ಆತ್ಮೀಯ ಗೋಕರ್ಣ ಅಭಿಮಾನಿ ಹೋರಾಟಗಾರರಲ್ಲಿ –

ಆತ್ಮೀಯ ಗೋಕರ್ಣ ಅಭಿಮಾನಿ ಹೋರಾಟಗಾರರಲ್ಲಿ –

ಕಾಕ:!!!ಕಾಕ:!!!! ಪಿಕ:!!! ಪಿಕ:!!!!
ಕಾಗೆ, ಯಾವಾಲೂ ಕಾಗೆಯೇ!! ಕೋಗಿಲೆ ಯಾವಾಗಲೂ ಕೋಗಿಲೆಯೇ!!! ಕಾಗೆ ಯಾವತ್ತೂ ಕೋಗಿಲೆಯಾಗಲು ಸಾಧ್ಯವಿಲ್ಲ!!!
ಗೋಕರ್ಣದ ನಮ್ಮೂರಿನ ಪಂಡಿತರು, ಜಾತಿ ವಾದಿಗಳು, ಸಮಯ ಸಾಧಕರು ಎಷ್ಟೇ ಕೂಗಲಿ ಅದು ಕಾಗೆ!!!! ಕೋಗಿಲೆಯಲ್ಲ!!!ಷಡ್ಯಂತ್ರದ ಕಾಗೆ!!!!

ಹಿಂದೆ ಈ ಕಾಗೆಯನ್ನ ನಾವುಗಳು ಯಾವತ್ತೂ ನಂಬಲಿಲ್ಲ, ಈಗಲೂ ನಂಬುವದಿಲ್ಲ, ಮುಂದೆಯೂ ನಂಬುವದಿಲ್ಲ. ಇದು ನಮ್ಮೂರ ಅಭಿಮಾನಿಗಳ ಸ್ಪಷ್ಟ. ನಿಲುವು.

ಹಿಂದೆ ಈ ಷಡ್ಯಂತ್ರ ಕಾಗೆಯ, ಯಂತ್ರ ,ತಂತ್ರ, ಮಂತ್ರ, ಕುತಂತ್ರದ ಬಗ್ಗೆ ಜನರಲ್ಲಿ ತಿಳಿ ಹೇಳಲು ಹೋದಾಗ ಜನ ನಮ್ಮ ಮೇಲೆ ದಂಡೆತ್ತಿ ಬಂದು ಎಗರಾಡುತ್ತಿದ್ದವರು ಈಗ ಅವರಿಗೆ ಈ ಕಾಗೆಯ ಬಣ್ಣ ಗೊತ್ತಾಗಿದೆ. ಕಾ!!ಕಾ!! ಎಂದು ಕೂಗಿದೊಡನೆಯೇ ಸಹಸ್ರ,ಸಹಸ್ರ ಸಂಖ್ಯೆಯಲ್ಲಿ ಬಂದು ನಿಲ್ಲುತ್ತಿದ್ದ ಅಭಿಮಾನಿ ಬಾಂಧವರು, ಈಗ ಕರಗಿ ಕಾಣೆಯಾಗಿದ್ದಾರೆ!!! ಇತರೆ ಸಬಾಂಧವರೂ ಹಣ ನೀಡಿದರೂ !!!: ಬರದ ಸ್ಥಿತಿ ತಲುಪಿದ್ದಾರೆ, ಮಠಕ್ಕೆ ಬರುವ ಆದಾಯ ಕಡಿಮೆಯಾಗಿ ಕೂಡಿಟ್ಟ ಚಿನ್ನವನ್ನ ಕರಗಿಸಿ ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ, ಕಾಲದ ಮಹಿಮೆ!!!

