ರಾಘವೇಶ್ವರ ಶ್ರೀಗಳ ಮತ್ತಷ್ಟು ಲೀಲೆಗಳು ಬಹಿರಂಗ..

ಸಿಐಡಿ ಚಾರ್ಜ್‘ಶೀಟ್‘ನಲ್ಲಿ ರಾಘವೇಶ್ವರ ಶ್ರೀಗಳ ಮತ್ತಷ್ಟು ಲೀಲೆಗಳು ಬಹಿರಂಗ.. ಋತುಸ್ರಾವದಲ್ಲೂ ಬಿಡದೆ ಮಾಡಿದ್ದಾರಂತೆ ರೇಪ್

Asianet News Monday 19 October 2015 08:20 pm IST

ಬೆಂಗಳೂರು(ಅ.19): ರಾಮಕಥಾ ಗಾಯಕಿ ಪ್ರೇಮಲತಾ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಸಿಐಡಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ರಾಘವೇಶ್ವರ ಶ್ರೀಗಳ ಮತ್ತಷ್ಟು ಲೀಲೆಗಳು ಬಯಲಾಗಿವೆ. ರಾಮನವಮಿಯಂದೂ ಮೃಗದಂತೆ ವರ್ತಿಸಿದ್ದ ಸ್ವಾಮೀಜಿ, ಶಂಕರಚಾರ್ಯರಿಗೂ ಸ್ತ್ರೀಯರ ಸಂಪರ್ಕ ಇತ್ತು ಅಂತ ತನ್ನನ್ನ ಸಮರ್ಥಿಸಿಕೊಂಡಿದ್ದಾರೆ.

ಭಕ್ತರ ಪಾಲಿಗೆ ಶ್ರೀರಾಮನ ಅವತಾರ ಅಂತಲೇ ಬಿಂಬಿತವಾಗಿರೋ ರಾಘವೇಶ್ವರ ಶ್ರೀಗಳ ಕೃಷ್ಣ ಲೀಲೆಗಳನ್ನ ಸಿಐಡಿ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ ಪ್ರತಿ ಇವಾಗ ಸುವರ್ಣನ್ಯೂಸ್‘​​ಗೆ ಲಭ್ಯವಾಗಿದೆ..

ಚಾರ್ಜ್​​​ಶೀಟ್‘​​ನಲ್ಲಿ ಪ್ರೇಮಲತಾ ಹೇಳಿಕೆ:  

