ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-5

ಕಾಳಿಂದಿಯ ಮಡುವಿನಲ್ಲಿ ಮತ್ತೆ ನಾಗ ಸಂತತಿ ಭಾಗ-5

[ವಿಡಂಬನೆಯ ಭಾಗ ಐದು. ಸಜ್ಜನರ ಕೋರಿಕೆಯ ಮೇರೆಗೆ ಕುದುರೆ ಬ್ರೀಡಿಂಗ್ ವೀಡಿಯೋ ಲಿಂಕ್ ಕೈಬಿಡಲಾಗಿದೆ]

ಜಗದ್ಗುರು ತೊನೆಯಪ್ಪ ಮಹಾಛತ್ರಿ ಕಚ್ಚೆಶೀಗಳು ಎಂದಿನಂತೆ ತೊನೆಯುತ್ತ, ಮಸಾಜಣ್ಣ ಸೇರಿಸಿದ ಸಭೆಯ ಮಧ್ಯದಿಂದ ಛತ್ರಿಯಡಿಯಲ್ಲಿ ತೊನೆಯುತ್ತ ಸಾಗಿ, ಮಹಿಳೆಯರತ್ತ ಯಥೇಚ್ಛ ಹಲ್ಲು ಕಿಸಿಯುತ್ತ ವೇದಿಕೆಯೆಡೆಗೆ ತೆರಳಿ ಪೀಠವನ್ನೇರಿದರು. ಹಳದಿ ವಂದಿಮಾಗಧರು ಮತ್ತು ಭಟ್ಟಂಗಿಗಳು ಎಂದಿನಂತೆ ಗರ್ದಭ ಸ್ವರದಲ್ಲಿ ಭೋ ಪರಾಕು ಕೂಗಿದರು.

“ಮಂತ್ರಮೂಲೆ ಮಾವಿನಕಾಯಿ ತಂತ್ರಮೂಲೆ ಬಗಳಾಮುಖಿ
ನ್ಯಾಸ ಮೂಲೆ ಏಕಾಂತ ಸೇವಾ ಖುಲಾಸೆ ಮೂಲೆ ಕೋಟಿಃ ಕೋಟಿಃ

ಬರೇ ಕಾಮ
ಬರೇ ಕಾಮ

ಇವತ್ತು ಪ್ರವಚನಕ್ಕೆ ನಾವು ಆಯ್ಕೆ ಮಾಡಿಕೊಂಡದ್ದು ’ಗುರುಕಾರುಣ್ಯ’ ಎಂಬ ವಿಷಯ.

ಗುರುಬ್ರಹ್ಮಾ ಗುರುರ್ವಿಷ್ಣುಃ ಗುರುರ್ದೇವೋ ಮಹೇಶ್ವರಃ
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ

ಯಾವುದೇ ವಿದ್ಯೆಯನ್ನು ಗುರುಮುಖೇನವಾಗಿಯೇ ಕಲಿಯಬೇಕು. ಗುರುವಿಲ್ಲದೆ ಕಲಿಯುವ ಯಾವುದೇ ವಿದ್ಯೆಯೂ ನಿರರ್ಥಕ. ಏಕಲವ್ಯ ಸಹ ದ್ರೋಣಾಚಾರ್ಯರನ್ನು ಗುರುವಾಗಿ ಸ್ವೀಕರಿಸಿದ್ದವನು. [ಇಲ್ಲಿ ನಮ್ಮ ಏಕಾಂತದ ಮಹಿಳಾ ಶಿಶ್ಯರು ಮಾನಸಿಕವಾಗಿ ನಮ್ಮನ್ನು ಮಿಂಡ-ಗುರುವಾಗಿ ಸ್ವೀಕರಿದ್ದಾರೆ ::)
smile emoticon
smile emoticon
]
ಗುರುವೆಂದರೆ ಶಿಕ್ಷಣವನ್ನು ನೀಡುವವನು, ಮಾತ್ರವಲ್ಲ. ಭವ ಬಂಧನವನ್ನು ನೀಗುವವನು ಎಂದು ಕವಿ ಸರ್ವಜ್ಞ. ಹೇಳ್ತಾನೆ.

“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎಂಬ ಜನಪ್ರಿಯ ವಚನವನ್ನೂ ನೀವು ಕೇಳಿದ್ದೀರಿ. ಪ್ರಪಂಚದಲ್ಲಿ ಶಿಷ್ಯನಾದವನು ಯೋಗ್ಯ ಗುರುವಿಗಾಗಿ ಆಶಿಸುವಂತೆ, ಗುರುವಾದವನೂ ಅರ್ಹ ಶಿಷ್ಯನನ್ನು ಪಡೆಯಲು ಹಂಬಲಿಸುತ್ತಾನೆ. ಗುರುವಿಗೆ ನಾವು ಬಾಗಬೇಕು. ಬಾಗಿ ಮಾಗಬೇಕು, ಮಾಗಿ ಗುರಿಯೆಡೆಗೆ ಸಾಗಬೇಕು.

ಗುರಿ ಯಾವುದು? ಶಿಷ್ಯರಾದವರು ಗುರುವಿನ ಕಾಸಗಿ ಅಕೌಂಟಿಗೆ ಖರ್ಹಾಗದಷ್ಟು ಕೋಟಿ ಕೋಟಿ ತುಂಬಿಸೋದು. ಗುರುವಿನ ಖಾಸಗಿ ಹೆಸರಿಗೆ ಜೀವವಿಮೆ ಇಳಿಸೋದು. ಗಂಡ ತನ್ನ ಹೆಂಡತಿಯನ್ನೂ, ತಂದೆ-ತಾಯಂದಿರು ತಮ್ಮ ಹರೆಯದ ಹೆಣ್ಣುಮಕ್ಕಳನ್ನೂ ಗುರುವಿಗೆ ಸಮರ್ಪಿಸಿ, ಭಗವಂತನಲ್ಲಿ ಐಕ್ಯವಾದಷ್ಟು ಸಂತೋಷವನ್ನು ಪಡೆದು ಧನ್ಯರಾಗುವುದು.
smile emoticon
smile emoticon
smile emoticon
smile emoticon
smile emoticon

ಅಪರೂಪದ ಗುರು-ಶಿಷ್ಯರ ಸಂಬಂಧಗಳನ್ನು ತಿಳಿಸುವ ಎಷ್ಟೋ ಕಥೆಗಳನ್ನು ಮಹಾಭಾರತದಲ್ಲಿ ಕಾಣಬಹುದು. ಇಂಥವುಗಳಲ್ಲಿ ನಾವೀಗ ಗುರು ಧೌಮ್ಯ ಹಾಗೂ ಶಿಷ್ಯ ಉದ್ದಾಲಕ ಇವರ ಕುರಿತಾಗಿರುವ ಒಂದು ಕತೆಯನ್ನ ಹೇಳಬಯಸುತ್ತೇವೆ.

