ರಾಘವೇಶ್ವರರಿಗೆ ನಿರ್ಬಂಧ ಹೇರಲು ಹೈಕೋರ್ಟ್‌ಗೆ ಅರ್ಜಿ

ರಾಘವೇಶ್ವರರಿಗೆ ನಿರ್ಬಂಧ ಹೇರಲು ಹೈಕೋರ್ಟ್‌ಗೆ ಅರ್ಜಿ

 

pv29042016_1

pv29042016_2

ಪ್ರಜಾವಾಣಿ ವಾರ್ತೆ
Fri, 04/29/2016 – 01:00

ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ರಾಮಕಥಾ ಗಾಯಕಿ  ಜೊತೆ 169 ಬಾರಿ ದೇಹ ಸಂಬಂಧ ಬೆಳೆಸುವ ಮೂಲಕ   4 ವರ್ಷ ಲೈಂಗಿಕ ಸುಖ ಪಡೆದಿದ್ದಾರೆ. ಇದು ಸನ್ಯಾಸಾಶ್ರಮಕ್ಕೆ ವಿರುದ್ಧವಾದ ನಡೆ. ಆದ್ದರಿಂದ ಶ್ರೀಗಳು ಮಠದ ಕಾರ್ಯಭಾರ ನಿರ್ವಹಿಸದಂತೆ ತಡೆ ನೀಡಬೇಕು’ ಎಂದು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ  ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ರವಿ ಮಳಿಮಠ  ಅವರಿದ್ದ ವಿಭಾಗೀಯ ಪೀಠವು  ಗುರುವಾರ ಅಂಗೀಕರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿ ಮಾಡಲು ಆದೇಶಿಸಿತು. ಎದುರ್ಕಳ ಈಶ್ವರ ಭಟ್ಟ ಹಾಗೂ ಇತರ ಐವರು ಈ ಅರ್ಜಿ ಸಲ್ಲಿಸಿದ್ದಾರೆ.

‘ಶ್ರೀಮಠದ ವ್ಯವಹಾರಗಳಲ್ಲಿ ತೆರಿಗೆ ವಂಚನೆ ಸೇರಿದಂತೆ  ಅನೇಕ ಅಕ್ರಮಗಳು ಜರುಗಿವೆ. ಈ ಎಲ್ಲಾ ಕಾರಣಕ್ಕಾಗಿ ನಿಷ್ಠಾವಂತ ಭಕ್ತರು, ಸರ್ಕಾರದ ಅಧಿಕಾರಿಗಳು, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ ಇದೇ ಹೈಕೋರ್ಟ್‌ ಸೂಚಿಸುವವರು ಶ್ರೀಮಠದ ಆಡಳಿತವನ್ನು ನಿರ್ವಹಣೆ ಮಾಡುವಂತೆ ನ್ಯಾಯಪೀಠವು ಸೂಕ್ತ ನಿರ್ದೇಶನ ನೀಡಬೇಕು’ ಎಂದು ಕೋರಲಾಗಿದೆ.

ತುರ್ತು ನೋಟಿಸ್‌  ಜಾರಿಗೆ  ಆದೇಶ
ಬೆಂಗಳೂರು: ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ  ಕೈಬಿಟ್ಟ ಅಧೀನ ನ್ಯಾಯಾಲಯದ  ಆದೇಶ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿದಂತೆ  ಶ್ರೀಗಳಿಗೆ ತುರ್ತು ನೋಟಿಸ್‌ ಜಾರಿ ಮಾಡಲು ಹೈಕೋರ್ಟ್‌ ಆದೇಶಿಸಿದೆ.

source: http://www.prajavani.net/article/%E0%B2%B0%E0%B2%BE%E0%B2%98%E0%B2%B5%E0%B3%87%E0%B2%B6%E0%B3%8D%E0%B2%B5%E0%B2%B0%E0%B2%B0%E0%B2%BF%E0%B2%97%E0%B3%86-%E0%B2%A8%E0%B2%BF%E0%B2%B0%E0%B3%8D%E0%B2%AC%E0%B2%82%E0%B2%A7-%E0%B2%B9%E0%B3%87%E0%B2%B0%E0%B2%B2%E0%B3%81-%E0%B2%B9%E0%B3%88%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D%E2%80%8C%E0%B2%97%E0%B3%86-%E0%B2%85%E0%B2%B0%E0%B3%8D%E0%B2%9C%E0%B2%BF

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s