ಜಾಮೀನಾನಂದೇಶ್ವರ ಹಾರುತಿ ಜೈಲುಪಾಲಾಗುವ ದಿನ ಬಂತು

ಜಾಮೀನಾನಂದೇಶ್ವರ ಹಾರುತಿ ಜೈಲುಪಾಲಾಗುವ ದಿನ ಬಂತು

ಕೆಲವರಿಗೆ ತುಮರಿ ಬರೆಯಲಿಲ್ಲ ಎನಿಸಿದರೆ ಇನ್ನು ಕೆಲವರಿಗೆ ತುಮರಿ ಯಾರೆಂಬ ಚಿಂತೆ! ತುಮರಿ ಯಾರೆಂಬ ಬಗ್ಗೆ ಇಡೀ ಒಂದು ಲೇಖನವನ್ನೇ ಹಿಂದೆ ಬರೆದಿದ್ದೇನೆ, ಮತ್ತೆ ಪ್ರತಿಯೋಬ್ಬರೂ ಕೇಳುತ್ತ ಹೋದರೆ ಹೇಳಿದ್ದೇ ಹೇಳೋ ಕಿಸಬಾಯಿದಾಸನಾಗಲು ತುಮರಿಗೆ ಇಷ್ಟವಿಲ್ಲ. ತುಮರಿ ಯಾರಾದರೇನೆಂತೆ? ಎಲ್ಲಿದ್ದರೇನಂತೆ? ನಿಮ್ಮಿಂದ ಸಾಲ ಪಡಕೊಂಡಿದ್ದಾನೆಯೇ? ನಾನು ದಾಖಲಿಸಿದ ಮಾಹಿತಿಗಳು ಸುಳ್ಳೆಂದುಕೊಳ್ಳುವವರು ಹರಾಮಿ ಕಡೆಯವರೇ ಇರಬೇಕಲ್ಲವೇ?

ತುಮರಿ ದೀಪಾವಳಿಯಲ್ಲಿ ಪಟಾಕಿ ಹಚ್ಚುತ್ತಿರಬೇಕು, ಹೀಗಾಗಿ ಬರೆಯಲಿಲ್ಲ ಎಂದು ಕೆಲವರು ಅಂದುಕೊಂಡಿರಬಹುದು. ನಿಜ ಹೇಳಲೋ? ಭಾರತದಲ್ಲಿ ನೀವೆಲ್ಲ ಸಕ್ರಿಯರಾಗಿ ಅನುಭವಿಸುವ ಹಬ್ಬದ ವಾತಾವರಣವನ್ನು ನಾವು ಮಾನಸಿಕವಾಗಿ ಆಚರಿಸುತ್ತೇವೆ. ಇಲ್ಲಿನ ಸರ್ಕಾರ ಒಂದು ದಿನ ರಜ ಘೋಷಿಸಿದ್ದರಿಂದ ನಮಗೂ ಹಬ್ಬದ ನೆನಪಾಗುತ್ತದೆ. ಹಬ್ಬ, ಹೋಳಿಗೆ, ಅಭ್ಯಂಗದ ಬಾನಿ[ಅಗಲಬಾಯಿಯ ಮಣ್ಣಿನ ಬಾತ್ ಟಬ್], ಬಲೀಂದ್ರ, ಗೋಪೂಜೆ, ನಮ್ಮ ಮಲೆನಾಡ ಕಡೆ ಹಬ್ಬ ಕಳಿಸುವ ಪದ್ಧತಿ ಎಲ್ಲವೂ ನೆನಪಾಗುತ್ತವೆ. ಹಬ್ಬಕ್ಕಾಗಿ ನಾವು ಹಾರಿಬರಲು ಸಾಧ್ಯವೇ?
ಎಲ್ಲರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ದೀರ್ಘಾಯುಷ್ಯ, ಆರೋಗ್ಯ, ಐಶ್ವರ್ಯ, ನೆಮ್ಮದಿಗಳನ್ನು ದಯಪಾಲಿಸಿ ಸುಖದಿಂದಿರಿಸಲಿ ಎಂದು ಪ್ರಾರ್ಥಿಸುತ್ತೇನೆ.