ಪುರ ಪ್ರವೇಶದ ವೈಭವದಿಂದ, ಪರಪ್ಪನ ಅಗ್ರಹಾರ ಪ್ರವೇಶಕ್ಕೆ ವೈಭವದ!!! ಸಿದ್ದತೆಯಾಗುತ್ತಿದೆ!!!
ನಮ್ಮೂರಿನ ಜಾತಿವಾದಿಗಳು, ಸಮಯ ಸಾಧಕರು!!! ಅನುಕೂಲವಿದ್ದಲ್ಲಿ ಬಾಲ ಅಲ್ಲಾಡಿಸುವ ಪಂಡಿತರು ಸತ್ಯ ಗೊತ್ತಿದ್ದರೂ ಒಲ್ಲದ ಮನಸ್ಸಿನಿಂದ ಕಾಗೆಯಲ್ಲ!!! ಅದು ಕೋಗಿಲೆ ಎಂದು ಕ್ಷೀಣ ಧ್ವನಿಯಲ್ಲಿ ಅರಚುತ್ತಿದ್ದಾರೆ!!!”

ಪ್ರಸ್ತುತ,ನಾವ್ಯಾರೂ ಮಠದ ವಿರೋಧಿಗಳಲ್ಲ, ಈ ಹಿಂದೆ ಗೋಕರ್ಣದ ಸಂಬಂಧ ಕಡಿದುಕೊಂಡಿದ್ದಾಗ, ಪುನ: ಅತಿ ಆತ್ಮೀಯತೆಯಿಂದ ಸ್ವಾಗತಿಸಿ ಬರಮಾಡಿಕೊಂಡವರೇ ಈ ವಿರೋಧಿಗಳು, ಹಾಗೆ ಬಂದವರು ಇಲ್ಲಿನ ದುಸ್ತಿತಿಯನ್ನ ಸರಿಮಾಡುವ ಬದಲು, ತಮ್ಮ ನರಿ ಬುದ್ದಿ ತೋರಿಸಿ,ಇಲ್ಲಿನ ಜಾತಿವಾದಿಗಳ, ಹಾಗೂ ಎಂಜಲು ಕಾಸಿಗಾಗಿ ಬಾಲ ಅಲ್ಲಾಡಿಸುವ ಪಂಡಿತರುಗಳ ದೌರ್ಬಲ್ಯ ಗಳನ್ನು ಬಳಸಿಕೊಂಡು, ಅಕ್ರಮವಾಗಿ ಹಿಂಬಾಗಿಲಿನಿಂದ ಕಳ್ಳರಂತೆ ದೇವಾಲಯವನ್ನ ಪ್ರವೇಶಿಸಿ
ಲೂಟಿ ಮಾಡಿದರು.

ಆಗಿನ ಗೋಕರ್ಣ ದೇವಾಲಯದ ದುಸ್ಥಿತಿಯ ಬಗ್ಗೆ ಬೇಸರವಿದ್ದ ನಮಗೆ ಈ ಅಕ್ರಮ ಪ್ರವೇಶದಿಂದ ಬಹಳ ಆಘಾತವಾಯಿತು, ಶ್ರೀ ಮಠಕ್ಕೆ , ಗೋಕರ್ಣದ ಅಭಿವೃದ್ಧಿಯ ಪ್ರಾಮಾಣಿಕ ಕಳಕಳಿಯಿದ್ದಿದ್ದರೆ ಇಲ್ಲಿ ಯಾರೂ ಮಠದ ಆಡಳಿತಕ್ಕೆ ಅಡ್ಡ ಬರುತ್ತಿರಲಿಲ್ಲ. ಗೋಕರ್ಣ ಪ್ರವೇಶದ ಮಠದ ಕಥೆ ಎಲ್ಲರಲ್ಲಿ ಸಂಶಯ ಹುಟ್ಟಿಸುವಂತಿತ್ತು.

