ನ್ಯಾಯಾಧೀಶರ ಬದಲಾವಣೆಗೆ ಅರ್ಜಿ: 9ಕ್ಕೆ ಹೈಕೋರ್ಟ್‌ ಆದೇಶ

ನ್ಯಾಯಾಧೀಶರ ಬದಲಾವಣೆಗೆ ಅರ್ಜಿ: 9ಕ್ಕೆ ಹೈಕೋರ್ಟ್‌ ಆದೇಶ

ಪ್ರಜಾವಾಣಿ ವಾರ್ತೆ
Thu, 03/03/2016 – 01:00

ಬೆಂಗಳೂರು: ‘ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ಸೆಷನ್ಸ್‌ ನ್ಯಾಯಾಧೀಶ ಜಿ.ಬಿ.ಮುದಿಗೌಡರ್‌ ನಡೆಸುವುದು ಬೇಡ’ ಎಂದು ಕೋರಿ ರಾಮಕಥಾ ಗಾಯಕಿ ಪ್ರೇಮಲತಾ ಶಾಸ್ತ್ರಿ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯ ಮೇಲಿನ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ಬುಧವಾರ ಈ ಅರ್ಜಿಯ ವಿಚಾರಣೆ ನಡೆಸಿದ ಪ್ರದೀಪ್‌ ಡಿ ವೈಂಗಣಕರ ಅವರಿದ್ದ ಏಕಸದಸ್ಯ ಪೀಠವು, ಈ ಕುರಿತಂತೆ ಇದೇ 9ರಂದು ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ಸ್ವಾಮೀಜಿ ಪರ ಹಾಜರಿದ್ದ ವಕೀಲ ಶಂಕರ ಹೆಗಡೆ ಅವರು, ‘ಅರ್ಜಿದಾರರು ಈ ಪ್ರಕರಣದಲ್ಲಿ ಪದೇ ಪದೇ ಈ ರೀತಿ ನ್ಯಾಯಾಂಗದ ಅಧಿಕಾರಿಗಳ ವಿರುದ್ಧ ಆರೋಪ ಮಾಡುತ್ತಲೇ ಬಂದಿದ್ದಾರೆ. ಇದು ಅವರಿಗೆ ಹವ್ಯಾಸ ಆಗಿದೆ’ ಎಂದು ದೂರಿದರು.

‘ಪ್ರಕರಣವು ಈ ತನಕದ 14 ಮುದ್ದತುಗಳಲ್ಲಿ (ಹಿಯರಿಂಗ್‌) 4 ಕೋರ್ಟ್‌ಗಳ ಬದಲಾವಣೆ ಕಂಡಿದೆ. ವಿಚಾರಣೆ ಸರಿಯಾಗಿ ಆರಂಭವಾಗಲು ಬಿಡುತ್ತಿಲ್ಲ. ಅರ್ಜಿದಾರರು ಈವರೆಗೆ ಈ ಪ್ರಕರಣದಲ್ಲಿ ನಾಲ್ವರು ನ್ಯಾಯಾಂಗ ಅಧಿಕಾರಿಗಳು ಹಾಗೂ ನಾಲ್ವರು ತನಿಖಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಇದು ಅವರಿಗೆ ನ್ಯಾಯಾಂಗದ ಮೇಲೆ ವಿಶ್ವಾಸ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದರು.

pv20160303

source: http://www.prajavani.net/article/%E0%B2%A8%E0%B3%8D%E0%B2%AF%E0%B2%BE%E0%B2%AF%E0%B2%BE%E0%B2%A7%E0%B3%80%E0%B2%B6%E0%B2%B0-%E0%B2%AC%E0%B2%A6%E0%B2%B2%E0%B2%BE%E0%B2%B5%E0%B2%A3%E0%B3%86%E0%B2%97%E0%B3%86-%E0%B2%85%E0%B2%B0%E0%B3%8D%E0%B2%9C%E0%B2%BF-9%E0%B2%95%E0%B3%8D%E0%B2%95%E0%B3%86-%E0%B2%B9%E0%B3%88%E0%B2%95%E0%B3%8B%E0%B2%B0%E0%B3%8D%E0%B2%9F%E0%B3%8D%E2%80%8C-%E0%B2%86%E0%B2%A6%E0%B3%87%E0%B2%B6

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s