‘ನಿತ್ಯಾನಂದ ಕೇಸ್’ನಲ್ಲಿ ಆಗಿದ್ದೇನು..? ‘ರಾಘವೇಶ್ವರ್ ಶ್ರೀ ಕೇಸ್’ನಲ್ಲಿ ಆಗ್ತಿರೋದೇನು..?

Asianet News Tuesday 03 November 2015 06:18 pm IST Karnataka

‘ನಿತ್ಯಾನಂದ ಕೇಸ್’ನಲ್ಲಿ ಆಗಿದ್ದೇನು..? ‘ರಾಘವೇಶ್ವರ್ ಶ್ರೀ ಕೇಸ್’ನಲ್ಲಿ ಆಗ್ತಿರೋದೇನು..?

ಇಲ್ಲಿದೆ ಇಂಟರೆಸ್ಟಿಂಗ್ ವರದಿ

ಬೆಂಗಳೂರು(ನ.03): ಎರಡೆರಡು ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ವಿರುದ್ದ ಸ್ವಾಮೀಜಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಐಡಿ ಅಧಿಕಾರಿಗಳು ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಹೀಗಿದ್ರೂ ಶ್ರೀಗಳು ಪೀಠತ್ಯಾಗ ಮಾಡಿಲ್ಲ.. ಈ ಹಿಂದೆ ನಿತ್ಯಾನಂದ ಪ್ರಕರಣದಲ್ಲಿದ್ದ ತನಿಖೆಯ ಚುರುಕು ಇಲ್ಲಿ ಕಾಣುತ್ತಿಲ್ಲ.. ಈ ಎರಡೂ ಪ್ರಕರಣದ ತುಲನಾತ್ಮಕ ವರದಿ ಇಲ್ಲಿದೆ.

ನಿತ್ಯಾನಂದ ಕೇಸ್​ನ ತನಿಖೆಯಲ್ಲಿದ್ದ ಪ್ರಗತಿ ಎರಡೆರಡು ಅತ್ಯಾಚಾರ ಆರೋಪ ಎದುರಿಸುತ್ತಿರುವ ರಾಘವೇಶ್ವರ ಪ್ರಕರಣದಲ್ಲಿ ಕಾಣುತ್ತಿಲ್ಲ. ತನಿಖೆಯ ಹಾದಿ ಚುರುಕಾಗಿಲ್ಲ. ನಿತ್ಯಾನಂದನ ಕೇಸ್​ಗೂ ರಾಘವೇಶ್ವರಗೂ ವ್ಯತ್ಯಾಸವಿದೆ ಅಂತಾ ನಿನ್ನೆ ರಾಘವೇಶ್ವರ ಶ್ರೀಗಳ ವಿರುದ್ಧ ಕಿಡಿಕಾರಿದ ಕೊಳದ ಮಠದ ಶಾಂತವೀರ ಅಭಿಪ್ರಾಯಪಟ್ಟಿದ್ದಾರೆ.

ಬೈಟ್: ಶಾಂತವೀರ ಮಹಾಸ್ವಾಮಿ, ಕೊಳದ ಮಠ ಮಹಾಸಂಸ್ಥಾನ

ರಾಘವೇಶ್ವರ ಶ್ರೀ ಪ್ರಕರಣ

2014ರ ಆಗಸ್ಟ್ 27ರಂದು ರಾಘವೇಶ್ವರ ಶ್ರೀಗಳ ವಿರುದ್ದ ದೂರು ದಾಖಲಾಗಿದೆ. ಐಪಿಸಿ 376 (2)(f), ಐಪಿಸಿ 376 (2)(n)ಮತ್ತು ಐಪಿಸಿ 508 ಅಡಿಯಲ್ಲಿ ದೂರು ದಾಖಲಾಗಿದೆ. ದೂರು ದಾಖಲಾಗಿ ಒಂದು ವರ್ಷ ಕಳೆದರೂ ಇನ್ನೂ ಬಂಧನವಾಗಿಲ್ಲ. ವಿಚಾರಣೆಗೆ ನೋಟಿಸ್ ನೀಡಿದಾಗಲೆಲ್ಲಾ ಕಾರಣ ನೀಡಿ ಗೈರು ಹಾಗುವ ತಂತ್ರ ಅನುಸರಿಸಲಾಗುತ್ತಿದೆ. ಶ್ರೀಗಳು ಕಣ್ಣೆದುರಿಗೇ ಇದ್ರೂ ಪೊಲೀಸರು ಶ್ರೀಗಳ ಬಂಧನಕ್ಕೆ ಮುಂದಾಗಿಲ್ಲ. ಇಲ್ಲಿ ಸಂತ್ರಸ್ಥೆಯೇ ಇಲ್ಲಿ ನೇರ ದೂರುದಾರರಾಗಿದ್ದಾರೆ. ಸಂತ್ರಸ್ಥೆಯ ಮಗಳು ಮತ್ತು ಗಂಡ ಸೇರಿದಂತೆ 40 ಕ್ಕು ಹೆಚ್ಚು ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಕೂಡ ಶ್ರೀಗಳ ಲೈಂಗಿಕ ಕ್ರಿಯೆಯ ಬಗ್ಗೆ ಪರೀಕ್ಷಾ ವರದಿಯಲ್ಲಿ ಸಾಭೀತು ಮಾಡಿದೆ.

