ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ

ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ

ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ
ವಾರದಲ್ಲಿ ನೂರು ಸರ್ತಿ ಬಂದು ಹೋಗಾಂವ
ಬಾರಿ ಬಾರಿಗು ಹೋರಿ ಸ್ವಾಮಿ ಚೋರನೆಂದಾಂವ
ದೂರ ಇರಿಸಿ ಎಂದು ತಿಳಿಸಿ ಹಾರಿ ಹೋದಾಂವ

ಮಾರಿ ಕ್ವಾಣನ ಮೈನ ಕಸುವು ಹೋರಿ ಸ್ವಾಮೀದು
ಜಾರಿ ಬಿದ್ದರೆ ಜೋರು ಗುಟುರಿ ಎದ್ದು ನಿಲ್ಲೋದು
ಯಾರೇ ಅಕ್ಕ ತಂಗ್ಯೋರಾದ್ರೂ ಬಾಳಾ ಹುಷಾರು
ದಾರಿ ನಡುವೆ ಕರೀತಾನ ಏಕಾಂತದ ಬೀರು

ಹೊ ಹೋಯ್ …ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ….

ಕಾವಿಯಾಗ ಅಡಕೊಂಡೈತಿ ಕಾಗೆ ಬಂಗಾರ
ನಾವಿಕನೆಂದು ಎಣ್ಣೆ ಸವರಿ ಕರಿತೈತೆಲ್ಲಾರ
ರಾಮನಂತೆ ಭೀಮನಂತೆ ಕಾಮದಾ ದಂಡ
ಮಾಮಂದಿರು ಕರೆದಾಗಲೆಲ್ಲ ತಪ್ಪಿಸಿಕೊಂಡ

ಹೊ ಹೋಯ್ …ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ….

ನೀರು ಕುಡಿಯಲು ಚಂಬು ಬೇಕು ಎಂದು ಇಟಗಂಡ
ನೀರನು ಸರಿಯಾಗ್ ಕುಡಿಸ್ತಿತ್ರಪ್ಪ ಚಂಬು ಪ್ರಚಂಡ
ಬಾರಿ ಬಾರಿಗು ನೀರನು ತುಂಬಿಸಿ ಹೋರಿ ಸುಸ್ತಾದ
ಮಾರಿ ಕೆಂಪಗ ಮಾಡಿಕೊಂಡು ಚಂಬನು ಕಳಿಸೀದ

ಹೊ ಹೋಯ್ …ಇನ್ನೂ ಯಾಕ ಬರಲಿಲ್ಲವ್ವ ತುಮರಿ ಕಡಿಯಾಂವ….

ಅಂತೂ ತುಮರಿ ಸವಾರಿ ಈ ಕಡಿಗೆ ಬಂದೈತೇನ್ರಪಾ. ಹಾಂ ಹಾಂ ಲಗೂನ್ ಬರೂದ್ ಬಿಟ್ಟು ಬಾಳಾ ತಡಾ ಮಾಡಿ ಬಂದೈತಿ ಅಂಬೋದೊಂದೆ ಬೇಜಾದು. ಹೋಗಲಿ ತಕ್ಕಳ್ರಪ್ಪ ತುಮರಿ ಸವಾರಿ ಇದೇ ಕನ್ನಡದಾಗ ಹೇಳಾಕ್ ಹತ್ತಂದ್ರ ನಿಮ್ಗೆ ಅರ್ಥವಾಗೊಲ್ದು. ಮತ್ತ ಸಾಹಿತ್ಯಾದಾಗೇನ್ ಬಳಸ್ತಾರ ಆ ನಮೂನಿ ಭಾಷಾನೇ ಬಳಸೋಣು.

