ಮಾತೆಯರೇ ಬನ್ನಿ ನಾವು ನಿಮ್ಮನ್ನು ರಕ್ಷಿಸುತ್ತುದ್ದೇವೆ ಎಂದು ಪ್ರದರ್ಶಿಸಿ ನಮಗೆ ಬೆಂಬಲ ನೀಡಿ

ಮಾತೆಯರೇ ಬನ್ನಿ ನಾವು ನಿಮ್ಮನ್ನು ರಕ್ಷಿಸುತ್ತುದ್ದೇವೆ ಎಂದು ಪ್ರದರ್ಶಿಸಿ ನಮಗೆ ಬೆಂಬಲ ನೀಡಿ

“ಬರೇ ಕಾಮ
ಅಂಜನಾ ನಂದನಂ ವೀರಂ ಜಾನಕೀ ಶೋಕ ನಾಶನಂ
ಕಪೀಶಂ ಅಕ್ಷ ಹಂತಾರಂ ವಂದೇ ಲಂಕಾ ಭಯಂಕರಂ

ನಮ್ಮ ಪರಿಸ್ಥಿತಿ ಈಗ ಬಹಳ ಉಲ್ಬಣಿಸುತ್ತಿದೆ. ವರ್ಷದಿಂದ ನಾವು ಹೊರಗೆ ಎಷ್ಟೇ ಬಿಲ್ಡಪ್ ಕೊಟ್ಟರೂ ಒಳಗೆ ಪುಕು ಪುಕು ಹತ್ತಿದ್ದು ಪೂರ್ತಿ ಹೋಗಲೇ ಇಲ್ಲ. ಹಾಗಂತ ನಮ್ಮ ಬುಲ್ ಪೀನದ ಬುಸ್ಸಪ್ಪ ಸುಮ್ಮನೆ ಕುಳಿತುಕೊಳ್ಳುವವನಲ್ಲ. ಕಳೆದೊಂದು ವರ್ಷದಲ್ಲಿ ನಾವು ಕಮ್ಮಿ ಕಮ್ಮಿ ಎಂದರೂ ದಿನಕ್ಕೊಂದು ಬಾರಿಯಂತೆ ಹಾರುತ್ತಲೇ ಬಂದಿದ್ದೇವೆ. ಆದರೆ ನಾವು ಹಾರುತ್ತಿದ್ದೇವೆ ಎಂಬುದು ನಮ್ಮ ಸುತ್ತ ನಮ್ಮ ಅನುಕೂಲಕ್ಕೆ ಇರುವವರಿಗೆ ಮಾತ್ರ ಗೊತ್ತಿದೆಯೆ ಹೊರತು ಬಕರಾಭಕ್ತರಿಗೆ ಅದು ತಿಳಿದಿಲ್ಲ, ಇನ್ನೂ ಹತ್ತುವರ್ಷ ನಾವಿಲ್ಲೇ ಇದ್ದರೂ ಅವರಿಗೆ ತಿಳಿಯೋದಿಲ್ಲ.
ಅಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ನಮ್ಮ ವಿರೋಧಿಗಳನ್ನು ಆ ನಮ್ಮ ಅಭಿಮಾನಿಗಳು ಸ್ವತಃ ತಮ್ಮ ವಿರೋಧಿಗಳೋ ಎಂಬಂತೆ ನೋಡ್ತಾರೆ. ಕೆಲವರಂತೂ ವಿರೋಧಿಗಳಿಗೆ ಎರಡು ಬಾರಿಸಲೂ ಹಿಂದೆಮುಂದೆ ನೋಡುವುದಿಲ್ಲ. ಕುರಿವಾಡೆಯೆಡೆಗೆ ಚೌಕ ಗ್ರಾಮ ಮತ್ತು ಪಂಚಗ್ರಾಮಗಳಲ್ಲಿ ಎಲ್ಲಿ ನೋಡಿದರೂ ನಮ್ಮ ಅಭಿಮಾನಿಗಳೆ ತುಂಬಿದ್ದಾರೆ. ನಮ್ಮ ಅಭಿಮಾನಿಗಳ ಮೂಲಕ ತಲೆಯಿಲ್ಲದ ಜನಾಂಗಗಳನ್ನೂ ನಮ್ಮ ಶಿಷ್ಯಬಳಗಕ್ಕೆ ಸೇರಿಸಿಕೊಳ್ಳುವ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಿದ್ದೇವೆ.
ಈಗ ನಮ್ಮ ವಲಯಗಳಲ್ಲಿ ಮಾತೆಯರಿಗೆಲ್ಲ ಫಾಂಪ್ಲೆಟ್ ಕೊಟ್ಟು ಈ ವಾರಂತ್ಯದಲ್ಲಿ ಬರಲಿಕ್ಕೆ ಹೇಳಿದ್ದೇವೆ. ನಮ್ಮ ನಿರೀಕ್ಷೆ ಏನೆಂದರೆ ಸುಮಾರು ಹತ್ತುಸಾವಿರ ಮಹಿಳೆಯರನ್ನು ಕರೆಸಿ ಬಲಾಬಲ ಪ್ರದರ್ಶನ ನಡೆಸುವುದು. ಅವರಿಗೆಲ್ಲ ಹೇಗೆ ಜೈಕಾರ ಕೂಗಬೇಕು ಮತ್ತು ಏನು ಹೇಳಬೇಕೆಂದು ತರಬೇತಿ ನೀಡಿದ್ದಾರೆ ನಮ್ಮವರು. ಅವರೆಲ್ಲ ಬಂದಾಗ ಮಾಧ್ಯಮಗಳವರನ್ನು ಕರೆದು ನಮ್ಮ ಹೊಸ ಮಹಿಳಾ ಬ್ರಿಗೇಡ್ ತೋರಿಸುವುದಕ್ಕೆ ಮುಂದಾಗಿದ್ದೇವೆ.

