ಅನೇಕ ಹೆಣ್ಮಕ್ಕಳ ಮೇಲೆ ರಾಘವೇಶ್ವರರ ಕಾಮಚೇಷ್ಟೆ

Asianet News Thursday 22 October 2015 09:21 pm IST Karnataka

ಪ್ರೇಮಲತಾರಷ್ಟೇ ಅಲ್ಲ, ಅನೇಕ ಹೆಣ್ಮಕ್ಕಳ ಮೇಲೆ ರಾಘವೇಶ್ವರರ ಕಾಮಚೇಷ್ಟೆ: ರಾಮಕೃಷ್ಣ ಭಟ್ ಎಂಬುವರ ಸಾಕ್ಷ್ಯ

ಬೆಂಗಳೂರು(ಅ. 22): ರಾಮಚಂದ್ರಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಮಹಾನ್ ಸ್ತ್ರೀಲೋಲ. ದೂರು ದಾಖಲಿಸಿರೋ ಮಹಿಳೆಯಷ್ಟೇ ಅಲ್ಲ, ಬೇರೆ ಹೆಣ್ಣು ಮಕ್ಕಳ ಜೊತೆಯೂ ತಮ್ಮ ಚೇಷ್ಟೆ ತೋರಿದ್ದಾರೆ ಎಂದು ಸಾಕ್ಷಿಗಳು ಸಿಐಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಪ್ರೇಮಲತಾ ಅವರ ದೂರದ ಸಂಬಂಧಿ ರಾಮಕೃಷ್ಣ ಭಟ್ ನೀಡಿರೋ ಹೇಳಿಕೆ ಇದಕ್ಕೆ ಪುಷ್ಟಿ ನೀಡಿದೆ.

‘ಸ್ತ್ರೀಲೋಲ ಸ್ವಾಮೀಜಿ’
ರಾಮಕಥಾ ಗಾಯಕಿ ಪ್ರೇಮಲತಾ ಹಾಗೂ ರಾಘವೇಶ್ವರ ಶ್ರೀ ಮಧ್ಯೆ ನಡೆದಿರೋ ಘಟನೆಗಳು ನನ್ನ ತಂಗಿಯ ಮಕ್ಕಳು ಮತ್ತು ಸ್ವಾಮೀಜಿ ನಡುವಿನ ಘಟನೆಗಳಿಗೂ ಹೊಂದಾಣಿಕೆ ಇವೆ. ಭಕ್ತರನ್ನ ಸ್ವಾಮೀಜಿ ಹೇಗೆಲ್ಲಾ ಲೈಂಗಿಕವಾಗಿ ಶೋಷಣೆ ಮಾಡುತ್ತಿದ್ದರು ಎಂಬ ಪೂರ್ಣ ಚಿತ್ರಣ ಪ್ರೇಮಲತಾ ಸಂಬಂಧಿ ನೀಡಿರುವ ಹೇಳಿಕೆಯಲ್ಲಿದೆ.

“ಪ್ರೇಮಲತಾ ಹಾಗೂ ದಿವಾಕರ್ ಶಾಸ್ತ್ರೀ ಕಾಲೇಜು ದಿನಗಳಿಂದಲೂ ಗೊತ್ತು. ಪ್ರೇಮಲತಾ ನನಗೆ ದೂರದ ಸಂಬಂಧಿ. 2008ರಲ್ಲಿ ಒಮ್ಮೆ ದಿವಾಕರ್ ಶಾಸ್ತ್ರೀ ಮನೆಗೆ ಭೇಟಿ ನೀಡಿದ್ದೆ. ಆಗ ದಿವಾಕರ್ ಶಾಸ್ತ್ರಿ ಸ್ವಾಮೀಜಿ ಸೇವೆಯಲ್ಲಿ ತೊಡಗಿಕೊಂಡಿದ್ರು. ಇದನ್ನ ತಿಳಿದ ನಾನು ನಿಮ್ಮ ಮಗಳನ್ನ ಮಠಕ್ಕೆ ಕರೆದುಕೊಂಡು ಹೋಗಬೇಡಿ ಎಂದು ದಿವಾಕರ್ ಅವರಿಗೆ ಹೇಳಿದ್ದೆ. ಏಕೆಂದರೆ ಸ್ವಾಮೀಜಿಗೆ ಅತಿಯಾದ ಸ್ತ್ರೀವ್ಯಾಮೋಹವಿದೆ.