ಹೋರಿ ಸ್ವಾಮಿಯ ಕತೆ ಹೇಳಿ ಹೇಳಿ, ಕೇಳಿ ಕೇಳಿ ಸಾಕಾಗಿ ಹಾಳಾಗ್ ಹೋಗಲಿ ಅಂತ ಬಿಟ್ಟಿದ್ದೆ. ಯಾವಾಗ ಹಳದೀ ತಾಲೀಬಾನು ಸಾಗರದ ಕಡೆಗೆ ಧಾಂದಲೆ ಜಾಸ್ತಿ ಸುರು ಮಾಡ್ತೋ ಆಗಲೇ ನನಗೂ ಜೋಂಪು ತೊಲಗಿ ಎಚ್ಚರಿಕೆ ಆದಹಾಗಾಯ್ತು. ತ್ರಾಟಕಾಸುರ ವಧೆಯನ್ನು ವಿವರಿಸುವ ಪೂರ್ವಭಾವಿಯಾಗಿ ಚೋರ ಗುರು ಎಲೆಲ್ಲಿ ಯಾರ ಯಾರ ಹಿತ್ತಲಲ್ಲಿ ಬಾವಿ ತೆಗೆದಿದ್ದಾನೆ ಎಂದು ತಿಳಿದುಕೊಳ್ಳುವ ಕುತೂಹಲದಲ್ಲಿ ಹುಡುಕುತ್ತಿದ್ದೆ.

ಅಂದಹಾಗೆ ಅದ್ಯಾವ್ದೋ ಸಿ.ಡಿ ನಕಲಿ ಕೇಸಿನ ಸುದ್ದಿ ಭಾರೀ ಹವಾ ಎಬ್ಬಿಸಿದ್ದಂತೂ ನಿಜ; ಜನರಿಗೆ ಯಾರು ಅಸಲಿ ಮತ್ತು ಯಾರು ನಕಲಿ ಅಂತ ಈಗಾಗಲೇ ತಿಳಿದುಬಿಟ್ಟಿದ್ದರಿಂದಲೂ ಮತ್ತು ನಡೆಸುತ್ತಿರುವ ಛದ್ಮವೇಷಗಳೆಲ್ಲ ಮುಗಿದು ಮಠದ ಹುಂಡಿ ಖಾಲಿ ಹೊಡೆಯ ತೊಡಗಿದ್ದರಿಂದಲೂ ನಾವೀಗ ಚಂಬು ಇಟ್ಟುಕೊಳ್ಳುವುದನ್ನು ಬಿಟ್ಟುಬಿಟ್ಟಿದ್ದೇವೆ.

ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಐದು ದಿನಗಳ ಸಮಾರಂಭ ನಡೆಯಿತಂತಲ್ಲ? ಹಾಗಂತ ಕೋಣೆಮಾಣಿಯ ವಾಣಿಯಲ್ಲಿ ವರದಿಗಳು ಬಂದಿವೆ. ಅಲ್ಲಿಗೆ ಹಲವಾರು ಮಠಗಳವರು ಬಂದಿದ್ದರಂತೆ, ಸ್ವರ್ಣವಲ್ಲಿಯವರೂ ಇದ್ದರಂತೆ. ಜಗದ್ಗುರು ಶೋಭರಾಜಾಚಾರ್ಯರನ್ನು ಮಾತ್ರ ಕರೆಯಲೇ ಇಲ್ಲ! ಪಾಪ ಪೈಯೆಲ್ಲ ಉರಿಹತ್ತಿರಬೇಕು ಮುಂಡೇದಕ್ಕೆ. ಹೋದಲ್ಲೆಲ್ಲ ಹೂವಿನ ಜತೆ ನಾರು ಸೇರಿಕೊಳ್ಳುವ ಹಾಗೆ ಸೇರಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತಿದ್ದ ಚೋರಗುರುವನ್ನು ಆರ್.ಎಸ್.ಎಸ್.ನವರು ಬಹಳ ದೂರ ಇರಿಸಿದ್ದಾರೆ ಎಂದು ತಿಳಿದುಬಂದಿದೆ.
ನಾವೇನೂ ಕಮ್ಮಿ ಇಲ್ಲ ಎಂದು ಮತ್ತೆ ಮತ್ತೆ ಗುಟುರುತ್ತಲೇ ಇರುವ ಹರಾಮಿ ಹೋರಿಯ ಬಳಗ ಕೊನೆಯ ಸಮಾವೇಶವನ್ನು ಹಮ್ಮಿ ಕೊಂಡಿದೆ. ದಯಮಾಡಿ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬನ್ನಿ, ಬರುವಾಗ ಹಾದಿಯಲ್ಲಿ ಸಿಕ್ಕುವವರನ್ನೆಲ್ಲ ಒತ್ತಾಯಪೂರ್ವಕವಾಗಿ ಕರೆದುಕೊಂಡು ಬನ್ನಿ; ಭಕ್ಷೀಸು ಕೊಡಲಾಗುತ್ತದೆ ಎಂದು ಹೇಳಿ ಕರೆದುಕೊಂಡು ಬನ್ನಿ.