ಉದ್ದಾಲಕ! ಈ ಹೆಸರನ್ನು ಎಲ್ಲಾದ್ರೂ ನೀವು ಕೇಳಿರಬಹುದು ಇದು ಅವನ ನಿಜವಾದ ಹೆಸರಲ್ಲ. ಅವನ ಹೆಸರು ಆರುಣಿ. ದೇಶ ಪಾಂಚಾಲ. ಇವನ ಗುರುಗಳೇ ಆಯೋಧ ಧೌಮ್ಯ ಮಹರ್ಷಿಗಳು. ಹಿಂದೆಲ್ಲ ಗುರುಗಳು ಕಾಲಲ್ಲಿ ತೋರಿಸಿದ್ದನ್ನು ಶಿಷ್ಯನು ತಲೆಯಲ್ಲಿ ಹೊತ್ತು ಮಾಡುತ್ತಿದ್ದರು.

ಇಂದೂ ಸಹ ಅಂತಹ ಯೋಗ ನಮಗಿದೆ ಅಂತ. ಅಂತಹ ಯೋಗ ಬೇರೆ ಯಾವ ಸನ್ಯಾಸಿಗೂ ಇಲ್ಲ ಅಂತ [ಪಿಕಿಪಿಕಿ ಹಲ್ಲು ಕಿಸಿದದ್ದು ಕಂಡುಬಂತು] ಆ ಲೆಕ್ಕದಲ್ಲಿ ಇಂತಹ ಶಿಷ್ಯರನ್ನು ಪಡೆದ ನಾವೇ ಧನ್ಯರು ಅಂತ ಹೇಳೊದಕ್ಕೆ ಇಷ್ಟಪಡ್ತೇವೆ ನಾವು.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್”,”ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಆರುಣಿ ಜ್ಞಾನಕ್ಕಾಗಿ ಹಾತೊರೆದು, ತನ್ನ ಸುಖ-ದು:ಖಗಳನ್ನೇ ತೊರೆದು ಗುರುಗಳನ್ನು ಶರಣು ಹೊಂದಿದ್ದ. ಶಿಷ್ಯರಿಗೆ ಮೊದಲು ಕಾಲು ಮೂಡಬೇಕು. ತಲೆ ಮೂಡುವುದು ನಂತರ. ಗುರುವಿನಿಂದ ಪಡೆದ ಹುಟ್ಟಿನಲ್ಲಿ ಮೊದಲು ಕಾಲು, ನಂತರ ತಲೆ ಮೊಳೆಯುತ್ತದೆ. [ನಮ್ಮ ಏಕಾಂತದ ಮಹಿಳೆಯರಿಗೆ ಇದರಲ್ಲಿ ವಿನಾಯತಿ ಇದೆ
smile emoticon
smile emoticon
]
“ಆಚಾರ್ಯ ಪೂರ್ವ ರೂಪಂ. ಅಂತೇವಾಸ್ಯುತ್ತರ ರೂಪಂ.” ಎಂದು ಹೇಳಿದ್ದಾರೆ ಶಾಸ್ತ್ರದಲ್ಲಿ.

[ಸ್ವಗತ-ಇದು ನಾವು ಬೇರೆಯವರ ಪ್ರವಚನದಿಂದ ಕದ್ದಿದ್ದು. ಶಾಸ್ತ್ರಗಳು ನಮಗೆ ಗೊತ್ತಿಲ್ಲ. ಆದರೂ ಪ್ರವಚನದಲ್ಲಿ ಗೊತ್ತಿರುವಂತೆ ತೋರಿಸಿಕೊಳ್ಳಲೇಬೇಕಲ್ಲ? ಕೆಲವು ಪಂಡಿತ ಶಿಷ್ಯರು ಕೇಳಿದ ಪ್ರಶ್ನೆಗಳಿಗೆ ಇಪ್ಪತ್ನಾಲ್ಕು ಗಂಟೆಗಳೊಳಗೆ ಉತ್ತರ ತಿಳಿಸ್ತೇವೆ ನಾವು ಅಂತ ತಪ್ಪಿಸಿಕೊಂಡವರು ಮತ್ತೆ ಉತ್ತರ ಹೇಳುವ ಗೋಜಿಗೇ ಹೋಗೋದಿಿಲ್ಲ; ಸಮಸ್ಯೆ ಏನೆಂದರೆ, ಉತ್ತರ ಹೇಳಿದ ನಂತರ ಮತ್ತೆ ಮತ್ತೆ ಮರುಪ್ರಶ್ನೆ ಕೇಳಿದರೆ ಮತ್ತೆ ಇಪ್ಪತ್ಬಾಲ್ಕು ಗಂಟೆಗಳ ಅವಧಿಯನ್ನು ವಿಸ್ತರಿಸುತ್ತಾ ಹೋಗಬೇಕಾಗ್ತದೆ; ಉತ್ತರವನ್ನೇ ತಿಳಿಸದೆ ದಿನಗಳೆದುಬಿಟ್ಟರೆ ನಮಗೆ ಗೊತ್ತಿದ್ದರೂ ಕೋಪದಿಂದ ಹೇಳದೆ ಇರಬಹುದು ಅಂತ ತಿಳ್ಕೋತಾರೆ.]

[ಆ ಕಾಲದಲ್ಲಿ ತಮಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಸನ್ಯಾಸಿಗಳೇ ಬೆಳೆದುಕೊಳ್ಳುತ್ತಿದ್ದರು. ಏಸಿ ಕಾರಿನಲ್ಲಿ ಓಡಾಡುತ್ತ ಕರ್ಮಾಧಿಕಾರ ಇಲ್ಲ ಎನ್ನುತ್ತ ಕಂಡವರ ಮನೆ ಹೆಂಗಸರು, ಹೆಣ್ಣುಮಕ್ಕಳನ್ನು ಬಸಿರುಮಾಡುತ್ತ ತಿರುಗುಇತ್ತಿರಲಿಲ್ಲ].

