ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಸಹೋದರ ವೆಂಕಟಕೃಷ್ಣ, ಸಂಬಂಧಿಕ ಡಾ.ಗಣೇಶ್‌ರವರಿಗೆ ಬೆದರಿಕೆ ಪತ್ರ

ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಸಹೋದರ ವೆಂಕಟಕೃಷ್ಣ, ಸಂಬಂಧಿಕ ಡಾ.ಗಣೇಶ್‌ರವರಿಗೆ ಬೆದರಿಕೆ ಪತ್ರ

Wednesday, October 7th, 2015 | suddiputtur

ಪುತ್ತೂರು: ರಾಮಕಥಾ ಗಾಯಕಿ ಪ್ರೇಮಲತಾ ದಿವಾಕರ್ ಸಹೋದರ ಪುತ್ತೂರಿನ ವೆಂಕಟಕೃಷ್ಣ ಕೆ.ಕೆ ಮತ್ತು ಸಂಬಂಧಿಕ ಕೆದಿಲ ನಿವಾಸಿ ಡಾ.ಗಣೇಶ್‌ರವರಿಗೆ ಬೆದರಿಕೆ ಪತ್ರ ಬಂದಿರುವುದಾಗಿ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ವೆಂಕಟಕೃಷ್ಣ ಮತ್ತು ಡಾ. ಗಣೇಶ್‌ರವರಿಗೆ ಅ.೩ರಂದು ಅಂಚೆ ಮೂಲಕ ಕಂಪ್ಯೂಟರ್ ಟೈಪ್ ಮಾಡಿದ ಪತ್ರವೊಂದು ಬಂದಿದ್ದು, ಅದರಲ್ಲಿ ಶ್ಯಾಮಶಾಸ್ತ್ರಿಯವರು ಮೃತಪಡಲು ನೀವೇ ಕಾರಣ. ಸತ್ಯ ಒಪ್ಪಿಕೊಂಡು ನಾಟಕಕ್ಕೆ ಕೊನೆಯ ಪರದೆ ಎಳೆಯುವಂತೆ ಹೇಳುತ್ತಾ ಇದ್ದೇವೆ. ತಪ್ಪಿದಲ್ಲಿ ಮುಂದಿನ ಅನಾಹುತಗಳಿಗೆ ನೀವೇ ಜವಾಬ್ದಾರರು ಎಂದು ಬರೆದಿರುವ ಪತ್ರದ ಕೊನೆಯಲ್ಲಿ ಶ್ಯಾಮ ಶಾಸ್ತ್ರಿಗಳ ಅಭಿಮಾನಿ ಬಳಗ ಕೆದಿಲ ಎಂದಿತ್ತು. ಈ ಪತ್ರವನ್ನು ಆಧಾರವಾಗಿಟ್ಟುಕೊಂಡು ವೆಂಕಟಕೃಷ್ಣರವರು ಮತ್ತೊಂದು ನಗರ ಪೊಲೀಸರಿಗೆ ದೂರು ನೀಡಿದ್ದು ಶ್ಯಾಮಶಾಸ್ತ್ರಿ ಅಭಿಮಾನಿ ಬಳಗ ನಮಗೆ ಪತ್ರ ಬರೆಯಲು ಸಾಧ್ಯವಿಲ್ಲ. ನಾವೆಲ್ಲ ಶ್ಯಾಮಶಾಸ್ತ್ರಿಗಳ ಅಭಿಮಾನಿಗಳು, ಇದು ಏನಿದ್ದರೂ ರಾಘವೇಶ್ವರ ಸ್ವಾಮೀಜಿಯವರ ಕಡೆಯವರ ಕೃತ್ಯ. ಅದೂ ಅಲ್ಲದೆ ಸ್ವಾಮೀಜಿಗಳು ತನ್ನ ವಿರೋಧಿಗಳ ಸದ್ದುನ್ನು ಅಡಗಿಸಬೇಕು ಎಂದು ಕರೆ ಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಯವರ ಮೇಲಿರುವ ಆರೋಪವನ್ನು ತಪ್ಪಿಸಲು ಮಾಡುವ ಫ್ರೀ ಪ್ಲ್ಯಾನ್ ಇದಾಗಿರಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶ್ಯಾಮಪ್ರಸಾದ್ ಶಾಸ್ತ್ರೀಯವರ ವಿರೋಧಿ ಅಭಿಮಾನಿಗಳ ಕೃತ್ಯ:

ಶ್ಯಾಮ ಪ್ರಸಾದgವರ ಕೊಂದ ಅಭಿಮಾನಿಗಳು ಈ ಪತ್ರ ಬರೆದಿರಬೇಕು. ಇದು ಅವರ ವಿರೋಧಿ ಅಭಿಮಾನಿಗಳದ್ದೇ ಕೃತ್ಯ. ಬೆದರಿಕೆ ಪತ್ರದಲ್ಲಿ ನೂರಕ್ಕೆ ನೂರು ಶ್ಯಾಮ ಪ್ರಸಾದ್ ಅಭಿಮಾನಿಗಳ ಪಾತ್ರವಿಲ್ಲ ಎಂದು ಶ್ಯಾಮ ಪ್ರಸಾದ್ ಅಭಿಮಾನಿ ಬಳಗದ ಚೆನ್ನಪ್ಪ ಕೆದಿಲರವರು ತಿಳಿಸಿದ್ದಾರೆ

source: http://suddinews.com/puttur/2015/10/07/206574/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s