ನಿತ್ಯಾನಂದ ಪ್ರಕರಣ

ಮಾರ್ಚ್ 2010ರಲ್ಲಿ ಖಾಸಗಿ ವಾಹಿನಿಯಲ್ಲಿ ನಿತ್ಯಾನಂದ ಲೀಲೆ ಪ್ರಸಾರವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಡದಿ ಪೊಲೀಸರಿಂದ ಪ್ರಕರಣ ಐಪಿಸಿ 376 ಅಡಿ ರೇಪ್ ಕೇಸ್, ಐಪಿಸಿ 377 ಅಡಿ ಅಸಂಭಾವಿಕ ಲೈಂಗಿಕ ಕ್ರಿಯೆ, ಐಪಿಸಿ 120B ಅಡಿ ಕ್ರಿಮಿನಲ್ ಸಂಚು, ಐಪಿಸಿ 506 ಅಡಿ ಪ್ರಾಣ ಬೆದರಿಕೆ ಮತ್ತು ಐಪಿಸಿ 420 ಅಡಿ ವಂಚನೆ ಪ್ರಕರಣ ದಾಖಲಾಗಿದೆ. ನಿತ್ಯಾನಂದ ಪ್ರಕರಣದಲ್ಲಿ ನಿತ್ಯಾನಂದನ ರಾಸಲೀಲೆಯ ದೃಶ್ಯಗಳೇ ಪ್ರಕರಣದ ಪ್ರಾಥಮಿಕ ಹಂತದ ಸಾಕ್ಷಿಗಳಾಗಿದ್ದವು. ನಿತ್ಯಾನಂದನ ರಾಸಲೀಲೆ ಬಗ್ಗೆ ಖುದ್ದು ಕಾರು ಚಾಲಕ ಲೆನಿನ್ ಕುರುಪ್ಪನ್ ದೂರು ನೀಡಿದ್ದ ಅಲ್ಲದೆ ಹೇಳಿಕೆ ನೀಡಿದ್ದ. ಆದ್ರೆ ಸಂತ್ರಸ್ಥೆ ಎಲ್ಲಿಯೂ ಕೂಡ ದೂರು ದಾಖಲಿಸಿರಲಿಲ್ಲ. ಹೀಗಿದ್ರೂ ದೂರು ದಾಖಲಾದ 49 ದಿನದಲ್ಲಿ ಅಂದ್ರೆ 21 ಏಪ್ರಿಲ್ 2010 ನಿತ್ಯಾನಂದರನ್ನ ಅರೆಸ್ಟ್ ಮಾಡಲಾಗಿತ್ತು.

ನಿತ್ಯಾನಂದ ಪ್ರಕರಣದ ತನಿಖೆಯಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ತೋರಿದ ಮುತುವರ್ಜಿಯನ್ನು ರಾಘವೇಶ್ವರ ಶ್ರೀಗಳ ವಿರುದ್ಧರ ಕೇಸ್​ನಲ್ಲಿ ತೋರುತ್ತಿಲ್ಲ ಅನ್ನೋ ಅನುಮಾನ ವ್ಯಕ್ತವಾಗಿದೆ. ತನಿಖೆಯ ಹಾದಿ ದಾರಿ ತಪ್ಪಿಸಲು ಷಡ್ಯಂತ್ರ ನಡೆದಿದೆ ಎಂಬ ಶಂಕೆಯೂ ಇದೆ. ಇಷ್ಟರ ನಡುವೆ ರಾಘವೇಶ್ವರ ಶ್ರೀಗಳ ಪೀಠತ್ಯಾಗಕ್ಕೆ ಒತ್ತಡ ಹೆಚ್ಚುತ್ತಿವೆ, ಆದ್ರೆ ಶ್ರೀಗಳು ಪೀಠತ್ಯಾಗದ ಬಗ್ಗೆ ಚಕಾರವೆತ್ತುತ್ತಿಲ್ಲ.

source: http://www.suvarnanews.tv/news/Karnataka/nityananda-versus-raghaveshwara-sree-15583

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s