ಸನ್ಯಾಸ ಯೋಗದ ಬಾವಯ್ಯ ಸಂಸಾರಿಯಾದ ’ಪವಾಡ’ ಹಲವು ಹೊಳಹುಗಳನ್ನು ತೆರೆದಿಡುತ್ತದೆ.

ಸನ್ಯಾಸ ಯೋಗದ ಬಾವಯ್ಯ ಸಂಸಾರಿಯಾದ ’ಪವಾಡ’ ಹಲವು ಹೊಳಹುಗಳನ್ನು ತೆರೆದಿಡುತ್ತದೆ.

[ಲೇಖನದ ಆರಂಭದಲ್ಲಿ ಒಂದು ಸ್ಪಷ್ಟನೆ-ನಿನ್ನೆಯ ಒಂದು ಚಿತ್ರಕ್ಕೆ ’ಸಭ್ಯತೆ ಮೇರೆ ಮೀರಿದ್ದು’ ಎಂದು ಹೇಳಿದ್ದೀರಿ, ಒಪ್ಪಿಕೊಳ್ಳೋಣ, ಹಾವಾಡಿಗ ಮಠದಲ್ಲಿ ಹಾಲಿ ನಡೆಯುತ್ತಿರೋದು, ಇಲ್ಲಿ ನಾವು ಚರ್ಚಿಸುತ್ತಿರೋದು ಎಲ್ಲವೂ ಅಶ್ಲೀಲ ಕತೆ ಮತ್ತು ಘಟನೆಗಳ ಕುರಿತೇ ಆಗಿದೆ. ಹಲವು ಅಶ್ಲೀಲ ಪದಗಳನ್ನು ಅನಾಯಾಸವಾಗಿ ಬಳಸಬೇಕಾದ ಪರಿಸ್ಥಿತಿ ಇದೆ.

ಎಲ್ಲಿ ಒಂದೇ ಒಂದು ಅಶ್ಲೀಲ ಪದವೂ ಬಳಸಲ್ಪಡಬಾರದೋ, ಎಲ್ಲಿ ಕಾಮದ ನೆರಳೂ ಸೋಕಬಾರದೋ ಅದೇ ಅಶ್ಲೀಲ-ಅನೈತಿಕ ಚಟುವಟಿಕೆಗಳ ಆಶ್ರಯತಾಣವಾಗಿಬಿಟ್ಟಿದೆ! ಕುದುರೆ ಬ್ರೀಡಿಂಗ್ ಚಿತ್ರವನ್ನೇ ಒಪ್ಪಿಕೊಳ್ಳದ ಮನಸ್ಸಿನವರಾದ ನೀವು ತೊನೆಯಪ್ಪನನ್ನು ಹೇಗೆ ಗುರುವೆಂದು ಒಪ್ಪಿಕೊಳ್ತೀರಿ? ನಿಮ್ಮ ಸಾಮಾರ್ಥ್ಯವನ್ನು ಬಹಿರಂಗ ಸಂಘಟನೆಗಳ ಮೂಲಕ ಮಠಕ್ಕೆ ನುಗ್ಗಿ ತೋರಿಸಿ.]

ಈಗ ಇಂದಿನ ಲೇಖನ-

1. “ಯೋಗ್ಯರನ್ನು ಗುರುತಿಸಿ ಸನ್ಯಾಸ ನೀಡಿದ್ದೇವೆ” ಎಂದ ಅಪರೋಕ್ಷ ಜ್ಞಾನಿಗಳಿಗೆ ಇವ ಚಟಗಾರ ಶ್ರಾದ್ಧಭಟ್ಟನೆಂಬುದು ಗೊತ್ತಾಗಲಿಲ್ಲವೇ? ಮತ್ತು ಮುಂದೆ ಅದೇ ಚಟವನ್ನೂ ಅದೇ ಶ್ರಾದ್ಧಭಟ್ಟನ ಯೋಗ್ಯತೆಯಲ್ಲೇ ಮಠದಲ್ಲಿ ಮುಂದುವರಿಸುತ್ತಾನೆ ಅಂತ ಯಾವ ಪ್ರೇರಣೆಯೂ ಆಗಲಿಲ್ಲವೇ?

2. ಪೀಠದಲ್ಲಿ ಅಂತಹ ಶಕ್ತಿ ಇದ್ದರೆ, ಕಚ್ಚೆಹರುಕತನದೊಂದಿಗೆ ಹಲವು ದುರಾಚಾರಗಳನ್ನೂ ನಡೆಸುತ್ತಿರುವ ಭಸ್ಮಾಸುರನಿಗೆ ಅದು ಮೊದಲೇ ತಾಗಿ ಅಟ್ಟಾಡಿಸಬೇಕಿತ್ತಲ್ಲ?

3. ಕರಾರ್ಚಿತವೋ ಪರಾರ್ಚಿತವೋ ಅದೇನೋ ಹೇಳ್ತಾರಲ್ಲ-ಆ ವಿಗ್ರಹಗಳಲ್ಲಿ ಶಕ್ತಿ ಇದ್ದರೆ ಇಷ್ಟೊಂದು ಪಾತಕಗಳನ್ನು ಎಸಗುತ್ತಿರುವ ಭಸ್ಮಾಸುರ ತಕ್ಕ ಶಾಸ್ತಿಯನ್ನು ಅನುಭವಿಸಬೇಕಾಗಿತ್ತಲ್ಲ?

4. ಸನ್ಯಾಸ ಯೋಗ ಇರುವವರು ಲೌಕಿಕ ಆಸಕ್ತಿಗಳನ್ನು ಕಳೆದುಕೊಂಡು ಸನ್ಯಾಸಿಯೋ ಅಥವಾ ಬ್ರಹ್ಮಚಾರಿಯೋ ಆಗಿಯೇ ಬದುಕುತ್ತಾರೆ; ಹುದ್ದೆಗೆ ಪ್ರಬಲ ಪೈಪೋಟಿ ನೀಡಿದ್ದ ಸೊಟ್ಟ ಮುಖದ ಕುಳ್ಳ ಬಾವಯ್ಯ ಸನ್ಯಾಸ ಯೋಗವಿದ್ದರೆ ಸಂಸಾರಿ ಹೇಗಾದ?

5. ಅದೆಲ್ಲ ಓಕೆ, ಒಂದೊಮ್ಮೆ ಸಂಸಾರಿಯಾಗುವಾಗಲೂ ಜಗದ್ಗುರು ಭಸ್ಮಾಸುರನ ಪೂರ್ವಾಶ್ರಮವೋ ಅಪರಾಶ್ರಮವೋ ಪದ ಬಳಸ್ತಾರಲ್ಲ-ಆ ಆಶ್ರಮದ ತಂಗಿಯನ್ನೇ ಏಕೆ ಮದುವೆಯಾದ? ಮತ್ತು ಅದೇ ಮಠದಲ್ಲೇ ಏಕೆ ಶಾಶ್ವತವಾಗಿ ಠಿಕಾಣಿ ಹೂಡಿದ?

6. ಹಿಂದಿನವರಿಗಿಂತ ಹಿಂದಿನವರ ಕಾಲದಲ್ಲಿ ಹಸುವಿನಕಿವಿಯೂರಿನ ಅವರ ಪೂರ್ವಾಶ್ರಮದ ಮನೆಗೆ ಸಂಪತ್ತುಗಳು ಸಾಗಿಸಲ್ಪಟ್ಟಿದ್ದವು ಎಂದು ಹಲವರ ಬಾಯಿಗಳು ಈಗಲೂ ಹೇಳುತ್ತವೆ; ಆದರೆ ಅವರಾರೂ ಕಚ್ಚೆಹರುಕರಾಗಿರಲಿಲ್ಲ. ಅದಿರಲಿ, ಭಕ್ತರ ದೇಣಿಗೆಯನ್ನು ಸಂಗ್ರಹಿಸಿ ಮನೆ ಕಟ್ಟಿ ಬೆಳೆಸಿಕೊಳ್ಳೋದಾದರೆ, ಐ.ಏ.ಎಸ್. ಮಾಡಿ ಫೈಲು ಹಿಡಿದು ನಿಲ್ಲೋದಕ್ಕಿಂತ ಭಸ್ಮಾಸುರ ಮಾಡಿದ ಹಾಗೆ, ನಾಲ್ಕನೇ ಕ್ಲಾಸು ಓದಿ ಐಪ್ಯಾಡು,ಐಫೋನ್,ಇಂಟರ್ನೆಟ್ಟುಗಳ ಬಳಕೆ ಮತ್ತು ಒಂದೆರಡು ಭಾಷೆಗಳ ಕೆಲವು ಪದಗಳನ್ನು ಕಲಿತು ಮಠದ ಸ್ವಾಮಿಯಾಗುವುದು ಉತ್ತಮವಲ್ಲವೇ? ಏನಂತೀರಿ?

