ಶ್ರೀ ಜಿ.ಬಿ.ಮುದಿಗೌಡರ್ ಆದೇಶದ ಒಂದು ಅವಲೋಕನ ಮತ್ತು ಪೂರ್ಣ ಕನ್ನಡ ಪಾಠಾಂತರ

ಆದೇಶದ ಪೂರ್ಣ ಕನ್ನಡ ಪಾಠಾಂತರಕ್ಕೆ ಈ ಅಂತರ್ಜಾಲ ಕೊಂಡಿಯನ್ನು ಕ್ಲಿಕ್ಕಿಸಿ.
31ನೇ ಮಾರ್ಚ್, 2016 ರ ದಿನಾಂಕಿತ
ಎಸ್.ಸಿ.ನಂಬ್ರ 1242/2015
ಇದರಲ್ಲಿ
ಶ್ರೀ ಜಿ.ಬಿ.ಮುದಿಗೌಡರ್, ಬಿ.ಎಸ್ಸಿ, ಎಲ್ಎಲ್ ಬಿ(ವಿಶೇಷ)
53ನೇ ಹೆಚ್ಚುವರಿ ಸಿಟಿ ಮತ್ತು ಸೆಷನ್ಸ್ ನ್ಯಾಯಾಧೀಶ
ಬೆಂಗಳೂರು

ನೀಡಿದ ಆದೇಶದ ಒಂದು ಅವಲೋಕನ ಮತ್ತು ಆದೇಶದ ಪೂರ್ಣ ಕನ್ನಡ ಪಾಠಾಂತರ

1. ಈ ಆದೇಶದಲ್ಲಿ ಹೊರಬಂದಂತಹ ಒಂದು ವಿಚಾರವೆಂದರೆ, ನ್ಯಾಯಾಧೀಶರ ಅಂತಸ್ಸಾಕ್ಷಿಗೆ ಫಿರ್ಯಾದಿ ಮಹಿಳೆ ಮತ್ತು ಆರೋಪಿ ಮಠಾಧಿಪತಿಯ ನಡುವೆ ಲೈಂಗಿಕ ಸಂಬಂಧವಿತ್ತೆಂಬುದು ಮನವರಿಕೆ ಆಗಿರುವಂತಹುದು.  ಪ್ರಕರಣ ದಾಖಲಾಗಿರುವುದು ಅತ್ಯಾಚಾರವೆಂದು ಇದ್ದಿದ್ದು, ನ್ಯಾಯಾಧೀಶರು ನಡೆದಿರುವುದು ಬಲಾತ್ಕಾರ ಆಗಿಲ್ಲ ಎಂದಷ್ಟೇ ಆರೋಪಿಯ ಬಿಡುಗಡೆಗೆ ಆದೇಶ ನೀಡಿದ್ದಾರೆ. ಅಕ್ರಮ ಸಂಬಂಧಕ್ಕೆ ಏನು ಮಾಡಬೇಕೆಂಬುದು ಈ ಪ್ರಕರಣದ ವ್ಯಾಪ್ತಿಯಲ್ಲಿಲ್ಲ. ನ್ಯಾಯಾಧೀಶರು ಪ್ರಕರಣವನ್ನು ವಿಶ್ಲೇಷಣೆ ಮಾಡುತ್ತಾ, ಆದೇಶದ  ಪುಟ ಸಂಖ್ಯೆ 38ರ ಪರಿಚ್ಛೇದ ಸಂಖ್ಯೆ 15ರಲ್ಲಿ ಹೇಳುತ್ತಾರೆ – “this court no other alternative has to discharge the accused holding relation of the accused and aggrieved lady that of ill-intimacy only”, ಅಂದರೆ – “ಆರೋಪಿ ಮತ್ತು ನೊಂದ ಮಹಿಳೆಯ ಸಂಬಂಧವನ್ನು ಕೇವಲ ಅನೈತಿಕ-ಸಂಬಂಧ ಎಂದು ಪರಿಗಣಿಸಿ  ಆರೋಪಿಯನ್ನು ಖುಲಾಸೆಗೊಳಿಸದೆ ಅನ್ಯ ಮಾರ್ಗವಿಲ್ಲ“.  ಪುಟ ಸಂಖ್ಯೆ 42ರಲ್ಲಿ ಪರಿಚ್ಛೇದ ಸಂಖ್ಯೆ 21ರಲ್ಲಿ ಹೇಳುತ್ತಾರೆ – “It creates  indeed  in  the  mind  of  this  court,  the  accused indulged in sex with her”, ಅಂದರೆ – “ಇದು ನ್ಯಾಯಾಲಯದ ಮನಸ್ಸಿನಲ್ಲಿ, ಆರೋಪಿಯು ಅವಳೊಡನೆ ಲೈಂಗಿಕವಾಗಿ ಪಾಲ್ಗೊಂಡಿದ್ದಾನೆ ಎಂದು ನಿಜವಾಗಿ ಕಲ್ಪಿಸುತ್ತದೆ”. ಇದುವೇ ನ್ಯಾಯಾಧೀಶರ ಮನಸ್ಸಿನ ಮೂಲದಲ್ಲಿದ್ದು, ಅಲ್ಲಲ್ಲಿ ಹೇಳುತ್ತಾರೆ. ಪುಟ ಸಂಖ್ಯೆ 78, 79 ಮತ್ತು 80ರಲ್ಲಿ ಪರಿಚ್ಛೇದ 73ರಲ್ಲಿ ಹೇಳುತ್ತಾರೆ – “she did an act of sex with him, she never resisted at any point of time and place. He did act of sex with her without illegal detention by him or his captivity”, ಅಂದರೆ – “ಅವಳು ಅವನೊಡನೆ ಲೈಂಗಿಕ ಕ್ರಿಯೆಯನ್ನು ಮಾಡಿದರೂ, ಅವಳು ಯಾವುದೇ ಸಮಯ ಮತ್ತು ಸ್ಥಳದಲ್ಲಿ ಪ್ರತಿರೋಧಿಸಲಿಲ್ಲ. ಅವನು ಅವಳನ್ನು ಕಾನೂನುಬಾಹಿರ ತಡೆಯಲ್ಲಿ ಅಥವಾ ಅಕ್ರಮ ಬಂಧನದಲ್ಲಿ ಇಟ್ಟುಕೊಳ್ಳದೇ ಅವಳೊಡನೆ ಲೈಂಗಿಕ ಕ್ರಿಯೆಯನ್ನು ನಡೆಸುತ್ತಾನೆ”. ಮತ್ತೆ ಅದೇ ಪರಿಚ್ಛೇದದಲ್ಲಿ ದಪ್ಪ ಅಕ್ಷರಗಳಲ್ಲಿ, ತಮ್ಮ ಮನಸ್ಸಿನ ಖಚಿತತೆಯಲ್ಲಿ ಹೇಳುತ್ತಾರೆ – “the sexual affairs in the given case on hand between them