ಹಾದಿಬೀದಿ ಮಾತುಕತೆ

ಹಾದಿಬೀದಿ ಮಾತುಕತೆ

ಕ್ಯಾತ-“ಮಹಾಸ್ವಾಮಿಗಳು ಏಲ್ಲಿಗೋಗ್ತಿದೀರಿ?

ಹೋರಿಸ್ವಾಮಿ-“ದೇಹತ್ಯಾಗಕ್ಕೆ?”

ಕ್ಯಾತ-“ಮತ್ತೆ ಕ್ಯಾತ್ಸಂದ್ರದಿಂದ ಅಡ್ಡಡ್ಡ ಹೋಗಿ ತುಮಕೊರಿನ ಹಳೇ ಸಂಬಂಧ ಹುಡುಕಿಕೊಂಡು ಹೋಗ್ತಾ ಇದ್ದಹಾಗಿದೆ?”

ಹೋರಿಸ್ವಾಮಿ-“ಇದು ನಮ್ಮ ಕಡೇ ಭೇಟಿ. ಕೆಲವರಿಗೆ ನಮ್ಮ ದರ್ಶನ ಆಗಾಗ ಸಿಗದೇ ಇದ್ರೆ ಜಿಗುಪ್ಸೆ ಬಂದುಬಿಡ್ತದೆ.”

ಕ್ಯಾತ-“ಓ ಹಾಗೆ, ಒಳ್ಳೇದು, ಸ್ವಾಮಗೋಳು ಭಕ್ತರನ್ನು ಮಾತಾಡಿಸೋಕೆ ಹೋಯ್ತವ್ರೆ, ಬಾಳಾ ಸಿಂಪಲ್ಲು ಅಂತ ನನಗೀಗ ಗೊತ್ತಾಯ್ತ ಅದೆ.”

ಹೋರಿಸ್ವಾಮಿ-” ನೀವು ಇಷ್ಟೇ ನೋಡಿದ್ದೀರಿ. ನಾವು ಸಮಯ ಬಂದ್ರೆ ಕಮಲದ ಮೇಲೂ ಹಾರಾಟ ನಡೆಸ್ತೇವೆ. ಇಲ್ಲಾಂದ್ರೆ ಕಮಲದ ಹೂಗಳನ್ನ ಹಾಸಿ, ನೆಲದಮೇಲೆ ಕುಳಿತು ಮಲ್ಲಿಕಾ ಶರಬತ್ತು ತಯಾರಿಸ್ತೇವೆ.”

ಕ್ಯಾತ-“ಬಾಳಾ ಚೆನ್ನಾಗಿದೆ ಗುರುಗಳೇ. ಅಂದಹಾಗೆ ತಮ್ಮ ಹಿಮಾಲಯದ ಏಕಾಂತ ಮುಗೀತಲ್ವೇ?”

ಹೋರಿಸ್ವಾಮಿ-“ಹಿಮಾಲಯದ ಕಡೆಗೂ ನಾವು ಏಕಾಂತ ಮಾಡಿದ್ದೇವೆ ಬಿಡಿ. ಅದು ಅವರು ಹೇಳಿದ ಹಾಗಲ್ಲ. ಈಗಲೂ ನಾವು ಹಿಮಾಲಯಕ್ಕೆ ಹೋಗ್ತೇವೆ ಅಂದ್ರೆ ನಮ್ಮ ಭಕ್ತರು ಹೋಗೋದಕ್ಕೆ ಕೊಡಡೆ ಕಣ್ಣೀರು ಹಾಕ್ಬುಟ್ರು ಪಾಪ. ಅವರಿಗಾಗಿ ನಾವು ಇಲ್ಲೇ ಇದ್ದೇವೆ.”

ಕ್ಯಾತ-“ಮತ್ತೆ ಅದೇನೋ ದೇಹಾನೆ ತ್ಯಾಗ ಮಾಡ್ತೀರಂತೆ? ಹುಡುಗಿ ಕೈಕೊಟ್ಟಾಗ ಭಗ್ನ ಪ್ರೇಮಿಯೂ ಕೆಲವು ದಿನ ಹಂಗೇ ಹೇಳ್ತಾನಲ್ವೇ? ಯಾಕೆಂದ್ರೆ ಅದೆಲ್ಲ ಆಯಾ ಸಮಯದ ಇಮೋಶನ್ನು, ತಮ್ದಾದ್ರೆ ಹಾಗಲ್ಲ, ಇದು ಭಕ್ತರಿಗೆ ಇಮೋಶನ್ನು, ಅಲ್ವೇ?”

ಹೋರಿಸ್ವಾಮಿ-“ನಾವು ಏನಾದ್ರೂ ಮಾಡ್ತೀವಿ ನೀಯಾರು ಕೇಳಕ್ಕೆ? ಅವತ್ತು ಶಿಖರನಗರದಲ್ಲಿ ನಮ್ಮ ಭಕ್ತರು ಲಾಡು ಕೊಟ್ಟಿದ್ದು ನೆನಪಿದ್ಯೇ?

ಕ್ಯಾತ-“ಮಾಸ್ವಾಮಿ, ನಾನು ಅಂದಿನ ಕ್ಯಾತ ಅಲ್ಲ ಈಗ ಇಲ್ನೋಡಿ ಈ ಕಾರ್ಡು”

[ಕಾರ್ಡು ನೋಡಿದ ಹೋರಿಸ್ವಾಮಿ ಹೌಹಾರಿಬಿದ್ದ. ಕ್ಯಾತನನ್ನು ಮಾವಂದಿರು ತಮ್ಮ ಗುಪ್ತಚರನನ್ನಾಗಿ ನೇಮಿಸಿದ್ದರು.]

ಹೋರಿಸ್ವಾಮಿ-“ಓ ಬನ್ನಿ ಕ್ಯಾತ ಸರ್, ಸಾರಿ, ನಮ್ಮಿಂದ ತಪ್ಪಾಗಿದೆ, ನಿಮ್ದೇ ಮಠ, ಯಾವಾಗ ಬೇಕಾದ್ರೂ ಬನ್ನಿ. ಅಂದಹಾಗೆ ನಮ್ಮವರು ನಿಮ್ಮನ್ನು ಶೀಘ್ರದಲ್ಲೇ ಭೇಟಿ ಆಗ್ತಾರೆ. ”

Thumari Ramachandra

https://www.facebook.com/groups/1499395003680065/permalink/1677704282515802/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s