ತೊನೆಯಪ್ಪನ ಬಸ್ಸು, ಭಕ್ಷೀಸು, ಬಾಟಲಿ ಇತ್ಯಾದಿ

ತೊನೆಯಪ್ಪನ ಬಸ್ಸು, ಭಕ್ಷೀಸು, ಬಾಟಲಿ ಇತ್ಯಾದಿ

ಐವತ್ತು ಬಸ್ಸುಗಳು ಹಳ್ಳಿಗಳ ಮೂಲೆಗಳಿಂದ ಮಹಾನಗರಿಗೆ ಓಡಿಬಂದವು ಎಂದ ನಮ್ಮ ಗುಮ್ಮಣ್ಣ ಹೆಗಡೇರು ದಸೋ ಬುಸೋ ಶ್ವಾಸ ಎಳೆಯುತ್ತ ಬಿಸಿಲಲ್ಲಿ ನಿಂತು ನಿಂತು ಸುಸ್ತಾಗಿ “ಇವರ ಮನೆ ಹಾಳಾಗ” ಎಂಬಷ್ಟು ಕೋಪ ಬಂದಿತ್ತು ಎಂದರು. ಈಗ ಹೊರಗೆ ರಾಜಕೀಯ ಪಕ್ಷಗಳ ನಡುವೆ ಚುನಾವಣೆಗಳು ನಡೆದಂತೆ ಸಭೆಯ ಚುನಾವಣೆಯೂ ಆ ಮಟ್ಟಕ್ಕೆ ಇಳಿದುಬಿಟ್ಟಿತು ಎಂದರು.
ಕಳೆದವಾರ ಕವಳದ ಗೋಪಣ್ಣ ಚುನಾವಣೆಯ ವಿಷಯ ಹೇಳಿ ಬಸ್ಸುಗಳ ಸುದ್ದಿ ತಿಳಿದಿದ್ದ. ಎಷ್ಟು ಬಸ್ಸು, ಯಾವ ರೀತಿ ವ್ಯವಸ್ಥೆ ಏನೊಂದೂ ಗೊತ್ತಿರಲಿಲ್ಲ. ರಾಜಕೀಯ ಪಕ್ಷಗಳವರು ಕುದುರೆ ವ್ಯಾಪಾರ ಶುರುವಿಟ್ಟುಕೊಂಡಾಗ ಸ್ವತಂತ್ರರನ್ನು ಎಲ್ಲೆಲ್ಲಿಂದಲೋ ಕರೆತಂದು ಎಲ್ಲೆಲ್ಲಿಗೋ ಕರೆದುಕೊಂಡು ಹೋಗಿ ನಾನಾಪರಿಯಲ್ಲಿ ಓಲೈಸುವುದು ತಿಳಿದೇ ಇದೆ. ಆದರೆ ಇದು ಆ ಮಟ್ಟದ್ದು ಎಂಬ ಭಾವನೆ ಬಂದಿರಲಿಲ್ಲ.

ಗುಮ್ಮಣ್ಣ ಹೆಗಡೇರು ಹೇಳುವಂತೆ, ಹಳ್ಳಿ ವಲಯಗಳಲ್ಲಿ ಚೆಂಡಾಡಿಕೊಂಡಿದ್ದ ಉಂಡಾಡಿ ಗುಂಡರನ್ನೆಲ್ಲ ಮನೆಮನೆಗೆ ಕಳಿಸಿ, “ನೀವು ತಪ್ಪದೆ ಬರಲೇಬೇಕು ಮತ್ತು ಆಣೆ ಹಾಕಿ ನೀವು ಶೋಕಾಚರಣೆಯ ಪಕ್ಷಕ್ಕೆ ಮತ ಹಾಕಬೇಕು. ಬಸ್ಸು ಮಾಡಿದ್ದೇವೆ. ಭಕ್ಷೀಸು ಕೊಡುತ್ತೇವೆ. ಊಟ-ತಿಂಡಿಗೆಲ್ಲ ಯೋಗ್ಯ ವ್ಯವಸ್ಥೆ ಮಾಡುತ್ತೇವೆ. ಬಯಸುವವರಿಗೆ ಬಾಟಲಿ ಪಾರ್ಟಿಯೂ ಇದೆ” ಎಂದು ಕೈಯ ಮೊಳದಲ್ಲಿ ಬಾಟಲಿಯನ್ನು ಸಾಂಕೇತಿಕವಾಗಿ ತೋರಿಸಿ ಬರುವಂತೆ ತೊನೆಯಪ್ಪನ ಬಳಗ ಕಳಿಸಿತ್ತಂತೆ.