“ನನ್ನ ತಂಗಿಯ ಮಗಳ ವಿಚಾರದಲ್ಲೂ ಇದೇ ಅನುಭವ ಆಗಿದೆ. ನನ್ನ ತಂಗಿಯ ಪುತ್ರಿ 2006ರಲ್ಲಿ ಪಿಯುಸಿ ಓದುತ್ತಿದ್ದಳು. ಆಗ 16 ವರ್ಷದ ಯುವತಿ. ಧ್ಯಾನ, ತ್ರಾಟಕ, ಯೋಗ ಕಲಿಸುತ್ತೇನೆ. ಇದರಿಂದ ಪರೀಕ್ಷೆ ಬರೆಯಲು ಒಳ್ಳೆಯ ಜ್ಞಾನ ಬರುತ್ತದೆ ಎಂದು ಆಕೆಯನ್ನ ನಂಬಿಸಿದ್ದರು. ನಂತರ ಆಕೆ ಆಗಾಗ ಶ್ರೀಗಳ ಬಳಿ ಹೋಗುತ್ತಿದ್ದರು. ಆ ಸಂದರ್ಭದಲ್ಲಿ ಆಕೆಯ ವರ್ತನೆಗಳಲ್ಲಿ ಬದಲಾವಣೆಗಳು ಕಂಡು ಬಂದಿತ್ತು. ಆಕೆ ಸ್ವಾಮೀಜಿ ಹೇಳಿ ಕೊಡುತ್ತಿದ್ದ ಧ್ಯಾನದ ಬಗ್ಗೆ ಬರೆದಿದ್ದಳು. ಡೈರಿಯ ಕೊನೆ ಪುಟದಲ್ಲಿ ಬರೆದಿದ್ದೇನೆಂದರೆ, ನಾನು ಧ್ಯಾನ ಮಾಡುತ್ತಿದ್ದಾಗ ರಾಮನೇ ನನ್ನ ಎದುರು ಬಂದು ನಿಂತಂತಾಯಿತು. ನಾನು ರಾಮನನ್ನು ಗಟ್ಟಿಯಾಗಿ ಅಪ್ಪಿಕೊಂಡೆ, ನನ್ನನ್ನ ರಾಮನಿಗೆ ಅರ್ಪಿಸಿಕೊಂಡೆ. ಇದಲ್ಲದೆ ಸ್ವಾಮಿಯ ಧ್ಯಾನ ತರಬೇತಿ ಕೋಣೆಗೆ ಆಕೆ ಒಬ್ಬಳೆ ಹೋಗುತ್ತಿದ್ದಳು. ಆ ಸಂದರ್ಭದಲ್ಲಿ ತನ್ನ ತಂಗಿ ಹೊರಗೆ ಉಳಿಯುತ್ತಿದ್ದಳು. ನಾನು ಮೂರು ಬಾರಿ ಮಠಕ್ಕೆ ಹೋದಾಗ ಕೂಡ ಇದೆ ರೀತಿ ಆಗಿತ್ತು.

“ಇದೇ ರೀತಿ ಇನ್ನೊಬ್ಬ ತಂಗಿಯ ಮಗಳನ್ನೂ ರಾಘವೇಶ್ವರರು ಉಪದೇಶ ನೀಡಲು ಕರೆಸಿಕೊಳ್ಳುತ್ತಿದ್ದರು. ಧ್ಯಾನ ಮಾಡಲು ಹೇಳುತ್ತಿದ್ದ ಸ್ವಾಮೀಜಿ ಆಕೆಯ ಹಣೆಗೆ ಮುತ್ತು ಕೊಟ್ಟಿದ್ದರು. ಆಗ ಆಕೆ ವಿಚಲಿತಳಾಗಿದ್ದಳು. ಅಲ್ಲದೆ ಆಕೆ ನಕಾರಾತ್ಮಕವಾಗಿ ಸ್ಪಂದಿಸಿ ತಕ್ಷಣ ಹೊರಗೆ ಬಂದಿದ್ದಳು. ಆಗ ಸ್ವಾಮೀಜಿ ಆಕೆಯ ಪೋಷಕರಿಗೆ ಹೇಳಿದ್ದೇನೆಂದರೆ, ಈಗ ವ್ಯಾಘ್ರಳಾಗಿದ್ದಾಳೆ. ಆಕೆ ಧ್ಯಾನ ಕಲಿಯುವ ಸ್ಥಿತಿಯಲ್ಲಿ ಈಗಿಲ್ಲ. ಒಂದೆರಡು ದಿನಗಳಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿ ಕಳುಹಿಸಿದ್ದರು.”

ಹೀಗೆ ರಾಮಚಂದ್ರಾಪುರ ಮಠದ ಕಾವಿಧಾರಿಯ ಲೀಲೆಗಳು ಬಿಚ್ಚಿಕೊಂಡಿವೆ. ಕೇವಲ ದೂರು ಕೊಟ್ಟ ಇಬ್ಬರು ಮಹಿಳೆಯರು ಮಾತ್ರವಲ್ಲ, ಕೆಲವು ಹೆಣ್ಣು ಮಕ್ಕಳ ಜೊತೆಯೂ ರಾಘವೇಶ್ವರ ಶ್ರೀ ಆಟವಾಡಿದ್ದಾರೆ ಅನ್ನೋದನ್ನ ಈ ಹೇಳಿಕೆ ಪುಷ್ಟೀಕರಿಸುತ್ತೆ.

– ರಮೇಶ್ ಕೆ.ಹೆಚ್., ಸುವರ್ಣ ನ್ಯೂಸ್

http://www.suvarnanews.tv/news/Karnataka/more-sexual-assault-allegations-on-raghaveshwara-15321

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s