ಒಡೆದಾಳುವ ನೀತಿ ಅನುಸರಿಸುತ್ತಿರುವ ಮಠದ ಹೋರಿ

ಒಡೆದಾಳುವ ನೀತಿ ಅನುಸರಿಸುತ್ತಿರುವ ಮಠದ ಹೋರಿ

ಹಿಂದೆ ನಮ್ಮ ಎಳೆಯ ವಯಸ್ಸಿನಲ್ಲಿ ಊರಕಡೆ ನೋಡಿದ್ದು. ಗದ್ದೆ ಉಳುವ/ಗಾಡಿ ಎಳೆಯುವ ಎತ್ತುಗಳು ಬೀಜದಲ್ಲಿ ಸಬಲವೂ ಸಮರ್ಥವೂ ಆಗಿರುತ್ತಿದ್ದವು. ನಿಸರ್ಗ ಸಹಜವಾಗಿ ಅವುಗಳಿಗೆ ಹರೆಯದಲ್ಲಿ ಹಾರಬೇಕು ಎನಿಸುತ್ತದೆ ಎಂಬುದನ್ನರಿತ ಹಳ್ಳಿ ಜನ ಅದರ ವೃಷಣವನ್ನೇ ನಿಷ್ಕ್ರಿಯಗೊಳಿಸುತ್ತಿದ್ದರು. ಮೇಲಿನಿಂದ ಗುದದ್ವಾರದ ಕೆಳಭಾಗದಲ್ಲಿ ಎರಡು ಬರೆ ಬೇರೆ ಹಾಕುತ್ತಿದ್ದರು. ನನಗಂತೂ ಅದೊಂದು ಚಿತ್ರಹಿಂಸೆ ಎನಿಸಿತು. ಪಾಪ ಅವುಗಳಿಗದೆಷ್ಟು ನೋವಾಗುತ್ತಿತ್ತೋ ದೇವರಿಗೇ ಗೊತ್ತು. ತಮ್ಮದಲ್ಲದ ತಪ್ಪಿಗೆ ಪಾಪದ ಹೋರಿಗಳು ಶಿಕ್ಷೆ ಅನುಭವಿಸುತ್ತಿದ್ದವು. (ಮಠದ ಹೋರಿಗೆ ಮಾತ್ರ ಬೀಜ ಒಡೆಯುವ ಕೆಲಸ ಆಗಲಿಲ್ಲ; ಬೀಜ ಒಡೆಯಬೇಕಾದವರು ಸುಮ್ಮನಿದ್ದುಬಿಟ್ಟರು; ತನ್ನನ್ನು ಬೆಂಬಲಿಸುತ್ತಾರೆ ಎಂದು ತಿಳಿದ ಹೋರಿ ಹಾರುವುದನ್ನೇ ನಿತ್ಯಾನುಷ್ಠಾನ ಮಾಡಿಕೊಂಡಿತು.)

ಇಂದಿಗೂ ಅಂತಹ ಕ್ರಿಯೆಗಳು ಕೆಲವು ಹಳ್ಳಿಗಳಲ್ಲಿ ಜಾರಿಯಲ್ಲಿವೆ. ಮೂಗುದಾರವನ್ನಂತೂ ಹಾಕೇ ಹಾಕುತ್ತಾರೆ. ನಿಮ್ಮ ಮೂಗಿನಲ್ಲಿ ಯಾವುದೋ ಫಾರಿನ್ ಪಾರ್ಟಿಕಲ್ ಇರಿಸಿಕೊಂಡು ನೋಡಿ, ಅದೆಷ್ಟು ಅಲವರಿಕೆ ಆಗುತ್ತದೆ ಎಂಬುದು ಗೊತ್ತಾಗುತ್ತದೆ. ಫಾರಿನ್ ಪಾರ್ಟಿಕಲ್ ಅಂದ ತಕ್ಷಣ ಕವಳದ ಗೋಪಣ್ಣ ಹೇಳಿದ ತಮಾಷೆಯ ನೆನಪಾಯ್ತು.

ಊರಕಡೆಗೆ ಯಾವುದೋ ಒಬ್ಬ ಹೊಸದಾಗಿ ಡಿಜಿಟಲ್ ಸ್ಟುಡಿಯೋ ಹಾಕಿದ್ದನಂತೆ. ಅಲ್ಲಿ ಕಲರ್ ಇಂಕ್ ಜೆಟ್ ಪ್ರಿಂಟರ್ ಇಟ್ಟುಕೊಂಡು ಫೋಟೋ ಪ್ರಿಂಟ್ ಹಾಕಿ ಕೊಡುತ್ತಿದ್ದನಂತೆ. ಯಾರೋ ತುಮರಿಯಂತವನೊಬ್ಬ ವಿದೇಶದಲ್ಲಿರುವವ ಅವನ ಸ್ಟುಡಿಯೋಗೆ ಬಂದು ಹೋದ ಒಂದೆರಡು ದಿನಗಳಲ್ಲಿ ಪ್ರಿಂಟರ್ ಕೆಲಸ ನಿಲ್ಲಿಸಿ ಎಲ್.ಇ.ಡಿ ಸ್ಕೀನ್ ನಲ್ಲಿ, “ಫಾರಿನ್ ಅಬ್ಜೆಕ್ಟ್ ಫೌಂಡ್, ರಿಮೂವ್ ಇಟ್ ಅಂಡ್ ರಿಸ್ಟಾರ್ಟ್” ಎಂಬ ಸಂದೇಶ ಬರುತ್ತಲೇ ಇತ್ತಂತೆ. ಸ್ಟುಡಿಯೋದವನಿಗೆ ಚಿಂತೆ ಹತ್ತಿತು. “ಒಳ್ಳೆ ಕೆಲಸ ಆಯ್ತಲ್ಲ, ಫಾರಿನ್ ನಿಂದ ಬಂದವ ತನ್ನ ಕೆಲಸ ಮುಗಿಸಿಕೊಂಡು ಹೋದ, ಇಲ್ಲಿ ಅದೇನು ಬಿಟ್ಟು ಹೋಗಿದ್ದಾನೋ”ಎಂದುಕೊಳ್ಳುತ್ತ ಸಹಾಯಕ್ಕಾಗಿ ಸ್ನೇಹಿತರಲ್ಲಿ ಕೇಳಿದನಂತೆ.

