ಜಗದ್ಗುರು ತೊನೆಯಪ್ಪ ಮಹಾಸಂಸ್ಥಾನ-’ಕಚ್ಚೆಶ್ರೀ’ ಮತ್ತು ’ಕಚ್ಚೆ ಸುಗಂಧ’ ಪ್ರಶಸ್ತಿ ಪ್ರದಾನ

ಜಗದ್ಗುರು ತೊನೆಯಪ್ಪ ಮಹಾಸಂಸ್ಥಾನ-’ಕಚ್ಚೆಶ್ರೀ’ ಮತ್ತು ’ಕಚ್ಚೆ ಸುಗಂಧ’ ಪ್ರಶಸ್ತಿ ಪ್ರದಾನ
[ಶಿವರಾತ್ರಿ ಸ್ಪೆಶಲ್]

ಅದಾಗಿ ಕಚ್ಚೆಶ್ರೀಸವಾರಿಯು ಶಿಖರನಗರದಲ್ಲಿ ನಗರಬಂಧನದಲ್ಲಿರುತ್ತ ಅನಿವಾರ್ಯವಾಗಿ ವರ್ಷಾಧಿಕ ಸಮಯದಿಂದ ಲಂಪಟರ ಸಂಘದ ಕ್ಷೇಮಾಭ್ಯುದಯಗಳನ್ನು ಸಂಪ್ರಾರ್ಥಿಸುತ್ತ ಚಿಂತೆಯಿಂದಲೇ ಮೊಕ್ಕಾಂ ಮಾಡಿದೆ. ಹಳದೀ ಭಕ್ತರೆಲ್ಲ ಕಚ್ಚೆಶ್ರೀಗಳ ವೀರ್ಯಕರಗಳಿಂದ ಬಣ್ಣದ ಅಕ್ಕಿಯನ್ನು ಕೆಜಿ ಲೆಕ್ಕದಲ್ಲಿ ಅಸಹ್ಯ ಉಂಟಾಗುವಷ್ಟು ಸಲ ಪಡೆದುಕೊಂಡು ಪುನೀತರಾಗಿದ್ದಾರೆ. ಈಗ ತೋರಿದಲು ನಮ್ಮಲ್ಲಿ ಬಾಕಿ ಉಳಿದಿರುವ ಕೆಲವು ವೀಡಿಯೋ ತುಣುಕುಗಳನ್ನು ತೆಗೆದು ಅಲಲ್ಲಿ ಅಂಟಿಸುತ್ತಿದ್ದೇವೆ. ಪತ್ರೆಪೂಜೆಯಲ್ಲಿ ಜಗದ್ಗುರು ತೊನೆಯಪ್ಪ ಕಚ್ಚೆಶ್ರೀಗಳು ಪೂಜೆಗೆ ಕೂತಾಗ ಹೇಗೆ ತೊನೆಯಬೇಕು ಎನ್ನುವುದನ್ನು ಉಳಿದ ಸನ್ಯಾಸಿಗಳಿಗೆ ತೋರಿಸಿಕೊಟ್ಟಿದ್ದಾರೆ.

ಲೋಕೋಪಕಾರಾರ್ಥವಾಗಿ ಕಚ್ಚೆಶ್ರೀಗಳು ನಡೆಸಿದ ಗರ್ಭಾದಾನ ಕಾರ್ಯಕ್ರಮಗಳು ಈ ಹಿಂದೆ ಸಾಂಗವಾಗಿ ನಡೆದು ಮಕ್ಕಳು ಮುಂಜಿ ಪೂರೈಸಿದ್ದಾರೆ. ಅನಧಿಕೃತ ಮಕ್ಕಳ ಅನಧಿಕೃತ ಅಜ್ಜ ಸ್ತ್ರೀನಿವಾಸನಿಗೂ ಸಹ ಮಗ ಕಚ್ಚೆಶ್ರೀಯಾಗಿ ಕಚ್ಚೆಹರುಕ ಪರಂಪರೆಯನ್ನು ಮುಂದುವರಿಸಿದ್ದಕ್ಕೆ ಸಂಪೂರ್ಣ ತೃಪ್ತಿಯಾಗಿರೆ.

