ಠುಸ್ !!!!!! ಆದ ರಾಮಚಂದ್ರಾಪುರ ಮಠ ಕೃಪಾಪೋಷಿತ “ನಕಲಿ CD” ಎಂಬ ನಕಲಿ ಪ್ರಕರಣ. ಹಾಗೂ ಅದರ ಸತ್ಯ ಸಂಗತಿ.

ಠುಸ್ !!!!!! ಆದ ರಾಮಚಂದ್ರಾಪುರ ಮಠ ಕೃಪಾಪೋಷಿತ “ನಕಲಿ CD” ಎಂಬ ನಕಲಿ ಪ್ರಕರಣ. ಹಾಗೂ ಅದರ ಸತ್ಯ ಸಂಗತಿ.

೨೦೧೦ ರ ಅಂದಿನ ಕೋಡಂಗಿ ಅಪ್ಪಂದಿರುಗಳಿರುವ ಬಿ.ಜೆ.ಪಿ ಸರಕಾರದಲ್ಲಿ ಅತ್ಯಂತ. ಪ್ರಭಾವ ಹೊಂದಿರುವ ಮಠ, ಈ ಪ್ರಭಾವವನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬೇಕೊ ಅಷ್ಟನ್ನೂ ಮಾಡಿಕೊಂಡು ೧/೦೪/೨೦೧೦ ರಂದು ದೇವಾಲಯ ಹಸ್ತಾಂತರ ವಿರೋಧಿಗಳನ್ನು ಹತ್ತಿಕ್ಕಲು “ನಕಲಿ CD” ಎಂಬ ನಕಲಿ ಪ್ರಕರಣ ದಾಖಲಿಸಿತು.

ತಮಾಷೆಗಾಗಿ ವೇಷ ಹಾಕಿದ ಆರೋಪಿಯೊಂದಿಗೆ ಇತರ ೧೨ ಜನರು ಆ ಸ್ಥಳದಲ್ಲಿ ಇರದಿದ್ದರೂ, ರಾಘವೇಶ್ವರ ಶ್ರೀಗಳ CD ಹಾಗೂ ಕರ ಪತ್ರ ಹಂಚುತ್ತಿದ್ದಾರೆಂದು ಮೂರನೇ ವ್ಯಕ್ತಿಯ. ಮೂಲಕ ದೂರು ಕೊಡಿಸಿತು.

ತಮಾಷೆಯೆನೆಂದರೆ ತನಿಖಾಧಿಕಾರಿಗಳು ದೂರನ್ನು ಸ್ವೀಕರಿಸಿ ತನಿಖೆ ಪ್ರಾರಂಭವಾಗುವ ಮೊದಲೇ ಮರು ದಿನದ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ ಆಗಿನ ಸಂಪಾದಕರಾಗಿದ್ದ. ಮಠದ ಚಮಚಾ ವಿ.ಕ.ಭಟ್ಟ. ಚಂದಮಾಮನ ಕಥೆ ಬರೆದಂತೆ ನಕಲಿ ಪ್ರಕರಣದ ಕತೆಯನ್ನು ಪ್ರಕಟಿಸಿದರು.

ಈ ಚಮಚಾ ವಿ.ಕ.ಭಟ್ಟನ ಈ ಚಂದ ಮಾಮನ ಕತೆ ನಂಬಿದ ತನಿಖಾಧಿಕಾರಿಗಳು ಬೆಟ್ಟ ಅಗೆದು ಇಲಿ ಹಿಡಿದಂತೆ, ಆರೋಪಿಗಳನ್ನ ಬಂಧಿಸಿ ಆರೋಪಿತರಿಂದ ಕಂಪ್ಯೂಟರ್, ಹಾಗೂ ಮೋಬೈಲ್ ಮತ್ತಿತರ ಸಾಮಗ್ರಿಗಳನ್ನು ವಶಕ್ಕೆ ತೆಗೆದುಕೊಂಡರು ಪ್ರಕರಣ ದಾಖಲಾಗಿ ಈ ವರೆಗೂ ವಶಪಡಿಸಿಕೊಂಡ ವಸ್ತುಗಳಿಂದ ಆರೋಪಿತರು CD ತಯಾರಿಸಿದ್ದಾರೆ, ಎಂಬ ಯಾವ ದಾಖಲೆಯೂ ತನಿಖಾಧಿಕಾರಿಗಳಿಗೆ ಸಿಗಲಿಲ್ಲ . ದೂರುದಾರರು ಹೇಳಿದ ಸ್ಥಳದಲ್ಲೆಲ್ಲ ತನಿಖಾಧಿಕಾರಿಗಳು ಜಾಲಾಡಿದರೂ ಅಂತಹ ಯಾವುದೇ ಪ್ರಕರಣ ನಡೆದ ಕುರುಹೂ ತನಿಖಾಧಿಕಾರಿಗಳಿಗೆ ಸಿಗಲಿಲ್ಲ. ಯಾಕೆಂದರೆ ಆರೋಪಿತರಿಂದ ಅಂತಹ ಘಟನೆ ನಡೆಯಲೇ ಇಲ್ಲ.

ಇದಕ್ಕಾಗಿ ಅಂದಿನ ಸರಕಾರ ಕೋಟ್ಯಾಂತರ ಹಣ ವಿನಿಯೋಗಿಸಿ ವಿಶೇಷ ಅಭಿಯೋಜಕರನ್ನು ನೇಮಿಸಿದ್ದರೂ, ಮಠದಿಂದಾದ ಈ ನಕಲಿ ಪ್ರಕರಣದಿಂದ ಆರೊಪಿತರ ಆರೋಪ ಸಾಬೀತು ಮಾಡಲಾಗಲಿಲ್ಲ.

ಇದರ ಒಳಮರ್ಮ ಅರಿತ ಇಂದಿನ ಘನ ಸರಕಾರ ಮಠದ ಚಂದ ಮಾಮನ ಕಥೆಗೆ ಕಿವಿಕೊಡದೇ ಈ ನಕಲಿ ಪ್ರಕರಣವನ್ನ ಹಿಂಪಡೆದು ಸರಕಾರ ಶ್ರಮ ಹಾಗೂ ಹಣದ ಅಪವ್ಯಯ ತಡೆಗಟ್ಟಿದ ಶ್ಲಾಘನೀಯ ಕ್ರಮ ಕೈಗೊಂಡಿದೆ.

ಅಲ್ಲದೇ ತನಗಾಗದವರನ್ನು ಇಂತಹ ನಕಲಿ ಪ್ರಕರಣ ದಾಖಲಿಸಿ ಮಾನವ ಶ್ರಮ ಹಾಗೂ ಸರಕಾರದ ಹಣವನ್ನು ದುರುಪಯೋಗ ಮಾಡಿದ್ದಲ್ಲದೇ ಸಮಾಜವನ್ನವ ತಪ್ಪು ದಾರಿಗೆ ಎಳೆಯುತ್ತಿರುವ ಈ ಮಠದಿಂದ ಈ ವರೆಗಾದ ನಷ್ಠವನ್ನ ಭರಣಮಾಡಿಸಿಕೊಳ್ಳಬೇಕು. ನಮ್ಮ ಆಗ್ರಹ

Source: Social Media

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s