ಹೇ ರಾಮ: ರಾಮ ರಾಮ – ನಿನಗಿದು ಸರಿಯೆನಿಸುದೇ?

ಹೇ ರಾಮ: ರಾಮ ರಾಮ – ನಿನಗಿದು ಸರಿಯೆನಿಸುದೇ?

1. ಲೋಕ ಪ್ರಸಿದ್ಧಿಗೆ ಹೊರಟಿದ್ದ ಗೋಮುಖದಂತೆ ಸದಾ ನಗುಮೊಗದಿಂದ ಊರೂರು ಸುತ್ತಾಡಿಕೊಂಡಿದ್ದ ಸನ್ಯಾಸಿಯೊಬ್ಬನ ಮೇಲೆ ತನ್ನದೇ ಆಪ್ತಶಿಷೈ ಅತ್ಯಾಚಾರದ ಆರೋಪ ಹೊರಿಸಿದಳು – ಇದು ಸತ್ಯವೇ? ಇದು ಸರಿಯೇ?

2. ಸನ್ಯಾಸಿಯ ಬಗ್ಗೆ ಆರೋಪ ಬಂದಾಗ ಮಠದ ರೀತಿ-ರಿವಾಜುಗಳಿಗೆ ಸಂಬಂಧಿಸಿದ ವಿಚಾರಗಳು ಚರ್ಚೆಗೆ ಗ್ರಾಸವಾದವು. ಕನ್ಯಾಸಂಸ್ಕಾರದ ಮೂಲಕ ಮಹಿಳೆಯರನ್ನು ಮಠದಲ್ಲಿ ಸನ್ಯಾಸಿಯು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದಾನೆ ಎಂಬ ಅರೋಪವು ಬಂತು. ಅದಕ್ಕೆ ಮಠದ ವಕ್ತಾರರು ವಿವಾದ ಪ್ರಾರಂಭದಲ್ಲಿ ಮಠದಲ್ಲಿ ಕನ್ಯಾಸಂಸ್ಕಾರವೇ ನಡೆದಿಲ್ಲವೆಂದರು [ಈ ಬಗ್ಗೆ ಟಿ.ವಿ.9 ನ್ಯಾಸ್ ಕ್ಲಿಪ್ಪಿಂಗ್ ಇದೆ]. ಆದರೆ, ಈಗ ಮಠದಲ್ಲಿ ಕನ್ಯಾಸಂಸ್ಕಾರ ನಡೆದಿರುವುದು ಮತ್ತು ನಡೆಯುತ್ತಿರುವುದನ್ನು ಎಲ್ಲರೂ ಒಪ್ಪಿಕೊಂಡಂತಿದೆ. [ಮಠದ ಹೆಸರಿನ ಕರಪತ್ರ/ದರಪತ್ರ ಇದೆ]. ಕನ್ಯಾಸಂಸ್ಕಾರ ಇಲ್ಲ ಎಂದು ಮಠದ ವಕ್ತಾರರು ಹೇಳಿರುವುದು ಸುಳ್ಳಾಯಿತಲ್ಲವೇ? ಕನ್ಯಾಸಂಸ್ಕಾರ ನಡೆದಿರುವ ಸತ್ಯವೇ ಜಯಿಸಿತಲ್ಲವೇ?