ಗುಮ್ಮಣ್ಣ ಹೆಗಡೇರು ಹೇಳ್ತಾರೆ-“ಅಯ್ಯೋ ರಾಮು ನನಗೆ ಈ ಪರಿ ನಡೀತಾ ಇದೆ ಅಂತ ಗೊತ್ತಿರಲಿಲ್ಲ. ಕಾಯಿಲೆಗೆ ಚಿಕಿತ್ಸೆ ನೀಡುವವ, ರಾಗ ಹಾಡುವವ ಎಲ್ಲ ಇದ್ರು ಮಾರಾಯ. ಯಾರೊಬ್ಬರೂ ತನ್ನಿಚ್ಛೆಯಂತೆ ನಿಂತಿದ್ದಲ್ಲ. ಎಲ್ಲ ತೊನೆಯಪ್ಪನ ಅಪ್ಪಣೆಗೆ ತಲೆಬಾಗಿದವರೇ. ಎಂಜಲು ತಿಂದಮೇಲೆ ಋಣ ಸಂದಾಯ ಮಾಡಬೇಕಲ್ಲ?” ಅಂದರು.

ಹೆಗಡೇರು ಮುಂದುವರಿಸಿ,”ನಾನಾ ವೇಷಭೂಷಣ ತೊಟ್ಟ ಎಪ್ಪತ್ತು ಎಂಬತ್ತರ ಮುದುಕರು ಇಪ್ಪತ್ತರ ಹರೆಯದವರಂತೆ ಮುನ್ನುಗ್ಗಿ ಬಂದಿದ್ದು ನೋಡಿದರೆ ಬಂದವರಲ್ಲಿ ಬಹಳಜನ ಬಾಟಲಿ-ಭಕ್ಷೀಸಿಗಾಗಿಯೇ ಬಂದರು ಎನ್ನಬೇಕಾಗುತ್ತದೆ. ಯಾಕೆಂದರೆ ಈ ಉರಿಬಿಸಿಲಿನಲ್ಲಿ ಅಲ್ಲಿಂದ ಇಲ್ಲಿವರೆಗೆ ಮತ ಹಾಕುವುದಕ್ಕಾಗಿ ಬರುತ್ತಿರಲಿಲ್ಲ. ಕೆಲವರಿಗೆ ತೊನೆಯಪ್ಪನ ಹಂಗು; ಅವರ ಮಗನೋ, ಅಳಿಯನೋ, ಭಾವನೋ, ನೆಂಟನೋ ಯಾರದೋ ಒತ್ತಾಯ ಅಥವಾ ಬರದಿದ್ದರೆ ಸಂಬಂಧಪಟ್ಟವರ ನೌಕರಿಯೋ ಮಠಕರಿ(ಮಠದಲ್ಲಿ ಚಾಕರಿ)ಯೋ ಹೋಗಿಬಿಡುತ್ತದೆಂಬ ಅನುಮಾನ. ಹೀಗಾಗಿ ಬಂದರು.

ಯಥಾವತ್ತಾಗಿ ಅವ್ಯವಸ್ಥೆಗಳ ಆಗರವಾದ ಸಭೆಯ ಇಕ್ಕಟ್ಟಿನ ಜಾಗಗಳಲ್ಲಿ ಮಹಾಸಾಗರದಂತೆ ಒಮ್ಮೆಲೆ ತುಂಬಿಕೊಂಡ ಜನ ಸೇವಂತಿಗೆ ಹೂವುಗಳನ್ನು ಸುತ್ತಮುತ್ತ ಪೋಣಿಸಿ ದಪ್ಪನೆಯ ಹಾರ ಮಾಡಿದಂತೆ ಸಾಲುಗಟ್ಟಿ ನಿಂತಿದ್ದರು. ಅರೆಮಧ್ಯಾಹ್ನದ ವೇಳೆಗೆ ಮತ ಚಲಾವಣೆ ಆರಂಭ ಮಾಡಿದ್ದು ತೊನೆಯಪ್ಪನಿಗೆ ಅನುಕಾಲವಾಗಲಿ ಅಂತಲೋ ಗೊತ್ತಿಲ್ಲ. ಇಳಿಸಂಜೆಯವರೆಗೂ ಪಾಪ ಜನ ಕ್ಯೂ ನಿಂತಿದ್ದರು. ಬಿಸಿಲಿನಲ್ಲಿ ನೀರಿಗಾಗಿ ಹುಡುಕುತ್ತಿದ್ದರು. ಎರಡೂ ಕೈಗಳಲ್ಲಿ ಬೆವರು ಒರೆಸಿಕೊಳ್ಳುತ್ತ ಅನಿವಾರ್ಯವೆಂಬಂತ ಮುಖಭಾವ ಪ್ರದರ್ಶಿಸುತ್ತಿದ್ದರು.”

