PIL Copy ಮತ್ತು ಯಾಕಾಗಿ PIL ಹಾಕಲಾಗಿದೆ

For PIL COPY please Click here

ಯಾಕಾಗಿ PIL ಹಾಕಲಾಗಿದೆ ಎಂದು ಅನೇಕರು ಅವರದೇ ಆದ ಕಾರಣಗಳಿಗೆ ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ– ಅದಕ್ಕಾಗಿ ಈ ಬರಹ –

ಈ PIL ಬಂದುದೇ — ಗೌರಾನ್ವಿತ ಘನ ನ್ಯಾಯಾಲಯವು ತನ್ನ ತೀರ್ಪನ್ನು ಪ್ರಕಟಿಸಿದ ಮೇಲೆ || — ಯಾಕಾಗಿ ಇದರ ಅವಶ್ಯಕತೆ ಬಂದಿತು ? – ೧. ನ್ಯಾಲಯದ ತೀರ್ಪು ಹೊರಬೀಳುತ್ತಿದ್ದಂತೆಯೇ — ಅದರ ಮೊದಲ ಭಾಗದ ” ಶ್ರೀ ಗಳು ದೋಷ ಮುಕ್ತ” – ಎಂಬ ಸುದ್ದಿಯೂ ಎಲ್ಲೆಲ್ಲೂ ಹರಡಿತು || – ಎಲ್ಲ ದೂರದರ್ಶನ ಗಳೂ ಪ್ರಸಾರ ಮಾಡಿದವು – ಶ್ರೀ ಗಳು ದೋಷ ಮುಕ್ತ ಎಂಬ ವಿಷಯವೇ ಮುಖ್ಯವಾಗಿದ್ದಿತು || ಆದರೂ ಒಂದು ದೂರ ದರ್ಶನವು ಇನ್ನೂ ಹೆಚ್ಚಿನ ಸುದ್ದಿಯನ್ನು ಕೊಟ್ಟಿತು — ಹಾಗೂ ಅದು ಈ ವಿಜಯೋತ್ಸವಕ್ಕೆ ಅಡ್ಡಿಯಾಯಿತು || ಅಲ್ಲದೇ ಮುಂದೆ ಸಾಮಾನ್ಯ ಎಲ್ಲ ಕನ್ನಡ ವಾಹಿನಿಗಳಲ್ಲಿ ಸುದ್ದಿ “ದೋಷಮುಕ್ತ” – ಎಂಬ ಮಾತು ಮಾತ್ರ — ಆದರೆ ಪ್ರಜಾ ವಾಣಿಯಂತಹ ಒಂದು ಪ್ರಬುದ್ಧ ವಾಹಿನಿ ಯು ಬರೆದಸುದ್ದಿ ಯು ಹೀಗಿತ್ತು ——— ಅವರ (ಸ್ವಾಮೀಜಿ) ವಯಸ್ಸು ೩೮, ಪ್ರೇಮಲತಾ ವಯಸ್ಸು ೫೧. ಇದು ತಾಯಿ ಮಗನಿಗೆ ಇರುವಷ್ಟು ಅಂತರ || — ಮುಂದೆ ಪುನಃ ಹೀಗಿತ್ತು —— — ಯನ್ನು ಗಮನಿಸಿದರೆ – ಇದು ಅತ್ಯಾಚಾರವಲ್ಲ -ಇದೊಂದು ಅಸಹಜ ಮಾನಸಿಕ ಸ್ಥಿತಿ ಯ ಒಪ್ಪಿತವಾದ ಶೀಲಗೆಟ್ಟ ಸಂಬಂಧ ಎಂಬುದು ದೃಢ ವಾಗುತ್ತದೆ || – ಇಲ್ಲಿ ಯಾಕಾಗಿ ಉಳಿದ ಕನ್ನಡ ವಾಹಿನಿಗಳೂ ದೂರದರ್ಶನ ಗಳೂ ಒಂದು ಭಾಗದ ಸುದ್ದಿ ಮಾತ್ರ ಹಾಕಿದವೆಂದು ಅರ್ಥವಾಗುತ್ತಿಲ್ಲ || — ಆದರೆ ಇದರಿಂದಾಗಿ ಅನೇಕ ಸಂಬಂಧ ಪಟ್ಟ ಜನರಿಗೆ ನ್ಯಾಯಾಲಯ ದ ಪೂರ್ಣ – ತೀರ್ಪು ಸಿಗದಂತಾಯಿತು ||

