ಹೀಗೊಂದು ಜಾಹೀರಾತು….

ಹೀಗೊಂದು ಜಾಹೀರಾತು….

“ಅತ್ಯಾಚಾರಿಗಳ ರಕ್ಷಣೆಗೆ ನಾವಿದ್ದೇವೆಗಳ ಸಂಘ”

ನಮ್ಮಲ್ಲಿ ಎಲ್ಲಾ ರೀತಿಯ ಅತ್ಯಾಚಾರಿಗಳಿಗೆ ಸರ್ವ ರೀತಿಯ ಬೆಂಬಲವನ್ನು, ರಕ್ಷಣೆಯನ್ನು ನೀಡಲಾಗುವುದು.

ನಮ್ಮಲ್ಲಿ ದೊರಕುವ ವಿಶೇಷ ಸೌಲಭ್ಯಗಳು:-
(೧) ಮಹಿಳೆಯರ ಮೇಲೆ ಅತ್ಯಾಚಾರ ಮಾಡಿರಲಿ, ಮಕ್ಕಳ ಮೇಲೆ ಅತ್ಯಾಚಾರ ಮಾಡಿರಲಿ, ಎಷ್ಟು ಬಾರಿಯಾದರೂ ಅತ್ಯಾಚಾರ ಮಾಡಿರಲಿ, ಯಾವುದೇ ಭೇದ ಭಾವ ಮಾಡದೆ ಅವರನ್ನು ರಕ್ಷಿಸಲು ಸರ್ವ ವಿಧ ಪ್ರಯತ್ನ ಮಾಡಲಾಗುವುದು.
(೨) ಆರೋಪಿಯ ಪರವಾಗಿ ಫ಼ೇಸ್ ಬುಕ್ ಅಕೌಂಟ್ ಒಂದನ್ನು ತೆಗೆದು, ಉದ್ದುದ್ದ, ಅಶ್ಲೀಲ ಲೇಖನಗಳನ್ನು ಬರೆಯಲಾಗುವುದು.
(೩) ಮಾಧ್ಯಮಗಳ ಮುಂದೆ ಎಲ್ಲವೂ ಶಢ್ಯಂತ್ರ ಶಢ್ಯಂತ್ರ ಎಂದು ಬೊಬ್ಬೆ ಹಾಕಲಾಗುವುದು.
(೪) ಚಿತ್ರಾನ್ನದ ಪೊಟ್ಟಣ ಕೊಟ್ಟು ಜನ ಸೇರಿಸಿ ಸಮ್ಮೇಳನ ನೆಡಸಲಾಗುವುದು.
(೫) ಆರೋಪಿಯ ಮೇಲಿನ ಆರೋಪವನ್ನು ಇಡೀ ಹಿಂದು ಧರ್ಮದ ಮೇಲೆ ಮಾಡಿದ ಆರೋಪ ಎಂದು ಒದರಾಡಿ ಮೂರ್ಖ ಜನರ ಕಿವಿ ಮೇಲೆ ಹೂ ಇಡಲಾಗುವುದು.
(೬) ಸಾರ್ವಜನಿಕವಾಗಿ ಆರೋಪ ಮಾಡಿದವರ/ ಸಂತ್ರಸ್ತರ ಚಾರಿತ್ರ್ಯ ವಧೆ ಮಾಡಲಾಗುವುದು.
(೭) ಆರೋಪಿಯನ್ನು ವಿರೋಧಿಸಿದವರ ಬಗ್ಗೆ, ಅವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ವ್ಯವಸ್ತಿತವಾಗಿ ಅತ್ಯಂತ ಕೆಳಮಟ್ಟದ ಅಪಪ್ರಚಾರ ನೆಡೆಸಲಾಗುವುದು.
(೮) ವಿರೋಧಿಗಳ ವಾಹನದ ಮೇಲೆ ಕಲ್ಲು ಬಿಸಾಡುವುದು, ಅವರ ಮನೆಯ ಕಾರ್ಯಕ್ರಮಗಳಿಗೆ ಯಾರೂ ಹೋಗದಂತೆ ತಡೆಯುವುದು,…ಇತ್ಯಾದಿ ಸೌಲಭ್ಯಗಳು ಅವಶ್ಯಕತೆಗನುಗುಣವಾಗಿ ಲಭ್ಯವಿರುತ್ತದೆ.

ದರಪಟ್ಟಿ ಇದೀಗ ತಾನೆ ಅಂತಿಮಗೊಳ್ಳುತ್ತಿದ್ದು ಸಧ್ಯದಲ್ಲೇ ಪ್ರಕಟಿಸಲಾಗುತ್ತದೆ.

ವಿ.ಸೂ:- ನೂರಕ್ಕಿಂತ ಹೆಚ್ಚು ಬಾರಿ ಅತ್ಯಾಚಾರ ಮಾಡಿದ್ದಲ್ಲಿ, ವಿಷೇಶ ರಿಯಾಯಿತಿ ನೀಡಲಾಗುತ್ತದೆ!!

source: https://www.facebook.com/groups/1499395003680065/permalink/1678016815817882/

 

no_arrest

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s