ಧರ್ಮವು ಎಂದಿಗೂ ಪ್ರಚಾರವನ್ನು ಬಯಸುವುದಿಲ್ಲ.

ಧರ್ಮವು ಎಂದಿಗೂ ಪ್ರಚಾರವನ್ನು ಬಯಸುವುದಿಲ್ಲ.

ಏಕೆಂದರೆ ಅದು ಈ ಮನುಕುಲದ ಯಾದೃಚ್ಛಿಕ ಜೀವನ ವಿಧಾನವಾಗಿದೆ.

ಅದು ದೇವರು, ಪೂಜೆ, ಆರಾಧನೆ, ಭಕ್ತಿ, ಇತ್ಯಾದಿಗಳನ್ನು ಮೀರಿದ್ದಾಗಿದೆ.

ಮತ ಎಂಬುದು ಧರ್ಮದ ಅನುಸರಣೆಯಲ್ಲಿ ವ್ಯಕ್ತಿಯೊಬ್ಬ ಕಂಡುಕೊಂಡ ಮಾರ್ಗವಾಗಿದೆ. ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಿರುತ್ತದೆ. ಇಲ್ಲಿ ದೇವರು, ಪೂಜೆ, ಆರಾಧನೆ, ಭಕ್ತಿ, ಇತ್ಯಾದಿ ಪ್ರಲೋಭನೆಗಳು ಕಾನಿಸಿಕೊಳ್ಳುತ್ತವೆ. ಇವೆಲ್ಲವೂ ನಮಗೆ ಸತ್ಯದರ್ಶನ ಮಾಡಿಸುತ್ತವೆ ಎಂಬ ನಂಬಿಕೆ.

ಸತ್ಯ ದರ್ಶನಕ್ಕೆ ತನ್ನದೇ ಮಾರ್ಗ ಅನುಸರಿಸು ಎಂಬುದು ಮತ ಪ್ರವರ್ತಕರ ಅಂಬೋಣ. ಅದನ್ನನುಸರಿಸುವುದು ಮತೀಯರ ಕಾಯಕ. ಇಲ್ಲಿ ಅನುಸರಿಸುವುದರೊಂದಿಗೆ ಪ್ರಸಾರದ ಉದ್ದೇಶವೂ ಅಡಕವಾಗಿರುತ್ತವೆ. ಅಧ್ಯಾತ್ಮವೆಂಬುದು ಇಡೀ ಮನುಕುಲಕ್ಕೇ ನಂಬಿಕೆಯ ಮೂಲಸ್ರೋತವಾದರೂ ಆ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮತಗಳು ಆವಿರ್ಭವಿಸಿದ್ದು ವೇದ್ಯವಾಗುತ್ತದೆ.

ಕೆಲವು ಮತಗಳು ತಮ್ಮ ಮತ ಪ್ರಚಾರಕ್ಕಾಗಿ ಅನ್ಯಾನ್ಯ ಮಾರ್ಗಗಳನ್ನನುಸರಿಸಿದ್ದು ಇತಿಹಾಸದಿಂದ ವೇದ್ಯವಾಗುತ್ತದೆ. ಸೇವೆ, ಜ್ಞಾನ, ಯುದ್ಧ. ಪ್ರಭುತ್ವ ಆರಾಧನೆ ಇವು ಆ ಮಾರ್ಗಗಳಾಗಿವೆ.

ಭಾರತೀಯ ಮತಗಳ ಪ್ರಸಾರವು ಜ್ಞಾನ, ಪ್ರಭುತ್ವ ಮತ್ತು ಆರಾಧನಾ ಮಾರ್ಗವನ್ನು ಅನುಸರಿಸಿಕೊಂಡು ಬಂದರೆ ಯವನ, ಯುರೋಪೀಯ ಮತಗಳು ಕ್ರಮವಾಗಿ ಯುದ್ಧ ಮತ್ತು ಸೇವೆಯ ಮಾರ್ಗವನ್ನು ಅನುಸರಿಸಿದ್ದು ಗೋಚರಿಸುತ್ತದೆ.
ಇತ್ತೀಚೆಗೆ ಭಾರತೀಯ ಮತ ಪ್ರಸಾರಕರೂ ಯುದ್ಧ ಮಾರ್ಗವನ್ನೇ ಆಯ್ದುಕೊಳ್ಲುತ್ತಿರುವುದು ಧರ್ಮಕ್ಕೆ ಮಾಡುವ ಅಪಚಾರವೆನಿಸುತ್ತದೆ.

ಯುದ್ಧ ಮಾತ್ತು ಸೇವೆಯ ಮಾರ್ಗದಲ್ಲಿ ಜ್ಞಾನ ಮತ್ತು ಆರಾಧನೆಯ ಭಾವ ಗೌಣವಾಗುತ್ತದೆ. ಆ ಸ್ಥಾನದಲ್ಲಿ ವೈರ, ಈರ್ಷ್ಯೆ, ಕುರುಡು ನಂಬಿಕೆಗಳು ಬಂದು ನಿಲ್ಲುತ್ತವೆ. ಇದು ಲೋಕ ಕ್ಷೋಭೆಗೆ ಕಾರಣವಾಗುತ್ತದೆ.ಮನುಷ್ಯ ತನ್ನ ’ಅಸ್ಮಿತೆ’ಯನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ.

source: https://www.facebook.com/groups/1499395003680065/permalink/1673597659593131/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s