3. ಮಠದಲ್ಲಿ ಕನ್ಯಾಸಂಸ್ಕಾರವಾದ ಮೇಲೆ ಏಕಾಂತ ಭೇಟಿಗೆ ಕನ್ಯೆಯರನ್ನು ಸನ್ಯಾಸಿಯು ಕರೆಸಿಕೊಳ್ಳುತ್ತಾನೆ. ಅಲ್ಲದೆ, ಮಠಕ್ಕೆ ಭೇಟಿ ನೀಡುವ ಚಂದದ ಮಹಿಳೆಯರನ್ನು ಏಕಾಂತಕ್ಕೆ ಕರೆಸಿಕೊಳ್ಳುತ್ತಾನೆ. ಈ ಏಕಾಂತ ಭೇಟಿಯ ಸಮಯದಲ್ಲಿ ರಾಮನಿಂದ ತನಗೆ ಅನುಜ್ಷೆಯಾಗಿದೆ, ತಾನೇ ರಾಮ, ತಾನು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ತನ್ನೊಡನೆ ದೇಹ ಹಂಚಿಕೊಂಡು ಲೈಂಗಿಕ ಸುಖ ಪಡೆಯುವುದರಲ್ಲಿ ಯಾವುದೇ ತಪ್ಪಿಲ್ಲಾ ಎಂದೆಲ್ಲಾ ಹೇಳಿ ಧರ್ಮ ಭೋದನೆಯನ್ನು ಮಾಡಿ ರಾಮ ಪ್ರಸಾದವನ್ನು ಕೊಟ್ಟು ಲೈಂಗಕವಾಗಿ ಕನ್ಯೆಯರನ್ನು ಮತ್ತು ಮಹಿಳೆಯರನ್ನು ತನ್ನ ಕಾಮದಾಹಕ್ಕೆ ಬಳಸಿಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಯಿತು. ಅದಕ್ಕೆ ಮಠದ ವಕ್ತಾರರು/ಶಿಷ್ಯ ವರ್ಗವು ಮಠದಲ್ಲಿ ಏಕಾಂತ ಭೇಟಿಯೇ ಇಲ್ಲವೆಂದು ಹೇಳಿಕೆ ನೀಡಿದರು. [ರಾಜಧಾನಿ ಎಕ್ಸ್‍ಪ್ರೆಸ್ ಮತ್ತು ಫೇಸ್ಬುಕ್ಕಿನಲ್ಲಿ ಮಠದ ಶಿಷ್ಯರು ಬರೆದ ಲೇಖನಗಳಿವೆ]. ಆದರೆ, ಕ್ರಮೇಣ ಯಾರು ಏಕಾಂತ ಭೇಟಿ ಇಲ್ಲ ಎಂದು ಹೇಳಿದರೋ ಅವರೇ ಏಕಾಂತ ಭೇಟಿ ಇದೆ ಎಂದು ಒಪ್ಪಿಕೊಂಡರು. ಏಕಾಂತ ಭೇಟಿ ಇಲ್ಲಾ ಎಂದಿರುವುದು ಸುಳ್ಳಾಯಿತಲ್ಲವೇ? ಏಕಾಂತ ಭೇಟಿಗಳು ನಡೆದಿರುವ ಸತ್ಯವೇ ಜಯಸಿತಲ್ಲವೇ?

4. 3 ಕೋಟಿ ಹುನ್ನಾರ, 300 ಕೋಟಿ ಹುನ್ನಾರ, ಇದೊಂದು ದೊಡ್ಡ ಷಡ್ಯಂತರ ಎಂದರು? ಆದರೆ, ಈ ಷಡ್ಯಂತರ ಎಂದರೇನು? ಷಡ್ಯಂತರದಲ್ಲಿ ಯಾರೆಲ್ಲ ಸೇರಿರುವರು? ಯಾರು ಯಾರಿಗೆ ಯಾಕೆ ದುಡ್ಡು ಕೊಡುವರು-ಕೊಡುತ್ತಿರುವರು? ಎಂಬ ಮಾಧ್ಯವಗಳ ಪ್ರಶ್ನೆಗೆ ಉತ್ತರಿಸಲಾರದೆ ಇಂದು ಷಡ್ಯಂತರವನ್ನು ಬಿಡಸಲಾರದಾಗಿದೆಯಲ್ಲವೇ? ಈ ಷಡ್ಯಂತರ ನಿಜವೇ ಆಗಿದ್ದಲ್ಲಿ ಸನ್ಯಾಸಿ ಮತ್ತು ಅವನ ಶಿಷ್ಯ ವರ್ಗಕ್ಕೆ ಷಡ್ಯಂತರವನ್ನು ಬಿಡಿಸಲು ಇಷ್ಟೊಂದು ಸಮಯಬೇಕೇ? ಈ ಷಡ್ಯಂತರ ಎನ್ನುವುದು ಸುಳ್ಳಾಯಿತಲ್ಲವೇ? ‘ಇದು ಸತ್ಯ’ ಎಂದು ಮಠದ ಶಿಷ್ಯರು ತಂದಿರುವ ಪುಸ್ತಕಗಳಲ್ಲಿ ಬರೆದ ಸತ್ಯಾಂಶಗಳೇ ಸತ್ಯವಾಗಿ ಉಳಿಯಿತಲ್ಲವೇ?

