ಗುಂಡು-ತುಂಡು ತಿಂದು ಕಚ್ಚೆಬಿಚ್ಚುವ ತೊನೆಯಪ್ಪನಂತವರು ಶಂಕರರ ಹೆಸರಿನಲ್ಲಿ ಬದುಕುತ್ತಿದ್ದಾರೆ

ಗುಂಡು-ತುಂಡು ತಿಂದು ಕಚ್ಚೆಬಿಚ್ಚುವ ತೊನೆಯಪ್ಪನಂತವರು ಶಂಕರರ ಹೆಸರಿನಲ್ಲಿ ಬದುಕುತ್ತಿದ್ದಾರೆ

ಪೀಠದೆದುರು ಬಂದು ಕೇಳಿ ಎನ್ನುವ ಕಚ್ಚೆಶೀಗಳಿಗೆ ಬಹಳ ಹಿಂದೆಯೇ ವಿದ್ವಾಂಸರು ಪ್ರಶ್ನೆಗಳನ್ನು ಕೇಳಿದ್ದರು. ಬಹುತೇಹ ಪ್ರಶ್ನೆಗಳಿಗೆ ಇಪ್ಪತ್ನಾಲ್ಕು ಗಂಟೆಗಳಲ್ಲಿ ಉತ್ತರಿಸ್ತೀವಿ ಅಂತಾರೆ; ಪ್ರಶ್ನೆ ಕೇಳಿದವ ಇನ್ನೊಂದು ಜನ್ಮ ಎತ್ತಿದರೂ ಉತ್ತರ ಬರೋದಿಲ್ಲ! ಗಂಡೆದೆ ಇದ್ದರೆ ತೊನೆಯಪ್ಪ ವಿದ್ವತ್ ಪರೀಕ್ಷೆಗೆ ತಯಾರಾಗಲಿ, ಈಗಲೂ ಪ್ರಶ್ನೆಕೇಳಲು ಯಾವ ತೊಂದರೆಯೂ ಇಲ್ಲ; ಕೇಳಲು ಹೋಗುವಾಗ ಪೋಲೀಸ್ ರಕ್ಷಣೆ ಬೇಕಾಗಬಹುದಷ್ಟೆ!:

ತನಗೆ ಸಿಗಬೇಕೆಂದು ಬಯಸುವ ಗೌರವ ಮತ್ತು ಅಲ್ಲಾಡಿಸುವ ಬಿರುದುಬಾವುಲಿಗಳ ಸಲುವಾಗಿ ತೊನೆಯಪ್ಪನವರಿಗೆ ಎಲ್ಲ ಪ್ರೊಟೋಕಾಲ್ ಗೊತ್ತಾಗುತ್ತದೆ; ಜನ ಹೀಗೇ ನಡೆದುಕೊಳ್ಳಬೇಕು ಅಂತ ಹೇಳ್ತಾನೆ. ಆದರೆ ಲಲನೆಯರ ಅಂಗಸಂಗಕ್ಕೆ ತೊಡಗುವಾಗ ಮಾತ್ರ ಮಠದ ಪ್ರೊಟೋಕಾಲ್ ಎಲ್ಲ ಮರೆತುಹೋಗುತ್ತದೆ; ಅವರಿಗೆಲ್ಲ ಏನು ಬೇಕಾದರೂ ಕೊಡಬಹುದಾಗುತ್ತದೆ! ಮಠಗಳ ಪ್ರೊಟೋಕಾಲ್ ಯತಿಯೆನಿಸಿದವ ಬಲವಾಗಿ ಹೇರುವುದಲ್ಲ; ಅದು ಅನಾಯಾಸವಾಗಿ ಜನರಿಂದ ತಂತಾನೇ ಪಾಲನೆಯಾಗಬೇಕು. ಹಾವಾಡಿಗ ಮಠದಲ್ಲಿ ಅದೆಲ್ಲ ಕಳೆದುಹೋಗಿ ಬಹಳ ವರ್ಷಗಳಾದವು. ದುಷ್ಟರಿಗೆ ಮೊದಲು ಕೈಮುಗಿ ಎಂಬ ಸುಭಾಷಿತದಂತೆ ಈಗ ನಡೆದುಕೊಳ್ಳುವವರೆಲ್ಲ ಕೇವಲ ಭಯದಿಂದ ಹಾಗೆ ನಡೆದುಕೊಳ್ತಿದ್ದಾರೆ.

ಒಂದು ಕಾಲದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆದುಕೊಳ್ಳುತ್ತಿದ್ದ ಜನರೇ ಇಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಕೊಟ್ಟಿದ್ದಾರೆ. ಯಾಕೆ ಕೊಟ್ಟರು? ಅವರಿಗೂ ಒಂದೆರಡು ಕೋಟಿಗಳನ್ನು ಪಡೆಯುವ ಆಸೆಯೇ? ಅಥವಾ ಪೀಠವನ್ನು ನುಂಗುವ ಇಚ್ಛೆಯೇ? ಅರ್ಜಿಯಲ್ಲಿ ಆಮ್ನಾಯ ಮಠದ ಕೆಳಹಂತದಲ್ಲಿ ತುಂಡುಮಠಗಳು ಬರುತ್ತವೆ ಎನ್ನಲಾಗಿದೆಯೇ ಹೊರತು ಪರಂಪರೆಗೆ ಸಂಬಂಧಿಸಿದ್ದಲ್ಲ ಎನ್ನಲಿಲ್ಲ ಎಂಬುದನ್ನು ತೊನೆಯಪ್ಪನ ಬಳಗ ಓದಿ ತಿಳಿದುಕೊಳ್ಳಬೇಕು.

ಈ ಜಗತ್ತಿನಲ್ಲಿ ಯಾವುದರಿಂದ ಸುಖ? ಚಂದದ ವಸ್ತು ಕಂಡರೆ ನಮ್ಮಲ್ಲಿರಲಿ ಎನ್ನುತ್ತೇವೆ; ಆ ವಸ್ತು ನಮ್ಮದಾದ ಕೆಲವು ಸಮಯ ಸುಖ, ಮತ್ತೆ ಮೊದಲಿನಂತೆ ಬೇರೊಂದರೆಡೆಗೆ ಮನಸ್ಸು. ಸುಶ್ರಾವ್ಯ ಸಂಗೀತ ಕೇಳಿಬರುತ್ತಿರುವಾಗ ಕಿವಿಗೆ ಅದೊಂದು ಸುಖ; ಅದೇ ರಾಗದ ಸಂಗೀತ ನಿತ್ಯವೂ ಕೇಳಿಬಂದರೆ ಕೊನೆಕೊನೆಗೆ ಅದೊಂದು ದುಃಖ! ನಾಲಿಗೆಗೆ ರುಚಿಯೆನಿಸಿದ್ದು ದೊರಕಿದಾಗ ಹೊಟ್ಟೆ ತುಂಬುವವರೆಗೆ ಅದೊಂದು ಸುಖ. ಹೊಟ್ಟೆ ಖಾಲಿಯಾದಾಗ ಮತ್ತೆ ದುಃಖ.

ದೂರದೊಂದು ತೀರದಿಂದ ತೇಲಿ ಪಾರಿಜಾತದ ಗಂಧ ಬಂದಾಗ ಮೂಗಿಗೆ ಸುಖ ಅಥವಾ ಘಮವನ್ನು ಪೂಸಿಕೊಂಡ ಲಲನೆಯರು ಹಾದುಹೋದಾಗ ಮೂಗರಳಿಸುವ ತೊನೆಯಪ್ಪನವರಿಗೆ ಸುಖ; ಮರುಕ್ಷಣ ಘಮ ನಿರ್ಗಮಿಸಿದ ಮೇಲೆ ಮತ್ತೆ ದುಃಖ. ಸುಂದರ ಹೆಣ್ಣುಗಳನ್ನು ಕಂಡ ತೊನೆಯಪ್ಪನಂತ ಗಂಡಸರಿಗೆ ಮನದಲ್ಲೇ ಮಿಲನ ಸುಖ-ನಂತರ ಸಾಮೀಪ್ಯ ಮತ್ತು ಸಂಭೋಗ ಸುಖ; ಅವರು ಸಂಭೋಗಕ್ಕೆ ಸಿಗದಾಗ ಮತ್ತೆ ದುಃಖ. ರೂಪ, ರಸ, ಗಂಧ, ಸ್ಪರ್ಶ, ಶ್ರವಣ ಯಾವುದರಲ್ಲೂ ಶಾಶ್ವತ ಸುಖವೆಂಬುದಿಲ್ಲ. ಹಾಗಾದರೆ ಸುಖವೆಲ್ಲಿದೆ?

