ಆಸಕ್ತಿಯಿಲ್ಲದ ವಿಚಾರದಲ್ಲಿ ಮಿದುಳು ಕೊಯ್ದುಕೊಂಡದ್ದು..!!

ಆಸಕ್ತಿಯಿಲ್ಲದ ವಿಚಾರದಲ್ಲಿ ಮಿದುಳು ಕೊಯ್ದುಕೊಂಡದ್ದು..!!

ಹಿಂದೆ ಇದ್ದಿಲ್ಲ… ಈಗ ಬೇಕಾಗಿಲ್ಲ…. ಮುಂದೆ ಅಗತ್ಯವೇ ಕಾಣುವುದಿಲ್ಲ….ಆದರೂ…!
……

ಹವ್ಯಕ ಮಹಾಸಭೆ ಎಂಬುದು ಬಹಳ ಹಿಂದೆಯೇ ಸ್ಥಾಪಿಸಲ್ಪಟ್ಟು ಇದೂವರೆಗೆ ಕಾರ್ಯನಿರ್ವಹಿಸುತ್ತಾಬಂದಿದೆ ಎಂಬುದು ಮಹಾಸಭೆಯ ಹಲವರ ಅಂಬೋಣ. ಇರಲಿ ನನಗೂ ಈ ಮೊದಲು ಎಲ್ಲೋ ಕೇಳಿದ ನೆನಪು. ಇಂಥದ್ದೊಂದು ಸಭೆ ಇದೆ.. ಅದಕ್ಕೊಂದಿಷ್ಟು ಕಾರ್ಯ ಚಟುವಟಿಕೆಗಳಿವೆ ಎಂದು. ಆದರೂ ಅಂದಿನಿಂದಲೂ ಇಂತಹ ಹಲವಾರು ಜಾತೀ ಸೂಚಕವಾದ ಸಂಘಟನೆಗಳು ಅನೇಕ ಸ್ಥಾಪನೆಗೊಂಡು ಕಾರ್ಯ ನಿರ್ವಹಿಸುತ್ತಿರುವುದನ್ನು ಕಂಡಿದ್ದ ನನಗೆ ಈ ಸಂಘಟನೆ ಏನು ಮಾಡುತ್ತಿದೆ ಎಂಬುದರ ಸಣ್ಣ ಸುಳಿವೂ ಇದ್ದಿಲ್ಲ.. ಅದರ ಗೋಜಿಗೂ ಹೋಗಿರಲಿಲ್ಲ. ಈಗ್ಗೆ ಕೆಲ ತಿಂಗಳು ಯಾ ವರ್ಷಗಳಿಂದೀಚೆಗೆ ಈ ಮಹಾಸಭೆಯ ಹೆಸರು ಅಲ್ಲಲ್ಲಿ ಪ್ರಸ್ತಾಪವಾಗುತ್ತಿರುವುದನ್ನು ಅವಲೋಕಿಸುತ್ತಾ ಬಂದಿದ್ದೇನೆ. ಆಗೆಲ್ಲ ನನಗನಿಸಿದ್ದು.. ಇದು ಇಡೀ ಹವ್ಯಕ ಸಮುದಾಯವನ್ನು ಪ್ರತಿನಿಧಿಸುತ್ತದಾ… ಹವ್ಯಕರೆಲ್ಲರ ಸಹಭಾಗಿತ್ವ ಅದರೊಳಗೆ ಇದೆಯಾ..? ಹವ್ಯಕರ ಏಳ್ಗೆಗಾಗಿ ಯಾವೆಲ್ಲ ಕೆಲಸ ಕಾರ್ಯಗಳು ನಡೆಯುತ್ತವೆ. ? ಎಂದು ಆದರೆ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ಸಿಕ್ಕಿರಲಿಲ್ಲ ಅದನ್ನು ಪಡೆದು ಕೊಳ್ಳುವ ಕೌತೂಹಲಿಕ ಸಂದರ್ಭಗಳೂ ಒದಗಿ ಬರಲಿಲ್ಲ. ಮುಂದೂ ಅವಶ್ಯಕತೆ ಇರಲಿಕ್ಕಿಲ್ಲ.,…!
ಹೀಗೇ ಯೋಚಿಸುತ್ತಿದ್ದಾಗ ಮನಸ್ಸಿಗೆ ಬಂದಿದ್ದು…