5. ದೂರು ನೀಡಿದ ಮಹಿಳೆಗೆ ಗುರುಶಾಪ ತಟ್ಟಿದೆಯಂತೆ, ಮೈಯೆಲ್ಲಾ ಕಜ್ಜಿಯಾಗಿದೆಯಂತೆ ಅದು ಗುರುಗಳ ಹತ್ತಿರ ಹೋಗಿ ಮಂತ್ರಾಕ್ಷತೆ ತೆಗೆದುಕೊಂಡರೆ ಮಾತ್ರ ಕಡೆಮೆಯಾಗುವುದಂತೆ ಎಂದು ಮಠದ ಶಿಷ್ಯರು ಸುದ್ದಿ ಮಾಡಿದರು. ದಕ್ಷಿಣ ಕನ್ನಡ-ಕಾಸರಗೋಡು ಕಡೆ ಇದು ಹೆಚ್ಚು ಸುದ್ದಿಯಾಗಿತ್ತು. ‘ಮತ್ತೆ ಶ್ರಾಮಣ’ ಎಂಬ ಧ್ವನಿಸುರುಳಿ ಬಿಡುಗಡೆ ಮಾಡಿದಾಗ-ಟಿ.ವಿ. ಚಾನಲುಗಳ ಮುಂದೆ ಬಂದಾಗ ಮಠದ ಶಿಷ್ಯರು ಮಾಡಿದ ಸುದ್ದಿ ಸುಳ್ಳು ಎಂದು ತಿಳಿಯಿತಲ್ಲವೇ? ಮಹಿಳೆಗೆ ಗುರುಶಾಪ ತಟ್ಟದೆ ಮಹಿಳೆ ಆರೋಗ್ಯವಾಗಿರುವ ಸತ್ಯ ಸತ್ಯವಾಗಿ ಉಳಿದಿದೆಯಲ್ಲವೇ?

6. ದೂರನ್ನು ಮಹಿಳೆ ವಾಪಸ್ಸು ಪಡೆಯುವಳಂತೆ, ರಾಜಿ ಮಾಡಿಕೊಳ್ಳುವಳಂತೆ, ಪರಿಹಾರವಾಗಿ ಸನ್ಯಾಸಿ 9 ಕೋಟಿ ಕೊಡುವುದಂತೆ ಎಂದು ಮಠದ ಶಿಷ್ಯರು ಸುದ್ದಿ ಮಾಡಿದ್ದರು. ದಕ್ಷಿಣ ಕನ್ನಡ-ಕಾಸರಗೋಡು ಕಡೆ ಇದು ಹೆಚ್ಚು ಸುದ್ದಿಯಾಗಿತ್ತು. ಹಾಗೇಯೇ, ಆ ಮಹಿಳೆ ನಿಡಿದ ಅತ್ಯಾಚಾರದ ಆರೋಪವೇ ಸುಳ್ಳು ವಿಚಾರಣೆಯನ್ನೇ ಕೈಬಿಡಬೇಕು ಎಂದು ಸನ್ಯಾಸಿ ಹೈಕೋರ್ಟು ಮೆಟ್ಟಲೇರಿದ. ಹೈಕೋರ್ಟಿನಲ್ಲಿ ಸರಕಾರದ ವಕೀಲರು ಇದೊಂದು ಉನ್ನತ ಮಟ್ಟದ ಸಂಸ್ಕ್ರತ ರೀತಿಯ ಅತ್ಯಾಚಾರ ಆರೋಪ, ಆರೋಪಕ್ಕೆ ನೀಡಿರುವ ಸಾಕ್ಷ್ಯದಲ್ಲಿ ‘ಡಿಎನ್‍ಎ’ ವರದಿ ಸಕಾರಾತ್ಮಕವಾಗಿದೆ ಎಂದಾಗ, ‘ಒಮ್ಮತದ ಲೈಂಗಿಕತೆ’ ಎಂದು ಒಪ್ಪಿಕೊಳ್ಳುವಿರೇ ಎಂದು ಮುಖ್ಯನ್ಯಾಯಮೂರ್ತಿಯನ್ನೊಳಗೊಂಡ ದ್ವಿಸದಸ್ಯ ಪೀಠ ಕೇಳಿದಾಗ ರಾಜಿ ಮಾಡಿಕೊಳ್ಳುತ್ತಾರೆ ಎಂಬ ಸುದ್ದಿ ಸುಳ್ಳೆಂದು ತಿಳಿಯಿತಲ್ಲವೇ? ‘ಆರೋಪ’ ಮತ್ತು ‘ಸಾಕ್ಷ್ಯ’ ಸತ್ಯವಾಗಿ ಮುಂದುವರಿಯಿತಲ್ಲವೇ?