“ಅಯ್ಯೋ ಪೆದ್ದೆ, ಫಾರಿನ್ ಅಬ್ಜೆಕ್ಟ್ ಅಂದ್ರೆ ವಿದೇಶೀ ಮಾಲು ಎಂದಷ್ಟೇ ಅರ್ಥವಲ್ಲ. ಅದರ ಸೆನ್ಸರ್ ಓಡಾಡುವ ದಾರಿಯಲ್ಲಿ ದಪ್ಪ ಧೂಳಿನ ಕಣ ಕೂತುಕೊಂಡಿರ್ತದೆ. ಒರೆಸಿ ಕ್ಲೀನ್ ಮಾಶು, ಸರಿಹೋಗ್ತದೆ” ಅಂದರಂತೆ. ಸ್ಟುಡಿಯೋದವ ಓಡೋಡ್ತಾ ಹೋಗಿ ಬಾಗಿಲು ತೆರೆದು, ಪ್ರಿಂಟರ್ ಮುಚ್ಚಳ ತೆರೆದು ಒರೆಸಿದನಂತೆ. ಪ್ರಿಂಟರ್ ಮುದ್ರಿಸಲು ಆರಂಭಿಸಿತಂತೆ.

ಮನುಷ್ಯ ತಯಾರಿಸಿದ ಯಂತ್ರದಲ್ಲೇ ಫಾರಿನ್ ಅಬ್ಜೆಕ್ಟ್ ಇದ್ದರೆ ಕೆಲಸ ಮಾಡೋದಿಲ್ಲ ಎಂದಾದರೆ ಮನುಷ್ಯನ ಶರೀರದಲ್ಲಿ ಅಥವಾ ಯಾವುದೇ ಜೀವಿಯ ಶರೀರದಲ್ಲಿ ಅನ್ಯವಸ್ತುವು ಸೇರಿಕೊಂಡಾಗ ತೊಂದರೆ ಆಗದೇ ಇದ್ದೀತೇ?

ಅಂದಹಾಗೆ ಲೇಡೀಸ್ ಪ್ಯಾಂಟಿ ಲ್ಯಾಬಿಗೆ ಹೋದಾಗಲೂ ಹೋರಿಸ್ವಾಮಿಗಳ ವೀರ್ಯದ ಕಲೆಗಳನ್ನು ಕಂಡು ಯಂತ್ರಗಳು “ಫಾರಿನ್ ಆಬ್ಜೆಕ್ಟ್ ಫೌಂಡ್” ಎಂದು ಬೀಪ್ ಬೀಪ್ ಅಂದಿರಬೇಕು!
ಮೊದಲಿಗೆ ಕಳ್ಳ-ಕುಳ್ಳ ಸೇರಿ ಜನಪ್ರಿಯತೆಗೆ ಬೇಕಾಗುವ ಸಮಾವೇಶಗಳನ್ನು ನಡೆಸುವ ಪ್ಲಾನ್ ಮಾಡಿದರು. ಜನರಿಗೆ ಅವರ ದುರುದ್ದೇಶ ಗೊತ್ತಾಗಲಿಲ್ಲ. ಜನ ಹೋದರು, ಹೋದವರೆಲ್ಲ ಅಡ್ಡಬಿದ್ದರು, ಕೈಮುಗಿದರು. ಕಾಸು ಹಾಕಿದರು. ಮಾಧ್ಯಮಗಳಲ್ಲಿ ಅಬ್ಬರದ ಪ್ರಚಾರ ಸಿಕ್ಕಿತು. ಬಹಳ ಒಳ್ಳೆ ಕಾರ್ಯಕ್ರಮ ಎಂದುಕೊಳ್ಳುತ್ತ ಬಂದ ಕೆಲವು ಬಾವಯ್ಯಂದಿರು ನಿತ್ಯವೂ ನಡೆಯುವ ವೈಭೋಗಕ್ಕೆ ಮರುಳಾಗಿ ಮಠದಲ್ಲೇ ಹೆಚ್ಚುಹೊತ್ತು ಇರತೊಡಗಿದರು.

ಆಗ ಕಳ್ಳ-ಕುಳ್ಳ ಮುಂದಿನ ಯೋಜನಗೆಳನ್ನು ಹಾಕಿಕೊಂಡರು. ಹಣ ಕೋಟಿಗಳಲ್ಲಿ ಹರಿದುಬರಬೇಕು. ಮಠದಲ್ಲಿ ಸದಾ ಏನಾದರೂ ಕಾರ್ಯಕ್ರಮ ನಡೆಸುತ್ತ ಪ್ರಚಾರ ಪಡೆಯಬೇಕು. ಹೆಂಗಸರು-ಹೆಣ್ಣುಮಕ್ಕಳನ್ನು ಆಕರ್ಷಿಸುವಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು ಎಂದು ಯೋಚಿಸಿ, ಯೋಜನೆಗಳನ್ನು ಹಾಕಿದರು. ಮಠದ ಭಕ್ತರಲ್ಲಿ ಸೇವಾರ್ಥ ಕೆಲಸ ಮಾಡುವವರನ್ನು ಬಳಸಿಕೊಳ್ಳುತ್ತ ಬೋಳೆಣ್ಣೆ ಸವರಿದರು.