ಧೌಮ್ಯ ಗುರುಗಳು ಒಮ್ಮೆ ಆರುಣಿಯನ್ನು ಕರೆದು ಹೀಗೆ ಹೇಳ್ತಾರೆ. ” ಮಗೂ, ಗದ್ದೆಯಲ್ಲಿ ನೀರು ನಿಲ್ಲಬೇಕು. ನಿಂತು ಭೂಮಿಯಲ್ಲಿ ಇಂಗಬೇಕು. ಆದರೆ ಗದ್ದೆಯ ಬದುವು ಒಡೆದುಹೋಗಿ ನೀರು ಹೊರಬರುತ್ತಿದೆ. ನಿನ್ನ ಅಲ್ಲಿಗೆ ತೆರಳಿ ಅದನ್ನು ತಡೆ.” ಇಷ್ಟು ಹೇಳಿ ಗುರುಗಳು ಹೊರಗೆಲ್ಲಿಗೋ ಹೋಗುತ್ತಾರೆ.

ಗುರುಗಳ ಮಾತನ್ನು ತಲೆಯಲ್ಲಿ ಹೊತ್ತ ಆರುಣಿ ಅಲ್ಲಿಗೆ ತೆರಳಿ ಸೋರುತ್ತಿದ್ದ ಬದುವನ್ನು ಅಡ್ಡಗಟ್ಟಲು ಮಣ್ಣು ಕಲ್ಲುಗಳನ್ನು ಜೋಡಿಸಿದರೂ ಕಡಿಮೆಯಾಗಿಬಿಡುತ್ತದೆ. ಸಂಜೆಯಾಗಿಬಿಡುತ್ತದೆ. ಅನಿರೀಕ್ಷಿತವಾಗಿ ಆಗಸದಲ್ಲಿ ಕಪ್ಪಗೆ ಮೋಡ ಕವಿದು ಮಳೆ ಆರಂಭವಾಗುತ್ತದೆ. ಧಾರಾಕಾರದ ಮಳೆಗೆ ನೀರು ಹೆಚ್ಚಿ ಮಾಡಿದ ಕಾರ್ಯ ನೀರಲ್ಲಿ ಹೋಮ ಮಾಡಿದಂತಾಗುತ್ತದೆ.

ಗುರುಗಳು ಅಪ್ಪಣೆ ಮಾಡಿದ್ದಾರೆ, ಮಾಡಿ ಮುಗಿಸಲೇ ಬೇಕು. ಬೇಕಾದ ಸಾಮಗ್ರಿ-ಸಲಕರಣೆಗಳಿಲ್ಲ. ಏನು ಮಾಡೋದು? ತಾನೇ ರಾತ್ರಿಯಿಡೀ ಅಲ್ಲೇ ಅಲ್ಲಿ ಅಡ್ಡಲಾಗಿ ಮಲಗುತ್ತಾನೆ. ಹೊರಗೆ ಹೋದ ಧೌಮರು ನಂತರ ಮರುದಿನ ಧೌಮ್ಯ ಗುರುಗಳು ಇದನ್ನು ಗಮನಿಸಿದಾಗ ಅವರಿಗೆ ಪರಮಾಶ್ಚರ್ಯವಾಗುತ್ತದೆ. ಬದುವಿಗೆ ತನ್ನ ಧೌಮ್ಯರು ಬೆಳಗಿನ ಜಾವ ಪರ್ಣಕುಟಿಗೆ ಆಗಮಿಸುತ್ತಾರೆ. ಅರುಣಿ ಎಲ್ಲೂ ಕಾಣಿಸೋದಿಲ್ಲ.

“ಅರುಣೀ”, “ಅರುಣೀ” ಎಂದು ಜೋರಾಗಿ ಕೂಗಿ ಕರೆಯುತ್ತಾರೆ. ಉತ್ತರ ಬರಲಿಲ್ಲ. ಹುಡುಕುತ್ತ ದೀವಟಿಗೆ ಹಿಡಿದು ಗದ್ದೆಯೆಡೆಗೆ ಹೋದರೆ ತಾನ್ನನ್ನೇ ಮಣ್ಣಾಗಿ ಭಾವಿಸಿದ ಆರುಣಿ ಬದುವ್ವು ಒಡೆದ ಜಾಗದಲ್ಲಿ ಮಲಗಿ ಸೋರುವ ನೀರನ್ನು ತಡೆಯುತ್ತಿದ್ದಾನೆ!

ಗುರುಭಕ್ತಿಯೆಂದರೆ ಹಾಗಿರಬೇಕು. ಗುರುಗಳನ್ನು ಕರೆದೊಯ್ಯಲು ಮಾವಂದಿರು ಬರುತ್ತಾರೆ ಎಂಬ ಸುದ್ದಿ ತಿಳಿದದ್ದೆ ಕುರಿವಾಡೆಯಲ್ಲಿ ನಮ್ಮ ತಕೆಯಿಲ್ಲದ ಜನಂಗದ ಮಹಿಳಾ ಭಕ್ತರು ಅರುಣಿಯಂತೆ, ಮಠದ ಆವರಣದಲ್ಲಿ ರಾತ್ರಿಯಿಡೀ ಅಡ್ಡಡ್ಡ ಮಲಗಿ ಮಾವಂದಿರಿಗೆ ಒಳಗೆ ಹೋಗಿ ನೋಟೀಸು ತಲುಪಿಸಲಿಕ್ಕೇ ಕೊಡಲಿಲ್ಲ ನೋಡಿ! ಇಂತಹ ಶಿಷ್ಯರನ್ನು ಪಡೆಯುವುದೂ ಗುರುವಿಗೊಂದು ಯೋಗಾಯೋಗವೇ ಅನ್ನಬೇಕು. ಅಂತಹ ಶಿಷ್ಯರು ಇಂದಿನ ಬೇರೆ ಯಾವ ಸನ್ಯಾಸಿಗಳಿಗೂ ಇಲ್ಲ ಅಂತ; ಆದರೆ ನಮಗೆ ಮಾತ್ರ ಅಂತಹ ಶಿಷ್ಯರು ಇದ್ದಾರೆ ಅಂತ!