ವ್ಯಕ್ತಿ ಜೀವನದಲ್ಲಿ ಸಾಮಾನ್ಯ ಅಧಿಕಾರಿಯಾಗಿ ಎಷ್ಟನ್ನು ಆರ್ಜಿಸಬಹುದು? ಎಷ್ಟನ್ನು ಗಳಿಸಬಹುದು? ಅದಕ್ಕಿಂತ ಮೂರುಪಟ್ಟು ಹೆಚ್ಚಿಗೆ ಭಕ್ಷೀಸು ನೀಡಿಬಿಟ್ಟರೆ ಆ ವ್ಯಕ್ತಿ ನಮ್ಮವನೇ ಆಗುವನು ಎಂಬ ಪರಮಸತ್ಯವನ್ನು ಮನಗಂಡ ಕಚ್ಚೆಶ್ರೀಗಳು ತಮಗೆ ಬೇಕಾದ ಅಧಿಕಾರಿಗಳು, ನ್ಯಾಯಾಧಿಕಾರಿಗಳು, ನ್ಯಾಯಾಧೀಶರು ಎಲ್ಲರನ್ನೂ ಪರಮನಿಷ್ಣಾತರಾಗಿ ಸಂತುಷ್ಟಗೊಳಿಸಿ ಇಲ್ಲಿಯವರೆಗೆ ಫಲಶ್ರುತಿಯನ್ನು ಪಡೆದುಕೊಂಡಿದ್ದಾರೆ. ಭಕ್ಷೀಸು ಪಡೆದು ಋಣಗ್ರಸ್ತರಾದವರು ಆರೋಪಿ ಕಚ್ಚೆಶ್ರೀಗಳ ಪರವಾಗಿ ತಾವೇ ವಾದಮಂದಿಸುವ ರೀತಿಯಲ್ಲಿ ವಿಚಿತ್ರಗತಿಯಲ್ಲಿ ನಡೆದುಕೊಂಡು ಕಚ್ಚೆಶ್ರೀಗಳನ್ನು ಸದ್ಯಕ್ಕೆ ಕಾಪಾಡಿದ್ದಾರೆ.

ಈಗ ಕಚ್ಚೆಶ್ರೀಗಳು ಎಲ್ಲೆಲ್ಲಿ ಯಾರ್‍ಯಾರಿಗೆ ಯಾವ ಯಾವ ರೀತಿಯ ಪ್ರಶಸ್ತಿಗಳನ್ನು ಕೊಟ್ಟು ಮಾಧ್ಯಮಗಳಲ್ಲಿ ಸುದ್ದಿಮಾಡಬೇಕೆಂದು ಹೊಂಚುಹಾಕುತ್ತಿದ್ದಾರೆ. ಯಾರಾದರೂ ಏನೋ ಭಿನ್ನವಾಗಿ ಸಾಧನೆ ಮಾಡಿದ್ದಾರೆ ಎಂಬ ಸುದ್ದಿ ಹಳದೀ ದೂತರ ಮೂಲಕ ’ಮಹಾಸಂಸ್ಥಾನ’ದ ಕಿವಿಗೆ ಬಿದ್ದ ಮರುಕ್ಷಣವೇ ಕುಳ್ಳಯ್ಯನವರೊಡನೆ ಪರ್ಯಾಲೋಚಿಸಿ ಪ್ರಶಸ್ತಿ ವಿತರಣಾ ಸಮಾರಂಭವನ್ನು ಆಯೋಜಿಸಲಾಗುತ್ತದೆ.

