ಹವ್ಯಕ ಸಮಾಜದ ಸಂಸ್ಕ್ರತಿ ಮಣ್ಣುಗೂಡಿದ ದಿನ

” ನೇರ ನೋಟ ”
ನಮಸ್ಕಾರ ಸ್ನೇಹಿತರೆ
5|6|2016 ಮರೆಯಲಾಗದ ಇತಿಹಾಸದಲ್ಲಿ ಹವ್ಯಕ ಸಮಾಜದ ಸಂಸ್ಕ್ರತಿ ಮಣ್ಣುಗೂಡಿದ ದಿನ ಹೊರರಾಜ್ಯದಲ್ಲಿ ಇಂಥಃ ಘಟನೆ ಕೇಳಿದ್ದೇವೆ ಇಲ್ಲಿ ನಡೆದಿರಲಿಲ್ಲ ನಮ್ಮ ವ್ಯವಸ್ತೆ ಯಾವ ಮಟ್ಟದಲ್ಲಿ ಕೆಲಸಮಾಡುತ್ತಿದೆ ಅನ್ನೋದರ ಜೀವಂತ ಸಾಕ್ಷಿ ನಮ್ಮಲ್ಲಿ ಕಾರ್ಯಾಂಗದ ಕೆಲಸವೇನು ಸಂವಿಧಾನಬಧ್ಧವಾಗಿ ನಡೆಯುತ್ತಿದ್ದ ಶಾಂತವಾಗಿ ತಮ್ಮಪಾಡಿಗೆತಾವು ಯಾವುದೋ ಛತ್ರದಲ್ಲಿ ಅಭಿಯಾನದ ಸಭೆ ನಡೆಸಿದರೆ ಅದನ್ನು ಗುಂಡಾಗಳು ಬಂದು ಸಭೆ ನಡೆಸುತ್ತಿದ್ದವರ ಮೇಲೆ ಹಲ್ಲೆ ಮಾಡಿ ಸಭೆ ನಡೆಯದಂತೆ ಮಾಡುವಾಗ ಪೋಲೀಸರು ಎನುಮಾಡುತ್ತಿದ್ದರು ಅದೇ ಯಾವುದಾದರೂ ಸಚಿವರ ಸಭೆ ನಡೆವಾಗ ಈರೀತಿ ನಡೆಯಲು ಸಾಧ್ಯಾನಾ
ಹೋಗಲಿ ಇದೇ ಪೀಠಾಧಿಪತಿಗಳು ಸಭೆನಡೆಸಿ PIL ಹಾಕಿದವರನ್ನ ವಾಚಮಗೋಚರವಾಗಿ ಬೈಯ್ಯುತ್ತಿರುವಾಗ ಯಾರಾದರೂ ಬಂದು ಈರೀತಿ ಗಲಾಟೆ ಮಾಡಿದ್ದರೆ ಆಗಲೂ ಇದೇರೀತಿ ಪೋಲೀಸರು ಕೈಕಟ್ಟಿ ನೊಡುತ್ತಿರುತ್ತಿದ್ರ
ಪೋಲೀಸರು ಬೇಡವಾಗಿತ್ತು ಇವರ ಶಿಷ್ಯರೆ ಸಾಕಿತ್ತು ನಿನ್ನೆ ನಡೆದ ಗುಂಡಾವರ್ತನೆಯನ್ನು ಯಾವ ನಾಗರೀಕ ಸಮಾಜವೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಆದರೂ ಅಂತರ್ಜಾಲದಲ್ಲಿ ತಾವುಮಾಡಿಸಿದ ಘನಕಾರ್ಯದ ಸಂತೋಷ ಹಂಚಿಕೋಳ್ಳೋದನ್ನು ನೋಡಿದರೆ ಖಂಡಿತವಾಗಿ ಇವರು ಬ್ರಾಹ್ಮಣರು ಅಲ್ಲ ಕನಿಷ್ಟ ಮನುಷ್ಯರಾಗಲೂ
ಯೋಗ್ಯತೆ ಇಲ್ಲ