೨. ಸಾಮಾನ್ಯವಾಗಿ ಭಕ್ತರಲ್ಲಿ ಹೆಚ್ಚಿನವರು — ಈ ಒಪ್ಪಿತ ಸಂಬಂಧ ದ ವಿಷಯ ಘನ ನ್ಯಾಯಾಲಯ ಹೇಳಿದರೂ – ಇದರಿಂದಾಗಿ “ಅತ್ಯಂತ ಪಾವನವೂ” ಎಲ್ಲರ ಶ್ರದ್ಧಾ ಕೇಂದ್ರವೂ ಆದ ಪರಮ ಪವಿತ್ರ ವೆನಿಸಿದ ಆದಿ ಶಂಕರಾಚಾರ್ಯ ಗುರು ಪೀಠ ದ ವಿಷಯದಲ್ಲಿ ತಲೆಗೆಡಿಸಲಿಲ್ಲ || -ಯಾಕೆಂದರೆ ಮುಗ್ಧರ ಮನದಲ್ಲಿ – ಪೀಠ ವೇ ವ್ಯಕ್ತಿ — ಹಾಗೂ ವ್ಯಕ್ತಿ ಯೇ ಪೀಠ ಎಂಬ ತಪ್ಪು ಕಲ್ಪನೆ ತುಂಬುವ ಕೆಲಸ ಹಿಂದೆಯೇ ಮುಗಿದು ಹೋಗಿದೆ ಎನ್ನ ಬಹುದು || — ಆದರೆ ಪೀಠ ನಿಷ್ಠ ರಿಗೆ ಮತ್ತು ಸತ್ಯ ನಿಷ್ಠ ರಿಗೆ — ಇದೊಂದು ಅರಗಿಸಲಾಗದ ವಿಷಯವಾಯಿತು || –ಮುಂದೆ ಒಂದೆಡೆಯಿಂದ ಆದಷ್ಟೂ ಈ ತೀರ್ಪಿ ನ ಮುಂದಿನ ಭಾಗವು ಹೆಚ್ಚಿನವರಿಗೆ ತಲುಪದಂತೇ ನೋಡಿಕೊಳ್ಳುವ ಸ್ಥಿತಿ ಯು ಕಾಣಿಸ ತೊಡಗಿತು || –

೩. ಹಂತ ಹಂತ ವಾಗಿ – ಈ ರೀತಿಯ ವಿಷಯಗಳು ಪೀಠದಲ್ಲಿದ್ದರೂ – ಬಾಧಿಸಲಾರವು ಎಂಬಂತೇ ಹೆಚ್ಚಿನ ಭಕ್ತರೆನಿಸಿದವರು ಆಡಿಕೊಳ್ಳತೊಡಗಿದರು || ಇನ್ನೂ ಮುಂದೆ ಹೋಗಿ (ಶಾಸ್ತ್ರ ಸಮ್ಮತವಲ್ಲ ದ) – ಮತ್ತು ಕೊನೆಯ ಹಂತದಲ್ಲಿ – ಅನಾಗರಿಕ ರೀತಿಯ ” ಏಕಾಂತ ಗೋಪ್ಯ ಮನ್ತ್ರೋಪದೇಶವು” ಇದೆ ಎಂದು ಹೇಳಲಾಗುತ್ತಿರುವ – ಕ್ರಿಯೆ ಯು ನಿಲ್ಲದು – ಎಂಬ ಮಾತೂ ಕೇಳಬರುತ್ತಿತ್ತು || –” ದೋಷ ಮುಕ್ತ ” ವೆಂಬ ತೀರ್ಪಿನ ಆಧಾರದಲ್ಲಿ – ಹಿಂದೆ ಮಾಡಿದ್ದೆಲ್ಲವೂ ಸರಿಯೆ – ಈಗ ಅದು ಮುಂದುವರಿಯುತ್ತದೆ – ಎಂಬಂತೇ ವಿಷಯಗಳು ಕಾಣ ತೊಡಗಿವೆ || –