ಮಠದ ಕಾರ್ಯಕ್ರಮಗಳಿಗೆ ತಮ್ಮ ಖಾಸಗಿ ಕರ್ಚಿನಲ್ಲಿ ಕರೆಯೋಲೆಗಳನ್ನು ಮಾಡಿಸಿಕೊಡುವಂತಹ ಭಕ್ತರೂ ಅಂದಿದ್ದರು.[ಅವರಲ್ಲಿ ಒಬ್ಬರೀಗ ಜೀವಂತ ಇಲ್ಲ.] ನಮ್ಮ ಸಮಾಜದಲ್ಲಿ ಕೆಲವರಿಗೆ ಹೆಸರು ಗಳಿಸಿಕೊಳ್ಳುವ ಹಂಬಲವಿತ್ತು. ಅಂತವರೆಲ್ಲ ಮಠಕ್ಕಾಗಿ ತನು-ಮನ-ಧನ ಸಹಾಯ ನೀಡಿ ಕೆಲಸ ಮಾಡಿದರು. ಅವರೆಲ್ಲರ ಸತತ ಪರಿಶ್ರಮದಿಂದ ಮಠ ಸ್ವಲ್ಪ ಹೆಚ್ಚಿನ ಆರ್ಥಿಕತೆಯನ್ನು ಪಡೆದುಕೊಂಡ ಬಳಿಕ ಕೋಟಿಕೊಡುವವರನ್ನು ಬೇಟೆಯಾಡಲು ಪ್ಲಾನು ಮಾಡಿದರು. ಇನ್ನಷ್ಟು ಯೋಜನೆಗಳನ್ನು ಹಾಕಿಕೊಂಡರು.

ಮಹಾವೀರಾಧಿವೀರರು ಬೆಂಗಳೂರಿನಲ್ಲಿ ಸಿಕ್ಕಿದ್ದೆ, ಅವರ ಸಂಪರ್ಕ ಇರುವಲ್ಲೆಲ್ಲ ವಿಷಯ ತಿಳಿಸಿ ನಮಾಮಿಯವರೆಗೂ ಜನಾಕರ್ಷಣೆಗೆ ಯೋಜನೆ ಹಾಕಿ ಕಾರ್ಯಗತಗೊಳಿಸಿದರು. ಹಣ ಕೋಟಿಗಳಲ್ಲಿ ಹರಿದುಬಂತು. ಹಿಂದಿನ ಕಾಲದಲ್ಲಿ ನಮ್ಮವರಲ್ಲಿ ಒಗ್ಗಟ್ಟಿರಲಿಲ್ಲ ಎಂಬುದು ಸುಳ್ಳು. ಆಗ ಸಾಗಾಟ, ಸಂಪರ್ಕ ಮತ್ತು ಸಂವಹನ ಮಾಧ್ಯಮಗಳು ಈ ಮಟ್ಟಕ್ಕೆ ಬೆಳೆದಿರಲಿಲ್ಲ. ಆದರೂ ತಕ್ಕಮಟ್ಟಿಗೆ ಸಮಾಜದ ಜನ ಒಗ್ಗೂಡಿಯೇ ಇದ್ದರು.

ಹಳ್ಳಿ ವಾಸಿಗಳೇ ಹೆಚ್ಚಿದ್ದ ಹಿನ್ನೆಲೆಯಲ್ಲಿ ಸಂಪರ್ಕ ಇನ್ನೂ ಕಷ್ಟ ಸಾಧ್ಯವಾಗಿತ್ತು. ಹೆಚ್ಚಿನಕಡೆ ಕಾಲುದಾರಿಯೇ ಗತಿಯಾಗಿತ್ತು. ಪೋರ್ಚುಗೀಸರ ದಾಳಿಗೆ ಬಲಿಯಾಗಿ ಗೋವಾ ಮೂಲದಿಂದ ಓಡಿಬಂದು ಕೊಂಕಣ ಬೆಲ್ಟಿನುದ್ದಕ್ಕೂ ಪಟ್ಟಣಗಳಲ್ಲಿ ಹಬ್ಬಿನಿಂತ ಗೌಡ ಸಾರಸ್ವತರು ಪಟ್ಟಣಗಳಲ್ಲಿ ವ್ಯಾಪಾರಕ್ಕೆ ತೊಡಗಿದರು. ಅವರು ಹೇಳಿದ ದರದಲ್ಲಿ ಸರಕುಗಳನ್ನು ಖರೀದಿಸುತ್ತ ಹಲವು ಶತಮಾನಗಳು ಕಳೆದಿದ್ದವು. ಕಳೆದೊಂದು ಶತಮಾನದಿಂದ ಬದಲಾವಣೆಯ ಗಾಳಿ ಬೀಸಿ ನಗರವಲಸೆ ಹೆಚ್ಚಿತು. ಐಟಿ ಕ್ಷೇತ್ರದಲ್ಲಾದ ಕ್ಷಿಪ್ರಗತಿಯ ಬೆಳವಣಿಗೆಯಿಂದ ಜಗತ್ತೇ ಕಿರಿದಾಗುತ್ತ ಸಮಾಜದ ಜನರು ಪರಸ್ಪರ ತಾವು ಎಲ್ಲೆಲ್ಲಿದ್ದೇವೆ ಎಂದು ಗುರುತಿಸಿಕೊಳ್ಳುವುದು ಸಾಧ್ಯವಾಯ್ತು.
ಹಿಂದಿನವರ ಸಮಾಧಿಯ ದಿನವೇ ಹೋರಿ ಹೇಳಿದ್ದು, “ಸೂರ್ಯ ಮುಳುಗಿದರೇನಾಯ್ತು ಚಂದ್ರನ ಉದಯವಾಗಿದೆ!” ಅಂದರೆ ಸೂರ್ಯನಷ್ಟು ಪ್ರಖರವಾಗಿ ಕೋಪಿಷ್ಠರೆನಿಸಿದ್ದ ಹಿಂದಿನವರ ಜಾಗಕ್ಕೆ ಈಗ ತಾನು ಚಂದ್ರ ಬಂದಿದ್ದೇನೆ ಎಂಬರ್ಥ. ಚಂದ್ರೋದಯವಾಗಿದೆ ಎಂದರೆ ಹುಣ್ಣಿಮೆಯ ಬೆಳಕಿನಲ್ಲಿ ಮುಂದೆ ಕನ್ಯೆಯರನ್ನು ಅಪ್ಪಿಕೊಂಡು ಲಲ್ಲೆಗರೆಯುವವ ಎಂದು ಪ್ರಾಯಶಃ ಯಾರೂ ಊಹಿಸಿರಲಿಕ್ಕಿಲ್ಲ. ಹೋರಿಯ ಮನಸ್ಸಿನಲ್ಲಿ ಮಾತ್ರ ಭವಿಷ್ಯದ ತನ್ನ ಚಿತ್ರಣ ಆಗಲೇ ಮೂಡಿತ್ತು ಎಂಬುದರಲ್ಲಿ ಸಂದೇಹವೇ ಇಲ್ಲ.