7. ತನ್ನಲ್ಲೇ ದ್ವಂದ್ವ ವ್ಯಕ್ತಿತ್ವ [ಡ್ಯೂಯಲ್ ಪರ್ನಸಾಲಿಟಿ]ಗಳನ್ನಿಟ್ಟುಕೊಂಡ ವ್ಯಕ್ತಿ ಸಮಾಜದ ಧಾರ್ಮಿಕ ಮುಖಂಡನಾಗಲು ಯೋಗ್ಯನೇ? ಅವನು ಹಾಗೆ ಎಂದು ಗೊತ್ತಾದಮೇಲೂ ಸಮಾಜ ಬಹುಕಾಲ ಸುಮ್ಮನುಳಿದದ್ದೇಕೆ?

8. ಪರಂಪರೆಯ ಶಕ್ತಿ ಎಂಬುದನ್ನೆಲ್ಲ ನಾನಂತೂ ಒಪ್ಪೋದಿಲ್ಲ; ಅದು ವ್ಯಕ್ತಿಗತ; ಅದಿದ್ದರೆ ಇಲ್ಲಿಯವರೆಗೆ ಹೀಗಾಗಲು ಸಾಧ್ಯವೇ ಇರಲಿಲ್ಲ. ಆದರೂ, ದಿಲೀಪ, ರಘು, ಮಾಂದಾತ, ಭಗೀರಥ, ದಶರಥ, ಶ್ರೀರಾಮ ಮೊದಲಾದ ರಾಜರ್ಷಿಗಳು ಮುನ್ನಡೆಸಿಬಂದಿದ್ದ ಪರಂಪರೆಯಲ್ಲಿ ಅಗ್ನಿವರ್ಣನೆಂಬವನೊಬ್ಬ ಇದ್ದನಲ್ಲವೇ? ಇಕ್ಷ್ವಾಕು ವಂಶ ಅಥವಾ ರಘುವಂಶಕ್ಕೆ ಅಗ್ನಿವರ್ಣ ಹಚ್ಚಿದ ಅಪಚಾರದ ವರ್ಣ ಆಚಂದ್ರಾರ್ಕವಾಗಿ ಹೇಳಲ್ಪಡುತ್ತದೆ; ಅದರಂತೆಯೇ ಈ ಜಗದ್ಗುರು ಭಸ್ಮಾಸುರ ಒಂದು ಬಹುಶ್ರೇಷ್ಠ ಸತ್ಪರಂಪರೆಗೆ ಮಾಡಿದ ಘನಘೋರ ಅನ್ಯಾಯ ಮತ್ತು ದ್ರೋಹ ಆಚಂದ್ರಾರ್ಕವಾಗಿರುತ್ತದಲ್ಲವೇ ಮಿತ್ರರೇ?

9. ಹಿಂದಿನ ಕಾಲದಲ್ಲಿ ಮಠಗಳಲ್ಲಿ ಸುತ್ತಮುತ್ತ ವಿದ್ವಜ್ಜನರು ಬಹಳ ಇರುತ್ತಿದ್ದರು. ಗುರುವನ್ನು ಖಾಸಗಿಯಾಗಿ ಭೇಟಿ ಮಾಡುವಗಲೂ ಸಹ ಗುರುವಿನ ಆಪ್ತ ಸಹಾಯಕರು ಒಬ್ಬರೋ ಇಬ್ಬರೋ ಅಲ್ಲಿರುತ್ತಿದ್ದರು. ಮಹಿಳೆಯರಿಗೆ ಪ್ರತ್ಯೇಕ ಭೇಟಿ ಇರಲಿಲ್ಲ. ದಂಪತಿಗಳಲ್ಲೂ ಗಂಡಂದಿರಿಗಷ್ಟೆ ಖಾಸಗಿ ಭೇಟಿ ಹೀಗೆಲ್ಲ ನಿಯಮಗಳಿದ್ದವು. ಹೀಗಾಗಿ ಗುರುವಿನಲ್ಲಿ ಬ್ರಹ್ಮಚರ್ಯದ ಕಸುವು ಕುಸಿಯುವ ಸಾಧ್ಯತೆಗಳೂ ಇರುತ್ತಿರಲಿಲ್ಲ; ಅದಕ್ಕೆ ಅವಕಾಶಗಳೂ ಇರುತ್ತಿರಲಿಲ್ಲ. ಹಿಂದಿನವರ ವರೆಗೆ ಅಂತಹ ಬ್ರಹ್ಮಚರ್ಯ ಜೀವನ ಹರಿದುಬಂದಿತ್ತು ಎಂದಾದಾಗ, ನಂಬಿ ದೀಕ್ಷೆ ನೀಡಿದ ಗುರುವಿಗೆ ಭಸ್ಮಾಸುರ ಮಾಡಿದ ಗುರುದ್ರೋಹ ಇದಲ್ಲವೇ?

10. ಸಮಾಜದಲ್ಲಿ ಮಕ್ಕಳಾಗದವರು ಅನೇಕ ಜನ ಇದ್ದಾರೆ; ಇರ್ತಾರೆ. ಮಕ್ಕಳಾಗದವರಿಗೆ “ಮಠದ….ದೇವರಿಗೆ ಹರಕೆ ಹೊತ್ಕೊಳಿ ಮಕ್ಕಳಾಗ್ತವೆ” ಅಂತ ನಂಬಿಸೋದು ವಾಡಿಕೆ. ಕಾಕತಾಳೀಯವಾಗಿ ಅಥವಾ ಕೆಲವರ ಅತಿಯಾದ ಶ್ರದ್ಧಾಭಕ್ತಿಯಿಂದ ದೇವರೇ ಅನುಗ್ರಹಿಸಿ ಹರಕೆ ಹೊತ್ತ ಕೆಲವರಿಗೆ ಮಕ್ಕಳಾಗಿರಬಹುದು. “ಮಕ್ಕಳಾಗದಿದ್ದ ಪಕ್ಷದಲ್ಲಿ ಇರುವವರಿಗೆಲ್ಲ ಒಳ್ಳೇದಾಗ್ತದೆ” ಎಂಬ ಸಮಜಾಯಿಷಿ ನೀಡುವ ಕ್ರಮ ಇದೆ ಇಲ್ಲಿ. ಅದನ್ನು ಕೇಳಲಿಕ್ಕಾಗಿ ಹರಕೆ ಹೊತ್ತುಕೊಳ್ಳಬೇಕೇ? ಇದು ಒಂದರ್ಥದಲ್ಲಿ ಕಟ್ಟುಕತೆಯೇ ಆಗುವುದಿಲ್ಲವೇ?

11. ಅನಾದಿಯಿಂದ ಹರಕೆಗಳ ಮೂಲಕ ಬಂದ ಬಂಗಾರದ ಲೆಕ್ಕ ಇದ್ದಿದ್ದು ಈಗ ಅವೆಲ್ಲ ಇರುವ ಸಾಧ್ಯತೆಗಳಿಲ್ಲ. ಭಸ್ಮಾಸುರ ಬಂದಮೇಲೆ ಅದೆಂತದೋ ಅಭಿಷೇಕ ಗಿಬಿಷೇಕ ಅಂತೆಲ್ಲ ಹೇಳಿ ಸೆಂಟಿಮೆಂಎಂಟ್ಸ್ ಕ್ರಿಯೇಟ್ ಮಾಡಿ ಸಂಗ್ರಹಿಸಿದ ಬಂಗಾರದ ಒಡವೆಗಳು, ನಾಣ್ಯಗಳು ಲೆಕ್ಕದಲ್ಲಿ ಇರುವವೇ?