೪. ಒಪ್ಪಿತ ಸಂಬಂಧ – ಎಂಬ ತೀರ್ಪು ಬಂದ ವಿಷಯದಲ್ಲಿ – ಪ್ರತಿವಾದಿಯು – ಇದನ್ನು ಅಲ್ಲಗಳೆಯಲು ಮೇಲಿನ ನ್ಯಾಯಾಲಯಕ್ಕೆ ದೂರು ಕೊಡುವ ಯಾವ ಸೂಚನೆಯೂ – ಇಲ್ಲದುದರಿಂದ – ಪ್ರತಿವಾದಿಯೂ ಹಾಗೂ ಭಕ್ತರೂ ಈ ಕಾರ್ಯ ವು ನಡೆದಿದೆ ಎಂಬುದನ್ನು ಒಪ್ಪಿದರೆನ್ನದೆ ವಿಧಿಯಿಲ್ಲ || — ಆದರೆ ವಾದಿಯೇ ಇದರ ಇನ್ನೂ ಹೆಚ್ಚಿನ ವಿಚಾರ ಹೊರ ಬರಬೇಕೆಂದು ನ್ಯಾಯಾಲಯದ ಮೆಟ್ಟಲೇರಿದ್ದಾರೆ ||

೫. ವೈದಿಕ ಭಾವನೆಗಳಲ್ಲಿ – ಪೀಠಾಧಿಪತಿಯು ” ಸರ್ವ ಸಂಘ ಪರಿತ್ಯಾಗಿ ” ಯಾಗಿರುವ ಸನ್ಯಾಸಿ ಎಂಬುದೇ ಸಿಶ್ಚಯ ರೂಪ || ಹಾಗಿದ್ದಲ್ಲಿ ಈ ವಿಷಯದಲ್ಲಿ ಸ್ವಲ್ಪ ಯೋಚಿಸ ಬೇಕಾಗಿದೆ ||
ಇದಕ್ಕೆ ಪೂರ್ವ ಭಾವಿಯಾಗಿ ಚಿಕ್ಕದಾಗಿ ಹಲವು ವಿಚಾರಗಳನ್ನು ಅರಿತುಕೊಳ್ಳಬೇಕಾಗಿದೆ ||

೧. ವೈದಿಕ ಬ್ರಾಹ್ಮಣ ಸಮಾಜ — ಇಲ್ಲಿ ವೇದೋಕ್ತ ಧಾರ್ಮಿಕ ವಿಧಿಗಳನ್ನು ನೆರವೇರಿಸಿ ಕೊಡಲು “ಪುರೋಹಿತರು” ಪುರ ದ ಅಥವಾ ಶಿಷ್ಯ ಜನರ ಹಿತಕ್ಕಾಗಿ ಶ್ರಮಿಸುವವರು ಹಾಗೂ ವೇದ ಪಾಠಾದಿಗಳನ್ನು ನಡೆಸಿ ಕೊಡುವವರು ||

೨. ಈ ಸಮಾಜಕ್ಕೆ ಒಂದು ಗುರು ಪೀಠ || — ಎಲ್ಲ ಜನರ ತಿಳುವಳಿಕೆಯಂತೇ ಗುರುಗಳು ” ಸರ್ವ ಸಂಘ ಪರಿತ್ಯಾಗಿಯಾದ ಸನ್ಯಾಸಿ” — ಈ ಸನ್ಯಾಸಿಯ ಲಕ್ಷಣಗಳನ್ನು – ಅನೇಕ ಉಪನಿಷತ್ತುಗಳು, ಮತ್ತು ಶ್ರೀಮದ್ಭಗವದ್ಗೀತೆ ಗಳಲ್ಲಿ ಹೇಳಿದೆ – | ಒಬ್ಬನು ಸನ್ಯಾಸಿಯಾಗಲು ಅರ್ಹನಾಗುವುದಕ್ಕೆ ಮೊದಲು ಬೇಕಾದ ನಿಯಮ ” ಸಾಧನ ಚತುಷ್ಟಯ ಸಂಪನ್ನತೆ” || ಈ ವಿಷಯದಲ್ಲಿ ಸನ್ಯಾಸೋಪನಿಶತ್ತು ಆಜ್ಞಾಪಿಸುತ್ತದೆ – ಸಾಧನ ಚತುಷ್ಟಯ ಸಂಪನ್ನ ಏವ ಸನ್ಯಸ್ತುಮರ್ಹತಿ – ಇದು ಏನು ಎಂದು ಆಸಕ್ತರು – ಶ್ರೀ ಮದಾಚಾರ್ಯ ಶಂಕರ ವಿರಚಿತ – ವಿವೇಕ ಚೂಢಾಮಣಿ ಯನ್ನು ನೋಡ ಬಹುದು ||