“ಅಪ್ಪಯ್ಯ ಎನಗೆ ಗುರುಗಳು ಒಂಚೂರೂ ಇಷ್ಟ ಇಲ್ಲೆ. ಅವು ಕೋಣೆಲಿ ಕಾಲ್ಮೇಲೆ ಕೂರ್ಸ್ಕೆಂಡು ಎಂತ ಎಲ್ಲ ಮಾಡ್ತ ಥೂ ಹೇಳಕೆ ನಾಚ್ಗೆ ಎನಗೆ” ಎಂದ ಷೋಡಶಿಯರನ್ನು
“ಮಗಳೆ, ಗುರುಗಳ ಬಗ್ಗೆ ಹಾಂಗೆಲ್ಲ ಹೇಳಲಾಗ, ಅವರಿಂದ ನಮಗೆ ಸದಾ ಆಶೀರ್ವಾದ ಸಿಗವು. ಗುರು ಕೃಪೆ ಆಯ್ದು ಹೇಳಾದ್ರೆ ನಿನ್ನಮೇಲೆ ಗುರುಗಳ ಕರುಣೆ ಅಷ್ಟಿದ್ದು ಅಂತ್ಲೇ ಅರ್ಥ.” ಅಂತ ಒಲ್ಲೆನೆಂಬ ಮಗಳನ್ನು ಬಲವಂತವಾಗಿ ಗುರುವಿನೆಡೆಗೆ ಕಳಿಸುತ್ತಿದ್ದ ಮುಗ್ಧ ಪಾಲಕ ಭಕ್ತರ ಅರಿಯದ ಹೆಣ್ಣುಮಕ್ಕಳನ್ನು ತನ್ನ ಕಾಮತೃಷೆಗೆ ಬಳಸಿಕೊಂಡು ಮಠದಲ್ಲೇ ಮತ್ತೆ ಮತ್ತೆ ಸಿಗುತ್ತಿರುವಂತೆ ವ್ಯವಸ್ಥೆ ಮಾಡಿಕೊಳ್ಳುವ ಖದೀಮನ ಕಾಲಿಗೆ ಬೀಳುವವರು ಈಗೀಗ ಕಡಿಮೆ ಆಗಿದ್ದಾರೆ.