ಆತ್ಮ ತನ್ನ ಮೂಲವನ್ನು ಹುಡುಕುತ್ತದಂತೆ. ನೀರಿನಿಂದ ಬೇರ್ಪಟ್ಟ ನೀರಿನ ಭಾಗ ಬೇರೆ ಬೇರೆ ಪಾತ್ರೆಗಳಲ್ಲಿ ಅದದೇ ಆಕಾರದಲ್ಲಿ ಕಂಡರೂ ಆಕಾರ ರಹಿತವಾದ ನೀರು ಅದರ ಮೂಲವನ್ನು ಸೇರಿದಾಗ ಅಲ್ಲಿರುವ ನೀರಿನೊಡನೆ ಸೇರಿಹೋಗುತ್ತದೆ. ಯಾವುದೇ ಮೂಲವಸ್ತುವನ್ನು ತೆಗೆದುಕೊಂಡರೂ ಅದರಿಂದುಂಟಾಗುವ ರೂಪಾಂತರಗಳು ಹಲವು. ಲೋಹಗಳಿರಲಿ, ಪ್ಲಾಸ್ಟಿಕ್ ಇರಲಿ, ಗ್ರಾಫೈಟ್ ಇರಲಿ ಅಥವಾ ಸಹಜವಾಗಿ ಸಿಗುವ ಮಣ್ಣೇ ಇರಲಿ, ಕೈಗಾರಿಕೆಯಿಂದ ರೂಪಾಂತರಗೊಂಡಾಗ ಹಲವು ರೀತಿಯಲ್ಲಿ ಗೋಚರವಾಗುತ್ತದೆ; ಆದರೆ ಮೂಲ ಒಂದೇ.

ಪರಮಾತ್ಮನಿಂದ ಭಿನ್ನಗೊಂಡು ಹೊರಟು ಜೀವಾತ್ಮಗಳಾಗಿ ಮಿಥ್ಯಾ ಪ್ರಪಂಚದಲ್ಲಿ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವ ಆತ್ಮಗಳೆಲ್ಲ ತಮ್ಮ ಮೂಲವನ್ನು ಹುಡುಕುತ್ತವಂತೆ. ಮೂಲದಲ್ಲಿ ಸಿಗುವ ಸುಖವೇ ಶಾಶ್ವತ ಸುಖ; ಅದು ಇಲ್ಲಿ ನಾವು ಅಳೆಯುವ ರೂಪ, ರಸ, ಗಂಧ, ಸ್ಪರ್ಶ, ಶ್ರವಣಕ್ಕೆ ಸಂಬಂಧಿಸಿದ ಸುಖವಲ್ಲ; ಅದು ಅವರ್ಣನೀಯ ಸುಖ; ಆತ್ಮ ಪರಮಾತ್ಮವಾಗುವ ಸುಖ. ಅಲ್ಲಿಯವರೆಗೂ ಮಾರ್ಗದಲ್ಲಿ ಸಿಗುವ ಪಂಚೇಂದ್ರಿಯಗಳ ಮೂಲಕ ಸುಖವನ್ನು ಹುಡುಕುತ್ತದಂತೆ-ಆತ್ಮ.

ಭಗವಂತನೆಲ್ಲಿದ್ದಾನೆ? ಜೀವಿಯ ದೇಹಗಳಲ್ಲಿ ಆಹ್ರಯ ಪಡೆದ ಆತ್ಮಕ್ಕೆ ಪರಮಾತ್ಮನಿರುವ ಸ್ಥಳ ಮರೆತುಹೋಗುತ್ತದಂತೆ. ಮಳೆಗಾಲದ ದಟ್ಟ ಮೋಡಕವಿದ ವಾತಾವರಣದಲ್ಲಿ ಸೂರ್ಯದರ್ಶನವೆಂಬುದು ಹೇಗೆ ಕಷ್ಟವೋ ಹಾಗೆಯೇ ದಟ್ಟವಾಗಿ ಭ್ರಾಂತಿಯ ಮಂಜುಮುಸುಕಿರುವುದರಿಂದ ಆತ್ಮಕ್ಕೆ ಈ ಪ್ರಪಂಚದ ಮೇಲೆಯೇ ವ್ಯಾಮೋಹವಂತೆ. ಈ ಪರಿಧಿಯನ್ನು ಹರಿದು, ತೊರೆದು, ಹೊರಹೋಗಲು ಅದು ಯೋಚಿಸುವುದೇ ಇಲ್ಲವಂತೆ. ಗಂಡ, ಹೆಂಡತಿ, ಮನೆ, ಮಕ್ಕಳು, ಅಮ್ಮ, ಅಪ್ಪ, ಅಕ್ಕ, ತಂಗಿ, ಬೆಳ್ಳಿ, ಬಂಗಾರ ಎಲ್ಲದರಲ್ಲೂ ಅದಕ್ಕೆ ಆಸಕ್ತಿ; ಭಗವಂತನೆಡೆಗೆ ತೆರಳಲು ನಿರಾಸಕ್ತಿ ಏಕೆಂದರೆ ಇಲ್ಲಿ ಇವುಗಳನ್ನೆಲ್ಲ ಬಿಟ್ಟು ಅಲ್ಲಿಗೆ ಹೋದರೆ ಇದೆಲ್ಲ ತಪ್ಪಿಹೋಗುವುದಲ್ಲ ಎಂಬ ವ್ಯಾಮೋಹ.

ಕೃತಕ ಉಪಗ್ರಹವನ್ನು ಆಕಾಶಕ್ಕೆ ಕಳಿಸುವಾಗ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಮೀರಿ ಹಾರಬಲ್ಲ ರಾಕೆಟ್ ಬಳಸಲಾಗುತ್ತದಲ್ಲ? ಅಂತಹ ಸಚ್ಚಾರಿತ್ರ್ಯ ಮತ್ತು ತಪಸ್ಸಿನ ರಾಕೆಟ್ ಇಲ್ಲಿನ ವ್ಯಾಮೋಹವನ್ನು ಕಡಿದುಕೊಳ್ಳುವಾಗ ಬೇಕಾಗುತ್ತದೆ. ಇಂಥದ್ದೊಂದು ವ್ಯಾಮೋಹವನ್ನು ಕಳಚಿಕೊಳ್ಳುವುದೇ ಮೋಕ್ಷ ಅಥವಾ ಅದೇ ಜೀವನ್ಮುಕ್ತಿ.

ನಾನು ಅವನಲ್ಲದೇ ಬೇರಲ್ಲ. “ಅಹಂ ಬ್ರಹ್ಮಾಸ್ಮಿ” ಅಂದು ಶಂಕರರು ಹೇಳಿದ್ದು ಅದಕ್ಕೇ. ಇಲ್ಲೆಲ್ಲೋ ಎಣ್ಣೆಕುಡಿದವನೂ ಅದನ್ನು ಬಾಹ್ಯವಾಗಿ ಹೇಳಬಹುದು; ಆದರೆ “ಅಹಂ ಬ್ರಹ್ಮಾಸ್ಮಿ” ಎನ್ನಲು ಬೇಕಾದ ಅರ್ಹತೆಗಳೇನು? ಅದರ ಔಚಿತ್ಯವನ್ನು ತಿಳಿದುಕೊಳ್ಳಬೇಕು. ಅದು ಅನೇಕವಲ್ಲ ಏಕ-ಹಾಗಾಗಿಯೇ ಅದು ಅದ್ವೈತ. ನೋಡುವುದಕ್ಕೆ ನಾವು ನೀವೆಲ್ಲರೂ ಬೇರೆ ಬೇರೆ, ಆದರೆ ನಮ್ಮೊಳಗಿನ ಆತ್ಮಗಳ ಮೂಲಮಾತ್ರ ಒಂದೇ. ನಾನು ಇನ್ನೊಬ್ಬನಿಗೆ ಮೋಸ ಮಾಡೋದು ನನಗೇ ನಾನು ಮೋಸಮಾಡಿಕೊಂಡಂತೆ ಎಂದು ಸನಾತನ ಧರ್ಮ ಹೇಳುತ್ತದೆ.

ಹೇಗೂ ಮೋಸಮಾಡುವುದು ಇದ್ದಿದ್ದೇ, ಅಂದಮೇಲೆ ಆತ್ಮವಂಚನೆ ಮಾಡಿಕೊಳ್ಳೋದರಲ್ಲಿ ತಪ್ಪೇನಿದೆ ಎಂದುಕೊಂಡವರು ಜಗದ್ಗುರು ತೊನೆಯಪ್ಪಾಚಾರ್ಯರು. ಹಾಗಾಗಿ ಅವರು ಹಲವು ಮಹಿಳೆಯರನ್ನು ಭೋಗಿಸಿದರು ಮತ್ತು “ನಾವು ಹಾಗಲ್ಲ” ಅಂತ ಕುಳ್ಳ ಬಾವಯ್ಯನೊಡನೆ ಸೇರಿ ಪೀಠದ ಮೇಲೆ ಕುಳಿತೇ ಅಪ್ಪಟ ಸುಳ್ಳುಗಳನ್ನು ಹೇಳುತ್ತ ಬಂದರು.