ಹಿಂದೊಂದು ಸಮಯದಲ್ಲಿ ಮುಂದೆಂದೋ ಸಮಾಜಕ್ಕೆ ಒಳ್ಳೆಯದಾಗಲೆಂಬ ಸುಮನಸ್ಸುಗಳು ಕೆಲವು ಸೇರಿ ಸಭೆಯನ್ನು ಆರಂಭಿದವು. ನಂತರದ ದಿನಗಳಲ್ಲಿ ಹಲವರು ಆಡಳಿತವನ್ನು ನಡೆಸಿದರು. ಸಾಮಾಜಿಕ ಸಂಸ್ಥೆಗಳ ಆರಂಭಿಕ ಹಂತ ಭಾರೀ ಕಷ್ಟ. ಯಾವ ಕಾರ್ಯಕ್ರಮಗಳನ್ನು ಆಯೋಜಿಸಿದರೂ ಜನರಿಂದ “ತಿಂದರು”, “ತಿಂದು ತೇಗಿದರು” ಎಂದು ಹೇಳಿಸಿಕೊಳ್ಳಬೇಕು. ವಾಸ್ತವವಾಗಿ ಆಯೋಜಕರೇ ಕೈಯಿಂದ ಹಾಕಿಕೊಂಡು ಖೋತಾ ಭರ್ತಿ ಮಾಡಿಕೊಂಡು ಮರ್ಯಾದೆ ಉಳಿಸಿಕೊಳ್ಳಬೇಕಾದ ಪ್ರಮೇಯ ಇರುವುದೇ ಜಾಸ್ತಿ.

ಇಲ್ಲೂ ಸಹ ನಾವು ಅದನ್ನೇ ಕಾಣಬಹುದು. ಶೋಕಾಚರಣೆ ಪಕ್ಷದ ಅಭ್ಯರ್ಥಿಗಳಲ್ಲಿ ಹಲವರಿಗೆ ಸಭೆಯ ಕಟ್ಟಡ ಇರುವ ಜಾಗ ಕೂಡ ಹೊಸದು. ಸಭೆಯ ರೀತಿ-ರಿವಾಜುಗಳು ಏನೇನೂ ಗೊತ್ತಿಲ್ಲ. ತಾನು ಡೈರೆಕ್ಟರು ಎಂದು ಹೇಳಿಕೊಳ್ಳುವುದೇ ಅವರಿಗೊಂದು ಅಂತಸ್ತಿನ ಪ್ರಶ್ನೆ. ಕೆಲವರು ಸಭೆಯ ಕೆಲವು ಕಾರ್ಯಕಲಾಪಗಳಲ್ಲಿ ಮೊದಮೊದಲು ಭಾಗವಹಿಸಿ ಜನರ ಪರಿಚಯ ಬೆಳೆಸಿಕೊಳ್ಳಲು ಬರುತ್ತಿದ್ದವರು ಈಗೆಲ್ಲ ಬಹಳ ಬೀಜಿಯಾಗಿಬಿಟ್ಟಿದ್ದಾರೆ. ತೊನೆಯಪ್ಪನ ಇನ್ವೆಶ್ಟ್ ಮೆಂಟ್ ಕಂಪನಿಯ ಗುಪ್ತನಿಧಿ ಹೂಡಿಕೆಯಿಂದ ಅಥವಾ ಸುವರ್ಣ ಮಂತ್ರಾಕ್ಷತೆಯಿಂದ ಮಹಾನಗರದ ತುಂಬ ಬ್ಯುಸಿನೆಸ್ಸು ಶಾಖೆಗಳನ್ನು ತೆರೆದಿದ್ದಾರೆ. ಅವರೆಲ್ಲರೂ ಹೇಳುತ್ತಿದ್ದದ್ದು ಒಂದೇ-“ಹಳೆಯ ತಲೆಗಳನ್ನೆಲ್ಲ ಹೊರಗೆಳೆದು ಹಾಕಿ, ನಮ್ಮನ್ನು ಆಯ್ಕೆ ಮಾಡಿ, ನಿಮಗೆ ಒಳ್ಳೆಯ ಆಡಳಿತ ನೀಡುತ್ತೇವೆ.”