would take shape and colour of the ill-intimacy”, ಅಂದರೆ, “ಈ ಪ್ರಕರಣದಲ್ಲಿ ಅವರ ನಡುವಿನ  ಲೈಂಗಿಕ ಸಂಬಂಧಗಳು ಅಕ್ರಮ-ಸಂಬಂಧದ ರೂಪ ಮತ್ತು ಬಣ್ಣವನ್ನು ಹೊಂದುತ್ತದೆ.” ಮತ್ತೆ, ಪುಟ 82ರಲ್ಲಿ ಪರಿಚ್ಛೇದ 75ರಲ್ಲಿ ಲೈಂಗಿಕತೆ ನಡೆದ ಬಗ್ಗೆ ಖಚಿತತೆ ಇದ್ದು, ಕಾರಣ ಗೊತ್ತಿಲ್ಲ ಎಂದು ಹೇಳುತ್ತಾರೆ – “We do not know for what reasons she did a sex with the accused either for money or for satisfying the lust”, ಅಂದರೆ, “ಅವಳು ಆರೋಪಿಯೊಡನೆ ಯಾವ ಕಾರಣಕಾಗಿ – ಹಣಕ್ಕಾಗಿಯೋ ಅಥವಾ ಲಾಲಸೆಯ ತೃಪ್ತಿಗೋಸ್ಕರವೋ ಲೈಂಗಿಕತೆಯನ್ನು ಮಾಡಿಕೊಂಡಳು ಎಂಬುದು ನಮಗೆ ಗೊತ್ತಿಲ್ಲ”. ಪುಟ ಸಂಖ್ಯೆ 85ರಲ್ಲಿ ಪರಿಚ್ಛೇದ ಸಂಖ್ಯೆ 82ರಲ್ಲಿ ಮತ್ತೆ ದಪ್ಪ ಅಕ್ಷರಗಳಲ್ಲಿ, ಖಚಿತತೆಯಲ್ಲಿ ಹೇಳುತ್ತಾರೆ – “Viewing from any angle, the acts of sex did not amounts to rape at all, but, ill-intimacy”, ಅಂದರೆ – “ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ, ಮಾಡಿದ ಲೈಂಗಿಕತೆಯು ಬಲಾತ್ಕಾರಕ್ಕೆ ಸಮನಾಗುವುದಿಲ್ಲ, ಆದರೆ, ಅಕ್ರಮ-ಸಂಬಂಧವಾಗುತ್ತದೆ”. ಪುಟ ಸಂಖ್ಯೆ 87ರಲ್ಲಿ ಪರಿಚ್ಛೇದ ಸಂಖ್ಯೆ 85ರಲ್ಲಿ ಹೇಳುತ್ತಾರೆ – “The old woman prefers young boy. In the absence of consideration, for sex this may be a true”, ಅಂದರೆ, “ವಯಸ್ಸಾದ ಮಹಿಳೆ ಕಿರಿಯ ಹುಡುಗನನ್ನು ಇಚ್ಚಿಸುತ್ತಾಳೆ. ಪ್ರತಿಮೌಲ್ಯದ ಅಭಾವವಿದ್ದಲ್ಲಿ ಇದು ಲೈಂಗಿಕತೆಗಾಗಿಯೇ ನಿಜ ಇರಬಹುದು”.   ಪುಟ ಸಂಖ್ಯೆ 88ರಲ್ಲಿ ಪರಿಚ್ಛೇದ ಸಂಖ್ಯೆ 87ರಲ್ಲಿ ಹೇಳುತ್ತಾರೆ – “The period of 4 years of sex denotes that the aggrieved lady had sex with accused/Mathadipathi is nothing, but, ill-intimacy not tantamount to rape at all”, ಅಂದರೆ, “ನೊಂದ ಮಹಿಳೆ ಆರೋಪಿ/ಮಠಾಧಿಪತಿಯೊಡನೆ 4 ವರ್ಷಗಳ ಅವಧಿಗೆ ನಡೆಸಿದ ಲೈಂಗಿಕತೆಯು, ಬಲಾತ್ಕಾರವಲ್ಲದ ಅಕ್ರಮ ಸಂಬಂಧವಲ್ಲದೇ ಬೇರೇನೂ ಅಲ್ಲ”.2. ಎರಡನೆಯದಾಗಿ, ಇಡೀ ಆದೇಶವು, ತರಾತುರಿಯಲ್ಲಿ ಸಿದ್ದಪಡಿಸಿದ್ದು, ಕೂಲಂಕುಷ ಅಧ್ಯಯನ ಮಾಡಿ, ನ್ಯಾಯತತ್ವಗಳನ್ನು ಅನ್ವಯಿಸಿ ಮಾಡಿದ ಆದೇಶವೇ ಅಲ್ಲವೆಂಬಂತಿದೆ. ಕೇವಲ ಆರೋಪಿಯ ಬಿಡುಗಡೆಗೆ ಒಂದು ಪೂರ್ವಸಿದ್ಧತೆ ಮಾಡಿ ಕೊಟ್ಟ ರಹದಾರಿಯಂತಿದೆ ಈ ನ್ಯಾಯಾಂಗದ ಮೂಲಕ ಬಂದಿರುವ ಆದೇಶ. ಸುದೀರ್ಘವಾದ ಪರಿಚ್ಛೇದ 1, ಸಂಪೂರ್ಣ ಆರೋಪಿಯ ಕಡೆಯ ಮಂಡನೆಗಳಿಗೇ ಬಹುಪಾಲು ಪುಟಗಳು ವ್ಯಯವಾಗಿವೆ. ನ್ಯಾಯಾಧೀಶರೂ ಆರೋಪಿಯ ವಕೀಲರು ಮಂಡಿಸಿದ್ದನ್ನೇ ಪರಿಶೀಲಿಸಿದ ಸತ್ಯವೆಂಬಂತೆ ಒಪ್ಪಿ ಪುನರುಚ್ಚರಿಸಿ ತಮ್ಮದೇ ಶೋಧನೆಯಂತೆ ಹೇಳಿಕೊಳ್ಳುತ್ತಾರೆ. ದೋಷಾರೋಪಣೆ ಪಟ್ಟಿಯಲ್ಲಿ ಕಲಂ 508 ರ ಕೆಳಗೆ ಆರೋಪವಿದೆ, ಆದರೆ ಆದೇಶದಲ್ಲಿ ಎಲ್ಲೂ ಕಲಂ 508 ರ ಬಗ್ಗೆ ಚಕಾರ ಎತ್ತಿಲ್ಲ, ಆದರೆ ಸಂಬಂಧವೇ ಇಲ್ಲದ ಕಲಂ 506 ರ ಬಗ್ಗೆ ಕೆಲವು ಸಲ ಬರೆಯಲಾಗಿದೆ. ಕೊನೆಗೆ ಖುಲಾಸೆ ನೀಡಿದ್ದೂ ಕಲಂ 506 ರ ಅರೋಪಕ್ಕೆ ಅಂದರೆ ಕಲಂ 508ರ ಕೆಳಗಿನ ಆರೋಪದಿಂದ ವಿಮುಕ್ತಿ ಸಿಗಲಿಲ್ಲ.  