ಶಂಕರರಿಗೆ ಹೋದಲ್ಲೆಲ್ಲ ಮಠಗಳನ್ನು ಸ್ಥಾಪಿಸುವುದೇ ಕೆಲಸವಾಗಿರಲಿಲ್ಲ; ಅವರ ಉದ್ದೇಶವೇ ಬೇರೆ, ಇಂದು ನಡೆಯುತ್ತಿರುವುದೇ ಬೇರೆ. ಅವರು ಸ್ಥಾಪಿಸಿದ್ದು ಕೇವಲ ನಾಲ್ಕು ಆಮ್ನಾಯ ಮಠಗಳನ್ನು ಮಾತ್ರ. ಉಳಿದ ಮಠಗಳೆಲ್ಲ ಕಾಲಕಾಲಕ್ಕೆ ಆಯಾ ಪ್ರದೇಶಗಳ ಮುಖಂಡರಿಗೆ ಬೇಕಾಗಿ ಊರ್ಜಿತಾವಸ್ಥೆಗೆ ಬಂದವು.

ಮೈಸೂರು ಅರಸರು ಹಿಂದೆ ಇಂತಹ ತುಂಡುಮಠಗಳ ಸನ್ಯಾಸಿಗಳ ಹಾರಾಟಗಳನ್ನು ನಿಲ್ಲಿಸಿ ಎಂದು ಆಜ್ಞೆ ಹೊರಡಿಸಿದ್ದು ಎಂಬತ್ತರ ದಶಕದಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಮತ್ತು ಅದು ನಿಜವೂ ಹೌದು. ಮೂಲ ಪರಂಪರೆಗೆ ತಿರುಮಂತ್ರ ಹಾಕಿದ್ದರ ಜೊತೆಗೆ ಅವರನ್ನೂ ಮೀರಿಸಿ ಹಾರಲು ಮುಂದಾದರೆ ಇದೇ ಗತಿ ಬರುತ್ತದೆ ಎಂಬುದನ್ನು ಉಳಿದ ತುಂಡುಮಠಗಳವರೆಲ್ಲ ಗಮನಿಸಬೇಕು.

ತುಂಡುಮಠಗಳಲ್ಲಿ ಅವರು ಪರಂಪರೆ ಹೇಳುವಾಗ ಶಂಕರರ ಹೆಸರನ್ನು ತೆಗೆದುಬಿಡಿ, ಆಗ ಯಾವ ಬೆಲೆ ಸಿಗುತ್ತದೆ ನೋಡಿ! ರಾಜಪ್ರಭುತ್ವದ ಸಮಯದಲ್ಲಿ ಹಲವು ಗ್ರಾಮಗಳಲ್ಲಿ ಅಲ್ಲಲ್ಲಿ ಮರಿಪುಢಾರಿಗಳು ಇರುತ್ತಿದ್ದರು. ಆಮ್ನಾಯ ಮಠದಲ್ಲಿ ತಮಗೆ ಗೌರವ ಸಿಗುತ್ತಿಲ್ಲ ಅಂತಲೋ ಅಥವಾ ಆ ಮಠದ ಗುರುಗಳು ತಾವು ಹೇಳಿದಂತೆ ನಡೆದುಕೊಳ್ಳುವುದಿಲ್ಲ ಅನ್ನೋದಕ್ಕೋ, ಆಹಂಕಾರಕ್ಕೆ ಧಕ್ಕೆ ಬಂದಾಗ ತುಂಡುಮಠಗಳನ್ನು ಸ್ಥಾಪಿಸಿದವರು ಅಂತಹ ಜನಗಳು.

ಶಂಕರರೇ ಅವುಗಳನ್ನೆಲ್ಲ ಸ್ಥಾಪಿಸಿದರು ಎನ್ನಲಿಕ್ಕೆ ಯಾವ ಆಧಾರಗಳೂ ಇಲ್ಲ. ಮೇಲಾಗಿ, ಶಂಕರರು, ಮಠಗಳ ಸಂಖ್ಯೆಯನ್ನು ಜನಸಂಖ್ಯೆಗಿಂತ ಹೆಚ್ಚಿಗೆ ಮಾಡುವಷ್ಟು ಮೂರ್ಖರಾಗಿರಲಿಲ್ಲ. ಹಾಗಿದ್ದರೆ ಅವರು ತತ್ತ್ವಜ್ಞಾನಿ ಎಂದು ಗುರುತಿಸಲ್ಪಡುತ್ತಿರಲಿಲ್ಲ. ಧರ್ಮ-ಅಧರ್ಮಗಳ ಅಂತರ ಜನರಿಗೆ ತಿಳಿಯಬೇಕು, ಧರ್ಮದ ಹೆಸರಿನಲ್ಲಿ ಕುರುಡು ಸಂಪ್ರದಾಯಗಳು ಆಚರಣೆಯಲ್ಲಿರಬಾರದು. ಮತ್ತು ಅಂದು ಹಲವು ಕಡೆಗೆ ಅತಿಯಾಗಿ ಬಳಕೆಯಲ್ಲಿದ್ದ ಪ್ರಾಣಿಬಲಿಗಳು ಇನ್ನೂ ಕೆಲವು ಕಡೆ ಮಾನವಬಲಿಗಳು ನಡೆಯಬಾರದು ಎಂಬುದು ಅವರ ಉದ್ದಿಶ್ಯವಾಗಿತ್ತು.

ಜೊತೆಗೆ ಸನಾತನ ಧರ್ಮವು ವೈದಿಕಮಯವಾಗಿದೆ; ಅದು ವೇದಗಳನ್ನೇ ಆಧರಿಸಿದೆ ಎಂಬುದನ್ನು ಜನರೆಲ್ಲ ಅರಿಯಬೇಕಾಗಿತ್ತು. ಶಂಕರರು ಬರುವುದಕ್ಕೂ ಮುನ್ನ ವೇದಗಳೆಲ್ಲ ಅಪಮೌಲ್ಯಕ್ಕೆ ಒಳಗಾಗಿದ್ದವು. ಯಾವುದು ಯಾವ ವೇದ ಮತ್ತು ಅವುಗಳನ್ನು ಹೇಗೆ ಬಳಸಬೇಕು ಎಂಬುದನ್ನು ಹಲವು ಜನ ಹಲವು ರೂಪದಲ್ಲಿ ಹೇಳುತ್ತಿದ್ದರು. ಯಾವುದು ಸತ್ಯ ಮತ್ತು ಯಾವುದು ಅಸತ್ಯ ಎಂಬುದನ್ನು ಜನತೆ ಅರಿತುಕೊಳ್ಳಬೇಕಾಗಿತ್ತು. ಅದಕ್ಕಾಗಿಯೇ ಶಂಕರರು ಅವರ ಮೂವತ್ತೆರಡು ವರ್ಷಗಳ ಜೀವಿತಾವಧಿಯೊಳಗೆ 153 ಕೃತಿಗಳನ್ನು ರಚಿಸಿದರು.

ಧರ್ಮದ ಪುನರುಜ್ಜೀವನಕ್ಕೆ ಅವರು ಆಯ್ದುಕೊಂಡದ್ದು-ವೇದಗಳು ಅಥವಾ ವೇದಾಂತಗಳು, ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಈ ಮೂರನ್ನು ಮಾತ್ರ. ಇವುಗಳನ್ನೆ ಪ್ರಸ್ಥಾನತ್ರಯಗಳು ಎನ್ನಲಾಗುತ್ತದೆ. ಶ್ರುತಿ ಮತ್ತು ಸ್ಮೃತಿಗಳಲ್ಲಿ ಶ್ರುತಿಯೇ ಪ್ರಮಾಣಬದ್ಧ ಎಂದು ಮೀಮಾಂಸಕರು ನಿರ್ಧರಿಸಿದ್ದರಿಂದ ಶ್ರುತಿಯೆನಿಸಿದ ವೇದಗಳನ್ನೇ ಪ್ರಧಾನವಾಗಿಟ್ಟುಕೊಂಡರು.

ವಿಪರ್ಯಾಸವೆಂದರೆ ಇಂದು ಜೈಕಾರ ಕೂಗುವ ಹಲವು ಜನರಿಗೆ ಶಂಕರರ ಕಾಲಮಾನವಾಗಲೀ, ಅವರ ಕೃತಿಗಳಾಗಲೀ ಗೊತ್ತಿಲ್ಲ. ಪ್ರಸ್ಥಾನತ್ರಯಗಳ ಬಗ್ಗೆ ಅಸಕ್ತಿಯಿಲ್ಲ; ಸ್ವತಃ ತೊನೆಯಪ್ಪಾಚಾರ್ಯರೇ ಭಗವದ್ಗೀತೆಯ ಒಂದೆರಡು ಶ್ಲೋಕಗಳನ್ನು ಹೇಳುವಾಗ ಪುಸ್ತಕ ಇರಿಸಿಕೊಂಡೇ ಹೇಳುತ್ತಾರೆ ಮತ್ತು ಅಲ್ಲಿ ಕೊಟ್ಟಿರುವ ಕನ್ನಡದ ಅರ್ಥಬಿಟ್ಟರೆ ವಿಸ್ತಾರವಾದ ಅರ್ಥ ಅವರಿಗೂ ಗೊತ್ತಿಲ್ಲ! ಹಲವು ಹೆಣ್ಣುಮಕ್ಕಳನ್ನು ಮದುವೆಗೆ ಮೊದಲೇ ಸಂಭೋಗಿಸಿ ಅವರ ಪ್ರಸ್ಥವನ್ನೆ ಕದ್ದಿದ್ದರಿಂದ ಶೀಗಳಿಗೆ “ಮಹಾಪ್ರಸ್ಥಾಚಾರ್ಯ” ಎಂಬ ಬಿರುದು ಅಘೋಷಿತವಾಗಿ ದೊರಕಿಬಿಟ್ಟಿದೆ!