ಹೀಗೆ ಅಕರ್ಮದಿಂದ ಅಕ್ರಮವಾಗಿ ಪ್ರವೇಶಿದ ಷಡ್ಯಂತ್ರಿಗಳು, ಚಾಣಾಕ್ಷರಾಗಿದ್ದಿದ್ದರೆ ನಮ್ಮಲ್ಲಿ ಉಂಟಾಗಿರುವ ಸಂಶಯವನ್ನು ಅಪನಂಬಿಕೆಯನ್ನ ಪರಿಹರಿಸಿ, ನಮ್ಮ ಹೋರಾಟವನ್ನ ಶಮನಗೊಳಿಸುವ ಕ್ರಮ ಕೈಗೊಳ್ಳುತ್ತಿದ್ದರು, ಇದರ ಬದಲು ನಮ್ಮೂರಿನ ಜಾತಿವಾದಿಗಳ ಮಾತಿಗೆ ತಲೆ ಅಲ್ಲಾಡಿಸಿ ನಮ್ಮ ಹೋರಾಟಕ್ಕೆ ನೀರೆರೆದು ಪೋಷಿಸಿದರು. ಎಲ್ಲದಕ್ಕೂ ಮಠ ಪ್ರತಿಕಾರದ ಕ್ರಮ ಕೈಗೊಂಡದ್ದು ನಮ್ಮನ್ನು ಕೆರಳಿಸಿ, ಹೋರಾಡುವಂತೆ ಪ್ರೇರೇಪಿಸಿತು.

ಮೂರ್ಖ ಪಂಡಿತರೇ , ಎಲ್ಲಿ ಸರಿ ಮಾಡಬೇಕಾಗಿತ್ತೊ ಅಲ್ಲಿ ಎಡವಿಬಿದ್ದ ಮಠ ಈಗ ದಯನೀಯ ಸ್ಥಿತಿ ತಲುಪಿದೆ ,ಆಗ ಮಠವನ್ನ ಎತ್ತಿ ಹಿಡಿದು ಸಹಾಯ ಮಾಡಿದವರೆಲ್ಲ ಈಗ ಕೈ ಬಿಟ್ಟಿದ್ದಾರೆ,ಆಗ ಮಠಕ್ಕೆ ಬಹು ಸಂಖ್ಯೆಯಲ್ಲಿ ಎಡತಾಗುತ್ತಿದ್ದ ಮಹನೀಯರನ್ನೂ, ಈಗ ಮಠಕ್ಕೆ ಕಾಣದಂತೆ ಸುಳಿದಾಡುತ್ತಿರುವವರನ್ನ ನಾವು ಗಮನಿಸುತ್ತಿದ್ದೇವೆ ,ಮಠದಲ್ಲಿ ಈಗಿರುವವರು ನಿಮ್ಮಂತಹ ಬಾಲಂಗೋಚಿ ಪಂಡಿತರೇ.!!!!!

ಗೋಕರ್ಣ ದೇವಾಲಯ ಯಾವುದೇ ಮಠದ ಸೊತ್ತಲ್ಲ, ಇಂತಹ ನೂರು ಮಠ ಬಂದರೂ ನಮ್ಮ. ನಿಲುವು ಒಂದೇ ಇದು ಸಾರ್ವಜನಿಕ ದೇವಾಲಯ, ಪಾರದರ್ಶಕವಾದ ಆಡಳಿತ ಮಂಡಳಿ ರಚನೆಯಾಗುವ ವರೆಗೂ ನಮ್ಮ ಹೋರಾಟ ಅಬಾಧಿತ. ಇದಕ್ಕಾಗಿ ನೀವು ಯಾವುದೇ ಬಣ್ಣದ. ತುತ್ತೂರಿ ಊದಿದರೂ ಯಾರೂ ಆದನ್ನ ಈಗ ಕೇಳುವ, ನಂಬುವ ಪರಿಸ್ಥಿತಿಯಲ್ಲಿ ಇಲ್ಲ, ಯಾಕೆಂದರೆ ಇದು ಕೋಗಿಲೆಯಲ್ಲ!!!!! ಕಾಗೆ!!! ಎಂದು ಎಲ್ಲರಿಗೂ ತಿಳಿದು ಹೋಗಿದೆ,ಯಾಕೆಂದರೆ ಬಟ್ಟೆಯ ಮೇಲೆ ಕಲೆ ಅಂಟಿರುವದು !!!!ಎಲ್ಲರಿಗೂ ಗೊತ್ತಾಗಿದೆ!!!! ಮಠದ ಅಭಿವೃದ್ಧಿಯ ಹುಸಿ ಮಂತ್ರ ಫಲಿಸದು.