ಪರಿಚ್ಛೇದಗಳಿಗೆ ಕ್ರಮಸಂಖ್ಯೆ ನೀಡುವಾಗ ಪರಿಚ್ಛೇದ 96ರ ನಂತರ 97 ಎಂದು ಸಂಖ್ಯೆಯನ್ನು ಕೊಡುವ ಬದಲು ಮತ್ತೆ 87ರಿಂದ ಸಂಖ್ಯೆಗಳನ್ನು ನೀಡಲಾಗುತ್ತದೆ. ಪರಿಚ್ಛೇದ 94 (ಪುಟ 91)ರಲ್ಲಿ, ಭಾರತೀಯ ದಂಡ ಸಂಹಿತೆಯ ಕಲಂ 375 ರ ಪೂರ್ಣ ಪಾಠವನ್ನು ಉದ್ಧರಿಸುವಾಗ ಆ ಕಲಂಗೆ 2013ನೆಯ ಇಸವಿಯಲ್ಲಿನ (ಭಾರತ ಸರಕಾರದ ಗಜೆಟ್ ಸಂಖ್ಯೆ 17, ದಿನಾಂಕ 2ನೇ ಎಪ್ರಿಲ್ 2013), ಇತ್ತೀಚೆಗಿನ ಮಾಡಿದ ಕೆಲವು ಗಮನಾರ್ಹ ಬದಲಾವಣೆಗಳ ಅರಿವು ನ್ಯಾಯಾಧೀಶರಿಗೆ ಇದ್ದಂತಿಲ್ಲ.  ಹಿಂದಿನ ಯಾವುದೋ ಪಾಠವನ್ನು ಉದ್ಧರಿಸಿದ್ದಾರೆ. ಪುಟ 94ರಲ್ಲಿ (ಪರಿಚ್ಛೇದ 88) ವೀರ್ಯವು ಯೋನಿಯ ಕುಳಿಯಲ್ಲಿ ಅಥವಾ  ಯೋನಿಯ ಕಾಲುವೆಯಲ್ಲಿ ಸಿಕ್ಕಿದರೆ ಮಾತ್ರ ನ್ಯಾಯಾಲಯ ಒಪ್ಪುವಂತಹ ಸಾಕ್ಷ್ಯ ಎಂದು ಹೇಳಲಾಗಿದೆ. ಪುಟ 97ರ ಪರಿಚ್ಛೇದ 93ರಲ್ಲಿ ಟನ್ಗಟ್ಟಲೆ ವೀರ್ಯವು ಸಂತಸ್ತ್ರೆಯ ಒಳಉಡುಪುಗಳ ಮೇಲೆ ದೊರೆತರೆ ಸಾಕ್ಷ್ಯವಾಗುವುದಿಲ್ಲ ಎಂದು ಹೇಳಲಾಗಿದೆ. ಆದರೆ ಆ ಒಳಉಡುಪುಗಳ ಮೇಲೆ ವೀರ್ಯ ಹೇಗೆ ಬರಲು ಸಾಧ್ಯ ಎಂಬ ವಿಚಾರಕ್ಕೆ ಯಾವ ನ್ಯಾಯವಿಚಾರಣೆಗೆ (trial) ಆಸ್ಪದವನ್ನೇ ನೀಡಿಲ್ಲ.  ಕೆಲವು ಕಡೆ ದಿನಾಂಕಗಳು ತಪ್ಪಾಗಿ (ಉದಾಹರಣೆ: ಪುಟ 100 ರಲ್ಲಿ ತಪ್ಪೊಪ್ಪಿಗೆಯ ಪಂಚನಾಮೆಯ ದಿನಾಂಕ 27.6.2014 ಎಂದು, ಪುಟ 103ರಲ್ಲಿ 25.8.2014 ಎಂದು ಪುಟ 115ರಲ್ಲಿ 18.5.2014 ಎಂದು) ಉಲ್ಲೇಖವಾಗಿವೆ. ಕೆಲವು ಕಡೆ ಅಶುದ್ಧ ವ್ಯಾಕರಣದಿಂದ ಅರ್ಥ ಸ್ಪಷ್ಟತೆಯ ಕೊರತೆ ಕಂಡುಬರುತ್ತದೆ. ಕೊನೆಯ ಪರಿಚ್ಛೇದ ಸಂಖ್ಯೆ 121ರಲ್ಲಿ ಆದೇಶವನ್ನು ನೀಡುವಾಗ “ಅರೋಪಿಯ ಮುಚ್ಚಳಿಕೆ ಮತ್ತು ಬೈಲ್ ಮುಚ್ಚಳಿಕೆಯು ಅಪರಾಧ ದಂಡ ಸಂಹಿತೆಯ ಕಲಂ 437(ಎ)ಯ ಕೆಳಗೆ ನ್ಯಾಯವಿಚಾರಣೆಯು ಮುಕ್ತಾಯವಾಗುವ ತನಕ ಮುಂದುವರಿಯತಕ್ಕದ್ದು” ಎಂದು ಬರೆಯಲಾಗಿದೆ, ಅಂದರೆ, ನ್ಯಾಯವಿಚಾರಣೆಯು ಈ ಆದೇಶದ ನಂತರವೂ ಮುಕ್ತಾಯವಾಗಿಲ್ಲ ಎಂಬರ್ಥದಲ್ಲಿ ಬರೆದಿದ್ದಾರೆಯೇ?

3. ನ್ಯಾಯಾಧೀಶರಿಗೆ ಮಾನವ ದೇಹದ ಅಂಗರಚನೆಯ ಜ್ಞಾನ, ವೈದ್ಯಕೀಯ ಜ್ಞಾನದ ಕೊರತೆ ಇದೆ. ಇಲ್ಲಿ ತಜ್ಞರಿಗೆ ಕರೆಸಿ ನ್ಯಾಯವಿಚಾರಣೆ ಮಾಡುವ ಬದಲು ಆರೋಪಿಯ ವಕೀಲರು ಹೇಳಿದ್ದನ್ನೇ ಸರಿ ಎಂದು ಪುನರುಚ್ಚರಿಸಿದ್ದಾರೆ.  ಘಟನೆಯ ನಂತರ ದೂರು ನೀಡಲು ಫಿರ್ಯಾದಿಮಹಿಳೆಯಿಂದ ಆಗಿರುವ ವಿಳಂಬಕ್ಕೆ ಕಾರಣವನ್ನು ಒಂದು ತಜ್ಞ ಮನೋವೈದ್ಯರನ್ನು ನ್ಯಾಯಾಲಯಕ್ಕೆ ಕರೆಸಿ ವಿಶ್ಲೇಷಿಸದೆ, ಒಂದು ಜನಸಾಮಾನ್ಯ ವ್ಯಕ್ತಿ ಹೇಳುವಂತೆ ನ್ಯಾಯಾಧೀಶರು ತಮ್ಮ ಅಭಿಪ್ರಾಯವನ್ನು ಹೇರಿದ್ದಾರೆ. ಉದಾಹರಣೆಗೆ ಪರಿಚ್ಛೇದ 21 ರಲ್ಲಿ ಪ್ರತೀ ಸಂಭೋಗದಲ್ಲೂ ವೀರ್ಯದೊಂದಿಗೆ ಅಂಡವು ಮಿಶ್ರಣವಾಗಬೇಕೆಂದು ನ್ಯಾಯಾಧೀಶರು ಅರೋಪಿಯ ವಕೀಲರ ವಾದವನ್ನು ಅನುಮೋದಿಸುತ್ತಾರೆ. ಯಾವ ವಿಜ್ಞಾನ ಶಾಸ್ತ್ರದಲ್ಲಿ ಪ್ರತೀ ಸಂಭೋಗದಲ್ಲಿ ಅಂಡ ಮಿಶ್ರಣವಾಗಬೇಕೆಂದು ಹೇಳಿದೆ?