ರಾಜಕೀಯ ಹೇಳಿ ಗೊತ್ತು, ಸಿನಿಮಾ ಹೇಳಿ ಗೊತ್ತು, ಸಿನಿಮಾ ನಟಿಯರ ಬಗ್ಗೆ ಹೇಳಿ-ಎಳೆ ಎಳೆಯಾಗಿ ಅವರ ರಾಸಲೀಲೆಗಳ ಬಗ್ಗೆ ಮಾತನಾಡ್ತಾರೆ. ಆದರೆ ಧರ್ಮಸಂಸ್ಥಾನದಲ್ಲಿ ಸೇರಿಕೊಂಡ ಈ ಲಂಪಟರಿಗೆ ದೇವರು ಮತ್ತು ಧರ್ಮ ಎಂಬುದು ದುಡ್ಡುಮಾಡುವ ದಂದೆಯಾಗಿದೆ! ತುಂಡು ಮಠಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಿಗೆ ಆಮ್ನಾಯ ಮಠಗಳವರು ಅನಗತ್ಯವಾಗಿ ಹೋಗೋದಿಲ್ಲ; ಅಲ್ಲಿ ಹೇಗೂ ಅವರಿದ್ದಾರಲ್ಲ ಅಂತ ಸುಮ್ಮನಾಗ್ತಾರೆ.

ತುಂಡುಮಠಗಳ ಪೈಕಿ ಸದ್ಯ ಉರಿಯುತ್ತಿರುವ ಹಾವಾಡಿಗ ಮಹಾಸಂಸ್ಥಾನದ ಶೋಭರಾಜಾಚಾರ್ಯರಿಗೆ ಪ್ರಸ್ಥಾನತ್ರಯಗಳನ್ನು ಬೋಧಿಸುವ ಆಸಕ್ತಿಯಿಲ್ಲ ಏಕೆಂದರೆ ಹಾಗಂದರೇನೆಂದೇ ಅವರಿಗಿನ್ನೂ ಅರ್ಥವಾಗಲಿಲ್ಲ!! “ವಾತ್ಸಾಯಾನನ ಕಾಮಸೂತ್ರದ ಬಗ್ಗೆ ಪ್ರವಚನ ಮಾಡಿ ಮಹಾಸ್ವಾಮಿಗಳೆ” ಅಂದರೆ ಸವ್ಯಸಾಚಿ ಎನಿಸುವಂತೆ ಅಥವಾ ಅದ್ವಿತೀಯ ಎನಿಸುವಂತೆ ಪ್ರವಚನ ಮಾಡಬಲ್ಲರು ಅವರು. ಯಾಕೆಂದರೆ ಯಾವ ಹೆಂಗಸರನ್ನೆಲ್ಲ ಅವರ ಗಂಡಂದಿರು ಎಷ್ಟೆಲ್ಲ ನೋಡಬೇಕೋ ಅದಕ್ಕಿಂತ ಹೆಚ್ಚಿಗೆ ನೋಡಿದ, ಭೋಗಿಸಿದ ಕಾಮಧುರಂಧರರು ಅವರು.

ಗಿಳಿಯ ಮರಿಯನು ತಂದು ಪಂಜ
ರದೊಳಗೆ ಪೋಷಿಸಿ, ಕಲಿಸಿ ಮೃದು ನುಡಿ
ಗಳನು ಲಾಲಿಸಿ ಕೇಳ್ವ ಪರಿಣಿತರಂತೆ ನೀನೆಮಗೆ !
ತಿಳುಹಿ ಮತಿಯನು ಎನ್ನ ಜಿಹ್ವೆಗೆ
ಮೊಳಗುವಂದದಿ ನಿನ್ನ ನಾಮಾ
ವಳಿಯ ಪೊಗಳಿಕೆಯಿತ್ತು ರಕ್ಷಿಸು ನಮ್ಮನನವರತ ||

ಒಡಹುಟ್ಟಿದ ಗಿಳಿಗರೆಡರಲ್ಲಿ ಕಟುಕನ ಮನೆ ಸೇರಿದ್ದೊಂದು, ತಾಪಸರ ಮನೆಗೆ ಸೇರಿದ್ದಿನ್ನೊಂದು. ಕಟುಕ ಸಾಕಿದ ಗಿಳಿ ಯಾರೇ ಬಂದರೂ “ಕೊಚ್ಚು”, “ಕಡಿ”, “ಕತ್ತರಿಸು” ಎಂದುಲಿಯುತ್ತಿತ್ತು; ತಾಪಸರ ಆಶ್ರಮವಾಸಿಯಾದ ಗಿಳಿ ಯಾರೇ ಬಂದರೂ “ಬನ್ನಿ”, “ಕುಳಿತುಕೊಳ್ಳಿ”, “ಇನ್ನೇನು ಗುರುಗಳು ಬರುತ್ತಾರೆ ಅಲ್ಲಿಯತನಕ ವಿಶ್ರಮಿಸಿ” ಎನ್ನುತ್ತಿತ್ತು. ಎರಡರ ಉಲಿಯುವಿಕೆಯಲ್ಲಿ ಅವುಗಳಿಗೆ ದೊರಕಿದ ಸಂಸ್ಕಾರ ಎಂಥದ್ದು ಎಂಬುದು ಸ್ಪಷ್ಟವಾಗುತ್ತದೆ.

ಹಾವಾಡಿಗ ಮಠದಲ್ಲಿ ಅವರವರೊಳಗೆ ರಾಮನ ಹೆಸರುಗಳನ್ನು ಸಿಕ್ಕಸಿಕ್ಕಲ್ಲೆಲ್ಲ ಬಳಸುತ್ತಾರೆ. ಅಧರ್ಮ ನಡೆಯುವುದನ್ನು ಪ್ರಶ್ನಿಸಲು ಯಾರಾದರೂ ಹೋದರೆ ಅಲ್ಲಿರುವವರೆಲ್ಲ ಕಟುಕ ಸಾಕಿದ ಗಿಳಿಗಳಂತೆ ವರ್ತಿಸುವುದನ್ನು ವಾಹಿನಿಯೊಂದರಲ್ಲಿ ಕಣ್ಣಾರೆ ಕಂಡಿದ್ದೀರಲ್ಲವೇ?

ಹಲವು ಶಿಷ್ಯಂದಿರಿಗೆ ಬಾಳೆಯ ಹಣ್ಣುಗಳನ್ನು ಕೊಟ್ಟು, ಯಾರೂ ಕಾಣದ ಜಾಗದಲ್ಲಿದ್ದು ತಿಂದು ಬರುವಂತೆ ಸೂಚಿಸಿದಾಗ ಮಿಕ್ಕ ಶಿಷ್ಯಶಿರೋಮಣಿಗಳೆಲ್ಲ, ಬಾಗಿಲ ಮರೆಯಲ್ಲಿ, ಬಾವಿಕಟ್ಟೆಯ ಸಂದಿಯಲ್ಲಿ, ಮರದ ಹಿಂದುಗಡೆಯಲ್ಲಿ, ಕೋಣೆಯೊಳಗಡೆಗೆ ಹೀಗೆಲ್ಲ ಅಡಗಿಕೊಂಡು ತಿಂದು ಬಂದರು. ಕನಕ ಮಾತ್ರ ಹಾಗೇ ತಂದ.”ಯಾಕಪ್ಪಾ ಕನಕ? ತಿನ್ನಲಿಲ್ಲವೇ? ಯಾರೂ ಕಾಣದ ಜಾಗ ಸಿಗಲೇ ಇಲ್ಲವೇನೋ?”-ಪ್ರಶ್ನಿಸಿದರು ಗುರುಗಳು. “ಬ್ರಹ್ಮಾಂಡದಲ್ಲಿ ಸರ್ವವ್ಯಾಪಿಯಾದ ಭಗವಂತ ಇರುವಾಗ ಅವನ ಕಣ್ತಪ್ಪಿಸಿ ಹೇಗೆ ತಿನ್ನಲಿ ಗುರುಗಳೇ? ಇಲ್ಲಿ ಯಾರಿಗೆ ಎಷ್ಟೆಷ್ಟು ಜ್ಞಾನ, ಸ್ವಯಂಪ್ರಜ್ಞೆ ಮತ್ತು ಯಾರಿಗೆ ಎಷ್ಟೆಷ್ಟು ಭಾವನೆಗಳಿವೆ ಎಂಬುದು ಗೊತ್ತಾಗುತ್ತದೆ.