12. ಮಠದ ಸನ್ಯಾಸಿಗಳನ್ನು ಮತ್ತು ಯೋಗ ಸನ್ಯಾಸಿಗಳನ್ನು ಗಮನಿಸಿದರೆ ಸಣ್ಣ ಪುಟ್ಟ ಆಶ್ರಮಗಳನ್ನು ನಿರ್ಮಿಸಿಕೊಂಡು ಬದುಕುವ ಯೋಗ ಸನ್ಯಾಸಿಗಳಲ್ಲಿ ರಾಜಕೀಯ ಇಲ್ಲದಿರುವುದು ಗೊತ್ತಾಗುತ್ತದೆ. ಯೋಗ ಸನ್ಯಾಸದಲ್ಲಿಯೂ ದತ್ತ ಪರಂಪರೆ ಎಂಬುದೊಂದಿದೆ ಮತ್ತು ಅವರೂ ಸಹ ಅದೇ ಭಗವಂತನನ್ನು ತಲುಪಲು ಮಾರ್ಗವನ್ನು ಹೇಳುತ್ತಾರೆ. ಮಠದವರೂ ಮತ್ತು ಅವರೂ ಹೇಳುವುದು ಒಂದೇ ಮೂಲದ ಶಕ್ತಿಯ ಆರಾಧನೆ ಎಂದಾದಮೇಲೆ ಮಠಗಳ ಔಚಿತ್ಯವೇನು?

13. ಈಗೀಗ ರಾಜಕೀಯವಾಗಿ ಜನಾಂಗಕ್ಕೆ ನ್ಯಾಯ ಒದಗಿಸಲು ಮಠ ಬೇಕು ಎಂಬ ಕಾರಣದಿಂದ ಮಾತ್ರ ಜಾತೀವಾರು ಮಠಗಳ ಸ್ಥಾಪನೆಯಾಗಿರುವುದು ಕಂಡುಬರುತ್ತದೆ; ತೊಂಬತ್ತು ಪರ್ಸೆಂಟು ಆದಾಯವನ್ನು ಒಂದೇ ಸಮಾಜದಿಂದ ಪಡೆದು, ಬೆಳೆದು, ಅವರ ಸಹಾಯ-ಸಹಕಾರಗಳಿಂದ ಹೆಸರು ಪಡೆದು ಮೇಲೆದ್ದ ಮಠ ಹಲವು ಹದಿನೆಂಟು ಜನಾಂಗಗಳನ್ನು ಪ್ರತಿನಿಧಿಸುತ್ತದೆ ಎನ್ನೋದಾದರೆ ಸಮಾಜದ ಜನರ ಕಷ್ಟಾರ್ಜಿತದ ದೇಣಿಗೆಯನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತದೆ ಎಂದರ್ಥವಲ್ಲವೇ?

14. ಮಠದಲ್ಲಿ ರಾಂಗ್ ವೇಷ ಹಾಕುತ್ತ ಹೊರಮುಖದಲ್ಲಿ ಮಹಾಮುನಿಯಂತೆ ಪೋಸು ನೀಡುತ್ತ, ರಾಜಕೀಯದವರನ್ನು ಓಲೈಸುತ್ತ, ಯತಿನಿಯಮಗಳನ್ನು ಗಾಳಿಗೆ ತೂರುತ್ತ, ತನ್ನಿಷ್ಟದಂತೆ ನಡೆಯೋದೇ ನೀತಿ ಎನ್ನುವ ವ್ಯಕ್ತಿ ಪೀಠಕ್ಕೆ ಸೂಕ್ತವೋ ಅಥವಾ ಬಾಹ್ಯಾಂತರ್ಯಗಳು ಒಂದಾಗಿದ್ದು, ಸದಾ ಸನ್ಮಾರ್ಗಿಯಾಗಿ ಆಧ್ಯಾತ್ಮ ಪಥಿಕನಾಗಿ ಶಿಷ್ಯರಿಗೆ ಆಧ್ಯಾತ್ಮಿಕ ಸಾಧನೆಗಳನ್ನೂ ಫಲಗಳನ್ನೂ ಪಡೆಯಲು ಮಾರ್ಗದರ್ಶಿಸುವ ನಿಜವಾದ ಸನ್ಯಾಸಿ ಪೀಠಕ್ಕೆ ಸೂಕ್ತವೋ?

15. ಆತ್ಮವಂಚನೆ ಮಹಾಪಾಪ ಎಂಬುದು ಸನ್ಯಾಸಿಗಳು ಮೊದಲು ಹೇಳುವ ಅಂಶ. ಅದು ನಮ್ಮಾತ್ಮಕ್ಕೆ ನಾವೇ ನೀಡುವ ಹಿಂಸೆ. ಅಹಿಂಸೆ ಎಂಬುದು ಯೋಗಿಗಳ, ಸನ್ಯಾಸಿಗಳ ಅಧ್ಯಾತ್ಮಿಕ ಮಾರ್ಗದ ಮೊದಲ ಹೆಜ್ಜೆ. ಹೀಗಿದ್ದಾಗ ಆತ್ಮವಂಚನೆ ಮಾಡಿಕೊಳ್ಳುತ್ತ ಪ್ರವಚನವೆಂದು ಹೇಳಿಕೊಳ್ಳುವ ಐಪ್ಯಾಡ್ ಭಾಷಣಗಳಲ್ಲಿ ಸುಳ್ಳನ್ನೇ ಸತ್ಯವೆಂದು ಘಂಟಾಘೋಷವಾಗಿ ಬಿತ್ತರಿಸುವ ಕಳ್ಳ ಸನ್ಯಾಸಿಗೆ ಆತ್ಮವಂಚನೆಯ ಪಾಪ ತಟ್ಟದಿರುವುದೇ?

16. ಮಠದಲ್ಲಿ ’ಮಹಾಮುತ್ಸದ್ದಿ’, ’ಮಹಾಮಹೋಪಾಧ್ಯಾಯ’ರೆನ್ನಿಸಿಕೊಂಡು ವಾದದಲ್ಲಿ ಮಂಡನಮಿಶ್ರರಿಗಿಂತ ತೂಕ ಹೆಚ್ಚೆಂದು ಕೊಚ್ಚಿಕೊಳ್ಳುವ ಬಾವಯ್ಯ ಇದ್ದಾರೆ. ಅಂತಹ ’ಮಹಾಮಹೋಪಾಧ್ಯಾಯ’ರು ತಮ್ಮ ಕಳ್ಳಸನ್ಯಾಸಿ ಬಾವಯ್ಯನಿಗೆ ಗೀತೆಯನ್ನಾದರೂ ಕಂಠಪಾಠ ಮಾಡಿಕೊಳ್ಳಲು ಹೇಳಬಹುದಿತ್ತಲ್ಲ? ಜನಸಾಮಾನ್ಯರನೇಕರು ನಿರರ್ಗಳವಾಗಿ ಪಠಿಸುವ ಗೀತೆಯ ಶ್ಲೋಕಗಳನ್ನಾಗಲೀ ಅವುಗಳ ಅರ್ಥವನ್ನಾಗಲೀ ಅರಿಯದೆ, ಚೊಚ್ಚರಿಸುವ ಘನಪಂಡಿತರು-ನಮ್ಮ ಶೀಗಳು ಎನ್ನಲಿಕ್ಕೆ ಬಹಳ ಹೆಮ್ಮೆಯೆನಿಸುತ್ತದೆ.

ಪೀಠಕ್ಕೆ ಸಕಲ ವೇದ, ಶಾಸ್ತ್ರ, ಪುರಾಣಗಳಲ್ಲಿ ಪಾರಂಗತರಾದ, ವಿರಾಗಿಯಾದ, ಆಧ್ಯಾತ್ಮವನ್ನೇ ಆತುಕೊಂಡ ಸೂಕ್ತ ವಟುವನ್ನು ಆಯ್ಕೆ ಮಾಡಬೇಕಿತ್ತು ಎಂದು ಆಯ್ಕೆಯ ಸಮಿತಿಯಲ್ಲಿ ಹಾಲಿ ಬದುಕಿರುವ ಕೆಲವು ತಲೆಗಳಿಗಾದರೂ ಈಗ ಅನಿಸುವುದಿಲ್ಲವೇ? ಅಥವಾ ಪ್ರಾಂತೀಯ ಪಕ್ಷಪಾತ ಅವರಲಿ ಇನ್ನೂ ಹಾಗೇ ಉಳಿದಿದೆಯೋ?