4. ಪರಿಚ್ಛೇದ 4ರಲ್ಲಿ ಆರೋಪಿ ಮಠಾಧಿಪತಿಯ ಪಕ್ಷದ ವಕೀಲರು ತಮ್ಮ ವಾದ ಸಮರ್ಥನೆಗೆ ಉಲ್ಲೇಖ ಮಾಡಿದ  ವ್ಯಾಜ್ಯಗಳ ಪಟ್ಟಿಯನ್ನು ನೀಡಲಾಗಿದೆ. ಪರಿಚ್ಛೇದ 5 ರಲ್ಲಿ ಫಿರ್ಯಾದಿ ಪಕ್ಷದ ವಕೀಲರು ಮಂಡಿಸಿದ ಅಂತಹುದೇ ವ್ಯಾಜ್ಯಗಳ ಪಟ್ಟಿಯನ್ನು ನೀಡಲಾಗಿದೆ ಎಂದು ಬರೆದಿದ್ದರೂ ವಸ್ತುಶಃ ಆ ಪಟ್ಟಿಯನ್ನು ನ್ಯಾಯಾಧೀಶರ ಲಿಖಿತ ಆದೇಶದ ಪರಿಚ್ಛೇದ 5ರಲ್ಲಿ ಎಲ್ಲೂ ಕಾಣುವುದಿಲ್ಲ.  ಒಟ್ಟು 117 ಪುಟಗಳ ಆದೇಶದಲ್ಲಿ ಮೊದಲ 23 ಪುಟಗಳನ್ನು ಆರೋಪಿಯ ಪಕ್ಷದ ಕತೆಯ ಆವೃತ್ತಿಗೆ ಮೀಸಲಾಗಿಟ್ಟಿದ್ದು, ಈ ಪುಟಗಳನ್ನು ಬಲಾತ್ಕಾರದ ಆರೋಪಕ್ಕೆ ಸಂಬಂಧ ಇಲ್ಲದ ಮಠದ ವಿರುದ್ದದ ಹಳೆಯ ವಿಚಾರಗಳನ್ನು ಈ ಪ್ರಕರಣಕ್ಕೆ ಸಂಬಂಧ ಕಲ್ಪಿಸಲು, ಸಿ.ಐ.ಡಿ.ತನಿಖೆ ಪೂರ್ಣಗೊಳ್ಳದ ಹೊನ್ನಾವರದ ಬ್ಲ್ಯಾಕ್ಮೇಲ್ ಪ್ರಕರಣವನ್ನು ಇದಕ್ಕೆ ತಳಕು ಹಾಕಲು ವಿನಿಯೋಗಿಸಲಾಗುತ್ತದೆ. ಮುಂದಿನ 7 ಪುಟಗಳನ್ನು ಫಿರ್ಯಾದಿ ಪಕ್ಷದ ಆವೃತ್ತಿಗೆ ನೀಡಲಾಗುತ್ತದೆ. ಆರೋಪಿ ಪಕ್ಷದ ಬಹಳಷ್ಟು ವಾದಗಳಿಗೆ ನ್ಯಾಯವಿಚಾರಣೆಯೇ (trial) ಬಹಳ ಮುಖ್ಯವಾದದ್ದು ಎಂದು ವಾದಿಸಿದರೂ, ಬಲಾತ್ಕಾರದ ಪ್ರಕರಣಗಳಲ್ಲಿ, ವಿಳಂಬದ ಕಾರಣವು ಪ್ರಕರಣವನ್ನು ತಳ್ಳಿಹಾಕಲು ಪ್ರಮುಖ ಕಾರಣವಲ್ಲ ಎಂದು ಮಂಡಿಸಿದರೂ ಅದಕ್ಕೆ ಮಹತ್ವ ನೀಡಲಾಗುವುದಿಲ್ಲ. 34ನೆಯ ಪುಟದಿಂದ 116ನೆಯ ಪುಟದ ವರೆಗೆ ಆದೇಶದಲ್ಲಿನ ನಿರ್ಣಯಕ್ಕೆ ಬರಲು ಕಂಡುಕೊಂಡ ಕಾರಣಗಳು ಎಂದು ಹೇಳಲಾದರೂ, ಬಹಳಷ್ಟು ವಿಚಾರಗಳು ಆರೋಪಿ ಪಕ್ಷದ ವಾದಗಳ ಪದೇ ಪದೇ ಪುನರುಕ್ತಿಗಳನ್ನೇ ತಮಗೆ ಕಂಡು ಬಂದ ಸತ್ಯವೆಂಬಂತೆ ವಿವರಿಸಲಾಗಿದೆ. ನ್ಯಾಯವಿಚಾರಣೆಯನ್ನು ನಡೆಸಲು ಅವಕಾಶವನ್ನೇ ಕೊಡದೆ, ಸಂತ್ರಸ್ತೆಯ ನಡತೆಯ ಬಗ್ಗೆ ಸಾಧ್ಯಾಸಾಧ್ಯತೆಯ ಊಹೆಗಳ ಮೇಲೆ, ಮೇಲ್ನೋಟಕ್ಕೆ ಸತ್ಯವು ಹೀಗಿರಬಹುದು ಎನ್ನುವಂತೆ ನುಡಿಯಲಾಗಿದೆ. ಡಿ.ಎನ್.ಎ.ವರದಿಗಳಲ್ಲಿ ಸಂಶಯವಿದ್ದಲ್ಲಿ, ಮತ್ತು ಪ್ರಕರಣದಲ್ಲಿನ ಅನೇಕ ಸಾಕ್ಷಿಗಳಿಗೆ ಪಾಟೀ ಸವಾಲನ್ನು ನಡೆಸಲಾಗುವುದಿಲ್ಲ. ಡಿ.ಎನ್.ಎ ಪರದಿಗೆ ಇನ್ನೊಂದು ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಕೇಳಲಾಗುವುದಿಲ್ಲ. ಸಿ.ಐ.ಡಿ.ಯವರಿಂದ ಆರೋಪ ಪಟ್ಟಿ ಸಲ್ಲಿಸಲಾಗಿದ್ದರೂ, ಅದು ಮಧ್ಯಂತರ ಎಂದು ಹೇಳಲಾಗಿತ್ತು, ಅಂತಿಮ ವರದಿಯನ್ನು ಅದು ನ್ಯಾಯಾಲಯಕ್ಕೆ ಸಲ್ಲಿಸಲು ಇನ್ನೂ ತನಿಖೆಯು ಮುಂದುವರಿಯುತ್ತಿರುವುದರಿಂದ ಸಮಯಾವಕಾಶ ಬೇಕೆಂದೂ ಹೇಳಿತ್ತು. ಈ ಬಗ್ಗೆ ಉಲ್ಲೇಖ ಪುಟ 27ರಲ್ಲಿ ಇದ್ದು, ನ್ಯಾಯಾಲಯದ ಅರಿಕೆಯಲ್ಲಿದೆ. ಆದರೆ ನ್ಯಾಯಾಲಯವು ಅದನ್ನೂ ಕಡೆಗಣಿಸಿ, ಈ ಪ್ರಕರಣವನ್ನು ತಳ್ಳಿಹಾಕಿದೆ.