ಸುಮಾರು 11 ಲಕ್ಷಕ್ಕೂ ಮಿಕ್ಕಿ ಬೆಳೆದಿರುವ ಹವ್ಯಕ ಸಮುದಾಯ ಜಗತ್ತಿನ ನಾನಾ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಕಂಡುಕೊಂಡಿದೆ ಮತ್ತು ತಮ್ಮ ಬದುಕು ಕಟ್ಟಿಕೊಂಡು ಈ ಸಮುದಾಯದ ಜನ ಬಾಳುತ್ತಿದ್ದಾರೆ. ಒಂದು ಸಂಘಟನೆ ಅಥವಾ ಸಂಸ್ಥೆ ಸಂಬಂಧಿಸಿದ ಎಲ್ಲ ಜನರ ಮುಖವಾಣಿಯಾಗಿ ಕೆಲಸ ಮಾಡಬೇಕಾದರೆ ಅದು ಎಲ್ಲರನ್ನೂ ಒಳಗೊಂಡಿರಬೇಕು. ಬೇಕಾದರೆ ಪ್ರಜಾ ಪ್ರಾತಿನಿಧಿಕ ಪದ್ಧತಿಯಲ್ಲಿ ಅದಕ್ಕೊಂದು ನಿರ್ದೇಶಕ ಮಂಡಳಿಯಿದ್ದು ಅದರಲ್ಲಿ ಪ್ರಜಾ ಪ್ರಭುತ್ವ ಮಾದರಿಯಲ್ಲಿ ಚುನಾವಣೆಗಳು ನಡೆದು ನಿರ್ದೇಶಕರುಗಳ ಆಯ್ಕೆ ನಡೆಯಲಿ. ಆದರೆ ಸಂಘಟನೆಯೆಂಬುದು ವಿಶಾಲವಾದ ಸಮುದಾಯದ ಸರ್ವರನ್ನೂ ತನ್ನ ಸಹಭಾಗಿಗಳಾಗಿ ತೆಗೆದುಕೊಳ್ಲಬೇಕಾಗಿತ್ತು. ಆದರೆ ಅಂಕಿ ಸಂಕಿಗಳನ್ನು ನೋಡುವಾಗ ಈ ಮಹಾಸಭೆಯ ಸದಸ್ಯರುಗಳ ಸಂಖ್ಯೆ ಕೇವಲ 17 ಸಾವಿರ + … ಅಷ್ಟೇ… ಅಂದರೆ ಸಮುದಾಯದ 1/4 ರಷ್ಟೂ ಜನರಿಂದ ಸಂಘಟನೆ ರೂಪುಗೊಂಡಿಲ್ಲ ಎಂಬುದು ಸರ್ವವಿದಿತ. ಇದಕ್ಕೆ ಕಾರಣ ಈ ಸಂಘಟನೆಯ ರೂವಾರಿಗಳೇ ಆಗಿರುತ್ತಾರೆಂಬುದು ಬೇರೆ ಹೇಳಬೇಕಿಲ್ಲ…! ಹೀಗಿರುವಾಗ ಇದು ಸಮುದಾಯದ ಮುಖವಾಣಿಯಾಗಲೀ, ಸಮುದಾಯದೊಳಗೆ ತೆಗೆದುಕೊಳ್ಲಬಹುದಾದ ನಿರ್ಧಾರಗಳಿಗಾಗಲೀ ಮಾನದಂಡವಾಗಿ ಆದರ್ಶವಾಗಿ ಭಾವಿಸಬೇಕಾದ ಅವಶ್ಯಕತೆ ಖಂಡಿತಾ ಇರುವುದಿಲ್ಲ. ಇದಲ್ಲದೇ ಇಡೀ ಹವ್ಯಕ ಸಮುದಾಯ ತನ್ನ ಧರ್ಮಪೀಠವನ್ನಾಗಿ ನೆಚ್ಚಿ ನಡೆದುಕೊಂಡು ಬಂದಿರುವುದು ಕೇವಲ ರಾಮಚಂದ್ರಾಪುರ ಮಠ-ಪೀಠವನ್ನು ಮಾತ್ರ ಎಂಬುದು ಸರ್ವಥಾ ಆಗಿರಲಿಕ್ಕಿಲ್ಲ. ಬಹುತೇಕರು ಈ ಮಠ -ಪೀಠದ ಅನುಯಾಯಿಗಳಾಗಿದ್ದರೂ ತದ್ವತ್ ಸ್ವತಂತ್ರ ಸಂಸ್ಥಾನಗಳಾದ ಶ್ರೀ ಸ್ವರ್ಣವಲ್ಲಿ ಪೀಠವೂ ಹಾಗೂ ನೆಲೆಮಾವು ಪೀಠವೂ ಈ ಸಮುದಾಯದ ನಡವಳಿಕೆಯ ಧರ್ಮ ಪೀಠಗಳಾಗಿ ಮುಂದುವರೆದುಕೊಂಡು ಬಂದಿದೆ. ಹೀಗಿರುವಾಗ ‘ಅಖಿಲ ಹವ್ಯಕ ಮಹಾ ಸಭೆ’ ಎಂಬ ಅಭಿಧಾನವನ್ನು ಹೊಂದಿದ ಒಂದು ಸಂಘಟನೆ ಅದರ ಚುನಾವಣೆ, ಅಲ್ಲಿನ ನಿರ್ದೇಶಕರುಗಳ ಆಯ್ಕೆ ಮತ್ತು ಅವರ ನಡಾವಳಿಗಳು ಕೇವಲ ಯಾವುದೋ ಒಂದು ಧರ್ಮ ಪೀಠಕ್ಕೋ, ಮಠಕ್ಕೋ ಅಧೀನವಾಗಬೇಕೆಂದೇನೂ ಇಲ್ಲ. ನಿಜ ಹೇಳಬೇಕೆಂದರೆ ಈ ಮಹಾಸಭೆಯ ಯಾವ ಆಶೋತ್ತರಗಳೂ ಧರ್ಮ ಪೀಠಗಳ ವ್ಯವಹಾರದಲ್ಲಿ ಸಂಬಂಧ ಪಟ್ಟಿದ್ದೇ ಆಗಿಲ್ಲ.. ಹಾಗೆ ಆಗಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಿಸಿದ ಧರ್ಮ ಪೀಠಗಳು ನೇರವಾಗಿ ಮಹಾ ಸಭೆಯ ರಾಜಕೀಯಕ್ಕೆ ಇಳಿಯಬೇಕಾಗಿಬರಬಹುದು…! ಅಷ್ಟಕ್ಕೂ ಮಹಾಸಭೆಯು ರಾಜಕೀಯ ಮೇಲಾಟದ ಸಂಘಟನೆಯಾಗಿರಬಾರದು. ಅದು ಸಮಾಜದ ಆಶೋತ್ತರಗಳಿಗೆ ಸ್ಪಂದಿಸುವ ಸಂಘಟನೆಯಾಗಬೇಕು.