ಮುಂಬರುವ ದಿನಗಳಲ್ಲಿ ಜಗದ್ಗುರು ತೊನೆಯಪ್ಪ ಕಚ್ಚೆಶ್ರೀಗಳು ತಮ್ಮ ಕಚ್ಚೆಹರುಕುತನದ ಪಂಚದಶ ವರ್ಷಗಳನ್ನು ಪೂರೈಸಿದ ನೆನಪಿಗಾಗಿ ’ಕಚ್ಚೆಶ್ರೀ’ ಮತ್ತು ’ಕಚ್ಚೆ ಸುಗಂಧ’ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿದ್ದಾರೆ. ಇಲ್ಲಿಯವರೆಗೆ ತಮ್ಮ ಪರಮಭಕ್ತರಾಗಿ ಕಚ್ಚೆಹರುಕುತನಕ್ಕೆ ಸರ್ವಸಹಕಾರ ನೀಡಿದ ಲಂಪಟರಲ್ಲಿಯೇ ತಮಗೆ ಬೇಕಾದ ಕೆಲವರನ್ನು ಗುರುತಿಸಿ ಪ್ರಶಸ್ತಿಗಳನ್ನು ವಿತರಿಸುತ್ತಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಈಗಾಗಲೇ ’ಕಚ್ಚೆಯ ಪರಿಮಳ’ ಜಗದ್ವ್ಯಾಪಿಯಾಗಿದ್ದರೂ ಇನ್ನೂ ಅದನ್ನು ಅಲ್ಲಗಳೆಯುವತ್ತ ಮುಂದಾಗುತ್ತ ಕೆಲವು ಟಿವಿ ಚಾನಲ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ-ಕಳ್ಳಯ್ಯ-ಕುಳ್ಲಯ್ಯ. ಭಕಪಕ್ಷಿ ನೀರಿನಲ್ಲಿ ಒಂಟಿಕಾಲಲ್ಲಿ ನಿಂತು ’ಮೀನು ತಿಂದರೆ ಮಾಪಾಪ ಕಾಶೀಗೋದ್ರೆ ಮಾಪುಣ್ಯ” ಎಂದು ಪಠಿಸಿತ್ತಂತೆ, ಅದರಂತೆ ಇಂತಹ ಟಿವಿ ಚಾನೆಲ್ ಗಳಲ್ಲಿ ನಮ್ಮ ’ಧರ್ಮ ಮಾರ್ಗ’ದ ಪ್ರವಚನಗಳು ನಡೆಯುತ್ತಲೇ ಇರುತ್ತವೆ!

ಮತಿಗೆಟ್ಟ ಸಮಾಜದಲ್ಲಿ ಎದುರುವಾದಿಗಳಾಗಿ ಸಡ್ಡುಹೊಡೆದು ಕೆನ್ನೆಗೆ ಬಿಗಿದು ಪೀಠದಿಂದ ಎಳೆದುಹಾಕುವ ಎದೆಗಾರಿಕೆ ಯಾರಿಗೂ ಇಲ್ಲದ್ದನ್ನು ಅರಿತುಕೊಂಡ ಕಚ್ಚೆಶ್ರೀಗಳು, ಗುರಿಕಾರರನ್ನು ಬೆದರಿಸಿ ಅಟ್ಟಿ ಇನ್ನೂ ಹಳ್ಳಿಗಳಿಂದ ಕಾಣಿಕೆ ಪೀಕುತ್ತಲೇ ಇದ್ದಾರೆ. ದುಬಾರಿ ದಿನಮಾನದಲ್ಲಿ ದುಡಿಮೆ ಸಾಕಾಗದೆ ಟೆನ್ಶನ್ ಮಾಡಿಕೊಂಡು ಮಕ್ಕಳನ್ನು ಮಾಡದ ಹಲವು ಜನರಿಗೆ ಸಂತಾನಾನುಗ್ರಹ ನೀಡುವ ಮೂಲಕ ಅಂಗನವಾಡಿ ತೆರೆಯುವಷ್ಟು ಮಕ್ಕಳನ್ನು ಮಾಡಿದ್ದರೂ, ಪ್ಯಾಟರ್ನಿಟಿ ಚೆಕ್ ನಡೆಸಿಬಿಟ್ಟರೆ ಕಷ್ಟ ಎಂಬ ಭಯದಿಂದ ಇಲ್ಲಿಯವರೆಗೆ ಅಂಗನವಾಡಿಯನ್ನು ತೆರೆದಿಲ್ಲ. ಆದರೂ ಕಚ್ಚೆಶ್ರೀ ಮಠ ಕಿಶೋರ ವಾಟಿಕೆಯಾಗಿ ಅವರನ್ನೆಲ್ಲ ರಂಜಿಸಿದ್ದು ನಿಮಗೆಲ್ಲ ತಿಳಿದಿರಬಹುದಲ್ಲವೇ?