5. ಅವಲೋಕನದ ಆಯ್ದ ಅಂಶಗಳ ಒಂದು ಪಟ್ಟಿ:

ಪುಟ/ಪರಿಚ್ಛೇದ ಬರೆದಿರುವ ತಾತ್ಪರ್ಯ ಟೀಕೆ/ಟಿಪ್ಪಣಿಗಳುಪು. 32-33/ಪ.4 ಮತ್ತು 5 ಎರಡೂ ಪಕ್ಷಗಳು ಮಂಡಿಸಿದ ಆಧಾರಿತ ತೀರ್ಪುಗಳ ಪಟ್ಟಿ ಅರೋಪಿ ಕೊಟ್ಟ ತೀರ್ಪುಗಳ ಪಟ್ಟಿ ಮಾತ್ರ/ಪಿರ್ಯಾದಿ ಪಕ್ಷ ಕೊಟ್ಟ ತೀರ್ಪುಗಳ ಪಟ್ಟಿ ಇಲ್ಲ
ಪು.35/ಪ.12 ಫಿರ್ಯಾದಿಮಹಿಳೆಯು  ಹಿರಿಯ ಮಗಳು ಅಂಶುಮತಿ ತಿಳಿದಿರುವಂತೆ, ಆದರೆ, ಪತಿ ಶ್ರೀ ದಿವಾಕರ ಶಾಸ್ತ್ರಿಯವರಿಗೆ ಅರಿವಿಲ್ಲದಂತೆ, ಆರೋಪಿಯೊಡನೆ ಲೈಂಗಿಕ ಕ್ರಿಯೆ ನಡಿಸಿದ ಬಗ್ಗೆ ಆಧಾರ ರಹಿತ ಊಹೆ
ಪು.38/ಪ.15 ನ್ಯಾಯಾಧೀಶರ ಹೊಣೆ ಒಂದೋ ಅರೋಪಿಯ ಮೇಲೆ ದೋಷಾರೋಪಣೆಯನ್ನು ಸ್ಥಿರಗೊಳಿಸುವುದು ಅಥವಾ ಸಂಬಂಧವನ್ನು ಒಂದು ಅಕ್ರಮ ಸಂಬಂಧವೆಂದು ಪರಿಗಣಿಸಿ ಆರೋಪಿಯನ್ನು ಖುಲಾಸಿಮಾಡುವುದು (ಅಂತೂ ಆರೋಪಿಯು ಶುದ್ಧ-ಹಸ್ತನಲ್ಲ) ಇದರ ಅರ್ಥ ನ್ಯಾಯಾಧೀಶರು ಕಂಡುಕೊಂಡ ಪ್ರಕಾರ ಲೈಂಗಿಕ ಸಂಬಂಧವಂತೂ ನಿಶ್ಚಯ ನಡೆದಿದೆ – ಅದು ಬಲಾತ್ಕಾರವೋ ಅಥವಾ ಅಕ್ರಮ ಸಂಬಂಧವೋ. ಮುಂದಿನ ಪರಿಚ್ಛೇದಗಳಲ್ಲಿ ನ್ಯಾಯಾಧೀಶರ ಬಹುತೇಕ ಚಿಂತನೆ ಇವರೆಡರಲ್ಲಿ ಯಾವುದು ಸರಿ ಎಂದು ತೀರ್ಮಾನಿಸುವಂತಿದೆ.
ಪು.41 ಮತ್ತು 46/ಪ.21 ಮತ್ತು 27 ವೀರ್ಯ ಮತ್ತು ಅಂಡದ ಮಿಶ್ರಣ ಪ್ಯಾಂಟಿ ಲೈನರ್‍ ನಲ್ಲಿ ಇಲ್ಲ ಎನ್ನುವುದು ಮಾನವನ ದೇಹರಚನಾ ಶಾಸ್ತ್ರ ಅಥವಾ ಗರ್ಭಾಧಾರಣ ಶಾಸ್ತ್ರದ ಅರಿವು ಇಲ್ಲದಿರುವುದು. ಸಂಭೋಗದ ನಂತರ ಅಂಡವು ವೀರ್ಯದೊಡನೆ ಹೊರಬರುವುದಿಲ್ಲ. ಅಂಡವು ಫಲಿತವಾಗದಿದ್ದರೆ ಅದು ಯಾವಾಗಲೂ ಮುಟ್ಟಿನ ಸಮಯದಲ್ಲಿ ರಕ್ತದೊಡನೆ ಹೊರತಳ್ಳಲ್ಪಡುತ್ತದೆ.ಹಾಗೆ ನೋಡಿದರೆ, ಮುಟ್ಟು ಎನ್ನುವುದು ಇದಕ್ಕಾಗಿಯೇ ಇರುವಂಥದ್ದು.
