ಮುಂದೈತೆ ಮಾರಿಹಬ್ಬ, ವರಿ ಮಾಡಬೇಡಿ

ಮುಂದೈತೆ ಮಾರಿಹಬ್ಬ, ವರಿ ಮಾಡಬೇಡಿ

ನಿರೀಕ್ಷೆಯಂತೆ ತೊನೆಯಪ್ಪನ ಮ್ಯಾಚ್ ಫಿಕ್ಸಿಂಗ್ ಎಲ್ಲರಿಗೂ ಬಹಿರಂಗಗೊಂಡಿದೆ. ಬಹುಶಃ ಹಳದೀ ತಾಲಿಬಾನು ಪಟಾಕಿಗಳನ್ನು ಹಚ್ಚಿ ವಿಜಯೋತ್ಸವ ನಡೆಸಬಹುದು. ಆದರೆ ಭಕ್ತರ ಕಾಣಿಕೆಯಲ್ಲಿ ಎಷ್ಟು ಕೋಟಿಯನ್ನು ಮುದುಕನಿಗೆ ಕೊಟ್ಟರು ಎಂಬುದು ಮಾತ್ರ ಗೊತ್ತಾಗಲಿಲ್ಲ.

ಮೊನ್ನೆಯಿಂದಲೆ ಹಾರಾಟ ಜೋರಾಗಿ ನಡೆಯುತ್ತಿತ್ತು. ಇವತ್ತು ಕೇಳೋದೇ ಬೇಡ. ನಾವೆಲ್ಲ ಕಾದಿದ್ದಕ್ಕೆ ನಿದ್ದಣ್ಣನ ರಾಜ್ಯದಲ್ಲಿ ಇಷ್ಟೇ ಕಿಮ್ಮತ್ತು. ನಿದ್ದಣ್ಣದ ರಾಜ್ಯ ಅಂದರೆ ನಂದೋರಾಯನ ರಾಜ್ಯದಂತೆ ಆಗಿದೆ. ಅತ್ತ ನೋಡಿ ಅಲ್ಲೊಂದು ಗಲಾಟೆ, ಇತ್ತ ನೋಡಿ ಇಲ್ಲೊಂದು ಗಲಾಟೆ. ನ್ಯಾಯ ಕೇಳಿದವರಿಗೆ ಲಾಠಿ ಏಟು.

ಈ ಸಮಯದಲ್ಲಿ ಸಂಬಂಧಪಟ್ಟ ಮಹಿಳಾ ಸಂಘಟನೆಗಳು ಮುಂದೆ ಬರಬೇಕು. ಇಷ್ಟೊಂದು ದೊಡ್ಡ ವಿಷಯ ಸದನದಲ್ಲೇಕೆ ಚರ್ಚೆ ಆಗಲಿಲ್ಲ? ಮುಕ್ತವಾಗಿ ಚರ್ಚೆ ನಡೆಸಲು ವಿರೋಧ ಪಕ್ಷಗಳೇಕೆ ಮನಸ್ಸು ಮಾಡಲಿಲ್ಲ? ಎಲ್ಲರೂ ಸನ್ಯಾಸಿ ವೇಷದವನ ರಕ್ಷಣೆಗೆ ನಿಂತಿದ್ದಾರೆಯೇ? ಅವರಿಗೆಲ್ಲ ಜೀವ ಇಲ್ಲವೇ? ಮತ ಕೇಳುವಾಗ ಇರುವ ದನಿ ಮತಪಡೆದು ಅಧಿಕಾರದ ಹುದ್ದೆಗೆ ಬಂದಮೇಲೆ ಮರೆತುಹೋಗುವುದೇ?

ಮಿತ್ರರೆಲ್ಲ ಬೇಸರಗೊಳ್ಳಬೇಕಿಲ್ಲ. ಲಕ್ಷ್ಮಣ ಅರೆಘಳಿಗೆ ಸತ್ತಿದ್ದು ಹೌದು. ಅದು ಮೂರ್ಛೆಯಷ್ಟೆ, ಅದು ಸಾವಲ್ಲ. ಅಭಿಮನ್ಯು ಸತ್ತದ್ದು ಹೌದು, ಆದರೆ ಅದೇ ಮಹಾಭಾರತದ ಅಂತ್ಯವಲ್ಲ,ಧುರ್ಯೋಧನನ ಗೆಲುವಲ್ಲ.

ಇಷ್ಟುದಿನ ತಡೆದಿದ್ದ ತೊನೆಯಪ್ಪ ಈಗ ಊರೂರು ಅಲೆಯುತ್ತ ಮತ್ತೆ ಹಣ ಎತ್ತುವಳಿಗೆ ಹೋಗುತ್ತಾನೆ. ಜನ ಮಳ್ಳೋ ಜಾತ್ರೆ ಮಳ್ಳೋ ಶಂಕರ ಭಟ್ಟನ …..ಮಳ್ಳೋ ಎಂಬುದೊಂದು ಗಾದೆಯಿದೆ. ಈ ಕಲಿಯುಗದಲ್ಲಿ ಹಣವಿದ್ದ ಕಡೆಗೆ ಜನ. ಹಣ ಕಂಡರೆ ಹೆಣವೂ ಬಾಯ್ಬಿಡುವುದು ಸುಳ್ಳಲ್ಲ. ಹಾಗಾಗಿಯೇ ಹಾವಾಡಿಗ ತೊನೆಯಪ್ಪ ಕ್ಷಣಿಕ ವಿಜಯಿ, ಕ್ಷಣಿಕ ಸುಖಿ.