17. ಸಮಾಜದಲ್ಲಿ ನಂಬಿಕೆ ಎನ್ನುವುದಕ್ಕೆ ಅಪಾರ ಬೆಲೆ ಇದೆ. ಗಂಡ-ಹೆಂಡತಿಯರಲ್ಲಿ, ಪಾಲಕರು-ಮಕ್ಕಳಲ್ಲಿ, ಉತ್ಪಾದಕ-ವಿತರಕ ಮತ್ತು ಬಳಕೆದಾರರಲ್ಲಿ, ಸಂಘಸಂಸ್ಥೆಗಳು ಮತ್ತು ಅವುಗಳ ವಹಿವಾಟುದಾರರಲ್ಲಿ ಎಲ್ಲೆಲ್ಲೂ ನಂಬಿಕೆಗೆ ಪ್ರಧಾನ ಭೂಮಿಕೆ. ನಂಬಿಕೆ ಹೇಗಿರುತ್ತದೆ ಎಂಬುದಕ್ಕೆ ಇಂದು ಕಂಡ ಚಿತ್ರವೊಂದನ್ನು ಹಾಕಿದ್ದೇನೆ ನೋಡಿ. ಅದರಲ್ಲೂ ಶ್ರೀರಾಮನಲ್ಲಿ ದೇಶದ ಜನತೆಗೇ ಅಷ್ಟೊಂದು ನಂಬಿಕೆಯಿದೆ. ಅಂತಹ ಹೆಸರುಗಳನ್ನೆಲ್ಲ ಬಳಸಿಕೊಂಡು, ಅಧಿಕಾರವನ್ನು ಬಳಸಿಕೊಂಡು ಮುಗ್ಧ ಭಕ್ತರಿಗೆ ಎಸಗಿದ ಸಾಮಾಜಿಕ ಮಹಾದ್ರೋಹ ಇದಲ್ಲವೇ?

18. ದೇವರ ಹೆಸರುಗಳನ್ನು ಬಳಸಿಕೊಂಡರೆ ದೇವರೇ ಸಾಕ್ಷಾತ್ ಎದುರುವಾದಿಯಾಗಿ ಇಳಿದುಬರೋದಿಲ್ಲ. ಆದರೆ ಕೈಬಿಟ್ಟು ಹೋಗ್ತಾನಷ್ಟೆ. ತನ್ನ ಜೀವನ ಪರ್ಯಂತ ಸರ್ವಶ್ರೇಷ್ಠ ಮಾನವ ಎಂದು ಸಕಲ ಜನರಿಂದ ಗೌರವಿಸಲ್ಪಟ್ಟ, ಮರ್ಯಾದಾಪುರುಷೋತ್ತಮನೆಂದೇ ಖ್ಯಾತಿ ಗಳಿಸಿದ ಶ್ರೀರಾಮನ ಹೆಸರಿಗೆ ಮಸಿಬಳಿಸುವ ಕೆಲಸ ಇದಲ್ಲವೇ?

19. ಗಂಡ-ಹೆಂಡಿರ ನಡುವೆ ಇರುವ ಸಮರಸವನ್ನು ಹದಗೆಡಿಸಿ ಹಲವು ಜೋಡಿಗಳನ್ನು ಬೇರೆ ಮಾಡಿದ್ದು ಗೊತ್ತಾಗುತ್ತದೆ. ತನ್ನ ಕಚ್ಚೆ ಹರುಕುತನಕ್ಕಾಗಿ ದಂಪತಿಗಳನ್ನೇ ಬೇರ್ಪಡಿಸಿದ ಪಾಪ ಕೃತ್ಯಕ್ಕೆ ಏನೆನ್ನುತ್ತೀರಿ?

20. ತನ್ನ ಏಕಾಂತ ಬಳಕೆಗೆ ಬಲಾತ್ಕರದಿಂದ ಒಗ್ಗಿಸಿಕೊಂದ ಹುಡುಗಿಯನ್ನು ಮಠದಲ್ಲಿ ತನ್ನ ಸೇವೆಗೆ ನಿಂತ ಅಥವಾ ಯಾವುದೋ ಹುದ್ದೆಯನ್ನು ನಿಭಾಯಿಸುವ ನಜಭಂಡ ಗಂಡಿಗೆ ಒತ್ತಾಯಪೂರ್ವಜವಾಗಿ ಗಂಟುಹಾಕಿ ಮದುವೆ ಮಾಡಿಸಿ, ಆ ಮದುವೆಗಳ ತರುವಾಯವೂ ಅಂತಹ ಮಹಿಳೆಯರನ್ನು ಬೇಕಾದಾಗೆಲ್ಲ ಏಕಾಂತಕ್ಕೆ ಕರೆಯುವ ’ಮಹಾಮುನಿ’ಗಳು ಈ ಪೀಠವನ್ನು ಆಳಬೇಕೇ?

21. ಮಕ್ಕಳಿಲ್ಲದ ಎಷ್ಟೋ ಜನ ತಮ್ಮ ಆಸ್ತಿಪಾಸ್ತಿಗಳನ್ನು ಮಠಕ್ಕೆ ಕೊಡಲು ಮುಂದಾದಾಗ ಅದನ್ನು ತಮಗೆ ಬೇಕಾದ ಖಾಸಗಿ ಹೆಸರುಗಳಿಗೆ ವರ್ಗಾಯಿಸಿಕೊಳ್ಳುವ ಧಾರ್ಮಿಕ ಮುಖಂಡತ್ವ ಈ ಸಮಾಜಕ್ಕೆ ಬೇಕೆ?

22. ದಾನಪತ್ರಗಳ ಮೂಲಕ ತಮ್ಮ ಆಸ್ತಿಗಳನ್ನು ದಾನ ಮಾಡಿದ ಜನರನ್ನು, ಅವರ ಜೀವನಕ್ಕೊಂದು ಜಾಗ ಕೊಡದೆ ಒದ್ದೋಡಿಸುವ ’ಕೃತಜ್ಞತಾ ರೌಡಿಸಂ’ ಸಂಸ್ಕೃತಿ, ಹಿರಿಯರಾಗಿ ಹಿಂದಿನ ಸಂಪ್ರದಾಯಗಳನ್ನು ಅನುಸರಿಸಿ ನಡೆದುಕೊಳ್ಳುತ್ತ ಮಠದ ಇಂದಿನ ಅಭಿವೃದ್ಧಿಗೆ ಪೂರಕರಾಗಿದ್ದ-ಕಾರಣೀಕರ್ತರಾಗಿದ್ದ ಹಿರಿಯ ಶಿಷ್ಯರನ್ನೆಲ್ಲ ತಮಗೆ ಬೇಡವಾದಾಗ ಒದ್ದೋಡಿಸುವ ತುಘಲಕ್ ಸಂಸ್ಕೃತಿಯ ಮಹಾಸ್ವಾಮಿಗಳು ಈ ಸಮಾಜಕ್ಕೆ ಬೇಕೇ?

23. ತನ್ನ ಸಾಮಾಜಿಕ ಸ್ಥಾನಮಾನ ಬೆಳವಣಿಗೆಯಿಂದ ಗಿಟ್ಟಿಸಿಕೊಂಡ ಅನ್ಯ ಸಮಾಜಗಳ ಪ್ರಮುಖರ, ಪ್ರಮುಖ ಉದ್ಯಮಿಗಳ ಸಂಪರ್ಕವನ್ನು ಅರಿವಿಲ್ಲದೇ ಈ ಕಳ್ಳಸ್ವಾಮಿಗೆ ಒದಗಿಸಿದ ಕೆಲವು ಶಿಷ್ಯಂದಿರಿದ್ದಾರೆ. ಅಂಥವರಲ್ಲೆ ಒಬ್ಬರು ಈಗ ಕಪಾಳಮೋಕ್ಷಕ್ಕೆ ಒಳಗಾಗಿ ಸಂತ್ರಸ್ತರಾಗಿದ್ದಾರೆ. ಸಮಸ್ಯೆ ಏನೆಂದರೆ ಕಳ್ಳ ಸ್ವಾಮಿ ತಾನು ಹಾಳಾಗುವುದರ ಜೊತೆಗೆ ಇತರರನ್ನೂ ಆ ನಿಟ್ಟಿನಲ್ಲಿ ಹಾಳುಗೆಡವಿದ್ದಾನೆ.