ನಮಗೆಲ್ಲ ಗೊತ್ತಿಲ್ಲದ ವಿಷಯವೇನಲ್ಲ, ಹೋರಿಯ ಅಪ್ಪಗೊತ್ತು, ಅಜ್ಜಗೊತ್ತು, ಅವರ ಕಚ್ಚೆಹರುಕುತನದ ಬಗ್ಗೆ ಬಹಳ ಗೊತ್ತು. ಅಂತವರ ಮನೆಯಲ್ಲಿ ಹುಟ್ಟಿದ ಕರು ಹೋರಿಯಾಗದೇ ಸನ್ಯಾಸಿಯಾಗುತ್ತದೆ ಎಂತಾದರೆ ನರಿಯ ಹೊಟ್ಟೆಯಲ್ಲಿ ಹುಲಿಯೂ ಹುಟ್ಟುತ್ತದೆ ಎಂಬುದೂ ಸತ್ಯವಾಗಬೇಕು. ಆದರೇನು ಮಾಡುವುದು? ನಮ್ಮೆಲ್ಲರ ಮಾತನ್ನು ಯಾರು ಕೇಳ್ತಾರೆ. ಅಂದಿನ ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ಹೋರಿಗೆ ದೀಕ್ಷೆ ಸಿಕ್ಕಿತು; ಹೋರಿ ಬಾವಹೋರಿಯನ್ನೂ ಸೇರಿಸಿಕೊಂಡು ಮಠವನ್ನು ಹೊಕ್ಕಿತು.

ಮಠವನ್ನು ಹೊಕ್ಕ ಹೋರಿ ಮತ್ತು ಬಾವ ಹೋರಿ ವೇದ-ವೇದಾಂಗಗಳ ಬಗೆಗೆ ತಲೆಕೆಡಿಸಿಕೊಳ್ಳಲಿಲ್ಲ. ಆರಂಭದಿಂದಲೂ ಸಭೆ-ಸಮಾರಂಭಗಳದ್ದೇ ಖಯಾಲಿ. ಮತ್ತು ಪೀಠಕ್ಕೆ ಬಂದಾಗಿನಿಂದಲೂ ಒಂದಿಲ್ಲೊಂದು ಅನಾಹುತ ಮತ್ತು ರಾದ್ಧಾಂತ ನಡೆಯುತ್ತಲೇ ಇದೆ. ಆಗಿದ್ದೆಲ್ಲವನ್ನೂ ಮುಚ್ಚಿಹಾಕಲು ಇನ್ನಿಲ್ಲದ ಪ್ರಯತ್ನವೂ ನಡೆಯುತ್ತಲೇ ಬಂದಿದೆ.
ಸ್ವಾಮಿಹೋರಿ ಮತ್ತು ಬಾವ ಹೋರಿ ಮಠದಲ್ಲಿ ಕೂತು ಆಧುನಿಕ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಯೋಚಿಸಿದರು. ಅದರ ಪರಿಣಾಮವಾಗಿ ನೆಟ್ಟಗೆ ಏಳನೇ ಕ್ಲಾಸು ಓದಿರದ ಹೋರಿಗೆ ಐಪ್ಯಾಡು ಐಫೋನುಗಳ ರುಚಿಹತ್ತಿತು. ಅಂತರ್ಜಾಲದ ಬಳಕೆಗೆ ಹೋರಿ ಮೊದಲಿಟ್ಟಿತು. ಅಂತರ್ಜಾಲದಲ್ಲಿ ಲಿಂಕ್ ಸಿಕ್ಕಿದ್ದನ್ನೆಲ್ಲ ಕ್ಲಿಕ್ ಮಾಡಿತು. ಆಗ ಕಂಡ ನೀಲಿ ಚಿತ್ರಗಳಿಂದ ಬಹಳ ಪುಳಕಗೊಂಡಿತು. ಯಾವ ದೇವರಾಣೆಯನ್ನು ಬೇಕಾದರೂ ಇಟ್ಟು ಹೇಳಲು ಹೇಳಿ, ಈ ಬಾವ-ನೆಂಟ ನೋಡಿದಷ್ಟು ನೀಮಿಚಿತ್ರಗಳನ್ನು ಸಮಾಜದಲ್ಲಿ ಆ ಅಭಿರುಚಿ ಇಟ್ಟಿಕೊಂಡಿರಬಹುದಾದ ಬೇರೆ ಯಾರೂ ನೋಡಿರಲು ಸಾಧ್ಯವಿಲ್ಲ!