ಅಂದಹಾಗೆ ಇಂದು ಜಾಮೀನಾನಂದರ ಕತೆ. ಈ ಕತೆ ಹೇಳುವುದಕ್ಕೆ ಆರಂಭಿಸಿ ವರ್ಷವೇ ಕಳೆದಿದೆ ಬಿಡಿ. ಪ್ರತಿಯೊಂದಕ್ಕೂ ಜಾಮೀನನ್ನು ಪಡೆದುಕೊಳ್ಳುವುದು ಮತ್ತು ಮಾಡಿದ ಕೆಲಸಗಳನ್ನೆಲ್ಲ ಮಾಡಿಲ್ಲ ಎಂದು ಸಮರ್ಥಿಸಿಕೊಳ್ಳೋದು ನಮ್ಮ ಹಾವಾಡಿಗ ಜಗದ್ಗುರು ಜಾಮೀನಾನಂದೇಶ್ವರ ಹಾರುತಿಗಳ ಕತೆ. ಎಷ್ಟು ಹೋದರೇನಾಯ್ತು, ಪುಗಸಟ್ಟೆ ಸಿಕ್ಕಿದ್ದು, ನಾಳೆ ಸೀಟಲ್ಲೆ ಇದ್ರೆ ಮತ್ತೆ ನಮ್ಮಲ್ಲಿ ಯೋಜನಗಳಿರುತ್ತವೆ; ಮಳ್ಳು ಬೀಳುವವರಂತೂ ಇದ್ದೇ ಇರ್ತಾರೆ. ಇನ್ನು ಕಿವಿಮೇಲೆ ಹೂವಿಟ್ಟುಕೊಂಡು ಮೂರು ನಾಮ ಎಳೆದುಕೊಂಡು “ಮಾಸ್ವಾಮಿ ಬೋಪರಾಕ್” ಎಂದು ಮನದಲ್ಲೇ ವಂದಿಸುತ್ತ ಅಡ್ಡಬೀಳುವವರಿಗಂತೂ ಕಮ್ಮಿ ಇಲ್ಲ.

ನೋಡಿ, ಈಗ ನಾವು ಹಳ್ಳಿ ಕಡೆಗೆ ಪರ ಯಾರು? ವಿರುದ್ಧ ಯಾರು? ಎಂಬುದನ್ನು ತೋರಿಸುವ ಸಲುವಾಗಿ ಕೋಟಿ ಸಹಿಸಂಗ್ರಹ ಅಭಿಯಾನವನ್ನು ಆರಂಭಿಸಿಕೊಂಡಿದ್ದೇವೆ. ಮಿಕ್ಕಿದ ಅಡ್ಡವೇಷ ಡೊಂಬರಾಟಗಳೆಲ್ಲ ಒಂದು ಹಂತಕ್ಕೆ ಮುಗೀತು. ಹೀಗಾಗಿ ಇನ್ನು ಬೇರೆ ಯಾವೆಲ್ಲ ಮಾರ್ಗಗಳಿವೆ ಎಂದು ನೋಡಬೇಕಲ್ಲ? ಸಹಿ ಸಂಗ್ರಹಿಸಿದ್ದರೆ ಪರವಾಗಿರಲಿಲ್ಲ; ಹಾಗಿಲ್ಲ, ಒತ್ತಾಯ ಪೂರ್ವಕವಾಗಿ, ಬೆದರಿಕೆ ಮತ್ತು ಬಹಿಷ್ಕಾರಗಳ ಭಯವೊಡ್ಡಿ ಬಲವಂತವಾಗಿ ಸಹಿಗಳನ್ನು ಹಾಕಿಸಿಕೊಳ್ಳುವುದು ನಡೆಸಿದ್ದೇವೆ ನಾವು. ನಾವು ಅಂದ್ರೆ ಜಾಮೀನಾನಂದರು ಗೊತ್ತಾಯ್ತಲ್ಲ?