’ಎತ್ತು ಸತ್ತರೆ ಎಮ್ಮೆಗೇಕೆ ಬರೆ?’ ಎಂದ ಜಗದ್ಗುರು ತೊನೆಯಪ್ಪನವರು ಅಂತಹ ಘಟನೆಗಳಿಗೂ ತಮಗೂ ಯಾವುದೇ ಸಂಬಂಧವೇ ಇಲ್ಲ ಎಂದು ಅನುಚರ ಕಚ್ಚೆಹರುಕರ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಎಂದಿನಂತೆ ಮಠದ ಏಸಿ ರೂಮಿನಲ್ಲಿ ಲ್ಯಾಪ್ ಟಾಪ್ ನಲ್ಲಿ ಲೀಲಾಜಾಲವಾಗಿ ವಿಕ್ರೀಡಿಸುತ್ತ, ಸಾಮಾಜಿಕ ಜಾಲತಾಣಗಳಲ್ಲಿ ಬೇನಾಮಿ ಅಕೌಂಟುಗಳ ಮೂಲಕ ತಮಗೆ ಬೇಕಾದ ಎಲ್ಲಾ ವ್ಯವಹಾರಗಳಲ್ಲೂ ನಿಮಗ್ನರಾಗಿ ಸಮಾಜೋದ್ಧಾರ ಕೈಂಕರ್ಯ ನಡೆಸುತ್ತಿದ್ದಾರೆ.

ಕಚ್ಚೆಶ್ರೀಗಳಿಂದ ವೀರ್ಯಕರಾರ್ಚಿತವಾಗುವ ಪರಿಸ್ಥಿತಿ ಬಂದದ್ದರಿಂದ, ಬಿಂಬಗಳಲ್ಲಿರುವ ದೇವರೆಲ್ಲ ಓಡಿಹೋಗಿ ಸ್ವಸ್ಥಾನಗಳನ್ನು ಸೇರಿಕೊಂಡಿರೋದರಿಂದ, ಮನಸ್ಸಿಲ್ಲದಿದ್ದರೂ ಭಕ್ತರ ತೋರಿಕೆಗಾಗಿ ಢಾಂಬಿಕ ಪೂಜೆಗಳನ್ನು ಅನುಕೂಲವಾದ ಸಮಯಗಳಲ್ಲಿ ನಡೆಸುತ್ತ “ಸಮಾಜದ ಸುಕ್ಷೇಮಕ್ಕಾಗಿ ಸಂಪ್ರಾರ್ಥಿಸುತ್ತಿದ್ದೇವೆ” ಎಂಬ ಸ್ಲೋಗನ್ ಕೂಗುತ್ತಿರುತ್ತಾರೆ.