7. ಸನ್ಯಾಸಿಯಾದ್ದರಿಂದ ಮಠದ ಭಕ್ತರ ಹಣವನ್ನು ಬಳಸಿ ಜೀವನ ನಡೆಸುತ್ತಿರೊದರಿಮದ ಹೈಕೋರ್ಟು ಸನ್ಯಾಸಿಗೆ ದಂಡವಿದೆ ಸನ್ಯಾಸಿಯ ಅರ್ಜಿಯನ್ನು ತಳ್ಳಿ ಹಾಕಿತು. ಆದರೂ, ಅದನ್ನು ತಪ್ಪಿ ಅರ್ಥ ಮಾಡಿಕೊಂಡ ಸನ್ಯಾಸಿ ಮತ್ತು ಅವನ ಶಿಷ್ಯ ವರ್ಗ ‘ಈ ಆರೋಪ ಸುಳ್ಳು ಇದೊಂದು ಕಟ್ಟುಕಥೆ’ ಎಂದು ಹೇಳುತ್ತಾ ಬಂದ ಆರೋಪದ ವಿಚಾರಣೆಯನ್ನು ವಿಳಂಬ ಮಾಡಲು ಬೇಕಾದ ಅನೇಕಾನೇಕ ಯಂತ್ರ-ತಂತ್ರ-ಮಂತ್ರ-ಷಡ್ಯಂತರಗಳನ್ನು ಮಾಡುತ್ತಾ ಸಿ.ಐ.ಡಿ.ಯವರಿಗೆ ಈಗ ಸತ್ಯ ಗೊತ್ತಾಗಿದೆಯಂತೆ ನಮ್ಮ ಗುರುಗಳ ಮೇಲೆ ಚಾರ್ಜ ಶೀಟು ಅಗಲ್ವಂತೆ, ನಿರ್ದೋಷಿ ಎಂದು ‘ಬಿ’ ರಿಪೋರ್ಟು ಮಾಡುತ್ತಾರಂತೆ ಎಂದು ಸುದ್ದಿ ಮಾಡಿತು. ಇವರು ಹೇಗೆ ಸುದ್ದಿ ಮಾಡುತ್ತಿದ್ದಂತೆ-ನೋಡ ನೋಡುತ್ತಿದ್ದಂತೆ ಸಿ.ಐ.ಡಿ.ಯು ಚಾರ್ಜ ಶೀಟು ಹಾಕಿತು. ಚಾರ್ಜಶೀಟು ಹಾಕುವುದಿಲ್ಲವಂತೆ ಎಂಬ ಸುದ್ದಿ ಸುಳ್ಳಾಯಿತಲ್ಲವೇ? ‘ಆರೋಪವೇ’ ಸತ್ಯವಾಗಿ ಮುಂದುವರೆಯಿತಲ್ಲವೇ?