ನಮ್ಮ ವಿರೋಧಿಗಳು ಇನ್ನೊಂದು ಕೇಸು ಹಾಕ್ತಾರಂತೆ ಅಂತ ಸುದ್ದಿ ಸಿಕ್ಕಿದ್ದೇ ಸಿಕ್ಕಿದ್ದು, ಪಾಪ ಸಿಕ್ ಸಿಕ್ದೋರ್ನೆಲ್ಲ ಎತ್ತಾಕ್ಕೊಂಡೋಗಿ ನಾಲ್ಕು ಗೋಡೆ ಮಧ್ಯೆ ಉಲ್ಟಾ ಸೀದಾ ಮಾಡಿ, ಹೊರಗೆ ಹೋಗುವಾಗ ಅವರು ಬದುಕಿದೆಯಾ ಬಡಜೀವವೆ ಎಂದುಕೊಳ್ಳುವಂತಾಗಬೇಕು, ಹಾಗೆ ಮಾಡ್ತಿದ್ದೇವೆ ನಾವು ಜಾಮೀನಾನಂದರು. ಸಂದೇಹ ಇರುವವರೆಡೆಗೆ ಬೊಟ್ಟು ಮಾಡಿದರೆ ಸಾಕು, ನಮ್ಮ ತಲೀಬಾನಿಗಳು ಅಲ್ಲಿಗೆ ಖುದ್ದಾಗಿ ಹಾಜರಾಗಿ ಕಾಶ್ಮೀರಿ ಪಂಡಿತರನ್ನು ಪಾಕಿಸ್ತಾನಿ ಭಯೋತ್ಪಾದಕರು ಎತ್ತಾಕ್ಕೊಂಡೋದ ಹಾಗೆ ಎತ್ತಾಕೊಂಡೋಗ್ತಾರೆ. ನಂತರ ಅದೇನ್ಮಾಡ್ಬೇಕೋ ಮಾಡಿಯೇ ಕಳಿಸೋದು, ಅದು ನಿಮಗೆಲ್ಲ ಈಗಾಗಲೇ ಬಹಿರಂಗ ಆಗಿರೋ ವಿಷಯ, ನಾವು ಬಿಡಿಸಿ ಹೇಳಬೇಕೇ?

ಹೀಗಾಗಿ ಹೊಟ್ಟೆಪಾಡಿಗೆ ಅಲ್ಲಿ ಇಲ್ಲಿ ಸಂಗೀತ, ಭರತನಾಟ್ಯ ಇನ್ನಿತರ ಕೆಲವು ಪ್ರಕಾರಗಳಲ್ಲಿ ಕೆಲಸ ಮಾಡ್ತಿರೋ ಮಹಿಳೆಯರನ್ನೆಲ್ಲ ನಾವು ನಮ್ಮ ಅಂಕಿತದಲ್ಲಿ ಇರುವಂತೆ ನೋಡಿಕೊಳ್ತಿದ್ದೇವೆ. ಅವರಲ್ಲಿ ಎಷ್ಟು ಹಣ ಇರಲು ಸಾಧ್ಯ? ಅಬ್ಬಬ್ಬ ಅಂದ್ರೆ ಇಲ್ಲಿವರೆಗೆ ದುಡಿದದ್ದಕ್ಕೆ ಒಂದು ಸಣ್ಣ ಕಾರು ಬೀರು ಖರೀದಿ ಮಾಡಿರ್ಬಹುದು. ಕಾರಿನ ಕಂತು ಕಟ್ಟೋದಕ್ಕೆ ಮತ್ತೆಷ್ಟು ಸಲ ಹಾಡು ಹೇಳಬೇಕೋ, ನಾಟ್ಯ ಮಾಡಬೇಕೋ ಗೊತ್ತಿಲ್ಲ. ಹೀಗಿರ್ವಾಗ ನಮ್ಮ ವಿರುದ್ಧವೆಲ್ಲ ಅಂತವರು ತಿರುಗಿ ಬಿದ್ರೆ ಬದುಕೋದುಂಟೆ? ಛೆ ಛೆ, ಅಂತವರನ್ನೆಲ್ಲ ಮಟ್ಟಹಾಕಲಿಕ್ಕೆ ಗೊತ್ತಿಲ್ಲದಿದ್ರೆ ನಾವು ಇಷ್ಟುದಿನ ಏಕಾಂತ ಮಾಡ್ತಾನೇ ಇರ್ಲಿಲ್ಲ ಬಿಡಿ.