ಹಿಂದೆಲ್ಲ ಬಂದು ಹೋದವರಿಗಿಂತ ಉತ್ತಮ ಆಡಳಿತ ನೀಡಲು ಇವರೆಲ್ಲ ದೇವಲೋಕದಿಂದ ಡೈರೆಖ್ಟ್ ಆಗಿ ಸಭೆಯ ಕಟ್ಟದದ ಭೂಮಿಗಿಳಿದು ಬಂದವರೇ? ಅಲ್ಲ. ಹಾಗಾದರೆ ಅವರಿಗಿಂತ ಚೆನ್ನಾಗಿ ಎನ್ನಲು ಹೇಗೆ ಎಲ್ಲಿಂದ ಹಣ ತರುತ್ತಾರೆ? ಅದೆಲ್ಲ ಬರೇ ಹೇಳಿಕೆಯಷ್ಟೆ. ಶೋಕಾಚರಣೆ ಪಕ್ಷದ ಉದ್ದೇಶ ಅದಲ್ಲ. ಯಾರದೋ ಮನೆಯ ಹರೆಯದ ಹುಡುಗಿಯರ ಕೈಲಿ ಚಂಬು-ಕಾಯಿ ಕೊಟ್ಟು, ಜಗದ್ಗುರು ಕಚ್ಚೆಶ್ರೀ ತೊನೆಯಪ್ಪನವರನ್ನು ಸ್ವಾಗತಿಸಿ, ಏಕಾಂತ ಸೇವೆ ಮತ್ತು ಕಾಮಭಿಕ್ಷೆಯನ್ನು ನಡೆಸಬೇಕು ಶಿಖರನಗರದಲ್ಲಿ ಕಳೆದುಕೊಳ್ಳುವ ಜಾಗಕ್ಕೆ ಪರ್ಯಾಯವಾಗಿ ಸಭೆಯ ಕಟ್ಟಡವನ್ನು ಕಚ್ಚೆಶ್ರೀ ತೊನೆಯಪ್ಪನವರಿಗೆ ದಾನಪತ್ರದ ಮೂಲಕ ವರ್ಗಾಯಿಸಿಕೊಡಬೇಕು ಎಂಬುದು ಅವರೆಲ್ಲರ ಉದ್ದೇಶ. ಹಾಗೆ ಮಾಡುವಂತೆ ಫಲಾನುಭವಿಗಳಿಗೆ ತೊನೆಯಪ್ಪನವರಿಂದ ಅಪ್ಪಣೆಯಾಗಿದೆ.

