ರಾಘವ ಪರರಿಗೊಂದಷ್ಟು ಪ್ರಶ್ನೆಗಳು….

ರಾಘವ ಪರರಿಗೊಂದಷ್ಟು ಪ್ರಶ್ನೆಗಳು….

(೧) ಆರೋಪ ಬಂದ ಮೇಲೆ ಸಂತ್ರಸ್ತೆಯರ ಚಾರಿತ್ರ್ಯವೇ ಮೊದಲಿನಿಂದ ಸರಿ ಇರಲಿಲ್ಲ ಎಂದು ತಿಪ್ಪೆ ಸಾರಿಸುತ್ತಿರುವ ನೀವುಗಳು, ಅವರನ್ನು ತಂದು ರಾಮಕಥಾದ ICON ಆಗಿಸಿದಾಗ ಎಲ್ಲಿದ್ದಿರಿ…?? ಅವರನ್ನು ಮಠಕ್ಕೆ ಕರೆತಂದವರು ಸಮಾನಮನಸ್ಕರೇನು ಅಲ್ಲ ತಾನೆ….??? ಹಾಗಿದ್ದಮೇಲೆ ಇದು ಯಾರು ಮಾಡಿದ ಷಡ್ಯಂತ್ರ??? ಕರೆತರುವಾಗ ಸರಿ ಇದ್ದ ಚಾರಿತ್ರ್ಯ ಮಠಕ್ಕೆ ಬಂದ ಮೇಲೆ ಹಾಳಾಯಿತೇ???

(೨) ಸಂತ್ರಸ್ತೆಯ ಬಗ್ಗೆ ಅವಳು ಯಾರ್ಯಾರ ಜೊತೆಯೊ ಇದ್ದವಳು ಎಂಬಂತಹ ಕೀಳು ಮಾತಾಡುತ್ತೀರಿ, ಹಾಗಾದರೆ ಅಂಥವಳನ್ನು ತಂದು ಮಠದ ಪರಿವಾರದವನಿಗೆ ಕೊಟ್ಟು ಮದುವೆ ಮಾಡಿದವರು ಯಾರು??? ಯಾಕೆ??? ಆಗ ಸರಿ ಇರುವುದು ಇಲ್ಲದಿರುವುದು ಮುಖ್ಯವಾಗಿರಲಿಲ್ಲವೇ??

(೩) ಕೊಲೆ ಮಾಡಿದ ವ್ಯಕ್ತಿಗೆ ಕೂಡ ಎರೆಡು ದಿನದಲ್ಲಿ ಜಾಮೀನು ಸಿಗುತ್ತದೆ ( ಅತ್ಯಾಚಾರ ಮಾಡಿದರಂತು ಅರೆಷ್ಟೇ ಆಗುವುದಿಲ್ಲ!!!!) ಅಂತಹದರಲ್ಲಿ ಕೇವಲ ಕರೆ ಮಾಡಿ ಬೆದರಿಸಿದರು ಎಂಬ ಆಪಾದನೆಯ ಮೇಲೆ ದಂಪತಿಗಳಿಗೆ ೨೧ ದಿನ ಜಾಮೀನು ಸಿಗುವುದೇ ಇಲ್ಲ!!!! ಇಂತಹ ಘಟನೆ ಬೇರೆ ಎಲ್ಲಾದಾರೂ ನೆಡೆದಿದೆಯೇ?? ಇದರ ಹಿಂದೆ ಇರುವುದು ಯಾರ ಷಡ್ಯಂತ್ರ???

(೪) ಸ್ವಾಮಿಯ ಕೇಸಿನಿಂದ ಒಬ್ಬರಾದಮೆಲೊಬ್ಬರಂತೆ ಐವರು ನ್ಯಾಯ ಮೂರ್ತಿಗಳು ಹಿಂದೆ ಸರಿಯಲು ಕಾರಣವೇನು???? ಇದು ಕೂಡ ಕರ್ನಾಟಕದ ನ್ಯಾಯಾಂಗದ ಇತಿಹಾಸದಲ್ಲಿ ಕಂಡು ಕೇಳರಿಯದ ಘಟನೆ..( ದಯವಿಟ್ಟು ಗುರುಶಾಪಕ್ಕೆ ಹೆದರಿ ಹಿಂದೆ ಸರಿದರು ಎಂಬಂತಹ ಜೋಕ್ ಗಳನ್ನು ಮಾಡಬೇಡಿ!!)