ಆದರೆ ನಮಗೊಂದು ಸಣ್ಣ ಡೌಟಿದೆ, ನಾಡಿದ್ದು ಜಾಮೀನು ಕ್ಯಾನ್ಸಲ್ ಮಾಡಿಬಿಟ್ಟರೆ ಅಂತ, ಹೀಗಾಗಿ ಅದನ್ನು ವಿಚಾರಣೆಗೆ ಎತ್ತಿಕೊಂಡು ಇತ್ಯರ್ಥವಾಗುವ ಮುನ್ನ ನಮ್ಮ ಮಹಿಳಾ ಬ್ರಿಗೇಡ್ ಪ್ರದರ್ಶನ ನಡೆಯಬೇಕು ಎಂದುಕೊಂಡಿದ್ದೇವೆ. ನಾವು ಎಷ್ಟೇ ಮಹಿಳೆಯರನ್ನು ಮತ್ತು ಹುಡುಗಿಯರನ್ನು ಬಳಸಿಕೊಂಡಿದ್ದರೂ ಉಳಿದ ಅನೇಕ ಮಹಿಳೆಯರು ಇನ್ನೂ ನಮ್ಮ ಪರವಾಗಿ ವೋಟು ಹಾಕಲು, ಜೈಕಾರ ಕೂಗಲು ಸಿದ್ಧರಿರುವುದನ್ನು ಕಂಡು, ಉಡುಗಿಹೋಗಿದ್ದ ನಮ್ಮ ಧೈರ್ಯ ಮತ್ತೆ ಮರಳಿದೆ.
ಸಭೆಗಳಲ್ಲಿ, “ನಾವು ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ, ನಾವಲ್ಲ ನೀವ್ಯಾರೂ ಹೆದರಿಕೊಳ್ಳುವ ಪ್ರಶ್ನೆಯೇ ಇಲ್ಲ ಯಾಕೆಂದ್ರೆ ನಾವು ತಪ್ಪು ಮಾಡಿಯೇ ಇಲ್ಲ”ಎಂದು ಭಾಷಣ ಬಿಗಿಯುವುದನ್ನು ಕೇಬಲ್ ಚಾನೆಲ್ ಗಳವರು ಸದಾ ಬಿತ್ತರಿಸುತ್ತ ನಮ್ಮ ಬಕರಾಭಕ್ತರು ನಮ್ಮೆಡೆಗೇ ಇರುವಂತೆ ನೋಡಿಕೊಂಡಿದ್ದಾರೆ. ಟಿವಿಗಳಲ್ಲಿ ನಮ್ಮ ಭಾಷಣ ಮುಗುಯುತ್ತಿದ್ದಂತೆ ಎದ್ದುನಿಂತು “..ರೇ ..ಮ” ಎಂದು ಕೂಗುವ ಬಕರಾಭಕ್ತರಿಗೆ ಕೊರತೆಯಿಲ್ಲ. ಹೀಗಾಗಿ ಅಂತಹ ಬಕರಾಭಕ್ತರಿಗೂ ನಮಗೂ ಮಧ್ಯವರ್ತಿಗಳಾದ ಹಳದೀ ತಾಲಿಬಾನ್ ವ್ಯವಸ್ಥೆಯು ಬಕರಾಗಳು ಹೇಗೆ ಕೈಮುಗಿದುಕೊಂಡೇ ಇರಬೇಕು ಎಂಬುದನ್ನು ಅವರಿಗೆ ಕಲಿಸಿಕೊಟ್ಟಿದೆ. ಮೊದಲು ನಮ್ಮ ಚಿತ್ರವನ್ನು ಮನೆಯಲ್ಲಿ ಇಟ್ಟುಕೊಂಡು ಪೂಜಿಸುತ್ತಿದ್ದ ಅವರು ಈಗ ಹಲಗೆ ಮೊಬೈಲಿನ ವಾಲ್ ಪೇಪರ್ ಮಾಡಿಕೊಂಡು ನಮಸ್ಕಾರ ಹಾಕುತ್ತಾರೆ. ಸಂಡಾಸಿಗೆ ಹೋದವರು ಅಂಡುತೊಳೆಯುವಾಗ ಮಾತ್ರ ಕೈಮುಗಿಯೋದನ್ನು ಅರೆಕ್ಷಣ ನಿಲ್ಲಿಸುತ್ತಾರೆ; ಉಳಿದ ಸಮಯದಲ್ಲಿ ಅವರು ಕೈಮುಗಿದುಕೊಂಡೇ ಇರಬೇಕೆಂದು ಮಹಾಸಂಸ್ಥಾನದಿಂದ ವಾರ್ಡ್ರ್ ಆಗಿದೆ.