ನಾಡೋಜ ಪಾಟೀಲ ಪುಟ್ಟಪ್ಪ ನವರು ತಮ್ಮ ಕೈ ಬರಹದಲ್ಲೇ ಪೀಠಾಧಿಪತಿಗಳ ವಿರುಧ್ಧ ಬರೆದಿದ್ದಾರೆ ಸ್ವಾತಂತ್ರ್ಯ ಹೋರಾಟಗಾರರು ವಯೋವೃಧ್ಧರೂ ಆದ ಎಚ್ ಎಸ್ ದೊರೆಸ್ವಾಮಿಯವರು ನ್ಯಾಯಾಲಯದ ತೀರ್ಪಿನ ನಂತರ ಪೀಠಾಧಿಪತಿಗಳು ಪೀಠಬಿಡಬೇಕು ಅಂತ ಹೇಳಿಕೆ ಕೊಟ್ಟಿದ್ದರು . ಚಪ್ಪಲಿ ಪೊರಕೆಜೊತೆ ಅವರ ವಿರುಧ್ಧ ಯಾಕೆ ಪ್ರತಿಭಟನೆಗೆ ಹೋಗಿಲ್ಲ ಹೋಗಿದ್ದರೆ ನಿಮ್ಮ ಬುಡವನ್ನೆ ಇಡೀಸಮಾಜ ಕತ್ತರಿಸುತ್ತಿತ್ತು ಇಲ್ಲಿ ಸಭೆ ನಡೆಸುತ್ತಿದ್ದವರು ಬಡ ಬ್ರಾಹ್ಮಣರು ಅವರ ಮೇಲೆ ನಿಮ್ಮ ಪೌರುಷ ತೋರಿಸಿದ್ದೀರಾ ರವಿಬೆಳೆಗೆರೆ ಶ್ರೀಧರ್ ಗೌರಿ ಲಂಕೇಶ್ ಇವರು ಪೀಠಾಧಿಪತಿಗಳ ವಿರುಧ್ಧ ಎಂತೆಂಥ ಬರಹ ಬರೀತಿದ್ದಾರೆ ಅವರ ಮೇಲೆ ಹೆಚ್ಚೆಂದರೆ ಮಾನಹಾನಿಯ ಕೇಸನ್ನು ಹಾಕುತ್ತೀರಾ ಅವರ ವಿರುಧ್ಧ ಚಪ್ಪಲಿ ಪೊರಕೆಯ ಪ್ರತಾಪ ತೋರಿಸಲು ಸಾಧ್ಯಾನಾ
ಡಾ|| ಟಿ ಟಿ ಹೆಗಡೆಯಂಥ ವೃಧ್ಧರ ಮೇಲೆ ಕೈ ಮಾಡಿದ್ದೀರಲ್ಲ ನಾಚಿಕೆಯಾಗಬೇಕು ನಿಮ್ಮ ಜನ್ಮಕ್ಕೆ ಹೆಂಗಸರನ್ನು ಮುಂದಿಟ್ಟುಕೊಂಡು ಯುಧ್ಧಮಾಡುತ್ತೀರಲ್ಲ ಹೇಡಿಗಳು ತಾಕತ್ತಿದ್ದರೆ ನೆರಾನೇರ ಚರ್ಚೆಗೆ ಬರಬೇಕಿತ್ತು ಅದನ್ನು ಬಿಟ್ಟು
ಹಲ್ಲೆಮಾಡಿದ್ದೀರಲ್ಲ ನಿಮ್ಮಮನೆಯ ಲ್ಲಿರುವ ನಾಯಿಯೂ ಹಿಂಸೆಕೊಟ್ಟರೆ ನಿಮಗೇ ಕಚ್ಚುತ್ತದೆ ಹೀಗಿರುವಾಗ ನಿಮ್ಮದೇ
ಜನಾಂಗದ ವೃಧ್ಧರನ್ನು ಬಿಡದೆ ಹಿಂಸಿಸಿದ್ದೀರಲ್ಲ ಯಾವ ಮಹಾತಾಯಿ ನಿಮ್ಮನ್ನು ಹೆತ್ತಿರಬೇಕು
ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ ಸ್ವಾತಂತ್ರ್ಯಹೋರಾಟದಲ್ಲಿ ಹೋರಾಟ ಹತ್ತಿಕ್ಕಲು ಹೋರಾಟಗಾರರಮೇಲೆ
ಎನೆಲ್ಲಾ ಹಿಂಸೆ ನಡೆಸಲಾಯಿತು ಆದರೂ ಹೋರಾಟ ನಿಲ್ಲಿಸಲು ಸಾಧ್ಯವಾಗಲಿಲ್ಲ ಇದರಲ್ಲಿ ಅಸಂಖ್ಯಾತ ಮಹನೀಯರ