ಗೆದ್ದವರೆಲ್ಲ, ರಾಕ್ಷಸರು ದೇವಲೋಕ ಗೆದ್ದುಕೊಂಡತೆ ತೊನೆಯಪ್ಪನ ಪಕ್ಕದಲ್ಲಿ ನಿಂತು ಪೋಸು ಕೊಟ್ಟಿರುವುದನ್ನು ನಮ್ಮ ಸ್ನೇಹಿತರು ಚಿತ್ರಗಳ ಮೂಲಕ ತೋರಿಸಿದ್ದಾರೆ. ವಿಶಾಲ ಸಾಗರದಂತ ಸಮಾಜದಲ್ಲಿ ಸಭೆಯ ಸದಸ್ಯರ ಸಂಖ್ಯೆಯೇ ನಗಣ್ಯ. ಅಲ್ಲಿ ಕೈಗೊಳ್ಳುವ ಯಾವುದೇ ತೀರ್ಮಾನಗಳು ಸಮಾಜದ ತೀರ್ಮಾನಗಳು ಎನ್ನಲು ಸಾಧ್ಯವೇ ಇಲ್ಲ. ಅದರಲ್ಲಿಯೇ ಮತಚಲಾಯಿಸಲು ಬಂದ ಸದಸ್ಯರ ಸಂಖ್ಯೆ ಇಪ್ಪತ್ತೆರಡು ಪರ್ಸೆಂಟು. ಅಷ್ಟು ಮತಗಳಿಂದ ಸಮಾಜದ ತೀರ್ಮಾನ ಇದು ಎಂದು ಹೇಳುವುದೇ ಶುದ್ಧ ಮೂರ್ಖತನ. ಅಂಕಿ ಅಂಶಗಳನ್ನೆಲ್ಲ ಗಮನಿಸದೇ ಇರುವವರಿಗೆ ತಾವೇ ಗೆದ್ದೆವೆಂದು ಪೋಸು ಕೊಟ್ಟು ಈಗ ಸಭೆ ಎಂದರೆ ತೊನೆಯಪ್ಪನ ಮಠದ ಶಾಖೆ ಎಂಬಂತೆ ನಡೆದುಕೊಳ್ಳುತ್ತಿರುವವರ ಬಗ್ಗೆ ಏನನ್ನೋಣ?
ಚುನಾವಣೆಯ ದಿನ ಹೊರಗಿನಿಂದ ಒಳಗಿನ ಹಾಲ್ ವರೆಗೆ ಬೇಕಾಬಿಟ್ಟಿ ಓಡಾಡಿಕೊಂಡಿದ್ದ ಮ್ಯಾಂಗೋ ಪುಕುಳಿ, ಕಾಂತಪ್ಪ ಮೊದಲಾದ ತೊನೆಯಪ್ಪ ಭಕ್ತಬಾಲಬಡುಕರು ಶೋಕಾಚರಣೆ ಪಕ್ಷದ ಬ್ಯಾಡ್ಜನ್ನು ಧರಿಸಿ ಓಡಾಡುತ್ತ ಹಲವರಿಂದ ಉಗಿಸಿಕೊಂಡಿದ್ದನ್ನ ಕಂಡ ಗುಮ್ಮಣ್ಣ ಹೆಗಡೇರು ಮುಖಕ್ಕೆ ಪಂಚೆ ಅಡ್ಡ ಹಿಡಿದುಕೊಂಡು ಸೈಲೆಂಟಾಗಿ ನಕ್ಕಿದ್ದಾರಂತೆ.

ಅಂತೂ ನಮೇಸಣ್ಣ, ಕನಾತಣ್ಣ, ಹಾವಿನಹಳ್ಳಿ ದೊಣ್ಣೆನಾಯಕ, ಮ್ಯಾಂಗೋ ಪುಕುಳಿ, ನೀತಾ ಗುಂಜಪ್ಪ, ಕೋತಿನಾಮ, ಸ್ತ್ರೀಧರ ಎಲ್ಲರೂ ಸೇರಿ ತೊನೆಯಪ್ಪನ ಪವಾಡದ ಗುಣಗಾನ ಮಾಡಿ ಕಚ್ಚೆಶ್ರೀಗಳ ಬುಲ್ ಪೀನ ತೊಳೆದುಕೊಡಲು ನಾವಿದ್ದೇವೆ ಎಂದಿದ್ದಾರೆ. ಹಗಲಿರುಳೆನ್ನದೆ ನಿತ್ಯ ಜಗದ್ಗುರು ಕಚ್ಚೆಶ್ರೀ ಹಾವಾಡಿಗ ತೊನೆಯಪ್ಪನವರ ಹಾವನ್ನು ಆಡಿಸುತ್ತ ಮನಸಾರೆ ಆನಂದತುಂದಿಲಗೊಂಬ ನೀತಾ ಗುಂಜಪ್ಪ, ಶೋಕಾಚರಣೆ ಪಕ್ಷದ ವಿಜಯ ದುಂದುಭಿ ಮೊಳಗಿಸಿ ತೊನೆಯಪ್ಪನ ಹಾವಿಗೆ ಸರ್ವಸೇವೆ ನಡೆಸಿದ್ದು ತಿಳಿದುಬಂತು.