ಹಳ್ಳಿಕಡೆಗೆ ಕೆಲಸಕ್ಕೆ ಬಾರದ ಉಂಡಾಡಿಗಳಿದ್ದರೆ ನಾವು ಅಂತವರನ್ನು ನಮ್ಮ ಆಸ್ಥಾನದಲ್ಲಿ ಸೇವೆಗೆ ಇರಿಸಿಕೊಳ್ಳುತ್ತೇವೆ. ಯಾಕೆಂದರೆ ನಾವು ಹಾರಲು ಬಳಸಿಕೊಂಡ ಹುಡುಗಿಯರನ್ನು ಅವರಿಗೆ ಕೊಟ್ಟು ಮದುವೆ ಮಾಡಿದ ಶಾಸ್ತ್ರ ಮಾಡಿಬಿಟ್ಟರೆ ಮುಂದೆ ಆ ಬೆಪ್ಪಂದಿರು, ನಾವೆಷ್ಟೆ ಹಾರಿದರೂ ನಮ್ಮನ್ನು ವಿರೋಧಿಸುವುದಿಲ್ಲ. ಹೀಗಾಗಿ ಈಗಿರುವ ಗಿಂಡಿಗಳ ಹೆಂಡಂದಿರೆಲ್ಲ ನಮ್ಮೊಡನೆ ಏಕಾಂತ ನಡೆಸಿದವರೇ ಆಗಿದ್ದಾರೆ. ಬೇರೆ ಪದಗಳಲ್ಲಿ ಹೇಳುವುದಾದರೆ, ನಾಮ್ ಕೇ ವಾಸ್ಥೆ ಗಂಡಂದಿರ ಹೆಂಡಂದಿರಿಗೆಲ್ಲ ನಿಜವಾದ ಗಂಡನೆಂದರೆ ನಾವೇ. ಏಕಾಂತ ಉಳಿದು ಹೊರಗೆ ಬಂದಾಗ ಮಾತ್ರ ನಾವು ಜಗದ್ಗುರುಗಳು ಅವರೆಲ್ಲ ನಮ್ಮ ಪರಮ ಭಕ್ತೆಯರು!