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್” ಎಂಬ ಜಯಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಅರುಣಿಯ ಗುರುಭಕ್ತಿಯನ್ನು ಮೆಚ್ಚಿ ಧೌಮ್ಯರು “ಉದ್ದಾಲಕ ನಾಗು” ಎಂದು ಆಶೀರ್ವದಿಸುತ್ತಾರೆ. ಮಹಾಭಾರತದ ಅಧ್ಯಾಯ ಮೂರು-ಆದಿಪರ್ವದಲ್ಲಿ ಈ ಕತೆಯಿದೆ.

ಗುರುವಿನ ಅನುಗ್ರಹ ಇದ್ದರೆ ಎಂತಹ ವ್ಯಕ್ತಿಯದರೂ ಬೆಳೆಯಲು ಸಾಧ್ಯವಾಗ್ತದೆ ಅಂತ. ಗುರುವನ್ನು ಅನುಮಾನದಿಂದ ನೋಡುವವರು ಉದ್ದಾರ ಅಗೋದಿಲ್ಲ ಅಂತ. ಗುರುಕೃಪೆಯಿದ್ದರೆ ಮನುಷ್ಯ ಏನೆಲ್ಲಾ ಸಾಧಿಸಬಹುದು ಎಂಬುದಕ್ಕೆ ನಮ್ಮ ಮಸಾಜಣ್ಣ, ಬಸ್ಸಣ್ಣ ಎಲ್ಲ ಉದಾಹರಣೆಯಾಗ್ತಾರೆ ನಿಮಗೆ.

ಈ ಮಸಾಜಣ್ಣನ್ನೇ ನೋಡಿ, ಪಾಪ ಅಲ್ಲೆಲ್ಲೋ ಒಂದು ಮೂಲೆಲಿ ಮಸಾಜ್ ಮಾಡ್ತೆವೆ ಅಂತ ಬೋರ್ಡ್ ಹಾಕ್ಕಂಡು ಬೀದಿ ಉಪನ್ಯಾಸ ಹೊಡೀತಾ ಕೂತಿದ್ದ. ಜನ ಬರ್ತಿದ್ರೋ ಇಲ್ಲವೋ ಅಲ್ಲಿಗೆ ಹೋದ ಗುಂಜಣ್ಣನೇ ಹೇಳಬೇಕು. ಗಿರಾಕಿ ಕಡಿಮೆ ಇದ್ದಾರೆ ಅಂತ ಶ್ರೀಧರ ಸ್ವಾಮಿಗಳ ಭಕ್ತನಾದ ಗುಂಜಣ್ಣನವರಲ್ಲಿ ಹೇಳಿಕೊಂಡ. ಗುಂಜಣ್ಣ ಪ್ರಾರ್ಥನೆ ಮಾಡಿ ಅದೇನೋ ಮಂತ್ರಿಸಿ ಕೊಟ್ಟಮೇಲೆ ಸುಮಾರು ಗಿರಾಕಿ ಬರ್ತಿದ್ರಂತೆ. ಆದರೂ ದೊಡ್ಡ ಮಟ್ಟದ ಸಾಧನೆ ಮಾಡಬೇಕೆಂದ್ಕಂಡಿದ್ದು ಆಗಿರಲಿಲ್ಲ. ಯಾಕೆಂದರೆ ಕಾಸಿರಲಿಲ್ಲ.

ಗುಂಜಣ್ಣ ದೃಷ್ಟಿ ಬಳೀತಾನೆ ಅಂತ ನಮಗೆ ಹೇಳಿದ್ದು ಮಸಾಜಣ್ಣನೇ. ಮಠಾಧಿಪತಿಗಳಾದ ನಾವು ಹಾಗೆಲ್ಲ ಊರಲ್ಲಿ ಯಾರು ದೃಷ್ಟಿ ಬಳೀತಾರೆ ಅಂತ ಹುಡಕ್ಕೊಂಡು ಹೋಗಕಾಗುತ್ತ? ಮಸಾಜಣ್ಣ ಹೇಳಿದ ಮೇಲೆ ಗುಂಜಣ್ಣನ್ನ ನಾವು ಮಠಕ್ಕೆ ಕರೆಸಿದ್ವು. “ಹುಂಜಣ್ಣ ಗುರುಗಳಿಗೆ ಏನೋ ಒಳಗೊಳಗೆ ಒಂತರಾ ಸಂಕಟ ಆಗ್ತದೆ. ಯಾರದೋ ದೃಷ್ಟಿ ಬಿದ್ದಿರಬೇಕು. ನಾವು ಅಲ್ಲಿ ಇಲ್ಲಿ ಸವಾರಿ ಹೋಗ್ತಾ ಇರ್ತೇವಲ/ ಹೀಗಾಗಿ ಆಗಾಗ ನಮಗೆ ದೃಷ್ಟಿ ಬಳಿದ್ಕೊಡಬೇಕಲ ಆಗ್ತದ್ಯಾ?” ಕೇಳಿದೆವು.

ಮುದಕ ಗುಂಜಣ್ಣಂಗೆ ಅವನಲ್ಲಿರೋ ಅಂತಹ ಉಚ್ಛಾಟಕ ವಿದ್ಯೆಗೆ ಬೆಲೆ ಕೊಟ್ಟುಬಿಟ್ರೆ ಬಹಳ ಖುಷಿ. ಗುಂಜಣ್ಣ ಬಹಳ ಸಂತೀಷದಿಂದ ನಮಗೆ ದೃಷ್ಟಿ ಬಳಿಯೋ ಕೆಲಸ ಮಾಡಿದ. ಅದೇ ಸಂದರ್ಭದಲ್ಲೆ ನಮಗೆ ಚಿಕಪುಟ್ಟ ಕಿರಿಕಿರಿ ಒರ್ತಿದ್ರಿಂದ ಶಿಷ್ಯರಲ್ಲಿ ಚಿಕಿತ್ಸೆ ನೀಡಬಲ್ಲ ಒಂದಿಬ್ರನ್ನ ನಾವು ಗುರುತಿಸಿದೆವು. ಒಬ್ಬನ ಹಿಡ್ಕಂಬದೆವು ಅವಂದು ಬರೀ ಯಕ್ಷಗಾನ ಕುಣಿಯೋದ್ರಲ್ಲೆ ಆಗೋಯ್ತು. ಅವನು ಅಂತಹ ’ಮಹತ್ವಾಕಾಂಕ್ಷಿ’ಕೂಡ ಅಲ್ಲ ಅಂರ ಗೊತ್ತಾಯ್ತು.