ಹತ್ತುವರ್ಷಗಳ ಹಿಂದೆ ತುಮರಿ ಒಬ್ಬರಲ್ಲಿ ಹೇಳಿದ್ದ. “ಈ ಚೋರ ಗುರುವಿಗೆ ತರಾವರಿ ಚಾಂದಾಲ ಭಕ್ತರು ತಯಾರಾಗ್ತಾ ಇದಾರೆ ಮಾರಾಯ. ಬಂದವರಿಗೆಲ್ಲ ತೀರ್ಥ ಕಳಿಸಬೇಕಲ್ಲ. ಹಲವಾರು ಮಾರಾಟದ ಸಾಮಗ್ರಿಗಳನ್ನು ಸಿದ್ಧಪಡಿಸಿಕೊಂಡಂಂತೆ ಹೋರಿ ಸ್ವಾಮಿ ಸ್ನಾನ ಮಾಡಿದ ನೀರನ್ನೂ ನೇರವಾಗಿ ಒಂದು ದೊಡ್ಡ ಕಡಾಯಿಗೆ ಹರಿಸಿ ಅಲ್ಲಿಂದ ಅಟೋಮೇಟೆದ್ ಮಶಿನ್ ಮೂಲಕ ಬಾಟಲಿಗಳಿಗೆ ತುಂಬಿ ಪ್ಯಾಕ್ ಮಾಡುವ ವ್ಯವಸ್ಥೆ ಮಾಡಿದರೆ ಕೊಟ್ಟು ಕಳಿಸೋದಕ್ಕೆ ಅನುಕೂಲ” ಅಂತ ಹೇಳಿದ್ದಿತ್ತು. ಕೇಳಿಸಿಕೊಂಡ ಜನ ತುಮರಿಯನ್ನು ಆಗ ಹುಚ್ಚ ವೆಂಕಟ್ ನನ್ನು ನೋಡಿದಂತೆ ನೋಡಿದರು; ಈಗ ಅವರಿಗೆಲ್ಲ ತುಮರಿ ಹೇಳಿದ್ದು ಅರ್ಥವಾಗಿದೆ; ಕಾಮಿಯ ಬಣ್ಣ ಬಯಲಾಗಿದೆ.ಈ ಸಮಯದಲ್ಲಿ ಉತ್ತರದ ರಾಂಪಾಲ ಹಾಲಿನಲ್ಲಿ ಸ್ನಾನ ಮಾಡುತ್ತಿದ್ದುದನ್ನು ನೆನಪಿಸಿಕೊಳ್ಳಿ; ವ್ಯತ್ಯಾಸವಿಷ್ಟೇ-ಇವ ದಕ್ಷಿಣದ ರಾಂಪಾಲ.

ಅಂದಹಾಗೆ ಚಂಬನ್ನು ಕಳಿಸಿದ್ದು ಕೂಡ ರಾಂಗಾನುಗ್ರಹವೇ. ರಾಂಗಾನುಗ್ರಹ-ಭಾಗ ೨ ರಲ್ಲಿ ಅದೆಲ್ಲವೂ ಸೇರ್ಪಡೆಗೊಳ್ಳುತ್ತದೆ. ಚಂಬನ್ನು ಕಳಿಸಿದ ತರುವಾಯ ಹಳದೀ ತಾಲಿಬಾನಿಗಳು ಸ್ವಲ್ಪ ತತ್ತರಗೊಂಡಿದ್ದು ನಿಜ; ಯಾಕೆಂದರೆ ಕುತಂತ್ರಮಾಡಿ ತಪ್ಪಿಸಿಕೊಳ್ಳಲು ಕಳ್ಳ ಉಪಾಯಗಳನ್ನು ಹೇಳಿಕೊಡುವ ಕ್ರಿಮಿನಲ್ ಮೈಂಡಿನ ಕೊರತೆ ಕಾಣುತ್ತದೆ. ಕ್ರಿಮಿನಲ್ ಗುರುವಿಗೆ ಕ್ರಿಮಿನಲ್ ಶಿಷ್ಯರು ಅಲ್ಲವೇ? ನಡೆಸುವ ಪಾತಕಗಳಿಂದ ತಪ್ಪಿಸಿಕೊಳ್ಳುವ ದಾರಿಗಳು ಕಾಣದೆ ಕಂಗಾಲಾಗಿದ್ದಾರೆ.
ಅಂತೂ ಇಂತೂ ನಾಟಕ ಬರುಬರುತ್ತ ಅಂಕದ ಪರದೆಯನ್ನು ಕೆಳಗೆ ಜಾರಿಸುವ ಹಂತಕ್ಕೆ ಹತ್ತಿರದಲ್ಲಿದೆ ಎಂಬುದು ಸ್ಪಷ್ಟ. ನಡೀಲಿ ಇನ್ನೆಷ್ಟು ದಿನ ನಡೆದೀತು? ಮೊದಲು ಅನಿವಾರ್ಯವಾಗಿ ಪೀಠದ ಘನತೆ ಹಾಳಾಗಬಾರದು ಎಂದು ಅಲ್ಲಿದ್ದ ಪ್ರಮುಖರೆಲ್ಲ ಈಗ ಅಲ್ಲಿಲ್ಲ ಎಂಬುದು ಎಲ್ಲರಿಗೂ ಗೊತ್ತಷ್ಟೇ? ಕೊನೆ ಕೊನೆಗೆ ಘಟ್ಟದ ತಳಗಿನ ಗಾದೆಯಂತೆ ಆನು-ಮಾಣಿ-ಗೋವಿಂದ ಮೂರೇ ಜನ ಉಳೀತಾರೆ; ಅಂದರೆ ಆನು[ಚೋರಗುರು]-ಮಾಣಿ[ಯಾವುದೋ ಒಬ್ಬ ಗಿಂಡಿ ಮತ್ತು ಇನ್ನಾರೋ ಒಬ್ಬ ಗಮಾರ ಗೋವಿಂದ ಉಳೀತಾರೆ ಅಂತರ್ಥ. ಯಾರೂ ಕಾಣಿಕೆ ಕೊಡದಾಗ ಏನು ಮಾಡ್ತಾನೆ ಕಾಮಿ?

