ಬಹಿರಂಗ ಖಂಡನೆಯನ್ನೂ ಮಾಡದ ಹೇಡಿತನವೇಕೆ?

ಬಹಿರಂಗ ಖಂಡನೆಯನ್ನೂ ಮಾಡದ ಹೇಡಿತನವೇಕೆ?
*******************************
ಅರ್ಪಣೆ: ಮಂತ್ರಾಕ್ಷತೆ ನೀಡಿ ಕಳಿಸಿದ ಹವ್ಯಕ ತಾಲಿಬಾನ್ ಗೂಂಡಾಗಳಿಂದ ಮಾರಣಾಂತಿಕ ಹಲ್ಲೆಗೊಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಸಮಾಜ ಸೇವಕ, ಜನಸೇವಕ,ವೈಧ್ಯ ಡಾ.ಟಿ.ಟಿ ಹೆಗ್ಡೆಯವರು ಶೀಘ್ರ ಗುಣಮುಖವಾಗಲೆಂದು ಆಶಿಸುತ್ತ ಅವರಿಗೆ ಈ ಲೇಖನ ಅರ್ಪಣೆ.

ಬಹಳ ಆಶ್ಚರ್ಯವಾಗುತ್ತದೆ, ಪರಮಾಶ್ಚರ್ಯವಾಗುತ್ತದೆ. ಎರಡೆರಡು ಅತ್ಯಾಚಾರ ಪ್ರಕರಣ, ನೂರೆಂಟು ಹಗರಣಗಳನ್ನು ಹೊತ್ತು ಕರ್ನಾಟಕದ ರಾಮ್‍ಪಾಲ್ ಆಗುತ್ತಿರುವ ಸ್ವಾಮಿ ಈಗಾಗಲೇ ಪರೋಕ್ಷವಾಗಿ ಬೆದರಿಕೆಯೊಡ್ಡಿ, ಒಂದು ಪ್ರಾಣವನ್ನು ತಮ್ಮ ಕಾಮತೃಷೆಗೆ ಬಲಿಕೊಟ್ಟಾಗಿದೆ. ಇನ್ನೆಷ್ಟು ಜೀವಗಳನ್ನು ತೆಗೆಯಲಿ ಎಂದು ಕಾದುಕುಳಿತಿದ್ದಾರೆ ಈ ಜಾತಿಯ ಜನ ಎನ್ನುವುದು ಯಕ್ಷಪ್ರಶ್ನೆಯಾಗಿದೆ.ಈಗಾಗಲೇ ಹಳದಿ ತಾಲಿಬಾನ್‍ ಪಟ್ಟಿಕಟ್ಟಿಕೊಂಡು ಗೂಂಡಾಗಿರಿಗೂ ಇಳಿದು ಬ್ರಾಹ್ಮಣ ಸಂಸ್ಕೃತಿಯನ್ನೇ ಗಾಳಿಗೆ ತೂರಲಾಗಿದೆ. ಸಂಕೋಚವಾಗುವ ಯಾವ ಮಾತನ್ನು ನಾಲ್ಕು ಜನರಿಗೆ ಕೇಳದಂತೆ ಆಡುವ ಸಂಸ್ಕೃತಿಗೆ ಈ ಸ್ವಾಮಿ ತಿಲಾಂಜಲಿ ಇಟ್ಟು ವೀರ್ಯ,ಸ್ಖಲನ,ಸಂಭೋಗಗಳು ದಿನನಿತ್ಯದ ಬಹಿರಂಗ ಪಠಣವಾಗಿದೆ.ತಾವು ಮಾಡಿದ ತಪ್ಪನ್ನು ಮುಚ್ಚಲು ಬ್ಲಾಕ್ ಮೇಲ್ ಮಾಡುವ ಪ್ರವಚನಗಳು,ವಿರೋಧಿಗಳನ್ನು ಎದುರಿಸಲು ಸೈನಿಕರಾಗಿ ಎನ್ನುವ ಪ್ರಚೋದನೆಯ ಭಾಷಣಗಳು ಜಾಮೀನಿನ ಮೇಲೆ ಬದುಕುತ್ತಿರುವ ಜಾಮೀನೇಶ್ವರನಿಂದ ಎಗ್ಗಿಲ್ಲದೇ ನಡೆಯುತ್ತಿದೆ. ಈ ಪ್ರಚೋದನೆಯ ಫಲವೇ ವಯೋವೃದ್ಧರ ಮೇಲೆ ನಡೆದ ಮಾರಣಾಂತಿಕ ಹಲ್ಲೆ. ಈಗ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಡಾ.ಟಿ.ಟಿ ಹೆಗ್ಡೆ ಎನ್ನುವ ಸಮಾಜ ಸೇವಕ, ಪ್ರಾಮಾಣಿಕ ಎಷ್ಟೋ ಜನರ ಜೀವ ಉಳಿಸಿದ ವೈಧ್ಯನ ಪರವಾಗಿ ಹಲ್ಲೆಯನ್ನು ಖಂಡಿಸಿ ಇದುವರೆಗೆ ಯಾರೂ ಸೊಲ್ಲೆತ್ತದಿರುವುದು ಜಾತಿಯ ಷಂಡತನದ ಪರಮಾವಧಿ. ಇದರ ಲಾಬವನ್ನು ಸಂಪೂರ್ಣವಾಗಿ ಬಳಸಿಕೊಂಡು ಇನ್ನೂ ಪೀಠದಮೇಲೆ ವಿರಾಜಮಾನವಾಗಿರುವುದು ಹವ್ಯಕರ ಅಧಃಪತನದ ಸಂಕೇತ.