ದೀನ ನಾನು ಸಮಸ್ತ ಲೋಕಕೆ
ದಾನಿ ನೀನು ವಿಚಾರಿಸಲು ಮತಿ-
ಹೀನ ನಾನು ಮಹಾಮಹಿಮ ಕೈವಲ್ಯ ಪತಿ ನೀನು |
ಏನ ಬಲ್ಲೆನು ನಾನು? ನೆಲೆಸು-
ಜ್ಞಾನ ಮೂರುತಿ ನೀನು ನಿನ್ನ ಸ-
ಮಾನರುಂಟೇ ದೇವ ರಕ್ಷಿಸು ನಮ್ಮನನವರತ ||

“ಮತಿಹೀನನಾಗಿ ಅಂಡಲೆಯುತ್ತಿದ್ದ ನನ್ನನ್ನು ಗಿಳಿಯ ಮರಿಯನ್ನು ಪಂಜರದೊಳಗಿಟ್ಟು ಪೋಷಿಸುತ್ತ ಮೃದುನುಡಿಗಳನ್ನಾಡಲು ಕಲಿಸಿ, ಕೇಳಿ, ಆನಂದಿಸುವ ಆನಂದಘನ ಪರಮಾತ್ಮನೇ, ದೀನನಾದ ನನಗೆ ಮೋಕ್ಷವನ್ನು ಅನುಗ್ರಹಿಸುವ ದಾನಿ ನೀನಪ್ಪಾ, ಅಷ್ಟಾಗಿ ನಾನೇನು ಬಲ್ಲೆ? ಇಂತಹ ನನ್ನಲ್ಲಿ ನೆಲೆಸಿ ನಮ್ಮನ್ನೆಲ್ಲ ರಕ್ಷಿಸು” ಎಂದು ಬೇಡಿದ ಕನಕರ ಭಾವತಲ್ಲೀನತೆಯಲ್ಲಿ ಅದೆಷ್ಟು ವಿನಮ್ರ ನಡೆಯಿದೆ ಎಂಬುದನ್ನು ಹೃದಯವಂತರಾದ ನೀವೆಲ್ಲ ಬಲ್ಲಿರಷ್ಟೇ?

ಯಾರೂ ಕಾಣದ ಜಾಗದಲ್ಲಿ ಕಿಟಕಿ ಬಾಗಿಲುಗಳನ್ನೆಲ್ಲ ಮುಚ್ಚಿ ತೊನೆಯಪ್ಪ ಶೀಗಳು ಏಕಾಂತ ನಡೆಸಿದ್ದರು, ನಡೆಸುತ್ತಿದ್ದಾರೆ, ಹಾಗೇ ಬಿಟ್ಟರೆ ನಡೆಸುತ್ತಲೇ ಇರ್‍ತಾರೆ. ಅವರ ಕಾಮಲೀಲೆಗಳು ಭಗವಂತನ ಕಣ್ಣಿಗೂ ಕಾಣಲಾರದು ಅಂದುಕೊಂಡಿದ್ದಾರೆ. “ಅನೈತಿಕ ಸಂಬಂಧ”ವೆಂದಾಗ ಕಾನೂನಿನ ಪ್ರಕಾರ ಪ್ರತಿರೋಧಿಸಲೂ ಇಲ್ಲ, ಮಾನಹಾನಿ ಕೇಸು ದಾಖಲಿಸಲೂ ಇಲ್ಲ! ಯಾವುದನ್ನು ಕೈಗೆತ್ತಿಕೊಂಡರೂ ಸಾರ್ವಜನಿಕರೆದುರು ಇಡಿಯಾಗಿ ಕಚ್ಚೆಬಿಚ್ಚಿಸಿ ಎಲ್ಲಾ ಪರೀಕ್ಷೆಗಳನ್ನೂ ಹೊಸದಾಗಿ ನಡೆಸುತ್ತಾರೆಂದು ಚಂಬು, ಲೋಟಗಳು ಸಾರಿದ ಮೇಲೆ ಮಹಾಸ್ವಾಮಿಗಳು ತಣ್ಣಗಾಗಿದ್ದಾರೆ!

ಒಪ್ಪಿಕೊಳ್ಳೋಣ, ಏನೋ ಆ ಕಾಲಕ್ಕೆ ಮಠಮಾನ್ಯಗಳನ್ನು ಕಟ್ಟುವ ಹುಚ್ಚು, ಊರಿಗೆ ಹದಿನಾರು ದೇವಸ್ಥಾನಗಳನ್ನು ಕಟ್ಟುವ ಹುಚ್ಚು ಎಲ್ಲವೂ ನಮ್ಮ ಕೆಲವು ಮುಖಂಡರಲ್ಲಿತ್ತು. ಅಂತಹ ಕೆಲಸಗಳಲ್ಲಿ ತೊಡಗಿಕೊಂಡು ಅವರು ತಮ್ಮ ಹೆಚ್ಚುಗಾರಿಕೆಯನ್ನು ತೋರಿಸಿಕೊಳ್ಳುತ್ತಿದ್ದರು. ಅದೇನೇ ಇದ್ದರೂ, ಇಂದಿನ ದಿನಮಾನದಲ್ಲಿ ತುಂಡು ಮಠದಲ್ಲಿ ಪೀಠಾರೂಢರಾಗುವ ಸನ್ಯಾಸಿಗಳು ತಮಗೆ ಸಂಬಂಧಿಸುವ ಪ್ರಧಾನ ಆಮ್ನಾಯ ಮಠ ಯಾವುದೆಂಬುದನ್ನು ತಿಳಿದು, ಒಪ್ಪಿಕೊಂಡು, ಅಲ್ಲಿನವರ ಮಾರ್ಗದರ್ಶನಗಳನ್ನು ಪಡೆದುಕೊಳ್ಳುತ್ತ ನಡೆದರೆ ಇಂತಹ ಪರಿಸ್ಥಿತಿಗಳು ಬರುತ್ತಿರಲಿಲ್ಲ.

ತುಂಡುಮಠದ ತೊನೆಯಪ್ಪನವರಿಗೆ ತಲೆಗಿಂತ ಮುಂಡಾಸು ದೊಡ್ಡದಾಗಿ, ಸುಂದರಿಯರೆದುರು ದೇಹವೆಲ್ಲ ತೂಗಿ, ಆಮ್ನಾಯ ಮಠಕ್ಕೂ ನಮಗೂ ಸಂಬಂಧವೇ ಇಲ್ಲ, ನಾವೇ ಬೇರೇ, ನಮ್ಮ ಸ್ಟೈಲೇ ಬೇರೆ ಅನ್ನೋ ಹಾಗೆ ವರ್ತಿಸತೊಡಗಿದರು. ಹಿಂದೆ ಹಲವು ಲೇಖನಗಳಲ್ಲಿ ತುಮರಿ ಹೇಳುತ್ತ ಬಂದಂತೆ ಮಠದಲ್ಲಿ ವಿದ್ವತ್ತಿಗಿಂತ ರಾಜಕೀಯ ಮತ್ತು ಸಾಮಾಜಿಕ ಕೆಲಸಗಳಿಗೆ ಹೆಚ್ಚಿನ ಗಮನ ನೀಡುತ್ತೇವೆ ಎಂದರು, ತಪಸ್ಸು, ಕಾಲಕ್ಕೆ ಸರಿಯಾದ ಪೂಜೆ ಇವುಗಳಿಗೆಲ್ಲ ತಿಲಾಂಜಲಿ ಇತ್ತರು.

ದುಡ್ಡುಕೊಡುತ್ತೇನೆ ಎಂದ ಶ್ರೀಮಂತರ ಮುಂದೆ ಅಗತ್ಯಕ್ಕಿಂತ ಅತಿಯಾಗಿ ಹಲ್ಲುಕಿಸಿದು ಅವರಿಂದಲೂ, ಸನ್ಯಾಸಿ ಪೂಜಿಸುವ ದೇವವಿಗ್ರಹಗಳಿಗೆ ಪೂಜೆ ಮಾಡಿಸಿದರು. ಇದನ್ನೆಲ್ಲ ಮೂಕಪ್ರೇಕ್ಷಕನಾಗಿ ನೊಡುತ್ತಿದ್ದ ವಿಗ್ರಹದೊಳಗಿನ ದೇವರು ಈ ಜಾಗ ತನಗೆ ಸರಿಯಲ್ಲವೆಂದು ಹೊರಟ. ಭಿನ್ನವಾದ ವಿಗ್ರಹಗಳನ್ನು ವಿಸರ್ಜಿಸುವಾಗ ವಿಶಿಷ್ಟ ಅಂತ್ಯವಿಧಿಗಳನ್ನು ನಡೆಸುತ್ತಾರೆ. ಯಾಕೆಂದರೆ ಇಲ್ಲಿಯವರೆಗೆ ಅದರಲ್ಲೊಂದು ಚೇತನವಿತ್ತು, ಅದೀಗ ಬಿಟ್ಟು ಬೇರೆಡೆಗೆ ಆಶ್ರಯ ಪಡೆಯಿತು ಎಂದರ್ಥ. ಹಾಗಾದರೆ ವಿಗ್ರಹಗಳಲ್ಲಿ ಚೇತನವಿರುತ್ತದೆ ಎಂಬುದು ಸ್ಪಷ್ಟವಾಗುತ್ತದಲ್ಲವೇ?

