ಗಲಭೆ ನಡೆಸಿದರೆ ವಾಸ್ತವವನ್ನು ಮರೆಸಲು ಸಾಧ್ಯವೇ?

Subramanya putrhakala anna in facebook…

ಗಲಭೆ ನಡೆಸಿದರೆ ವಾಸ್ತವವನ್ನು ಮರೆಸಲು ಸಾಧ್ಯವೇ? ಆರೋಪ ಬಂದ ಮೇಲೆ ಆರೋಪಿ ಸ್ತಾನದಲ್ಲಿರುವವರು ನ್ಯಾಯದ ದಾರಿಯಲ್ಲಿ ಹೋರಾಡಿ ತನ್ನ ನಿರಪರಾಧಿತ್ವ ಸಾಬೀತು ಮಾಡಬೇಕಾದ್ದು ಸಹಜ,ವಿಚಾರ ನ್ಯಾಯಾಲಯದ ಮುಂದೆ ಬಂತು ,ನ್ಯಾಯಾಧೀಶರು ಸಾಕಷ್ಟು ವಿಮರ್ಶೆಯನ್ನು ಬರೆದರು,ಆರೋಪದ ಪರ ಮತ್ತು ಆರೋಪಿಯ ಪರ ಮಾತ್ರವಲ್ಲ ತನ್ನ ವಿವೇಚನಾ ಶಕ್ತಿಯಿಂದಲೂ ವಿಮರ್ಶಿಸಿ ಇದು ಅತ್ಯಾಚಾರ ಅಲ್ಲ ಆದರೆ ಅನೈತಿಕ, ಒಪ್ಪಿಗೆಯ ಸಂಬಂಧ ಎನ್ನಬಹುದು ಎಂದು ವಿಧಿಯನ್ನೂ ಬರೆದರು.
ಸನ್ಯಾಸಿಯ ವೀರ್ಯ ಪರೀಕ್ಷೆ ನಡೆದರೆ ಸನ್ಯಾಸತ್ವ ನಾಶವಾಗುತ್ತದೆ ಎಂದು ಪ್ರತಿಪಾದಿಸುತ್ತಿದ್ದ ವಾದಿ ಭಾಗ ತೀರ್ಪಿನಲ್ಲಿ ಚರ್ಚಿಸಿದ ವಿಚಾರ ಸರಿಯಲ್ಲ ಇದರಿಂದ ಸನ್ಯಾಸದ ಮೇಲೆ ಸಮಾಜಕ್ಕೆ ಶಂಕೆ ಬರುತ್ತದೆ ,ಆದ್ದರಿಂದ ಇದರ ಪುನರ್ವಿಮರ್ಶೆ ಆಗಬೇಕೆಂದು ಆ ನ್ಯಾಯಾಲಯದಲ್ಲಾಗಲಿ , ಅದರ ಮೇಲಿನ ನ್ಯಾಯಾಲಯದಲ್ಲಾಗಲಿ ಪ್ರತಿಪಾದಿಸಿಲ್ಲ ,ಮಾತ್ರವಲ್ಲ ಆ ತೀರ್ಪನ್ನು ಸಂತೋಷದಿಂದ ಸ್ವಾಗತಿಸಿ ,ಅಭೂತಪೂರ್ವ ರೀತಿಯಲ್ಲಿ ಆರೋಪಿ ಅತ್ಯಾಚಾರ ಆರೋಪದಿಂದ ಮುಕ್ತರಾದರು ಎಂದು ಸಂತೋಶಾಚರಣೆನಡೆಸಿತು ,ಆಕ್ಷೇಪಣೆ ಸಲ್ಲಿಸದ್ದರಿಂದ ತೀರ್ಪಿನ ಇತರ ಅಂಶಗಳನ್ನೂ ಒಪ್ಪಿಕೊಂಡಿತು,ವಿರೋಧ ಇರುತ್ತಿದ್ದರೆ ಖಂಡಿತವಾಗಿಯೂ ಆಕ್ಷೇಪಣೆ ಸಲ್ಲಿಸುತ್ತಿತ್ತು.