ಪು.42/ಪ.21 ಇದು ನ್ಯಾಯಾಲಯದ ಮನಸ್ಸಿನಲ್ಲಿ, ಆರೋಪಿಯು ಅವಳೊಡನೆ ಲೈಂಗಿಕವಾಗಿ ಪಾಲ್ಗೊಂಡಿದ್ದಾನೆ ಎಂದು ನಿಜವಾಗಿ ಕಲ್ಪಿಸುತ್ತದೆ ನ್ಯಾಯಾಧೀಶರ ಚಿಂತನೆಯಂತೆ
ಪು.43/ಪ.23 ಒಟ್ಟು ಸಮಯದಿಂದ ಎರಡು ಪ್ರತ್ಯೇಕಿತ ಲೈಂಗಿಕ ಕ್ರಿಯೆಗಳನ್ನು ವಿಶ್ಲೇಷಿಸಿ ಅದನ್ನು ಬಲಾತ್ಕಾರವೆಂದು ತೀರ್ಮಾನಿಸುವುದು ಕಾನೂನಿನಲ್ಲಿ ಅನುಮತಿ ಇಲ್ಲದ್ದಾಗಿರುತ್ತದೆ ನ್ಯಾಯಾಧೀಶರ ಅನಿಸಿಕೆಯಂತೆ
ಪು.44/ಪ.25 ವೀರ್ಯದ ಉಳಿಕೆಯು/ಕಲೆಯು 24 ಘಂಟೆಗಳಲ್ಲಿ ಉಳಿಯುವುದಿಲ್ಲ, ಇರುವೆಗಳು ವೀರ್ಯವನ್ನು ತಿಂದುಬಿಡುತ್ತವೆ, ಪ್ಯಾಂಟಿ ಲೈನರ್ ನ್ನು ಕಸದಪೆಟ್ಟಿಗೆಯಿಂದ ತೆಗೆದುಕೊಂಡಿದ್ದು ಸಂಪೂರ್ಣ ಕಲ್ಪನಾಲಹರಿಯಂತೆ. ವೈದ್ಯಕೀಯ ಶಾಸ್ತ್ರದಂತೆ ವೀರ್ಯದ ಕಲೆಗಳು ಸ್ವಲ್ಪ ಕ್ಷೀಣವಾದರೂ ಒಂದು ವರ್ಷಕ್ಕೂ ಮಿಕ್ಕಿ ಇರಬಲ್ಲುದು.ಅಮೇರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ – ಮೊನಿಕಾ ಲೆವೆನ್ಸ್ಕಿ ಪ್ರಕರಣದಲ್ಲಿ ಫ಼ೆಬ್ರವರಿ 1997ರಲ್ಲಿ ವೀರ್ಯ ತಗಲಿದ ಬಟ್ಟೆಯನ್ನು ತನಿಖಾಸಂಸ್ಥೆ ಎಫ಼್.ಬಿ.ಐ ಆಗಸ್ಟ್ 1998 ರಲ್ಲಿ ಪ್ರಯೋಗಾಲಯದಲ್ಲಿ ಕ್ಲಿಂಟನ್ ರಕ್ತದ ಮಾದರಿಗೆ ಹೊಂದಾಣಿಕೆ ಮಾಡಿ ಲೈಂಗಿಕ ಸಂಬಂಧವನ್ನು ದೃಢಪಡಿಸಿತು. ಪ್ರಸ್ತುತ ಈ ಪ್ರಕರಣದಲ್ಲಿ ಒಳ‍ಉಡುಪನ್ನು 82ದಿನಗಳ ಬಳಿಕ ವಶಪಡಿಸಲಾಯಿತು. ಒಳ ಉಡುಪು ಕಸದಪೆಟ್ಟಿಗೆಯಿಂದ ತೆಗೆಯಲಾಯಿತು ಎಂಬುದನ್ನು ನ್ಯಾಯಾಧೀಶರಿಗೆ ತಿಳಿಯುವುದಾದರೂ ಹೇಗೆ, ಅದು ಕಸದಪೆಟ್ಟಿಗೆಯಲ್ಲಿ ಇದ್ದದ್ದಲ್ಲದಿರುವಾಗ?
ಪು.54/ಪ.38 ಇದೊಂದು ಗಂಭೀರ ಕಾನೂನು ಲೋಪವಾಗಿದ್ದು ಈ ಮೊಕದ್ದಮೆಯಲ್ಲಿರುವ ದೌರ್ಬಲ್ಯ ಮತ್ತು ಸರಿಪಡಿಸಲಾಗದ ದೋಷವಾಗಿರುತ್ತದೆ. ಇದು ಕೇವಲ ತಾಂತ್ರಿಕತೆಯಾಗದೆ, ಕಾರ್ಯವಿಧಾನವು ಫಿರ್ಯಾದಿಪಕ್ಷದ ವ್ಯಾಜ್ಯದ ಮೂಲಕ್ಕೆ ಹೋಗುತ್ತದೆ ಇದರ ಪ್ರಕಾರ ಕಾನೂನಿನ ಲೋಪಕ್ಕೆ ಮತ್ತು ತಾಂತ್ರಿಕ ಕೊರತೆಗಳಿಗೆ  ಆರೋಪದಿಂದ ಖುಲಾಸೆಗೊಳಿಸಬೇಕೆಂಬ ವಾದ. ಅಪರಾಧದ ಸತ್ಯಾಸತ್ಯತೆಯ ಮೇಲಲ್ಲ. ನ್ಯಾಯದಾನದ ಎದುರು ಇಂತಹ ಕ್ಷುಲ್ಲಕ ತಾಂತ್ರಿಕ ಲೋಪಗಳು ಗೌಣ್ಯವಾಗಬಾರದು.
ಪು.54,5,56/ಪ.39 ದೈವೀಕ ಅಪ್ರಸನ್ನತೆಯ ಬಗ್ಗೆ ಅಭಿಪ್ರಾಯಗಳು ಇದು ಓರ್ವ ಜನಸಾಮಾನ್ಯನ ಅಭಿಪ್ರಾಯಗಳಂತೆ ಇದೆ, ಒಂದು ನ್ಯಾಯಾಧೀಶನಾಗಿ  ಮಾಡುವ ವಿಶ್ಲೇಷಣೆಯಂತೆ ಇಲ್ಲ. ಇಂತಹ ಪ್ರಮೇಯಗಳಲ್ಲಿ ಒಬ್ಬ ಮಾನಸಿಕ ತಜ್ಞನ ಅಭಿಪ್ರಾಯಗಳನ್ನು ಪಡೆದುಕೊಳ್ಳಬೇಕಾಗಿತ್ತು.
ಪು.61/ಪ.48 ಪ್ರಸ್ತುತ ಪ್ರಕರಣದಲ್ಲಿ, ಆಶೀರ್ವಾದವು ಹಣಕ್ಕಾಗಿ ಮಾತ್ರ ಆಗಿರುತ್ತದೆ, ಹೆಚ್ಚಿಗೆ ಇನ್ನೇನಿಲ್ಲ. ಅತೀಯಾದ ಊಹಾತ್ಮಕ
ಪು.66/ಪ.55 ಸಮಯದ ಬಗ್ಗೆ ಅಸಾಂಗತ್ಯಗಳು ಕುಟುಕು ಕಾರ್ಯಾಚರಣೆಯಂತಹ (sting operation) ಸಂದರ್ಭಗಳನ್ನು ಹೊರತು ಯಾರೂ ಸಮಯವನ್ನು ಅಷ್ಟು ಕರಾರುವಕ್ಕಾಗಿ ಗುರುತಿಸಿಕೊಂಡಿರುವುದಿಲ್ಲ. ಮನಸ್ಸಿನಿಂದ ನೆನಪುಮಾಡಿ ಹೇಳುವಾಗ ಅದು ಒಂದು ಅಂದಾಜು ಸಮಯವಿರುತ್ತದೆ. ಮೊಬೈಲ್ ಆಫ್ ಆಗಿದ್ದರೂ ಅದು ಕಾರ್ಯವ್ಯಾಪ್ತಿಯಲ್ಲಿ ಇಲ್ಲ ಎಂದು ದಾಖಲಾಗುತ್ತದೆ.