ಟೆಕ್ನಾಲಜಿ ಅಪ್ ಗ್ರೇಡ್ ಆದಾಗ ಸಾಮಾಜಿಕ ಜಾಲತಾಣಗಳು ಬಾಗಿಲು ತೆರೆದವು. ಅವುಗಳ ಮೂಲಕ ಭಕ್ತರನ್ನು ಸಂಪರ್ಕಿಸುವ ನೆಪದಲ್ಲಿ ಮಹಿಳೆಯರಿಗೆ, ಹುಡುಗಿಯರಿಗೆ ಗುಪ್ತ ಸಂದೇಶಗಳನ್ನು ಕಳುಹಿಸಲು ಆರಂಭಿಸಿತು ಹೋರಿ. ದಿನಗಳೆದಂತೆ ತನ್ನ ತೆವಲಿಗೆ ಐಫೋನ್ ಅಥವಾ ಇತರ ಮೊಬೈಲ್ ಗಳನ್ನೂ ಬಳಸಿಕೊಂಡಿತು. ಆರಂಭದಲ್ಲಿ ಕೋಡ್ ವರ್ಡ್ ಗಳನ್ನು ಬಳಸುತ್ತ, ಸುತ್ತಿಬಳಸಿ ಪ್ರಸ್ತಾಪಿಸುತ್ತುದ್ದ ಹೋರಿ ಕ್ರಮೇಣ ನೇರವಾಗಿಯೇ ಕರೆಯುವುದಕ್ಕೆ ಮೊದಲಿಟ್ಟಿತು.
ಅತ್ತ ಕುಲಪತಿಯೆನಿಸಿದ ಬಾವಯ್ಯ ’ಗುರುಕುಲ’ದಲ್ಲಿ ಇಪ್ಪತ್ತೈದಕ್ಕೂ ಅಧಿಕ ಬಡವರ ಮನೆಗಳ ಹದಿಹರೆಯದ ಹುಡುಗಿಯರನ್ನು ಮುರಿದು ಮುಕ್ಕಿದ. ಹಣ, ಅಧಿಕಾರ, ಸಮಾರಂಭಗಳಲ್ಲಿ ಶೋಕಿ ನಡೆಸುತ್ತ ಹಲ್ಲುಕಿಸಿಯುತ್ತ ಗಳಿಸಿದ ಜನಪ್ರಿಯತೆಯಿಂದ ಬೇಕುಬೇಕಾದ ಹೆಂಗಸರು ಮತ್ತು ಹುಡುಗಿಯರನ್ನು ಅಡ್ಡೆಗೆ ಕರೆಯತೊಡಗಿತು ಹೋರಿ; ಆಗ ಆರಂಭವಾಗಿದ್ದೇ ಏಕಾಂತ.

ನಮ್ಮ ಜನ ಎಷ್ಟರಮಟ್ಟಿಗೆ ಪೆದ್ದರು ಅಂದರೆ, ಸಮಾಜವನ್ನು ಒಗ್ಗೂಡಿಸುವ ಕೆಲಸ ಹೋರಿಯಿಂದ ಆಯ್ತು ಎಂದುಕೊಂಡುಬಿಟ್ಟರು. ಆದರೆ ವಾಸ್ತವದಲ್ಲಿ ಹೋರಿ ಮತ್ತು ಬಾವ ಹೋರಿ ತಮ್ಮ ಬೇಳೆ ಬೇಯಿಸಿಕೊಳ್ಳುವ ತಂತ್ರ ಹೂಡಿ ಹಾಗೆ ಭಾಸವಾಗುವಂತೆ ಮಾಡಿದ್ದರು. ನಮ್ಮ ಸಮಾಜಕ್ಕೊಂದು ಸಂಸ್ಕೃತಿಯಿದೆ. ಇಲ್ಲಿ ಎಲ್ಲರೂ ಧುರೀಣರಾಗ ಹೊರಡುವುದೇ ಕಾಲೆಳೆಯುವುದಕ್ಕೂ ಕಾರಣವಾಗುತ್ತದೆ. ಅದನ್ನೆಲ್ಲ ಅಳೆದು ಸುರಿದು ನೋಡಿದ ಹೋರಿ ಯಾರಿಗೆ ಯಾವ ಪಟ್ಟಗಟ್ಟಿದರೆ ತನ್ನ ಕೆಲಸ ಸಲೀಸು ಎಂದು ಚಿಂತನೆ ನಡೆಸಿತು.