“ನಮ್ಮ ಸ್ವಾಮಿಗಳು” ಎನ್ನುತ್ತ ಅಭಿಮಾನದಿಂದ ಪರಿಚಯಿಸಿ, ಈಗ “ಅಂಥಾ ಧರ್ಡ್ ಕ್ಲಾಸ್ ಸ್ವಾಮಿಯ ಶಿಷ್ಯರಾದ ನೀವಿನ್ನೆಂಥ ಸಂಪನ್ನರು?” ಎಂಬಂತೆ ಅವರೆಲ್ಲ ನೋಡುವಂತಾಗಿದೆ. ಇದರಿಂದ ಪರಿಚಯಿಸಿದ ಶಿಷ್ಯರಿಗೂ ಮತ್ತು ಸಂಪರ್ಕಕ್ಕೆ ಒಪ್ಪಿ ಬೆಳೆಸಿಕೊಂಡ ಇತರ ಪ್ರಮುಖರು ಮತ್ತು ಉದ್ಯಮಿಗಳಿಗೂ ಹಲವು ರೀತಿಯಲ್ಲಿ ವಿಶ್ವಾಸದ್ರೋಹ ಆದಂತಲ್ಲವೇ?

24. ಸಮಾಜದಲ್ಲಿ ಎಲ್ಲರೂ ಮಠಕ್ಕೆ ಬರಬೇಕು, ಧರ್ಮ-ಅಧರ್ಮಗಳ ವ್ಯತ್ಯಾಸ ಅರಿಯಬೇಕು, ಆಧ್ಯಾತ್ಮಿಕವಾಗಿ ಜ್ಞಾನಮಾರ್ಗದಲ್ಲಿ ಮುನ್ನಡೆಯಬೇಕು, ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತ ಹೋಗಬೇಕು ಎಂಬುದು ಈ ಪರಂಪರೆಯ ಆದಿಗುರುವಿನ ಹೇಳಿಕೆ; ಅದು ಭಸ್ಮಾಸುರ ಹೊಸದಾಗಿ ರೀಸರ್ಚ್ ಮಾಡಿ ತೆಗೆದದ್ದಲ್ಲ.

ಹಾಗಂತ ಮಹಿಳೆಯರೇ ಎಲ್ಲೆಡೆಗೆ ಸನ್ಯಾಸಿಗೆ ತಾಗಿನಿಂತು ಸೇವೆ ಮಾಡಿ, ಮುನ್ನಡೆಯಿರಿ ಎಂದು ಯಾವುದೇ ಸನ್ಯಾಸಿಯೂ ಹೇಳಲಿಲ್ಲ, ಸುಮಂಗಲಿಯರೇ ಪೂರ್ಣಕುಂಭ ಹಿಡಿದು ಸ್ವಾಗತಿಸಬೇಕೆಂಬ ನಿಯಮವೂ ಇಲ್ಲ-ಇದು ಮಾತ್ರ ತೊನೆಯಪ್ಪನ ರೀಸರ್ಚ್ ಹೌದು! ಯಾಕೆಂದರೆ ಸಿಕ್ಕಲ್ಲೆಲ್ಲ ಮಹಿಳೆಯರ’ಪೂರ್ಣಕುಂಭ’ ನೋಡುವ, ಕೈಸೋಕಿಸುವ, ಸವರುವ ಚಪಲ ಚನ್ನಿಗರಾಯ ಅವನು. ಹಾಗಾದರೆ ಸಮಾಜದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗಿತ್ತೇ? ಖಂಡಿತವಾಗಿಯೂ ಇಲ್ಲ; ಮಹಿಳೆಯರಿಗೆ ಎಷ್ಟು ಬೇಕೋ ಅಷ್ಟು ಆದ್ಯತೆ ಇದ್ದೇ ಇತ್ತು. ಈಗ ಇದೇ ಪರಂಪರೆಯ ಅನ್ಯ ಮಠಗಳಲ್ಲಿ ಕಾಣುತ್ತಿಲ್ಲವೇ?

25. “ನಮ್ಮ ಸ್ವಾಮಿಗಳು ಈ ಮಡಿಯಲ್ಲಿ ಮಾಡಿದ್ದನ್ನೆಲ್ಲ ತಿಂತಾರೋ ಇಲ್ಲವೋ?” ಎಂದುಕೊಂಡರಂತೆ ಕೆಲವರು, ಮುಟ್ಟಾದವರನ್ನೂ ಬಿಡದೆ ಸಂಭೋಗಿಸಿದ ಜೀನ್ಸ್ ಪ್ಯಾಂಟ್ ಅಭಿಮಾನಿಗೆ ಎತ್ತಣ ಮಡಿ ಎನ್ನುತ್ತೀರಿ ಅಭಿಮಾನಿಗಳೇ? [ಮುಟ್ಟಾದವರದ್ದು ಮೈಲಿಗೆ ಅಂತಲ್ಲ, ಸ್ವಚ್ಛತೆಯ ಅಂಗವಾಗಿ ಅವರು ಕೆಲವು ಕೆಲಸಗಳಲ್ಲಿ ಭಾಗಿವಹಿಸಲು ಸಾಧ್ಯವಾಗುವುದಿಲ್ಲ]

26. ನಮ್ಮ ಸಮಾಜದ ದೃಷ್ಟಿಯಲ್ಲಿ ಮಠ ತನ್ನ ಲೌಕಿಕ ಬೆಳವಣಿಗೆಗೆ ಪ್ರಾಧಾನ್ಯತೆ ನೀಡಬೇಕಿಲ್ಲ. ಈ ಪೀಠದ ಸನ್ಯಾಸಿ ಆಧ್ಯಾತ್ಮಿಕ ಪಥದಲ್ಲಿ ಹೆಚ್ಚಿನ ಸಾಧನೆ ಮಾಡಿ, ಭಗವಾನ್ ಶ್ರೀಧರ ಸ್ವಾಮಿಗಳಂತೆ ಆರ್ತರನ್ನು ತಾಪ[ಅಧಿಭೌತಿಕ-ಅಧಿದೈವಿಕ-ಅಧ್ಯಾತ್ಮಿಕ]ತ್ರಯಗಳಿಂದ ಮುಕ್ತಿಗೊಳಿಸಬೇಕೆಂಬುದು ಈ ಪರಂಪರೆಯ ಉದ್ದೇಶ.

ಮಠದ, ಪೀಠದ ಮೂಲ ಧ್ಯೇಯೋದ್ದೇಶವನ್ನೇ ಬುಡಮೇಲಾಗಿಸುವ ಹಲವು ಲೌಕಿಕ ಯೋಜನೆಗಳಿಂದ ನಡೆದದ್ದು ಕೋಟಿಗಟ್ಟಲೆ ಎತ್ತುವಳಿ ಮಾತ್ರ! ಅಂತಹ ಯೋಜನೆಗಳ ಅಗತ್ಯತೆ ನಮಗಿತ್ತೇ ಅಭಿಮಾನಿಗಳೇ? ಅಧ್ಯಾತ್ಮಮಾರ್ಗದಲ್ಲಿ ಸೊನ್ನೆ ಸಾಧನೆಯ ಈ ’ಮಹಾಮುನಿ’ ಹಲವರನ್ನು ಉದ್ದರಿಸಿದೆನೆಂದು ಸ್ವತಃ ನಿಂತು, ಕಟ್ಟುಕತೆಗಳ ಪವಾಡ ಪುಸ್ತಕ ಬರೆಸುತ್ತಾನೆ, ಇದೆಲ್ಲ ಯಾಕೆ ಬೇಕಿತ್ತು ಅಭಿಮಾನಿಗಳೇ?