ಟಾಂಟ್ ಕೊಡೋದು ಹಂಗಿಸೋದು ಅಂದ್ರೆ ನಮಗೆ ಮೊದಲಿಂದ ರಕ್ತಗತವಾಗಿ ಬಂದಿದ್ದು. ಹೀಗಾಗಿ ನಾವು ಸ್ವಾಮಿಯಾದ್ರೇನಾಯ್ತು? ಕಾವಿ ಧರಿಸಿದರೇನಾಯ್ತು? ನಮ್ಮ ಸಾಮಾನಿನ ಸಮಸ್ಯೆ ನಮಗಷ್ಟೇ ಗೊತ್ತು. ನಮ್ಮ ಸಾಮಾನಿಗೆ ಹೊತ್ತಿಂದೊತ್ತಿಗೆ ಇರದಿದ್ರೆ ಆಗೋದೇ ಇಲ್ಲ. ನಾವು ಹೇಳಿದ್ದೇವಲ್ಲ; ತ್ರಿಕಾಲ ಲಿಂಗ ಪೂಜೆ ಆಗಲಿಕ್ಕೇ ಬೇಕು.

ಅದ್ಕಾಗೆ ನಾವಲ್ಲಿ ರುದ್ರ ಮಾಡಲಿಕ್ಕೆ ಒಂದಷ್ಟ್ ಜನರಿಗೆ ಹೇಳಿದ್ದು. ಅವರು ಅವರ ಪಾಡಿಗೆ ಮಾಡ್ತಾ ಇರ್ಲಿ. ನಮ್ಮ ಜನ “ಮಾಸ್ವಾಮ್ಯೋರು ಬಹಳ ದೊಡ್ಡ ಧಾರ್ಮಿಕ ಕಾರ್ಯ ನಡೆಸ್ತಿದಾರೆ” ಅಂದ್ಕೊಂಡು ಮಠಕ್ಕೆ ಬರ್ತಾ ಇರಬೇಕು; ಕೋಟಿಗಳ ಲೆಕ್ಕದಲ್ಲಿ ನಮ್ಮ ಖಜಾನೆ ತುಂಬ್ತಾ ಇರಬೇಕು. ಇತ್ತ ನಾವು ನಮ್ಮ ಪಾಡಿಗೆ ಏಕಾಂತದಲ್ಲಿ ಲಿಂಗಾರಾಧನೆ ನಡೆಸ್ತಾ ಸಖಿಯರಿಗೆ ಕೊಡೋದನ್ನು ಕೊಡ್ತಾ ಇರಬೇಕು.

ಈಗೀಗ ನಮ್ಮ ವಿರೋಧಿಗಳು ತೀರಾ ಹೆಚ್ಚಾದ ವ್ಯಾಪಾರ ದಿನ ಕಳೆಯೋದೇ ಕಷ್ಟ ಆಗ್ಬುಟ್ಟಿದೆ ನಮ್ಗೆ. ಒಂದ್ ದಿನ ಮುಂದಕ್ಕೆ ಹೋದ್ರೂ ನಮಗೆ ಅಷ್ತಷ್ಟೇ ಸಮಾಧಾನ. ಹೀಗಾಗಿ ಅದಕ್ಕೇನ್ ಬೇಕೋ ಎಲ್ಲ ಯೋಗ್ಯ ವ್ಯವಸ್ಥೆ ಮಾಡಿ ಅಂತ ಚಂಬು ಲೋಟಗಳನ್ನಿಟ್ಟುಕೊಂಡು ಮಾತಾಡ್ಬಿಟ್ಟಿದ್ದೇವೆ ನಾವು.