ಕಚ್ಚೆಶ್ರೀ ಮಠದ ಹಿರಿಯ ’ವಿದ್ವಾಂಸ’, ’ಗುರುಸೇವಾ ದುಶ್ಯಾಸನ’, ಮಹಾಮಂತ್ರಿ ಕುಲಪತಿ ಬಾವಯ್ಯನವರು ಯಾವ ದಿನ ಯಾರನ್ನು ಹೇಗೆ ಹಿಡಿಯಬೇಕು ಮತ್ತು ಯಾರಿಗೆ ಎಷ್ಟೆಷ್ಟು ಕೊಟ್ಟರೆ ತಾವು ಅಂದರೆ ಕಳ್ಳಯ್ಯ-ಕುಳ್ಳಯ್ಯ ಸೇಫಾಗಿರಬಹುದು ಎಂಬ ಯೋಜನಾವರದಿಗಳನ್ನು ಸಿದ್ಧಪಡಿಸುತ್ತ, ತತ್ಸಂಬಂಧವಾಗಿ ಮುಂದಿನ ಖರ್ಚುಗಳಿಗೆ ಗುರಿಕಾರರನ್ನು ಅಟ್ಟುತ್ತ, ಹಣ ಕಲೆಹಾಕಲು ಪ್ರಯತ್ನಿಸುತ್ತಲೇ ಇದ್ದಾರೆ. ’ಹಣ ಕಂಡರೆ ಹೆಣವೂ ಬಾಯ್ಬಿಡುತ್ತದೆ’ ಎಂಬ ಗಾದೆಯನ್ನು ಸಕ್ರಿಯವಾಗಿ ನೋಡಿ ತಿಳಿದ ಅನುಭವ ಅವರದ್ದು.

ಸಮಷ್ಟಿ ಸಮಾಜದ ಕೆಲವು ಲೌಕಿಕ ಸಾಧಕರಿಗೆ ಪ್ರಶಸ್ತಿಗಳನ್ನು ಕೊಡುವ ಮೂಲಕ ಅವರನ್ನೆಲ್ಲ ತಮ್ಮ ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಯೋಚನೆ ಮತ್ತು ಪರಿಕಲ್ಪನೆ ಇದೇ ಕುಳ್ಳ ಬಾವಯ್ಯನದ್ದು. ಪ್ರಶಸ್ತಿಪಡೆದು ತಮ್ಮ ಪರವಾಗಿ ಹಲ್ಲುಗಿಂಜದ ವ್ಯಕ್ತಿಗಳಾರು? ಅಲ್ಲಿಯೂ ಮತ್ತದೇ ಋಣದ ಬಾಧೆ! ರಾಜಪ್ರಭುತ್ವದಲ್ಲಿ ಸುತ್ತಲ ಪ್ರಬಲ ಸಂಸ್ಥಾನಗಳ/ರಾಜ್ಯಗಳ ರಾಜಕುಮಾರಿಯರನ್ನು ಮದುವೆಯಾಗುವ ಮೂಲಕ ಸಂಬಂಧ ಬೆಸೆದುಕೊಂಡು, ಅವರೆಲ್ಲ ತಮ್ಮ ರಾಜ್ಯದ ಪರವಾಗಿರುವಂತೆ ನೋಡಿಕೊಳ್ಳುತ್ತಿದ್ದರಂತೆ. ಕಚ್ಚೆಶ್ರೀ ಮಹಾಸಂಸ್ಥಾನದಲ್ಲಿ ’ಸನ್ಯಾಸಿ’ಗಳು ನೇರವಾಗಿ ಮದುವೆಯಾಗುವ ಸಂಪ್ರದಾಯಕ್ಕೆ ಅನುಮತಿ ಇಲ್ಲದ್ದರಿಂದ, ತಮಗೆ ಬೇಕಾದವರಿಗೆಲ್ಲ ವಿವಿಧ ಪ್ರಶಸ್ತಿಗಳನ್ನು ನೀಡುವ ಮೂಲಕ ಸಂಬಂಧವನ್ನು ಏರ್ಪಡಿಸಿಕೊಂಡಿದ್ದಾರೆ.