ಅದ್ಯಾವುದೋ ಕೋಮಿನ ಜನರ ಏರಿಯಾಗಳಿಗೆ ಬೇರೆ ಯಾರೂ ನುಗ್ಗದಂತೆ ಅವರೆಲ್ಲ ದೊಡ್ಡ ವಾಹನಗಳು ಹೋಗದ ರಸ್ತೆಗಳನ್ನು, ಗಲ್ಲಿಗಳನ್ನು ನಿರ್ಮಿಸಿಕೊಳ್ಳುತ್ತಾರಂತೆ; ನಮ್ಮ ಬಕರಾಭಕ್ತ ಸಮೂಹದಲ್ಲೂ ಹಾಗೆ, ಅವರೆಲ್ಲ ಒಟ್ಟಾಗಿ ಇರುವಾಗ ನಮ್ಮ ವಿರೋಧಿಗಳು ಅಲ್ಲಿಗೆ ಪ್ರವೇಶಿಸಲೇ ಸಾಧ್ಯವಾಗದು. ಇದಕ್ಕೆ ರಾಂಪಾಲ್ ತಂತ್ರ ಎನ್ನುತ್ತಾರೆ. ಉತ್ತರದ ನಮ್ಮ ಸ್ನೇಹಿತ ರಾಂಪಾಲ್ ಇದೇ ವಿಧವಾದ ಕೋಟೆಯನ್ನು ಕಟ್ಟಿಕೊಂಡಿದ್ದ. ಅವನನ್ನು ಎಳೆದೊಯ್ಯುವ ಮೊದಲು ಕೆಲವು ಬಕರಾಭಕ್ತರು ಪ್ರಾಣವನ್ನೇ ಕಳೆದುಕೊಳ್ಳಬೇಕಾಯ್ತು.

ನಮ್ಮ ಬಕರಾಭಕ್ತರನ್ನೂ ನಾವು ಅದೇ ವಿಧದಲ್ಲಿ ತಯಾರುಮಾಡಿಕೊಂಡಿದ್ದೇವೆ. ’ಮಾವಂದಿರು’ ಎಳೆದೊಯ್ಯಲು ಬರ್ತಾರೆ ಅಂತಾದರೆ ನಮ್ಮ ಬಕರಾಗಳು ಅಡ್ಡಡ್ಡ ಮಲಗಿ ಒಳಗೆ ಬರುವುದಕ್ಕೆ ದಾರಿಯನ್ನೇ ಕೊಡುವುದಿಲ್ಲ. ನಮ್ಮನ್ನು ಎಳೆದೊಯ್ಯಲು ಬಂದರೆ ಆಗಲೂ ರಾಂಪಾಲನ ಘಟನೆಯ ಪುನರವತರಣ ಆಗುವುದರಲ್ಲಿ ನಮಗಂತೂ ಅನುಮಾನವೆ ಇಲ್ಲ.

ನಮ್ಮ ಕಾಮಕತೆ ನಿಂತಿಹೋಗಿ ಹಲವು ತಿಂಗಳುಗಳೇ ಕಳೆದುಹೋಗಿವೆ. ಯಾವಾಗ ನಮ್ಮ ಉಚ್ಚೆ ಕೆಂಪಾಗಲಿಕ್ಕೆ ಹಿಡಿಯಿತೋ ಆಗಿನಿಂದ ನಮ್ಮ ವಚನ, ಗಾಯನ ವಾದನ, ನರ್ತನ ಮೊದಲಾದ ಹಲವು ಅಡ್ಡವೇಷಗಳನ್ನು ನಡೆಸುತ್ತಿದ್ದ ಕಲಾವಿದರೆಲ್ಲ ಜಾಗ ಖಾಲಿಮಾಡಿದ್ದಾರೆ. ಪರಿಸ್ಥಿತಿ ಸರಿಯಿದೆ ಎಂದುಕೊಂಡು ಕಾಲ ಹೋಗುತ್ತಿದ್ದಾಗ ಪಡೆದ ಸುವರ್ಣ ಮಂತ್ರಾಕ್ಷತೆಯ ಋಣಕ್ಕಾಗಿ ಕೆಲವು ಮರುಳು ಕಲಾವಿದರು ಅಪರೂಪಕ್ಕೊಮ್ಮೆ ನಮ್ಮ ಪರವಾಗಿ ಕಾಣಿಸಿಕೊಳ್ಳುವುದುಂಟು. ಅವರಲ್ಲೂ ನಮ್ಮಹಾಗೆ ಅಹಂಕಾರ ಇರುವುದರಿಂದ ಜೈಕಾರ ಕೂಗುವುದನ್ನು ಮನಸ್ಸಿದ್ದೇ ಮಾಡುತ್ತಾರೆಂದಲ್ಲ, ತಮ್ಮ ಸ್ವಾರ್ಹಕ್ಕಾಗಿ ಅವರೆಲ್ಲ ಜೈಕಾರ ಕೂಗುತ್ತಿದ್ದಾರೆ.