ಹೋರೀಶ್ವರ ತೋರಿದ ಹುದ್ದೆಯಲ್ಲಿ ಆಸೀನರಾದ ಕೆಲವರು ಮಹಾಪ್ರಸಾದವೆಂದುಕೊಳ್ಳುತ್ತ ಪುಳಕಿತರಾದರು. ಅಂತವರಲ್ಲಿ ಕೆಲವರ ಹೆಂಡತಿಯರನ್ನು ಆಯ್ಕೆಮಾಡಿಕೊಂಡ ಹೋರಿ ಅವರನ್ನು ಏಕಾಂತಕ್ಕೆ ಕರೆಯತೊಡಗಿತು. ಹೇಳುವವರಿಲ್ಲ, ಕೇಳುವವರಿಲ್ಲ. ಹೊತ್ತಿಗೆ ಸರಿಯಾಗಿ ಪೂಜೆಯಿಲ್ಲ, ಪುನಸ್ಕಾರವಿಲ್ಲ. ವೇದವಿದ್ವಾಂಸರಾದ ಹಿರುಯರಿಗೆ ಮಠದಲ್ಲಿ ಅವಕಾಶವೇ ಇರಲಿಲ್ಲ. ಉಂಡಾಡಿಗಳೇ ಗಿಂಡಿಗಳು. ಏಳನೇ ಕ್ಲಾಸು ಓದಿರದವನಿಗೆ ಅಷ್ಟಷ್ಟೇ ಕಲಿತವರು ಗಿಂಡಿಮಾಣಿಗಳಾದರು. ಅವರಿಗೆಲ್ಲ ಹೋರಿಯ ಹಾಗೆ ಕೈಯಲ್ಲಿ ಮೊಬೈಲು ಸಿಕ್ಕಿದ್ದೆ ಪರಮ ಸಂತೋಷವಾಯಿತು. ಮಠಕ್ಕೆ ಬರುವ ಭಕ್ತರನ್ನು ಹೇಗೆ ಸುಲಿಯಬೇಕೆಂಬುದನ್ನು ಮೊದಲು ಕಲಿತವರು ಅವರೇ.

ದಿನಗಳೆಯುತ್ತ ಹೋರಿಸ್ವಾಮಿಗಳು ತನ್ನ ಸುತ್ತ ವರ್ತುಲವೊಂದಲ್ಲು ಕಟ್ಟಿಕೊಂಡರು. ಅಲ್ಲಿ ತಾವು ಹೇಳಿದ್ದೇ ನಡೆಯಬೇಕೆಂದರು. ಅದರಲ್ಲಿರುವ ಎಲ್ಲರೂ ತಮ್ಮ ಅಂಕಿತದಲ್ಲಿರಿಸಿಕೊಂಡರು. ಯಾರೂ ಯಾವ ಪ್ರಶ್ನೆಯನ್ನೂ ಕೇಳುವಹಾಗಿಲ್ಲ, ಎಲ್ಲವೂ ತನಗೆ ಗೊತ್ತೆಂಬ ದರ್ಪ ಆರಂಭವಾಯ್ತು. ಹೋರಿಯ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದ ಕೆಲವು ಬುದ್ಧಿವಂತರೂ ಸಹ ಅರ್ಧ ದಶಕದ ಕಾಲ ನಿಟ್ಟುಸಿರುಬಿಡುತ್ತ ನಿಬ್ಬೆರಗಾಗಿ ನೋಡುತ್ತಿದ್ದರೆ ವಿನಃ ಅವರಲ್ಲಿನ ಗಂಡಸುತನ ಮಾಯವಾಗಿ ಬೃಹನ್ನಳೆಗಳಂತಾಗಿಬಿಟ್ಟಿದ್ದರು!

ಧರ್ಮದ ಹೆಸರಿನಲ್ಲಿ ಏನೆಲ್ಲ ಅನಾಚಾರಗಳು ನಡೆದಿವೆ ಎಂಬುದನ್ನು ಒಮ್ಮೆ ಪರಿಶೀಲಿಸಿ ನೋಡಿದರೆ, ಹಲವು ಬಾರಿ ಎಚ್ಚರಿಸಿದ ತುಮರಿಗೆ ಶಾಲು ಹೊದೆಸಿ ಸನ್ಮಾನಿಸುತ್ತೀರಿ; ತುಮರಿಗೆ ನಿಮ್ಮ ಸನ್ಮಾನ ಪ್ರಶಸ್ತಿ ಯಾವುದೂ ಬೇಡ, ಆ ಪ್ರಶ್ನೆ ಬೇರೆ. ಸುಸಂಸ್ಕೃತವೆನಿಸಿಕೊಂಡಿದ್ದ, ಮರ್ಯಾದಸ್ತರು ಎನಿಸಿಕೊಂಡಿದ್ದ ಪ್ರತಿಷ್ಠಿತ ಸಮಾಜವನ್ನು ಅಕ್ಷರಶಃ ಒಡೆದಾಳುವ ನೀತಿಯನ್ನು ಅನುಸರಿಸಿದ್ದು ಹೋರಿ ಸ್ವಾಮಿ.

ಹೋರಿಯ ಒಡೆದಾಳುವಿಕೆ ಮನೆ ಮನೆಗಳಲ್ಲಿಯೂ ನಡೆದಿದೆ. ಏಕಾಂತಕ್ಕೆ ಬರುತ್ತಿದ್ದ ಗಂಡ-ಹೆಂಡಿರಲ್ಲಿ ಅದೆಷ್ಟು ಜನ ಡೈವೋರ್ಸ್ ಗೆ ಹೋಗಿಲ್ಲ? ನಿಮಗೆ ಗೊತ್ತೇ? ಡೈವೋರ್ಸ್ ಪಡೆದವರ ಯಾದಿ ತುಮರಿಗೆ ಗೊತ್ತಿದೆ, ಆದರೆ ಹೇಳುತ್ತಿಲ್ಲ ಎಂಬುದು ಗೊತ್ತಿರಲಿ. ಗಂಡ-ಹೆಂಡಿರನ್ನೇ ಬೇರ್ಪಡಿಸುವ ಹೋರಿ ಸಮಾಜವನ್ನು ಒಗ್ಗೂಡಿಸುವುದಾದರೂ ಹೇಗೆ? ಅದು ಸತ್ಯಕ್ಕೆ ದೂರವಾದ ಮಾತು.