ನದೀ ದಾಟಲು ಹೊರಟಿದ್ದ ಪರಾಶರರಿಗೆ ಹದಿನಾರರ ಮತ್ಸ್ಯಗಂಧಿಯು ದೋಣಿ ದಾಟಿಸುವುದು ಅನಿವಾರ್ಯವಾಯಿತು. ಅಪ್ಪ ದಾಸರಾಜ ಊಟಕ್ಕೆ ತೆರಳಿದ್ದ ಕಾರಣ ಮುನಿಗಳಿಗೆ ತಡವಾಗುತ್ತದೆ ಎಂದು ತಾನೇ ದೋಣಿ ನಡೆಸಿದಳು. ಅವಳ ಇನ್ನೊಂದು ಹೆಸರು ಯೋಜನಗಂಧಿ ಅಂತಂತೆ. ಅಂದರೆ ಅವಳ ಮೈಯಿಂದ ಹೊರಡುವ ಮತ್ಸ್ಯ ಗಂಧ ಯೋಜನ ದೂರದ ವರೆಗೆ ಹೋಗುತ್ತಿತ್ತು ಅಂತ. ಅಷ್ಟೆಲ್ಲ ವಾಸನೆಯ ಯೋಜನಗಂಧಿಯ ನಾತವನ್ನು ಸಹಿಸಿಯೂ ದೋಣಿಯೇರಿದ ಪರಾಶರರು ಅವಳ ಕಸುವುಳ್ಳ ಮೈಮಾಟಕ್ಕೆ ಮಾರುಹೋದರು! ನಡೆದ ಅನಾಹುತದ ಪರಿಣಾಮವಾಗಿ ವೇದವ್ಯಾಸರು ಹುಟ್ಟಿದ ಕತೆ ನಮಗೆಲ್ಲ ತಿಳಿದಿದೆ ಅಲ್ಲವೇ? ಹಾಗಾಗಿಯೇ ಋಷಿಮೂಲವನ್ನು ಶೋಧಿಸಬೇಡಿ ಎಂದಿದ್ದಾರೆ.

ಪರಾಶರರಿಂದ ಬಸಿರಾಗಿ ಮಗುವನ್ನು ಹಡೆದಿದ್ದರೂ ಅದನ್ನು ದ್ವೀಪದಲ್ಲೇ ಬಿಟ್ಟುಬಿಟ್ಟಳಂತೆ. ದೋಣಿದಾಟಿಸಿದ ನಂತರ ದ್ವೀಪದಲ್ಲಿ ಕ್ಷಣಾರ್ಧದಲ್ಲಿ ಎಲ್ಲವೂ ಘಟಿಸಿಹೋಯಿತು ಎಂದುಕೊಳ್ಳೋಣವೇ? ಇದಕ್ಕೆ ಉತ್ತರ ಹುಡುಕಿದರೆ ಮತ್ತೆ ಯೋಗಶಾಸ್ತ್ರವೇ ಆಧಾರವಾಗುತ್ತದೆ. ಕಾಲಾತೀತರಾದವರಿಗೆ ನಿಮಿಷವನ್ನು ವರುಷ ಮಾಡಲೂ ಅಥವಾ ವರುಷವನ್ನು ನಿಮಿಷವನ್ನಾಗಿಸಲೂ ಗೊತ್ತು. ಸದೃಢ ಮೈಕಟ್ಟಿನ ಸುಂದರ ತಾಪಸ ಪರಾಶರರು ಸಮೀಪಿಸಿದಾಗ ಯೋಜನಗಂಧಿಗೂ ಅವರಲ್ಲಿ ಆಕರ್ಷಣೆ ಹುಟ್ಟಿರಬೇಕು.