ಗುಂಜಣ್ಣನನ್ನು ನಮ್ಮ ಬಳಿಗೆ ಕಳಿಸಿದ ಮಸಾಜಣ್ಣ ಒಂದು ದಿನ ಬಂದ. ಉಭಯ ಕುಶಲೋಪರಿಗಳು ನಡೆದ್ವು. ಅವ ತನ್ನ ಕಷ್ಟ ಸುಖ ಹೇಳಿಕೊಂಡ. ದೊಡ್ಡದಾಗಿ ಬೆಳೀಬೇಕು ಅಂದ. ಅದಕ್ಕೆ ನಾವು ನಮ್ಮ ಸಹಾಯ ಹೇಗೆ ನೀಡಬಹುದು ಎಂದು ಯೋಚಿಸಿದೆವು. ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ನಡೆಸೋರ ಹಾಗೆ ಭಕ್ರರ ದುಡ್ಡಲ್ಲಿ ಮಹಿಳೆಯರೊಂದಿಗೆ ಮಜಾ ಉಡಾಯಿಸುತ್ತಿದ್ದ ನಮಗೆ ನಮ್ಮ ಸಾಮ್ರಾಜ್ಯವನ್ನು ವಿಸ್ತರಿಸಬೇಕಾಗಿತ್ತು. ಹೀಗಾಗಿ “ನೀನು ಏನೂ ಯೋಚನೆ ಮಾಡಬೇಡ. ನಮ್ಮ ಮೇಲೆ ನಂಬಿಕೆ ಇಡು. ವ್ಯವಹಾರ ಮಾತಾಡೋಣ. ನಾವು ನಿನ್ನನ್ನು ಬೆಳೆಸ್ತೇವೆ. ನಮಗೆ ಬೇಕಾದ ಸಹಾಯ ನೀನು ಮಾಡು, ನಿಮಗೆ ಬೇಕಾದ ಸಹಾಯ ನಾವು ಮಾಡ್ತೇವೆ ಅಂದೆವು.

ಮಸಾಜಣ್ಣ ಅದಾಗಲೇ ಹೇಲಾಟದ ಕಂಗನಾಥನನ್ನು ಸಂಪರ್ಕಿಸಿ ಟಿವಿ ಸಂದರಶನ ನೀಡ್ತಿದ್ದ. ಹೇಲಾಟದ ಕಂಗನಾಥ ಬಾಯಿ ತೆಗೆದ್ರೆ ಮುಗಿದೇ ಹೋಯಿತು. ಅಂತಹ ಕಂಗನಾಥನ್ನ ನಮಗೂ ಪರಿಚಯಿಸಿದ. ನಮಗೂ ಟಿವಿಗಳಲ್ಲಿ ಮಿಂಚಲಿಕ್ಕೆ ಸಂಪರ್ಕ ಕೊಂಡಿ ಬೇಕಾಗಿತ್ತು. ಅಲ್ಲಿಂದ ನಮ್ಮೆಲ್ಲರ ’ಖಾಸಗಿ ವಿವಿಧೋದ್ದೇಶಗಳ ಪರಸ್ಪರ ಸಹಕಾರ ಸಂಘ’ಆರಂಭವಾಯಿತು. ನಾವು ಯಾವ ವಿಷಯದಲ್ಲೂ ಒಬ್ಬರನ್ನೊಬ್ಬರು ಬಿಟ್ಟು ಕೋಡೋಡಿಲ್ಲ. ನಮಗೆ ಅವನು ಬೇಕು, ಅವನಿಗೆ ನಾವು ಬೇಕು.

ಕಚ್ಚೆಶೀಗಳಾದ ನಾವು ಹೇತರೆ ಅವನು ಹಿಂದೆ ನಿಂತು ಬುಟ್ಟಿ ಹಿಡೀತಾನೆ; ಅವನು ಹೇತರೆ ನಾವು ಗುಟ್ಟಾಗಿ ಬುಟ್ಟಿ ಹಿಡೀತೇವೆ. ಒಂದೇ ವ್ಯತ್ಯಾಸ ಅಂದರೆ ಅವನು ಕಚ್ಚೆ ಬಿಚ್ಚಲು ಮನಸ್ಸು ಮಾಡಲಿಲ್ಲ. ಹೀಗಾಗಿ ಜನ ಅವನನ್ನು ನಂಬ್ತಾರೆ. ಹಾಲಿ ನಮ್ಮ ಮುಖಕ್ಕೆ ಇರೋದಕ್ಕಿಂತ ಹೆಚ್ಚಿನ ಬೆಲೆ ಅವನ ಮುಖಕ್ಕೆಇದೆ. ಇದನ್ನರಿತ ನಾವು ಮಹಾನಗರ ಪೂರ್ತಿ ಬ್ರಾಂಚು ತೆರೆಯುವಷ್ಟು ದೊಡ್ಡ ಸಹಕಾರ ನೀಡಿದೆವು.

ನಮ್ಮ ಪ್ಲಾನುಗಳು ಯಶಸ್ವಿಯಾಗಲು ದೊಡ್ಡ ದೊಡ್ಡ ಜನರ ಸಹವಾಸ ಬೆಳೆಸಿಕೊಳ್ಳಲಿಕ್ಕೆ, ಸಾಮ್ರಾಜ್ಯ ವಿಸ್ತರಣೆಗೆ ಅದರಿಂದ ಅನುಕೂಲವಾಗ್ತದೆ. ಹಳ್ಳಕ್ಕೆ ಬಿದ್ದರೆ ಕೈ ಹಿಡಿದು ಮೇಲೆತ್ತಲು ಕೆಲವರು ಬೇಕಾಗ್ತದೆ. ಯಾಕೆಂದ್ರೆ ನಮ್ಮದು ಕಚ್ಚೆಬಿಚ್ಚುವ ವ್ಯವಹಾರ. ದಶರಥ ಕೊಟ್ಟ ವರಗಳನ್ನು ಕೈಕೇಯಿ ಹೇಗೆ ಉಪಯೋಗಿಸಿಕೊಂಡಳು ಎಂಬುದು ನಿಮಗೆ ಗೊತ್ತಲ್ಲ? ನಮ್ಮ ಸಹಾಯಕ್ಕೆ ಪ್ರತಿಯಾಗಿ ಮಸಾಜಣ್ಣ ನೀಡುವ ಬೆಂಬಲದ ವರವನ್ನು ಅನಾಮತ್ತಾಗಿ ನಮಗೆ ಬೇಕಾದಾಗಲೆಲ್ಲ ಪಡೆದುಕೊಳ್ತೇವೆ ಅಂದೆವು. ಅವ “ಹೂಂ ” ಅಂದ.