ಪು.67/ಪ.57 ಎರಡು ವಿಭಿನ್ನ ಪುರುಷರ ಡಿ.ಎನ್.ಎ. ಡಿ.ಎನ್.ಎ. ಒಬ್ಬನದ್ದೇ ಇರಲಿ, ಹತ್ತು ಜನರದ್ದೇ ಇರಲಿ, ಏನೀಗ? ಅಲ್ಲಿ ಪ್ರಶ್ನೆ ಇರುವುದು ಅದರಲ್ಲಿ ಅರೋಪಿಯ ಡಿ.ಎನ್.ಎ. ಇದೆಯೋ, ಇಲ್ಲವೋ ಎಂಬುದು.
ಪು.76/ಪ.68 ಮತ್ತಿತರ ಸ್ಥಳಗಳಲ್ಲಿ ಅವರು ಕಾನೂನು ಸಲಹೆ ಮೇರೆಗೆ ಮತ್ತು ಜ್ಯೋತಿಷಿಯ ಸಲಹೆ ಮೇರೆಗೆ ಸಂತ್ರಸ್ತೆ ಅಥವಾ ಯಾವುದೇ ನೊಂದವರು ಕಾನೂನು ತಜ್ಞರ ಅಭಿಪ್ರಾಯವನ್ನು ಅಥವಾ ಜ್ಯೋತಿಷಿಗಳ ಅಭಿಪ್ರಾಯವನ್ನು ಕೇಳಬಾರದು ಎಂದು ಎಲ್ಲಿದೆ? ಕಾನೂನು ಕ್ರಮವನ್ನು ಕೈಗೊಳ್ಳುವಾಗ ಕಾನೂನು ಸಲಹೆ ಹೆಚ್ಚಾಗಿ ಅವಶ್ಯಕತೆಯೇ ಇರುತ್ತದೆ.ಸಲಹೆಗಾಗಿ ಬಂದವರಿಗೆ ಅದನ್ನು ಒದಗಿಸುವುದು ಕಾನೂನು ವೃತ್ತಿಪರರ ಕರ್ತವ್ಯವೇ ಇರುತ್ತದೆಯಲ್ಲ?
ಪು.77/ಪ.69 ಯಾವುದೇ ಪ್ರತಿರೋಧವಿಲ್ಲದೇ ಫಿರ್ಯಾದಿಮಹಿಳೆಯೇ ಅವನೊಡನೆ ಲೈಂಗಿಕತೆಗಾಗಿ ಆರೋಪಿಮಠಾಧಿಪತಿಯ ಬಳಿಗೆ ಹೋಗಿರುವುದು ನ್ಯಾಯಾಧೀಶರ ಅನಿಸಿಕೆಯಂತೆ
ಪು.78/ಪ.73 ಅವನು ಅವಳನ್ನು ಕಾನೂನುಬಾಹಿರ ತಡೆಯಲ್ಲಿ ಅಥವಾ ಅಕ್ರಮ ಬಂಧನದಲ್ಲಿ ಇಟ್ಟುಕೊಳ್ಳದೇ ಅವಳೊಡನೆ ಲೈಂಗಿಕ ಕ್ರಿಯೆಯನ್ನು ನಡೆಸುತ್ತಾನೆ ನ್ಯಾಯಾಧೀಶರ ಅನಿಸಿಕೆಯಂತೆ
ಪು.79-80/ಪ.73 ಲೈಂಗಿಕತೆಯು ವಿಭಿನ್ನ ಬಣ್ಣ ಮತ್ತು ಹೆಸರನ್ನು ಪಡೆದುಕೊಳ್ಳುತ್ತದೆ, ಕೈಯಲ್ಲಿರುವ ಈ ಪ್ರಕರಣದಲ್ಲಿ ಅವರ ನಡುವಿನ  ಲೈಂಗಿಕ ಸಂಬಂಧಗಳು ಅಕ್ರಮ-ಸಂಬಂಧದ ರೂಪ ಮತ್ತು ಬಣ್ಣವನ್ನು ಹೊಂದುತ್ತದೆ. ನ್ಯಾಯಾಧೀಶರ ಅನಿಸಿಕೆಯಂತೆ (ನ್ಯಾಯಾಧೀಶರು ದಪ್ಪ ಅಕ್ಷರಗಳಲ್ಲಿ ಹಾಕಿದ್ದಾರೆ)
ಪು.81/ಪ.74 ಹಾಗಾಗಿ, ಇದು ಫಿರ್ಯಾದಿ ಮಹಿಳೆ ಮತ್ತು ಅವಳ ಪತಿ ಶ್ರೀ ದಿವಾಕರ ಶಾಸ್ತ್ರಿ ಮತ್ತು ಅತೃಪ್ತ ಇತರ ಐದು ಸಂಬಂಧಿಗಳ ಪರದಿಂದ ಷಡ್ಯಂತ್ರ ಎಂದು ಸ್ಥಾಪಿತವಾಗುತ್ತದೆ. ಈ ಪ್ರಕರಣದಲ್ಲಿ ಕೊಟ್ಟ ವಿವರಣೆಗಳು ಹಗೆತನದಿಂದ, ಷಡ್ಯಂತ್ರದಿಂದ ಮತ್ತು ಕಾನೂನು ಸಲಹೆಗಳಿಂದ ಸೃಷ್ಟಿಮಾಡಿದವುಗಳು. ಫಿರ್ಯಾದಿ ಮಹಿಳೆಯನ್ನು ಮತ್ತು ಯಾವುದೇ ಸಹೋದರರನ್ನು ಕಟಕಟೆಗೆ ಕರೆದು ವಿಚಾರಿಸದೆ ಅದು ಹೇಗೆ ನ್ಯಾಯಾಧೀಶರು ಈ ನಿರ್ಧಾರಕ್ಕೆ ಬಂದರು?
ಪು.82/ಪ.75 ಅವಳು ಆರೋಪಿಯೊಡನೆ ಯಾವ ಕಾರಣಕಾಗಿ – ಹಣಕ್ಕಾಗಿಯೋ ಅಥವಾ ಲಾಲಸೆಯ ತೃಪ್ತಿಗೋಸ್ಕರವೋ ಲೈಂಗಿಕತೆಯನ್ನು ಮಾಡಿಕೊಂಡಳು ಎಂಬುದು ನಮಗೆ ಗೊತ್ತಿಲ್ಲ. ಲೈಂಗಿಕ ಸಂಬಂಧವಾದದ್ದು ಖಚಿತ ಎಂದು ನ್ಯಾಯಾಧೀಶರ ಮನಸ್ಸಿಗೆ ಬಂದಿದೆ.
ಪು.85/ಪ.82 ಯಾವುದೇ ದೃಷ್ಟಿಕೋನದಲ್ಲಿ ನೋಡಿದರೂ, ಮಾಡಿದ ಲೈಂಗಿಕತೆಯು ಬಲಾತ್ಕಾರಕ್ಕೆ ಸಮನಾಗುವುದಿಲ್ಲ, ಆದರೆ, ಅಕ್ರಮ-ಸಂಬಂಧವಾಗುತ್ತದೆ. ನ್ಯಾಯಾಧೀಶರು ತಮಗೆ ಕಂಡುಕೊಂಡಿದ್ದನ್ನು ದಪ್ಪ ಅಕ್ಷರಗಳಲ್ಲಿ ಹಾಕಿದ್ದಾರೆ.