ವಿಚಾರ ಭೇದ, ಭಿನ್ನಾಭಿಪ್ರಾಯ ಇರುವದು ಸಹಜ, ಹಾಗೆಯೇ ನಮ್ಮೂರಲ್ಲೂ ದೇವಾಲಯದ ಹಸ್ತಾಂತರ ಪರ ವಿರೋಧವಿದೆ ಪರ ಮತ್ತು ವಿರೋಧಿಗಳ
ಅಭಿಪ್ರಾಯ ಅವರವರದು, ವಿಚಾರ ನ್ಯಾಯಾಲಯದಲ್ಲಿದೆ ತೀರ್ಪು ಏನೇ ಬಂದರೂ ಅದಕ್ಕೆ ಎಲ್ಲರೂ ತಲೆ ಬಾಗಲೇ ಬೇಕಾಗಿರುವದು ಎಲ್ಲರ ಕರ್ತವ್ಯ.

ಪಂಡಿತರೇ!! ಪರ ವಿರೋಧದ ವಿಚಾರ ಏನೇ ಇದ್ದರೂ ಗೋಕರ್ಣದ ಪ್ರತಿಯೊಂದು ವಿಷಯಕ್ಕೂ ವಿರೋಧಿಗಳನ್ನ ಎಳೆದು ತಂದು ಅವರವರ ವಯಕ್ತಿಕ ವಿಷಯವನ್ನು ಕೆಣಕಿ ಕೀಳು ಮಟ್ಟದಲ್ಲಿ ನಿಂದಿಸುವದನ್ನು ಈ ವರೆಗೆ ಯಾರೂ ಮಾಡಿಲ್ಲ, ಈ ಹಿಂದೆ ತನಗಾದ ಅನ್ಯಾಯವನ್ನ. ಜನರೆದುರು ತೋಡಿಕೊಂಡ ಮಹಿಳೆಯ ಬಗ್ಗೆಯೂ ಇದೇ ತೆರನಾದ ವಯಕ್ತಿಕ ಕೀಳು ಮಟ್ಟದಲ್ಲಿ,ಟೀಕೆ ಟಿಪ್ಪಣಿಗಳನ್ನು ಮಾಡಿ, ಆ ಮಹಿಳೆ ಪೋಲೀಸರಿಗೆ ದೂರು ಸಲ್ಲಿಸಿದರೂ ಈ ಪಂಡಿತರ ಬುದ್ಧಿ ಇನ್ನೂ ನೆಟ್ಟಗಾಗಿಲ್ಲ

ಗೋಕರ್ಣದ ಅಭಿಮಾನಿ ಆತ್ಮೀಯರೇ-

ಫೇಸ್ ಬುಕ್ ಮುಂತಾದ ಸಾಮಾಜಿಕ ಜಾಲ ತಾಣಗಳಲ್ಲಿ ಅತಿ ಕೀಳು ಮಟ್ಟದ ಬರಹಗಳನ್ನ ಬರೆದು, ಮೆಚ್ಚುಗೆ ಗಳಿಸುವ ತೆವಲು ಈ ಪಂಡಿತರಿಗೆ ಹಿಡಿದಂತಿದೆ. ನಿಮ್ಮಲ್ಲಿ ಯಾರಾದರೂ ಇವರಿಗೆ ಹತ್ತಿರವಿದ್ದವರು ತಿಳಿ ಹೇಳಿ . ಜನರ ಸಾಮಾಜಿಕ ಸಾಮರಸ್ಯ ಕೆಡಿಸುವ ಪಂಡಿತರ ಈ ತೆವಲನ್ನ ಬಿಡಿಸಿ ಇಲ್ಲದಿದ್ದರೆ ಇದಕ್ಕೊಂದು ಪರಿಹಾರ ಮಾರ್ಗವನ್ನು ಹುಡುಕ ಬೇಕಾದೀತು! !!!!!!!!

Source: https://www.facebook.com/chintamani.upadhya.3/posts/1545198109142864

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s