ಆರೋಪ ಸಾಬೀತಾದರೆ ದೇಹ ತ್ಯಾಗಕ್ಕೂ ಸಿದ್ದರಂತೆ ರಾಘವೇಶ್ವರ ಶ್ರೀಗಳು

Oct 25, 2015, 05-13 PM IST

ಆರೋಪ ಸಾಬೀತಾದರೆ ದೇಹ ತ್ಯಾಗಕ್ಕೂ ಸಿದ್ದರಂತೆ ರಾಘವೇಶ್ವರ ಶ್ರೀಗಳು

ಅತ್ಯಾಚಾರ ಅರೋಪ ಎದುರಿಸುತ್ತಿರುವ ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳು ಪೀಠ ತ್ಯಾಗ ಮಾಡಲಿ ಎಂದು ಸಮಾನ ಮನಸ್ಕ ವೇದಿಕೆ ಒತ್ತಾಯಿಸಿರುವ ಬೆನ್ನ ಹಿಂದೆಯೇ ತಮ್ಮ ಮೇಲಿನ ಅತ್ಯಾಚಾರ ಆರೋಪ ಸಾಬೀತಾದರೆ ದೇಹ ತ್ಯಾಗಕ್ಕೂ ಸಿದ್ದನಿದ್ದೇನೆ ಎಂದು ಶ್ರೀಗಳು ತಿಳಿಸಿದ್ದು, ಹಾಗಾಗಿ ಸುಳ್ಳು ಆರೋಪಗಳಿಗೆ ಯಾವುದೇ ಮಾನ್ಯತೆ ನೀಡಬೇಕಿಲ್ಲ ಎಂದು ಮಠದ ಕಾರ್ಯದರ್ಶಿ ಗಜಾನನ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಒಂದು ಕಾಲದಲ್ಲಿ ರಾಮಚಂದ್ರಾಪುರ ಮಠದ ಆಪ್ತರಾಗಿದ್ದ, ಎಂ.ಎನ್.ಭಟ್ ಮದ್ಗುಣಿ, ಮಾಜಿ ಸಚಿವ ಕೆ.ಎಚ್.ಶ್ರೀನಿವಾಸ್ ನೇತೃತ್ವದ ಸಮಾನ ಮನಸ್ಕ ವೇದಿಕೆಯ ಸದಸ್ಯರು ಶನಿವಾರ ಸುದ್ದಿಗೋಷ್ಠಿ ನಡೆಸಿ ರಾಘವೇಶ್ವರ ಶ್ರೀಗಳು ಪೀಠತ್ಯಾಗ ಮಾಡಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೇ ರಾಘವೇಶ್ವರ ಶ್ರೀ ಅತ್ಯಾಚಾರ ಆರೋಪ ಕೇಳಿ ಬಂದಾಗ ಪೀಠ ತ್ಯಾಗ ಮಾಡಿ ಏಕಾಂತಕ್ಕೆ ಹೋಗಲು ಒಪ್ಪಿದ್ದು, ತದನಂತರ ಮನಸ್ಸು ಬದಲಾಯಿಸಿದರು ಎಂದು ಹವ್ಯಕ ಮಹಾ ಸಭಾದ ಮಾಜಿ ಅಧ್ಯಕ್ಷ ಎಂ.ಎನ್‌. ಭಟ್‌ ಮದ್ಗುಣಿ ಆರೋಪಿಸಿದ್ದರು.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಠದ ಕಾರ್ಯದರ್ಶಿ ಗಜಾನನ ಶರ್ಮಾ, ಮಠದ ಭಕ್ತ ಗೋಪಾಲಕೃಷ್ಣ ಹೆಗ್ಡೆ ಸುದ್ದಿಗೋಷ್ಠಿ ನಡೆಸಿ ಅವರ ಆರೋಪಗಳನ್ನು ಖಂಡಿಸಿ ಸುಳ್ಳು ಆರೋಪ ಮಾಡುತ್ತಿದ್ದು ತನಿಖೆಯ ದಿಕ್ಕು ಬದಲಿಸಿ, ಮಠಕ್ಕೆ ಕೆಟ್ಟ ಹೆಸರು ತರುವ ಉದ್ದೇಶವನ್ನು ಸಮಾನ ಮನಸ್ಕ ವೇದಿಕೆ ಮಾಡುತ್ತಿದೆ. ಪ್ರಭಾವ ಬೀರಿ ಮಠದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಅಲ್ಲದೇ ಸಿಐಡಿ ತನಿಖೆಯಲ್ಲಿ ಶ್ರೀಗಳ ಆಪ್ತ ಸಹಾಯಕ ಕೂಡಾ ಯಾವುದೇ ಸಾಕ್ಷಿಯನ್ನು ನೀಡಿಲ್ಲ. ಸಾಕ್ಷಿಗಳ ಮೇಲೆ ಮಠ ಯಾವುದೇ ಪ್ರಭಾವ ಬೀರುತ್ತಿಲ್ಲ. ಈ ಮಧ್ಯೆ ಸಾಕ್ಷಿಗಳು ಬದಲಾಗುತ್ತಿದ್ದು, ಹೊಸ ಸಾಕ್ಷಿಗಳು ಸೃಷ್ಟಿಯಾಗುತ್ತಿವೆ. ಪೀಠ ತ್ಯಾಗ ಒತ್ತಾಯ ಬಾಲಿಶ ಹೇಳಿಕೆ ಎಂದಿರುವ ಗಜಾನನ ಶರ್ಮಾ, ಮಠದ ಆರ್ಥಿಕ ವಿಭಾಗದಲ್ಲಿ ಹಣಕಾಸು ಕಾರ್ಯದರ್ಶಿಯಾಗಿದ್ದ ಎಂ.ಎನ್.ಭಟ್ ಮದ್ಗುಣಿಯವರು 2014 ರ ನವೆಂಬರ್ ನಲ್ಲಿ ಸಿಐಡಿಗೆ, ಪ್ರೇಮಲತಾ ಅವರು ಉದ್ದೇಶಪೂರ್ವಕವಾಗಿ ಶ್ರೀಗಳಿಗೆ ಕೆಟ್ಟ ಹೆಸರು ತರಲು ಈ ರೀತಿ ಸುಳ್ಳು ಹೇಳುತ್ತಿದ್ದಾರೆ. ನಾನು ಈ ಆರೋಪ ನಂಬಲು ಸಾಧ್ಯವಿಲ್ಲ ಎಂದು ಅವರೇ ಹೇಳಿಕೆ ನೀಡಿದ್ದು ಇದೀಗ ಅವರು ಯಾವುದೋ ಪ್ರಭಾವಕ್ಕೆ ಒಳಗಾಗಿ ಮಠದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದು ಸ್ಪಷ್ಟ ಎಂದು ತಿಳಿಸಿದ್ದಾರೆ.

http://kannadadunia.com/php/NewsList/FullNewsKarnataka.php?news_id=11220

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s