ಬಲಿದಾನವಾಯಿತು ಆದರೂ ನಿಲ್ಲಿಸಲಿಕ್ಕೆ ಸಾಧ್ಯವಾಗಲಿಲ್ಲ ಕೋನೆಗೆ ದೇಶಬಿಟ್ಟು ತೊಲಗಲೇಬೆಕಾಯಿತು ಇದು ವಾಸ್ತವ
ನಿವು ಬೆದರಿಕೆಯಿಂದ ಯಾವುದನ್ನು ಹತ್ತಿಕ್ಕಲು ಸಾಧ್ಯವಿಲ್ಲ ಇವತ್ತು ಸಭೆನಡೆಯದಂತೆ ಮಾಡಲು ನೀವು ಯಶಸ್ವಿಯಾಗಿದ್ದೀರಿ ಆದರೆ ಇದು ತಾತ್ಕಾಲಿಕ ಕೊನೆಯಲ್ಲ ನೆನಪಿಡಿ
ಹಲ್ಲೆಮಾಡಿದ ಪುಂಢರು ಇಬ್ಬರು ಸಿಕ್ಕಿದ್ದಾರೆ ಅವರನ್ನು ತನಿಖಾಧಿಕಾರಿಗಳು ಸರಿಯಾಗಿ ವಿಚಾರಣೆಗೋಳಪಡಿಸಿದರೆ ಇದರ ಹಿಂದಿರುವ ದೊಡ್ಡ ತಲೆ ಒಳಗೆ ಹೋಗುವುದು ಖಚಿತ ಪ್ರಾಮಾಣಿಕ ತನಿಖೆಯಾಗಬೇಕು ಅಷ್ಟೆ
ಕೊನೆಯದಾಗಿ ಇಲ್ಲಿ ಒಂದು ಕಥೆ ಹೇಳುತ್ತೇನೆ ಒಬ್ಬ ಸನ್ಯಾಸಿ ಕಾಡಿನಲ್ಲಿ ಹಸಿವಾದಾಗ ಕಾಡಿನಲ್ಲಿದ್ದ ಒಬ್ಬ ಗೃಹಸ್ತನ ಮನೆಯಲ್ಲಿ ಉಟ ಮಾಡುತ್ತಾನೆ ಆಮೇಲೆ ಹೋಗುವಾಗ ಗೃಹಸ್ತನ ಮನೆಯಲ್ಲಿದ್ದ ಹಸುವನ್ನೆ ಕದ್ದೋಯ್ಯುತ್ತಾನೆ
ಮನೆಗೆ ಹೋದಮೇಲೆ ಅವನು ವಿಚಾರಮಾಡುತ್ತಾನೆ ಯಾಕೆ ನಾನು ಹಸುಕದ್ದೆ ಯಾಕೆನನಗೆ ಈ ಬುಧ್ಧಿಬಂತು ಅಂತ ಆಲೋಚಿಸಿದಾಗ ಅವನಿಗೆ ಜ್ಞಾನೋದಯವಾಗುತ್ತದೆ ಅವನು ಉಟಮಾಡಿದ ಗೃಹಸ್ತ ಕಳ್ಳನಾಗಿದ್ದ ಅವನ ಮನೆಯಲ್ಲಿ
ಸನ್ಯಾಸಿ ಊಟಮಾಡಿದ ಕಾರಣ ಇವನಿಗೆ ಈ ಬುಧ್ಧಿ ಬಂತು
ಹಾಗೆ ನಾವು ಯಾರ ಅನ್ನತಿಂದು ಒಡನಾಟಮಾಡುತ್ತೇವೊ ಅವರ ಗುಣ ಸಹಜವಾಗಿ ಬರುತ್ತದೆ ಇಲ್ಲಿ ಆಗಿದ್ದು ಅದೇ
ನಮಸ್ಕಾರ
ಎನಂತೀರಾ

source: https://www.facebook.com/dattatreya.hegde.33/posts/259153661110644

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s