ಮುಂದಿದೆ ಮಾರಿ ಹಬ್ಬ. ಇದು ಇಷ್ಟಕ್ಕೆ ಮುಗಿಯಿತು ಎಂದು ಪಟಾಕಿ ಹಚ್ಚಿ ಪಟ್ಟಂಗ ಕೊಚ್ಚುವವರು ಬೆನ್ನಿಗೆ ಹಾಳೆ ಕಟ್ಟಿಕೊಂಡು ನಿಲ್ಲಬೇಕಾದ ಸಂದರ್ಭ ಸದ್ಯದಲ್ಲೇ ಇದೆ. ತೊನೆಯಪ್ಪನಿಂದ ಈ ರಾಜ್ಯದಲ್ಲಿ ಸಜ್ಜನರಿಗೆ ಉಳಿಗಾಲವಿಲ್ಲ. ಹೀಗಾಗಿ ತೊನೆಯಪ್ಪನನ್ನು ಯಾವ ವಿಧದಲ್ಲಿ ಕಟ್ಟಿಹಾಕಬೇಕೋ ಅದೇ ವಿಧದಲ್ಲಿ ವಿಧಿ ಕಟ್ಟಿಹಾಕುತ್ತದೆ. ಸದ್ಯಕ್ಕೆ ಮೂರು ಹೊತ್ತೂ ಏಕಾಂತ ನಡೆಸುತ್ತ ಕೆಲವು ದಿನಗಳ ಕಾಲ ಮಜ ತೆಗೆದುಕೊಳ್ಳಲಿ.

ಈ ನಿರ್ಣಯದಿಂದ ಯಾರೂ ಕಂಗೆಡಬೇಕಾಗಿಲ್ಲ. ಇದೇ ಮುಕ್ತಾಯವಲ್ಲ, ಹೊಸ ಆರಂಭ. ಹೊಸ ಆಯಾಮಕ್ಕೆ ಇದು ಬುನಾದಿ. ಕೆಲವು ಕಾಲ ನಮಗೆಲ್ಲ ಮೂರ್ಚೆ ಕವಿದಂತೆ ಇರೋಣ. ಹನುಮ ಸಂಜೀವಿನಿ ತರುತ್ತಿದ್ದಾನೆ. ಸಂಜೀವಿನಿ ಬಂದ ಅರೆನಿಮಿಷದಲ್ಲಿ ನಾವೆಲ್ಲ ಅಂದು ವಿಜಯೋತ್ಸವ ನಡೆಸವಹುದು. ಅದೇ ಪೈನಲ್ಲು ಮತ್ತು ತೊನೆಯಪ್ಪನ ಕಿರೀತೋಟ್ಸವ ಅಂದು ಪರಪ್ಪ ವನದಲ್ಲಿ ನಡೆಯುತ್ತದೆ.

ಅಲ್ಲಿಯವರೆಗೆ ತಾಳ್ಮೆಗೆಡದೆ ಎಲ್ಲರೂ ಕಾದಿರಿ. ನಿಮ್ಮ ನಿತ್ಯದ ಕೆಲಸಗಳನ್ನು ಯಥಾವತ್ತಾಗಿ ಮುಂದುವರಿಸಿ ಎಂಬುದು ತುಮರಿಯ ಆಶಯ. ನಾನೂ ಸಹ ನಿದ್ದೆಗೆಟ್ಟು ಕಾಯುತ್ತಾ ಕುಳಿತಿದ್ದೆ. ನಿರೀಕ್ಷೆ ಹೀಗೇ ಆಗುತ್ತದೆ ಅಂತ ಇತ್ತು. ನಮ್ಮದೆಲ್ಲ ಯಾವ ಲೆಕ್ಕ?ರಾವಣ ಸಾಯಲೆಂದು ಸಾವಿರ ವರ್ಷಗಳ ಕಾಲ ಕೋಟ್ಯಾವಧಿ ಜನ ಕಾದಿದ್ದರು. ರಾವಣ ವಾಲಿಯಂತ ಬಲಾಶಾಲಿಗಳ ಸಖ್ಯ ಬೆಳೆಸಿಕೊಂಡು ಮೆರೆಯುತ್ತಿದ್ದ. ಲಂಪಟರಾದ ಅವರೀರ್ವರಲ್ಲಿ ವೈಫ್ ಸ್ವ್ಯಾಪಿಂಗ್ ನಡೆದಿತ್ತು! ವಿಧಿ ಎಲ್ಲವನ್ನೂ ನೋಡುತ್ತಿತ್ತು.ಕೊನೆಗೆ ನಡೆದ್ದಿದ್ದು ನಿಮಗೆಲ್ಲ ಗೊತ್ತಿದೆ.

ಧರ್ಮಯುದ್ಧದಲ್ಲಿ ಸತ್ಯ ಗೆಲ್ಲಬೇಕು, ವ್ಯಭಿಚಾರಿ ಹಾವಾಡಿಗ ಕಂಬಿ ಎಣಿಸಬೇಕು. ಅದು ನಡೆಯುತ್ತದೆ. ಕೆಲವುಕಾಲ ಹಣ ಖಾಲಿ ಮಾಡುತ್ತ ಬದುಕಲಿ. ಕೊನೆಗೂ ಅವ ಒಳಗೆ ಹೋಗುವುದರಲ್ಲಿ ತುಮರಿಗೆ ಯಾವ ಸಂಶಯವೂ ಇಲ್ಲ. ನಿಮ್ಮೆಲ್ಲರ ಸಹನೆಗೆ ನನ್ನ ಕೃತಜ್ಞತೆಗಳು.

Thumari Ramachandra

source: https://www.facebook.com/groups/1499395003680065/permalink/1741762589443304/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s