ಇನ್ನುಮುಂದೆ ಸಭೆಗೆ ದೇಣಿಗೆ, ಧನಸಹಾಯ ನೀಡುವವರು ಅದನ್ನು ತೊನೆಯಪ್ಪ ಭಕ್ತ ಮಂಡಲಿಗೆ ನೇರವಾಗಿ ವರ್ಗಾಯಿಸುವುದು ಸೂಕ್ತ ಎಂದು ಗುಮ್ಮಣ್ಣ ಹೆಗಡೇರು ಹೇಳಿದ್ದಾರೆ. ಕಾಲ ಪರಿವರ್ತಿತವಾಗಿ ಮತ್ತೆ ಹೊಸ ಚುನಾವಣೆ ನಡೆದು ತೊನೆಯಪ್ಪ ಭಕ್ತ ಮಂಡಲಿ ಎದ್ದುಹೋಗದ ಹೊರತು ಸಭೆ ಉದ್ದಾರವಾಗೋದು ಸಾಧ್ಯವಿಲ್ಲ. ಅಷ್ಟೇ ಇಲ್ಲ, ಈಗಿರುವ ಸ್ಥಿತಿಯಲ್ಲೇ ಮುನ್ನಡೆಯುವುದೂ ಸಹ ಕಷ್ಟವೇ ಎಂಬುದು ಅವರ ಖಚಿತ ಅಭಿಪ್ರಾಯ.

ಹೋರಿ ಎಂದಾದರೂ ಹುಲಿಯಾಗಲು ಸಾಧ್ಯವೇ? ನಾವೆಲ್ಲ ನೆಲ-ಮನೆಗಳನ್ನು ಕಳೆದುಕೊಂಡು ಊರು ಬಿಟ್ಟು ಊರಿಂದೂರಿಗೆ ನಿರಾಶ್ರಿತರಾಗಿ ಅಲೆಯುತ್ತ, ಸರಕಾರ ಕೊಡಬಹುದಾದ ಪರ್ಯಾಯ ಭೂಮಿಗೆ ಅರ್ಜಿಹಾಕಿಕೊಳ್ಳುತ್ತ ಇರುವ ಸಮಯದಲ್ಲಿ ಕೆಲವು ಸ್ನೇಹಿತರಾದಿಯಾಗಿ ನಾವು ಓದುತ್ತಿದ್ದೆವು. ಗಾಂವ್ ಕಾ ಶೇರ್ ಎಂಬ ಹಿಂದಿ ಕಥೆಯೊಂದು ನಮ್ಮ ಉಪ ಪಠ್ಯದಲ್ಲಿತ್ತು.
ಹಳ್ಳಿಗನೊಬ್ಬನ ಸದೃಢ ಹೋರಿ ಮೇಯಲು ಕಾಡಂಚಿನ ಗೋಮಾಳಹ್ಕೆ ತೆರಳಿದ್ದಾಗ ಸಂಜೆಯಾದರೂ ಮರಳಿರುವುದಿಲ್ಲ. ಇನ್ನೇನು ಕತ್ತೆಲೆ ಕವಿಯುವ ಹೊತ್ತಿಗೆ ಮೈಯೆಲ್ಲ ರಕ್ತಮೆತ್ತಿಕೊಂಡ ಹೋರಿ ಓಡೋಡುತ್ತ ದೊಡ್ಡಿಗೆ ಬಂದಿತ್ತು. ನೋಡಿದರೆ ಮೈತುಂಬ ಹುಲಿಯು ಪಂಜಾದಿಂದ ಹೊಡೆದ ಗಾಯಗಳು ಕಾಣಿಸಿಕೊಂಡಿದ್ದವು. ರಕ್ತ ಹರಿಯುತ್ತಿತ್ತು. ಆ ರಾತ್ರಿ ಹೋರಿಯನ್ನು ಉಪಚರಿಸಿದ ಯಜಮಾನ ಊರಲ್ಲೆಲ್ಲ ಸುದ್ದಿ ಹಬ್ಬಿಸಿ ತನ್ನ ಹೋರಿ ಈ ಊರಿಗೆ ಹುಲಿಯಿದ್ದಂತೆ ಎಂದ. ಜನರೆಲ್ಲ ಹೋರಿಯನ್ನು “ಗಾಂವ್ ಕಾ ಶೇರ್” ಎಂದು ಕರೆದರು.

