ರಾಘವೇಶ್ವರ ಸ್ವಾಮೀಜಿ ಪೀಠತ್ಯಾಗಕ್ಕೆ ಹವ್ಯಕ ವೇದಿಕೆ ಪಟ್ಟು

ರಾಘವೇಶ್ವರ ಸ್ವಾಮೀಜಿ ಪೀಠತ್ಯಾಗಕ್ಕೆ ಹವ್ಯಕ ವೇದಿಕೆ ಪಟ್ಟು

Posted by: Madhusoodhan Hegde Updated: Saturday, October 24, 2015, 13:08 [IST]

ಬೆಂಗಳೂರು, ಅಕ್ಟೋಬರ್. 24 : ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಕೂಡಲೇ ಪೀಠತ್ಯಾಗ ಮಾಡಬೇಕು ಎಂದು ಸಮಾನ ಮನಸ್ಕ ಹವ್ಯಕ ವೇದಿಕೆ ಆಗ್ರಹಿಸಿದೆ. ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ವೇದಿಕೆ ಪ್ರಮುಖರು ಮಠದ ಪರಂಪರೆ ಕಾಪಾಡಲು ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಮಾನ ಮನಸ್ಕರ ಹವ್ಯಕ ವೇದಿಕೆ ಗೌರವಾಧ್ಯಕ್ಷ, ಮಾಜಿ ಸಚಿವ ಕೆ ಎಚ್ ಶ್ರೀನಿವಾಸ್, ಭಕ್ತರಿಗೆ ಮಠದ ಮೇಲಿನ ಗೌರವ ಕಡಿಮೆಯಾಗಲು ಇತ್ತೀಚಿನ ಕೆಲ ಬೆಳವಣಿಗೆಗಳು ಕಾರಣವಾಗಿವೆ. ಆರೋಪ ಹೊತ್ತಿರುವ ಸ್ವಾಮೀಜಿ ಪೀಠ ತ್ಯಾಗ ಮಾಡಿದರೆ ಉತ್ತಮ. ಅದರಿಂದ ಸಮುದಾಯ ಭದ್ರತೆ ಮತ್ತು ಗೌರವ ಕಾಪಾಡಿದಂತಾಗುತ್ತದೆ ಎಂದು ಹೇಳಿದರು.

ಗಾಯಕಿ ಪ್ರೇಮಲತಾ ದಿವಾಕರ್ ಮತ್ತು ಯಕ್ಷಗಾನ ಕಲಾವಿದೆಯೊಬ್ಬರು ಸ್ವಾಮೀಜಿ ತಮ್ಮ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದರು. ಅಲ್ಲದೇ ಸ್ವಾಮೀಜಿ ಮೇಲೆ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಇದೆಲ್ಲರಿಂದ ಹೊರಬರುವವರೆಗೂ ಸ್ವಾಮೀಜಿ ಪೀಠ ತ್ಯಾಗ ಮಾಡಬೇಕು ಎಂದು ಶ್ರೀನಿವಾಸ್ ಆಗ್ರಹಿಸಿದ್ದಾರೆ. ಧರ್ಮ ಬೋಧನೆ ಮಾಡಲು ರಾಮಚಂದ್ರಾಪುರ ಮಠ ಸ್ಥಾಪನೆಯಾಗಿದೆ. ಮಠಕ್ಕೆ 1,200 ವರ್ಷಗಳ ಇತಿಹಾಸ ಇದೆ. ಶುದ್ಧ ಚಾರಿತ್ರ್ಯ ಉಳ್ಳವರು ಪೀಠದಲ್ಲಿರಬೇಕು. ಕಳಂಕಿತರು ಪೀಠದಲ್ಲಿ ಮುಂದುವರೆಯಬಾರದು ಎಂದು ಹೇಳಿದರು.

ದಾಖಲಾಗಿರುವ ಪ್ರಕರಣಗಳಿಗೆ ಸ್ವಾಮೀಜಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ. ಎರಡು ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸುತ್ತಿದ್ದು ಹಲವಾರು ದಾಖಲೆಗಳನ್ನು ಕಲೆಹಾಕಿದೆ.

source t: http://kannada.oneindia.com/news/karnataka/havyaka-vedike-urges-raghaveshwara-swamiji-must-give-up-power-097918.html

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s