ಅಷ್ಟೆಲ್ಲ ಸಾಧನೆ ಮಾಡಿದ್ದ ಪರಾಶರರು ದೇಶಾತೀತರೂ ಆಗಿದ್ದು ನದಿ ದಾಟುವ ಪ್ರಮೆಯವೇ ಅವರಿಗೆ ಇರಬಾರದಿತ್ತಲ್ಲವೇ? “ಕಾರ್ಯಕಾರಣ” ಎಂಬ ಹೇಳಿಕೆಯನ್ನು ಅಲ್ಲಲ್ಲಿ ನೀವೆಲ್ಲ ಓದಿರಬಹುದು., ಮಹಾತ್ಮರ ಸಂಕಲ್ಪಗಳು ಹಾಗಿರುತ್ತವೆ. ಮೂಲ ಸ್ವರೂಪದ ರಾಮನಿಗೆ ರಾವಣನನ್ನು ಹೊಡೆದುರುಳೀಸುವುದು ಸಂಕಲ್ಪದಿಂದಲೇ ಸಾಧ್ಯವಿತ್ತಲ್ಲವೇ? ಮನುಷ್ಯನಾದ ರಾಮ ಅತಿಮಾನುಷ ಶಕ್ತಿಯನ್ನು ಪ್ರದರ್ಶಿಸದೆ ಹಲವಾರು ರೀತಿಯಲ್ಲಿ ಪರದಾಡಿದ್ದು ಕಾಣುತ್ತದೆ. ಕಪಿಗಳ ಸಹಾಯವೂ ಅವನಿಗೆ ಅಗತ್ಯವಾಯಿತು; ಅದಿರಲಿ ಅಳಿಲಿನ ಸೇವೆಯನ್ನೂ ಆತ ಬಳಸಿಕೊಂಡ. ಇದಕ್ಕೆಲ್ಲ ಕಾರ್ಯಕಾರಣ ಎನ್ನುತ್ತಾರೆ.

ಅದೇನೇ ಇರಲಿ, ಯೋಜನಗಂಧಿಯಿಂದ ಹೊರಸೂಸುತ್ತಿದ್ದ ಕೆಟ್ಟವಾಸನೆಯನ್ನು ಸುಗಂಧ ಭರಿತವಾಗಿಸಿದರಂತೆ ಆ ಮಹಾನ್ ತಪಸ್ವಿಗಳು. ಅವರ ಆ ಕಾಮ ಕ್ಷಣಿಕವಾಗಿತ್ತು; ಮತ್ತೆ ಮತ್ತೆ ಅವಳನ್ನು ಸಂಪರ್ಕಿಸುವ ಮತ್ತು ಸಂಭೋಗಿಸುವ ಆಸೆ ಅವರಿಗಿರಲಿಲ್ಲ. ಸಾಮಾನ್ಯವಾಗಿ ಹೆಣ್ಣು ಹಡೆದಮೇಲೆ ಅವಳ ಮೈ-ಮನ ಮುಖಚಹರೆಗಳಲ್ಲಿ ಷೋಡಶಿಯ ಕಳೆ ಇರುವುದಿಲ್ಲ. ಆದರೆ ಇಲ್ಲಿ ಹಾಗಾಗಲಿಲ್ಲ. ಅವಳ ಹರೆಯವೂ ಮರೆಯಾಗದೆ ಹಾಗೇ ಉಳಿದಿತ್ತು. ನಂತರ ಅದೇ ಯೋಜನಗಂಧಿಯನ್ನು ಶಂತನು ಕಂಡು ಮರುಳಾದ; ಗಾಂಗೇಯ ಸಾಂಸಾರಿಯಾಗುವುದನ್ನು ತಪ್ಪಿಸಿ ಮದುವೆಯಾದ ಎಂಬಲ್ಲಿಂದ ಮಹಾಭಾರತ ಹುಟ್ಟಿಕೊಳ್ಳುತ್ತದಲ್ಲವೇ? ಅಪ್ಪನಿಗಾಗಿ ಸುಂದರಿಯನ್ನು ಕರೆತರಲು ಹೋದ ಆ ಪುಣ್ಯಾತ್ಮ ದಾಸರಾಜ ಹಾಕಿದ ಷರತ್ತಿಗೆ ಒಪ್ಪುತ್ತ ಅವರ ಸಂದೇಹ ನಿವಾರಣೆಗಾಗಿ ಮದುವೆಯಾಗುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡ; ಆದೇ ಭೀಷ್ಮ ಪ್ರತಿಜ್ಞೆ ಎಂದು ಇಂದಿಗೂ ಜನಜನಿತ ಅಲ್ಲವೇ?