ಉರಿ ಉರಿ ಬೇಸಗೇಲಿ ಸಕ್ಕರ ಪಾನಕ ಎಷ್ಟೇ ಕುಡದ್ರೂ ಸಮಾಧಾನ ಆಗೋದಿಲ್ಲ ಅಲ್ವಾ? ಆ ಸಮಯದಲ್ಲಿ ನೀರಿನ ಚಂಬು ಎಂಬುದು ಆಪತ್ಕಾಲದ ಬಂಧು ಇದ್ದಂತೆ. ಚಂಬು ಇರಬೇಕು, ಚಂಬಿನಲ್ಲಿ ಸಾಕಷ್ಟು ನೀರೂ ಇರಬೇಕು. ಹಾಗಾಗೇ ನಾವು ದೊಡ್ಡ ಬಾಯಿ ಚಂಬನ್ನೇ ಪಕ್ಕಕ್ಕೆ ಇರಿಸಿಕೊಂಡುಬಿಟ್ಟಿದ್ದೇವೆ. ನೀರಿನ ದಾಹ ಆದ ತಕ್ಷಣ “ಚಂಬು” ಅಂತ ನೆನಪಿಸಿಕೊಂಡ್ರೆ ಸಾಕು. ನಮ್ಮ ಮಹಾಮಂತ್ರಿ ಬಾವಯ್ಯ ಚಂಬಿಗೆ ನೀರನ್ನು ತುಂಬಿಸಿಡುವ ವ್ಯವಸ್ಥೆ ಮಾಡ್ತಾರೆ. ನೀರು ಖಾಲಿ ಆಯ್ತೆಂದು ಸೂಚನೆ ಸಿಕ್ಕಿದ ತಕ್ಷಣವೇ ಮತ್ತೆ ನೀರನ್ನು ಹಾಕಿಡ್ತಾರೆ; ಹೀಗಾಗಿ ನೀರು ಖಾಲಿ ಆಗೋದೇ ಇಲ್ಲ.

ಚಂಬಿಗೆ ಯಾವಾಗ ನೀರು ಬಂತೋ ಅದರಿಂದ ನಮಗೂ ದಾಹ, ಆಯಾಸ ಪರಿಹಾರ ಆಯ್ತು ಅಂತಲೇ ಲೆಕ್ಕ. ಸಮಸ್ಯೆ ಇಲ್ಲಿಯವರೆಗೆ ಇದ್ದ ಹಾಗಿಲ್ಲ ಈಗ. ಈ ಸರ್ತಿ ಸರಿಯಾಗಿ ಮಳೆ ಬೀಳಲಿಲ್ಲ ನೋಡಿ. ಹಳ್ಳಿಕಡೆ ಜನ ನಮ್ಮ ಬಾವೀಲೇ ನೀರಿಲ್ಲ ಇನ್ನು ನಿಮ್ಮ ಚಂಬಿಗೆ ಪದೇ ಪದೇ ಕೇಳಿದರೆ ಎಲ್ಲಿಂದ ನೀರು ಕಳಿಸೋದು ಎನ್ನುತ್ತಿದ್ದಾರಂತೆ.

ಇತ್ತ ನಮಗೆ ಬೇಸಿಗೆ ಬರುವವರೆಗೆ ತಾಳಲಾರದಷ್ಟು ಧಗೆ ಹತ್ತಿಕೊಂಡಿದೆ. ಗೊತ್ತಾಯ್ತಲ್ಲ? ಅದು ಒಳಗಿನ ಧಗೆ. ಮಾಯಾನಗರಿಯಲ್ಲಿ ಚಂಡಮಾರುತದ ಪರಿಣಾಮವಾಗಿ ಶೀತದ ಗಾಳಿ, ಪಿರಿ ಪಿರಿ / ರಿಪ್ ರಿಪಿ ಮಳೆ ಇದೆಲ್ಲ ಇದ್ರೂ ನಮಗೆ ಮಾತ್ರ ವಿಪರೀತ ಧಗೆ ಆಗ್ತಾ ಉಂಟು. ಏನು ಹೇಳಬೇಕೆಂದೇ ಗೊತ್ತಾಗ್ತಾ ಇಲ್ಲ. ಏನಾದ್ರೂ ಹೇಳಬೇಕಲ್ಲ ಎಂಬ ಕಾರಣಕ್ಕೆ ನಮ್ಮ ವಿರೋಧಿಗಳಲ್ಲಿ ರೋಷ ಉಕ್ಕಿ ಹರೀಬೇಕು, ಆದ್ರೆ ಏನೂ ಮಾಡವಂತಾಗಬಾರದು ಎಂಬ ರೀತಿಲಿ ನಾವು ಭಾಷಣ ಕೊರೀತೇವೆ.