ಜ್ಯೋತಿಷಿ ತನ್ನೆದುರಲ್ಲಿ ಸಾವಿರದ ನೋಟುಗಳ ಕಂತೆಯನ್ನೆ ಇಟ್ಟುಕೊಂಡು ಕೂತಿರುತ್ತಾನೆ. ಪುರೋಹಿತ ಆರತಿ ತಟ್ಟೆಯಲ್ಲಿ ಆದಷ್ಟೂ ದೊಡ್ಡ ನೋಟುಗಳನ್ನೆ ಇಟ್ಟುಕೊಳ್ಳುತ್ತಾನೆ. ಮುಂದೆ ಬರುವ ’ಗಿರಾಕಿ’ಗಳಿಗೆ ಅವು ಸಾಂಕೇತಿಕ ಪರಿಣಾಮಗಳನ್ನು ಉಂಟುಮಾಡುತ್ತವೆ. ಇದನ್ನೆಲ್ಲ ಚಾಚೂ ತಪ್ಪದೆ ಗಮನಿಸಿದ ಕುಲಪತಿ ಬಾವಯ್ಯನವರಿಗೆ ಮಠದವರಾಗಿ ತಾವೂ ಏನಾದರೂ ಮಾಡಬೇಕಲ್ಲ ಎನಿಸಿದಾಗ ಧನಕನಕಗಳ ಅರ್ಪಣೆಯ ನೆನೆಪಾಯ್ತು. ತಮಗೆ ಬೇಕಾದ ಒಂದಿಬ್ಬರನ್ನು ಸಭೆಯಲ್ಲಿ ಮುಂದೆ ನಿಲ್ಲಿಸಿ, ತಾವೇ ಮುಂಚಿತವಾಗಿ ಅವರಿಗೆ ಕೊಟ್ಟಿಟ್ಟುಕೊಂಡ ಬಂಗಾರದ ವಸ್ತುಗಳನ್ನು ಮಠಕ್ಕೆ ಅರ್ಪಿಸುವ ನಾಟಕವಾಡುವಂತೆ ಮಾಡಲಾಯ್ತು; ಆ ದೃಶ್ಯಗಳನ್ನು ಕಣ್ಣಾರೆ ಕಂಡ ಅನೇಕ ಹೆಂಗಸರು ತಮ್ಮ ಓಲೆ-ನತ್ತು-ಸರಗಳನ್ನೆಲ್ಲ ತೆಗೆದು ಅರ್ಪಿಸಿದರು. ನಗಧರರಾದ ಕಳ್ಳಯ್ಯ-ಕುಳ್ಳಯ್ಯ ಅವುಗಳನ್ನೆಲ್ಲ ತಮ್ಮ ಖಾಸಗಿ ಅಕೌಂಟಿಗೆ ಜಮಾ ಮಾಡಿಕೊಂಡರು! ಹರಹರ ಮಹಾದೇವ!!

ಮಠದ ಆದಾಯದ ಮುಂದೆ ಕಲಾವಿದರು ಬಯಸುವ ಸಂಭಾವನೆ ಯಾವ ಲೆಕ್ಕ? ಒಂದಷ್ಟು ಪುಡಿಗಾಸು ಬಿಸಾಕಿದರೆ ಅವರನ್ನೆಲ್ಲ ಕರೆಸಬಹುದು ಎಂಬುದನ್ನು ಮನಗಂಡ ಬಾವಯ್ಯನವರು ತಾಳ-ವಾದ್ಯ-ನರ್ತನ-ಗಾಯನ-ರೂಪಕ ಮೊದಲಾದ ಆಯಾಮಗಳ ಮೂಲಕ ಕತೆಗಳನ್ನು ಮಂಡಿಸಿದರೆ ಜನ ಹುಚ್ಚೆದ್ದು ಬರುತ್ತಾರೆ, ಕಾಸುಮಾಡಬಹುದು ಎಂದು ಯೋಚಿಸಿದರು. ಅದರ ಫಲವಾಗಿ ನಾಲ್ಕಾರು ವರ್ಷಗಳ ಹರವಿನಲ್ಲಿ ಕತೆ ಹೇಳುವ ಟೂರಿಂಗ್ ಟಾಕೀಸ್ ಚಾಲ್ತಿಯಲ್ಲಿತ್ತು.