ಇಂತಹ ಪೌರಾಣಿಕ ಅಥವಾ ಮಹಾಕಾವ್ಯಗಳಲ್ಲಿ ಬರುವ ಋಷಿಗಳ ಜೀವನ ವಿಧಾನ ಮತ್ತು ಇಂದಿನ ತಾಪಸರ ಜೀವನ ವಿಧಾನಗಳಲ್ಲಿ ಸಾಕಷ್ಟು ಅಂತರವಿದೆ. ಅಂದು ಅವರಿಗೆ ಅಂಥದ್ದೊಂದು ವಿಶಿಷ್ಟ ಶಕ್ತಿಯಿತ್ತು. ಇಂದಿನ ಚೋರಗುರುಗಳಲ್ಲಿ ಅದಿಲ್ಲ. ಮೇಲಾಗಿ ದೇಶ-ಕಾಲಗಳನ್ನು ಪರಿಗಣಿಸಿ ಇಂದಿನ ಕಾಲಮಾನದಲ್ಲಿ ಅಂತಹ ಸಪತ್ನೀಕ ಋಷಿ ಪರಂಪರೆ ಇರುವುದು ಸಿಂಧುವಲ್ಲ ಎಂದು ಧರ್ಮಶಾಸ್ತ್ರ ಹೇಳುತ್ತಿರೋದರಿಂದ ಈಗಿನ ಮುನಿಗಳು ಮದುವೆಯಾಗುವಂತಿಲ್ಲ. [ಕೆಲವು ಮಠಗಳಲ್ಲಿ ಅಪವಾದ ಇರಬಹುದು.] ಕಾರಣವಿಷ್ಟೆ-ಮದುವೆ ಆದವರಿಗೆ ಸಾಂಸಾರಿಕ ವ್ಯಾಮೋಹದಿಂದ ನಿಡುಗಡೆ ಪಡೆಯುವುದು ಕಷ್ಟವಾಗುತ್ತದೆ.

ಹೋರಿಸ್ವಾಮಿಗ ಇಂತಹ ಹಲವಾರು ಕತೆಗಳು ಗೊತ್ತಿರುತ್ತವೆ. ಬಹಳ ಆಳಕ್ಕೆ ಇಳಿದರೆ ತನ್ನನ್ನು ಪರಾಶರರಿಗೆ ಹೋಲಿಸಿಕೊಳ್ಳಲೂ ಅವ ತಯಾರಾಗಬಹುದು. ಆದರೆ ನಾವೆಲ್ಲ ಇದ್ದೇವಲ್ಲ? ನಮಗೆ ಏನೂ ಗೊತ್ತಿಲ್ಲ ಎಂದುಕೊಂಡರೂ ಅವನಿಗಿಂತ ಹೆಚ್ಚಿನ ಶಾಸ್ತ್ರ-ಸೂತ್ರಗಳು ಗೊತ್ತಿವೆ. ಹೀಗಾಗಿ ನಾವು ಆ ಮುಗ್ಗಲಗೇಡಿಯ ಮಗ್ಗಲು ಮುರಿಯಬೇಕೆಂದು ಬಯಸುತ್ತೇವೆ; ಯಾಕೆಂದರೆ ಅವ ನಡೆಸಿದ ಪಾತಕ ಅಂತದ್ದು.