ಪು.87/ಪ.84 ಹಾಗಾಗಿ ಅದನ್ನು ನಾವು ಒಪ್ಪಿತ ಸಂಬಂಧ ಎಂದು ಕರೆದಿದ್ದೇವೆ ನ್ಯಾಯಾಧೀಶರ ಅನಿಸಿಕೆಯಂತೆ
ಪು.87/ಪ.85 ಪ್ರತಿಮೌಲ್ಯದ ಅಭಾವವಿದ್ದಲ್ಲಿ ಇದು ಲೈಂಗಿಕತೆಗಾಗಿಯೇ ನಿಜ ಇರಬಹುದು ನ್ಯಾಯಾಧೀಶರ ಅನಿಸಿಕೆಯಂತೆ
ಪು.88/ಪ.87 ನೊಂದ ಮಹಿಳೆ ಆರೋಪಿ/ಮಠಾಧಿಪತಿಯೊಡನೆ 4 ವರ್ಷಗಳ ಅವಧಿಗೆ ನಡೆಸಿದ ಲೈಂಗಿಕತೆಯು, ಬಲಾತ್ಕಾರವಲ್ಲದ ಅಕ್ರಮ ಸಂಬಂಧವಲ್ಲದೇ ಬೇರೇನೂ ಅಲ್ಲ. ನ್ಯಾಯಾಧೀಶರ ಅನಿಸಿಕೆಯಂತೆ
ಪು.89/ಪ.89 4 ವರ್ಷಗಳ ಮೇಲಿನ ಲೈಂಗಿಕ ಕ್ರಿಯೆಗಳು, ಪ್ರತಿರೋಧವಿಲ್ಲದಿರುವುದನ್ನು ಸೂಚಿಸುತ್ತದೆ ಮತ್ತು ಅರ್ಥನೀಡುತ್ತದೆ. ಹಾಗೆ ನೋಡಿದಲ್ಲಿ, ಅದು ಲೈಂಗಿಕ ಕ್ರಿಯೆಗೆ ಒಪ್ಪಿಗೆಯನ್ನು ಮತ್ತು ಇಚ್ಚೆಯನ್ನು ಪರಿಭಾವಿಸುತ್ತದೆ ನ್ಯಾಯಾಧೀಶರ ಅನಿಸಿಕೆಯಂತೆ
ಆದೇಶದ ಪೂರ್ಣ ಕನ್ನಡ ಪಾಠಾಂತರವನ್ನು ಈ ಅಂತರ್ಜಾಲ ಕೊಂಡಿಯಲ್ಲಿ ಪುಟ 9ರಿಂದ ನೀಡಲಾಗಿದೆ.

One thought on “ಶ್ರೀ ಜಿ.ಬಿ.ಮುದಿಗೌಡರ್ ಆದೇಶದ ಒಂದು ಅವಲೋಕನ ಮತ್ತು ಪೂರ್ಣ ಕನ್ನಡ ಪಾಠಾಂತರ

  1. ” 39. ………..ದ್ಐವಿಕ ಭಯವಿರುವ ಮಹಿಳೆಯು ತಪ್ಪಿನ ಕೆಲಸಮಾಡಲು ಹೆದರುತ್ತಾಳೆ, ಮತ್ತು ಎಚ್ಚರಿಕೆಯಿಂದಿರುತ್ತಾಳೆ. ಏನಾದರೂ ತಪ್ಪಾದ ತಕ್ಷಣದಲ್ಲಿಯೇ ಸರಿಪಡಿಸಿಕೊಳ್ಳುತ್ತಾಳೆ, ಮತ್ತು ಹಾಗಾಗದಂತೆ ತಿದ್ದಿಕೊಳ್ಳುತ್ತಾಳೆ. ಯಾರಾದರೂ ಅವಳೊಂದಿಗೆ ಅಸಹಜವಾಗಿವರ್ತಿಸಿದರೆ ಇರಿಸುಮುರುಸಿಗೆ ಒಳಗಾಗಿ, ತಕ್ಷಣವೇ ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾಳೆ, ಅಂತಹಾ ಮಹಿಳೆಯು, ಲೆಕ್ಕಕ್ಕೆ ಸಿಕ್ಕಂತೆ 169 ಬಾರಿ ಹಾಗೂ ಬಹಳಷ್ಟು ಗಣನೆಗೆ ಸಿಗದಷ್ಟು ಬಾರಿ ಕಾಮ ಹೊಂದಲು ಅವಕಾಶ ನೀಡುವುದಿಲ್ಲ.ಸಾಧಾರಣ ಮನುಷ್ಯನ ಯೋಗ್ಯತೆಯೊಂದಿಗೆ ತಾಳೆಯಾಗುವುದಿಲ್ಲ. ಕಾಮದ ಕ್ರುತ್ಯವು ನಾಚಿಕೆಗೇಡಿನ ವಿಷಯವಾಗಿದೆ. ನಾಚಿಕೆಗೇಡಿನ ಕ್ರುತ್ಯ ನಡೆಸುವ ಮಹಿಳೆಯು ಧ್ಐರ್ಯವಂತಳು, ಹುಚ್ಚು ಸಾಹಸಿಯಾಗಿದ್ದು, ಯಾವುದೇ ತಪ್ಪುಮಾಡಲು ಅಳುಕುವುದಿಲ್ಲ. ೆಲದಲಿಯವರೆಗೆ ಎಂದರೆ, ಸಾರ್ವಜನಿಕವಾಗಿ ನಗ್ನ-ಸ್ಥಿತಿಯಲ್ಲಿ ಪ್ರದರ್ಶನಗೊಳ್ಳಲೂ ತಯಾರಿರುತ್ತಾರೆ. ಆದ್ದರಿಂದ ರಾಮಮಂತ್ರದ ನೆಪದಲ್ಲಿ ಆರೋಪಿಗೆ ಶರಣಾದೆ ಎಂಬ ಧ್ಐವಿಕ ಭಯದ ತರ್ಕವು ದೂರುದಾರೆಗೆ ನೆರವಾಗುವುದಿಲ್ಲ. ಮೇಲೆ ಹೇಳಲಾದ ವಿಲಕ್ಷಣ ಮಹಿಳೆಯು ಏನನ್ನಾನಾದರೂ ನಾಚಿಕೆಯಿಲ್ಲದೇ ಮಾಡಲು ತಯಾರಿರುತ್ತಾರೆ. ………” —— …………………………………..ಮಹಿಳೆಯರ ಬಗ್ಗೆ ಇದಕ್ಕಿಂತ ಅಪಮಾನಕರವಾಗಿ ವ್ಯಾಖ್ಯಾನಮಾಡಲು ಸಾಧ್ಯವಿದೆಯೇ? ಮಹಿಳಾ ಹೋರಾಟಗಾರರು ಈ ಮೇಲಿನ ವ್ಯಾಖ್ಯಾನವನ್ನು ಗಮನಿಸಬೇಕು..

    Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s