ಈಗ ನಮ್ಮ ಕಲಾವಿದರ ಬಳ್ಗದಲ್ಲಿ ಎಳಬರ ಕತೆಯೆಲ್ಲ ಮುಗೀತು, ಹಳಬರನ್ನು ಹುಡುಕಿ ಅವರಿಗೊಂದು ಶಾಲು ತುರಾಯಿ ಹಾಕೋ ವ್ಯವಸ್ಥೆಗೆ ಮುಂದಾಗಿದ್ದೇವೆ. ಅವರಲ್ಲಿ ನಿಜವಾದ ಪ್ರತಿಭೆಯಿದ್ದ್ರೂ ಯಾವುದೇ ಲಾಬಿ ಮಾಡದ್ದರಿಂದ ಜನ್ಮದಲ್ಲಿ ಇಲ್ಲಿವರೆಗೆ ಪಾಪ ಹೆಚ್ಚಿನ ಪ್ರಶಸ್ತಿ-ಸನ್ಮಾನ ಸಿಕ್ಕಿರೋದಿಲ್ಲ ನೋಡಿ, ಅಂತವರನ್ನೆಲ್ಲ ಹುಡುಕಿ, ಸನ್ಮಾನ ಮಾಡಿ, ಅವರನ್ನೆಲ್ಲ ನಮ್ಮ ಅಭಿಮಾನಿ ಬಳಗಕ್ಕೆ ಸೇರಿಸಿಕೊಳ್ತಾ ಇದ್ದೇವೆ. ಅದಕ್ಕೆ ನಮ್ಮ ಆಸ್ಥಾನ ಕವಿ ಮಹಾಮಂಗೋಪಾಧ್ಯಾಯರು ಬಹಳ ಮುತುವರ್ಜಿ ವಹಿಸ್ತಿದ್ದಾರೆ.

ಏನಾದ್ರೂ ಮಾಡ್ಲೇಬೇಕಲ್ಲ? ಆಲ್ಲಂತೂ ಆ ತುಮರಿ ಇದ್ದದ್ದನ್ನೆಲ್ಲ ಇದ್ದಹಾಗೆ, ಬಯಾಪ್ಸಿ-ಎಮ್ ಆರ್ ಐ ಮಾಡಿ, ಯದ್ವಾತದ್ವಾ ಬರೀತಿದಾನಂತೆ. ಅವನು ಬರ್ದಿರೋದನ್ನ ಕಳ್ಳಹೆಜ್ಜೆಗಳಲ್ಲಿ ನಾವೂ ಓದ್ತೇವೆ, ಆದರೆ ನಮಗೇನೂ ಗೊತ್ತಿಲ್ಲ ಅಂತ ಎಂದಿನಂತೆ ಸುಳ್ಳು ಹೇಳ್ತೇವೆ.
ತುಮರಿ ಮುಂದೇನೋ ’ತ್ರಾಟಕಾಸುರ ವಧೆ’ ಎಂಬ ಕತೆಯನ್ನು ಬರೀತಾನಂತೆ. ರಾಮಾಯಣದಲ್ಲಿ ತಾಟಕೆಯನ್ನು ನೀವು ಕೇಳಿದ್ದೀರಲ್ಲ? ಇದು ತಾಟಕೆಯಲ್ಲ, ತ್ರಾಟಕ…ತ್ರಾಟಕಾಸುರ ಅಂತಂತೆ. ಅದೇನೇನ್ ಬರೀತಾನೋ ಗೊತ್ತಿಲ್ಲ. ಮಾತೆತ್ತಿದರೆ ಲೇಖನಗಳಲ್ಲಿ ಅರ್ಜುನ ಸನ್ಯಾಸಿಯ ಬಗ್ಗೆ ಬರೀತಿದ್ದ. ರಾಮಾಯಣದಲ್ಲೂ ರಾವಣ ಸನ್ಯಾಸಿ ಇದ್ದನಲ್ಲವೇ?