೩. ಸಾದನ ಚತುಷ್ಟಯ ದಲ್ಲಿ ಅಂತರ್ಗತ ವಾದ – “ಶಮಾದಿ ಶಟ್ಕ ಸಂಪತ್ತಿ ” ಯಲ್ಲಿ ಹೇಳುವಂತೇ – ಈ ಸಾಧಕನು ಯಾವುದೇ ರೀತಿಯ ದುಃಖ ವು ಆವರಿಸಿದಾಗ – ಮಾಡಬೇಕಾದ ಮನೋ ನಿಗ್ರಹ ಧರ್ಮವು — ಸಹನಾ ಸರ್ವ ದುಃಖಾನಾಂ ಅಪ್ರತೀಕಾರ ಪೂರ್ವಕಂ ಚಿಂತಾ ವಿಲಾಪ ರಹಿತಂ ಸಾ ತಿತಿಕ್ಷಾ ನಿಗದ್ಯತೇ — ಎಂದರೆ ಯಾ ದುಃಖ ವನ್ನೇ ಆದರೂ ಈ ಯೋಗಿಯು ಚಿಂತೆ ವಿಲಾಪ – ಮತ್ತು ಪ್ರತೀಕಾರ ಭಾವವನ್ನು ತೊರೆದು ಸಹಿಸುವ ಪ್ರವೃತ್ತಿ ಯನ್ನು ಬೆಳೆಸಿಕೊಳ್ಳಬೇಕು || ಕಾರಣ ಎಲ್ಲ ದುಃಖಗಳಿಗೂ ಅವರವರ ಪೂರ್ವ ಕರ್ಮಗಳೇ ಕಾರಣ ಇತರರು ಯಾರೂ ಅಲ್ಲ ಎಂಬುದನ್ನು ಇವರು ಅರಿತಿರುತ್ತಾರೆ || –ಇಂತಹಾ ಯಾವ ಗುಣಗಳೂ ನಮಗೆ ಇಲ್ಲಿ ನೋಡಲು ಸಿಗುತ್ತಿಲ್ಲ ||

೬. ಈ ಸ್ಥಿತಿ ಯಲ್ಲಿ ಭಾರತದ ಕಾನೂನು ಚೌಕಟ್ಟಿ ನ ಪರಿಧಿಯಲ್ಲಿ ಈ ತೀರ್ಪಿನ ಹಿ ನ್ನೆಲೆಯಲ್ಲಿ ಇದನ್ನು ಪ್ರಶ್ನಿಸುವ ಅವಶ್ಯಕತೆ ಕಾಣುತ್ತಿದೆ || ಇದಕ್ಕಾಗಿ PIL– || ಮುಖ್ಯ ವಾಗಿ – ನ್ಯಾಯಾಲಯವು ಅನೈತಿಕ ಸಂಬಧ ವಿತ್ತು ಎಂದು ಅಭಿಪ್ರಾಯ ಪಟ್ಟ ಮೇಲೆ – ಪೀಠಾಧಿಪತಿ ಯಾಗಿ ಮುಂದುವರಿಯುವ ಅರ್ಹತೆ ಯನ್ನು ಪ್ರಶ್ನಿಸಿ – PIL ||
ಧರ್ಮೋ ರಕ್ಷತಿ ರಕ್ಷಿತಃ ||

For PIL COPY please Click here

source: https://www.facebook.com/groups/1499395003680065/permalink/1763080920644804/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s