ಹಾಗಾದರೆ ಇದು ಕೇವಲ ಈ ಒಂದು ಮಠಕ್ಕೆ ಮಾತ್ರ ಸಂಬಂಧಿಸಿದ ವಿಚಾರವೆ?.. ನಡೆದ ಹಲ್ಲೆಯನ್ನು ಯಾವೊಬ್ಬ ರಾಜಕೀಯ ಮುಖಂಡರೂ ಖಂಡಿಸಿಲ್ಲವೇಕೆ?. .ಬುದ್ದಿಜೀವಿಗಳು ಬಾಯ್ಬಿಡುತ್ತಿಲ್ಲವೇಕೆ ? ಬ್ರಾಹ್ಮಣರು ಏನಾದರೂ ಮಾಡಿಕೊಳ್ಳಲಿ ಎನ್ನುವ ಉಪೇಕ್ಷೆಯೇ.? ಅಥವಾ ಇದು ಕೇವಲ ಈ ಮಠವೊಂದಕ್ಕೆ ಮಾತ್ರ ಸಂಬಂಧಿಸಿದ ವಿಚಾರವೆ?ತಮ್ಮ ಪ್ರವಚನದಲ್ಲಿ ನೇರವಾಗಿ ಶೃಂಗೇರಿ ಮಠವನ್ನು ಸಂಭೋಧಿಸಿದರೂ ಆಕ್ಷೇಪಣೆಯನ್ನು ಮಾಡುವ ಒಂದೇ ಒಂದು ಹೇಳಿಕೆ ಬರುವುದಿಲ್ಲವೇಕೆ? ಸ್ವರ್ಣವಳ್ಳಿಯ ಹೆಸರು ಕೇಳಿಬಂದಾಗಲು ಸುಮ್ಮನಿದ್ದಿದ್ದೇಕೆ? ಬೇರೆ ಬೇರೆ ಮಠಗಳ ಯತಿಗಳಾದರೂ ಒಂದೇ ಜಾತಿಗೆ ಸೇರಿದವರಲ್ಲವೆ? ಗಂಡು-ಹೆಣ್ಣು ಸಂಬಂಧಗಳು ಎಲ್ಲರ ನಡುವೆ ನಡೆಯುತ್ತವೆ ತಾನೇ?ಕೊನೆಯ ಪಕ್ಷ ವಯೋವೃದ್ಧರೊಬ್ಬರ ಮೇಲೆ ಹಲ್ಲೆ ನಡೆದು ಸಾವು ಬದುಕಿನ ನಡುವೆ ಹೆಣಗಾಡುತ್ತಿರುವಾಗ ಇದನ್ನು ಖಂಡಿಸುವ ಮಾತನಾಡಲು ನಿಮಗೆ ಭಯವೇ?..ಇದು ಎಲ್ಲ ಯತಿಗಳ ಮಾನ ಅಪಮಾನದ ಪ್ರಶ್ನೆ..ಆದರೂ ಪೇಜಾವರ ಶ್ರೀಗಳು ಮೌನವಾಗಿರುವುದೇಕೆ ?…ಈ ಸ್ವಾಮಿ ತಮ್ಮ ಪ್ರವಚನದಲ್ಲಿ ಹೇಳುತ್ತಿರುವುದು ತಮ್ಮ ಉನ್ನತಿಯನ್ನು ಸಹಿಸದೇ ಬೇರೆ ಮಠಗಳು ನಡೆಸುತ್ತಿರುವ ಷಡ್ಯಂತ್ರ -ಅದು ತಾವು ಉಳಿಯಲು ಹೇಳಲೇ ಬೇಕಾದ ಮಂತ್ರ…ನೀವುಗಳು ಹೀಗೇ ಮೌನವಾಗಿ ಮುಂದುವರೆದರೆ ಪೀಠದ ಅವೋನ್ನತಿಯನ್ನು ಬಯಸುತ್ತಿದ್ದೀರೆಂದು ಭಾವಿಸಬೇಕಾಗುತ್ತದೆ.ಮೊದಲಿನಿಂದಲೂ ಇದು ಷಡ್ಯಂತ್ರ, ಷಡ್ಯಂತ್ರ ಎಂದು ಭಕ್ತರನ್ನು ಹಾದಿತಪ್ಪಿಸಿ ಕೋರ್ಟಿನಿಂದ ಹಲವು ಬಾರಿ ಚೀಮಾರಿ ಹಾಕಿಸಿಕೊಂಡ ಮೇಲು ಸಾವಿರ ಪುಟಗಳಷ್ಟು ಸಿ.