27. ಸನ್ಯಾಸಿಗಳಾದವರು ಕಂಡಿದ್ದಕ್ಕೆಲ್ಲ “ನಮಗೆ ದೇವರ ಪ್ರೇರಣೆಯಾಗಿದೆ” ಎನ್ನತೊಡಗಿದರೆ ಅದು ’ತೋಳಬಂತಲೇ ತೋಳ’ ಕತೆಯಾಗುತ್ತದೆ! ಸಾಧಕರಿಗೆ ಕೆಲವೆಡೆ ನಿಜವಾಗಿಯೂ ಸದುದ್ದೇಶದ ಸಂಕಲ್ಪಕ್ಕೆ ಪ್ರೇರಣೆಯಾಗಬಹುದು. ಅದುಬಿಟ್ಟು,”ಪ್ರಪಂಚದಲ್ಲಿಯೇ ಅತಿ ಎತ್ತರದ ಆಂಜನೇಯನ ವಿಗ್ರಹ ಮಾಡಿಸು, ಅಷ್ಟಮಂಗಲದವರಿಂದ ಹೇಳಿಸಿ ಆಂಜನೇಯ ಹುಟ್ಟಿದ್ದೇ ಇಲ್ಲಿ ಅಂತ ಹೇಳು, ಮಲ್ಲಿಕಾ ಶರಬತ್ತಿನಿಂದ ಅದಕ್ಕೆ ಶಿಲಾನ್ಯಾಸ ಮಾಡಿಸು” ಎಂಬಂತಹ ಪ್ರೇರಣೆಗಳಾದರೆ ಆಗ ಯಾಕೆ ಅನುಮಾನಿಸೋದಿಲ್ಲ ಅಭಿಮಾನಿಗಳೇ?

28. ಸನ್ಯಾಸಿ ಮೂಲತಃ ಲೋಕ-ವಿಮುಖ, ವಿರಾಗಿ. ಅವನಿಗೆ ಬೆಲೆ ಕಟ್ಟಬಾರದು, ಬೆಲೆ ಕಟ್ಟಲಾಗದು. ಲೌಕಿಕವಾಗಿ ಯಾವುದೋ ಸಂಬಂಧಗಳಿಂದ ಅವನನ್ನು ಬೆಸೆಯಬಾರದು. ಮಠದಲ್ಲಿದ್ದರೂ ಅವ ಮಠಕ್ಕಿಂತ ಭಿನ್ನವಾಗಿರಬೇಕು. ನಾಳೆ ಮಠ ಬಿಟ್ಟು ಹೋದರೂ ಅದರಿಂದ ಮಠವೂ ವಿಚಲಿತವಾಗಬಾರದು ಮತ್ತು ಮಠವೇ ತನ್ನದೆಂಬ ವ್ಯಾಮೋಹವನ್ನೂ ಸನ್ಯಾಸಿಯೂ ಇರಿಸಿಕೊಳ್ಳಬಾರದು. ಹಾಗಾದಾಗ ಮಾತ್ರ ಅದು ರಾಜಸನ್ಯಾಸವೆನಿಸುತ್ತದೆ.

ಪರಂಪರೆಯ ಆದಿಗುರುವಿಗೆ ಅಂದಿನ ರಾಜರುಗಳು ಆಶ್ರಯ ನೀಡಲು ಮುಂದಾಗಿದ್ದರು. ಅವರು ಕಳಿಸಿದ ಮೇನೆ, ಪಲ್ಲಕ್ಕಿ, ಬಿರುದು ಬಾವುಲಿಗಳನ್ನು ಆದಿಗುರು ಒಪ್ಪಿಕೊಳ್ಳದೆ ಹಿಂದಕ್ಕೆ ಕಳಿಸಿದರಂತೆ. ಮಠಗಳನ್ನು ಅವರು ಸ್ಥಾಪಿಸಿದ್ದು ಧರ್ಮರಕ್ಷಣೆಗಾಗಿಯೇ ಹೊರತು ಅಡ್ಡಪಲ್ಲಕ್ಕಿ ಉತ್ಸವ, ತೆಪ್ಪೋತ್ಸವ, ಆಡಂಬರದ ಪುರಪ್ರವೇಶ ಇದನ್ನೆಲ್ಲ ನಡೆಸೋದಕ್ಕಲ್ಲ. ಅಂಥದ್ದರಲ್ಲಿ ಪೂರ್ವಾಶ್ರಮದ ಹೆಸರಿನಲ್ಲಿ ಸನ್ಯಾಸಿಗೆ ಮಹಿಳಾ ಏಜೆಂಟು ಕೋಟಿಯ ಜೀವವಿಮೆ ಇಳಿಸಿದ್ದಾರಲ್ಲ, ಇದಕ್ಕೇನೆನ್ನುತ್ತೀರಿ ಅಭಿಮಾನಿಗಳೇ?

ಯಾವ ಸನ್ಯಾಸಿಗೂ ತನ್ನನ್ನು ಸಂಶಯಿಸಬೇಡಿ ಎಂದು ಕೇಳಿಕೊಳ್ಳುವ ಪರಿಸ್ಥಿತಿ ಹುಟ್ಟಬಾರದು. ಅಂತಹ ಸಮಸ್ಯೆ ಹುಟ್ಟಿದೆ ಎಂದರೆ ಅಲ್ಲಿ ಸಮಸ್ಯೆ ನಿಜವಾಗಿಯೂ ಇದೆಯೆಂದೇ ಅರ್ಥ. ಇಲ್ಲಿಯವರೆಗೆ ನಂಬಿದ್ದೆವು, ಅಡ್ಡಡ್ಡ ಬಿದ್ದಿದ್ದೆವು, ಹಲ್ಕಿರಿತಕ್ಕೆ ಸೋತಿದ್ದೆವು, ಹಲವನ್ನು ತೆತ್ತು ಅಧರ್ಮದ ಖರ್ಚಿಗೆ ಕಳಕೊಂಡೆವು, ಈ ಕ್ಷಣದಲ್ಲೆ ಅಂತಹ ಸೆಂಟಿಮೆಂಟ್ಸ್ ಗಳಿಂದ ಹೊರಬರೋದು ಕೆಲವರಿಗೆ ಕಷ್ಟವಾಗಬಹುದು; ಹೊರಬರಬೇಕಾದ್ದು ಧರ್ಮ ಎಂದು ಅವರು ಅರಿಯಬೇಕು.

ಯಾವ ಗುರುವು ತಾನೇ ಅವತಾರಿ ಎಂದು ಮತ್ತೆ ಮತ್ತೆ ಹೇಳಿಕೊಳ್ತಾನೋ ಅವನು ಢೋಂಗಿ ಎಂದೇ ಅರ್ಥ. ಯಾಕೆಂದರೆ ಇತಿಹಾಸದಲ್ಲಿ ಆದಿಗುರುವನ್ನು ಸೇರಿದಂತೆ ಯಾವೊಬ್ಬ ಗುರುವೂ ತಾನು ಅವತಾರಿಯೆಂದು ಹೇಳಿಕೊಳ್ಳಲಿಲ್ಲ. ರಾಮ, ಕೃಷ್ಣ, ಬುದ್ಧ ಯಾವ ಅವತಾರಿಗಳೂ ಸಹ ತಾವು ಅವತಾರಿಗಳೆಂದು ಹೇಳಿದ್ದಿಲ್ಲ; ಜನ ಅವರಲ್ಲಿ ಅಂಥದ್ದನ್ನು ಕಂಡರು, ಅವತಾರಿಗಳು ಎಂದರು. ವೇದವನ್ನು ವಿಂಗಡಿಸಿ, ಮಹಾಭಾರತವನ್ನು ಬರೆದ ವ್ಯಾಸರು ತಾನು ಅವತಾರಿ ಎಂದು ಎಲ್ಲೂ ಹೇಳಲಿಲ್ಲ; ಜನ ಅವರೇ ದೇವರ ರೂಪವೆಂದರು.