ದೋರೆಯಲ್ಲಿ ಕತೆ ನಡೆಸಿದ ಮರುದಿನ ಅವಧೂತರಿಗೆ ಈ ಕಚ್ಚೆಶ್ರೀ ಮಹಾಸಂಸ್ಥಾನದ ಟೂರಿಂಗ್ ಟಾಕೀಸು ನೀಡಿದ ಬಿಲ್ಲು ಬರೋಬ್ಬರಿ ಮೂವತ್ತೆರಡು ಲಕ್ಷ. ಅವಧೂತರಾಗಿದ್ದರಿಂದ ಅದನ್ನು ಸಹಿಸಿಕೊಂಡರು! ಇಲ್ಲದಿದ್ದರೆ ಸುಮಾರಿನ ಸನ್ಯಾಸಿಗಳಾದರೆ ಅದನ್ನು ಪಾವತಿಸುವುದು ಕಷ್ಟ. ಅಂದಹಾಗೆ ಮೂವತ್ತೆರಡು ಲಕ್ಷದ ಬಿಲ್ಲಿನಲ್ಲಿ ತೋರಿಸಿದ ಲೆಕ್ಕದ ಪ್ರಕಾರ ಅಂತರ್ಜಾಲದ ವೆಚ್ಚ ಬರೇ ಹದಿನೈದು ಲಕ್ಷ!

ಮುಪ್ಪಡಿಡರಿದ ಅವಧೂತರ ತೊಡೆಯ ಮೇಲೆ ಯಾವ ಸನ್ಯಾಸಿಯೂ ಸಾಮಾನ್ಯವಾಗಿ ಕಾಲಿರಿಸಿ ಕಾಲೊತ್ತಿಸಿಕೊಳ್ಳುವ ಮನಸ್ಸು ಮಾಡೋದಿಲ್ಲ; ಜಗದ್ಗುರು ತೊನೆಯಪ್ಪನವರು ಅದನ್ನು ಮಾಡಿ ತೋರಿಸಿ ’ಆದರ್ಶಪ್ರಾಯ’ರಾಗಿದ್ದಾರೆ!

ಇಂಚಿಂಚಿನಲ್ಲೂ ವೈತರಣಿಯ ’ದಿವ್ಯ ಸುಗಂಧ’ವನ್ನೇ ಹೊರಸೂಸುವ ಕಚ್ಚೆಶ್ರೀ ಮಹಾಸಂಸ್ಥಾನದ ವ್ಯವಹಾರಗಳಲ್ಲಿ ಎಲ್ಲವೂ ಆದರ್ಶಮಯವೇ! ಅಗೆದಷ್ಟೂ ಆಳ, ಮೊಗೆದಷ್ಟೂ ಖರ್ಚಾಗದ ಬಂಡವಾಳ! ಇಂತಹ ಜಗದ್ಗುರುವನ್ನು ಪಡೆದ ಮತಿಗೆಟ್ಟ ಸಮಾಜವೇ ಪರಮ ಧನ್ಯ! ಹಾವಾಡಿಗ ಮಹಾಸಂಸ್ಥಾನದ ಜಗದ್ಗುರು ತೊನೆಯಪ್ಪ ಕಚ್ಚೆಶ್ರೀಗಳು ಈ ಸಮಾಜಕ್ಕೆ ಮಹಾಮಾನ್ಯ!!!

Thumari Ramachandra

Source: https://www.facebook.com/groups/1499395003680065/permalink/1727037820915781/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s