ಈಗ ನಮಗೆ ಬೇಕಾದಾಗೆಲ್ಲ ಅವನನ್ನು ಕಿಚನ್ ಕ್ಯಾಬಿನೆಟ್ಟಿಗೆ ಕರೆಸ್ತೇವೆ. ನಮ್ಮ ಬಿಲ್ಡಪ್ಪಿಗಾಗಿ ಅವನು ಸಾಕಷ್ಟು ಕಸರತ್ತು ಮಾಡೇ ಮಾಡ್ತಾನೆ ಪಾಪ; ವರ್ಷಕ್ಕೊಮ್ಮೆಯಾದರೂ ನಮ್ಮ ಪಾದಪೂಜೆ, ಭಿಕ್ಷಾವಂದನೆ ಎಲ್ಲ ನಡೆಸ್ತಾನೆ. ನಮ್ಮಿಂದಲೇ ಅವನ ಎಲ್ಲ ಸಾಮಾನುಗಳೂ ಉದ್ಘಾಟನೆಯಾಗಬೇಕು. ಹಾಗಿದೆ ನಮ್ಮ ನಮ್ಮೊಳಗಿನ ಅಂತರಂಗ!

ಇವತ್ತು ನೋಡಿ, ಅವ ಬಹಳ ಎತ್ತರಕ್ಕೆ ಬೆಳೆದಿದ್ದಾನೆ. ಹಾಗೆ ಬೆಳೆಯೋದಕ್ಕೆ ಕೋಟಿಗಟ್ಟಲೆ ಹಣ ಎಲ್ಲಿಂದ ಬಂತು ಅಂತ ಎಲ್ಲರೂ ಒಳಗೊಳಗೇ ಮಾತಾಡ್ಕೊಳ್ತಾರೆ; ಹೊರಗೆ ಹೇಳೋದಕ್ಕಾಗಲ್ಲ, ಅಲ್ಲವೇ? ಗುರು ಅನುಗ್ರಹಕ್ಕೆ , ರಾಂಗಾನುಗ್ರಹದಿಂದ ನಡೆದ ಪವಾಡಕ್ಕೆ ಮಸಾಜಣ್ಣನೆ ಜೀವಂತ ಮತ್ತು ಜ್ವಲಂತ ಸಾಕ್ಷಿ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಗುರು ಅನುಗ್ರಹಕ್ಕೆ ಇನ್ನೊಂದು ಉದಾಹರಣೆ ಹೇಳ್ತೇವೆ ನಾವು. ಬಸ್ಸಣ್ಣ ನಮ್ಮ ಹಾಗೆ ಬಹಳ ಹುಡುಗೀರನ್ನೆಲ್ಲ ಬಹಳ ಬಹಳ ಪ್ರೀತಿಸಿದವ. ಕೆಲವು ವರ್ಷಗಳ ಹಿಂದೆ ಬರೇ ಲೋಕಲ್ ಕ್ಯಾಬಗಳನ್ನು ಓಡಿಸಿಕೊಂಡಿದ್ದ ಅವನಿಗೆ ದೊಡ್ಡ ಮಟ್ಟಕ್ಕೆ ಬೆಳೆಯುವ ಕನಸಿತ್ತು. ಅವನೂ ನಮ್ಮ ಹಾಗೆ ಆದರೆ ನಮಗಿಂತ ಸ್ವಲ್ಪ ಹೆಚ್ಚಿಗೆ ಹೈಸ್ಕೂಲ್ ವರೆಗೆ ಓದಿದ್ದಾನೆ. ಲೆಕ್ಕಾಚಾರ ಬರ್ತಿತ್ತೋ ಇಲ್ವೋ ಗೊತ್ತಿಲ್ಲ, ಚಟ, ಖರ್ಚು ಅಂತ ಹಣವೆಲ್ಲ ಖಾಲಿಯಾಗಿ ಮೈತುಂಬ ಸಾಲ ಆಗ್ಬುಟ್ಟಿತ್ತು.

ನಮ್ಮ ಸಂಪರ್ಕ ಹೆಚ್ಚೋದಕ್ಕಿಂತ ಮೊದಲು ಪಿರಿ ಪಿರಿ ಅಂತಿದ್ದ ಅವ ನಮ್ಮ ಶಿಷ್ಯನಾಗಿ ಬೆಳೆದಮೇಲೆ ಬಸ್ಸುಗಳನ್ನೇ ಖರೀದಿಸೋ ಹಾಗೆ ಮಾಡ್ತೇವೆ ಅಂದೆವು ನಾವು. ಯಥಾವತ್ತು ಎಲ್ಲಾ ವ್ಯವಹಾರಗಳಲ್ಲಿರುವಂತೆ ನಮಗೆ ಬೇಕಾದ್ದನ್ನು ಅವ ಕೊಡಬೇಕು, ಅವನಿಗೆ ಬೇಕಾದ್ದನ್ನು ನಾವು ಕೊಡ್ತೇವೆ ಅಂತ ಮಾತುಕತೆ ನಡೀತು. ವರ್ಷಕ್ಕೊಂದು ಸಲ ಪಾದಪೂಜೆ, ಭಿಕ್ಷಾವಂದನೆ, ಇಂತದ್ದೆಲ್ಲ ಬಹಳ ದೊಡ್ಡ ಮಟ್ಟದಲ್ಲಿ ನಡೀಬೇಕು, ಅರ್ಧ ಜಿಲ್ಲೆಯ ಜನರೇ ಸೇರಬೇಕು ಅಂದ್ವು. ಅವ “ಹೂಂ” ಅಂದ.