ಜನರಲ್ಲಿ ಸಂವಹನ ಮಾಧ್ಯಮದ ಮೂಲಕ ಸಂವಹನ ಏರ್ಪಟ್ಟಿದ್ದರಿಂದ ಸಮಾಜ ತಂತಾನೇ ಒಗ್ಗೂಡಿದೆ. ಅದಕ್ಕೆ ಮಠ ಒಂದು ನೆಪ ಅಷ್ಟೆ. ತಾನು ಸಮಾಜ ಸೇವೆ ಮಾಡುತ್ತೇನೆ ಎಂದು ಹೊರಟ ಹೋರಿ, ಪರಂಪರೆಗೆ ವಿರೀಧವಾಗಿ ಕತೆಗಳನ್ನು ಆರಂಭಿಸಿತು. ನಮ್ಮ ಪರಂಪರೆಯಲ್ಲಿ ಅದು ಇಲ್ಲ ಎಂದು ಹೇಳಿದರೆ, ಹೇಳಿದವರಿಗೆ ವಾಚಾಮಗೋಚರ ಬೈಗುಳಗಳ ಮಳೆ. ಯಥಾ ಗುರು ತಥಾ ಶಿಷ್ಯ ಅನ್ನೋ ಹಾಗೆ ಚೋರ ಗುರುವಿಗೆ ಚಾಂಡಾಲ ಶಿಷ್ಯರೇ ತಯಾರಾದರು. ಮಠವನ್ನು ಕ್ರಯ-ವಿಕ್ರಯ ಕೇಂದ್ರ ಮಾಡಿಕೊಂಡರು. ಹಲವು ಯೋಜನೆಗಳ ನೆಪದಲ್ಲಿ ಹಣ ಸಂಗ್ರಹಣೆ ನಡೆಸಿ ಯಾವ ಲೆಕ್ಕವನ್ನೂ ಸರಿಯಾಗಿ ಇಡದೆ ಹಂಚಿಕೊಳ್ಳುವ ಪದ್ಧತಿ ನಡೆಯಿತು.
ತನ್ನ ತೀಟೆಗಳಿಗೆ, ಚಟಗಳಿಗೆ ಅನುಕೂಲ ಕಲ್ಪಿಸುವ ಪಟಾಲಮ್ಮನ್ನು ತಯಾರಿಸಿಕೊಂಡ ಹೋರಿ ಅವರಿಗೆಲ್ಲ ಬೇಕಾದ್ದನ್ನು ವ್ಯವಸ್ಥೆ ಮಾಡಿತು. ನೈತಿಕ ನಿಷ್ಠೆಯಿಂದ ಬದುಕಿಬಂದಿದ್ದ ಪಾಪದ ಸಮಾಜವನ್ನು ಹೋಳು ಮಾಡಿ, ತಲೆತಲಾಂತರದಿಂದ ಮಠದ ಅನುವಂಶೀಯ ಶಿಷ್ಯರಾಗಿ ಮಠಕ್ಕೆ ಸೇವೆ ಸಲ್ಲಿಸಿದ ಹಿರಿಯರನು ಬುಡ್ಡಾಗಳೆಂದು ಕರೆದು ಹೊರಗಿಟ್ಟು ಯುವ ಸೇನೆಯನ್ನು ತಯಾರಿಸಿತು ಹೋರಿ. ಹಿರಿಯರಿಗೆ ಮಠದಲ್ಲಿ ಯಾವ ಗೌರವವಾಗಲೀ ಅವಕಶವಾಗಲೀ ಇಲ್ಲವೇ ಇಲ್ಲ. ಹೋರಿಯ ಸುತ್ತ ಇರುವವರೆಲ್ಲರೂ ಆತ ಸಾಕಿಕೊಂಡವರೇ.

ಆಯ್ಕೆ ಸಮಿತಿಯಲ್ಲಿದ್ದು ಅಂದು ತನ್ನನ್ನು ಆಯ್ಕೆ ಮಾಡಿದ ವ್ಯಕ್ತಿಗಳನ್ನೇ ಹೋರಿ ಮೂಲೆಗುಂಪುಮಾಡಿ ಹೊರಗಟ್ಟಿತು. ಸರ್ವಾಧಿಕಾರಿಯಗಿ ಮೆರೆಯುತ್ತಿರುವ ಹೋರಿಗೆ ಅದರ ವಿರುದ್ಧ ಯಾರು ಏನೇ ಹೇಳಿದರೂ, “ಅವರು ಮಠದ ಶಿಷ್ಯರಲ್ಲ, ಮಠಕ್ಕೂ ಅವರಿಗೂ ಯಾವ ಸಂಬಂಧವೂ ಇಲ್ಲ” ಎಂಬ ಸ್ಪಷ್ಟೀಕರಣ ಪದ್ಧತಿ ಜಾರಿಗೆ ತಂತು. ಈಗ ಮಾತೆತ್ತಿದರೆ ಸೀಲು ಮತ್ತು ಸ್ಪಷ್ಟೀಕರಣ.
ಡಿ.ಎನ್.ಎ ಹೊಂದಾಣಿಕೆ ಪಕ್ಕಾ ಆದಮೇಲೆ ಸ್ಪಷ್ಟೀಕರಣ ಆಗಿಹೋಗಿದೆ; ಇನ್ನಾವ ಸ್ಪಷ್ಟೀಕರಣವೂ ಬೇಕಾಗಿಲ್ಲ. ಜನ ಬುದ್ಧುಗಳಲ್ಲ. ನಮ್ಮ ಜನ ಹಳ್ಳಿಗಳಲ್ಲಿ ತಪ್ಪು ತಿಳಿದಿದ್ದಾರೆ; ಯಾಕೆಂದರೆ ಅಲ್ಲಿನ ಪ್ರಾದೇಶಿಕ ಪತ್ರಿಕೆಗಳಲ್ಲಿ ಮತ್ತು ಕೇಬಲ್ ಟಿವಿ ವಾಹಿನಿಗಳಲ್ಲಿ ಈ ಭೂತ ಸದಾ ಪೂಜೆ, ಪ್ರವಚನ ನಡೆಸುತ್ತಿರುವಂತೆ ತೋರಿಸುತ್ತಾರೆ. ಮಹಾನಗರದಲ್ಲಿ ಹೋರಿ ಕಟಕಟೆಯಲ್ಲಿ ಹೋಗಿ ನಿಂತಿದ್ದರೂ ಪ್ರಾದೇಶಿಕ ವಾಹಿನಿಗಳಲ್ಲಿ ಪ್ರವಚನ ನಿರತವಾಗಿರುತ್ತದೆ. ಇದರಿಂದ ಕೆಲವು ಜನರಿಗೆ ಇನ್ನೂ ಸಂದೇಹವಿದೆ. ಅಂತವರನ್ನು ಗಟ್ಟಿಯಾಗಿ ಹಿಡಿದುಕೊಂಡ ಪಟಾಲಮ್ಮು ಹೋರಿಗೆ ಅವರಿಂದ ಜೈಕಾರ ಕೂಗಿಸುತ್ತಿದೆ.