ಐ.ಡಿ. ವರದಿ ಬಂದು, ಸಂತ್ರಸ್ಥೆ ಕೊಟ್ಟ ಬಟ್ಟೆಯಲ್ಲಿ ಕೆಲವೊಂದು ಅಂಶಗಳು ಹೊಂದಾಣಿಕೆ ಆಗಿದೆ ಎಂದಮೇಲೆ ಅನಾಚಾರ ನಡೆದಿದೆ ಎನ್ನುವುದಕ್ಕೆ ಕೋರ್ಟಿನ ತೀರ್ಪನ್ನು ಕಾಯಬೇಕಿತ್ತೆ. ಅದೂ ಬಂದಾಯಿತು..ಕೇಸು ವಜಾ ಆಯಿತು ಒಳಗಡೆ ಏನು ಬರೆದಿದೆ ಎಂದು ತಿಳಿಯದೇ ವಿಜಯೋತ್ಸವ ಆಚರಿಸಿ ಬ್ರಾಹ್ಮಣರಿಗೆ ತಕ್ಕುದಲ್ಲದ ರೀತಿಯಲ್ಲಿ ನೃತ್ಯ ಮಾಡಿ ಸಂಭ್ರಮಿಸಿದಿರಲ್ಲ… ಒಪ್ಪಿತ ಸಂಭೋಗ ಎಂದು ನ್ಯಾಯಾಧೀಶರೆ ತಮ್ಮ ಒಕ್ಕಣಿಕೆಯಲ್ಲಿ ಹೇಳಿದ್ದು ಗೊತ್ತಾದಮೇಲೂ ಒಂದಿಷ್ಟೂ ಮುಜುಗರ ಆಗುತ್ತಿಲ್ಲವೇ. ಇದು ಒಪ್ಪಿತ ಸಂಬೋಗವೂ ಅಲ್ಲ ಎಂದು ಮೇಲ್ಮನವೀಯೂ ಹೋಗದೆ ನಡೆದಿರುವುದು ಹೌದೆಂದು ಒಪ್ಪಿಕೋಡು ಈಗಲೂ ಪೀಠದ ಮೇಲೆ ಕುಳಿತು ಪೀಠವನ್ನು ಮಲಿನ ಮಾಡುತ್ತಿದ್ದಾರೆಂದರೆ ಅವರ ಪೀಠತ್ಯಾಗವನ್ನು ಪ್ರಶ್ನಿಸಿದ್ದು ತಪ್ಪೇ? ಅವರಾಗಿಯೇ ಇಳಿಯುವಷ್ಟು ಮೂರ್ಖರಲ್ಲ..ಆ ಕೆಲಸ ಮಾಡಬೇಕಿರುವುದು ಮಠದ ಭಕ್ತರ ಕರ್ತವ್ಯವಲ್ಲವೇ? ಎಲ್ಲಿ ತಮ್ಮ ಬುಡವೇ ಕಳಚಿ ಬೀಳುತ್ತದೆ ಎಂದು ಗೊತ್ತಾಯಿತೊ ಆಗಲೇ ಫಲಾನುಭವಿ ಗೂಂಡಾ ಪಡೆ ಜೀವ ತೆಗೆಯಲು ಮಂತ್ರಾಕ್ಷತೆ ಪಡೆದು ಮಾರಣಾಂತಿಕ ಹಲ್ಲೆ ನಡೆಸಿತು..ಜೊತೆಗೆ ಇದು ಕೇವಲ ಆರಂಭ ಎನ್ನುವ ಘೋಷಣೆಗಳು ಸಾಮಾಜಿಕ ಜಾಲತಾಣದಲ್ಲಿ ಪುಂಖಾನುಪುಂಖವಾಗಿ ಹರಿದಾಡುತ್ತಿದೆ..ಇನ್ನೆಷ್ಟು ಜೀವಗಳನ್ನು ಬಲಿಪಡೆಯಲು ಸಜ್ಜಾಗಿದೆಯೊ ಕಾಮುಕನ ದಂಡು.

source: https://www.facebook.com/groups/1499395003680065/permalink/1773853892900840/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s