8. ಇತ್ತೀಚೆಗೆ ಈ ನಾವಿದ್ದೇವೆಗಳು ‘ಮಾಜಿಯವರು ಸಮಾನರ ಕೈಬಿಟ್ಟರೇ?’ ಎಂಬ ಸುಳ್ಳು ಸುದ್ದಿಯನ್ನು ಹರಡಿಸಿದರು. ಹಾಗೆಯೆ, ಬಾಯಾರು ಸಮಾನರ ಜೊತೆಗಿಲ್ಲ ಎಂಬ ಸುದ್ದಿಯನ್ನು ಹರಡಿಸಿದರು. ಆದರೆ, ಮಾಜಿಯವರು ಮತ್ತು ಬಾಯಾರು ಸಮಾನರೊಂದಿಗೆ ಇರುವರೆಂದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಿಂದ ನಿಜ ತಿಳಿಯಿತಲ್ಲವೇ? ಸತ್ಯದ ಅರಿವಾದವರು ಸತ್ಯ ಮಾರ್ಗದಲ್ಲೇ ಇರುತ್ತಾರೆ ಎನ್ನುವುದು ಖಚಿತವಾಯಿತಲ್ಲವೇ?

9. ಈ ಮಧ್ಯೆ ಎರಡನೇ ಮಹಿಳೆಯಿಂದ ಅತ್ಯಾಚಾರದ ಆರೋಪ ಬಂದಿದೆ. ಸಿ.ಐ.ಡಿ. ಅದರ ವಿಚಾರಣೆ ನಡೆಸುತ್ತಿದೆ. ಅದನ್ನು ಸುಳ್ಳು ಎಂದು ಸನ್ಯಾಸಿ ಮತ್ತು ಸನ್ಯಾಸಿಯ ಶಿಷ್ಯ ವರ್ಗ ಹೇಳುತ್ತಿದೆ. ಅಲ್ಲದೆ, ‘ಡಿ.ಎನ್.ಎ.’ ವರದಿಯೇ ಸುಳ್ಳು, ‘ಡಿ.ಎನ್.ಎ ಎಂಗಳ ಗುರ್ಗಳದ್ದು ಸಾಬೀತಾಯಿದಿಲ್ಲೆ’ ಎನ್ನುತ್ತಾರೆ. ಯಾರಾದರು ಮಾನವೀಯತೆ, ಸ್ವಂತಿಕೆ ಮತ್ತು ಸ್ಥರ ಬುದ್ಧಿ ಇರುವವರು ಇದನ್ನು ನಂಬಿಯಾರೆ?

10. 6 ಜನ ಪ್ರಮುಖರೊಂದಿಗೆ ನಡೆದ ಮೊದಲ ಸಭೆಯಲ್ಲಿ ಮೊದಲನೇ ದೂರು ನೀಡಿದ ಮಹಿಳೆ ತನ್ನ ಪರಿಸ್ಥಿತಿ ಹೇಳಿಕೊಂಡಿರುವುದು, ಅದು ಸತ್ಯ ಸಂಗತಿ ಪುಸ್ತಕದಲ್ಲಿ ಬಂದಿರುವುದು. ಸತ್ಯ ಸಂಗತಿ ಪುಸ್ತಕ ಸುಳ್ಳು ಎಂದು ಹೇಳಿಕೊಂಡು ‘ಇದು ಸತ್ಯ’ ಎಂಬ ಪುಸ್ತಕವನ್ನು ತಂದಿರೋದು ಎಲ್ಲರಿಗೂ ತಿಳಿದ ವಿಚಾರ. ಆದರೆ, ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಿಂದೆ ಮಠದೊಂದಿಗೆ ಇದ್ದ, ಚಾರ್ಜ್‍ಶೀಟ್ ಆಗುವಲ್ಲಿವರೆಗೆ ತಟಸ್ಥವಾಗಿದ್ದ ಇಬ್ಬರು ಮಹಾನುಭವಾವರು ಬಂದು ತಮ್ಮ ಅನುಭವ-ಅಭಿಪ್ರಾಯಗಳನ್ನು ಹೇಳಿದಾಗ ಸತ್ಯ ಸಂಗತಿಯಲ್ಲಿ ಹೇಳಿರುವುದು ಸತ್ಯ ಎಂದು ಎಲ್ಲರಿಗೂ ಮತ್ತೊಮ್ಮೆ ಮನವರಿಕೆಯಾಯಿತಲ್ಲವೇ? – ಸತ್ಯ ಸಂಗತಿ ಪುಸ್ತಕದಲ್ಲಿ ಹೇಳಿರುವ ವಿಷಯಗಳು ಸತ್ಯವಾಗಿಯೇ ಉಳಿದಿದೆಯಲ್ಲವೇ?