ನಾವು ವೇದೋಕ್ತವಾಗಿ ಬಳಸುವ ಮಂಡಲಗಳು, ಕಲಶಗಳು ಮತ್ತು ಆಗಮೋಕ್ತವಾಗಿ ಬಳಸುವ ಪ್ರತಿಮೆಗಳು[ಸಾಲಿಗ್ರಾಮ, ಬಾಣಲಿಂಗ ಇತ್ರಾದಿ], ವಿಗ್ರಹಗಳು, ಚಿತ್ರಪಟಗಳು ಎಲ್ಲದರಲ್ಲಿಯೂ ಅದೇ ಚೇತನವನ್ನು ನಾವು ಆವಾಹಿಸುತ್ತೇವಷ್ಟೇ? ಆವಾಹನೆಯ ಹಿಂದೊಂದು ಭಾವನೆಯಿದೆ, ಭಕ್ತಿಯಿದೆ, ಅದರ ಮೂಲದಲ್ಲಿ ಶ್ರದ್ಧೆಯಿರುತ್ತದೆ. ಯಾವುದೇ ಭಾವನೆ-ಭಕ್ತಿಗಳಿಲ್ಲದೆ ಢಾಂಬಿಕ ಪೂಜೆ ಮಾಡಿದರೆ ಅದರಿಂದೇನು ಫಲ?

ನಂದಿಯನು ಏರಿದನ | ಚಂದಿರನ ಸೂಡಿದನ |
ಕಂದನ ಬೇಡಿ ನಲಿದಾನು ನೆನೆವುತ್ತ |
ಮುಂದೆ ಪೇಳುವೆನು ಸರ್ವಜ್ಞ||

ಅಪ್ಪ ಪರಶಿವ ಮತ್ತು ಮಗ ಗಣಪ ಇಬ್ಬರನ್ನೂ ನೆನೆಯುತ್ತ ಮುಂದುವರಿಯುತ್ತೇನೆನ್ನುವ ಸರ್ವಜ್ಞನ ಸರಳ ಕವಿತ್ವಕ್ಕೆ ತುಮರಿ ಮನಸೋತಿದ್ದಾನೆ.

ಊರಿಂಗೆ ದಾರಿಯನು | ಆರು ತೋರಿದಡೇನು |
ಸಾರಾಯದ ನಿಜವ ತೋರುವ ಗುರುವು ತಾ |
ನಾರಾದಡೇನು ಸರ್ವಜ್ಞ ||

ಸಾಸಿವೆಗಳಲ್ಲಿ ಸಾಗರಗಳನ್ನು ಹುದುಗಿಸುವ ಶಕ್ತಿ ಕೆಲವರಿಗೆ ಮಾತ್ರ ಇರುವುದಂತೆ. ಸರ್ವಜ್ಞನ ವಚನಗಳಲ್ಲಿ ಅಂತಹ ಕೆಲವು ಅಮರ ನುಡಿಗಟ್ಟುಗಳು ಸಿಗುತ್ತವೆ. ಗಂಡ-ಹೆಂಡತಿ ಅಥವಾ ಪ್ರೇಮಿ-ಪ್ರೇಮಿಕೆಯರು ಪರಸ್ಪರ ಕಣ್ಣುಗಳನ್ನು ನೋಡಿದಾಗಲೆ ಅರ್ಥಮಾಡೊಕೊಳ್ತಾರಂತೆ. ಸರ್ವಜ್ಞ ವಚನಗಳೂ ಹಾಗೆಯೇ ಎನ್ನಬಹುದು. ಇದು ಓದುಗ ಮತ್ತು ಅಕ್ಷರಗಳ ನಡುವಿನ ಸರಳ ನೋಟ; ಅಕ್ಷರಗಳು ಕಣ್ಣಿಗೆ ಬಿದ್ದರೆ ಸಾಕು-ಅವುಗಳಿಗಲ್ಲೆ ಅರ್ಥ.

ಇದೇ ಸರ್ವಜ್ಞ,

ಚಿತ್ತವಿಲ್ಲದೆ ಗುಡಿಯ ಸುತ್ತಿದೊಡೆ ಫಲವೇನು?
ಎತ್ತು ಗಾಣವನು ಹೊತ್ತು ತಾ ನಿತ್ಯದಲಿ |
ಸುತ್ತಿಬಂದಂತೆ ಸರ್ವಜ್ಞ.||

ಸದಾಶಿವನಿಗೆ ಅದೇ ಧ್ಯಾನ ಎಂಬಂತೆ, ಹಾವಾಡಿಗ ತುಂಡುಮಠದ ಮಹಾಸ್ವಾಮಿಗಳಿಗೆ ಸದಾ ಮಹಿಳೆಯರ ಜೊತೆಗೆ ಏಕಾಂತ ನಡೆಸುವುದರ ಬಗ್ಗೆಯೇ ಚಿಂತೆ. ಊರುಮನೆಗಳಲ್ಲಿ ಹಿಂದಿನಕಾಲದಲ್ಲಿ, ಯುವಕರ ಸಂಘಗಳು ವಾರ್ಷಿಕವಾಗಿ ಒಂದು ರಾತ್ರಿ ನಾಟಕ ನಡೆಸುತ್ತಿದ್ದವು. ತಾನೂ ಪಾತ್ರ ನಿರ್ವಹಿಸಿ ಪ್ರೇಕ್ಷಕರ ನಡುವಿರುವ ಹೆಣ್ಣುಮಕ್ಕಳ ಮನಸ್ಸಿನಲ್ಲಿ ಜಾಗ ಗಿಟ್ಟಿಸಿಕೊಳ್ಳುವ ಬಯಕೆ ಹಲವು ಯುವಕರಲ್ಲಿರುತ್ತಿತ್ತು. ಅದರಂತೆಯೇ, ರಾಜಕೀಯವಾಗಿ, ಸಾಮಾಜಿಕವಾಗಿ ತಾನೊಬ್ಬ ಮಹಾಸಮರ್ಥ ಎಂದು ಸಖಿಯರಿಗೆ ತೋರಿಸಿಕೊಳ್ಳುವ ಬಯಕೆ ಈ ಹಾವಾಡಿಗ ತೊನೆಯಪ್ಪ ಶೀಗಳಿಗೆ.

ಆಮ್ನಾಯ ಮಠಗಳ ಯಾವುದೋ ಸನ್ಯಾಸಿಗಳು ಹಿಂದೆ ತಮ್ಮ ಪೀಠವನ್ನು ಒಪ್ಪಿದ್ದರು, ಲಿಖಿತವಾಗಿ ತಮ್ಮ ಪೀಠವನ್ನು ಸಮ್ಮಿತಿಸಿದ್ದರು ಎಂದುಕೊಂಡರೂ ಅದು ಶಂಕರರ ಸ್ಥಾಪನೆಯೇ ಎನ್ನಲು ಸಾಧ್ಯವಾಗುವುದಿಲ್ಲ. ಶಂಕರರು ಮುಖ್ಯ ದಿಕ್ಕುಗಳಿಗೊಂದೊಂದರಂತೆ ನಾಲ್ಕು ಮಠಗಳನ್ನು ಸ್ಥಾಪಿಸಿದ್ದು ಮಾತ್ರ ನಿಜ.

