ರಾಮಚಂದ್ರಾಪುರ ಮಠದಿಂದ ಸಿಎ ಸೈಟ್ ಗುಳುಂ

January 10, 2016

ರಾಮಚಂದ್ರಾಪುರ ಮಠದಿಂದ ಸಿಎ ಸೈಟ್ ಗುಳುಂ

Posted By: ಎಸ್ ವಿ ನ್ಯೂಸ್ ಬ್ಯೂರೋ

ಬೆಂಗಳೂರು, ಜ. ೧೦ – ರಾಮಚಂದ್ರಾಪುರ ಮಠದ ಗುರುಗಳ ಮೇಲೆ ಅತ್ಯಾಚಾರ ಮೊಕದ್ದಮೆಯ ವಿಚಾರಣೆ ನಡೆದಿರುವುದರ ನಡುವೆಯೇ ಸರ್ಕಾರಿ ಜಮೀನನ್ನು ಕಬಳಿಸಿರುವ ಆರೋಪವನ್ನು ಮಠ ಮೈಮೇಲೆ ಎಳೆದುಕೊಂಡಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಕ್ಕೆ ಸೇರಿದ 1.91 ಎಕರೆಯ ಸಿಎ (ಸಿವಿಕ್ ಅಮಿನಿಟಿ) ನಿವೇಶನದಲ್ಲಿ ಮಠ ಕಟ್ಟಡ ನಿರ್ಮಿಸಿದೆ!

ಈ ಬಗ್ಗೆ ಬಿಡಿಎ ಇತ್ತೀಚೆಗೆ ಬಿಎಂಟಿಎಫ್ (ಬೆಂಗಳೂರು ಮೆಟ್ರೋ ಪಾಲಿಟನ್ ಟ್ಯಾಸ್ಕ್ ಫೋರ್ಸ್)ಗೆ ಪತ್ರ ಬರೆದು ದೂರಿತ್ತಿದೆ. ಮಠ ಆವರಿಸಿಕೊಂಡಿರುವ ಭೂಮಿಯ ಬೆಲೆ ರಿಯಲ್ ಎಸ್ಟೇಟ್ ಉದ್ಯಮಿಗಳ ಪ್ರಕಾರ ಭಾರಿ ಬೆಲೆಯುಳ್ಳದ್ದಾಗಿದೆ ಎನ್ನಲಾಗಿದೆ.

ಆರ್‌ಟಿಐ ಕಾರ್ಯಕರ್ತರೊಬ್ಬರು ಕೇಳಿದ ವಿವರಗಳಿಂದಾಗಿ ಇ‌ಡೀ ಕರ್ಮಕಾಂಡ ಹೊರಬಿದ್ದಿದ್ದು, ಇದನ್ನು ಆಧರಿಸಿಯೇ ಬಿಎಂಟಿಎಫ್‌ಗೆ ದೂರು ನೀಡಲಾಗಿದೆ.

ಗಿರಿನಗರದ ಮೊದಲ ಹಂತದ ಜೆಪಿ ರಸ್ತೆಯ ವಿವೇಕನಗರದ ಪಾರ್ಕನ್ನು ಬಿಬಿಎಂಪಿ ನಿರ್ವಹಿಸುತ್ತಿದ್ದು, ಇದು ಬಿಡಿಎಗೆ ಸೇರಿದ ಸಿಎ ನಿವೇಶನವಾಗಿತ್ತು. ಆದರೆ, 2010 ರಲ್ಲಿ ಬಿಡಿಎ ಈ ನಿವೇಶನವನ್ನು ಬಿಬಿಎಂಪಿಗೆ ಹಸ್ತಾಂತರಿಸಿತ್ತು.

ಈ ನಡುವೆ ಇದೇ ಪಾರ್ಕ್‌ನ ಒಂದು ಭಾಗದಲ್ಲಿ ಮಠ ಎರ‌ಡು ಬೃಹತ್ ಕಟ್ಟಡಗಳನ್ನು ಎಬ್ಬಿಸಿತು. ಮಠದ ಅಧಿಕಾರಿಗಳ ಪ್ರಕಾರ ಬಿಡಿಎ ಅಧಿಕಾರಿಗಳೇ 2011 ರಲ್ಲಿ ಆಕ್ಷೇಪಣಾ ರಹಿತ (ಎನ್ಒಸಿ) ಪತ್ರ ನೀಡಿತ್ತು.

2010 ರಲ್ಲೇ ಬಿಬಿಎಂಪಿಗೆ ಪಾರ್ಕನ್ನು ವಹಿಸಿಕೊಟ್ಟ ಬಿಡಿಎ 2011 ರಲ್ಲಿ ಎನ್‌ಒಸಿ ನೀಡಲು ಹೇಗೆ ಬರುತ್ತದೆ ಎಂಬುದು ವಿಚಿತ್ರ.

ಇನ್ನು ಕುತೂಹಲಕಾರಿ ಸಂಗತಿ ಎಂದರೆ ಕಟ್ಟಡ ನಿರ್ಮಾಣ ಮುಂದುವರೆಸಲು ಬಿಬಿಎಂಪಿ ಅನುಮತಿ ಪತ್ರ ನೀಡಿದೆ!

ಈ ಬಗ್ಗೆ ಸ್ಥಳೀಯ ನಿವಾಸಿ, ನಾಟಕಕಾರ ಮತ್ತು ಲೇಖಕ ಕರ್ಣಂ ಪವನ್ ಪ್ರಸಾದ್ ಅವರಿಗೆ ಅನುಮಾನ ಬಂದು 2015ರ ಡಿಸೆಂಬರ್‌ನಲ್ಲಿ ವಿವರ ಕೋರಿ ಆರ್‌ಟಿಐಗೆ ಅರ್ಜಿ ಸಲ್ಲಿಸಿದರು.
ಬಿಡಿಎ ಇದಕ್ಕೆ ಉತ್ತರಿಸಿದಾಗ ಅವರ ಅನುಮಾನಗಳು ಖಚಿತಪಟ್ಟವು. ರಾಮಚಂದ್ರಾಪುರ ಮಠ ಅಕ್ರಮವಾಗಿ ನಿವೇಶನದಲ್ಲಿ ಕಟ್ಟಡ ನಿರ್ಮಿಸಿರುವುದೂ ಖಚಿತವಾಯಿತು.

ನಂತರ ಅವರು ಬಿಡಿಎಗೆ ದೂರು ಸಲ್ಲಿಸಿ ಬಿಎಂಟಿಎಫ್‌ನ್ನು ಸಂಪರ್ಕಿಸಿದರು.

ಇನ್ನೊಂದು ಕೌತುಕದ ಸಂಗತಿ ಎಂದರೆ ಬಿಡಿಎ ಒತ್ತುವರಿಯಾಗಿರುವುದನ್ನು ಒಪ್ಪಿಕೊಂಡಿದೆಯಾದರೂ ಈವರೆಗೂ ಈ ಬಗ್ಗೆ ಎಫ್‌ಐಆರ್ ದಾಖಲಿಸಿಲ್ಲ!

source: http://www.sanjevani.com/sanjevani/2016/01/%E0%B2%B0%E0%B2%BE%E0%B2%AE%E0%B2%9A%E0%B2%82%E0%B2%A6%E0%B3%8D%E0%B2%B0%E0%B2%BE%E0%B2%AA%E0%B3%81%E0%B2%B0-%E0%B2%AE%E0%B2%A0%E0%B2%A6%E0%B2%BF%E0%B2%82%E0%B2%A6-%E0%B2%B8%E0%B2%BF%E0%B2%8E/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s