ಹೋರಿ ಹುಲಿಯಿಂದ ಗೆದ್ದುಬಂದ ವಿಜಯೋತ್ಸಾಹದಲ್ಲಿ ಯಜಮಾನ ಹಳ್ಳಿಗರ ಜೊತೆಗೂಡಿ ಗುಂಡು ಪಾರ್ಟಿ ನಡೆಸಿದ. ಗಾಯಗೊಂಡ ಹೋರಿ ನೋವಿನಿಂದ ನರಳುತ್ತ ಭದ್ರ ಬಾಗಿಲು ಏನೂ ಇರದ ದೊಡ್ಡಿಯಲ್ಲಿ ಅಡ್ಡ ಮಲಗಿತ್ತು. ಮಧ್ಯರಾತ್ರಿ ಕಳೆದು ಎಲ್ಲರೂ ಪಾನಮತ್ತರಾಗಿ ಮನೆಯಂಗಳದಲ್ಲಿ ಬಿದ್ದುಕೊಂಡಿರುವ ಸಮಯಹಲ್ಲಿ ಕಾಡಂಚಿನಿಂದ ಮೆತ್ತಗೆ ಅಡಿಯಿಟ್ಟ ಹುಲಿರಾಯ ಹಗ್ಗದಿಂದ ಗೂಟಕ್ಕೆ ಕಟ್ಟಲ್ಪಟ್ಟ ಗಾಯಗೊಂಡ ಹೋರಿಯ ಮೇಲೆ ಎರಗಿ ಅದನ್ನು ತಿಂದು ಹಾಕಿಬಿಟ್ಟಿದೆ.

ನಿಶೆಕಳೆದು ನೆಶೆಯಿಳಿದ ಜನ ಮತ್ತು ಯಜಮಾನ ದೊಡ್ಡಿಗೆ ತೆರಳಿ ನೋಡಿದರೆ ಹೋರಿ ಅಲ್ಲಿರಲಿಲ್ಲ. ದೊಡ್ಡಿಯೊಳಗಿನಿಂದ ಕಾಡಂಚಿನವರೆಗೆ ಎಲ್ಲೆಲ್ಲೂ ರಕ್ತದ ಕಲೆಗಳು ಕಾಣಿಸಿದವು. ಪಾಪದ ಹೋರಿ ಹಸಿದ ಹೆಬ್ಬುಲಿಗೆ ಬಲಿಯಾಗಿತ್ತು. ಕಟ್ಟಿದ ಗೂಟಕ್ಕಿಂತ ಎತ್ತರಕ್ಕೆ ಹಾರಲಾರದೆ ಶಕ್ತಿಯುಕ್ತಿ ಮೀರಿ ನಡೆಸಿದ ಯತ್ನವೂ ಯಾವ ಪ್ರಯೋಜನಕ್ಕೂ ಬಂದಿರಲಿಲ್ಲ.

ಶೋಕಾಚರಣೆ ಪಕ್ಷದವರೂ ಕೂಡ ಈ ಶೋಕದ ಗೆಲುವಿನ ಕತೆಯನ್ನು ಕೇಳಿ ಎಣ್ಣೆ ಹೊಡೆದು ಆನಂದಿಸಿದರೆ ನಮಗೆಲ್ಲ ಸಂತೃಪ್ತಿ. ಅಂದಹಾಗೆ ಭಗವಂತನೆಂಬ ಹುಲಿಗೆ ಅವರ ತೊನೆಯಪ್ಪ ಹೋರಿ ಬಲಿಯಾಗುವ ದಿನಗಳು ಬಹಳ ದೂರವೇನೂ ಇಲ್ಲ. ಅಲ್ಲಿಯವರೆಗೆ ಬಸ್ಸು, ಭಕ್ಷೀಸು, ಬಾಟಲಿಗಳ ವ್ಯವಹಾರ ಎಷ್ಟು ಬೇಕಾದರೂ ನಡೀಲಿ, ನಮ್ಮದೇನೂ ಅಭ್ಯಂತರವಿಲ್ಲ.

Thumari Ramachandra

Source: https://www.facebook.com/groups/1499395003680065/permalink/1740458562907040/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s