೋರೀಶನ ಬೆಂಬಲಕ್ಕೆಂದೇ ಸೃಷ್ಟಿಯಾದ ಜಾಲತಾಣಗಳಲ್ಲಿ ಮತ್ತು ಫೇಸ್ ಬುಕ್ ಗುಂಪುಗಳಲ್ಲಿ ನಾನು ನೋಡಿದ್ದೇನೆ. ಅವರು ನಿಜಕ್ಕೂ ತಟಸ್ಥರೇ ಆಗಿದ್ದರೆ, ಅವರ ಮುಖಗಳು/ಬರಹಗಳು ಹೋರೀಶನ ಬೆಂಬಲಕ್ಕಿರುವ ತಾಣಗಳಲ್ಲೇಕೆ ಕಾಣಸಿಗಬೇಕು? ಹೋರೀಶನನ್ನು ಬೆಂಬಲಿಸುವ ಬರಹಗಳಿಗೆ ಮತ್ತು ನಿಲುವುಗಳಿಗೆ ಅವರ ಬೆರಳುಗಳು ಏಕೆ ಒಪ್ಪಿಗೆ (like) ಒತ್ತಬೇಕು? ಅಲ್ಲಿಗೆ ಅಂಥವರ ಒಳಾಂತರಂಗವೇನು ಎನ್ನುವುದು ಸ್ಪಷ್ಟವಾಗುತ್ತದೆಯಲ್ಲವೇ?

ಇನ್ನೊಂದು ಸಂಗತಿಯನ್ನು ಗಮನಿಸಿ. ಹೋರೀಶನ ವಿರುದ್ಧ ಲೇಖನಗಳು ಬಂದಾಗಷ್ಟೇ ಅವನ್ನು ವಿರೋಧಿಸಲು ಈ ತಟಸ್ಥರು ಪ್ರತ್ಯಕ್ಷರಾಗುತ್ತಾರೆ. ಆದರೆ ಹೋರೀಶನನ್ನು ಬೆಂಬಲಿಸುವ ಹಳದಿ ತಾಲಿಬಾನ್ ಪುಂಡರು ನಿಂದನೆಗಳ, ಹೀಯಾಳಿಕೆಗಳ, ಅವಾಚ್ಯ ಬಯ್ಗುಳಗಳ, ಅಪಪ್ರಚಾರಗಳ, ಅಶ್ಲೀಲ ಭಾಷಾ ಪ್ರಯೋಗಗಳ ಹಾಗೂ ಸುಳ್ಳು ಸುದ್ದಿಗಳ ಪ್ರವಾಹವನ್ನು ಹರಿಸಿದಾಗ ಈ ತಟಸ್ಥರು ಮೌನವಾಗುಳಿಯುವುದೇಕೆ? ಕೇವಲ ಮೌನವೂ ಅಲ್ಲ, ಅಂಥ ಅಸಭ್ಯ ಟಿಪ್ಪಣಿಗಳಿಗೆ ತಮ್ಮ ಒಪ್ಪಿಗೆ ಸೂಚಕ ಲೈಕ್ ಒತ್ತಿರುವ ನಿದರ್ಶನಗಳು ಬೇಕಾದಷ್ಟಿವೆ. ಸತ್ಯವಾಗಿ ಅವರು ತಟಸ್ಥರೇ ಆಗಿದ್ದರೆ ಎರಡೂ ಪಕ್ಷಗಳಿಂದ ಸಮಾನಾಂತರ ಕಾಯ್ದುಕೊಳ್ಳಬೇಕಿತ್ತಲ್ಲವೇ? ಆ ಕಡೆ ಹತ್ತಿರ, ಈ ಕಡೆ ದೂರ ಆದರೆ ಅದ್ಹೇಗೆ ತಾಟಸ್ಥ್ಯ ಧೋರಣೆಯಾಗುತ್ತದೆ? ಆ ಕಡೆಯ ಪುಂಡಾಟಿಕೆಗೆ ಮೌನಂ ಸಮ್ಮತಿ ಲಕ್ಷಣಂ, ಈ ಕಡೆಯ ಪ್ರತಿಕ್ರಿಯೆಗಳಿಗೆ ಮಾತ್ರ ಸಂಯಮದ ಉಪದೇಶ! ಇದು ಯಾವ ಸೀಮೆ ತಾಟಸ್ಥ್ಯ ಧೋರಣೆ?

ಇನ್ನು ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯೋಣ ಪ್ರತಿಪಾದಕರ ಬಗ್ಗೆ. ಇದಂತೂ ಬಹಳ ಸ್ಪಷ್ಟವಾಗಿದೆ. ವಾಸ್ತವವಾಗಿ ಈ ಸಿದ್ಧಾಂತವನ್ನು ಮೊದಲಿಗೆ ಮಂಡಿಸಿದವರು ಹೋರೀಶ ಮತ್ತವನ ಬೆಂಬಲಿಗರೇ! ಅವರ ಉದ್ದೇಶವೇನೆಂದರೆ ನ್ಯಾಯಾಲಯದ ತೀರ್ಪು ಬರುವುದು ಯಾವಾಗಲೋ ಏನೋ! ಅಲ್ಲಿಯತನಕ ಭೂಪ ಕೇಳೆಂದ!! ಅಲ್ಲಿಯವರೆಗೂ ಮಜಾ ಉಡಾಯಿಸಲು, ಮತ್ತಷ್ಟು ಹೆಣ್ಣುಮಕ್ಕಳನ್ನು ಭೋಗಿಸಲು ಮತ್ತು ಸಮಾಜದಲ್ಲಿ ಕಾಮಕಥೆಗಳ ಉತ್ಸವ ನಡೆಸಲು ಅವಕಾಶ ಸಿಗುತ್ತದೆಯಲ್ಲವೇ?

ಈ ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯೋಣ ಪ್ರತಿಪಾದಕರು ಅಸಲಿಯಲ್ಲಿ ಹೋರೀಶನ ನಾಟಕ ಮಂಡಳಿಯ ಮಾಯಾ ನಟರು. ಅವರು ನ್ಯಾಯದ ಹೆಸರಿನಲ್ಲಿ ಹೋರೀಶನ ಅಪ್ರತ್ಯಕ್ಷ ಸಮರ್ಥಕರು. ನನಗಂತೂ ಈ ಮಾಯಾಜಾಲ ಅರ್ಥವಾಗಿದೆ. ಉಳಿದವರಿಗೂ ಅರ್ಥವಾಗಲೆಂದು ಈ ಲೇಖನ.

source: https://www.facebook.com/groups/1499395003680065/permalink/1790477531238476/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s