ನಿನ್ನೆ-ಇಂದಿನವರೆಗೆ ಕೈಮುಗಿಯುತ್ತ ಕಾಲಿಗೆ ಬೀಳುತ್ತ ಬಣ್ಣದ ಅಕ್ಕಿ ಪಡೆಯುತ್ತಿದ್ದ ಹಲವರಿಗೆ ಕೈಯಲ್ಲಿ ಕಲ್ಲು ಚಪ್ಪಲಿ ಹಿಡಿಯಲು ಮನಸ್ಸು ಬರುತ್ತಿಲ್ಲ. ಯಾಕೆಂದರೆ ಆ ಪೀಠಕ್ಕೆ ಅವರು ಸಲ್ಲಿಸುವ ಗೌರವ ಅಂತದ್ದು. ವಂಶಪಾರಂಪರ್ಯವಾಗಿ ರಕ್ತಗತವಾಗಿ ಹರಿದುಬಂದ ಭಕ್ತಿಭಾವದ ಸೆಲೆ ಅಲ್ಲಿಗೆ ಕಟ್ಟುಬಿದ್ದಿದೆ.

ನಮ್ಮ ಜನ ಅರ್ಥಮಾಡಿಕೊಳ್ಳಬೇಕು, ಪೀಠ ಸರುಯಾಗಿಯೇ ಇದೆ, ಆದರೆ ಪೀಠದಲ್ಲಿರುವವ ಸರಿಯಾಗಿಲ್ಲ. ಮುಂದೆ ಅವನೇ ಇದ್ದರೆ ಸಮಾಜ ಸರ್ವನಾಶವಾಗುತ್ತದೆ. ಸಾವಿರಾರು ಕುಟುಂಬಗಳು ಡಿವೋರ್ಸ್ ಪಡೆಯುತ್ತವೆ. ಹರೆಯದ ಹೆಣ್ಣುಮಕ್ಕಳೆಲ್ಲ ಹೋರಿಯ ನೈವೇದ್ಯಕ್ಕೆ ಅರ್ಪಿತವಾಗುತ್ತವೆ. ಮಠದಲ್ಲಿ ಗುರುವೆನಿಸಿದ ವ್ಯಕ್ತಿ ನಡೆಸಬೇಕಾದ ಜಪತಪ ನೇಮನಿಷ್ಠೆ ಪೂಜಾದಿಗಳು ನಡೆಯುವುದಿಲ್ಲ. ಮಠವೆಂಬುದು ಭ್ರಷ್ಟಾಚಾರ ನಿರತ ಅನೈತಿಕ ರಾಜಕಾರಣಿಯ ಕಚೇರಿಯಂತಾಗುತ್ತದೆ.

ಜನರನ್ನು ಸೇರಿಸುವುದು ಕಷ್ಟವೋ ನಷ್ಟವೋ ಪ್ರಶ್ನೆಯಲ್ಲ; ಸಮಾಜಕ್ಕೆ ನೈಜವಿಷಯ ತಲುಪಿಸಬೇಕು. ಅತಿಶೀಘ್ರವಾಗಿ ಹೋರಿ, ಬಾವಹೋರಿ ಮತ್ತು ಬಳಗ ಹೋರಿಗಳ ಬಂಧನವಾಗಿ ಮಠದ ಸಂಪೂರ್ಣ ವ್ಯವಹಾರಗಳು ತನಿಖೆಯಾಗಬೇಕು. ಬೇನಾಮಿ ಹೆಸರಿನಲ್ಲಿರುವ ಹಣ ಆಸ್ತಿಗಳನ್ನೆಲ್ಲ ಮುಟ್ಟುಗೋಲು ಹಾಕಿಕೊಳ್ಳಬೇಕು. ಸಾಮಾಜಿಕವಾಗಿ ಬಹಿದೊಡ್ಡ ದ್ರೋಹವೆಸಗಿದ ಅವರೆಲ್ಲರಿಗೂ ಯಥಾಯೋಗ್ಯ ಕಠಿಣ ಶಿಕ್ಷೆಯಾಗಬೇಕು.

Thumari Ramachandra

https://www.facebook.com/groups/1499395003680065/permalink/1677952039157693/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s