ಆ ಕ್ಷಣದ ಸತ್ಯ – ಸತ್ಯ ಅಲ್ಲದಿರಬಹುದು. ಆ ಕ್ಷಣದ ಸುಖ – ಸುಖ ಅಲ್ಲದಿರಬಹುದು!

ಆ ಕ್ಷಣದ ಸತ್ಯ – ಸತ್ಯ ಅಲ್ಲದಿರಬಹುದು. ಆ ಕ್ಷಣದ ಸುಖ – ಸುಖ ಅಲ್ಲದಿರಬಹುದು!

ಅದಕ್ಕೇ ನಮ್ಮ ಹಿರಿಯರು, ನಮ್ಮ ಪ್ರಾಚೀನ ಋಷಿ-ಮುನಿಗಳು ಶಾಶ್ವತ ಸುಖಕ್ಕೆ, ಶಾಶ್ವತ ಸತ್ಯಕ್ಕೆ ಒತ್ತು ಕೊಟ್ಟರು. ಸತ್ಯವೇ ಮಂಗಲಕರವಾದದ್ದು, ಸತ್ಯವೇ ಸುಂದರವಾದುದು ಎಂದು ಘೊಷಿಸಿದರು. ಅದನ್ನು ಜಾರಿಗೆ ತರಬೇಕಾಗಿದ್ದ ನಮ್ಮ ಸಮಾಜ? ಆ ಮಾತನ್ನು ಉಲ್ಲಂಘಿಸುವುದರಲ್ಲಿ ಸಂಭ್ರಮಿಸುತ್ತಿದೆ, ವಿಜೃಂಭಿಸುತ್ತಿದೆ.

ನೋಡಿ, ಆ ಕ್ಷಣದ ಸುಖಗಳೆಲ್ಲ ನೀರ ಮೇಲಣ ಗುಳ್ಳೆಯಂತೆ. ಮಾರ್ಚ್ ೩೧ರಂದು ಸತ್ಯವೇ ಸುಳ್ಳೆಂದು ತೀರ್ಪು ಬಂತು. ಊರು-ಊರುಗಳಲ್ಲಿ ಪಟಾಕಿ ಸಿಡಿಸಿದ್ದೇ ಸಿಡಿಸಿದ್ದು. ಮೆರವಣಿಗೆ ತೆಗೆದದ್ದೇ ತೆಗೆದದ್ದು. ಪತ್ರಿಕೆಗಳಲ್ಲಿ ಸುದ್ದಿ-ಜಾಹೀರಾತು ಹಾಕ್ಸಿದ್ದೇ ಹಾಕ್ಸಿದ್ದು!. (ದುಡ್ಡು ಮಾಡಲು ಕುಳಿತ Samಕೇಶವರರು ೧೮ ಲಕ್ಷ ರೂ.ಗಳ ವಿಜಯದ ನಗೆ ಬೀರಿದರು!). ಜನ ಸಾಮಾನ್ಯರ ನಡುವೆ ಪ್ರಕರಣ ಠುಸ್ ಆಯಿತಂತೆ ಎಂಬ ಭಾವವನ್ನು ಬಿತ್ತಿದ್ದೇ ಬಿತ್ತಿದ್ದು!

ಈಗ? ಆ ತೀರ್ಪನ್ನು ರದ್ದುಪಡಿಸಬೇಕೆಂದು ಉಚ್ಚನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಕೆಯಾಗಿದೆ. ಅಲ್ಲಿಗೆ ಆರು ಕೋಟಿ ರೂ.ಗಳನ್ನು ಶರಾವತಿ ನದಿಗೆ ಸುರಿದಂತಾಗಲಿಲ್ಲವೇ? (ಮುದುಕರಿಗೆ ಮುಂದಿನ ಜೀವನಕ್ಕಾಯಿತು ಎನ್ನಿ.) ಒಂದು ತಿಂಗಳು ಕೂಡಾ ಆ ಸತ್ಯ ಉಳಿಯಲಿಲ್ಲ. ಒಂದು ತಿಂಗಳು ಕೂಡಾ ಆ ಸುಖ ನಿಲ್ಲಲಿಲ್ಲ.

ಅದರ ಮೇಲಿಂದ ಸ್ಥಾನ ಬಿಟ್ಟು ಇಳಿಸಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಉಚ್ಚನ್ಯಾಯಾಲಯ ಎರಡೂ ಅರ್ಜಿಗಳನ್ನು (ತೀರ್ಪು ರದ್ದು ಪಡಿಸಬೇಕೆಂದು ಕೋರಿದ್ದು ಹಾಗೂ ಸ್ಥಾನ ಬಿಟ್ಟು ಇಳಿಸಬೇಕೆಂದು ಕೋರಿದ್ದು) ವಿಚಾರಣೆಗೆ ಅಂಗೀಕರಿಸಿದೆ.

ಹಾಗಾದರೆ ಈಗ ಏನು ಮಾಡುವಿರಿ ಸಮಾಜ ಬಾಂಧವರೇ? ಶೋಕ ಆಚರಿಸುವಿರಾ ಊರು-ಊರುಗಳಲ್ಲಿ? ಮುಸಲ್ಮಾನರು ಮೊಹರಂನಲ್ಲಿ ಮಾಡಿದಂತೆ ಎದೆ ಬಡಿದುಕೊಳ್ಳುತ್ತಾ ಮೆರವಣಿಗೆ ತೆಗೆಯುವಿರಾ ಗ್ರಾಮ ಗ್ರಾಮಗಳಲ್ಲಿ? ಯಾರ್ಯಾರು ಸಂಭ್ರಮಾಚರಣೆಯ ಮುಂಚೂಣಿಯಲ್ಲಿದ್ದರೋ ಅವರೆಲ್ಲ ಮುಖ ಮುಚ್ಚಿಕೊಂಡು ಓಡಾಡುವ ಸ್ಥಿತಿ ಬಂದುಬಿಟ್ಟಿತಲ್ಲ? ಹಾಗೆಂದು ನಿಮ್ಮ ಮನಸ್ಸಿನಲ್ಲಾದರೂ ಅನಿಸಿರಬೇಕಲ್ಲ?

ನ್ಯಾಯಾಲಯಗಳು ಕಾನೂನು ಪ್ರಕಾರ ತಮಗೇನು ಕಾಣುತ್ತವೆಯೋ ಅದನ್ನು ಹೇಳುತ್ತವೆ. ಆದರೆ ಸತ್ಯವನ್ನು ಅರಿಯಬೇಕಾಗಿದ್ದ ನೀವು? ಸತ್ಯವನ್ನು ಪ್ರತಿಪಾದಿಸಬೇಕಾಗಿದ್ದ ನೀವು? ಸತ್ಯಂ ವದ ಧರ್ಮಂ ಚರ ಎಂಬ ಉಪನಿಷದ್ ವಾಕ್ಯವನ್ನು ಬರೀ ಬೊಗಳೆಯನ್ನಾಗಿಸಿಬಿಟ್ಟಿರಲ್ಲ? ಅದನ್ನು ಜಾರಿಗೆ ತರುವ ಹೊಣೆಗಾರಿಕೆ ನಿಮ್ಮದಾಗಿತ್ತಲ್ಲವೇ ಸಮಾಜ ಬಾಂಧವರೇ? ಈಗಲಾದರೂ ಆ ಕುರಿತು ಆಲೋಚಿಸಿ.

source: https://www.facebook.com/sachchidananda.hegde/posts/1718477898368827

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s