11. ಸದ್ಯ ಆ ಸನ್ಯಾಸಿಯ ಮೇಲೆ ಒಂದನೇ ಮಹಿಳೆಯ ದೂರಿನಡಿ ವಿಚಾರಣೆ ಪ್ರಾರಂಭವಾಗಲಿದೆ. ಇನ್ನೂ ಆ ಸನ್ಯಾಸಿ ಕೋರ್ಟಿಗೆ ಅದೆಷ್ಟು ಬಾರಿ ಅಲೆಯಲಿದೆಯೋ? ಗೊತ್ತಿಲ್ಲ. ಒಂದು ವೇಳೆ ಆ ಸನ್ಯಾಸಿ ಏನೂ ತಪ್ಪು ಮಾಡಿಲ್ಲವೆಂದಾದಲ್ಲಿ ಸನ್ಯಾಸಿ ನಂಬಿದ ಶ್ರೀರಾಮಚಂದ್ರ ಇಷ್ಟೋಂದು ಘೋರ-ಘನ-ಗಂಭೀರ ಪರಿಸ್ಥಿತಿ ನಿರ್ಮಾಣವಾಗಲು ಅವಕಾಶ ಕೊಡುತ್ತಿದ್ದನೇ?

12. ಈ ಮಧ್ಯೆ ಈ ಸನ್ಯಾಸಿಯ ಶಿಷ್ಯ ವರ್ಗ ‘ನಾವಿದ್ದೇವೆ ನಾವಿದೇವೆ ಗುರುಗಳ ಜೊತೆ’ ಎಂದು ಹೇಳುತ್ತಿದ್ದವರು ‘ನಮ್ಮ ಗುರುಗಳು ಏನು ಮಾಡಿದರು ಚಿಂತೆ ಇಲ್ಲ, ಹೇಗೆ ಮಾಡಿದರೂ ಚಿಂತೆ ಇಲ್ಲ’ ನಮಗೆ ಗುರುಗಳು ಅವರೇ’ ಎಂದು ಹೇಳಲು ಪ್ರಾರಂಭ ಮಾಡಿದೆಯಂತೆ. ಅಪ್ಪಾ ಶ್ರೀರಾಮ ನಿನಗಿದು ಸರಿಯೆನಿಸುದೇ?