ಮಹಾಜ್ಞಾನಿಗಳಾಗಿದ್ದ ಶಂಕರರು ಪ್ರಾಂತಭೇದವನ್ನು ಹೋಗಲಾಡಿಸುವ ಸಲುವಾಗಿ ಉತ್ತರದ ಕಡೆಯವರನ್ನು ದಕ್ಷಿಣಕ್ಕೂ ದಕ್ಷಿಣದವರನ್ನು ಉತ್ತರಕ್ಕೂ, ಪೂರ್ವದವರನ್ನು ಪಶ್ಚಿಮಕ್ಕೂ ಮತ್ತು ಪಶ್ಚಿಮದವರನ್ನು ಪೂರ್ವಕ್ಕೂ ಯತಿಗಳನ್ನಾಗಿ ನೇಮಿಸಿದರು. [ಅವರಾರೂ ಈರುಳ್ಳಿ ಉಪ್ಪಿಟ್ಟು ತಿನ್ನುವ ’ಯತಿ’ಗಳಾಗಿರಲಿಲ್ಲ

] ಹಾಗಾಗಿಯೇ ಉತ್ತರದ ಮಂಡನಮಿಶ್ರರು ದೀಕ್ಷೆಪಡೆದು ಸುರೇಶ್ವರಾಚಾರ್ಯರಾಗಿ ದಕ್ಷಿಣಾಮ್ನಾಯ ಶೃಂಗೇರಿಯ ಶಾರದಾಪೀಠವನ್ನು ಅಲಂಕರಿಸಿದರು. ಅವರಿಂದ ದೀಕ್ಷೆ ಪಡೆದ ಯಾರೇ ಇದ್ದರೂ ಅದು ಶೃಂಗೇರಿಯ ಪರಂಪರೆಗೆ ಸೇರಿದ್ದೆಂದೇ ಅರ್ಥ.

ತುಘಲಕ್ ದರ್ಬಾರಿನಲ್ಲಿ ತಂದೆಯನ್ನು ಸೆರೆಗಟ್ಟಿ ಮಗ ಅರಸನಾಗುವ ಪರಂಪರೆ ಇದ್ದಿದ್ದು ಕಾಣುತ್ತದೆ; ನಮ್ಮ ಗ್ರಾಮ್ಯ ಭಾಷೆಯಲ್ಲಿ ’ಅಪ್ಪನನ್ನು ತಳ್ಳಾಕಿ ಮಗ ಮಾವಿನಹಣ್ಣು ಹೆಕ್ಕೋದು’ ಅಂತ ಕರೀತಾರೆ. ಅದೇರೀತಿಯಲ್ಲಿ ಅನಧಿಕೃತವಾಗಿ ತಮ್ಮ ಹಕ್ಕುಸ್ಥಾಪನೆಗೆ ಹೊರಟ ಕೆಲವರ ಗುಂಪುಗಾರಿಕೆಯಿಂದ ತುಂಡುಮಠಗಳು ಮೇಲೆದ್ದು, ಅಲ್ಲಿನ ಸನ್ಯಾಸಿಗಳು ತಾವೇ ನಿಜವಾದ ಜಗದ್ಗುರುಗಳು ಎಂದು ಮೆರೆಯಹತ್ತಿದರು! ಇದು ಸತ್ಯಸ್ಯ ಸತ್ಯ.

ನಂತರ ಪೀಠ, ಪರಂಪರೆ, ಗುರುಶಾಪ, ಸರ್ವನಾಶ ಇತ್ಯಾದಿ ಪದಗಳಿಂದ ಭೀತಿ ಹುಟ್ಟಿಸಿ ಶಿಷ್ಯಸಮುದಾಯವನ್ನು ತಮಗೆ ಬೇಕಾದಂತೆ ಇರಿಸಿಕೊಂಡರು. ಶಂಕರರ ನಂತರ ಇದೇ ರೀತಿಯ ಭಿನ್ನಧೋರಣೆಗಳೇ ಸ್ಫೋಟಿಸಿ ಇನ್ನೆರಡು ಪಂಥಗಳು ಹುಟ್ಟಿಕೊಂಡವಾದರೂ ಶಂಕರರು ಪ್ರತಿಪಾದಿಸಿದ ಅದ್ವೈತವೇ ಅತ್ಯಂತ ವೈಜ್ಞಾನಿಕವೆಂದು ಕಾಲಕಾಲಕ್ಕೂ ವಿಜ್ಞಾನಿಗಳಿಗೂ ಗೋಚರಿಸಿ ಇಂದಿಗೂ ಜಗಮನ್ನಣೆ ಪಡೆದಿದೆ.

ಈಗ ಬಿಡಿ, ಎಲ್ಲಿನೋಡಿದರೂ ಗಲ್ಲಿಗಲ್ಲಿಗೊಬ್ಬ ಜಗದ್ಗುರು! ಯಾರು ದೀಕ್ಷೆ ಕೊಟ್ಟರು? ಯಾವ ಯತಿನಿಯಮಗಳನ್ನು ಅವರು ಪಾಲಿಸುತ್ತಾರೆ? ಆಧ್ಯಾತ್ಮ ಮಾರ್ಗದಲ್ಲಿ ಅವರ ಸಾಧನೆ ಏನು? ಅದೆಲ್ಲಯಾವುದೂ ಇಲ್ಲ. ಹಗಲೆಲ್ಲ ಕಾವಿ ವೇಷಹಾಕಿ ರಾತ್ರಿಯಲ್ಲಿ ಎಲ್ಲವನ್ನೂ ಬಿಚ್ಚೆಸೆದು ಜೀನ್ಸ್ ಹಾಕಿಕೊಳ್ಳುವಂಥವರೂ ’ಜಗದ್ಗುರು’ ಎಂಬ ಪದವನ್ನು ಬಳಸುತ್ತಾರೆ. ಅವರನ್ನೆಲ್ಲ ಕಂಡಾಗ ಯಾರೂ ನಿಯಂತ್ರಿಸುವವರೇ ಇಲ್ಲವಾದರಲ್ಲ ಎನಿಸುತ್ತದೆಲ್ ಧರ್ಮಗ್ಲಾನಿಗೆ ಇಂಥವರೇ ಮೂಲ ಕಾರಣವಾಗುತ್ತಾರೆ.

ಜಗದ್ಗುರುವೆನ್ನಿಸಲು ಜಗತ್ತಿಗೆ ಗುರುವಾಗಬಲ್ಲ ಅಸಾಮಾನ್ಯತೆಯನ್ನು ಹೊಂದಿರಬೇಕಾಗುತ್ತದೆ. “ಹದಿನಾರು ಸಾವಿರ ಮಹಿಳೆಯರನ್ನು ಮದುವೆಯಾದ, ಅದೇನು ಮಹಾ? ಅವಕಾಶ ಕೊಟ್ಟರೆ ನಾವೂ ಆಗ್ತೇವೆ” ಎಂದು ಕೃಷ್ಣನನ್ನು ಮೂದಲಿಸುವ ಜನ ಅವ ಕಿರು ಬೆರಳಲ್ಲಿ ಪರ್ವತವನ್ನೆತ್ತಿದ ಎಂದಾಗ ಜಾಗ ಖಾಲಿಮಾಡುತ್ತಾರೆ! ಅದೇ ಕೃಷ್ಣ ಯುದ್ಧಭೂಮಿಯಲ್ಲಿ ಅರ್ಜುನನನ್ನು ಸಾಂಕೇತಿಕ ವ್ಯಕ್ತಿಯನ್ನಾಗಿಸಿಕೊಂಡು ಗೀತೆಯನ್ನು ಬೋಧಿಸುತ್ತಾನೆ.

ವಾಸ್ತವವಾಗಿ ಹದಿನಾರು ಸಾವಿರ ಮಹಿಳೆಯರ ಗಂಡನಾಗುವ ಬಯಕೆ ಅವನಲ್ಲಿರಲಿಲ್ಲ; ನರಕಾಸುರನ ಸೆರೆಯಿಂದ ಬಿಡುಗಡೆಗೊಂಡ ಮಹಿಳೆಯರು ರಕ್ಷಣೆಗಾಗಿ ಕೋರಿದಾಗ ಹಾಗೆ ಹೇಳಿದ್ದಾನೆ; ಒಬ್ಬನಿದ್ದವ ಏಕಕಾಲಕ್ಕೆ ಹದಿನಾರು ಸಾವಿರ ಕೃಷ್ಣರಾಗಿ ಅವರನ್ನು ರಮಿಸಿದ್ದಾನೆ!

ತೊನೆಯಪ್ಪ ಶೀಗಳು ಏಕಾಂತದಲ್ಲಿ ಒಬ್ಬೊಬ್ಬರನ್ನಾಗಿ ಕರೆದು ಸಂಭೋಗಿಸುತ್ತಾರೆ. ಅವರು ಏಕಕಾಲಕ್ಕೆ ತುಂಡು ಮಠದ ಎಲ್ಲಾ ಬ್ರಾಂಚುಗಳಲ್ಲೂ ಏಕಾಂತ ನಡೆಸಿ ತೋರಿಸಿದರೆ “ಹೌದಪ್ಪಾ, ನಮ್ಮ ಶೀಗಳು ಕೃಷ್ಣಾವತಾರ” ಎನ್ನಬಹುದಿತ್ತು. ಅದೆಲ್ಲ ಬಿಟ್ಟು ಈಗ ಹೇಗೂ ತನಗೆ ಜೈಲೇ ಗತಿ ಎಂಬುದು ಖಾತ್ರಿಯಾದ ನಂತರ ಜನರನ್ನು ಬೇರೆ ಬೇರೆ ಹೆಸರುಗಳಲ್ಲಿ ಸಂಘಟಿಸಿ “ಒಟ್ಟಿಗೇ ಇರೋಣ, ಒಗ್ಗಟ್ಟಿನಿಂದಿರೋಣ. ಏನೇ ಬಂದರೂ ಒಟ್ಟಾಗಿಯೇ ಎದುರಿಸೋಣ.” ಎನ್ನುತ್ತ ’ಸುವರ್ಣ ಮಂತ್ರಾಕ್ಷತೆ’ ನೀಡುತ್ತಿದ್ದಾರೆ.