ನಮಗೆ ಬೇಕಾದಾಗಲೆಲ್ಲ ಬೆಂಬಲವನ್ನು ಕೊಡುವುದಕ್ಕೆ ಒಪ್ಪಿದ. ಈಗ ನೋಡಿ ಹೇಗೆ ಬೆಳೆದಿದ್ದಾನೆ. ಅದೂ ಸಹ ಗುರು ಕಾರುಣ್ಯದ ಇನ್ನೊಂದು ರೂಪವೇ; ರಾಂಗಾನುಗ್ರಹದಿಂದ ನಡೆದ ಪವಾಡವೇ. “ಇಂದು ನಾವು ಕಷ್ಟದಲ್ಲಿದ್ದೇವಪ್ಪಾ, ಜನ ನಮ್ಮ ಕಚ್ಚೆ ಸಮೇತ ಕಾವಿ ಕಿತ್ತೊಗೆದು ಚಪ್ಪಲೀಲಿ ಹೊಡೆಯೋ ಹೊತ್ತು ಬರ್ತಿದೆ” ಅಂತ ಎಸ್.ಎಮ್ .ಎಸ್ ಕಳಿಸಿದರೆ ಸಾಕು ಎಲ್ಲೇ ಇರಲಿ, ಏಳೆಂಟು ತಾಸುಗಳಲ್ಲಿ ನಮ್ಮಲ್ಲಿಗೆ ಬಂದು, ಪಕ್ಕಕ್ಕೆ ಘಟೋತ್ಕಚನಂತೆ ನಿಂತು “ಯಾರೇ ಬಂದ್ರೂ ನೀವ್ ಹೇದರವೇಡಿ ಗುರುಗಳೇ, ನಾವಿದ್ದೇವೆ” ಅಂತಾನೆ. ’ಗುರುಕಾರುಣ್ಯ’ವನ್ನು ಪಡೆದುಕೊಂಡಿದ್ದರಿಂದ ಅವ ಹಾಗೆ ನಡೆದುಕೊಳ್ತಾ ಇದ್ದಾನೆ.

[ಸಭೆಯಲ್ಲಿ ಕುರಿಗಳು ಹಿಕ್ಕೆಯುದುರಿಸಿದಂತೆ ಕರತಾಡನವಾಗಿ “ಬರೇ ಕಾಮ”, “ಬರೇ ಕಾಮ್” ಎಂಬ ಘೋಷ ಕೇಳಿಸಿತು, ಪ್ರವಚನ ಮುಂದುವರೀತು]

ಅವನೂ ಸಹ ಯಾವುದೇ ಕಾರ್ಯಕ್ರಮ ಮಾಡದ್ರೂ, ನಮ್ಮಿಂದಲೇ ಉದ್ಘಾಟನೆಯಾಗಬೇಕು. ಹೀಗೆ ಸಾಧ್ಯವಾದ ಎಲ್ಲಾ ಕಡೆ. ನಾವು ಸಾಮ್ರಾಜ್ಯ ಶಾಹಿಗಳಾಗಿ ಕಬಂಧ ಬಾಹುಗಳನ್ನು ಹರಡಿ ಕೂತಿದ್ದೇವೆ, ಇನ್ನು ಚಿಕ್ಕ ಪುಟ್ಟ ಮೇಣದಬತ್ತಿ, ಸಗಣಿಬತ್ತಿ ಕಂಪನಿಗಳು ಸಾಕಷ್ಟಿದಾವೆ. ಚಿಲ್ಲರೆ ಕಂಪನಿಗಳಂತೂ ಲೆಕ್ಕಕ್ಕೆ ಇಲ್ಲ.

ನಾವು ಹಾರಾಡುದಾಗ ಕನ್ಯಾಪೊರೆ ಕಳೆದುಕೊಂಡು ಬಸುರಾದ ಹುಡುಗಿಯರನ್ನು ನಮ್ಮಲ್ಲಿನ ಸೇವಕರಲ್ಲಿ ಕೆಲವರಿಗೆ ಕಟ್ಟಿ, ಅವರು ಜಾಸ್ತಿ ಕೆಮ್ಮದಂತೆ ಅವರ ಹೆಸರುಗಳಲ್ಲೆಲ್ಲ ಕಂಪನಿ ಮಾಡಿಕೊಟ್ಟಿದೇವೆ ನಾವು. ಬೇನಾಮಿಯಾಗಿ ಅವೆಲ್ಲವೂ ಶ್ರೀಸಂಸ್ಥಾನ ಶೋಭರಾಜಾಚಾರ್ಯ ತೊನೆಯಪ್ಪ ಕಚ್ಚೆಶೀಗಳದ್ದೇ ಅಂತ ನಿಮಗೆ ತಿಳಿದಿರಲಿ.

ಹೊತ್ತು ಬಹಳ ಆಗಿಬಿಟ್ಟಿದೆ. ನೀವೆಲ್ಲ ಚೆನ್ನಾಗಿ ಮೃಷ್ಟಾನ್ನ ಊಟಮಾಡಿ. ಗುರುವಿನ ಸೇವೆಯನ್ನು ಇನ್ನಷ್ಟು ಹೆಚ್ಚಿಗೆ ಮಾಡಲು ಶಕ್ತಿ ಸಂಪಾದನೆ ಮಾಡಿಕೊಳ್ಳಿ. ಯಾಕೆಂದ್ರೆ ಯಾವ ಕ್ಷಣದಲ್ಲಿ ಯಾವ ಮಾಧ್ಯಮದವರು ನಮ್ಮ ವಿರುದ್ಧ ತಿರುಗಿ ಬೀಳ್ತಾರೆ ಅನ್ನೋದು ಗೋತ್ತಾಗೋದಿಲ್ಲ. ಅವರಿಗೆಲ್ಲ ’ಗುರುಕಾರುಣ್ಯ’ ಆಗಾಗ ಆಗ್ತಾ ಇದ್ರೂ, ಡಿಸ್ಚಾರ್ಜ್ ಆದ ಮೊಬೈಲು ಮಾತಿನ ಮಧ್ಯೆ ಕೈಕೊಡುವಂತೆ ಖಾಲಿ ಆದ ತಕ್ಷಣ ಮತ್ತೆ ಚಾರ್ಜಿಗೆ ಹಾಕಬೇಕಾಗ್ತದೆ.