13. ಇಂದು ಈ ಎರಡು ಆರೋಪಗಳಿಂದಾಗಿ ಮತ್ತು ‘ಇದು ಸತ್ಯ’ ಎಂಬ ಪುಸ್ತಕದಲ್ಲಿ ಬರೆದ ಕೆಲವೊಂದು ವಿಚಾರಗಳಿಂದಾಗಿ ಒಂದೊಮ್ಮೆ ಸಂತೋಷದಿಂದ ಸುಖವಾಗಿ ನೆಮ್ಮದಿಯಿಂದ ವಾಸಿಸುತ್ತಿದ್ದ ‘ಹವ್ಯಕ’ ಎನ್ನುವ ಒಂದು ಸಮುದಾಯದವರು ಇಂದು ಈ ‘ಸನ್ಯಾಸಿ’ಯ ವಿಚಾರವಾಗಿ ಗಂಡ-ಹೆಂಡತಿ, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಅಳಿಯ-ಮಾವ, ಮಾವ-ಸೊಸೆ, ಅತ್ತೆ-ಅಳಿಯ, ಅತೆ-ಸೊಸೆ, ಅಪ್ಪ-ಮಗ, ಅಮ್ಮ-ಮಗ, ಸಂಭಂದಿಕರು, ನೆಂಟರಿಸ್ಟರು ಎಂಬ ಯಾವುದೇ ಮಾನವೀಯ ಮೌಲ್ಯಗಳನ್ನು ಪರಿಗಣಿಸದೆ ಹಾವು-ಮುಂಗಿಸಿಗಳಂತೆ ಕಚ್ಚಾಡುವ ಪರಿಸ್ಥಿತಿಯನ್ನು ತಂದಿರುವೆಯಲ್ಲಾ? ಅಪ್ಪಾ ಮರ್ಯಾದ ಪುರುಷೋತ್ತಮನೆನಿಸಿಕೊಂಡ ಶ್ರೀರಾಮಚಂದ್ರನೇ ಯಾರ ಕಿವಿಯ ಮೇಲೂ ಹೂವಿಡಬೇಡಪ್ಪ. ಎಲ್ಲರ ಅಂಧಕಾರವನ್ನು ಹೋಗಲಾಡಿಸು. ಎಲ್ಲರ ಅಂತ:ಕರಣದ ಚಕ್ಷುವನ್ನು ತೆರೆಸು. ಎಲ್ಲರಿಗೆ ಸತ್ಯ ಅರಿಯುವಂತೆ ಮಾಡು.

14. ನಾವೆಲ್ಲ ಮಾನವರು ಒಂದೇ ಎಂಬ ಭಾವನೆ ಮೂಡದಿದ್ದರೂ ಪರ್ವಾಗಿಲ್ಲ ನಾವೆಲ್ಲ ಹವ್ಯಕರು ಒಂದೇ ಎಂಬ ಭಾವನೆಯನ್ನು ಮೂಡಿಸಿ ಮೊದಲು ‘ಹವ್ಯಕರಲ್ಲಿ’ ಬಾವೈಕ್ಯತೆಯನ್ನು ಮೂಡಿಸುಂತೆ ಮಾಡು. ಈ ಕೆಲಸ ಬೇಗನೆ ಮಾಡು. ತನ್ನೂಲಕ ‘ಹವ್ಯಕರು’ ರಾಷ್ಟ್ರೀಯ-ಅಂತರರಾಷ್ಟ್ರೀಯ ಭಾವೈಕ್ಯತೆಗೆ ಕೆಲಸ ಮಾಡುವಂತೆ ಮಾಡು. ಸತ್ಯಮೇವ ಜಯತೇ. ಸರ್ವೇ ಜನ: ಸುಖಿನೋಭವಂತು: ಲೋಕಾ ಸಮಸ್ಥ ಸುಖಿನೋಭವಂತು: ವಸುದೈವ ಕುಟುಂಬಕಂ ಎನ್ನೋ ವೇದೋಕ್ತಿ ನಿಜರೂಪದಲ್ಲಿ ವಿಶ್ವವ್ಯಾಪಿಯಾಗಿ ಹರಡಲಿ, ಸರ್ವರಿಗೂ ಸನ್ಮಂಗಳವಾಗಲಿ. ಜೈ ಕರ್ನಾಟಕ ಮಾತೇ, ಜೈ ಭಾರತ ಮಾತೇ, ಜೈ ಜಗನ್ಮಾತೆ ವಿಶ್ವವಿಧಾತೆ ನೀನೇ ರಕ್ಷಿಸು ಎಲ್ಲರ ಅನವರತ.

https://www.facebook.com/

balakrishnaraj.neerchal/posts/10207932446177144

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s