ಮಹಿಳೆಯರ ಹಿಂದೆ ಬಿದ್ದು ಒದೆ ತಿನ್ನುತ್ತ ಗಟಾರಗಳಲ್ಲಿ ಬೀಳುತ್ತ ಶ್ರಾದ್ಧಭಟ್ಟನಾಗಿರಬೇಕಾದ ಚಟಗಾರನನ್ನು ಯಾರದೋ ತಪ್ಪಿನಿಂದ ಪೀಠದಲ್ಲಿ ಕೂರಿಸಿಬಿಟ್ಟೆವು. ಇಡೀ ಸಮಾಜವನ್ನು ಡಿವೈಡ್ ಅಂಡ್ ರೂಲ್ ಪಾಲಿಸಿಯಲ್ಲಿ ನಡೆಸುತ್ತ ಬದುಕಿಕೊಂಡಿದ್ದಾನೆ. ಇಡೀ ಸಮಾಜ ಸತ್ಯವನ್ನು ಅರಿತುಕೊಂಡು ರಟ್ಟೆ ಹಿಡಿದು ಎಳೆದು ಹಾಕಿದ್ದರೆ ಇಷ್ಟೊತ್ತಿಗೆ ಹಲವು ಕೋಟಿಗಳು ಸಮಾಜಕ್ಕೆ ಉಳಿಯುತ್ತಿದ್ದವು!

ಗುರು ಎಂಬ ಗೌರವ ಆ ಸ್ಥಾನಕ್ಕೆ ನೀಡುವಂಥದ್ದು; ವ್ಯಕ್ತಿ ಅದನ್ನು ಉಳಿಸಿಕೊಂಡರೆ ಅವನಲ್ಲಿನ ಆಧ್ಯಾತ್ಮಿಕ ’ಗುರುತ್ವಾ’ಕರ್ಷಣ ಶಕ್ತಿ ಹೆಚ್ಚಿದರೆ ವ್ಯಕ್ತಿ ಗುರುವೇ ಆಗುತ್ತಾನೆ; ವ್ಯಕ್ತಿಯಲ್ಲಿ ಆ ಸ್ಥಾನಕ್ಕೆ ವ್ಯತಿರಿಕ್ತವಾದ ಚಹರೆಗಳು, ನಡವಳಿಕೆಗಳು ಕಾಣಿಸಿಕೊಂಡಾಗ ಅವನನ್ನು ಗುರುವೆನ್ನದೆ ಓಡಿಸಬೇಕಾಗುವುದು ಧರ್ಮ ಮತ್ತು ಧರ್ಮವನ್ನು ರಕ್ಷಿಸಲು ನಾವು ಮಾಡಬೇಕಾದ ಕರ್ತವ್ಯ ಅದಾಗಿರುತ್ತದೆ.

ಅತಿಯಾಗಿ ತೂತುಬಿದ್ದು ತುಂಡುತುಂಡಾಗುತ್ತಿರುವ ಹಲ್ಲು [ರೂಟ್ ಕ್ಯಾನಲ್ ಮಡಿದರೂ] ಮತ್ತೆಂದೂ ಸರಿಯಾಗದು-ಇಟ್ಟುಕೊಂಡರೆ ನಮಗೇ ತಾಳಲಾರದ ನೋವು ಕೊಡುವುದು; ಅದು ನಮ್ಮ ದೇಹದ ಭಾಗವಾಗಿದ್ದರೂ ಅದನ್ನು ಕಿತ್ತುಹಾಕಲೇಬೇಕು. ಭಿನ್ನಗೊಂಡ ವಿಗ್ರಹದಮೇಲೆ ದೇವರೆಂಬ ವ್ಯಾಮೋಹವಿರಕೂಡದು; ವ್ಯಾಮೋಹವನ್ನು ಇನ್ನೂ ಇರಿಸಿಕೊಂಡಿದ್ದರೆ ಅದು ಶಕ್ತಿಗೆ ನಾವು ಮಾಡುವ ಅಪಚಾರವೆನಿಸುತ್ತದೆ. ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಬೇಕು-ಅದು ಧರ್ಮ ರಕ್ಷಣೆಯೆನಿಸುತ್ತದೆ.

ಅಪ್ಪ-ಅಮ್ಮ ಅಥವಾ ಮನೆಯಲ್ಲಿ ಸದಸ್ಯರಾರೋ ಸತ್ತಾಗ ಪ್ರೀತಿಯೆಂದು ಹೆಣವನ್ನು ಹಾಗೇ ಇಟ್ಟುಕೊಂಡರೆ ಮತ್ತೆ ಬದುಕುವರೇ? ಅಸಲಿಗೆ ನಾವಾದರೂ ಈ ಲೋಕದಲ್ಲಿ ಚಿರಂಜೀವಿಗಳೇ? ಇಲ್ಲಿರುವವರೆಗೆ ಪೂರ್ವಜರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ನಡೆಯಬೇಕು. ಪೀಠದಲ್ಲಿರುವ ಸನ್ಯಾಸಿ ಯತಿಧರ್ಮವನ್ನು ಮೀರಿದಾಗ ಮೊದಲು ಅವನನ್ನು ಇಳಿಸಿ ಮಠ-ಪೀಠಗಳನ್ನು ವೈದಿಕ ಕರ್ಮಾಂಗಗಳಿಂದ ಶುದ್ಧಗೊಳಿಸಿ, ಯೋಗ್ಯ ಹೊಸ ವಟುವಿಗೆ ದೀಕ್ಷೆ ನೀಡಬೇಕು. ಮಠದ ಲೌಕಿಕ ಆರ್ಥಿಕ ವ್ಯವಹಾರಗಳನ್ನು ಸಮರ್ಥ ವಿಶ್ವಸ್ಥ ಸಮಿತಿಯ ಮೂಲಕ ನಿರ್ವಹಿಸಬೇಕು.

29. ಷಡ್ಯಂತ್ರ ಎನ್ನುತ್ತ ಹಲವು ಅನ್ಯ ಮಠಗಳನ್ನು ದೂಷಿಸುವ ಭಸ್ಮಾಸುರನ ಬಳಗ, ಹೇಗೆ ನಡೆದುಕೊಳ್ಳುತ್ತದೆ ಎಂದು ಬಕೆಟ್ ಹಿಡಿಯದ ಮಾಧ್ಯಮವಾಹಿನಿಯೊಂದು ದಿನಗಟ್ಟಲೆ ತೆರೆದು ತೋರಿಸಿದೆ. ನಿಮ್ಮಲ್ಲಿ ಅಂತಹ ಆಧಾರಗಳಿದ್ದರೆ ಅವುಗಳನ್ನೆಲ್ಲ ಹಿಡಿದು ಮುನ್ನಡೆಸಿ ನೋಡೋಣ. ಸುಮ್ಮನೆ ಹುಲ್ಲಿನ ಗ್ರಾಫಿಕ್ಸ್ ತೋರಿಸಿ ಹಸುವನ್ನು ಕರೆದೊಯ್ಯುತ್ತಿದ್ದೀರಿ; ಪಾಪ ಹಸುವಿಗೆ ಗೊತ್ತಿಲ್ಲ-ಅಲ್ಲಿ ಹುಲ್ಲಿಲ್ಲ; ಹಸಿರು ಹುಲ್ಲು ಕಂಡಂತಾಗಿದ್ದು ಮರೀಚಿಕೆಯಷ್ಟೆ. ಶೀಘ್ರದಲ್ಲೆ ಯಾವ ’ಚಡ್ಡಿ ಯಂತ್ರ’ ಇದೆ ಎಂಬುದು ಗೊತ್ತಾಗಲಿದೆ. ಆಗೇನೆನ್ನುತ್ತೀರಿ ಅಭಿಮಾನಿಗಳೇ?

30. ಸಮಷ್ಟಿ ಸಮಾಜದಲ್ಲಿ ಈ ಸಮಾಜದವರು ತಲೆ ಎತ್ತಿ ತಿರುಗಾಡದಂತಹ ವಾತಾವರಣ ಸೃಷ್ಟಿಯಾಗಿದೆ ಎಂಬುದನ್ನು ಎಲ್ಲರೂ ಬಲ್ಲರು. ನೈತಿಕತೆ ಇದ್ದರೆ, ಬ್ರಹ್ಮಚರ್ಯದ ಕಸುವಿದ್ದರೆ, ಯೋಗ ಬಲವಿದ್ದರೆ, ತಪೋಬಲವಿದ್ದರೆ , ವಿದ್ವತ್ ಬಲವಿದ್ದರೆ ಯಾವೊಬ್ಬರೂ ಈ’ಮಹಾಮುನಿ’ಯ ವಿರುದ್ಧ ತಿರುಗಿ ಬೀಳ್ತಿರಲಿಲ್ಲ; ಎಂದು ಮನಸ್ಸಿನಲ್ಲಿ ಕಚ್ಚೆಬಿಚ್ಚಿದನೋ ಅಂದೇ ಅವನ ಈ ಜನ್ಮದ ಸನ್ಯಾಸದ ಕತೆಗೆ ಆತ್ಮಶ್ರಾದ್ಧ ನಡೆದುಹೋಗಿದೆ! ಈಗಿರುವುದು ಸನ್ಯಾಸಿಯ ವೇಷ ಮಾತ್ರವೇ ಹೊರತು ಸನ್ಯಾಸಿ ಅಲ್ಲಿಲ್ಲ. ಕಳಂಕ ತಟ್ಟಬಾರದೆಂದು ಬಸುರಿ ಸೀತೆಯನ್ನೇ ತ್ಯಾಗ ಮಾಡಿದ್ದ ಶ್ರೀರಾಮ; ಕಳಂಕ ಅಂಟಿಸಿಕೊಂಡ ಕಳ್ಳ ಸನ್ಯಾಸಿಯನ್ನು ಪೀಠದಲ್ಲಿರಿಕೊಳ್ಳುವುದು ನಿಮಗೆ ತರುವುದೇ ಕ್ಷೇಮ?