ಇರಲಿ, ನಾವು ಸದ್ಯಕ್ಕಂತೂ ಸೋಲೊಪ್ಪಿಕೊಳ್ಳುವ ಜನವಲ್ಲ. ನಮ್ಮ ಕಚ್ಚೆಹರುಕುತನ ಜಗಜ್ಜಾಹೀರಾಗಿ ಅಂತಾರಾಷ್ಟ್ರೀಯ ಮಟ್ಟದ ಸುದ್ದಿಯಾದರೂ ಸಹ “ನಾವು ತಪ್ಪು ಮಾಡಿಲ್ಲ” ಅಂತಲೇ ಹೇಳ್ತಾ ಇರ್ತೇವೆ ನಾವು. ಬಕರಾಭಕ್ತರನ್ನು ಕೇಳಿನೋಡಿ, ಅವರ ಅಂಧಾಭಿಮಾನ ಎಷ್ಟಿದೆಯೆಂದರೆ, ನಾಳೆ ನಾವೇ ಖುದ್ದಾಗಿ ತಪ್ಪೊಪ್ಪಿಕೊಂಡರೂ,”ನಮ್ಮ ಗುರುಗಳು ತಪ್ಪು ಮಾಡಿಲ್ಲ, ನಮ್ಮ ಗುರುಗಳು ತಪ್ಪು ಮಾಡಿಲ್ಲ” ಅಂತಿರ್ತಾರೆ.

ಇನ್ನೂ ಹಾಗೇ ಕೂಗುತ್ತಿರುವ ಮನೆಗಳ ಮಹಿಳೆಯರನ್ನೆಲ್ಲ ನಾಡಿದ್ದು ನಾವು ಬರಹೇಳಿದ್ದೇವೆ. ನಮ್ಮ ಪರವಾಗಿ ಅವರೆಲ್ಲ ಒಮ್ಮೆ ಮಾಧ್ಯಮಗಳೆದುರು ಮುಖತೋರಿಸಿದರಾದರೂ ಉಳಿದ ಸಮಾಜದವರು “ಆ ಶ್ರೀಗಳು ದೊಡ್ಡ ತಪಸ್ವಿಗಳು, ಜನಾನುರಾಗಿಗಳು, ಅವರ ಖ್ಯಾತಿಯನ್ನು ಸಹಿಸಲಾಗದ ಜನ ಅವರ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ.” ಎಂದುಕೊಳ್ಳಬೇಕು, ಹಾಗೆ ಬಿಲ್ಡಪ್ ಕೊಡ್ತಾ ಇದ್ದೇವೆ ನಾವು.

“ಮಾತೆಯರೆ ಬನ್ನಿ, ನೀವೆಲ್ಲ ಒಟ್ಟಾಗಿ ಪ್ರದರ್ಶನ ನೀಡಿ, “ಗುರುಗಳು ತಪ್ಪು ಮಾಡಿಲ್ಲ, ಅದು ಷಡ್ಯಂತ್ರ” ಎಂದು ಹೇಳಿ” ಎಂದು ವಿನಂತಿಸಿದ್ದೇವೆ. ಅಂದಹಾಗೆ ನೀವೂ ಎಲ್ಲ ಬನ್ನಿ, ನಿಮ್ಮಲ್ಲೂ ಮಹಿಳೆಯರಿದ್ದರೆ ಕರೆತನ್ನಿ, [ಹೇಗಾದರೂ ಮಾಡಿ ಜೈಲುವಾಸ ಆಗದಂತೆ ನಮ್ಮನ್ನು ಬಚಾವ್ ಮಾಡಿ] ಸದ್ಯಕ್ಕೆ ಸಾಗರದಲ್ಲಿ ಮತ್ತು ಮಹಾನಗರದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿಕೊಡಿ, ಆಮೇಲೆ ಸಾಧ್ಯವಾದಲ್ಲೆಲ್ಲ ನಡೆಸಿಕೊಡಿ.
ಬರೇಕಾಮ”

Thumari Ramachandra

source: https://www.facebook.com/groups/1499395003680065/permalink/1671887106430853/

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s