’ಗುರುಕಾರುಣ್ಯ’ ತೆಗೆದುಕೊಂಡರೂ ಸಹ ಬತ್ತಿ ಇಡುವ ಜನ ತಯಾರಾಗಿದ್ದಾರೆ ಅಂತ ಮೊನ್ನೆ ಅಡ್ಡಪಂಕ್ತಿ ಬರೆದವನ ಉಸಾಬರಿಯಿಂದ ನಮಗೆ ತಿಳಿದುಬಂದಿದೆ. ಆ ಕಳ್ಳರೆಲ್ಲ ಅಡ್ಡ ಗೋಡೆಮೇಲೆ ದೀಪ ಇಟ್ಟು ಕೈತೊಳೆದುಕೊಳ್ತಾರೆ. ಗುರುಗಳಿಗೆ ಮತ್ತೆ ಜಾರಗಣೆ ಶುರುವಾಗ್ತದೆ; ಏಕಾಂತ ಮಾಡೋದಕ್ಕೆ ಸಮಯ ಸಿಗ್ತಾ ಇಲ್ಲ.

ನಮಗೆ ಗೊತ್ತಿರುವವರನ್ನು ಬಿಟ್ಟು ಯಾರೇ ಬಂದ್ರೂ ನಮ್ಮನ್ನು ಹೇಳದೆ-ಕೇಳದೆ ಒಳಗೆ ಬಿಡವೇಡಿ. ಹೊರಗೇ ನಿಂತುಕೊಳ್ಳಲಿ. ನಿಮ್ಮಲ್ಲಿ ಯಾರಾದರೂ ಒಬ್ಬರು ಗುಟ್ಟಾಗಿ ನಮಗೆ ಯಾರು ಬಂದಿದ್ದಾರೆಂದು ತಿಳಿಸಿ. ಏನು ಮಾಡಬೇಕೆಂದು ನಾವು ನಿಮಗೆ ಸೂಚನೆ ಕೊಡ್ತೇವೆ. ಗುರುಗಳು ಕಾಲಲ್ಲಿ ತೋರಿಸಿದ್ದನ್ನು ಕೈಯಲ್ಲಿ ತೆಗೆದುಕೊಳ್ಳುವ ಚಾತುರ್ಯ ನಿಮ್ಮಲ್ಲಿರಬೇಕು. ಇಂತಹ ಗುರುಸೇವೆಯಿಂದ ನಿಮ್ಮ ಜನ್ಮ ಪಾವನವಾಗ್ತದೆ; ಇಹ-ಪರಗಳೆರಡರಲ್ಲೂ ಉನ್ನತಿ ಸಿಗ್ತದೆ.

ಹೀಗೆ ಗುರು ಕರುಣೆ ಅನ್ನೋದು ಬಹಳ ಕೆಲಸ ಮಾಡ್ತದೆ. ಅದು ನಮ್ಮಲ್ಲಿ ಹಲವು ಮಹಿಳೆಯರಿಗೆ ಗೊತ್ತಾಗಿದೆ. ಅವರ ಮೂಕಪ್ರೇಕ್ಷಕ ನರಸತ್ತ ಗಂಡಂದಿರಿಗೂ ಗೊತ್ತಾಗಿದೆ. ಗುರು ಎಂದರೆ ಕೇವಲ ಪೀಠದ ಮೇಲೆ ಕುಳಿತು ಮಂತ್ರಾಕ್ಷತೆ ಕೊಡುವವನಲ್ಲ; ಸಾಧ್ಯವಾದಲ್ಲೆಲ್ಲ ಕಚ್ಚೆಬಿಚ್ಚಿ ಸಂತಾನ ಭಾಗ್ಯವನ್ನೂ ಅನುಗ್ರಹಿಸುವವನು ಎಂಬುದನ್ನು ಅವರೀಗ ಅರಿತಿದ್ದಾರೆ; ಮತ್ತು ಅನಿವಾರ್ಯವಾಗಿ ಅದನ್ನೇ ಒಪ್ಪಿ ಕೊಂಡು ನಮಗೆ ಜೈಕಾರ ಹಾಕುತ್ತಿದ್ದಾರೆ.

ಬರೇ ಕಾಮ
ಬರೇ ಕಾಮ ”

ಪ್ರವಚನ ಮುಗಿಯುತ್ತಿದ್ದಂತೆ ಗಂಡು ಕತ್ತೆಗಳು ಹೆಣ್ಣುಕತ್ತೆಗಳನ್ನು ಕಂಡು “ಎಲ್ಲ ಚೆನ್ನಾಗಿ ಊಟಮಾಡ್ಕಳಿ” ಎನ್ನುತ್ತ ಜೋರಾಗಿ ಹಲ್ಲು ಕಿಸಿದವು. ಗಂಡು ಕುದುರೆಗಳು ನಾ ಮೇಲು ತಾ ಮೇಲು ಎಂದು ಗಂಟಲು ಹರಿದುಕೊಂಡು ಹಿಂದೆಂದಿಗಿಂತ ಅಗಾಧ ಉಚ್ಚ ಸ್ವರದಲ್ಲಿ ಹೇಷಾರವ ಹೊರಡಿಸಿದವು.
“ಹಾವಾಡಿಗ ಮಹಾಸಂಸ್ಥಾನ ಜಗದ್ಗುರು ಶೋಭರಾಜಾಚಾರ್ಯ ಚಂದ್ರನಾಡ್ಯುಜ್ಜೇಶ್ವರ ತೊನೆಯಪ್ಪ ಕಚ್ಚೆಶೀ ಮಹಾರಾಜ್ ಕೀ ಜೇ ಯ್

…………… ಜೇ ಯ್

…………..ಜೇ ಯ್
[ವಿಡಂಬನೆಯ ಮುಂದಿನ ಕಂತುಗಳನ್ನು ಸಮಯೋಚಿತವಾಗಿ ಪ್ರಕಟಿಸಲಾಗುವುದು]

Thumari Ramachandra

source: https://www.facebook.com/groups/1499395003680065/permalink/1751153998504163/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s