ಜನಸಾಮಾನ್ಯರೇ ಎಷ್ಟೆಲ್ಲ ತಿಳಕೊಂಡಿದ್ದಾರೆ ಅಂದರೆ, “ಕಲ್ಲಿನ ಅಥವಾ ಲೋಹದ ವಿಗ್ರಹಗಳೇ ದೇವರೆಂದಲ್ಲ, ವಿಗ್ರಹಗಳಲ್ಲಿ ನಾವು ದೇವರು ಎಂಬ ಶಕ್ತಿಯನ್ನು ಆವಾಹಿಸಿ ಪೂಜಿಸುತ್ತೇವೆ” ಎಂದು ಮೊನ್ನೆ ಯಾರೋ ಮಾಧ್ಯಮದಲ್ಲಿ ಹೇಳುತ್ತಿದ್ದರು. ಕಣ್ಣಿಗೆ ಕಾಣದಿದ್ದರೂ ತಾನಿದ್ದೇನೆ ಎಂಬ ಅನುಭವವನ್ನು ನೀಡುವ ಆ ಶಕ್ತಿ ಪಾತಕಿಗಳನ್ನು ನೈಸರ್ಗಿಕವಾಗಿ ನಿಗ್ರಹಿಸುತ್ತದೆ. ಹೋರಿಸ್ವಾಮಿಗೆ ಮೆದುಳು ನಿಷ್ಕ್ರಿಯವಾಗಿ ಮಲಗ ಬೇಕಾದ ಪರಿಸ್ಥಿತಿಯೂ ಬರಬಹುದು; ಯಾಕೆಂದರೆ ಅವ ಮಾಡಿದ ಪಾಪ ಅಂಥದ್ದು. ಈ ಲೋಕದಲ್ಲಿ ಮೆದುಳು ನಿಷ್ಕ್ರಿಯವಾಗಿದ್ದರೂ ಹಾಸಿಗೆಯಲ್ಲಿ ವರ್ಷಗಟ್ಟಲೆ ಹುಳವಾಗುವವರೆಗೂ ಮಲಗಿರುವ ಪಾಪಿಗಳೆಷ್ಟಿಲ್ಲ? ಐ.ಸಿಯು ಸಲ್ಲಿ ಮನೆಯವರ ದುಡ್ಡು ನೀರಿನಂತೆ ವ್ಯಯಿಸಲು ಕಾರಣರಾಗಿರುವ ಜನರಿಲ್ಲವೇ? ಆ ಸಾಲಿಗೆ ಮುಂದೊಂದು ಸೇರ್ಪಡೆ ಇದೆಯೆಂಬುದುರಲ್ಲಿ ತುಮರಿಗೆ ಸಂದೇಹವಿಲ್ಲ.

ಸದ್ಯಕ್ಕೆ ಇಷ್ಟೇ ಸಾಕು, ಮತ್ತೊಂದು ದಿನ ತ್ರಾಟಕವಧೆಯ ಕತೆಯನ್ನು ಓದೋಣ, ಬರಲಿಲ್ಲವೆಂದುಕೊಳ್ಳಬೇಡಿ, ಇಲ್ಲೇ ಇರುತ್ತೇನೆ ಮರೆಯಲ್ಲಿ, ಹೋರಿಯ ಹಾರಾಟ ನಿಂತು ’ಕಿರೀಟೋತ್ಸವ’ದೊಂದಿಗೆ ಬೋನಿಗೆ ಸೇರುವವರೆಗೂ ತುಮರಿ ಕಾದಿರುತ್ತಾನೆ.

Thumari Ramachandra

source: https://www.facebook.com/groups/1499395003680065/permalink/1694858710800359/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s