ಇದು ಅತ್ಯಾಚಾರ ಅಲ್ಲ ,ಅನೈತಿಕ ಒಪ್ಪಿಗೆಯ ಸಂಬಂಧದ ಸಾಧ್ಯತೆ ಎಂದು ಚರ್ಚಿಸಿದ ನ್ಯಾಯಾಧೀಶರು ಸಂತ್ರಸ್ತೆಗೆ ನ್ಯಾಯ ನೀಡುವ ಇರಾದೆಯಲ್ಲಿ ಇದ್ದಿದ್ದರೆ ದಾಖಲಿಸಿರುವ section ಸರಿಯಲ್ಲ , ಆದ್ದರಿಂದ ಪುನರ್ ನನಿಖೆ ನಡೆಸಿ section ಬದಲಾವಣೆಯೊಂದಿಗೆ ಮುಂದುವರಿಸಲು ತನಿಖಾ ಸಂಸ್ತೆಗೆ ಆದೆಶಿಸಬೇಕಿತ್ತು, ಇದಕ್ಕೆ ಸಂಪೂರ್ಣ ಅಧಿಕಾರವೂ ನ್ಯಾಯಾಧೀಶರಿಗೆ ಇತ್ತು,ಅವರೂ ಸಂತ್ರಸ್ತೆಯ ಬಗ್ಗೆ ಮೌನ ತಾಳಿದರು. ಅವರು ಆ ಬಗ್ಗೆ ನಿರ್ದೇಶಿಸಿದ್ದರೂ ಸಮಸ್ಯೆ ಒಂದು ರೂಪಕ್ಕೆ ಬರುತ್ತಿತ್ತು.
ಈಗ ಮಠದ ಅಭಿಮಾನಿಗಳು ಮತ್ತು ಈಗಿನ ಗುರುಗಳ ಅಭಿಮಾನಿಗಳು ಎಂಬ ಗುಂಪುಗಳು ಉಂಟಾಗಿವೆ,ಎರಡು ಗುಂಪುಗಳಿಗೂ ತಮ್ಮತಮ್ಮ ಅಭಿಪ್ರಾಯ ವ್ಯಕ್ತ ಪಡಿಸುವ ,ಸಂಘಟಿಸುವ , ಪ್ರತಿಪಾದಿಸುವ ಅವಕಾಶಗಳು ಖಂಡಿತವಾಗಿಯೂ ಇದೆ,.ಈ ಅವಕಾಶವನ್ನು ನ್ಯಾಯಬಾಹಿರ ರೀತಿಯಲ್ಲಿ ಪ್ರಕಟಿಸುವುದು ಸರಿಯಲ್ಲ,ಗುರುಗಳ ಪರವಾಗಿರುವ ಗುಂಪು ಅನೈತಿಕ ಒಪ್ಪಿಗೆಯ ಸಂಬಂಧವಾಗಿರುವ ಸಾಧ್ಯತೆ ಎಂಬ ನ್ಯಾಯಾಧೀಶರು ಕಂಡುಕೊಂಡ ಅಂಶವನ್ನು ಪ್ರಶ್ನಿಸಬೇಕಲ್ಲದೆ ,ಹಿಂದೆತಾವೇ ಪ್ರತಿಪಾದಿಸಿದ -ವೀರ್ಯ ಪರೀಕ್ಷೆಯಿಂದ ಸನ್ಯಾಸಕ್ಕೆ ಧಕ್ಕೆ-ಎಂಬದರ ಆಧಾರದಲ್ಲೇ ನ್ಯಾಯಾಧೀಶರು ಎತ್ತಿಹಾಕಿದ ಅನೈತಿಕ, ಒಪ್ಪಿಗೆಯ ಸಂಬಂಧ ಎಂಬುದನ್ನು ಪ್ರಶ್ನಿಸದಿರುವುದರಿಂದ ಸನ್ಯಾಸಕ್ಕೆ ಧಕ್ಕೆ ಬಂದಿದೆ ಎಂಬುದನ್ನು ಒಪ್ಪಿಕೊಂಡಂತೆ ಆಗುತ್ತಿಲ್ಲವೇ,ಹಾಗಿರುವಾಗ ಗುಂಡಾಗಿರಿ ನಡೆಸುವ ಬದಲು ನ್ಯಾಯದ ದಾರಿಯಲ್ಲೇ ತೀರ್ಪಿನ ಪುನರ್ವಿಮರ್ಶೆ ನಡೆಸಿ ಸನ್ಯಾಸಕ್ಕೆ ಧಕ್ಕೆ ಬಂದಿಲ್ಲವೆಂದು ತೋರಿಸಿಕೊಡುವ ಜವಾಬ್ದಾರಿ ಗುರುಗಳ ಅಭಿಮಾನಿಗಳದ್ದಲ್ಲವೇ,ೆಇದೇ ಅಲ್ಲವೇ ಸರಿಯಾದ ದಾರಿ.ಅಲ್ಲಲ್ಲಿ ಗಲಭೆ , ಗುಂಡಾಗಿರಿ ನಡೆಸಿದರೆ ನ್ಯಾಯಾಲಯ ಗಮನಿಸಿ ಚರ್ಚಿಸಿದ ವಿಚಾರ ಇಲ್ಲವಾಗಬಹುದೇ

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s