ಹೀಗೆ 11 ಲಕ್ಷಕ್ಕೂ ಮೀರಿದ ಜನಸಂಖ್ಯೆಯನ್ನು ಹೊಂದಿದ ಒಮ್ದು ಸಮಾಜದ ಸಂಘಟನೆ ಕೇವಲ 17 ಸಾವಿರ ಸದಸ್ಯಬಲವನ್ನು ಹೊಂದಿದ್ದು ಅದರ ನಿರ್ದೇಶಕ ಮಂಡಳಿಯಲ್ಲಿನ 14 ಜನರ ಆಯ್ಕೆಗಾಗಿ ಕೇವಲ 10 ಸಾವಿರಕ್ಕಿಂತಲೂ ಕಡಿಮೆ ಸದಸ್ಯರು ಮತ ಚಲಾಯಿಸಿ ಅದರೊಳಗೆ ಆಯ್ಕೆಯಾಗಿ ಬಂದವರು ತೆಗೆದುಕೊಳ್ಳಬಹುದಾದ ನಿರ್ಧಾರಗಳು ಇಡೀ ಸಮುದಾಯದ ಮುಖವಾಣಿಯಾಗಬಲ್ಲುದು ಎಂಬ ಯಾವ ಆಸೆಯೂ ನನಗೆ ಕಾಣುವುದಿಲ್ಲ. ಅಂದರೆ ಸಮುದಾಯದ ಕೇವಲ …. 0.98%.

ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ಇಷ್ಟು ವರ್ಷಗಳ ಕಾಲ ಮಲಗಿದ್ದ ಮಹಾಸಭೆಯ ಮುಂದಾಳುಗಳು ಈ ವರ್ಷ ದಿಢೀರೆಂದು ಎದ್ದು ಕುಳಿತದ್ದು ನಗೆಪಾಟಲಿನ ವಿಚಾರವೇ ಸರಿ. ಅದಕ್ಕೊಂದು ಕಾರಣವಾಗಿ ಹವ್ಯಕ ಸಮಾಜದೊಳಗೆ ಎದ್ದ ಧರ್ಮ ಪೀಠದ ವಿಪರ್ಯಾಸಗಳು.. ಅದನ್ನಿಟ್ಟುಕೊಂಡು ಮಹಾಸಭೆಯೊಳಗೆ ಧರ್ಮ ಪೀಠದ ವ್ಯವಹಾರವನ್ನು ತಂದು ನಿಲ್ಲಿಸಿಕೊಂಡಿದ್ದರ ಪರಿಣಾಮವಾಗಿ ಸಮುದಾಯದ ಎರಡು ಬಣಗಳ ಒಳ ವೈಮನಸ್ಯಗಳು ಚುನಾವಣೆ ಮತ್ತು ನಿರ್ದೇಶಕರ ಆಕೆಯಲ್ಲಿ ಬಹುದೊಡ್ಡ ಪಾತ್ರ ವಹಿಸಿತು. ಇದರಲ್ಲಿ ರಾಮಚಂದ್ರಾಪುರ ಮಠ ಹಾಗೂ ಮಠಾಧಿಪತಿಯ ಪರವಾಗಿ ನಿಂತ ಜನರ ಬಣ ಹಾಗೂ ವಿರುದ್ಧವಾದ ಮನೋಸ್ಥಿತಿಯನ್ನು ಹೊಂದಿದ ಬಣ ಎಂಬ ಎರಡು ಬಣಗಳಾದವು.. ಇದಲ್ಲದೇ ಈ ಎರಡೂ ಬಣಗಳ ಒಳಲಾಭವನ್ನು ಗಳಿಸಿಕೊಳ್ಳಬಹುದೆಂಬ ಮನಸ್ಥಿತಿಯ ಮೂರನೇಯ ಬಣವೂ ಕಂಡುಬಂತು.. ಈ ಮೂರೂ ಬಣಗಳಲ್ಲಿ ಮುಖ್ಯವಾಗಿ ತಾವು ಆಯ್ಕೆಗೊಳ್ಳುವ ಮಹಾಸಭೆಯ ನೀತಿ ನಿಲುವುಗಳಿಗಿಂತ ಹೆಚ್ಚಾಗಿ, ಹವ್ಯಕ ಸಮುದಾಯದ ಪುರೋಭಿವೃದ್ಧಿಯ ಕನಸುಗಳಿಗಿಂತ ಹೆಚ್ಚಾಗಿ ಧರ್ಮ ಪೀಠದ ಅಳಿವು ಉಳಿವಿನ ಪ್ರಶ್ನೆಯನ್ನೇ ಮುಂದಿಟ್ಟುಕೊಂಡಿರುವುದು ನಿಚ್ಚಳವಾಗಿದೆ. ನಿಜ ಹೇಳಬೇಕೆಂದರೆ ಈ ಧರ್ಮ ಪೀಠದ ವ್ಯವಹಾರವು ಇಂದು ನ್ಯಾಯಾಲಯದ ಮೆಟ್ಟಿಲಲ್ಲಿರುವುದರಿಂದ ಯಾವುದೋ ಮಹಾಸಭೆಯ ನೀತಿ ನಿಲುವುಗಳಿಂದ ಅದರ ಮೇಲೆ ಏನೂ ಪರಿಣಾಮ ಬೀರಲಾರದು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೂ ಕೇವಲ ಪ್ರತಿಷ್ಟೆಯ ಪ್ರಶ್ನೆಯಾಗಿ ಎರಡು ಅಥವಾ ಮೂರೂ ಬಣಗಳೂ ಇದನ್ನು ತೆಗೆದುಕೊಂಡಿರುವುದು ಹಾಸ್ಯಾಸ್ಪದ..!

ಅಂತೂ ಒಂದು ಸಮುದಾಯದ ಮಹಾಸಭೆ ಎಂದು ಕರೆಸಿಕೊಂಡು ರಾಜಧಾನಿ ಪ್ರದೇಶದಲ್ಲಿ ಸುಮಾರು 30-40 ಕೋಟಿ ರೂಪಾಯಿಗಳ ಚರ – ಸ್ಥಿರ ಆಸ್ತಿಗಳನ್ನು ಹೊಂದಿರುವ ಸಂಘಟನೆಯೊಂದರ ಸ್ವಾಮಿತ್ವವನ್ನು ಸಂಪಾದಿಸುವಲ್ಲಿ ಒಂದು ಬಣ ಶಕ್ತವಾಯಿತು. ಮುಂದೇನು…?

ಎಲ್ಲವೂ ಇದರೊಂದಿಗೆ ಮುಕ್ತಾಯವಾಗಿಬಿಡುತ್ತದೆಯೇ…?

ಖಂಡಿತಾ ಇಲ್ಲ… ಹೊಸ ಹೊಸ ಸಮಸ್ಯೆಗಳು ಅಂಟಿಕೊಳ್ಳತೊಡಗುತ್ತವೆ..!! ತೊಳೆದಷ್ಟೂ ಕೊಳೆಗಳು ಕಾಣಸಿಗುತ್ತವೆ…!!

-ಕಡತೋಕೆ ರಾಂಭಟ್ಟ ಅಗ್ನಿಹೋತ್ರಿ

source: https://www.facebook.com/kadatokerambhatta/posts/858425027613335

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s