ದೇವರಜನಾಂಗಕ್ಕೆ ಸರಕಾರ ಸಕಲ ಸೌಲಭ್ಯಗಳನ್ನೂ ಒದಗಿಸುತ್ತಿದೆ. ಯಾರೋ ಹೇಳಿದಂತೆ, ಈಗ ದಲಿತರು ನಾವು. ಈ ಸಮಾಜದ ಬಡಪಾಯಿಯನ್ನೂ ಬಿಡದೆ ಹಲವರ ಚರ್ಮವನ್ನು ಮಾತ್ರ ಬಿಟ್ಟು, ಅಲ್ಲಿಯವರೆಗೂ ಸುಲಿದು ಸಂಗ್ರಹಿಸಿದ ಹಣದಲ್ಲಿ ಮೂರ್ನಾಲ್ಕು ಲಕ್ಷ ರೂಪಾಯಿಗಳನ್ನು ದೇವರಜನಾಂಗದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಿದ್ದಾರೆ-ಕಚ್ಚೆಶೀಗಳು. “ನನ್ನ ಚಡ್ಡಿ ತೊಳೀರ್ರ, ನಿಮಗೆ ಜೈಲಾಗುದ್ನ ತಪ್ಪಸ್ತೀಮಿ” ಅಂತ ದೇವರಜನಾಂಗದ ತಿಪ್ಪ ಹೇಳಿದರೆ ಅದನ್ನು ಮಾಡಲೂ ತಯಾರಿದ್ದಾರೆ ತೊನೆಯಪ್ಪ ಶೀಗಳು.

ಒಟ್ಟಿನಲ್ಲಿ ಪರಿಸ್ಥಿತಿ ಎಲ್ಲಿಗೆ ಬಂದಿದೆಯಪ್ಪ ಅಂದರೆ ಕತ್ತೆ ಸಿಕ್ಕಿದರೂ ಕಾಲು ಹಿಡಿದು ಜೈಲು ಶಿಕ್ಷೆಯನ್ನು ತಪ್ಪಿಸು ಎಂದು ಬೇಡಿಕೊಳ್ಳುವ ಹಂತವನ್ನು ತಲ್ಪಿದೆ. ಶಿಕ್ಷೆ ತಪ್ಪಿಸಲು ಅತ್ತ ಒಳಗಿನಿಂದ ಬಹಳ ಪ್ರಯತ್ನ ನಡೆಸಲಾಗುತ್ತಿದೆ. ಆದರೆ ಇನ್ನೂ ಪೂರ್ತಿ ರೂಟು ಸಿಕ್ಕಿಲ್ಲ.

ಮುಸುಕಿನಲ್ಲಿ ಮಠದ ಲಂಪಟರು ಮಾಂಸಹಾರವನ್ನೂ ಸಹ ಸೇವಿಸುತ್ತಾರೆ. ಗುಂಡು ಹಾಕುತ್ತಾರೆ. ಬೆಳಗಾದರೆ ಶಿಷ್ಯರ ತಲೆಗೊಂದರಂತೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭಟ್ಟಂಗಿಗಳು ಬಕರಾಭಕ್ತರಿಗೆ ಪೋಸು ನೀಡುವಾಗ ಇದನ್ನೆಲ್ಲ ಹೊರಗೆ ತೋರಿಸೋದಿಲ್ಲ. ಗುಂಡು-ತುಂಡು ತಿಂದು ತೊನೆದಾಡುತ್ತ ಹಾದರ ನಡೆಸುವ ವ್ಯಕ್ತಿ ಗುರುವೆನಿಸಲು ಯೋಗ್ಯನೇ? ನೀವೆಲ್ಲ ನಿರ್ಧಾರ ಮಾಡಬೇಕಾದ ಸಮಯ ಮೀರಿಹೋಗಿದೆ!

ಕಾಲೇಜು ಅಧ್ಯಾಪಕರೊಬ್ಬರು ತರಗತಿ ನಡೆಸುತ್ತಿದ್ದಾಗ ಉಂಡಾಡಿಗುಂಡ ವಿದ್ಯಾರ್ಥಿಯೊಬ್ಬ ತಡವಾಗಿ ಪ್ರವೇಶಿಸಿದನಂತೆ. “ಮೇಡಮ್ ನನ್ನ ಕೈಯಲ್ಲಿ ಹಕ್ಕಿಯಿದೆ. ಅದು ಸತ್ತಿದೆಯೋ ಜೀವಂತ ಇದೆಯೋ ಎಂದು ಹೇಳಬೇಕು” ಎಂದನಂತೆ. ಹಿಂದಿನ ತರಗತಿಗಳಲ್ಲಿ ಪ್ರಶ್ನೆಕೇಳಿದಾಗ ತಪ್ಪು ಉತ್ತರ ನೀಡಿ ಅವಮಾನಿತನಾಗಿದ್ದಕ್ಕೆ ಮುಯ್ಯಿ ತೀರಿಸಿಕೊಳ್ಳಲು ಹವಣಿಸುತ್ತಿದ್ದಾನೆ ಅವ ಎಂದು ಮಹಿಳಾ ಅಧ್ಯಾಪಕಿಗೆ ಗೊತ್ತಾಯಿತಂತೆ.

ಕೈಯಲ್ಲಿದ್ದ ಹಕ್ಕಿಗೆ ಜೀವ ಇತ್ತು, ಅಧ್ಯಾಪಕಿ “ಹಕ್ಕಿ ಸತ್ತಿದೆ” ಎಂದರೆ ಜೀವಂತ ಇದೆಯೆಂದು ಹಾರಿಬಿಟ್ಟು ತಪ್ಪು ಹೇಳಿದ್ದಕ್ಕೆ ಅವಮಾನ ಮಾಡೊ ಉದ್ದೇಶ ಗುಂಡನಲ್ಲಿತ್ತು; “ಹಕ್ಕಿ ಜೀವಂತವಾಗಿದೆ” ಎಂದರೆ ಅಮುಕಿಹಿಡಿದು ಸಾಯಿಸಿ “ಹಕ್ಕಿ ಸತ್ತಿದೆ ನೋಡಿ” ಎಂದು ಎಲ್ಲರೆದುರು ಗೇಲಿ ಮಾಡೋದು ಅವನ ಹುನ್ನಾರವಾಗಿತ್ತು. ಕ್ಷಣಕಾಲ ಯೋಚಿಸಿದ ಮೇಡಮ್ಮು ಜಾಣ್ಮೆಯ ಉತ್ತರವನ್ನು ಹೇಳಿದರು-“ಹಕ್ಕಿಯ ಜೀವ ನಿನ್ನ ಕೈಯಲ್ಲಿದೆ”

ಇಂದು ಸಮಾಜದ ಸ್ಥಿತಿ ಗುಂಡನ ಅಂಗೈಯಲ್ಲಿ ಬಂಧಿಯಾದ ಹಕ್ಕಿಯಂತಿದೆ. ಗುಂಡ ಯಾರೆಂದು ಹೇಳಬೇಕಿಲ್ಲವಲ್ಲ? “ಹೌದಪ್ಪಾ ಗುಂಡಾ, ನೀನು ಹೇಳಿದ್ದೂ ಹೌದು, ನಾವು ಕೇಳಿದ್ದೂ ಹೌದು, ಹಕ್ಕಿಯ ಜೀವ ನಿಲ್ಲ ಕೈಲಿದೆ” ಅಂತ ತಿಳಿಸಿ ಮುಷ್ಠಿಬಿಗಿತದಿಂದ ಸಮಾಜವನ್ನು ರಕ್ಷಿಸಬೇಕಾಗಿದೆ. ಬ್ರಿಟಿಷರು ಬಿಟ್ಟು ಹೋದಾಗ ನಮಗೆ ಸಿಕ್ಕಿದ್ದು ನಿಜವಾದ ಸ್ವಾತಂತ್ರ್ಯವಲ್ಲ; ತೊನೆಯಪ್ಪ ಬಿಟ್ಟು ಹೋದಾಗ ಸಿಗುವುದು ನಿಜವಾದ ಸ್ವಾತಂತ್ರ್ಯ ಎಂಬಲ್ಲಿಗೆ ತುಮರಿಯ ಇಂದಿನ ಪ್ರವಚನಕ್ಕೆ ಮಂಗಳವೆಂತ ಅಪ್ಪಣೆಯಾಗುತ್ತದೆ.

Thumari Ramachandra

source: https://www.facebook.com/groups/1499395003680065/permalink/1762522140700682/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s