(೫) ಸ್ವಾಮಿಯನ್ನು ಪೀಠದಿಂದ ಇಳಿಸಲು ಮಾಡುತ್ತಿರುವ ಷಡ್ಯಂತ್ರ ಎಂಬ ಹಳೆ ಪುಂಗಿಯನ್ನೇ ಇನ್ನೂ ಊದುತ್ತಿರುವ ನೀವುಗಳು ಹೀಗೆ ಷಡ್ಯಂತ್ರ ಮಾಡುವುದರಿಂದ ಯಾರಿಗೆ ಲಾಭ ಎಂದೇಕೆ ಹೇಳುತ್ತಿಲ್ಲ?? ಪೀಠದಿಂದ ಇವರನ್ನು ಕೆಳಗಿಳಿಸಿ ತಮಗೆ ಬೇಕಾದವರನ್ನು ತಂದು ಕೂಡಿಸಲು ಸಾಧ್ಯವಾಗುತ್ತದೆಯೆ??? ನಮ್ಮ ಶಂಕರ ಪರಂಪರೆಯಲ್ಲಿ ಅದಕ್ಕೆ ಅವಕಾಶವಿದೆಯೆ ಎಂದೇನಾದರು ವಿಚಾರಿಸಿದ್ದೀರ??

(೬) ಸ್ವಾಮಿಯ ನಡುವಳಿಕೆ ಸರಿ ಇಲ್ಲ, ಕನ್ಯಾಸಂಸ್ಕಾರ ಶಾಸ್ತ್ರ ಸಮ್ಮತವಲ್ಲ ಎಂದು ವಿರೋಧ ಹುಟ್ಟಿದಾಗ ನೀವು ವಿರ‍ೋಧಿಗಳನ್ನು ವಯಕ್ತಿಕವಾಗಿ ಅವಹೇಳನ ಮಾಡಿದರೆ ಹೊರತು ( ಫೇಸ್ಬುಕ್ ನ ಕಮೆಂಟುಗಳನ್ನ ನೋಡಿ ಒಮ್ಮೆ) ಅದಕ್ಕೆ ಶಾಸ್ತ್ರಾಧಾರ ಹುಡುಕುವ ಪ್ರಯತ್ನವನ್ನೇಕೆ ಮಾಡಲಿಲ್ಲ…?? ಅದು ಸರಿಯಲ್ಲ ಎಂದು ಈಗಾಗಲೇ ಖಾತ್ರಿಯಾಗಿದೆಯೆ?? ಅಥವಾ ಮಠದಲ್ಲಿ ಎಲ್ಲವೂ ( ಗುರುವೂ ಸೇರಿ) ಶಾಸ್ತ್ರ ಸಮ್ಮತವಾಗಿರಬೆಕೆಂಬ ಅಗತ್ಯವೇನಿಲ್ಲ ಎಂಬ ತೀರ್ಮಾನಕ್ಕೆ ಬಂದಾಗಿದೆಯೊ??

(೭) ಸ್ವಾಮಿಯ ವಿರೋಧಿಗಳಿಗೆ “ಗುರುಶಾಪ(?!!)ದ” ತಲ್ವಾರ್ ತೋರಿಸುತ್ತಿರುವ ನೀವುಗಳು, ನಾಳೆ ಸ್ವಾಮಿಯ ಅನಾಚಾರ ಸಾಭೀತಾದಾಗ, ಒಂದು ಪೀಠಕ್ಕೆ ಪರಂಪರೆಗೆ ಮಸಿಬಳಿದ ಧರ್ಮ ಧ್ರೋಹಿಯ ಬೆನ್ನು ಕಟ್ಟಿ ಸಾರ್ವಜನಿಕವಾಗಿ ಬೆಂಬಲಿಸಿದ ಪಾಪಕ್ಕೆ ಗುರಿಯಾಗುವುದಿಲ್ಲವೇ… ಅದಕ್ಕೇನು ಪ್ರಾಯಶ್ಚಿತ??? ನಾಳೆ ನಿಮ್ಮ ಮಕ್ಕಳಿಗೆ ನೈತಿಕತೆಯ ಯಾವ ಪಾಠ ಹೇಳಿಕೊಡಬಲ್ಲಿರಿ??

