ರಾಘವೇಶ್ವರಶ್ರೀ ದೋಷಮುಕ್ತ ಪ್ರಶ್ನಿಸಿ ಹೈಕೋರ್ಟ್‌ಗೆ ಸಿಐಡಿ ಮೊರೆ

ರಾಘವೇಶ್ವರಶ್ರೀ ದೋಷಮುಕ್ತ ಪ್ರಶ್ನಿಸಿ ಹೈಕೋರ್ಟ್‌ಗೆ ಸಿಐಡಿ ಮೊರೆ

ವಿಕ ಸುದ್ದಿಲೋಕ| Apr 29, 2016, 04.00 AM IST

ಬೆಂಗಳೂರು: ಅತ್ಯಾಚಾರ ಆರೋಪ ಪ್ರಕರಣದಿಂದ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳನ್ನು ದೋಷಮುಕ್ತಗೊಳಿಸಿದ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿಐಡಿ ಪೊಲೀಸರು ಹೈಕೋರ್ಟ್‌ ಮೊರೆ ಹೋಗಿದ್ದಾರೆ.

ಸೆಷನ್ಸ್‌ ಕೋರ್ಟ್‌ ಮಾ.31ರಂದು ನೀಡಿರುವ ತೀರ್ಪು ರದ್ದುಪಡಿಸಬೇಕು ಎಂದು ಸಿಐಡಿ ಸಲ್ಲಿಸಿರುವ ಅರ್ಜಿಯು ಗುರುವಾರ ನ್ಯಾ. ಎ.ವಿ.ಚಂದ್ರಶೇಖರ್‌ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತು. ಪೀಠ, ಸ್ವಾಮೀಜಿಗೆ ತುರ್ತು ನೋಟಿಸ್‌ ಜಾರಿಗೊಳಿಸಿ ವಿಚಾರಣೆಯನ್ನು ಜೂನ್‌ಗೆ ಮುಂದೂಡಿತು.

ಸಿಐಡಿ ಪರ ಅಭಿಯೋಜಕ ಪಿ.ಎಂ.ನವಾಜ್‌, ”ಸಾಕ್ಷ್ಯ ವಿಚಾರಣೆಗೂ ಮುನ್ನವೇ ಸ್ವಾಮೀಜಿಗೆ ಕ್ಲೀನ್‌ಚಿಟ್‌ ನೀಡಿರುವುದು ಸರಿಯಲ್ಲ. ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪದ ಬಗ್ಗೆ ಸಿಐಡಿಯಿಂದ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್‌ 508ರಡಿಯೂ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಆದರೆ, ನ್ಯಾಯಾಲಯ ಐಪಿಸಿ ಸೆಕ್ಷನ್‌ 506ರಡಿ ದೋಷಮುಕ್ತಗೊಳಿಸಿ ತಪ್ಪೆಸಗಿದೆ. ಸಂತ್ರಸ್ತ ಮಹಿಳೆ ಅಪರಾಧ ದಂಡ ಸಂಹಿತೆ ಸೆಕ್ಷನ್‌ 164ರಡಿ ಹೇಳಿಕೆ ನೀಡಿದ್ದಾರೆ. ಆ ಹೇಳಿಕೆ ಸಾಬೀತಿಗೆ ಮುನ್ನವೇ ದೋಷಮುಕ್ತಗೊಳಿಸಿರುವುದು ಸರಿಯಾದ ಕ್ರಮವಲ್ಲ,”ಎಂದು ಹೇಳಿದರು.

ಅಲ್ಲದೆ,”ವೀರ್ಯದ ಕಲೆಗೂ ಶ್ರೀಗಳ ರಕ್ತಕ್ಕೂ ಹೊಂದಾಣಿಕೆಯಿದೆ. ಅಂಡಾಣು ವೀರ್ಯಾಣು ಮಿಶ್ರಣವಾಗಿಲ್ಲವೆಂಬ ಕಾರಣ ಸರಿಯಲ್ಲ. ಸೆಷನ್ಸ್‌ ಕೋರ್ಟ್‌ ನೊಂದ ಮಹಿಳೆಯ ಮನಸ್ಥಿತಿ ಪರಿಗಣಿಸಿಲ್ಲ. ಸಾಕ್ಷ ್ಯ ವಿಚಾರಣೆ ನಡೆಸದೇ ಸಾಕ್ಷ ್ಯ ತಿರುಚಲಾಗಿದೆ ಎಂಬ ಅಭಿಪ್ರಾಯಕ್ಕೆ ಅಧೀನ ನ್ಯಾಯಾಲಯದ ನ್ಯಾಯಾಧೀಶರು ಬಂದಿರುವುದು ಸರಿಯಲ್ಲ. ಸಮಾಜದ ವಿರುದ್ಧದ ಅಪರಾಧವಾಗಿರುವುದರಿಂದ ಅಧೀನ ಕೋರ್ಟ್‌ ತೀರ್ಪು ರದ್ದುಪಡಿಸಬೇಕು. ಶ್ರೀಗಳ ವಿರುದ್ಧ ಸಾಕ್ಷ ್ಯ ವಿಚಾರಣೆಗೆ ಅವಕಾಶ ಮಾಡಿಕೊಡಬೇಕು,”ಎಂದು ಅರ್ಜಿಯಲ್ಲಿ ಕೋರಲಾಗಿದೆ.

vk29042016_21921828

source: http://vijaykarnataka.indiatimes.com/state/high-court-challenging-cid-raghavesvarasri/articleshow/52028981.cms

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s