ತುಮರಿಯ ಮನಸ್ಸಿನಲ್ಲಿ ಹಲವು ನೂರು ಪ್ರಶ್ನೆಗಳಿವೆ. ಮೂವತ್ತನೆಯ ಪ್ರಶ್ನೆ ಮುಂದೆ ಬರುತ್ತಿದ್ದಂತೆ ಹಠಾತ್ತಾಗಿ,

“ನೀವು ಪೀಠವನ್ನು ಗಟ್ಟಿಯಾಗಿ ಹಿಡಿದುಕೊಳ್ಳಿ. ನಿಮ್ಮನ್ನು ಪೀಠ ರಕ್ಷಣೆ ಮಾಡ್ತದೆ. ಒಟ್ಟಿಗೇ ಇರೋಣ, ಒಟ್ಟಿಗೇ ಇರೋಣ. [ಅಂತರಂಗದಲ್ಲಿ-ಜೈಲಿಗೆ ಹೋಗುವಾಗಲೂ ಜೈಲ್ ಭರೋ ನಡೆಸಿ ಪರಾಕ್ರಮ ಮೆರೆಯಲಿಕ್ಕೆ ನಮಗೆ ನೀವೆಲ್ಲ ಬೇಕು, ಹಾಗಾಗಿ ನಾವು ನಮ್ಮ ಶಿಷ್ಯರನ್ನು ಸದಾ ಹೊಗಳುತ್ತಲೇ ಇರ್ತೇವೆ, ನಿಮ್ಮಂತಹ ಬುದ್ಧುಗಳಿರುವುದರಿಂದಲೇ ಇಂದು ’ನಾವಿದ್ದೇವೆ’] ನಾವು ಮಾಡು ಎನ್ನೋದರೊಳಗೆ ನೀವದನ್ನು ಮಾಡಿ ಮುಗಿಸಿರ್ತೀರಿ ಅಂತ ನಮಗೆ ಗೊತ್ತು [ಎಂದು ಹೇಳುತ್ತೇವೆ]. ಸಮಾಜ[ಅಂದರೆ ನಮ್ಮನ್ನು ಬೆಂಬಲಿಸುವ ಭಾಗ] ಒಗ್ಗಟ್ಟಿನಿಂದ ಇರಬೇಕೆಂಬುದೇ ನಮ್ಮ ಉದ್ದೇಶ[ಹಿಂದೆಲ್ಲ ಒಗ್ಗಟ್ಟಿರಲಿಲ್ಲ ಅಂತಲೇ? ಅಥವಾ ಈಗ ಒಗ್ಗಟ್ಟಿನಿಂದ ಇದೆ ಅಂತಲೇ?]

ನೀವು ಒಗ್ಗಟ್ಟಾಗಿರಬೇಕು ಏಕೆಂದ್ರೆ…ಏಕೆಂದ್ರೆ..ಏಕೆಂದ್ರೆ ನಾವು ’ಅಲ್ಲಿಗೆ’ ಹೋಗುವ ಸನ್ನಿವೇಶ ಬಂದ್ರೆ ಐದುನೂರು ಬಸ್ಸುಗಳಲ್ಲಿ ನೀವೆಲ್ಲ ಬರಬೇಕು. ಚುನಾವಣೆ ನೆನಪಿಸಿಕೊಳ್ಳಿ, ಚೆನ್ನಾಗಿತ್ತಲ್ಲವೇ? ಅದಕ್ಕಿಂತಲೂ ’ಹೆಚ್ಚಿನ ವ್ಯವಸ್ಥೆ’ ಮಾಡ್ತೇವೆ”
ಎಂಬ ಕೆನೆತ ಕೇಳಿತು.

ಭಸ್ಮಾಸುರನಿಂದ ತಪ್ಪಿಸಿಕೊಳ್ಳಲಿಕ್ಕೆ ಪರಶಿವನೇ ಕೈಲಾಸ ಬಿಟ್ಟೋಡುವ ಪ್ರಮೇಯ ಬಂದಿತ್ತಂತೆ; ಭಸ್ಮಾಸುರನಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಮಠದ ವಿಗ್ರಹಗಳಲ್ಲಿನ ದೇವರು ಓಡದೆ ಇರ್ತಾನೆಯೇ?
ಜೈ ಜೈ ಭಸ್ಮಾಸುರ!! ’ಮಹಾಪರಾಕ್ರಮಿ’ಯೂ ’ಸಾಮಾಜಿಕ ಬಹಿಷ್ಕಾರವರ್ಧಕ’ನೂ ಆದ ನೀನು ಅಧಿಕಾರದಲ್ಲಿರುವವರೆಗೆ ನಾವೂ ಈ ಸಮಾಜದ ಭಾಗವಾಗಿ ಬದುಕಬೇಕಲ್ಲ ಮಾರಾಯ? ಹಾಗಾಗಿ ನಿನಗೆ ಮುಂದಿನಿಂದ ಜೈಕಾರ; “ಮುಂದೈತೆ ಮಾರಿಹಬ್ಬ-ಆಗ ನೋಡಿಕೊಳ್ತೇವೆ” ಅಂತಾನೆ ಅನೇಕರ ಶರೀರದೊಳಗಿರುವ ಆಧ್ಯಾತಿಕ ಹರಿಕಾರ.

—————-
ಕಾಕಾಲ್ ಬಾವಯ್ಯನ ಹಾಸ್ಯ ಲಹರಿಯ ಸಾಲಿಗೆ
ಬಾ ಬಾ ಬಸವಣ್ಣ
ಮಠದವನಿದ್ದೆಡೆ ಹೋಗೋಣ
ಕಾಸಿನ ರಾಶಿಯ ಚೆಲ್ಲೋಣ
ಮಠದಲಿ ಉಂಡು ಮಲಗೋಣ
ಬಣ್ಣದ ಅಕ್ಕಿಯ ಪಡೆಯೋಣ
ನೀತಕ್ಕ ಸೇವೆಯ ಮಾಡ್ತಾಳೆ
ಮಾದಕ್ಕಿ ತಿಮ್ಮಕ್ಕ ಮಲಗವಳೆ
ವಿಶಾರದರ ಪಿಂಪಲ್ಲಿ
ಮಠದ ಹೋರಿಯ ಪಂಪಲ್ಲಿ
ದೊಣ್ಣೆನಾಯಕರು ಕಾಯ್ತವ್ರೆ
ಹತ್ತಿರ ಹೋದರೆ ಹಾಯ್ತವ್ರೆ
ಒಳಗಡೆ ರೂಮಿಗೆ ಹೋಗ್ಬೇಡ
ಹೊರಗಡೆ ಭಜನೆಯ ಬಿಡಬೇಡ
ಬ್ರಹ್ಮರಾಕ್ಷಸನು ಬಾಗಿಲೊಳು
ಬಂದರೆ ಬರುವುದು ಬೇರೆಯದು
ತೊಂದರೆಯಿಲ್ಲ ಮಠದವಗೆ
ಬಕರಾಗಳಿಲ್ಲವೆ ಯೋಜನೆಗೆ?

Thumari Ramachandra

source: https://www.facebook.com/groups/1499395003680065/permalink/1758893417730221/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s