ಬಂಗಾರದ ಜಿಂಕೆ ಸರಿಯಿಲ್ಲ; ಅದು ಮಾಯಾವಿಗಳ ಮಾಯಾವೇಷ, ಬೇಡ, ಅಪಾಯಕ್ಕೆ ಆಸ್ಪದ ಕೊಡುತ್ತದೆ ಎಂದು ರಾಮ ತಿಳಿಹೇಳಿದರೆ ಮತಿಗೆಟ್ಟ ಸೀತೆ ಕೇಳಲಿಲ್ಲ. ತಂದು ಕೋಡ್ತೀಯೋ ಇಲ್ಲ ಸಾಯಲೋ ಎಂದು ಕೇಳಿಬಿಟ್ಟಳು. ಲಕ್ಷ್ಮಣನನ್ನು ಕಾವಲಿಗೆ ಬಿಟ್ಟು ರಾಮ ಜಿಂಕೆಯ ಬೆನ್ನಟ್ಟಿ ಅದನ್ನು ಹಿಡಿಯಲು ಹೋದ. ರಾಮನ ದನಿಯನ್ನು ಅನುಕರಿಸಿ ಕೂಗಿದ ಮಾರೀಚನ ದನಿಗೆ ಸೀತೆ ನಡುಗಿದಳು. ರಾಮನಿಗೇನಾಯ್ತು ಎಂದು ನೋಡಿಬರಲು ಲಕ್ಷ್ಮಣನಿಗೆ ಆಗ್ರಹಮಾಡಿದಳು.

ಸೀತೆಗೆ ಲಕ್ಷ್ಮಣ ಸಾರಿ ಸಾರಿ ಹೇಳಿದ್ದ. ಬೇಡ, ಅದು ರಾಮನ ಕೂಗಿರಲಿಕ್ಕಿಲ್ಲ, ಹೋಗೋದಿಲ್ಲ ಆಂತ. ಸೀತೆ ಕೇಳಲಿಲ್ಲ. ಹೋಗಲೇಬೇಕೆಂದು ಆಜ್ಞೆ ಮಾಡಿದಳು. ಅತ್ತಿಗೆಯ ಆಜ್ಞೆಗೆ ವಿರೋಧಿಸಲಾರದೆ ಇತ್ತ ಧರಿ ಅತ್ತ ಪುಲಿ ಎಂಬಂತಾಗಿ ಲಕ್ಷ್ಮಣ ಹೊರಟ, ಹೊರಡುವ ಮುನ್ನ ಏಳು ತತ್ವಗಳ ರೇಖೆಗಳನ್ನು ನೆಲದಮೇಲೆ ಎಳೆದ. ಯಾವುದೇ ಪ್ರಾಣಿಯಾಗಲೀ, ಪಶು-ಪಕ್ಷಿಯಾಗಲೀ, ಘೋರ ರಕ್ಕಸ-ಪಿಶಾಚ ಬಾಧೆಯಾಗಲೀ ಅತ್ತಿಗೆಗೆ ತಾಗದಿರಲೆಂದು ಅಗ್ನಿಯಲ್ಲಿ ಪ್ರಾರ್ಥಿಸಿದ.
ಲಕ್ಷ್ಮಣ ಹೊರಟು ಹೋದದ್ದನ್ನು ಖಾತ್ರಿ ಪಡಿಸಿಕೊಂಡು ರಾವಣ ಸನ್ಯಾಸಿ ವೇಷದಲ್ಲಿ ಭಿಕ್ಷೆಗೆ ಬಂದ.

