ರಾಜ್ಯ ಸರಕಾರ ಅತಿ ತುರ್ತಾಗಿ ಎರಡು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ

ರಾಜ್ಯ ಸರಕಾರ ಅತಿ ತುರ್ತಾಗಿ ಎರಡು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ

ಮಾನ್ಯರೆ,

ರಾಮಚಂದ್ರಾಪುರ ಮಠದ ಸ್ವಾಮಿ ಕುರಿತ ‘ಆರೋಪ ಪಟ್ಟಿ’ಯನ್ನು ಕನ್ನಡದ ಬಹುತೇಕ ಎಲ್ಲ ಪ್ರಮುಖ ದಿನಪತ್ರಿಕೆಗಳು ಸರಣಿಯೋಪಾದಿಯಲ್ಲಿ ಪ್ರಕಟಿಸುತ್ತಿವೆ. ಆ ವರದಿಗಳನ್ನು ಓದಿದ ಮೇಲೆ ನನ್ನದೊಂದು ಅಭಿಪ್ರಾಯವನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ.

ರಾಜ್ಯ ಸರಕಾರ ಅತಿ ತುರ್ತಾಗಿ ಎರಡು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ:

1. ಕರ್ನಾಟಕದ ಉಚ್ಚ ನ್ಯಾಯಾಲಯದ ಅನುಮತಿ ಪಡೆದು ಈ ಸ್ವಾಮಿಯನ್ನು ಬ್ರೈನ್ ಮ್ಯಾಪಿಂಗ್/ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಲೇಬೇಕಿದೆ. ಬಯಲಾದವು ಎರಡಾದರೆ, ಬಯಲಾಗದವು ಇನ್ನೆಷ್ಟೋ! ಈ ಸ್ವಾಮಿ ದೇವರು, ಧರ್ಮಗಳ ಮೂಲಕ ಅಮಾಯಕ ಭಕ್ತರನ್ನು ಭೀತಿಗೊಳಪಡಿಸಿ ನಿರಾತಂಕವಾಗಿ ಅತ್ಯಾಚಾರವೆಸಗುತ್ತಾ ಬಂದಿರುವಂತೆ ಕಾಣುತ್ತಿದೆ. ಈ ಸ್ವಾಮಿಯಿಂದ ಇನ್ನೂ ಅನೇಕ ಹೆಣ್ಣುಮಕ್ಕಳು ದೌರ್ಜನ್ಯಕ್ಕೀಡಾಗಿರಬಹುದು ಎಂಬ ಗುಮಾನಿ ನನ್ನದು. ಮಠದೊಳಗಿನ ಕೆಲವರು ಈತನ ಬೆನ್ನಿಗಿರುವುದು ನೋಡಿದರೆ, ಈತನ ಎಲ್ಲ ಅತ್ಯಾಚಾರ ಚಟುವಟಿಕೆಗಳೂ ಅವರಿಗೆಲ್ಲ ಗೊತ್ತಿದ್ದಂತೆ ತೋರುತ್ತಿದೆ. ಈ ಕಾರಣಕ್ಕಾಗಿ ರಾಜ್ಯ ಸರಕಾರ ಈತನ ವಿರುದ್ಧ ಅಂತಿಮ ಆರೋಪಪಟ್ಟಿ ಸಿದ್ಧಗೊಳ್ಳುವ ಮುನ್ನ ಬ್ರೈನ್ ಮ್ಯಾಪಿಂಗ್/ಪಾಲಿಗ್ರಾಫ್ ಪರೀಕ್ಷೆಗೆ ಒಳಪಡಿಸಿ ಈತನಿಂದ ಇನ್ನಷ್ಟು ಮಾಹಿತಿ ಸಂಗ್ರಹಿಸಬೇಕಿದೆ.

2. ಈ ಸ್ವಾಮಿಯ ಪಾದ ತೊಳೆದು ಅದನ್ನೇ ತೀರ್ಥವೆಂದು ಕುಡಿಯುತ್ತಿರುವ ರಾಮಚಂದ್ರಾಪುರ ಮಠದ ಭಕ್ತ ಸಮೂಹಕ್ಕೆ ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿವೇಕ ಹೇಳಬೇಕಾಗಿದೆ.

ಕೆ. ಎಲ್. ಚಂದ್ರಶೇಖರ್, ಐಜೂರು

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s