(೮) ಇಷ್ಟಕ್ಕೂ ಇದು ಸುಳ್ಳು ಆರೋಪವೇ ಆಗಿದ್ದಿದ್ದಲ್ಲಿ ಇಷ್ಟೊಂದು ಕಷ್ಟ ಪಟ್ಟು ಗುರುಭಕ್ತ(!!)ರ ಟೀಕೆ,ಟಿಪ್ಪಣಿ, ಬೆದರಿಕೆ, ( ಕೆಲವೊಮ್ಮೆ ಹೊಡೆತ!) ಇವನ್ನೆಲ್ಲ ಸಹಿಸಿಕೊಂಡು, ಹಣ ಖರ್ಚು ಮಾಡಿ ಈ ಸ್ವಾಮಿಯ ಮೇಲೆ ಷಡ್ಯಂತ್ರ ಯಾರು ಮಾಡಿಸುತ್ತಾರೆ??? ಖಂಡಿತಾ ಅಂಬಾರಗುಡ್ಡದ ಗಣಿಗಾರಿಕೆಯವರೆಂದೋ, ಅಥವಾ ಸ್ವಾಮಿಯ ಗೋಕಥೆಗೆ ನೆಲ ನಡುಗಿ ಗೋಹತ್ಯೆಯೇ ನಿಂತು ಹೋಗುತ್ತದೆಂದು ಹೆದರಿದವರೆಂದೊ ಹಾಸ್ಯಾಸ್ಪದ ಹೇಳಿಕೆ ಕೊಡಬೇಡಿ. ಗಣಿಗಾರಿಕೆಗೆ ಅನುಮತಿ ಪಡೆಯಲು ಬೇರೆ ಬೇಕಾದಷ್ಟು ಸುಲಭದ ದಾರಿಗಳಿವೆ…ಗೋಹತ್ಯೆ ನಿಲ್ಲುವ ಲಕ್ಷಣ ಸದ್ಯಕ್ಕೇನೂ ಕಾಣುತ್ತಿಲ್ಲ..

(೯) ಇನ್ನು ಸಂತ್ರಸ್ತೆಯ ಒಳ ಉಡುಪಿನಲ್ಲಿ ಸ್ವಾಮಿಯ ವೀರ್ಯ ಹೇಗೆ ಬಂತು? D N A Report Manipulate ಮಾಡಲು ಸಾಧ್ಯವೇ?? ಸಮಾಜದ ಹಿರಿಯರು, ಧರ್ಮ ಶಾಸ್ತ್ರದ ತಿಳುವಳಿಕೆ ಇದ್ದವರೆಲ್ಲ ಮಠ ಬಿಟ್ಟು ಹೊರಗೆ ಯಾಕೆ ಬರುತ್ತಿದ್ದಾರೆ??? ಒಂದು ಕಾಲದಲ್ಲಿ ಸ್ವಾಮಿಯ ಕಟ್ಟಾ ಶಿಶ್ಯರಾಗಿದ್ದವರೆಲ್ಲಾ ಈಗ ದೂರ ಸರಿದಿರುವ ಕಾರಣವೇನು??? ಇತ್ಯಾದಿ ಇತ್ಯಾದಿ ಸಾವಿರಾರು ಪ್ರಶ್ನೆಗಳಿಗೆ ನೀವು ” ಷಡ್ಯಂತ್ರ” ಎಂಬ ಒಂದೇ ಪದದ ಅಮೋಘ ಉತ್ತರ ನೀಡುವುದರಿಂದ ಅವುಗಳನ್ನು ಕೇಳಿರುವುದಿಲ್ಲ…
ಉತ್ತರಿಸದಿದ್ದರೂ ಪರವಾಗಿಲ್ಲ, ಸರಿಯಾದ ಉತ್ತರ ನೀವು ಕಂಡುಕೊಂಡರೆ ಸಾಕು….

source: https://www.facebook.com/groups/1499395003680065/permalink/1678509149101982/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s