ರಾಮನ ಬಿಡಾರದ ಹೊರಗೆ ನಿಂತು “ಶಂಭೋ ಮಹಾದೇವ, ಭಿಕ್ಷೆ” ಎಂದ. ರಾವಣ ಶಂಭೋ ಎಂದರೆ ನಮಗೆ ಚಂಬು ನೆನಪಾಗುತ್ತದೆ. ಪರ್ಣಕುಟೀರದ ಒಳಗೆ ನುಗ್ಗಲು ಹಲವಾರು ಬಾರಿ ಪ್ರಯತ್ನಿಸಿದ. ಕರೆಂಟ್ ಹೊಡೆಸಿಕೊಂಡ ಕಾಗೆಯ ಹಾಗಾಗಿ ಹೊರಗೇ ನಿಂತು ಮತ್ತೆ ಮತ್ತೆ ಕೂಗಿದ. ಸನ್ಯಾಸಿ ಅಪಾಯಕಾರಿಯಲ್ಲ ಎಂಬ ಭಾವನೆಯಿಂದ ಸೀತೆ ಮನೆಯೊಳಗೆ ಬಂದು ಭಿಕ್ಷೆ ಸ್ವೀಕರಿಸುವಂತೆ ವಿನಂತಿಸಿದರೆ ಅವಳೇ ಹೊರಗೆ ಬಂದು ಭಿಕ್ಷೆ ನೀಡಬೇಕೆಂದ. ಸೀತೆ ಹೊರಗೆ ಬಂದಳು. ಸನ್ಯಾಸಿ ತನ್ನ ಕಾವಿಯನ್ನು ಕಿತ್ತೆಸೆದು ರಾವಣರೂಪವನ್ನು ತೋರಿಸಿ ಎಳೆದೊಯ್ದ.
ಹಾದಿಯಲ್ಲಿ ಜಟಾಯು ಸಂಪಾತಿಗಳಂತ ಮತಿಯುಳ್ಳ ಪಕ್ಷಿಗಳು ರಾವಣನ ವಿಮಾನವನ್ನು ಅಡ್ಡಗಟ್ಟಿ ತ್ರಾಸುಕೊಟ್ಟವು. ಸೀತೆಯನ್ನು ಕದ್ದೊಯ್ತಿದ್ದಾನೆ ಎಂಬುದು ಗೊತ್ತಾಗಿತ್ತು ಅವುಗಳಿಗೆ. ಅವುಗಳ ಹಾರಾಟವನ್ನು ನಿಲ್ಲಿಸಲು ರೆಕೆ-ಪುಕ್ಕಗಳನ್ನೇ ಕತ್ತರಿಸಿ ಹಾಕಿದ ರಾವಣ.

ಆ ತುಮರಿ ನಮ್ಮನ್ನು ರಾವಣನಿಗೆ ಹೋಲಿಸಬಹುದು. ನಮ್ಮ ವಿರೋಧಿಗಳನ್ನು ಕೆಲವರನ್ನು ಜಟಾಯು-ಸಂಪಾತಿಗಳಿಗೆ ಹೋಲಿಸಬಹುದು. ಅದಕ್ಕೆಲ್ಲ ನಾವು ಜಗ್ಗೋದುಂಟೇ? ಛೆ ಛೆ ಎಂತದ್ದನ್ನೆಲ್ಲ ಕಂಡವರು ನಾವು. ಹಾರಾಡೋದಕ್ಕೆ ಹೋರಾಡೋದಕ್ಕೆ ಅವಕಾಶ ಕೊಟ್ರೆ ಈ ಜನ್ಮ ಪೂರ್ತಿ ಹೋರಾಡ್ತಾನೆ ಇರ್ತೇವೆ ನಾವು. ಜನರಿಗೆ ಮಾತ್ರ ನಾವು ತಪ್ಪು ಮಾಡಿಲ್ಲ ಎಂದು ಸಮರ್ಥನೆ ಮಾಡಿ ತೋರಿಸಬೇಕು; ತಪ್ಪು ಮಾಡಿದ್ದು ಸುಳ್ಳಲ್ಲ ಎಂದು ಅವರಿಗೆಲ್ಲ ಈಗಾಗಲೇ ಗೊತ್ತಿದ್ರೂ ಕಾನೂನು ರೀತ್ಯಾ ಜಾಮೀನಾನಂದ ಜಗದ್ಗುರುಗಳು ದೋಷಮುಕ್ತರು ಎಂದು ಸರ್ಟಿಫಿಕೇಟ್ ಪಡೆದುಕೊಳ್ಳದೇ ಬಿಡೋದಿಲ್ಲ ನಾವು.

ನಮ್ಮ ವಿರೋಧಿಗಳನ್ನು ಬಿಟ್ಟು ಎಲ್ಲರಿಗೂ ಕ್ಷೇಮ ಅಂತ ಅಪ್ಪಣೆಯಾಗ್ತದೆ

ಬರೇ ಕಾಮ
ಬರೇ ಕಾಮ.

Thumari Ramachandra

source: https://www.facebook.com/groups/1499395003680065/permalink/1683087471977483/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s