‘ಸ್ವಾಮಿಯ ವರ್ತನೆಯನ್ನ ವಿರೋಧಿಸಿದಾಗ ಸಂತ್ರಸ್ತೆಗೆ ನಮ್ಮದು ಭೋಗ ವರ್ಧನವಾಳ ಪರಂಪರೆ. ಇದು ರಾಜಗುರು ಪೀಠ, ಹಾಗಾಗಿ ನಾವು ಈ ಭೋಗಗಳನ್ನು ಅನುಭವಿಸಬಹುದು. ಹಿಂದಿನ ಸ್ವಾಮೀಜಿಗಳಾದ ಆದಿಶಂಕರಾಚಾರ್ಯರಿಗೂ ಸ್ತ್ರೀ ಸಂಪರ್ಕದಿಂದ ಬರುವ ರೋಗಗಳಿದ್ದವು. ನಮ್ಮ ದೊಡ್ಡ ಸ್ವಾಮೀಜಿಯೊಬ್ಬರು ಒಬ್ಬ ಭಕ್ತೆಯ ಮನೆಯಲ್ಲಿಯೇ ಬಹಳ ದಿನಗಳ ಕಾಲ ಉಳಿದಿದ್ದು ಅವರಿಗೂ ಆಕೆಗೂ ಸಂಪರ್ಕವಿತ್ತು. ಇಷ್ಟು ದೊಡ್ಡ ಪರಂಪರೆಯ ಪೀಠದಲ್ಲಿ ಕುಳಿತು ಗೊತ್ತಿದ್ದುಕೊಂಡು ನಾವೇ ಇಷ್ಟು ದೊಡ್ಡ ಅಪರಾಧ ಮಾಡುತ್ತಿರುವಾಗ ನೀನು ಯಾಕೆ ಇಷ್ಟು ಚಿಂತೆ ಮಾಡುತ್ತೀಯಾ? ಹೀಗಂತ ಹೇಳುವ ಮೂಲಕ ತಮ್ಮ ಕೃತ್ಯವನ್ನ ಸಮರ್ಥಿಸಿಕೊಳ್ಳುತ್ತಿದ್ದರು. ಸ್ವಾಮೀಜಿ ನನ್ನ ಬಾಯಿಯಲ್ಲಿ ಅಶ್ಲೀಲ ಶಬ್ದಗಳನ್ನು ಹೇಳು ಅಥವಾ ಇ-ಮೇಲ್ ಮೂಲಕ ಬರೆದು ಕಳುಹಿಸು ಎಂದು ಒತ್ತಾಯ ಮಾಡುತ್ತಿದ್ದರು. ಅವರ ಒತ್ತಾಯಕ್ಕೆ ಮಣಿದು ‘ನಾನು ನಿಮ್ಮನ್ನು ತುಂಬಾ ಪ್ರೀತಿಸುತ್ತೇನೆ’ ಎಂದು ಇ-ಮೇಲ್ ಮಾಡಿದ್ದೆ. ಬಳಿಕ ಅವರೇ ಡಿಲೀಟ್ ಮಾಡಿಸಿದ್ದರು. ಬಲತ್ಕಾರ ಮಾಡುವ ಮುಂಚೆ ಅವರ ಕೊರಳಿನಲ್ಲಿರುವ ಸ್ಫಟಿಕದ ಮಾಲೆಯನ್ನು ತೆಗೆದಿಡುತ್ತಿದ್ದರು. ಅತ್ಯಾಚಾರದ ನಂತರ ರಾಮನಮೂರ್ತಿ ಮುಂದೆ ನನ್ನಿಂದ ಆ ಮಾಲೆಯನ್ನು ಹಾಕಿಸಿಕೊಳ್ಳುತ್ತಿದ್ದರು. ರಾಮನವಮಿ, ಶಿವರಾತ್ರಿ ದಿನವೂ ದೇವರ ಹೆಸರಿನಲ್ಲಿ ಹೆದರಿಸಿ ನಿರಂತರ ಅತ್ಯಾಚಾರ ಎಸಗುತ್ತಿದ್ದರು. ರಾಮಕಥಾ ಕಾರ್ಯಕ್ರಮಕ್ಕೆಂದು ಬೇರೆ ಬೇರೆ ಊರುಗಳಿಗೆ ತೆರಳಿದಾಗ ನಾನು ಋತುಸ್ರಾವದಲ್ಲಿದ್ದರೂ ಬಿಡದೆ ಅತ್ಯಾಚಾರ ಎಸಗಿದ್ದಾರೆ. ಮೈ ಮೇಲೆ ಕಾವಿ ಧರಿಸಿದ ರಾಘವೇಶ್ವರ ಸ್ವಾಮೀಜಿ ಅದೇ ವಸ್ತ್ರದಲ್ಲೇ ವ್ಯಾಘ್ರನಂತೆ ಮುಗಿ ಬೀಳುತ್ತಿದ್ದರು. ಹೊರ ರಾಜ್ಯಗಳಿಗೂ ಸೇರಿದಂತೆ ತಾವಿದ್ದ ಕಡೆ ನನ್ನನ್ನು ಕರೆಸಿಕೊಳ್ಳುತ್ತಿದ್ದರು. ಅನಾರೋಗ್ಯ ಹಾಗೂ ರಕ್ತಸ್ರಾವವಿದ್ದರೂ ಕೋಣೆಗೆ ಕರಿಸಿಕೊಂಡು ಹಲವು ಬಾರಿ ಒತ್ತಾಯಪೂರ್ವಕವಾಗಿ ಅತ್ಯಾಚಾರ ಮಾಡಿದ್ದಾರೆ’

ಹೀಗಂತ ಸಂತ್ರಸ್ತೆ ಪ್ರೇಮಲತಾ ಸಿಐಡಿ ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಕಾವಿಯೊಳಗಿನ ಕಾಮಾಂಧನನ್ನು ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ಒಟ್ಟಾರೆ ರಾಮಚಂದ್ರಾಪುರ ಮಠದ ಶ್ರೀಗಳು ನೂರಾರು ಬಾರಿ ತನ್ನ ಮೇಲೆ ಅತ್ಯಾಚಾರಗೈದಿದ್ದಾರೆ ಅಂತ ಸಂತ್ರಸ್ತೆ ರಾಮಕಥಾ ಗಾಯಕಿ ಆರೋಪಿಸಿದ್ದಾರೆ..

ಬೆಂಗಳೂರಿಂದ ರಮೇಶ್​​.ಕೆ.ಹೆಚ್​, ಕ್ರೈಂ ಬ್ಯೂರೋ, ಸುವರ್ಣ ನ್ಯೂಸ್​

 

source: http://www.suvarnanews.tv/news/Karnataka/raghaveshwara-sree-sex-scandal-expose-in-charge-sheet-15248

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s